ಶಮಿತಾ ಮಲ್ನಾಡ್

ಮಹಿಳಾ ಸಂಗೀತ ನಿರ್ದೇಶಕಿ

ಡಾ.ಶಮಿತಾ ಮಲ್ನಾಡ್ ರವರು ಭಾರತೀಯ ಹಿನ್ನೆಲೆ ಗಾಯಕಿ ಸಂಗೀತ ನಿರ್ದೇಶಕಿ.ಅವರು ದಂತ ವೈದ್ಯೆ, ಲೈವ್ ಪರ್ಫಾರ್ಮರ್, ಡಬ್ಬಿಂಗ್ ವಾಯ್ಸ್ ಓವರ್ ಕಲಾವಿದರಾಗಿದ್ದಾರೆ.ಅವರು ಸುಗಮ ಸಂಗೀತ ಮತ್ತು ಭಕ್ತಿಗೀತೆಗಳನ್ನು ಹೊರತುಪಡಿಸಿ, ಅನೇಕ ಚಾರ್ಟ್-ಬಸ್ಟರ್ ಕನ್ನಡ ಚಿತ್ರಗೀತೆಗಳನ್ನೂ ಹಾಡಿದ್ದಾರೆ.

ಡಾ.ಶಮಿತಾ ಮಲ್ನಾಡ್
ಜನನ
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ
ಹಳೆ ವಿದ್ಯಾರ್ಥಿವೊಕ್ಕಲಿಗರ ಸಂಘ ಡೆಂಟಲ್ ಕಾಲೇಜು, ಕಿಮ್ಸ್, ಬೆಂಗಳೂರು
ಉದ್ಯೋಗದಂತ ವೈದ್ಯೆ, ಹಿನ್ನೆಲೆ ಗಾಯಕಿ, ಸಂಯೋಜಕಿ, ಸಂಗೀತ ನಿರ್ದೇಶಕಿ
ಸಕ್ರಿಯ ವರ್ಷಗಳು೧೯೯೪- ವರ್ತಮಾನ ಕಾಲ
ಜಾಲತಾಣdrshamithamalnad.com

ಆರಂಭಿಕ ಜೀವನ ಮತ್ತು ಕುಟುಂಬ ಸಂಪಾದಿಸಿ

ಶಮಿತಾರವರು ಜೂನ್ ೯ ರಂದು ತೀರ್ಥಹಳ್ಳಿ-ಶಿವಮೊಗ್ಗದಲ್ಲಿ, ಪ್ರೊಫೆಸರ್ ಯು.ವಿ. ರಾಮಚಂದ್ರ ಮತ್ತು ಹೆಚ್.ಜಿ. ಸುನಂದ ಅವರಿಗೆ ಜನಿಸಿದರು. ಬೆಂಗಳೂರಿನ ಬಳಿಯ ಕನಕಪುರದಲ್ಲಿ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣ ಮುಗಿಸಿದ್ದಾರೆ. ಬೆಂಗಳೂರಿನ ಕಿಮ್ಸ್, ಒಕ್ಕಲಿಗರ ಸಂಘ ದಂತ ಕಾಲೇಜಿನಿಂದ ಅವರು ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಡಿಗ್ರಿ (ಬಿ.ಡಿ.ಎಸ್) ಪಡೆದಿದ್ದಾರೆ. ಅವರು ಹಿಂದೂಸ್ಥಾನಿ ಸಂಗೀತ ಕಲಾವಿದ ಪಂಡಿತ್ ಶೇಷಾದ್ರಿ ಗವಾಯಿ ಅವರ ಶಿಷ್ಯೆ. ೧೯೯೪ ರಲ್ಲಿ "ಕಣಿವೆ ಕಬ್ಬಾಳಮ್ಮ" ಎಂಬ ಭಕ್ತಿಗೀತೆ ಧ್ವನಿಸುರುಳಿಯಲ್ಲಿ ಹಾಡುವುದರೊಂದಿಗೆ ತಮ್ಮ ವೃತ್ತಿ ಜೀವನವನ್ನು ಹಿನ್ನೆಲೆ ಗಾಯಕಿಯಾಗಿ ಆರಂಭಿಸಿದರು[೧]. ಅವರು ಅರುಣ್ ಕುಮಾರ್ ಡಿ.ಕೆ. ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರಿಗೆ ಅದ್ವೈತ್ ಹೆಗ್ಡೆ ಮತ್ತು ಷಡ್ಜ ಹೆಗ್ಡೆ ಎಂಬ ಇಬ್ಬರು ಮಕ್ಕಳಿದ್ದಾರೆ.

ವೃತ್ತಿ ಜೀವನ ಸಂಪಾದಿಸಿ

ಶಮಿತಾ ಮಲ್ನಾಡ್ ರವರನ್ನು ಮೊದಲ ಬಾರಿಗೆ ಫಿಲ್ಮ್ ಮ್ಯೂಸಿಕ್ ಗೆ ಸಂಗೀತ ನಿರ್ದೇಶಕರಾದ ಗುರುಕಿರಣ್ ಅವರು ೨೦೦೨ ರಲ್ಲಿ ವಿಜಯ ರಾಘವೇಂದ್ರ ಅವರ 'ನಿನಗಾಗಿ' ಚಿತ್ರದಲ್ಲಿ ಪರಿಚಯಿಸಿದರು.ಹಂಸಲೇಖ, ಗುರುಕಿರಣ್,ವಿ.ಹರಿಕೃಷ್ಣನ್, ಸಾಗರ್ ಎಸ್, ಸಾಧು ಕೋಕಿಲ, ಕೆ.ಕಲ್ಯಾಣ್,ವಿ.ಮನೋಹರ್, ಆರ್.ಪಿ ಪಟ್ನಾಯಕ್, ಅರ್ಜುನ್ ಜನ್ಯ, ಸಂದೀಪ್ ಚೌಟ,ಯುವನ್ ಶಂಕರ್ ರಾಜ,ಎಲ್.ಎನ್.ಶಾಸ್ತ್ರಿ ಮುಂತಾದ ಸಂಗೀತ ನಿರ್ದೇಶಕರಿಗೆ ೮೫೦ ಕ್ಕೂ ಹೆಚ್ಚಿನ ಚಲನಚಿತ್ರಗಳಿಗೆ ೮೦೦ ಹಾಡುಗಳನ್ನು ಹಾಡಿದ್ದಾರೆ.ಗುರುಕಿರಣ್ ಅವರ ಸಂಗೀತ ನಿರ್ದೇಶನದಡಿಯಲ್ಲಿ ತೆಲುಗು ಚಿತ್ರವಾದ ನಾಗವಲ್ಲಿ ಗೆ(ಆಪ್ತರಕ್ಷಕ ಚಿತ್ರದ ತೆಲುಗು ರೀಮೇಕ್ ಆವೃತ್ತಿ) ಅವರು ಧ್ವನಿಮುದ್ರಣ ಮಾಡಿದ್ದಾರೆ.ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ೭ ಏಕವ್ಯಕ್ತಿ ಆಲ್ಬಂಗಳು ಬಿಡುಗಡೆಯಾಗಿವೆ.ಇದರಲ್ಲಿ ಎಲ್.ಆರ್.ಈಶ್ವರಿಯ ಹಾಡುಗಳ ಕೆಲವು ರೀಮಿಕ್ಸ್ ಆವೃತ್ತಿಗಳಿವೆ.ಚಲನಚಿತ್ರಗಳಿಲ್ಲದ ಆಲ್ಬಂಗಳಿಗೆ ೬೫೦೦ ಕ್ಕೂ ಹೆಚ್ಚು ಹಾಡುಗಳನ್ನು,೧೩ ಭಾಷೆಗಳಲ್ಲಿ ಭಕ್ತಿ, ಜಾನಪದ ಭಾವಗೀತೆ, ಲೈಟ್ ಮ್ಯೂಸಿಕ್, ಸೆಮಿ ಕ್ಲಾಸಿಕಲ್, ಸೂಫಿ,ವಚನ ಮತ್ತು ಹೆಚ್ಚಿನ ಪಾಶ್ಚಿಮಾತ್ಯ ಹಾಡುಗಳನ್ನು ಹಾಡಿದ್ದಾರೆ.ಶಮಿತಾರವರು ಕರ್ನಾಟಕದ ಅನೇಕ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರಲ್ಲದೇ,೨೦೦೦ ಕ್ಕೂ ಹೆಚ್ಚಿನ ಶೋಗಳಿಗೆ ನಿರೂಪಣೆ ಕೂಡ ಮಾಡಿದ್ದಾರೆ.ಅವರು ಡ್ಯಾನ್ಸ್ ರಿಯಾಲಿಟಿ ಶೋ ಆದಂತಹ 'ಡ್ಯಾನ್ಸಿಂಗ್ ಸ್ಟಾರ್' ನಲ್ಲಿ ಸೆಲೆಬ್ರಿಟಿ ಸ್ಪರ್ಧಿಯಾಗಿದ್ದರು.ಅದರಲ್ಲಿ ಕೇವಲ ನೃತ್ಯವನ್ನು ಮಾಡುವುದಲ್ಲದೇ, ಅನೇಕ ಸಾಮಾಜಿಕ ಜಾಗೃತಿ ಸಂದೇಶಗಳನ್ನೂ ನೀಡಿದ್ದಾರೆ.ಅವರು ತಮ್ಮ 'ಶಮ'(ಶಮಿತಾ ಮಲ್ನಾಡ್) ತಂಡದೊಂದಿಗೆ ಭಾರತದಾದ್ಯಂತ ೧೫೦೦ ಕ್ಕೂ ಹೆಚ್ಚು ಸಾರ್ವಜನಿಕ ಪ್ರದರ್ಶನಗಳನ್ನು ನೀಡಿದ್ದಾರೆ.ಆಸ್ಟ್ರೇಲಿಯಾ,ದುಬೈ, ಕುವೈತ್, ನ್ಯೂಜಿಲೆಂಡ್, ಸಿಂಗಾಪುರ ದಂತ ಅನೇಕ ವಿದೇಶಗಳಲ್ಲಿ ಈ ತಂಡ ಪ್ರದರ್ಶನ ನೀಡಿದೆ.ಅವರು 'ಪ್ರೇಮಾಯ ನಮಹ' ಎಂಬ ಆಲ್ಬಂ ನ ನಿರ್ಮಾಪಕರಾಗಿದ್ದಾರೆ.ಈ ಆಲ್ಬಂ ಕರ್ನಾಟಕದಲ್ಲಿ ದಾಖಲೆಯನ್ನು ಮಾಡಿದೆ.ಶಮಿತಾರವರು 'ಸ್ವರ ಸನ್ನಿಧಿ' ಎಂಬ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ.ಇದರ ಮೂಲಕ ಹೊಸ ಪ್ರತಿಭೆಗಳನ್ನು ಪೋಷಿಸುತ್ತಿರುವುದಲ್ಲದೇ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುವುದು, ಸಂಗೀತ ಮತ್ತು ಭಾಷೆಗಳನ್ನು ಉತ್ತೇಜಿಸುವುದು, ಕಾರ್ಯಗಾರಗಳನ್ನು ಆಯೋಜಿಸುವುದು, ಮಕ್ಕಳಿಗೆ ಸ್ಪರ್ಧೆ ನಡೆಸುವುದು, ವಿಜ್ಞಾನ ಚರ್ಚೆ ಪ್ರದರ್ಶನಗಳು, ಚಾರಿಟಿ ಪ್ರದರ್ಶನಗಳು ಮತ್ತು ಅಗತ್ಯವಿರುವವರಿಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.[೨]

ಧ್ವನಿ ಮುದ್ರಿಕೆ ಪಟ್ಟಿ ಸಂಪಾದಿಸಿ

ಡಾ.ಶಮಿತಾ.ಮಲ್ನಾಡ್ ರವರ ಕೆಲವು ಹಿಟ್ ಗಳು

ಪ್ರಶಸ್ತಿಗಳು ಸಂಪಾದಿಸಿ

  • ೨೦೦೯-ಫಿಲ್ಮ್ ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ - ಕನ್ನಡ - "ಮಧುರಾ ಪಿಸುಮಾತಿಗೆ"
  • ೨೦೦೯-ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಸುವರ್ಣ ಫಿಲ್ಮ್ ಪ್ರಶಸ್ತಿ - "ಮಧುರಾ ಪಿಸುಮಾತಿಗೆ"
  • ೨೦೦೯-ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಸೌತ್ ಸ್ಕೋಪ್ ಫಿಲ್ಮ್ ಪ್ರಶಸ್ತಿ - "ಮಧುರಾ ಪಿಸುಮಾತಿಗೆ"
  • ೨೦೧೫-ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - "ತಳಮಳದ ಮಳೆಯಲ್ಲಿ"

ಇದಲ್ಲದೇ ಬಿ.ಬಿ.ಎಂ.ಪಿ ಯಿಂದ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಕೂಡ ದೊರಕಿದೆ.[೪]

ಉಲ್ಲೇಖಗಳು ಸಂಪಾದಿಸಿ

  1. https://www.secret-bases.co.uk/wiki/Shamita_Malnad[ಶಾಶ್ವತವಾಗಿ ಮಡಿದ ಕೊಂಡಿ]
  2. https://www.filmibeat.com/celebs/shamita-malnad/biography.html
  3. https://www.raaga.com/kannada/singer/Shamitha-Malnad
  4. https://www.revolvy.com/topic/Shamitha%20Malnad