ದುಬೈ (ಅರೇಬಿಕ್: دبيّ,Dubayyಗಳಲ್ಲಿ) ಯುನೈಟೆಡ್‌ ಅರಬ್ ಎಮಿರೇಟ್ಸ್‌‌ (UAE)ನ ಏಳು ಎಮಿರೇಟ್‌ಗಳಲ್ಲಿ ಒಂದಾಗಿದ್ದು, ಅವುಗಳಲ್ಲೇ ಅತ್ಯಂತ ಜನನಿಬಿಡ ರಾಜ್ಯವಾಗಿದೆ. ಇದು ಅರೇಬಿಯನ್ ದ್ವೀಪಕಲ್ಪದಲ್ಲಿರುವ ಪರ್ಷಿಯನ್‌ ಕೊಲ್ಲಿಯ ದಕ್ಷಿಣ ಕರಾವಳಿಯುದ್ದಕ್ಕೂ ಹರಡಿದೆ. ಎಮಿರೇಟ್‌ನಿಂದ ದುಬೈ ಮುನಿಸಿಪಾಲಿಟಿ/ಪೌರಸಂಸ್ಥೆಯನ್ನು ಪ್ರತ್ಯೇಕಿಸಲು ಕೆಲವು ಬಾರಿ ದುಬೈ ರಾಜ್ಯ ಎಂದೂ ಕರೆಯಲಾಗುತ್ತದೆ.

Dubai
إمارة دبيّ
Emirate of Dubai
Flag of Dubai
Location of Dubai
CountryUnited Arab Emirates
EmirateDubai
Incorporated (town)9 June 1833
Founded byMaktoum bin Bati bin Suhail (1833)
SeatDubai
Subdivisions
 • Jebel Ali
 • Hatta
 • Al Hunaiwah
 • Al Aweer
 • Al Hajarain
 • Al Lusayli
 • Al Marqab
 • Al Faq
 • Hail
 • Al Sufari
 • Ud al-Bayda
 • Al Malaiha
 • Al Madam
 • Margham
 • Urqub Juwayza
 • Al Qima
Government
 • TypeConstitutional monarchy[೧]
 • EmirMohammed bin Rashid Al Maktoum
 • Crown PrinceHamdan bin Mohammed bin Rashid Al Maktoum
Area
 • Emirate೪,೧೧೪ km (೧,೫೮೮ sq mi)
 • Metro
೧,೨೮೭.೪ km (೪೯೭.೧ sq mi)
Population
 (2008)[೩]
 • Emirate೨೨,೬೨,೦೦೦
 • Density೪೦೮.೧೮/km (೯೭/sq mi)
 • Metro
೨೨,೬೨,೦೦೦
 • Nationality (2005)[೪]
೨೬.೧% Arab (of whom ೧೭% are Emirati)
೪೨.೩% ಭಾರತn
೧೩.೩% Pakistani
೭.೫% Bangladeshi
೨.೫% Filipino
೧.೫% Sri Lankan
೦.೯% European
೦.೩% American
೫.೭% other countries
Time zoneUTC+4 (UAE standard time)
Website
Dubai Emirate
Dubai Municipality

UAE ರಚನೆಯ ೧೫೦ ವರ್ಷಗಳ ಮುಂಚೆಯೇ ನಗರವು ಅಸ್ತಿತ್ವದಲ್ಲಿತ್ತು ಎಂದು ಲಿಖಿತ ದಾಖಲೆಗಳು ಉಲ್ಲೇಖಿಸುತ್ತವೆ. ಕಾನೂನು, ರಾಜಕೀಯ, ಸೈನ್ಯ ಹಾಗೂ ಆರ್ಥಿಕ ಚಟುವಟಿಕೆಗಳು ಇತರೆ ಎಮಿರೇಟ್‌‌ಗಳೊಡನೆ ಒಕ್ಕೂಟ ಸಂರಚನೆಯಂತೆಯೇ ನಡೆದರೂ, ಪ್ರತಿ ಎಮಿರೇಟ್‌ ತನ್ನದೇ ಆದ ಪ್ರತ್ಯೇಕ ವ್ಯಾಪ್ತಿಯನ್ನು ಹೊಂದಿದೆ. ಅಂದರೆ ಸ್ಥಳೀಯ ನಾಗರಿಕ ಸೌಲಭ್ಯಗಳು ಹಾಗೂ ಮತ್ತದರ ಉಸ್ತುವಾರಿಗಳು ಹಾಗೂ ನಾಗರಿಕ ಕಾನೂನುಗಳ ಜಾರಿ ಕ್ರಿಯೆ ಆಯಾ ಪ್ರದೇಶಗಳಿಗೆ ಅನುಗುಣವಾಗಿರುತ್ತವೆ. ದುಬೈ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವುದಲ್ಲದೇ, ವಿಸ್ತೀರ್ಣದಲ್ಲಿ ಎರಡನೆಯ ಅತಿ ದೊಡ್ಡ ಪ್ರದೇಶವಾಗಿದ್ದು ಅಬುಧಾಬಿ [೫] ಯ ನಂತರದ ಸ್ಥಾನ ಹೊಂದಿದೆ. ಅಬುದಾಭಿ-ದುಬೈಗಳಿಗೆ ಮಾತ್ರ ರಾಷ್ಟ್ರದ ಶಾಸನಸಭೆಯಲ್ಲಿ ರಾಷ್ಟ್ರೀಯ ಮಹತ್ವದ ವಿಚಾರಗಳಲ್ಲಿ ವಿಟೊ/ನಿರಾಕರಣಾ ಅಧಿಕಾರವಿದೆ.[೬] ದುಬೈ ನಗರವು ಅಲ್‌ ಮಕ್ತೂಮ್‌ ಸಾಮ್ರಾಜ್ಯದ ಆಳ್ವಿಕೆಯನ್ನು ೧೮೩೩ರ ಕಾಲದಿಂದಲೇ ಹೊಂದಿದೆ. ದುಬೈನ ಸದ್ಯದ ದೊರೆ ಮೊಹಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು UAEಯ ಪ್ರಧಾನಿ ಮತ್ತು ಉಪಾಧ್ಯಕ್ಷರೂ ಹೌದು.

ಎಮಿರೇಟ್‌ನ ಪ್ರಮುಖ ಆದಾಯದ ಮೂಲಗಳೆಂದರೆ ಪ್ರವಾಸೋದ್ಯಮ, ಸ್ಥಿರಾಸ್ತಿ ಮಾರಾಟ ಉದ್ಯಮ ಮತ್ತು ಹಣಕಾಸು ಸೇವೆಗಳು.[೭] ದುಬೈನ ಆರ್ಥಿಕತೆಯು ಬಹುಮುಖ್ಯವಾಗಿ ತೈಲೋದ್ಯಮವನ್ನು ಅವಲಂಬಿಸಿದ್ದರೂ,[೮] ಪ್ರಸ್ತುತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಪೂರೈಕೆಯ ಆದಾಯವು ಒಟ್ಟು ಆರ್ಥಿಕತೆಯಾದ US$ ೩೭(೨೦೦೫) ಶತಕೋಟಿಗಳ ಮೊತ್ತದ ೬%{2006){2/}ಕ್ಕಿಂತ ಕಡಿಮೆ ಇದೆ.[೯] ಬದಲಿಗೆ ಸ್ಥಿರಾಸ್ತಿ ಮಾರಾಟ ಹಾಗೂ ನಿರ್ಮಾಣ ಕ್ಷೇತ್ರಗಳು, ಈಗಿನ ಬೃಹತ್‌ ಪ್ರಮಾಣದ ನಿರ್ಮಾಣ ಬೆಳವಣಿಗೆಯ ಮುನ್ನವೇ ೨೦೦೫ರಲ್ಲಿ ಆರ್ಥಿಕತೆಗೆ ೨೨.೬%ರಷ್ಟು ಕೊಡುಗೆ ನೀಡಿದ್ದವು.[೧೦] ದುಬೈ ತನ್ನ ಸ್ಥಿರಾಸ್ತಿ ನಿರ್ಮಾಣ ಯೋಜನೆಗಳು [೧೧] ಮತ್ತು ಕ್ರೀಡಾಕೂಟಗಳ ಆಯೋಜನೆಯಿಂದ ಗಮನ ಸೆಳೆಯಿತು. ಈ ಹೆಚ್ಚಿದ ಗಮನ ಸೆಳೆಯುವಿಕೆಯು ಜಾಗತಿಕ ನಗರ[೧೨] ಹಾಗೂ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮುವಿಕೆಯೊಂದಿಗೆ ಸೇರಿಕೊಂಡು ಇಲ್ಲಿನ ದಕ್ಷಿಣ ಏಷ್ಯಾದ ಕಾರ್ಮಿಕಶಕ್ತಿಗೆ ಸಂಬಂಧಿಸಿದಂತೆ ಕಾರ್ಮಿಕ ಮತ್ತು ಮಾನವ ಹಕ್ಕುಗಳ ಪ್ರತಿಪಾದನೆ[೧೩] ಯೆಡೆ ಬೆಳಕು ಚೆಲ್ಲಿದೆ. ೨೦೦೪ರಲ್ಲಿ ಸ್ಥಾಪಿತವಾದ ದುಬೈ ಇಂಟರ್‌ನ್ಯಾಷನಲ್‌ ಫೈನಾನ್ಸ್‌ ಸೆಂಟರ್‌ ಸಂಸ್ಥೆಯು ಬ್ಯಾಂಕುಗಳು ಹಾಗೂ ಹಣಕಾಸು ವ್ಯವಸ್ಥೆಗಳ ಅಂತರರಾಷ್ಟ್ರೀಯ ಕೇಂದ್ರವಾಗಿ ನ್ಯೂಯಾರ್ಕ್‌, ಲಂಡನ್‌ ಮತ್ತು ಹಾಂಗ್‌ಕಾಂಗ್‌ಗಳಿಗೆ ಪ್ರತಿಸ್ಪರ್ಧಿಯಾಗುವ ಉದ್ದೇಶದಿಂದ ಆರಂಭಿಸಿದ ಹೆಗ್ಗುರುತಿನ ಯೋಜನೆಯಾಗಿತ್ತು.[೧೪]

ವ್ಯುತ್ಪತ್ತಿ ಶಾಸ್ತ್ರ

ಬದಲಾಯಿಸಿ

೧೮೨೦ರ ದಶಕದಲ್ಲಿ ಬ್ರಿಟಿಷ್‌ ಇತಿಹಾಸಕಾರರು ದುಬೈಯನ್ನು ಅಲ್‌ ವಸ್‌ಲ್‌ ಎಂದು ಉಲ್ಲೇಖಿಸಿದ್ದಾರೆ. ಆದಾಗ್ಯೂ ಈ ಪ್ರದೇಶದ ದಂತಕಥೆ ಹಾಗೂ ಜಾನಪದ/ಐತಿಹ್ಯಗಳನ್ನು ದಾಖಲಿಸುವ ಹಾಗೂ ಮುಂದುವರೆಸುವುದಕ್ಕೆ ಮೌಖಿಕ ಸಂಪ್ರದಾಯವನ್ನು ಬಳಸುತ್ತಿದ್ದುದರಿಂದ UAEಯ ಅಥವಾ ಅದರ ವ್ಯಾಪ್ತಿಯ ಎಮಿರೇಟ್‌ಗಳ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಕೆಲವೇ ದಾಖಲೆಗಳು ಮಾತ್ರ ಲಭ್ಯವಿವೆ. ದುಬೈ ಪದದ ಭಾಷಾಮೂಲವೇ ಚರ್ಚಾಸ್ಪದವಾಗಿದ್ದು, ಕೆಲವರು ಇದು ಪರ್ಷಿಯನ್‌ ಮೂಲದ್ದೆಂದರೆ, ಉಳಿದವರು ಇದನ್ನು ಅರೇಬಿಕ್‌ ಮೂಲದ್ದು ಎನ್ನುವರು. ಫೀಡೆಲ್‌/ಫೆಡೆಲ್‌ ಹಂದಾಲ್‌ ಎಂಬ UAEಯ ಇತಿಹಾಸ ಮತ್ತು ಸಂಸ್ಕೃತಿಯ ಸಂಶೋಧಕರ ಪ್ರಕಾರ ದುಬೈ ಎಂಬ ಪದವು ಜಾರಿಕೆ ಎಂಬರ್ಥ ನೀಡುವ ದಬ (ಯಾದುಬ್‌ ಪದದ ವ್ಯುತ್ಪನ್ನವಾದ)ದಿಂದ ನಿಷ್ಪನ್ನವಾಗಿರಬಹುದು, ಹಾಗೂ ದುಬೈನ ಒಳಭಾಗದ ಕಡಲಚಾಚಿನ ಹರಿವಿಗೆ ಸಂಬಂಧಪಟ್ಟಿರಬಹುದು, ಆದರೆ ಕವಿ ಮತ್ತು ತಜ್ಞರಾದ/ಮೇಧಾವಿಯಾದ ಅಹಮದ್‌ ಮೊಹಮ್ಮದ್‌ ಒಬೈದ್‌ರು ಇದೇ ಪದದ ಮತ್ತೊಂದು ಅರ್ಥವಾದ ಪತಂಗ [೧೫] ದಿಂದ ಉತ್ಪನ್ನವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಬುರ್ಜ್ ಖಲೀಫಾ

ಬದಲಾಯಿಸಿ

ಅತಿ ಎತ್ತರದ ಕಟ್ಟಡ:ನೋಡಿ:[೩]

ಇತಿಹಾಸ

ಬದಲಾಯಿಸಿ
 
1960ರ ದಶಕದಲ್ಲಿನ ದುಬೈನ ಡೇರಾದ ಅಲ್ ರಾಸ್‌ ಜಿಲ್ಲೆ.

ಆಗ್ನೇಯ ಅರೇಬಿಯನ್‌ ದ್ವೀಪಕಲ್ಪದ ಇಸ್ಲಾಮೀಕರಣಕ್ಕೆ ಮುನ್ನಿನ ಸಂಸ್ಕೃತಿಯ ಬಗ್ಗೆ, ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ವಿಶ್ವಗಳ ನಡುವಿನ ವಾಣಿಜ್ಯ ಕೇಂದ್ರಗಳಾಗಿದ್ದ ಅನೇಕ ಪ್ರಾಚೀನ ನಗರಗಳಿದ್ದವು ಎಂಬುದು ಬಿಟ್ಟರೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ದುಬೈ ಇಂಟರ್ನೆಟ್‌ ಸಿಟಿಯ ಬಳಿ ಒಳಚರಂಡಿ ಕಾಲುವೆಗಳ ನಿರ್ಮಾಣದ ಸಂದರ್ಭದಲ್ಲಿ ಸುಮಾರು ೭೦೦೦ ವರ್ಷಗಳಷ್ಟು ಹಳೆಯದಾದ ಮ್ಯಾಂಗ್ರೋವ್‌ ಮರ ಬೆಳೆಯಲಾಗುವಂತಹ ಪ್ರಾಚೀನ ಜವುಗುನೆಲದ ಅವಶೇಷಗಳನ್ನು ಪತ್ತೆಹಚ್ಚಲಾಗಿದೆ. ಈ ಪ್ರದೇಶವು ಸುಮಾರು ೫೦೦೦ ವರ್ಷಗಳ ಹಿಂದೆ ಸಮುದ್ರವು ನಗರದೊಳಕ್ಕೆ ನುಗ್ಗಿದಾಗ ಮರಳಿನಿಂದಾವೃತವಾಗಿದ್ದು ಪ್ರಸ್ತುತ ಕರಾವಳಿಯಾಗಿ ಪರಿಣಮಿಸಿದೆ.[೧೬] ಇಸ್ಲಾಮ್‌‌ಗಿಂತ ಮುಂಚೆ ಈ ಪ್ರದೇಶದ ಜನರು ಬಜಿರ್‌ (ಅಥವಾ ಬಜರ್‌)ನನ್ನು ಆರಾಧಿಸುತ್ತಿದ್ದರು.[೧೭] ಬೈಜಂಟೈನ್‌ ಮತ್ತು ಸಸ್ಸಾನಿಯನ್‌ ಸಾಮ್ರಾಜ್ಯಗಳು ಆ ಕಾಲದಲ್ಲಿನ ಶಕ್ತಿಯುತ ಆಳ್ವಿಕೆಗಳಾಗಿದ್ದು ಪ್ರದೇಶದ ಹೆಚ್ಚು ಭಾಗಗಳು ಸಸ್ಸಾನಿಯನ್‌ರ ವಶಕ್ಕೊಳಪಟ್ಟಿತ್ತು. ಪೂರ್ವದ ಮಹಮ್ಮದೀಯ ವಿಶ್ವದ ಉಮಯ್ಯದ್‌ ಖಲೀಫಾರು ಆಗ್ನೇಯ ಅರೇಬಿಯಾವನ್ನು ವಶಪಡಿಸಿಕೊಂಡು ಸಸ್ಸೇನಿಯನ್ನರನ್ನೂ ಹೊರಗೋಡಿಸಿದರು. ದುಬೈ ವಸ್ತುಸಂಗ್ರಹಾಲಯದವರು ಅಲ್‌-ಜುಮಾಯ್ರಾ (ಜುಮೇರಾ) ಪ್ರದೇಶದಲ್ಲಿ ಕೈಗೊಂಡ ಉತ್ಖನನ ಕಾರ್ಯಗಳಲ್ಲಿ ಉಮಯ್ಯದ್‌ ಅವಧಿಯ ಅನೇಕ ಕುಶಲವಸ್ತುಗಳು ಸಿಕ್ಕಿದವು.[೧೮] ದುಬೈ ಬಗೆಗಿನ ಪ್ರಾಚೀನ ದಾಖಲಿತ ಪ್ರಸ್ತಾಪ ೧೦೯೫ರ ಕಾಲದ್ದಾಗಿದ್ದು, ಅಂಡಲ್ಯೂಷನ್-ಅರಬ್‌ ಭೂಗೋಳಶಾಸ್ತ್ರಜ್ಞ ಅಬು ಅಬ್ದುಲ್ಲಾ ಅಲ್‌-ಬಕ್ರಿಯವರು ರಚಿಸಿದ "ಬುಕ್‌ ಆಫ್‌ ಜಿಯೋಗ್ರಫಿ" ಪುಸ್ತಕದಲ್ಲಿದೆ. ವೆನಿಸ್‌ನ ಮುತ್ತಿನ ವ್ಯಾಪಾರಿ ಗ್ಯಾಸ್‌ಪರೋ ಬಲ್ಬಿಯು ಈ ಪ್ರದೇಶಕ್ಕೆ ೧೫೮೦ರಲ್ಲಿ ಭೇಟಿ ಮಾಡಿದ್ದನಲ್ಲದೇ, ದುಬೈ (ದೈಬೈ)ಯನ್ನು ಅದರ ಮುತ್ತಿನ ವ್ಯವಹಾರಕ್ಕಾಗಿ ಪ್ರಸ್ತಾಪಿಸಿದ್ದನು.[೧೮] ದುಬೈ ಪಟ್ಟಣ ದ ಲಿಖಿತ ದಾಖಲೆಗಳು ಕೇವಲ ೧೭೯೯ರ ನಂತರದಲ್ಲಿ ಮಾತ್ರವೇ ಇವೆ.[೧೯]

೧೯ನೇ ಶತಮಾನದ ಮೊದಲ ಭಾಗದಲ್ಲಿ, ಬನಿ ಯಸ್‌ ಸಂತತಿಯ ಅಲ್‌ ಅಬು ಫಲಸಾ ವಂಶ (ಅಲ್‌-ಫಲಸಿ ಮನೆತನ)ದವರು ದುಬೈಯನ್ನು ಸ್ಥಾಪಿಸಿದರು, ಇದು ೧೮೩೩ರವರೆಗೆ[೨೦] ಅಬುಧಾಬಿಯ ಮೇಲೆಯೇ ಅವಲಂಬಿತವಾಗಿತ್ತು. ೮ ಜನವರಿ ೧೮೨೦ರಂದು, ದುಬೈನ ಷೇಕ್‌ ಮತ್ತು ಪ್ರದೇಶದ ಇತರೆ ಷೇಕ್‌ಗಳು "ಸಾಮಾನ್ಯ ಸಾಗರೋತ್ತರ ಶಾಂತಿ ಒಪ್ಪಂದ/ಜನರಲ್‌ ಮೇರಿ/ಮಾರಿಟೈಮ್‌ ಪೀಸ್‌ ಟ್ರೀಟಿ"ಕ್ಕೆ ಬ್ರಿಟಿಷ್‌ ಸರ್ಕಾರದೊಡನೆ ಸಹಿ ಹಾಕಿದರು.[೧೬] ಆದಾಗ್ಯೂ, ೧೮೩೩ರಲ್ಲಿ, ಬನಿ ಯಸ್‌ ಜನಾಂಗದ ಅಲ್‌ ಮಕ್ತೂಮ್‌ ಸಾಮ್ರಾಜ್ಯವು (ಅಲ್‌-ಫಲಸಿ ಮನೆತನದವರು) ಅಬುಧಾಬಿಯ ವಸಾಹತುವಿನಿಂದ ಪ್ರತ್ಯೇಕಗೊಂಡು ಅಬು ಫಸಲಾ/ಫಲಸಾ ಸಂತತಿಯಿಂದ ಅವಿರೋಧವಾಗಿ ದುಬೈಯನ್ನು ವಶಪಡಿಸಿಕೊಂಡರು.[೨೦] ದುಬೈಯನ್ನು ಒಟ್ಟೋಮನ್‌ ಸಾಮ್ರಾಜ್ಯ[೨೦] ದ ಯಾವುದೇ ಆಕ್ರಮಣದಿಂದ ಕಾಪಾಡುವ ಜವಾಭ್ದಾರಿಯನ್ನು ಹೊರುವುದರೊಂದಿಗೆ ೧೮೯೨ರ "ಎಕ್ಸ್‌ಕ್ಲೂಸಿವ್‌ ಅಗ್ರಿಮೆಂಟ್‌/ಒಪ್ಪಂದ"ದ ಅಂಗವಾಗಿ, ದುಬೈ ಯುನೈಟೆಡ್‌ ಕಿಂಗ್‌ಡಂನ ರಕ್ಷಣೆಯಡಿ ಬಂದಿತು. ೧೮೦೦ರ ದಶಕದಲ್ಲಿ ಎರಡು ವಿಪತ್ತುಗಳು ನಗರವನ್ನು ಆವರಿಸಿದವು. ಮೊದಲಿಗೆ ೧೮೪೧ರಲ್ಲಿ, ಸಿಡುಬು ರೋಗ ಸಾಂಕ್ರಾಮಿಕವಾಗಿ ಬುರ್‌ ದುಬೈ ಪ್ರದೇಶದಲ್ಲಿ ಕಾಣಿಸಿಕೊಂಡು, ಅಲ್ಲಿನ ಜನರನ್ನು ಪೂರ್ವದ ಡೇರಾ ಪ್ರದೇಶಕ್ಕೆ ವಲಸೆ ಹೋಗುವಂತೆ ಮಾಡಿತು. ನಂತರ ೧೮೯೪ರಲ್ಲಿ, ಡೇರಾ ಪ್ರದೇಶದುದ್ದಕ್ಕೂ ಬಹುತೇಕ ಎಲ್ಲಾ ಮನೆಗಳೂ ಸುಟ್ಟುಹೋಗುವಷ್ಟರ ಮಟ್ಟಿಗೆ ಕಾಡ್ಗಿಚ್ಚು ಆವರಿಸಿತು.[೨೧] ಆದಾಗ್ಯೂ ನಗರದ ಭೌಗೋಳಿಕ ಆಯಕಟ್ಟಿನ ಲಭ್ಯತೆಯು, ಆ ಪ್ರದೇಶದ ವ್ಯಾಪಾರಿಗಳು ಹಾಗೂ ವರ್ತಕರನ್ನು ತನ್ನೆಡೆಗೆ ಆಕರ್ಷಿಸುತ್ತಲೇ ಇತ್ತು. ದುಬೈನ ಅಮೀರರು/ಎಮಿರರು ವಿದೇಶಿ ವರ್ತಕರನ್ನು ಸೆಳೆಯುವ ದೃಷ್ಟಿಯಿಂದಾಗಿ ವ್ಯಾಪಾರದ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಿದ ಕಾರಣ, ದುಬೈ ನಗರವು ಆ ಕಾಲದಲ್ಲಿ ಪ್ರದೇಶದ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿದ್ದ ಷಾರ್ಜಾ ಮತ್ತು ಬಂದರ್‌ ಲೆಂಗೆಹ್‌ಗಳಿಗೆ ಹೋಗುತ್ತಿದ್ದ ವರ್ತಕರು ಹಾಗೂ ವ್ಯಾಪಾರಿಗಳನ್ನು ತನ್ನೆಡೆಗೆ ಸೆಳೆಯಿತು.[೨೧][೨೨]

 
ಅಲ್‌ ಫಹೀದಿ ಕೋಟೆ 1799ರಲ್ಲಿ ನಿರ್ಮಿತವಾದ ಹಾಗೂ ದುಬೈನಲ್ಲಿ ಈಗಿರುವ ಕಟ್ಟಡಗಳಲ್ಲಿ ಅತ್ಯಂತ ಹಳೆಯ ಕಟ್ಟಡ – ಈಗ ದುಬೈ ವಸ್ತುಸಂಗ್ರಹಾಲಯದ ಭಾಗವಾಗಿದೆ.[೨೩]

ಭೌಗೋಳಿಕವಾಗಿ ಭಾರತದ ಸಾಮೀಪ್ಯ ದುಬೈಅನ್ನು ಒಂದು ಪ್ರಮುಖ ಸ್ಥಳವಾಗುವಂತೆ ಮಾಡಿತು. ದುಬೈ ನಗರವು ವಿದೇಶಿ ವರ್ತಕರಿಗೆ ತಂಗುದಾಣವಾಗಿತ್ತು, ಅವರಲ್ಲಿ ಸಾಕಷ್ಟು ಮಂದಿ ಭಾರತದ ವರ್ತಕರಿದ್ದರು, ಅವರಲ್ಲಿ ಕೆಲವರು ಅಂತಿಮವಾಗಿ ಅಲ್ಲಿಯೇ ನೆಲೆಯೂರಿದರು. ದುಬೈ ೧೯೩೦ರ ದಶಕದವರೆಗೂ ತನ್ನ ಮುತ್ತುಗಳ ರಫ್ತಿಗಾಗಿ ಪ್ರಸಿದ್ಧವಾಗಿತ್ತು. ಆದರೆ, ದುಬೈನ ಮುತ್ತುಗಳ ಉದ್ಯಮವು ವಿಶ್ವ ಸಮರ Iರ ಘಟನೆಗಳಿಂದ ಹಾಗೂ ನಂತರ ೧೯೨೦ರ ದಶಕದ ಕೊನೆಯಲ್ಲಿನ ಬೃಹತ್‌ ಕುಸಿತದಿಂದಾಗಿ ಸರಿಪಡಿಸಲಾಗದಷ್ಟು ಮಟ್ಟದಲ್ಲಿ ನಷ್ಟ ಹೊಂದಿತು. ಇದರ ಪರಿಣಾಮವಾಗಿ ನಗರದಿಂದ ಪರ್ಷಿಯನ್‌ ಕೊಲ್ಲಿಯ ಇತರೆಡೆಗಳಿಗೆ ಜನರು ವಲಸೆ ಹೋಗಲಾರಂಭಿಸಿದರು.[೧೬] ತನ್ನ ರಚನೆಯ ಕಾಲದಿಂದಲೇ, ದುಬೈ ನಿರಂತರವಾಗಿ ಅಬುಧಾಬಿಯೊಂದಿಗೆ ಪ್ರತಿಕೂಲವಾದ ಸಂಬಂಧವನ್ನೇ ಹೊಂದಿದೆ. ೧೯೪೭ರಲ್ಲಿ, ದುಬೈ ಮತ್ತು ಅಬುಧಾಬಿಗಳ ನಡುವಿನ ಗಡಿರೇಖೆಯ ಉತ್ತರ ಭಾಗದಲ್ಲಿನ ಗಡಿವಿವಾದವು, ವಿಕೋಪಕ್ಕೆ ಹೋಗಿ ಎರಡೂ ರಾಜ್ಯಗಳ ನಡುವೆ ಯುದ್ಧಕ್ಕೆ ಕಾರಣವಾಯಿತು.[೨೪] ಬ್ರಿಟಿಷರ ಮಧ್ಯಸ್ಥಿಕೆ ಹಾಗೂ ರಾಸ್‌ ಹಸಿಯನ್‌ ಪ್ರದೇಶದಲ್ಲಿ ಆಗ್ನೇಯದೆಡೆಗೆ ಉಭಯರಕ್ಷಕ ಗಡಿರೇಖೆಯ ರಚನೆಯಿಂದಾಗಿ ಯುದ್ಧದ ವಾತಾವರಣಕ್ಕೆ ತಾತ್ಕಾಲಿಕ ವಿರಾಮ ನೀಡಿತು.[೨೫]

UAEಯ ರಚನೆಯಾದ ನಂತರವೂ ಎರಡೂ ಎಮಿರೇಟ್‌ಗಳ ನಡುವೆ ಗಡಿತಕರಾರುಗಳು ಮುಂದುವರಿದವು ; ಇದು ಅಂತ್ಯಕಂಡಿದ್ದು ೧೯೭೯ರಲ್ಲಿ, ಆಗ ಔಪಚಾರಿಕ ಸಂಧಾನ ನಡೆದು, ಎರಡೂ ರಾಜ್ಯಗಳ ನಡುವಿನ ಗಡಿ ತಕರಾರುಗಳು ಮತ್ತು ಕದನಗಳು ನಿಂತವು.[೨೬] ಬ್ರಿಟಿಷರು ತಮ್ಮ ನಿರ್ವಹಣಾ ಕಛೇರಿಯನ್ನು ಷಾರ್ಜಾನಿಂದ ದುಬೈಗೆ ಸ್ಥಳಾಂತರಿಸಿದಾಗ ವಿದ್ಯುತ್‌‌, ದೂರವಾಣಿ ಸೇವೆಗಳು ಮತ್ತು ವಿಮಾನನಿಲ್ದಾಣವೊಂದನ್ನು ದುಬೈನಲ್ಲಿ ೧೯೫೦ರ ದಶಕದಲ್ಲಿ ಆರಂಭಿಸಲಾಯಿತು.[೨೭] ಪರ್ಷಿಯನ್‌ ಕೊಲ್ಲಿಯ ರೂಪಾಯಿ ಅಪಮೌಲ್ಯಗೊಂಡಾಗ ೧೯೬೬ರಲ್ಲಿ ನಗರವು ಹೊಸದಾಗಿ ರಚಿಸಲಾದ ಸ್ವತಂತ್ರ ರಾಷ್ಟ್ರ ಕತಾರ್‌ನೊಂದಿಗೆ ಸೇರಿಕೊಂಡು ಕತಾರ್‌‌/ದುಬೈ ರಿಯಾಲ್‌ ಎಂಬ ಹಣದ ಹೊಸ ಮಾನಕವನ್ನು ರಚಿಸಿತು.[೧೯] ಅದೇ ವರ್ಷದಲ್ಲಿ ದುಬೈನಲ್ಲಿ ತೈಲ ಸಂಗ್ರಹವನ್ನು ಪತ್ತೆಹಚ್ಚಲಾಯಿತಲ್ಲದೇ, ಅಂತರರಾಷ್ಟ್ರೀಯ ತೈಲ ಕಂಪೆನಿಗಳಿಗೆ ನಗರವು ರಿಯಾಯಿತಿಯನ್ನೂ ನೀಡಿತು. ತೈಲನಿಕ್ಷೇಪದ ಪತ್ತೆಯು ವಿದೇಶಿ ಕೆಲಸಗಾರರ, ಮುಖ್ಯವಾಗಿ ಭಾರತೀಯರ ಮತ್ತು ಪಾಕಿಸ್ತಾನಿ ಕೆಲಸಗಾರರ ಸಾಮೂಹಿಕ ಒಳವಲಸೆಗೆ ಕಾರಣವಾಯಿತು. ಇದರ ಪರಿಣಾಮವಾಗಿ, ಕೆಲ ಅಂದಾಜುಗಳ ಪ್ರಕಾರ ನಗರದ ಜನಸಂಖ್ಯೆಯು ೧೯೬೮ರ ಗಣನೆಯಿಂದ ೧೯೭೫ರ ಹೊತ್ತಿಗೆ ೩೦೦%ಗೂ ಹೆಚ್ಚಿನ ಪ್ರಮಾಣದಲ್ಲಿ ಏರಿತು.[೨೮]

೧೯೭೧[೨೯] ರಲ್ಲಿ ಪೂರ್ವ ರಕ್ಷಕ ಬ್ರಿಟನ್‌ ಪರ್ಷಿಯನ್‌ ಕೊಲ್ಲಿಯನ್ನು ತೊರೆದಾಗ, ೨ ಡಿಸೆಂಬರ್‌ ೧೯೭೧ರಂದು ದುಬೈ, ಅಬುಧಾಬಿ ಮತ್ತು ಐದು ಇತರೆ ಎಮಿರೇಟ್‌ಗಳ ಜೊತೆಗೆ ಸೇರಿ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌‌ ರಾಷ್ಟ್ರವನ್ನು ರಚಿಸಿಕೊಂಡಿತು. ೧೯೭೩ರಲ್ಲಿ, ದುಬೈ ಇತರೆ ಎಮಿರೇಟ್‌ಗಳ ಜೊತೆ ಸೇರಿ ಏಕರೂಪ ಹಣದ ಮಾನಕವಾದ UAE ದಿರ್‌ಹ್ಯಾಂಅನ್ನು ಅಳವಡಿಸಿಕೊಂಡಿತು. ೧೯೭೦ರ ದಶಕದಲ್ಲಿ, ದುಬೈ ತೈಲ ಮತ್ತು ವ್ಯಾಪಾರದ ಆದಾಯಗಳಿಂದ ಅಭಿವೃದ್ಧಿಯಾಗುತ್ತಲೇ ಹೋದ ನಗರವು, ಲೆಬನಾನ್‌[೩೦] ನಲ್ಲಿನ ಅಂತಃಕಲಹದಿಂದಾಗಿ, ಆ ದೇಶವನ್ನು ತೊರೆದುಬಂದ ಲೆಬನೀಸ್‌ ಜನರ ಒಳವಲಸೆಯನ್ನೂ ಕಂಡಿತು. ಜೆಬೆಲ್‌ ಅಲಿ ಬಂದರನ್ನು (ಪ್ರಖ್ಯಾತ ವಿಶ್ವದಲ್ಲೇ ಮಾನವ ನಿರ್ಮಿತ ಅತಿ ದೊಡ್ಡ ಬಂದರು) ೧೯೭೯ರಲ್ಲಿ ಸ್ಥಾಪಿಸಲಾಯಿತು. ವಿದೇಶಿ ಕಂಪೆನಿಗಳಿಗೆ ಅನಿಯಂತ್ರಿತ ಕೆಲಸಗಾರರ ಆಮದು ಹಾಗೂ ರಫ್ತು ಬಂಡವಾಳವನ್ನು ಆಕರ್ಷಿಸಲನುಕೂಲವಾಗುವಂತೆ ಜಫ್ಜಾ (ಜೆಬೆಲ್‌ ಅಲಿ ಮುಕ್ತ ವಲಯ)ವನ್ನು ೧೯೮೫ರಲ್ಲಿ ಬಂದರಿನ ಸುತ್ತಮುತ್ತ ಅಭಿವೃದ್ಧಿಪಡಿಸಲಾಯಿತು.[೩೧]

೧೯೯೦ರ ಪರ್ಷಿಯನ್‌ ಕೊಲ್ಲಿ ಯುದ್ಧವು ನಗರದ ಮೇಲೆ ಭಾರೀ ಪರಿಣಾಮವನ್ನೇ ಬೀರಿತು. ಆರ್ಥಿಕವಾಗಿ, ದುಬೈನ ಬ್ಯಾಂಕ್‌ಗಳು ಆ ಪ್ರದೇಶದ ರಾಜಕೀಯ ಅಸ್ಥಿರತೆಯ ಕಾರಣದಿಂದ ಬೃಹತ್‌ ಪ್ರಮಾಣದಲ್ಲಿ ಹೂಡಿಕೆ ಹಿಂತೆಗೆತ ಕಂಡವು. ೧೯೯೦ರ ದಶಕದ ಅವಧಿಯಲ್ಲಿ, ಅನೇಕ ವಿದೇಶೀ ವರ್ತಕ ಸಮುದಾಯಗಳು — ಮೊದಲಿಗೆ ಪರ್ಷಿಯನ್‌ ಕೊಲ್ಲಿಯುಧ್ಧದ ಸಂದರ್ಭದಲ್ಲಿ ಕುವೈತ್‌ನಿಂದ, ನಂತರ ಷಿಯಾಗಳ ದಂಗೆಯ ಕಾರಣದಿಂದ ಬಹ್ರೇನ್‌ನಿಂದ ತಮ್ಮ ವ್ಯವಹಾರಗಳನ್ನು ದುಬೈಗೆ ಸ್ಥಳಾಂತರಿಸಿದವು.[೨೨] ಪರ್ಷಿಯನ್‌ ಕೊಲ್ಲಿ ಯುದ್ಧದ ಸಮಯದಲ್ಲಿ ಹಾಗೂ 2003ರ ಇರಾಕ್‌ ಆಕ್ರಮಣದ ಸಂದರ್ಭದಲ್ಲಿ ಮಿತ್ರಪಕ್ಷಗಳಿಗೆ ಜೆಬೆಲ್‌ ಅಲಿ ಮುಕ್ತ ವಲಯದಲ್ಲಿ ಇಂಧನಮರುಪೂರಣ ನೆಲೆಯಾಗಿ ದುಬೈ ಕಾರ್ಯನಿರ್ವಹಿಸಿತ್ತು. ಪರ್ಷಿಯನ್‌ ಕೊಲ್ಲಿ ಯುದ್ಧದ ನಂತರ ತೈಲದರಗಳ ಭಾರೀ ಏರಿಕೆಯು ದುಬೈಗೆ ಮುಕ್ತವ್ಯಾಪಾರ ಹಾಗೂ ಪ್ರವಾಸೋದ್ಯಮದ ಮೇಲೆ ಗಮನ ಕೇಂದ್ರೀಕರಿಸಲು ಪ್ರೋತ್ಸಾಹಿಸಿತು.[೩೨] ಜೆಬೆಲ್‌ ಅಲಿ ಮುಕ್ತ ವಲಯದ ಯಶಸ್ಸು ದುಬೈ ಇಂಟರ್ನೆಟ್‌ ಸಿಟಿ, ದುಬೈ ಮೀಡಿಯಾ ಸಿಟಿ ಮತ್ತು ದುಬೈ ಮಾರಿಟೈಮ್‌ ಸಿಟಿಗಳು ಸೇರಿದಂತೆ ಅದೇ ಮಾದರಿಯ ನವೀನ ಮುಕ್ತ ವಲಯಗಳ ಸಮುದಾಯವನ್ನು ಆರಂಭಿಸಲು ಉತ್ಸಾಹ ನೀಡಿತು. ವಿಶ್ವದ ಅತಿ ಎತ್ತರದ ಆಧಾರರಹಿತ/ಮುಕ್ತ ನಿಲುವಿನ ಹೋಟೆಲ್‌ ಬುರ್ಜ್‌ ಅಲ್‌ ಅರಬ್‌ನ ನಿರ್ಮಾಣ, ಹಾಗೂ ಹೊಸ ವಸತಿ ಸಮುಚ್ಛಯಗಳ ಅಭಿವೃದ್ಧಿಯು ದುಬೈಗೆ ಪ್ರವಾಸೋದ್ಯಮದಲ್ಲಿ ಪ್ರಚಾರ ನೀಡಲು ಸಹಾಯವಾಯಿತು. ೨೦೦೨ರಿಂದ, ದುಬೈನ ಕ್ಷಿತಿಜ[೩೨] ದಲ್ಲಿ ಎದ್ದು ಕಾಣುವಂತಹಾ ದ ಪಾಮ್‌ ಐಲೆಂಡ್ಸ್‌, ದ ವರ್ಲ್ಡ್‌ ಐಲೆಂಡ್ಸ್‌, ಬುರ್ಜ್‌ ದುಬೈ ಮತ್ತು ದ ಡೈನಾಮಿಕ್‌ ಟವರ್‌‌ನಂತಹಾ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಲು ಖಾಸಗಿ ಸ್ಥಿರಾಸ್ತಿ ಮಾರಾಟ ಬಂಡವಾಳದಲ್ಲಿ ಏರಿಕೆ ಕಂಡುಬಂದಿದೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕಡಿಮೆ ದುಪ್ಪಟ್ಟಾದ ವಾಣಿಜ್ಯಿಕ ಹಾಗೂ ವಾಸ್ತವ್ಯದ ಬಾಡಿಗೆ ವೆಚ್ಚಗಳ ಕಾರಣದಿಂದಾಗಿ ಅಲ್ಲಿನ ನಿವಾಸಿಗಳ ಜೀವನವೆಚ್ಚದ ಏರಿಕೆಗೆ ಕಾರಣವಾಗಿ ಕಂಡುಬಂದ ಹಣದುಬ್ಬರ ದರ (೨೦೦೭ರಲ್ಲಿ ಗ್ರಾಹಕ ದರ ಸೂಚಿಯ ವಿರುದ್ಧ ೧೧.೨%ರಷ್ಟು)ದ ಏರಿಕೆಯೊಂದಿಗೆ ದೃಢ ಆರ್ಥಿಕ ಅಭಿವೃದ್ಧಿ ಬೆಳವಣಿಗೆ/ಏರಿಕೆಯು ಕಂಡುಬಂದಿದೆ.[೩೩]

ಭೂಗೋಳಶಾಸ್ತ್ರ

ಬದಲಾಯಿಸಿ
 
ದುಬೈ ನಗರದ ಭೂಪಟ.
 
ರಾತ್ರಿಯ ಸಮಯದಲ್ಲಿ ದುಬೈ-ಷಾರ್ಜಾ-ಅಜ್ಮನ್‌‌ ಮೆಟ್ರೋಪಾಲಿಟನ್‌ ಪ್ರದೇಶ.
 
ಮರಳುಗಾಡಿನ ಯಾತ್ರೆಯ ಸಮಯದಲ್ಲಿ ಕಂಡ ದುಬೈನ ಮರಳುಗಾಡುಗಳಲ್ಲಿನ ಮರಳಿನ ದಿಬ್ಬಗಳು

ದುಬೈ ನಗರವು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಪರ್ಷಿಯನ್‌ ಕೊಲ್ಲಿಯ ಕರಾವಳಿಯಲ್ಲಿ ಸ್ಥೂಲವಾಗಿ ಸಮುದ್ರ ಮಟ್ಟದಲ್ಲಿದೆ (ಮೇಲೆ 16 m (52 ft)*). ದುಬೈನ ಎಮಿರೇಟ್‌ ಅಬುಧಾಬಿಯೊಂದಿಗೆ ದಕ್ಷಿಣದಲ್ಲಿ, ಈಶಾನ್ಯದಲ್ಲಿ ಷಾರ್ಜಾದೊಂದಿಗೆ, ಮತ್ತು ಆಗ್ನೇಯದಲ್ಲಿ ಓಮನ್‌ ಸುಲ್ತಾನೇಟ್‌/ಸುಲ್ತಾನರ ಪ್ರಾಂತ್ಯಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಹಟ್ಟಾ, ಎಂಬ ಎಮಿರೇಟ್‌ನ ಕಿರು ಉಪಪ್ರಾಂತ್ಯವು ಮೂರು ದಿಕ್ಕುಗಳಲ್ಲಿ ಓಮನ್‌ನಿಂದ ಮತ್ತು ಅಜ್ಮನ್‌ ಎಮಿರೇಟ್‌ನಿಂದ(ಪಶ್ಚಿಮದಲ್ಲಿ) ಮತ್ತು ರಾಸ್‌ ಅಲ್‌ ಖೈಮಾ(ಉತ್ತರದಲ್ಲಿ)ಗಳಿಂದ ಸುತ್ತುವರೆಯಲ್ಪಟ್ಟಿದೆ. ಪರ್ಷಿಯನ್‌ ಕೊಲ್ಲಿಯು ಎಮಿರೇಟ್‌ನ ಪಶ್ಚಿಮ ಗಡಿಯಾಗಿ ಪರಿಣಮಿಸಿದೆ. ದುಬೈ 25°16′11″N 55°18′34″E / 25.2697°N 55.3095°E / 25.2697; 55.3095ನ ಸ್ಥಾನದಲ್ಲಿದೆ ಹಾಗೂ ೪,೧೧೪ km²(೧,೫೮೮ mi²)ಗಳ ವಿಸ್ತೀರ್ಣವನ್ನು ಹೊಂದಿದೆ.

ದುಬೈ ನಗರವು ಅರೇಬಿಯಾದ ಮರುಭೂಮಿಯ ಒಳಗೇ ಇದೆ. ಆದಾಗ್ಯೂ, ದುಬೈನ ಭೂಲಕ್ಷಣವು UAEಯ ದಕ್ಷಿಣ ಭಾಗಕ್ಕಿಂತ ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿದೆ, ಎಂದರೆ ದುಬೈನ ಬಹುಪಾಲು ಪ್ರದೇಶವು ಮರಳು ತುಂಬಿದ ಬಂಜರು ಪ್ರದೇಶಗಳನ್ನು ಹೊಂದಿದ್ದರೆ, ರಾಷ್ಟ್ರದ ದಕ್ಷಿಣ ಭಾಗಗಳಲ್ಲಿ ಜಲ್ಲಿಸ್ತರಗಳಿಂದ ತುಂಬಿದ ಮರಳುಗಾಡಿದೆ.[೩೪] ಇಲ್ಲಿನ ಮರಳು ಬಹಳಷ್ಟು ಪುಡಿಪುಡಿಯಾದ ಚಿಪ್ಪುಗಳು ಮತ್ತು ಹವಳಗಳೊಂದಿಗೆ ಕೂಡಿದ್ದು, ನಯವಾಗಿ, ಶುಭ್ರವಾಗಿ ಮತ್ತು ಶ್ವೇತವರ್ಣದ್ದಾಗಿದೆ. ನಗರದ ಪೂರ್ವದಲ್ಲಿ ಸಬ್‌ಖಾ ಎಂದು ಕರೆಯಲ್ಪಡುವ ಉಪ್ಪಿನ ಪದರಗಳಿರುವ ಕರಾವಳಿ ಸಮತಲ ಪ್ರದೇಶವು ಉತ್ತರ-ದಕ್ಷಿಣ ದಿಕ್ಕುಗಳಲ್ಲಿ/ದಕ್ಷಿಣೋತ್ತರವಾಗಿ ಹಬ್ಬಿರುವ ಮರಳಿನ ದಿಬ್ಬಗಳನ್ನುಂಟು ಮಾಡಿದೆ. ದೂರದ ಪೂರ್ವಭಾಗದಲ್ಲಿ ಮರಳಿದ ದಿಬ್ಬಗಳು ದೊಡ್ಡದಾಗಿ ಕಬ್ಬಿಣದ ಆಕ್ಸೈಡ್‌ನಿಂದಾಗಿ ಕೆಂಪು ಬಣ್ಣದ ಛಾಯೆಗೆ ತಿರುಗಿರುತ್ತವೆ.[೨೮] ಮರಳಿರುವ ಮಟ್ಟಸ ಬಂಜರು ಪ್ರದೇಶವು ಪಶ್ಚಿಮದ ಹಜಾರ್‌ ಬೆಟ್ಟಗಳ ತನಕ ಹರಡಿದ್ದು,ಹಟ್ಟಾದಲ್ಲಿ ಓಮನ್‌ನೊಂದಿಗಿನ ದುಬೈನ ಗಡಿಯೊಟ್ಟಿಗೆ ಮುಂದುವರೆದಿರುತ್ತದೆ. ಪಶ್ಚಿಮದ ಹಜಾರ್‌ ಸರಣಿಯು ಶುಷ್ಕ, ಏರುತಗ್ಗುಗಳಿಂದ ಕೂಡಿದ ಮತ್ತು ನಂತರ ಮಟ್ಟಸವಾಗಿ ಬಿಡುವಂತಹಾ ಭೂಲಕ್ಷಣವನ್ನು ಹೊಂದಿದ್ದು, ಕೆಲ ಸ್ಥಳಗಳಲ್ಲಿ ಬೆಟ್ಟಗಳು ಸುಮಾರು ೧,೩೦೦ ಮೀಟರ್‌ಗಳಷ್ಟು ಎತ್ತರವಿವೆ. ದುಬೈನಲ್ಲಿ ಯಾವುದೇ ನೈಸರ್ಗಿಕ ನೀರಿನ ಮೂಲ ಅಥವಾ ಓಯಸಿಸ್‌ಗಳಿಲ್ಲ; ಆದಾಗ್ಯೂ, ದುಬೈ ನೈಸರ್ಗಿಕ ಕಡಲಿನ ಒಳಚಾಚು ದುಬೈ ಒಳಚಾಚುವನ್ನು ಹೊಂದಿದ್ದು, ದೊಡ್ಡ ಹಡಗುಗಳು ಒಳಬರುವಷ್ಟರ ಮಟ್ಟಿಗೆ ಆಳವಾಗುವ ಹಾಗೆ ಅದರ ಹೂಳನ್ನು ತೆಗೆದು ಅವಕಾಶ ಮಾಡಲಾಗಿದೆ. ದುಬೈ ಅನೇಕ ಅಡಚುಗಳು ಹಾಗೂ ಕಮರಿಗಳನ್ನು ಹೊಂದಿದ್ದು, ಇವು ಪಶ್ಚಿಮದ ಅಲ್‌ ಹಜಾರ್‌ ಬೆಟ್ಟಗಳ ಬುಡಗಳ ಕೊನೆಯನ್ನು ಸೂಚಿಸುತ್ತವೆ. ದಕ್ಷಿಣ ದುಬೈನ ಬಹುಭಾಗವು ವಿಸ್ತಾರವಾದ ಮರಳು ದಿಬ್ಬಗಳನ್ನು ಹೊಂದಿದ್ದು, ಅಂತಿಮವಾಗಿ ಖಾಲಿ ಬೀಡು/ಎಂಪ್ಟಿ ಕ್ವಾರ್ಟರ್‌ ಎಂದು ಕರೆಯಲಾಗುವ ಮರಳುಭೂಮಿಯೆಡೆ ಸಾಗುತ್ತದೆ. ಭೂಕಂಪಕೇಂದ್ರದ ದೃಷ್ಟಿಯಿಂದ ನೋಡಿದರೆ, ದುಬೈ ಅತ್ಯಂತ ಸುಸ್ಥಿರ ಪ್ರದೇಶದಲ್ಲಿದೆ — ಅತ್ಯಂತ ಸಮೀಪದ ಭೂಕಂಪನ ದೋಷ ಹೊಂದಿರುವ ಝಾರ್ಗೋಸ್‌ ಫಾಲ್ಟ್‌ ಎಂಬ ಪ್ರದೇಶವು UAEಯಿಂದ ೧೨೦ km ದೂರದಲ್ಲಿದೆ ಹಾಗೂ ಇದು ದುಬೈನ ಮೇಲೆ ಯಾವುದೇ ರೀತಿಯ ಭೂಕಂಪನ ಪರಿಣಾಮ ಬೀರುವ ಸಾಧ್ಯತೆ ಇಲ್ಲ.[೩೫] ತಜ್ಞರು ಈ ಪ್ರದೇಶದಲ್ಲಿ ಪರ್ಷಿಯನ್‌ ಕೊಲ್ಲಿಯು ತ್ಸುನಾಮಿಯನ್ನು ಸೃಷ್ಟಿಸುವಷ್ಟು ಮಟ್ಟದ ಆಳ ಹೊಂದಿಲ್ಲವಾದ್ದರಿಂದ ತ್ಸುನಾಮಿಯ ಸಾಧ್ಯತೆಯೂ ಕನಿಷ್ಟವಾಗಿದೆ ಎಂದು ಅಂದಾಜಿಸುತ್ತಾರೆ.[೩೫]

ನಗರವನ್ನು ಸುತ್ತುವರೆದಿರುವ ಮರಳು ತುಂಬಿದ ಭೂಮಿಯು ಕಾಡು ಹುಲ್ಲನ್ನು ಹಾಗೂ ಅನಿಯತವಾಗಿ ಬೆಳೆಯುವ ಖರ್ಜೂರದ ಮರಗಳನ್ನು ಬೆಳೆಯಲು ಸೂಕ್ತವಾಗಿದೆ. ನಗರದ ಪೂರ್ವ ಭಾಗದಲ್ಲಿರುವ ಸಬ್‌ಖಾ ಬಯಲು ಪ್ರದೇಶಗಳಲ್ಲಿ ಮರಳುಗಾಡಿನ ಧೂಮ್ರನೀಲಿ ಬಣ್ಣದ ಹೂವುಗಳನ್ನು ಬೆಳೆದರೆ, ಅಕೇಷಿಯಾ ಮತ್ತು ಗಾಫ್‌ ಮರಗಳು ಪಶ್ಚಿಮದ ಅಲ್‌ ಹಜಾರ್‌ ಪರ್ವತ ಪ್ರದೇಶದ ಸಮೀಪದ ಮಟ್ಟಸ ಬಯಲು ಪ್ರದೇಶದಲ್ಲಿ ಬೆಳೆಯುತ್ತವೆ. ಖರ್ಜೂರ ಮತ್ತು ಬೇವಿನ ಮರಗಳಂಥ ಅನೇಕ ಸ್ಥಳೀಯ ಮರಗಳು ಹಾಗೂ ಆಮದಾದ ಯೂಕಲಿಪ್ಟಸ್‌ನಂತಹಾ ಮರಗಳು ದುಬೈನ ನೈಸರ್ಗಿಕ ಉದ್ಯಾನಗಳಲ್ಲಿ ಬೆಳೆಯುತ್ತವೆ. ಕಾಡುಕೊಕ್ಕರೆ, ಪಟ್ಟೆಯುಳ್ಳ ಕತ್ತೆಕಿರುಬ, ತೋಳ, ಮರಳುಗಾಡಿನ ನರಿ, ಗಿಡುಗ ಮತ್ತು ಅರೇಬಿಯನ್‌ ಆರಿಕ್ಸ್‌ ಜಿಂಕೆಗಳು ಮುಂತಾದವುಗಳು ದುಬೈನ ಮರಳುಗಾಡಿನಲ್ಲಿ ಸಾಮಾನ್ಯವಾಗಿ ಕಾಣುವ ಪಶು-ಪಕ್ಷಿ-ಪ್ರಾಣಿಗಳಾಗಿವೆ. ಯೂರೋಪ್‌, ಏಷ್ಯಾ ಮತ್ತು ಆಫ್ರಿಕಾಗಳ ನಡುವಿನ ಪಕ್ಷಿಗಳ ವಲಸೆಯ ಮಾರ್ಗದಲ್ಲಿ ದುಬೈ ಬರುವುದರಿಂದ ವಸಂತ ಹಾಗೂ ಶರದೃತುಗಳಲ್ಲಿ ೩೨೦ಕ್ಕೂ ಹೆಚ್ಚು ವಲಸೆ ಹೋಗುವ ಪಕ್ಷಿ ಸಂಕುಲಗಳು ಎಮಿರೇಟ್‌ ಮೂಲಕ ಹಾದುಹೋಗುತ್ತವೆ. ಹಮ್ಮರ್‌ ಸೇರಿದಂತೆ ೩೦೦ಕ್ಕೂ ಹೆಚ್ಚಿನ ಮೀನಿನ ತಳಿಗಳಿಗೆ ದುಬೈನ ಜಲಮೂಲಗಳು ನೆಲೆಯಾಗಿವೆ.

ದುಬೈ ಒಳಚಾಚುವು ನಗರದ ಮೂಲಕ ಈಶಾನ್ಯ ದಿಕ್ಕಿನಿಂದ ನೈಋತ್ಯ ದಿಕ್ಕಿನೆಡೆಗೆ ಹಾದು ಹೋಗುತ್ತದೆ. ನಗರದ ಪೂರ್ವ ಭಾಗವು ಡೇರಾ ಪ್ರದೇಶವೆಂದೆನಿಸಿದ್ದು ಪೂರ್ವದಲ್ಲಿ ಷಾರ್ಜಾ ಎಮಿರೇಟ್‌ನಿಂದ ಹಾಗೂ ದಕ್ಷಿಣದಲ್ಲಿ ಅಲ್‌ ಅವೀರ್‌ ಪಟ್ಟಣದಿಂದಾವೃತವಾಗಿದೆ. ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಡೇರಾ ಪ್ರದೇಶದ ದಕ್ಷಿಣದಲ್ಲಿದ್ದರೆ, ಪರ್ಷಿಯನ್‌ ಕೊಲ್ಲಿಯ ಉತ್ತರ ಭಾಗದಲ್ಲಿ ಪಾಮ್‌ ಡೇರಾ ಪ್ರದೇಶವಿದೆ. ದುಬೈನ ಸ್ಥಿರಾಸ್ತಿ ಉದ್ಯಮದ ತೀವ್ರ ಬೆಳವಣಿಗೆಯು ಜುಮೇರಾ ಕರಾವಳಿ ಪಟ್ಟಿಯಲ್ಲಿ ಬರುವ ದುಬೈ ಒಳಚಾಚುವಿನ ಪಶ್ಚಿಮ ಭಾಗದಲ್ಲಿ ಕೇಂದ್ರಿತಗೊಂಡಿದೆ. ರಷೀದ್‌ ಬಂದರು, ಜೆಬೆಲ್‌ ಅಲಿ, ಬುರ್ಜ್‌ ಅಲ್‌ ಅರಬ್‌‌, ಪಾಮ್‌ ಜುಮೇರಾ ಮತ್ತು ಬಿಸಿನೆಸ್‌ ಬೇಯಂತಹಾ ವಸ್ತುಗಳ ಮೇಲೆ ಆಧಾರಿತವಾದ ಮುಕ್ತ ವ್ಯಾಪಾರ ವಲಯಗಳೆಲ್ಲಾ ಇದೇ ಪ್ರದೇಶದಲ್ಲಿವೆ. ಐದು ಪ್ರಮುಖ ಹಾದಿ/ಹೆದ್ದಾರಿ/ಗಳಾದ — E 11 (ಷೇಕ್‌ ಜಾಯೆದ್‌ ರಸ್ತೆ ), E 311 (ಎಮಿರೇಟ್ಸ್‌ ರಸ್ತೆ ), E 44 (ದುಬೈ-ಹಟ್ಟಾ ಹೆದ್ದಾರಿ ), E 77 (ದುಬೈ-ಅಲ್‌ ಹಬಬ್‌ ರಸ್ತೆ) ಮತ್ತು E 66 (ಔದ್‌ ಮೆಥಾ ರಸ್ತೆ )ಗಳು — ದುಬೈ ಮೂಲಕ ಹಾದು, ನಗರವನ್ನು ಇತರೆ ಪಟ್ಟಣಗಳಿಗೆ ಹಾಗೂ ಎಮಿರೇಟ್‌ಗಳಿಗೆ ಸಂಪರ್ಕಿಸುತ್ತವೆ. ಇವುಗಳೊಂದಿಗೆ, ಅನೇಕ ಪ್ರಮುಖ ನಗರದೊಳಗಿನ ಮಾರ್ಗಗಳಾದ D 89 (ಅಲ್‌ ಮಕ್ತೂಮ್‌ ರಸ್ತೆ/ವಿಮಾನನಿಲ್ದಾಣ ರಸ್ತೆ), D 85 (ಬನಿಯಾಸ್‌ ರಸ್ತೆ), D 75 (ಷೇಕ್‌ ರಷೀದ್‌ ರಸ್ತೆ ), D 73 (ಅಲ್‌ ಧಿಯಫಾ ರಸ್ತೆ ), D 94 (ಜುಮೇರಾ ರಸ್ತೆ) ಮತ್ತು D 92 (ಅಲ್‌ ಖಲೀಜ್‌/ಅಲ್‌ ವಾಸ್‌ಲ್‌ ರಸ್ತೆ )ಗಳು ನಗರದೊಳಗಿನ ಅನೇಕ ಬಡಾವಣೆಗಳನ್ನು ಸಂಪರ್ಕಿಸುತ್ತವೆ. ನಗರದ ಪೂರ್ವ ಹಾಗೂ ಪಶ್ಚಿಮ ಭಾಗಗಳನ್ನು ಅಲ್‌ ಮಕ್ತೂಮ್‌‌ ಸೇತುವೆ, ಅಲ್‌ ಗರ್‌ಹೌದ್‌ ಸೇತುವೆ, ಅಲ್‌ ಷಿಂದಗಾ ಸುರಂಗ, ಬಿಸಿನೆಸ್‌ ಬೇ ಹಾಯಿದಾರಿ ಮತ್ತು ತೂಗು ಸೇತುವೆಗಳು ಪರಸ್ಪರ ಸಂಪರ್ಕಿಸುತ್ತವೆ.

ಹವಾಗುಣ

ಬದಲಾಯಿಸಿ

ದುಬೈ ಶಾಖದಿಂದ ಕೂಡಿರುವ ಹಾಗೂ ಶುಷ್ಕ ಹವಾಗುಣವನ್ನು ಹೊಂದಿದೆ. ದುಬೈನ ಬೇಸಿಗೆ ಕಾಲವು ವಿಪರೀತ ಬೇಗೆಯದಾಗಿದ್ದು ಸುಮಾರು ೪೦ °Cನಷ್ಟು ಸರಾಸರಿ ತಾಪಮಾನದಿಂದ ಕೂಡಿದ್ದು ಹಠಾತ್ತಾಗಿ ೩೦ °Cಗೆ ಇಳಿಕೆಯಾಗುವುದೂ ಇದೆ. ವರ್ಷದಾದ್ಯಂತ ಬಿಸಿಲು ಇದ್ದೇ ಇರುತ್ತದೆ. ಚಳಿಗಾಲವೂ ಅಲ್ಪಾವಧಿಯದಾಗಿದ್ದು ಸಹಾ ಬೆಚ್ಚಗೆ ಇದ್ದು ಸರಾಸರಿ ಗರಿಷ್ಠ ತಾಪಮಾನವಾಗಿ ೨೩ °Cನ್ನು ಹೊಂದಿದ್ದು ಹಠಾತ್ತಾಗಿ ೧೪ °Cರಷ್ಟು ಇಳಿಯುವುದೂ ಇದೆ.


Dubaiದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Record high °C (°F) 31.6
(88.9)
37.5
(99.5)
41.3
(106.3)
43.5
(110.3)
47.0
(116.6)
46.7
(116.1)
49.0
(120.2)
48.7
(119.7)
45.1
(113.2)
42.0
(107.6)
41.0
(105.8)
35.5
(95.9)
49
(120.2)
ಅಧಿಕ ಸರಾಸರಿ °C (°F) 24.0
(75.2)
25.4
(77.7)
28.2
(82.8)
32.9
(91.2)
37.6
(99.7)
39.5
(103.1)
40.8
(105.4)
41.3
(106.3)
38.9
(102)
35.4
(95.7)
30.5
(86.9)
26.2
(79.2)
33.4
(92.1)
Daily mean °C (°F) 19
(66)
20
(68)
22.5
(72.5)
26
(79)
30.5
(86.9)
33
(91)
34.5
(94.1)
35.5
(95.9)
32.5
(90.5)
29
(84)
24.5
(76.1)
21
(70)
27.5
(81.5)
ಕಡಮೆ ಸರಾಸರಿ °C (°F) 14.3
(57.7)
15.4
(59.7)
17.6
(63.7)
20.8
(69.4)
24.6
(76.3)
27.2
(81)
29.9
(85.8)
30.2
(86.4)
27.5
(81.5)
23.9
(75)
19.9
(67.8)
16.3
(61.3)
22.3
(72.1)
Record low °C (°F) 6.1
(43)
6.9
(44.4)
9.0
(48.2)
13.4
(56.1)
15.1
(59.2)
18.2
(64.8)
20.4
(68.7)
23.1
(73.6)
16.5
(61.7)
15.0
(59)
11.8
(53.2)
8.2
(46.8)
6.1
(43)
Average precipitation mm (inches) 18.8
(0.74)
25.0
(0.984)
22.1
(0.87)
7.2
(0.283)
0.4
(0.016)
0.0
(0)
0.8
(0.031)
0.0
(0)
0.0
(0)
1.1
(0.043)
2.7
(0.106)
16.2
(0.638)
94.3
(3.711)
Average precipitation days 5.4 4.7 5.8 2.6 0.3 0.0 0.5 0.5 0.1 0.2 1.3 3.8 25.2
Average relative humidity (%) 65 65 63 55 53 58 56 57 60 60 61 64 59.8
Mean sunshine hours 254.2 229.6 254.5 294.0 344.1 342.0 322.4 316.2 309.0 303.8 285.0 256.6 ೩,೫೧೧.೪
Source #1: Dubai Meteorological Office[೩೬]
Source #2: climatebase.ru (extremes, sun),[೩೭], NOAA (humidity, 1974-1991)[೩೮]

ಆಡಳಿತ ಮತ್ತು ರಾಜಕೀಯ

ಬದಲಾಯಿಸಿ
 
ದುಬೈನಲ್ಲಿ ಸುಮಾರು 250,000 ಕಾರ್ಮಿಕರು ಬಹಳಷ್ಟು ಮಟ್ಟಿಗೆ, ದಕ್ಷಿಣ ಏಷ್ಯನ್ನರು, ದಿನಕ್ಕೆ US$10ಗಿಂತಲೂ ಕಡಿಮೆ ವೇತನಕ್ಕೆ ದುಬೈ ಮರೀನಾದಂತಹಾ ಸ್ಥಿರಾಸ್ತಿ ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ

ದುಬೈನ ಆಡಳಿತವು ಸಾಂವಿಧಾನಿಕ ಏಕಚಕ್ರಾಧಿಪತ್ಯವನ್ನು ಪಾಲಿಸುತ್ತಿದ್ದು ೧೮೩೩ರಿಂದ ಅಲ್‌ ಮಕ್ತೂಮ್‌‌ ವಂಶದವರ ಆಳ್ವಿಕೆಯಲ್ಲಿದೆ. ಪ್ರಸಕ್ತ ದೊರೆ, ಮೊಹಮ್ಮದ್‌ ಬಿನ್‌ ರಷೀದ್‌ ಅಲ್‌ ಮಕ್ತೂಮ್‌ರು‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌‌ನ ಪ್ರಧಾನಿ ಹಾಗೂ ಒಕ್ಕೂಟದ ಉಚ್ಚ ಸಮಿತಿಯ/ಸುಪ್ರೀಂ ಕೌನ್ಸಿಲ್‌ ಆಫ್‌ ದ ಯೂನಿಯನ್‌(SCU)ನ ಸದಸ್ಯರೂ ಆಗಿದ್ದಾರೆ. UAEಯ ಸರ್ವೋಚ್ಚ ಒಕ್ಕೂಟ ಶಾಸನಸಭೆಯಾದ ಫೆಡರಲ್ ನ್ಯಾಷನಲ್ ಕೌನ್ಸಿಲ್/ಒಕ್ಕೂಟ ರಾಷ್ಟ್ರೀಯ ಸಮಿತಿ(FNC)ಗೆ ಎರಡು ಅವಧಿಗಳಿಗೆ ದುಬೈ ೮ ಸದಸ್ಯರನ್ನು ನೇಮಕ ಮಾಡುತ್ತದೆ.[೩೯] ದುಬೈ ಮುನಿಸಿಪಾಲಿಟಿ ಸಂಸ್ಥೆಯನ್ನು (DM) ೧೯೫೪ರಲ್ಲಿ ಆಗಿನ ದುಬೈ ದೊರೆ, ರಷೀದ್‌ ಬಿನ್‌ ಸಯೀದ್‌ ಅಲ್‌ ಮಕ್ತೂಮ್‌‌ರು ನಗರ ಯೋಜನೆ, ನಾಗರೀಕ ಸೇವೆಗಳು ಮತ್ತು ಸ್ಥಳೀಯ ಸೇವೆಗಳ ಉಸ್ತುವಾರಿಗಾಗಿ ಸ್ಥಾಪಿಸಿದರು.[೪೦] DMಯು ದುಬೈ ನಿಯೋಜಿತ ಆಡಳಿತಗಾರರಾದ ಹಮ್‌ದನ್‌ ಬಿನ್‌ ರಷೀದ್‌ ಅಲ್‌ ಮಕ್ತೂಮ್‌‌ರ ಅಧ್ಯಕ್ಷತೆಯಲ್ಲಿ, ರಸ್ತೆ ಸಾರಿಗೆ ವಿಭಾಗ, ಯೋಜನೆ ಮತ್ತು ಸರ್ವೇಕ್ಷಣೆ ವಿಭಾಗ, ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ವಿಭಾಗ ಹಾಗೂ ಹಣಕಾಸು ವ್ಯವಹಾರಗಳ ವಿಭಾಗಗಳಂತಹಾ ಅನೇಕ ವಿಭಾಗಗಳನ್ನು ಹೊಂದಿದೆ. ೨೦೦೧ರಲ್ಲಿ, ದುಬೈ ಮುನಿಸಿಪಾಲ್ಟಿಯು ಇ-ಗವರ್ನಮೆಂಟ್ ಯೋಜನೆಯೊಂದನ್ನು ಆರಂಭಿಸಿ ಅದರಲ್ಲಿ ನೀಡಬೇಕಾದ ನಗರಸೇವೆಗಳ ಪೈಕಿ ೪೦ ಸೇವೆಗಳನ್ನು ತನ್ನ ವೆಬ್‌ ಪೋರ್ಟಲ್‌/ಜಾಲತಾಣದ ಮೂಲಕ ನೀಡಲು ಯೋಜಿಸಿತ್ತು(ದುಬೈ.ae). ಅಕ್ಟೋಬರ್‌ ೨೦೦೧ರ ಹೊತ್ತಿಗೆ ಅಂತಹಾ ಹದಿಮೂರು ಸೇವೆಗಳನ್ನು ಜಾರಿಗೊಳಿಸಲಾಯಿತು, ಉಳಿದ ಸೇವೆಗಳೂ ಭವಿಷ್ಯದಲ್ಲಿ ಕಾರ್ಯಗತಗೊಳ್ಳುವ ಆಶಯವಿದೆ.

ದುಬೈ ಮತ್ತು ರಸ್‌ ಅಲ್‌ ಖೈಮಾ ಇವೆರಡು ಎಮಿರೇಟ್‌ಗಳು ಮಾತ್ರವೇ ಯುನೈಟೆಡ್‌ ಅರಬ್‌ ಎಮಿರೇಟ್ಸ್‌‌ನ ಒಕ್ಕೂಟ ನ್ಯಾಯಾಲಯ ವ್ಯವಸ್ಥೆಗೆ ಬದ್ಧರಾಗಿಲ್ಲ. ಎಮಿರೇಟ್‌ನ ನ್ಯಾಯಾಲಯಗಳು ಮೊದಲ ಹಂತದ ನ್ಯಾಯಾಲಯ/ಕೋರ್ಟ್ ಆಫ್ ಫಸ್ಟ್ ಇನ್‌ಸ್ಟೆನ್ಸ್‌, ಮನವಿ ದಾಖಲಿಕೆಯ ನ್ಯಾಯಾಲಯ/ಕೋರ್ಟ್ ಆಫ್ ಅಪೀಲ್ ಹಾಗೂ ರದ್ದತಿಯ ನ್ಯಾಯಾಲಯ/ಕೋರ್ಟ್ ಆಫ್ ಕ್ಯಾಸೆಶನ್ ಎಂಬ ಮೂರು ವಿಭಾಗಗಳನ್ನು ಹೊಂದಿವೆ. ಮೊದಲ ಹಂತದ ನ್ಯಾಯಾಲಯವು ಎಲ್ಲಾ ರೀತಿಯ ಪೌರ ಪ್ರಕರಣಗಳನ್ನು ತೀರ್ಮಾನಿಸುವ ನಾಗರಿಕ/ಪೌರ/ಸಿವಿಲ್‌ ನ್ಯಾಯಾಲಯವನ್ನು, ಆರಕ್ಷಕರ ದೂರುಗಳ ತೀರ್ಮಾನಗಳನ್ನು ಕೈಗೊಳ್ಳುವ ದಂಡ ನ್ಯಾಯಾಲಯವನ್ನು; ಹಾಗೂ ಮುಸ್ಲಿಮರ ನಡುವಿನ ವಿವಾದಗಳನ್ನು ಪರಿಹರಿಸುವ ಷರಿಯಾ ನ್ಯಾಯಾಲಯಗಳನ್ನು ಹೊಂದಿರುತ್ತದೆ. ಮುಸ್ಲಿಮೇತರರು ಷರಿಯಾ ನ್ಯಾಯಾಲಯಕ್ಕೆ ಬಾಧ್ಯರಲ್ಲ. ರದ್ದತಿಯ ನ್ಯಾಯಾಲಯವು ಎಮಿರೇಟ್‌ನ ಸರ್ವೋಚ್ಚ ನ್ಯಾಯಾಲಯವಾಗಿದ್ದು ಕೇವಲ ಕಾನೂನುಗಳಿಗೆ ಸಂಬಂಧಪಟ್ಟ ವಿವಾದಗಳನ್ನು ಮಾತ್ರವೇ ತೀರ್ಮಾನಿಸುತ್ತದೆ.[೪೧] ೧೯೫೬ರಲ್ಲಿ ನೈಫ್‌ ಪ್ರದೇಶದಲ್ಲಿ ಸ್ಥಾಪಿಸಲಾದ ದುಬೈ ಪೊಲೀಸ್ ಪಡೆಯು ಇಡೀ ಎಮಿರೇಟ್‌ನ ಕಾನೂನುಪರಿಧಿಯನ್ನು ಪಾಲಿಸುವ ಜವಾಬ್ದಾರಿಯನ್ನು ಹೊತ್ತಿದ್ದು, ದುಬೈನ ದೊರೆಯಾದ ಮೊಹಮ್ಮದ್‌ ಬಿನ್‌ ರಷೀದ್‌ ಅಲ್‌ ಮಕ್ತೂಮ್‌‌ರ ನೇರ ನಿಯಂತ್ರಣದಲ್ಲಿರುತ್ತದೆ. ದುಬೈ ಮುನಿಸಿಪಾಲಿಟಿಯು ನಗರದ ಶುಚಿತ್ವ ಹಾಗೂ ಒಳಚರಂಡಿ ವ್ಯವಸ್ಥೆಗಳ ಮೇಲ್ವಿಚಾರಣೆ ಹೊಂದಿರುತ್ತದೆ. ನಗರದ ತ್ವರಿತ ಬೆಳವಣಿಗೆಯು ಒಳಚರಂಡಿ ವ್ಯವಸ್ಥೆಯ ನಿರ್ವಹಣೆಯ ಮಿತಿಯನ್ನು ಮೀರಿದ್ದು, ನಿರ್ವಹಣೆಯು ಕಷ್ಟಕರವೆನಿಸಿದೆ.[೪೨]

UAEಯ ಸಂವಿಧಾನದ ೨೫ನೇ ಪರಿಚ್ಛೇದವು ಜನಾಂಗ,ರಾಷ್ಟ್ರೀಯತೆ, ಧಾರ್ಮಿಕ ನಂಬಿಕೆ ಅಥವಾ ಸಾಮಾಜಿಕ ಸ್ಥಾನಮಾನಗಳನ್ನು ಗಣಿಸದೇ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ಹೇಳುತ್ತದೆ. ದುಬೈನ ೨೫೦,೦೦೦ ವಿದೇಶಿ ಕಾರ್ಮಿಕರಲ್ಲಿ ಅನೇಕರನ್ನು ಮಾನವ ಹಕ್ಕುಗಳ ಕಾವಲುಪಡೆಯ ನಿರ್ದೇಶನದ ಪ್ರಕಾರ ಹೇಳುವುದಾದರೆ "ಕಡಿಮೆ ದರ್ಜೆಯ ಜನರಂತೆ" ನಡೆಸಿಕೊಳ್ಳಲಾಗುತ್ತಿದೆ.[೪೩][೪೪][೪೫][೪೬] ಇಲ್ಲಿನ ಕಾರ್ಮಿಕರು "ಒಂದು ಕೋಣೆಯಲ್ಲಿ ಎಂಟು ಜನ ವಾಸಿಸುತ್ತಾರೆ, ತಮ್ಮ ಆದಾಯದ ಒಂದು ಭಾಗವನ್ನು ಕೆಲವೊಮ್ಮೆ ತಾವು ವರ್ಷಗಟ್ಟಲೆ ನೋಡಲಾಗದಿರುವ ತಮ್ಮ ಕುಟುಂಬ ಸದಸ್ಯರಿಗೆ ಕಳಿಸುತ್ತಾರೆ" ಎಂದು NPR ವರದಿ ಮಾಡಿದೆ. 21 ಮಾರ್ಚ್‌ 2006ರಂದು, ಬುರ್ಜ್‌ ದುಬೈನ ನಿರ್ಮಾಣ ಕಾಮಗಾರಿ ಪ್ರದೇಶದ ಕಾರ್ಮಿಕರು, ಬಸ್‌ಗಳ ಸಮಯಪಾಲನೆ ಮತ್ತು ಕೆಲಸದ ಪರಿಸರದ ಬಗ್ಗೆ ಉದ್ವಿಗ್ನರಾಗಿ ದೊಂಬಿ ಎದ್ದರು: ಕಾರುಗಳನ್ನು, ಕಚೇರಿಗಳನ್ನು, ಗಣಕಗಳನ್ನು ಮತ್ತು ನಿರ್ಮಾಣ ಸಾಮಗ್ರಿಗಳನ್ನು ಧ್ವಂಸಗೊಳಿಸಿದರು.[೪೭][೪೮][೪೯] ಜಾಗತಿಕ ಆರ್ಥಿಕ ಕುಸಿತದ ಬಿಸಿ ದುಬೈನ ಕಾರ್ಮಿಕ ವರ್ಗಕ್ಕೂ ವಿಶೇಷವಾಗಿ ತಟ್ಟಿದ್ದು, ಅನೇಕರಿಗೆ ವೇತನ ಆಗದಿರುವುದು ಮಾತ್ರವಲ್ಲ, ಜೊತೆಗೆ ಅವರು ದೇಶದ ಹೊರಗೆ ಹೋಗಲಾಗದಂತ ಪರಿಸ್ಥಿತಿಯನ್ನು ನಿರ್ಮಿಸಿದೆ.[೫೦]

 
BMW ಸೆಡಾನ್‌ನಲ್ಲಿ ದುಬೈ ಆರಕ್ಷಕ ಪಡೆ

೧೫-ವರ್ಷ ವಯಸ್ಸಿನ ಅಲೆಕ್ಸಾಂಡ್ರೆ ರಾಬರ್ಟ್‌‌ ಎಂಬ ಫ್ರೆಂಚ್‌-ಸ್ವಿಸ್‌ ಪ್ರಜೆಯ ಮೇಲಿನ HIV ಪೀಡಿತ[49]ನೊಬ್ಬನು ಒಳಗೊಂಡಂತೆ ಸ್ಥಳೀಯ ಮೂವರು ನಡೆಸಿದ ಅತ್ಯಾಚಾರ ಪ್ರಕರಣದ ಹಾಗೂ ಇತ್ತೀಚಿಗೆ ನಡೆದ ಕೆಳಮಟ್ಟದ ಬದುಕು ಮತ್ತು ಅಲ್ಪ ವೇತನ ನೀಡಿಕೆಯ ವಿರುದ್ಧ ಪ್ರತಿಭಟನೆ ನಡೆಸಿದ್ದ ಆರೋಪದ ಮೇಲೆ ವಲಸಿಗ ಕಾರ್ಮಿಕರ ಸಾಮೂಹಿಕ ಬಂಧನದ ಬಗೆಗಿನ ಮಾಹಿತಿಯನ್ನು ಕಲೆ ಹಾಕಲು ಪ್ರಯತ್ನಿಸಿದಾಗ ಹಾಗೂ ಹೊರಬಂದ ವಿಚಾರಗಳು ವಿದೇಶೀಯರ ಮೇಲಿನ ದುಬೈ ನ್ಯಾಯಾಲಯದ ತೀರ್ಪುಗಳ ಬಗ್ಗೆ ಬೆಳಕು ಚೆಲ್ಲಿದವು.[50] ವೇಶ್ಯಾವಾಟಿಕೆಯು, ಕಾನೂನುಬಾಹಿರವಾಗಿದ್ದರೂ ಆರ್ಥಿಕತೆಯು ಪ್ರಮುಖವಾಗಿ ಪ್ರವಾಸೋದ್ಯಮ ಹಾಗೂ ವ್ಯಾಪಾರದ ಮೇಲೆ ಆಧಾರಿತವಾದುದರಿಂದ ಎಮಿರೇಟ್‌ನಲ್ಲಿ ರಾಜಾರೋಷವಾಗಿ ನಡೆಯುತ್ತದೆ. ಅಮೇರಿಕನ್‌ ಸೆಂಟರ್‌ ಫಾರ್‌ ಇಂಟರ್‌ನ್ಯಾಷನಲ್‌ ಪಾಲಿಸಿ ಸ್ಟಡೀಸ್‌ (AMCIPS) ಎಂಬ ಸಂಸ್ಥೆಯು ನಡೆಸಿದ ಸಂಶೋಧನೆಯ ಪ್ರಕಾರ ರಷ್ಯದ ಹಾಗೂ ಇಥಿಯೋಪಿಯಾದ ಮಹಿಳೆಯರು ಅತಿ ಸಾಮಾನ್ಯವಾಗಿ ವೇಶ್ಯೆಯರಾಗಿದ್ದು, ಇವರೊಂದಿಗೆ ಕೆಲ ಆಫ್ರಿಕನ್‌ ದೇಶಗಳ ಮಹಿಳೆಯರು ಇದ್ದರು. ಇಷ್ಟೇ ಅಲ್ಲದೇ ಸುಸಂಘಟಿತವಾದ ಸಾಗರದಾಚೆಯ ವೇಶ್ಯಾವಾಟಿಕೆಯ ಜಾಲದ ಭಾಗವಾಗಿ ಭಾರತೀಯ ವೇಶ್ಯೆಯರೂ ಇದ್ದಾರೆ.[51] ೨೦೦೭ರ ದುಬೈ : ನೈಟ್‌ ಸೀಕ್ರೆಟ್ಸ್‌ ಎಂಬ ಶೀರ್ಷಿಕೆಯ PBS ಸಾಕ್ಷ್ಯ ಚಿತ್ರವೊಂದರ ವರದಿಯ ಪ್ರಕಾರ ಅಲ್ಲಿನ ಕ್ಲಬ್‌ಗಳಲ್ಲಿ ವೇಶ್ಯಾವಾಟಿಕೆಯನ್ನು ಅಧಿಕಾರಿ ವರ್ಗವೇ ಅವಕಾಶ ನೀಡುತ್ತದೆ ಹಾಗೂ ಅನೇಕ ವಿದೇಶಿ ಮಹಿಳೆಯರು ಅಲ್ಲಿ ಸಿಗುವ ಹಣದಿಂದ ಆಕರ್ಷಿತರಾಗಿ ಯಾವುದೇ ಬಲಾತ್ಕಾರವಿಲ್ಲದೇ ವೇಶ್ಯಾವಾಟಿಕೆಯಲ್ಲಿ ತೊಡಗುತ್ತಾರೆ.[೫೧][೫೨][೫೩]

ಜನಸಂಖ್ಯಾ ವಿವರ

ಬದಲಾಯಿಸಿ

ಟೆಂಪ್ಲೇಟು:Population timeline of Dubai

ದುಬೈನ ಅಂಕಿಅಂಶಗಳ ಕೇಂದ್ರ ಕಚೇರಿ ಕೈಗೊಂಡ ಜನಗಣತಿಯ ಪ್ರಕಾರ, ೨೦೦೬ರ ಹೊತ್ತಿಗೆ ಎಮಿರೇಟ್‌ನ ಜನಸಂಖ್ಯೆ ೧,೪೨೨,೦೦೦ರಷ್ಟಿದ್ದು, ಇವರಲ್ಲಿ ೧,೦೭೩,೦೦೦ ಮಂದಿ ಪುರುಷರು ಹಾಗೂ ೩೪೯,೦೦೦ ಮಂದಿ ಮಹಿಳೆಯರಿದ್ದರು.[೫೪]

ಈ ಪ್ರದೇಶವು ೪೯೭.೧ ಚದರ ಮೈಲಿಗಳಷ್ಟು (೧,೨೮೭.೪ km೨) ವಿಸ್ತಾರವಾಗಿದೆ. ಜನಸಂಖ್ಯಾ ಸಾಂದ್ರತೆಯು ೪೦೮.೧೮/km೨ರಷ್ಟಿದ್ದು ಇಡೀ ರಾಷ್ಟ್ರದ ಎಂಟು ಪಟ್ಟಿಗಿಂತ ಹೆಚ್ಚಿದೆ. ದುಬೈ ನಗರವು ಆ ಪ್ರಾಂತ್ಯದಲ್ಲಿಯೇ ಎರಡನೇ ಅತ್ಯಂತ ದುಬಾರಿ ನಗರವಾಗಿದ್ದು, ವಿಶ್ವದ ೨೦ನೇ ಅತಿ ದುಬಾರಿ ವೆಚ್ಚದ ನಗರವಾಗಿದೆ.[೫೫]

೧೯೯೮ರ ಹಾಗೆ, ಎಮಿರೇಟ್‌ನ ೧೭%ರಷ್ಟು ಜನರು UAE ರಾಷ್ಟ್ರೀಯರಿದ್ದರು. ಸರಿ ಸುಮಾರು ವಲಸಿಗರಲ್ಲಿ ೮೫% ಮಂದಿ (ಹಾಗೂ ಎಮಿರೇಟ್‌ನ ಒಟ್ಟು ಜನಸಂಖ್ಯೆಯ ೭೧%ರಷ್ಟು ಮಂದಿ) ಏಷ್ಯನ್ನರಾಗಿದ್ದರು, ಪ್ರಮುಖವಾಗಿ ಭಾರತೀಯರು (೫೧%), ಪಾಕಿಸ್ತಾನಿಗಳು (೧೫%), ಬಾಂಗ್ಲಾದೇಶೀಯರು (೧೦%) ಮತ್ತು ಇತರರಿದ್ದರು (೧೦%).[೫೬] ಆದಾಗ್ಯೂ ಕಾಲುಭಾಗದಷ್ಟು ಜನರ ಮೂಲ ಪ್ರದೇಶ ನೆರೆಯ ಇರಾನ್‌ ಎನ್ನಲಾಗಿದೆ.[೫೭] ಇದರೊಂದಿಗೆ, ಜನಸಂಖ್ಯೆಯ ೧೬%ರಷ್ಟು ಮಂದಿಯನ್ನು (ಅಥವಾ ೨೮೮,೦೦೦ ವ್ಯಕ್ತಿಗಳು) ಸಾಮೂಹಿಕ ಕಾರ್ಮಿಕ ವಸತಿಪ್ರದೇಶದಲ್ಲಿ ವಾಸಿಸುತ್ತಿರುವವರನ್ನು ಅವರ ಜನಾಂಗ ಇಲ್ಲವೇ ರಾಷ್ಟ್ರೀಯತೆಯ ಮೇಲೆ ಗುರುತಿಸದೇ, ಅವರನ್ನು ಮೊದಲಿಗೇ ಏಷ್ಯನ್ನರೆಂದು ಭಾವಿಸಲಾಗಿತ್ತು.[೫೮] ಎಮಿರೇಟ್‌ನಲ್ಲಿನ ವ್ಯಕ್ತಿಗಳ ಸರಾಸರಿ ವಯಸ್ಸು ಸುಮಾರು ೨೭ ವರ್ಷಗಳು. ಅಪರಿಷ್ಕೃತ ಜನನ ದರವು ೨೦೦೫ರ ಹಾಗೆ, ಸುಮಾರು ೧೩.೬%ರಷ್ಟಿದ್ದರೆ, ಅಪರಿಷ್ಕೃತ ಮರಣದರವು ೧%ರಷ್ಟಿದೆ.[೫೯]

ಅರೇಬಿಕ್‌ ಭಾಷೆಯು ದುಬೈನ ಅಧಿಕೃತ ಭಾಷೆಯಾದಾಗ್ಯೂ, ದುಬೈನಲ್ಲಿ ಉರ್ದು, ಪರ್ಷಿಯನ್‌, ಹಿಂದಿ, ಮಲಯಾಳಂ, ಬಂಗಾಳಿ, ತಮಿಳು, ಟಗಲಾಗ್‌, ಚೀನೀ ಭಾಷೆ ಹಾಗೂ ಇನ್ನಿತರ ಭಾಷೆಗಳಲ್ಲಿ ಸಂಭಾಷಿಸುತ್ತಾರೆ. ಆಂಗ್ಲ ಭಾಷೆಯು ನಗರದ ಭಿನ್ನ ಜನಾಂಗಗಳ ನಡುವಿನ ಸಂಪರ್ಕ ಭಾಷೆ ಯಾಗಿದ್ದೂ ನಿವಾಸಿಗಳು ಇದನ್ನು ವ್ಯಾಪಕವಾಗಿ ಬಳಸುತ್ತಾರೆ.

UAEಯ ತಾತ್ಕಾಲಿಕ/ಪ್ರಾಂತೀಯ ಸಂವಿಧಾನದ ಏಳನೇ ಪರಿಚ್ಛೇದವು ಇಸ್ಲಾಮ್‌ ಅನ್ನು UAEಯ ಅಧಿಕೃತ ರಾಷ್ಟ್ರ ಧರ್ಮವನ್ನಾಗಿ ಘೋಷಿಸುತ್ತದೆ. ಸರ್ಕಾರವು ಬಹುಮಟ್ಟಿಗೆ ೯೫%ರಷ್ಟು ಮಸೀದಿಗಳಿಗೆ ಅನುದಾನ ನೀಡುತ್ತದೆ ಹಾಗೂ ಎಲ್ಲಾ ಇಮಾಂಗಳನ್ನು ಸರ್ಕಾರವೇ ನೇಮಕ ಮಾಡುತ್ತದೆ; ಸರಿಸುಮಾರು ೫% ಮಸೀದಿಗಳು ಪೂರ್ಣವಾಗಿ ಖಾಸಗಿಯವರದ್ದಾಗಿವೆ, ಹಾಗೂ ಅನೇಕ ದೊಡ್ಡ ಮಸೀದಿಗಳು ದೊಡ್ಡ ಖಾಸಗಿ ದತ್ತಿಗಳನ್ನು ಹೊಂದಿವೆ.[೬೦]

ದುಬೈ ನಗರವು ಬೃಹತ್‌ ಕ್ರೈಸ್ತ, ಹಿಂದೂ, ಸಿಖ್‌, ಬೌದ್ಧ, ಮತ್ತಿತರ ಧಾರ್ಮಿಕ ಸಮುದಾಯಗಳನ್ನೂ ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು] ಮುಸ್ಲಿಮೇತರ ಸಮುದಾಯಗಳು ತಮ್ಮದೇ ಮಾಲೀಕತ್ವದ ತಮ್ಮ ಧರ್ಮವನ್ನು ಮುಕ್ತವಾಗಿ ಪಾಲಿಸಬಹುದಾದ ಪೂಜಾ ಸ್ಥಳಗಳನ್ನು ಹೊಂದಬಹುದಾಗಿದ್ದು, ಅದಕ್ಕೆ ಸ್ಥಳಾವಕಾಶವನ್ನು/ಭೂಮಿಯನ್ನು ಒದಗಿಸಲು ಹಾಗೂ ಅದಕ್ಕೆ ಆವರಣ ಕಟ್ಟಿಕೊಳ್ಳಲು ಅನುಮತಿಗೆ ಮನವಿ ಸಲ್ಲಿಸಬಹುದಾಗಿದೆ. ಸ್ವಮಾಲೀಕತ್ವದ ಕಟ್ಟಡ ಇಲ್ಲದ ಸಮುದಾಯಗಳು ಇತರ ಧಾರ್ಮಿಕ ಸಂಸ್ಥೆಗಳ ಸೌಲಭ್ಯಗಳನ್ನು ಮನವಿಪೂರ್ವಕವಾಗಿ ಬಳಸಬೇಕಿರುತ್ತದೆ ಅಥವಾ ತಮ್ಮ ಮನೆಗಳಲ್ಲಿ ಮಾತ್ರವೇ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಬೇಕಿರುತ್ತದೆ.[೬೧] ಮುಸ್ಲಿಮೇತರ ಧಾರ್ಮಿಕ ಸಮುದಾಯಗಳು ಮುಕ್ತವಾಗಿ ತಮ್ಮ ಸಮೂಹ ಚಟುವಟಿಕೆಗಳ ಬಗ್ಗೆ ಪ್ರಚಾರ ನಡೆಸಬಹುದಾಗಿದೆ; ಆದಾಗ್ಯೂ ಮತಾಂತರ ಮಾಡುವಿಕೆ ಅಥವಾ ಧಾರ್ಮಿಕ ಸಾಹಿತ್ಯದ ಹಂಚುವಿಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಇದನ್ನು ಮಾಡಿದವರು ಇಸ್ಲಾಮಿಗೆ ವಿರೋಧವಾದ ಚಟುವಟಿಕೆಯನ್ನು ಕೈಗೊಂಡ ಅಪರಾಧಕ್ಕೆ ದಂಡ ಸಂಹಿತೆಯ ಅನುಸಾರ ವಿಚಾರಣೆ, ಸೆರೆವಾಸ ಮತ್ತು ಗಡೀಪಾರಿನಂತಹಾ ಶಿಕ್ಷೆಗೆ ಒಳಬೇಕಾಗುತ್ತದೆ.[೬೦]

ಆರ್ಥಿಕತೆ

ಬದಲಾಯಿಸಿ

ದುಬೈನ ಸಮಗ್ರ ಅಂತರ್ದೇಶೀಯ ಉತ್ಪಾದನೆಯು ೨೦೦೫ರ ಹಾಗೆ US$೩೭ ಶತಕೋಟಿಗಳಷ್ಟಿತ್ತು.[೯] ದುಬೈನ ಆರ್ಥಿಕತೆಯು ತೈಲೋದ್ಯಮದ ಮೇಲೆಯೇ ಅವಲಂಬಿತವಾಗಿದ್ದರೂ,[೮] ತೈಲ ಮತ್ತು ನೈಸರ್ಗಿಕ ಅನಿಲಗಳ ಆದಾಯವು ಪ್ರಸ್ತುತ ಎಮಿರೇಟ್‌ನ ೬%ಕ್ಕಿಂತ ಕಡಿಮೆ ಇದೆ.[೬೨] ದುಬೈ ದಿನಕ್ಕೆ ೨೪೦,೦೦೦ ಬ್ಯಾರೆಲ್‌ಗಳಷ್ಟು ತೈಲವನ್ನು ಹಾಗೂ ಗಣನೀಯ ಪ್ರಮಾಣದ ಅನಿಲವನ್ನು ಕಡಲ ತೀರದಿಂದ ದೂರದ ಕ್ಷೇತ್ರಗಳಲ್ಲಿ ಉತ್ಪಾದಿಸುತ್ತದೆ ಎಂದು ಅಂದಾಜಿಸಲಾಗಿದೆ. UAEಯ ಅನಿಲ ಆದಾಯದಲ್ಲಿ ಎಮಿರೇಟ್‌ನ ಪಾಲು ಸುಮಾರು ೨%ರಷ್ಟಿದೆ. ದುಬೈನ ತೈಲ ನಿಕ್ಷೇಪಗಳ ಸಾಮರ್ಥ್ಯವು ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಹಾಗೂ ಇನ್ನು ೨೦ ವರ್ಷಗಳಲ್ಲಿ ಬರಿದಾಗುವವೆಂದು ಅಂದಾಜಿಸಲಾಗಿದೆ.[೬೩] ಸ್ಥಿರಾಸ್ತಿ ಮತ್ತು ನಿರ್ಮಾಣ (೨೨.೬%),[೧೦] ವ್ಯಾಪಾರ/ವಾಣಿಜ್ಯ (೧೬%), ಉದ್ಯಮ (೧೫%) ಮತ್ತು ಹಣಕಾಸು ಸೇವೆಗಳು (೧೧%) ದುಬೈನ ಆರ್ಥಿಕತೆಗೆ ಅತಿ ಹೆಚ್ಚಿನ ಕೊಡುಗೆ ನೀಡುತ್ತಿರುವ ಕ್ಷೇತ್ರಗಳು.[೬೪]

ಸಿಟಿ ಮೇಯ‌ರ್ಸ್‌‌ ನ ಸಮೀಕ್ಷೆಯ ಪ್ರಕಾರ ದುಬೈ ನಗರವು ವಿಶ್ವದ ಅತ್ಯುತ್ತಮ ಹಣಕಾಸು ಸ್ಥಳಗಳಲ್ಲಿ ೪೪ನೆಯದಾಗಿದೆ,[೬೫] ಹಾಗೂ ಸಿಟಿ ಮೇಯರ್ಸ್‌‌‌ ನ ಮತ್ತೊಂದು ವರದಿಯ ಪ್ರಕಾರ ದುಬೈ ನಗರವು ಅತಿ ಹೆಚ್ಚಿನ ಕೊಳ್ಳುವ ಸಾಮರ್ಥ್ಯ(PPP)ದ ಆಧಾರದ ಮೇಲೆ ವಿಶ್ವದ ೩೩ನೇ ಶ್ರೀಮಂತ ನಗರವಾಗಿದೆ.[೬೬] ದುಬೈ ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಗಳ ಕೇಂದ್ರವೂ ಆಗಿದ್ದು ಮಾಸ್ಟರ್ ಕಾರ್ಡ್ ವರ್ಲ್ಡ್ ವೈಡ್ ಸೆಂಟರ್ಸ್‌ ಆಫ್ ಕಾಮರ್ಸ್ ಇಂಡೆಕ್ಸ್ (೨೦೦೭)ನ ಸಮೀಕ್ಷೆಯ ಪ್ರಕಾರ ಅತ್ಯುನ್ನತ ೫೦ ಜಾಗತಿಕ ಹಣಕಾಸು ನಗರಗಳಲ್ಲಿ ೩೭ನೇ ಶ್ರೇಯಾಂಕ ಪಡೆದುಕೊಂಡಿದೆಯಲ್ಲದೇ,[೬೭] ಮಧ್ಯಪೂರ್ವ ಪ್ರದೇಶದಲ್ಲಿ ೧ನೇ ಸ್ಥಾನದಲ್ಲಿದೆ.

ದುಬೈ ಮರು-ರಫ್ತು ಮಾಡುವ ರಾಷ್ಟ್ರಗಳಲ್ಲಿ ಪ್ರಮುಖವಾದುವೆಂದರೆ ಇರಾನ್‌ (US$ ೭೯೦ ದಶಲಕ್ಷ), ಭಾರತ (US$ ೨೦೪ ದಶಲಕ್ಷ) ಮತ್ತು ಸೌದಿ ಅರೇಬಿಯಾ (US$ ೧೯೪ ದಶಲಕ್ಷ )ಗಳು. ಎಮಿರೇಟ್‌ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರಗಳೆಂದರೆ ಜಪಾನ್‌ (US$ ೧.೫ ಶತಕೋಟಿ ), ಚೀನಾ (US$೧.೪ ಶತಕೋಟಿ) ಮತ್ತು ಯುನೈಟೆಡ್‌ ಸ್ಟೇಟ್ಸ್‌ (US$ ೧.೪ ಶತಕೋಟಿ).[೭]

ಐತಿಹಾಸಿಕವಾಗಿ, ದುಬೈ ಮತ್ತು ದುಬೈ ಒಳಚಾಚುವಿನ ಬಳಿಯಿರುವ ಡೇರಾ (ಆ ಸಮಯದಲ್ಲಿ ದುಬೈ ನಗರದಿಂದ ಸ್ವತಂತ್ರವಾಗಿದ್ದ)ಗಳು ಪಾಶ್ಚಿಮಾತ್ಯ ತಯಾರಕರಿಗೆ ಪ್ರಮುಖ ತಂಗುದಾಣಗಳಾಗಿದ್ದವು. ಹೊಸ ನಗರದಲ್ಲಿ ಬ್ಯಾಂಕಿಂಗ್‌ ಮತ್ತು ಹಣಕಾಸು ಕೇಂದ್ರಗಳ ಮುಖ್ಯ ಕಛೇರಿಗಳು ಬಂದರು ಪ್ರದೇಶದಲ್ಲೇ ಇವೆ. ದುಬೈ ನಗರವು ೧೯೭೦ರ ಮತ್ತು ೧೯೮೦ರ ದಶಕಗಳುದ್ದಕ್ಕೂ ವಾಣಿಜ್ಯ ಮಾರ್ಗವಾಗಿ ತನ್ನ ಪ್ರಾಮುಖ್ಯತೆಯನ್ನುಳಿಸಿಕೊಂಡಿತ್ತು. ದುಬೈನಗರವು ಚಿನ್ನದ ಮುಕ್ತ ಮಾರಾಟವನ್ನು ನಡೆಸುತ್ತಿತ್ತಲ್ಲದೇ ೧೯೯೦ರ ದಶಕದವರೆಗೆ , ಚಿನ್ನದ ಆಮದನ್ನು ನಿಷೇಧಿಸಿರುವ ಭಾರತಕ್ಕೆ ಚಿನ್ನದ ಗಟ್ಟಿಗಳನ್ನು ಸಾಗಿಸುವ "ತ್ವರಿತ ಕಳ್ಳಸಾಗಾಣಿಕೆ ವ್ಯವಹಾರದ"[೬೮] ಕೇಂದ್ರವಾಗಿ ಪರಿಣಮಿಸಿತ್ತು.

೧೯೭೦ರ ದಶಕದಲ್ಲಿ ನಿರ್ಮಿಸಲ್ಪಟ್ಟ ದುಬೈನ ಜೆಬೆಲ್‌ ಅಲಿ ಬಂದರು, ವಿಶ್ವದಲ್ಲೇ ಅತ್ಯಂತ ದೊಡ್ಡ ಮಾನವ ನಿರ್ಮಿತ ಬಂದರಾಗಿದ್ದು, ಹಡಗುಗಳ ಓಡಾಟದ ದಟ್ಟಣೆಯ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಜಾಗತಿಕವಾಗಿ ಎಂಟನೇ ಸ್ಥಾನದಲ್ಲಿದೆ.[೬೯] ದುಬೈ ನಗರದುದ್ದಕ್ಕೂ ನಿರ್ದಿಷ್ಟ ಉದ್ಯಮಗಳಿಗೆ ಮುಕ್ತ ವಲಯಗಳನ್ನು ಸ್ಥಾಪಿಸುವ ಮೂಲಕ IT ಮತ್ತು ಹಣಕಾಸುಗಳಂತಹಾ ಸೇವೆಗಳ ಉದ್ಯಮ ಕೇಂದ್ರವಾಗುತ್ತಿದೆ. ದುಬೈ ಇಂಟರ್ನೆಟ್‌ ಸಿಟಿ, ದುಬೈ ಮೀಡಿಯಾ ಸಿಟಿಗಳೊಂದಿಗೆ IT ಕಂಪೆನಿಗಳಾದ EMC ಕಾರ್ಪೋರೇಷನ್‌, Oracle ಕಾರ್ಪೋರೇಷನ್‌, Microsoft, ಮತ್ತು IBM, ಹಾಗೂ MBC, CNN, BBC, Reuters, Sky News ಮತ್ತು APಗಳಂತಹಾ ಮಾಧ್ಯಮ ಸಂಸ್ಥೆಗಳನ್ನು ಹೊಂದಿರುವ TECOM (ದುಬೈ ಟೆಕ್ನಾಲಜಿ, ಎಲೆಕ್ಟ್ರಾನಿಕ್‌ ಕಾಮರ್ಸ್‌ ಅಂಡ್‌ ಮೀಡಿಯಾ ಫ್ರೀ ಝೋನ್‌ ಅಥಾರಿಟಿ) ಅಂತಹಾ ಒಂದು ಉದ್ಯಮ ವಲಯವಾಗಿದೆ.

ದುಬೈ ಫೈನಾನ್ಷಿಯಲ್‌ ಮಾರ್ಕೆಟ್‌‌ (DFM) ಸಂಸ್ಥೆಯನ್ನು ಮಾರ್ಚ್‌ ೨೦೦೦ರಲ್ಲಿ ಸ್ಥಳೀಯ ಹಾಗೂ ವಿದೇಶಿ ಎರಡೂ ಮಾದರಿಯ ವ್ಯವಹಾರ ಸುರಕ್ಷತಾ ಪತ್ರಗಳು ಮತ್ತು ಬಾಂಡ್‌ಗಳನ್ನು ಪೂರೈಸುವ ಮಾಧ್ಯಮಿಕ ಮಾರುಕಟ್ಟೆಯಾಗಿ ಸ್ಥಾಪಿಸಲಾಯಿತು. ೨೦೦೬ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಹಾಗೆ, ಈ ಸಂಸ್ಥೆಯ ವಹಿವಾಟಿನ ಪ್ರಮಾಣ ಸುಮಾರು ೪೦೦ ಶತಕೋಟಿ ಷೇರುಗಳಾಗಿದ್ದು, ಒಟ್ಟಾರೆಯಾಗಿ US$ ೯೫ ಶತಕೋಟಿ ಮೌಲ್ಯದ್ದಾಗಿತ್ತು. DFM ಸಂಸ್ಥೆಯು ಸುಮಾರು US$ ೮೭ ಶತಕೋಟಿಯಷ್ಟು ಬಂಡವಾಳ ಹೂಡಿಕೆಯನ್ನು ಹೊಂದಿದೆ.[೫೯]

ವ್ಯಾಪಾರ-ಆಧಾರಿತ, ಆದರೆ ತೈಲ-ಅವಲಂಬಿತ, ಆರ್ಥಿಕತೆಯಿಂದ ಸೇವೆಗಳು ಹಾಗೂ ಪ್ರವಾಸೋದ್ಯಮ ಅಭಿಮುಖವಾಗಿಸುವ ಸರ್ಕಾರದ ನಿರ್ಧಾರವು ಸ್ಥಿರಾಸ್ತಿ ಉದ್ಯಮದ ಮೌಲ್ಯವನ್ನು ಹೆಚ್ಚಿಸಿದುದರ ಪರಿಣಾಮವಾಗಿ ೨೦೦೪–೨೦೦೬ರ ಸಾಲಿನಿಂದಾದ ಸ್ಥಿರಾಸ್ತಿಗಳ ಬೆಲೆ ಏರಿಕೆಗೆ ಕಾರಣವಾಗಿದೆ. ದುಬೈನ ಸ್ಥಿರಾಸ್ತಿ ಮಾರುಕಟ್ಟೆಯ ದೀರ್ಘಕಾಲೀನ ಮೌಲ್ಯಾಂಕನವು ಇಳಿಕೆಯನ್ನು ತೋರಿಸಿವೆ, ಹೇಗಾದರೂ ಕೆಲ ಸ್ಥಿರಾಸ್ತಿಗಳು ೨೦೦೧ರಿಂದ ನವೆಂಬರ್‌ ೨೦೦೮ರವರೆಗೆ ತಮ್ಮ ಮೌಲ್ಯದ ೬೪%ರಷ್ಟು ಇಳಿಕೆಯನ್ನು ಕಂಡವು.[೭೦] ಬೃಹತ್‌ ಪ್ರಮಾಣದ ಸ್ಥಿರಾಸ್ತಿ ಅಭಿವೃದ್ಧಿ ಯೋಜನೆಗಳಿಂದಾಗಿ ಎಮಿರೇಟ್ಸ್‌ ಟವರ್ಸ್‌‌, ಬುರ್ಜ್‌‌ ದುಬೈ , ಪಾಮ್‌ ಐಲೆಂಡ್ಸ್‌‌ ಮತ್ತು ವಿಶ್ವದ ಎರಡನೇ ಅತಿ ಎತ್ತರದ ಹಾಗೂ ಅತ್ಯಂತ ದುಬಾರಿ ಹೋಟೆಲ್‌ ಬುರ್ಜ್‌ ಅಲ್‌ ಅರಬ್‌‌ನಂತಹಾ, ವಿಶ್ವದಲ್ಲೇ ಅತಿ ಎತ್ತರದ ಗಗನಚುಂಬಿ ಕಟ್ಟಡಗಳ ಹಾಗೂ ಅತಿ ದೊಡ್ಡ ನಿರ್ಮಾಣ ಯೋಜನೆಗಳಿಗೆ ಕಾರಣವಾಯಿತು.[೭೧]

ದುಬೈನ ಸ್ಥಿರಾಸ್ತಿ ಮಾರುಕಟ್ಟೆಯು ಮಂದವಾದ ಆರ್ಥಿಕ ವಾತಾವರಣದಿಂದಾಗಿ ೨೦೦೮/೨೦೦೯ರ ಸಾಲಿನಲ್ಲಿ ಗಮನಾರ್ಹ ಕುಸಿತವನ್ನು ಕಂಡಿತು.[೭೨] ಷೇಕ್‌ನ ಮೊಹಮ್ಮದ್‌ ಅಲ್‌-ಅಬ್ಬರ್‌ ಸಮಿತಿಯು ಅಂತರರಾಷ್ಟ್ರೀಯ ಮುದ್ರಣ ಮಾಧ್ಯಮಕ್ಕೆ ತಿಳಿಸಿದಂತೆ ಡಿಸೆಂಬರ್‌ ೨೦೦೮ರಲ್ಲಿ ಎಮಾರ್‌ ಸಂಸ್ಥೆಯು US$ ೭೦ ಶತಕೋಟಿಗಳಷ್ಟು ಜಮಾವನ್ನು ಹೊಂದಿದ್ದು ದುಬೈ ರಾಜ್ಯವು ಹೆಚ್ಚುವರಿಯ US$ ೧೦ ಶತಕೋಟಿಯಷ್ಟು ಜಮಾವನ್ನು ಹೊಂದಿದೆಯಲ್ಲದೇ ಸ್ಥಿರಾಸ್ತಿಗಳಲ್ಲಿ ಅಂದಾಜು ೩೫೦ ಶತಕೋಟಿಯಷ್ಟು ಹಿಡುವಳಿ ಹೊಂದಿದೆ. ೨೦೦೯ರ ಮೊದಲ ಭಾಗದ ಹೊತ್ತಿಗೆ, ಪರಿಸ್ಥಿತಿಯು ಮತ್ತಷ್ಟು ವಿಕೋಪಕ್ಕೆ ಹೋಗಿ ಜಾಗತಿಕ ಆರ್ಥಿಕ ಕುಸಿತವು ಆಸ್ತಿಗಳ ಮೌಲ್ಯ, ನಿರ್ಮಾಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಭಾರಿ ನಷ್ಟವನ್ನುಂಟು ಮಾಡಿತು.[೭೩]

ಫೆಬ್ರವರಿ ೨೦೦೯ರ ಹೊತ್ತಿಗೆ ದುಬೈನ ವಿದೇಶಿ ಸಾಲವು ಎಮಿರೇಟ್‌ನ ೨೫೦,೦೦೦ UAE ನಾಗರಿಕರ ಮೇಲೆ apprx. USD ೧೦೦ ಶತಕೋಟಿಯಷ್ಟಿದ್ದು, ಪ್ರತಿ ನಾಗರಿಕನ ಮೇಲೆ ೪೦೦,೦೦೦ USDನಷ್ಟು ವಿದೇಶಿ ಸಾಲದ ಹೊರೆಯನ್ನು ಹೊರೆಸಿದೆ.[೭೪] ದುಬೈನ ಸ್ಥಿರಾಸ್ತಿ ಹೂಡಿಕೆ ಕ್ಷೇತ್ರವನ್ನೂ ಒಳಗೊಂಡಂತೆ ದುಬೈ ಆರ್ಥಿಕತೆಯ ಅನೇಕ ವೈವಿಧ್ಯಮಯ ಕ್ಷೇತ್ರಗಳ ವಿವರಣಾತ್ಮಕ ವಿಶ್ಲೇಷಣೆ/ಪರಾಮರ್ಶೆಗಾಗಿ ನೋಡಿ http://www.೨daydubai.com/pages/dubai-property-sector.php[ಶಾಶ್ವತವಾಗಿ ಮಡಿದ ಕೊಂಡಿ] [೪] Archived 2010-01-03 ವೇಬ್ಯಾಕ್ ಮೆಷಿನ್ ನಲ್ಲಿ.- ಇಲ್ಲಿ ಸಹಾ ನೋಡಬಹುದು http://www.೨daydubai.com/pages/dubai-economy.php[ಶಾಶ್ವತವಾಗಿ ಮಡಿದ ಕೊಂಡಿ] [೫] Archived 2010-01-02 ವೇಬ್ಯಾಕ್ ಮೆಷಿನ್ ನಲ್ಲಿ..

ಸಾರಿಗೆ

ಬದಲಾಯಿಸಿ
 
ಡೇರಾ ಮತ್ತು ಬುರ್‌‌ ದುಬೈ ನಡುವಿನ ಸಾರಿಗೆಯ ಸಾಂಪ್ರದಾಯಿಕ ವ್ಯವಸ್ಥೆ ಅಬ್ರಾಗಳು
 
ದುಬೈ ಮೆಟ್ರೋ, ಅದರ ಉದ್ಘಾಟನೆ ದಿನ
 
ದುಬೈ ಮೆಟ್ರೋ ನಿಲ್ದಾಣ, ಅಕ್ಟೋಬರ್‌ 2009ರಲ್ಲಿ

ದುಬೈ ಮಹಾನಗರದಲ್ಲಿ ರಸ್ತೆಗಳು ಮತ್ತು ಸಾರಿಗೆ ಪ್ರಾಧಿಕಾರದಿಂದ ಸಾರಿಗೆಯನ್ನು ನಿಯಂತ್ರಿಸಲಾಗುತ್ತದೆ. ಸಾರ್ವಜನಿಕ ಸಾರಿಗೆ ಜಾಲವು ವಿಪರೀತ ದಟ್ಟಣೆಯ ಹಾಗೂ ಸ್ಥಿರತೆಯ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದನ್ನು ಪರಿಹರಿಸಲು ನಗರದ ಜನಸಂಖ್ಯೆಯು ೩.೫ ದಶಲಕ್ಷಕ್ಕೂ ಮೀರಬಹುದಾಗಿರುವ ೨೦೨೦ನೇ ಇಸವಿಯ ಹೊತ್ತಿಗೆ ಪೂರೈಸಲು ಉದ್ದೇಶಿಸಲಾಗಿರುವ AED೭೦ ಶತಕೋಟಿಗೂ ಹೆಚ್ಚಿನ ವೆಚ್ಚದ ಸುಧಾರಣಾ ಯೋಜನೆಯೂ ಸೇರಿದಂತೆ ಬೃಹತ್‌ ಹೂಡಿಕೆಯ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ.[೭೫]

ಎಮಿರೇಟ್ಸ್‌ ಏರ್‌ಲೈನ್ಸ್‌ ಸಂಸ್ಥೆಯ ಕೇಂದ್ರವಾಗಿರುವ ದುಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣವು (IATA: DXB), ದುಬೈ ಮಹಾ ನಗರಕ್ಕೆ ಹಾಗೂ ರಾಷ್ಟ್ರದ ಇತರೆ ಎಮಿರೇಟ್‌ಗಳಿಗೆ ಸೇವೆ ನೀಡುತ್ತದೆ. ದುಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ಒಟ್ಟಾರೆಯಾಗಿ ೩೭ ದಶಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರನ್ನು ಹಾಗೂ ೧.೮ ದಶಲಕ್ಷ ಟನ್‌ಗಳಷ್ಟು ಸರಕು ಸಾಗಾಣಿಕೆಯನ್ನು ೨೦೦೮ನೇ ಸಾಲಿನಲ್ಲಿ ನಿರ್ವಹಿಸಿದೆ.[೭೬] ೨೦೦೮ರ ಹಾಗೆ, ದುಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ವಿಶ್ವದಲ್ಲೇ 20ನೇ ಅವಿಶ್ರಾಂತ ವಿಮಾನನಿಲ್ದಾಣವಾಗಿದ್ದುದಲ್ಲದೇ, ೩೫ ದಶಲಕ್ಷಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಪ್ರಯಾಣಿಕರ ಗಣನೆಯೊಂದಿಗೆ, ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯ ಗಣನೆಯಲ್ಲಿ, ವಿಶ್ವದ 6ನೇ ಅವಿಶ್ರಾಂತ ಅಂತರರಾಷ್ಟ್ರೀಯ ವಿಮಾನನಿಲ್ದಾಣವೆಂಬ ಕೀರ್ತಿ ಪಡೆಯಿತು. ಪ್ರಮುಖ ಪ್ರಯಾಣಿಕರ ದಟ್ಟಣೆಯ ಕೇಂದ್ರವಾಗಿರುವುದು ಮಾತ್ರವಲ್ಲದೇ, ೨೦೦೮ರ ಸಾಲಿನಲ್ಲಿ ಈ ವಿಮಾನ ನಿಲ್ದಾಣವು ೧.೮೨೪ ದಶಲಕ್ಷ ಟನ್‌ಗಳಷ್ಟು ಸರಕನ್ನು ನಿರ್ವಹಿಸುವ ಮೂಲಕ ವಿಶ್ವದ 11ನೇ ಅವಿಶ್ರಾಂತ ವಿಮಾನನಿಲ್ದಾಣವೆನಿಸಿರುವುದಲ್ಲದೇ ೨೦೦೭ರ ಸಾಲಿಗೆ ಹೋಲಿಸಿದಂತೆ ೯.೪%ರಷ್ಟು ಸರಕು ಸಾಗಣೆಯ ದಟ್ಟಣೆಯಲ್ಲಿ ಹೆಚ್ಚಳ ಕಂಡಿದೆ. ಎಮಿರೇಟ್ಸ್‌ ಏರ್‌ಲೈನ್‌ ಸಂಸ್ಥೆಯು ದುಬೈನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದ್ದು, ೬ ಖಂಡಗಳ, ೬೧ ರಾಷ್ಟ್ರಗಳಲ್ಲಿನ ೧೦೧ ಸ್ಥಳಗಳಿಗೆ ತನ್ನ ಸೇವೆ ನೀಡುತ್ತಿದೆ.

ಜೆಬೆಲ್‌ ಅಲಿಯಲ್ಲಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಅಲ್‌ ಮಕ್ತೂಮ್‌‌ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಬಗ್ಗೆ ಘೋಷಣೆಯನ್ನು ೨೦೦೪ರಲ್ಲಿ ಮಾಡಲಾಗಿತ್ತು. ಮೊದಲ ಹಂತವು ೨೦೧೦ರ ಸಾಲಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಕಾರ್ಯನಿರ್ವಹಣೆ ಆರಂಭಿಸುವ ಹೊತ್ತಿಗೆ ನವೀನ ವಿಮಾನನಿಲ್ದಾಣವು ವಿದೇಶಿ ವಿಮಾನಯಾನಸಂಸ್ಥೆಗಳಿಗೆ ಹಾಗೂ ಎಮಿರೇಟ್‌ನ ವಿಮಾನಯಾನ ಸಂಸ್ಥೆಗೆ ಪ್ರತ್ಯೇಕ ಟರ್ಮಿನಲ್‌ಗಳನ್ನು ಹೊಂದಿರಲಿದೆ.[೭೭]

ದುಬೈನ ಸಾರ್ವಜನಿಕ ಬಸ್‌ ಸಾರಿಗೆ ವ್ಯವಸ್ಥೆಯು ರೋಡ್ಸ್‌ ಅಂಡ್‌ ಟ್ರಾನ್ಸ್‌ಪೋರ್ಟ್ ಅಥಾರಿಟಿ (RTA) ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತದೆ. ಬಸ್‌ ವ್ಯವಸ್ಥೆಯು ೧೪೦ ಮಾರ್ಗಗಳಲ್ಲಿ ಸೇವೆಯನ್ನು ನೀಡುತ್ತಿದ್ದು, ೨೦೦೮ರ ಸಾಲಿನಲ್ಲಿ ಸುಮಾರು ೧೦೯.೫ ದಶಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡಿದೆ. ೨೦೧೦ರ ಕೊನೆಯ ಹೊತ್ತಿಗೆ, ಮಹಾನಗರದಲ್ಲಿ ೨,೧೦೦ ಬಸ್‌ಗಳು ಸೇವೆ ಸಲ್ಲಿಸಲಿವೆ.[೭೮] ಸಾರಿಗೆ ಪ್ರಾಧಿಕಾರವು ೫೦೦ ಹವಾ-ನಿಯಂತ್ರಿತ (A/C) ಪ್ರಯಾಣಿಕರ ಬಸ್‌ ನಿಲ್ದಾಣಗಳ ನಿರ್ಮಾಣವನ್ನು ಪ್ರಕಟಿಸಿದ್ದು, ಸಾರ್ವಜನಿಕ ಬಸ್‌ಗಳ ಬಳಕೆಯನ್ನು ಉತ್ತೇಜಿಸಲು ಇಡೀ ಎಮಿರೇಟ್‌ನಲ್ಲಿ ಇನ್ನೂ ೧೦೦೦ ನಿಲ್ದಾಣಗಳನ್ನು ನಿರ್ಮಿಸುವ ಯೋಜನೆಯಿದೆ.[ಸೂಕ್ತ ಉಲ್ಲೇಖನ ಬೇಕು]

$೩.೮೯ ಶತಕೋಟಿ ವೆಚ್ಚದ ದುಬೈ ಮೆಟ್ರೋ ಯೋಜನೆಯು ಎಮಿರೇಟ್‌ನಲ್ಲಿ ನಿರ್ಮಾಣ ಹಂತದಲ್ಲಿದೆ. ಮೆಟ್ರೋ ವ್ಯವಸ್ಥೆಯು ಸೆಪ್ಟೆಂಬರ್‌ ೨೦೦೯ರ ಹಾಗೆ ಭಾಗಶಃ ಕಾರ್ಯಪ್ರವೃತ್ತವಾಗಲಿದ್ದು ೨೦೧೨ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಮೆಟ್ರೋ ನಾಲ್ಕು ಮಾರ್ಗಗಳನ್ನು ಹೊಂದಿದೆ : ಅಲ್‌ ರಷೀದಿಯಾದಿಂದ ಪ್ರಧಾನ ನಗರ ಕೇಂದ್ರಕ್ಕೆ ಹೋಗುವ ಹಸಿರು ಮಾರ್ಗ/ಗ್ರೀನ್‌ ಲೈನ್‌ ಮತ್ತು ವಿಮಾನನಿಲ್ದಾಣದಿಂದ ಜೆಬೆಲ್‌ ಅಲಿಗೆ ಹೋಗುವ ಕೆಂಪು ಮಾರ್ಗ/ರೆಡ್‌ಲೈನ್‌. ಇದು ನೀಲಿ ಮಾರ್ಗ/ಬ್ಲೂ ಲೈನ್‌ ಹಾಗೂ ನೇರಳೆ ಮಾರ್ಗ/ಪರ್ಪಲ್‌ ಲೈನ್‌ಗಳನ್ನೂ ಹೊಂದಿದೆ. ದುಬೈ ಮೆಟ್ರೋ (ಹಸಿರು ಮತ್ತು ನೀಲಿ ಮಾರ್ಗಗಳು) ೭೦ ಕಿಲೋಮೀಟರ್‌ಗಳಷ್ಟು ದೂರದ ರೈಲ್ವೆ ಮಾರ್ಗವನ್ನು ಹೊಂದಲಿದ್ದು ೩೭ ನೆಲದ ಮೇಲಿನ ಹಾಗೂ ಹತ್ತು ಭೂಗತ ನಿಲ್ದಾಣಗಳೂ ಸೇರಿದಂತೆ ೪೩ ನಿಲ್ದಾಣಗಳನ್ನು ಹೊಂದಿರಲಿದೆ.[೭೯] ದುಬೈ ಮೆಟ್ರೋ ಅರೇಬಿಯನ್‌ ದ್ವೀಪಕಲ್ಪದಲ್ಲಿನ ಪ್ರಪ್ರಥಮ ಮಹಾನಗರ ರೈಲು ಜಾಲವೂ ಹೌದು.[೮೦] ಎಲ್ಲಾ ರೈಲುಗಳು ಹಾಗೂ ನಿಲ್ದಾಣಗಳು ವೇದಿಕೆಯ ಅಂಚಿನ ದ್ವಾರಗಳೊಂದಿಗೆ ಹವಾನಿಯಂತ್ರಿತ ಸೌಲಭ್ಯವನ್ನು ಹೊಂದಿವೆ.

ಪಾಮ್‌ ಜುಮೇರಾನಲ್ಲಿ ಮಾನೋರೈಲ್‌ ವ್ಯವಸ್ಥೆಯನ್ನು ೨೦೦೯ರಲ್ಲಿ ಆರಂಭಿಸಲಾಯಿತು. ಈ ಪ್ರದೇಶದಲ್ಲಿ ನಿರ್ಮಿಸಲಾದ ಪ್ರಥಮ ಮಾನೋರೈಲ್‌ ಇದಾಗಿದೆ. ೨೦೧೧ರ ಹೊತ್ತಿಗೆ ಎರಡು ಟ್ರಾಂಗಳನ್ನು ದುಬೈನಲ್ಲಿ ನಿರ್ಮಿಸುವ ಅಂದಾಜಿದೆ. ಮೊದಲನೆಯದು ಡೌನ್‌ಟೌನ್‌ ಬುರ್ಜ್‌ ದುಬೈ ಟ್ರಾಂ ವ್ಯವಸ್ಥೆ ಹಾಗೂ ಎರಡನೆಯದು ಅಲ್‌ ಸುಫೌ ಟ್ರಾಂ. ಡೌನ್‌ಟೌನ್‌ ಬುರ್ಜ್‌ ದುಬೈ ಟ್ರಾಂ ವ್ಯವಸ್ಥೆಯು ೪.೬ km ದೂರದ ಟ್ರಾಂ ಸೇವೆಯಾಗಿದ್ದು ಬುರ್ಜ್‌ ದುಬೈ ಸುತ್ತಮುತ್ತಲಿನ ಪ್ರದೇಶಕ್ಕೆ ಸೇವೆ ನೀಡುತ್ತದೆನ್ನಲಾಗಿದೆ, ಎರಡನೆಯ ಟ್ರಾಂ ೧೪.೫ ಕಿಲೋಮೀಟರ್‌ಗಳಷ್ಟು ದೂರ ಚಲನೆಯಲ್ಲಿ ಅಲ್‌ ಸಫೌ ರಸ್ತೆಯುದ್ದಕ್ಕೆ ದುಬೈ ಮರೀನಾದಿಂದ ಬುರ್ಜ್‌ ಅಲ್‌ ಅರಬ್‌‌ವರೆಗೆ ಹಾಗೂ ಮಾಲ್‌ ಆಫ್‌ ಎಮಿರೇಟ್ಸ್‌ನವರೆಗೆ ಸೇವೆ ನೀಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಬುರ್‌ ದುಬೈನಿಂದ ಡೇರಾ ಕಡೆಗೆ ಹೋಗುವ ಮತ್ತೊಂದು ಸಾಂಪ್ರದಾಯಿಕ ಮಾರ್ಗವೆಂದರೆ ಅಬ್ರಾಗಳ ಮೂಲಕದ ಹಾದಿ, ಇಲ್ಲಿ ಬಸ್ತಾಕಿಯಾ ಮತ್ತು ಬನಿಯಾಸ್‌ ರಸ್ತೆಗಳ ಅಬ್ರಾ ನಿಲ್ದಾಣಗಳ ನಡುವೆ ಸಣ್ಣ ದೋಣಿಗಳು ದುಬೈ ಒಳಚಾಚುವಿನ ಮೂಲಕ ಪ್ರಯಾಣಿಕರನ್ನು ದಾಟಿಸುತ್ತವೆ. ಅಲ್ಲಿನ ಮರೀನ್‌ ಟ್ರಾನ್ಸ್‌ಪೋರ್ಟ್‌ ಏಜೆನ್ಸಿ/ಜಲಸಾರಿಗೆ ವ್ಯವಸ್ಥೆಯು ದುಬೈ ವಾಟರ್‌ ಬಸ್‌ ಸಿಸ್ಟಂಅನ್ನು ಅಳವಡಿಸುವ ಪ್ರಕ್ರಿಯೆಯಲ್ಲಿದೆ.

ದುಬೈನಲ್ಲಿ ಎರಡು ಪ್ರಮುಖ ವಾಣಿಜ್ಯ ಬಂದರುಗಳಿವೆ, ರಷೀದ್‌ ಬಂದರು ಹಾಗೂ ಜೆಬೆಲ್‌ ಅಲಿ ಬಂದರು. ಜೆಬೆಲ್‌ ಅಲಿ ಬಂದರು ವಿಶ್ವದಲ್ಲೇ ೭ನೇ ಅವಿಶ್ರಾಂತ ಬಂದರಾಗಿದೆ. ಇಷ್ಟೇ ಅಲ್ಲದೇ ಜೆಬೆಲಿ ಅಲಿಯು ವಿಶ್ವದ ಮಾನವ ನಿರ್ಮಿತ ಅತಿ ದೊಡ್ಡ ಬಂದರಾಗಿದ್ದು, ಮಧ್ಯಪೂರ್ವದಲ್ಲಿಯೇ ಅತ್ಯಂತ ದೊಡ್ಡ ಬಂದರಾಗಿದೆ.

ದುಬೈನ ರಸ್ತೆಗಳ ಆಧಾರರಚನೆಯಲ್ಲಿ ಅಲ್ಲಿನ ಸರ್ಕಾರವು ಬೃಹತ್‌ ಬಂಡವಾಳವನ್ನೇ ಹೂಡಿದ್ದರೂ, ಹೂಡಿಕೆಯು ಅಲ್ಲಿನ ವಾಹನಗಳ ಸಂಖ್ಯೆಯ ಏರಿಕೆಗೆ ಅನುಗುಣವಾಗಿಲ್ಲ. ಹೀಗಾಗಿ ಇದರಿಂದುಂಟಾದ ದಟ್ಟಣೆಯ ಸಮಸ್ಯೆಯು, ವಾಹನನಿಬಿಡತೆಯ ಸಮಸ್ಯೆಯನ್ನು ತಂದೊಡ್ಡಿದೆ.[೮೧]

ದುಬೈ ನಗರವು ವ್ಯಾಪಕವಾದ ಟ್ಯಾಕ್ಸಿ ವ್ಯವಸ್ಥೆಯನ್ನು ಹೊಂದಿದ್ದು, ಇದು ಎಮಿರೇಟ್‌ನೊಳಗಿನ ಸಾರಿಗೆಗೆ ಬಹುಮಟ್ಟಿಗೆ ಬಳಕೆಯಲ್ಲಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ಇವುಗಳಲ್ಲಿ ಸರ್ಕಾರದ ಹಾಗೂ ಖಾಸಗಿಯವರ ಎರಡೂ ಮಾಲಿಕತ್ವದ ಕಾರು ಕಂಪೆನಿಗಳಿವೆ. ಎಮಿರೇಟ್‌ನಾದ್ಯಂತ ಸುಮಾರು ೭,೫೦೦ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಸಂಸ್ಕೃತಿ

ಬದಲಾಯಿಸಿ
 
ಡೇರಾದಲ್ಲಿನ ಸಾಂಪ್ರದಾಯಿಕ ಸೂಕ್‌

೨೦೦೫ರಲ್ಲಿ, ದುಬೈ ಮಹಾನಗರದ ೮೪%ರಷ್ಟು ಜನಸಂಖ್ಯೆಯು ವಿದೇಶೀಯರಾಗಿದ್ದು, ಅವರಲ್ಲಿ ಸುಮಾರು ಅರ್ಧದಷ್ಟು ಜನರು ಭಾರತದವರಾಗಿದ್ದರು.[೫೬] ಸಣ್ಣದಾದ ಜನಾಂಗೀಯವಾಗಿ ಏಕರೂಪದ ಮುತ್ತುಗಳ ವ್ಯಾಪಾರಿ ಸಮೂಹವೆಂಬ ನಗರದ ಸಾಂಸ್ಕೃತಿಕ ಛಾಪು, ಇತರೆ ಜನಾಂಗೀಯ ಸಮೂಹಗಳು ಹಾಗೂ ರಾಷ್ಟ್ರೀಯರುಗಳ ಆಗಮನದೊಂದಿಗೆ ಬದಲಾಯಿತು, ಮೊದಲಿಗೆ ೧೯೦೦ರ ದಶಕದ ಮೊದಲಭಾಗದಲ್ಲಿ ಇರಾನಿಯನ್ನರು, ನಂತರ ೧೯೬೦ರ ದಶಕದಲ್ಲಿ ಭಾರತದವರ ಹಾಗೂ ಪಾಕಿಸ್ತಾನಿಗಳ ಆಗಮನವಾಯಿತು. ದುಬೈ ವಲಸೆ ಕಾರ್ಮಿಕರನ್ನು ಕೆಳವರ್ಗದವರಂತೆ ಕಾಣುವ ತನ್ನ ವರ್ಗೀಕೃತ ಸಮಾಜದ ವ್ಯವಸ್ಥೆಯ ಪಾಲನೆಗಾಗಿ ಟೀಕೆಗೊಳಗಾಗಿದೆ.[೮೨] ನಗರದೊಳಗಿನ ಜನಸಮೂಹದ ವಿವಿಧತೆಗಳ ನಡುವೆಯೂ, ಕೇವಲ ಅಲ್ಪ ಹಾಗೂ ವಿರಳವಾದ ಜನಾಂಗೀಯ ಕಲಹಗಳಾಗುವುದಂಟು, ಅಲ್ಲದೇ ಹಾಗೆ ಆದಾಗ ಅದು ಪ್ರಮುಖವಾಗಿ ವಲಸಿಗರ ನಡುವೆಯ ಸಾಧ್ಯತೆಯೇ ಹೆಚ್ಚು. ದುಬೈನಲ್ಲಿನ ಪ್ರಮುಖ ರಜಾದಿನಗಳೆಂದರೆ ರಮ್ಜಾನ್‌ ನ ಕೊನೆ ಸೂಚಿಸುವ ಈದ್‌ ಅಲ್‌ ಫಿತ್‌ರ್‌ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌‌ನ ರಚನೆಯ ದಿನವಾದ ರಾಷ್ಟ್ರೀಯ ದಿನ (೨ ಡಿಸೆಂಬರ್‌). ವಾರ್ಷಿಕ ಮನರಂಜನಾ ವಿದ್ಯಮಾನಗಳಾದ ದುಬೈ ಷಾಪಿಂಗ್‌ ಫೆಸ್ಟಿವಲ್‌ (DSF) ಮತ್ತು ದುಬೈ ಸಮ್ಮರ್‌ ಸರ್ಪ್ರೈಸಸ್‌ (DSS)ಗಳು ಪ್ರದೇಶದಾದ್ಯಂತದ ೪ ದಶಲಕ್ಷ ಸಂದರ್ಶಕರನ್ನು ಆಕರ್ಷಿಸುವುದಲ್ಲದೇ US$ ಒಂದು ಶತಕೋಟಿಗೂ ಮೀರಿದ ಆದಾಯವನ್ನು ನೀಡುತ್ತದೆ.[೮೩] ಮಹಾನಗರದ ಡೇರಾ ಸಿಟಿ ಸೆಂಟರ್‌, ಬುರ್‌ಜುಮನ್‌, ಮಾಲ್‌ ಆಫ್‌ ಎಮಿರೇಟ್ಸ್‌‌, ದುಬೈ ಮಾಲ್‌‌ ಮತ್ತು ಇಬನ್‌‌ ಬತೂತಾ ಮಾಲ್‌ಗಳಂತಹಾ ಬೃಹತ್‌ ಮಾರಾಟ ಮಳಿಗೆಗಳು ಹಾಗೂ ಸಾಂಪ್ರದಾಯಿಕ ಸೂಕ್‌ಗಳು ಆ ಪ್ರದೇಶದ ಖರೀದಿದಾರರನ್ನು ಆಕರ್ಷಿಸುತ್ತವೆ.

ಅರಬ್‌ ಆಹಾರವು ಅತ್ಯಂತ ಜನಪ್ರಿಯವಾಗಿದ್ದು, ಡೇರಾ ಮತ್ತು ಅಲ್‌ ಕರಾಮಾಗಳ ಸಣ್ಣ ಷಾವರ್ಮಾ ಭೋಜನಗೃಹಗಳಿಂದ ಹಿಡಿದು ದುಬೈನ ಹೋಟೆಲ್‌ಗಳಲ್ಲಿನ ರೆಸ್ಟೋರೆಂಟ್‌ಗಳವರೆಗೆ ನಗರದ ಎಲ್ಲೆಡೆ ಲಭ್ಯವಿರುತ್ತದೆ. ಫಾಸ್ಟ್‌ ಫುಡ್‌, ದಕ್ಷಿಣ ಏಷ್ಯಾದ ಹಾಗೂ ಚೀನೀ ಪಾಕಪದ್ಧತಿಗಳ ಆಹಾರಗಳು ಸಹಾ ಜನಪ್ರಿಯವಾಗಿದ್ದು, ವ್ಯಾಪಕವಾಗಿ ಲಭ್ಯವಿವೆ. ಹಂದಿ ಮಾಂಸದ ಮಾರಾಟ ಹಾಗೂ ಬಳಕೆ ನಿಷಿದ್ಧವಲ್ಲದೇ ಹೋದರೂ, ನಿಯಂತ್ರಿತವಾಗಿದ್ದು, ಕೇವಲ ಮುಸ್ಲಿಮೇತರರಿಗೆ ಮಾತ್ರವೇ ಲಭ್ಯವಿದ್ದು, ನಿಗದಿತ ಪ್ರದೇಶಗಳಲ್ಲಿ ಮಾತ್ರವೇ ಲಭ್ಯವಿರುತ್ತದೆ.[೮೪] ಇದೇ ರೀತಿ ಆಲ್ಕೋಹಾಲಿನ ಅಂಶವುಳ್ಳ ಪಾನೀಯಗಳ ಮಾರಾಟವೂ ಸಹಾ ನಿಯಂತ್ರಿತವಾಗಿದೆ. ಮದ್ಯವನ್ನು ಖರೀದಿಸಲು ಮದ್ಯದ ಪರವಾನಗಿ ಅಗತ್ಯವಿದೆ; ಆದಾಗ್ಯೂ ಹೋಟೆಲ್‌ಗಳ ಭಾಗವಾಗಿರುವ ಬಾರ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಮದ್ಯವು ಲಭ್ಯವಿರುತ್ತದೆ.[೮೫] ಷೀಷಾ ಮತ್ತು ಕ್ವಾಹಾ ದಂತಹಾ ಮಹಿಳಾ ಅಲಂಕರಣ ಕೇಂದ್ರಗಳೂ ಸಹಾ ದುಬೈನಲ್ಲಿ ಪ್ರಸಿದ್ಧವಾಗಿವೆ.

ಹಾಲಿವುಡ್‌ ಹಾಗೂ ಬಾಲಿವುಡ್‌ ಚಿತ್ರಗಳು ದುಬೈನಲ್ಲಿ ಜನಪ್ರಿಯವಾಗಿವೆ. ನಗರದಲ್ಲಿ ಅರಬ್ಬರ ಹಾಗೂ ಅಂತರರಾಷ್ಟ್ರೀಯ ಚಿತ್ರರಂಗಗಳ ಖ್ಯಾತರನ್ನು ಆಕರ್ಷಿಸುವ ವಾರ್ಷಿಕ ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ನಡೆಸಲಾಗುತ್ತದೆ. ಅಮ್ರ್‌ ಡಯಬ್‌, ಡಯಾನಾ ಹದ್ದದ್‌, ಟರ್ಕನ್‌‌, ಏರೋಸ್ಮಿತ್‌, ಸಂಟಾ/ತಾನಾ, ಮಾರ್ಕ್‌ ನಾಪ್ಲರ್‌, ಎಲ್ಟನ್‌ ಜಾನ್‌, ಪಿಂಕ್‌, ಷಕೀರಾ, ಸೆಲೀನ್‌ ಡಿಯೋನ್‌, ಕೋಲ್ಡ್‌ಪ್ಲೇ , ಕೀನೆ ಮತ್ತು ಫಿಲ್‌ ಕಾಲಿನ್ಸ್‌ರಂತಹಾ ಸಂಗೀತಗಾರರು/ಹಾಡುಗಾರರು ನಗರದಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ನವೆಂಬರ್‌ ೨೦, ೨೦೦೮ರಂದು ನಡೆದ ಅಟ್ಲಾಂಟಿಸ್‌ ರೆಸಾರ್ಟ್‌ನ ಆರಂಭೋತ್ಸವದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಕಿಲೀ ಮಿನೋಗ್‌ರಿಗೆ ೪.೪ ದಶಲಕ್ಷ ಡಾಲರ್‌ಗಳನ್ನು ಪಾವತಿಸಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ದುಬೈ ಡೆಸರ್ಟ್‌ ರಾಕ್‌ ಫೆಸ್ಟಿವಲ್‌ ಮತ್ತೊಂದು ಅಂತಹಾ ರಾಕ್‌ ಸಂಗೀತಗಾರರು ನಡೆಸಿಕೊಟ್ಟ ಪ್ರಮುಖ ಉತ್ಸವವಾಗಿತ್ತು.

ಕಾಲ್ಚೆಂಡು/ಫುಟ್‌ಬಾಲ್‌ ಮತ್ತು ಕ್ರಿಕೆಟ್‌ಗಳು ದುಬೈನಲ್ಲಿನ ಅತ್ಯಂತ ಜನಪ್ರಿಯ ಕ್ರೀಡೆಗಳು. ಅಲ್‌ ವಸ್‌ಲ್‌, ಅಲ್‌-ಷಬಾಬ್‌, ಅಲ್‌-ಆಹ್ಲಿ, ಅಲ್‌ ನಸ್ರ್‌‌ ಮತ್ತು ಹಟ್ಟಾ ಎಂಬ ಐದು ತಂಡಗಳು — UAE ಲೀಗ್‌ ಕಾಲ್ಚೆಂಡು ಪಂದ್ಯಗಳಲ್ಲಿ ದುಬೈಯನ್ನು ಪ್ರತಿನಿಧಿಸುತ್ತವೆ. ಪ್ರಸ್ತುತ ಚಾಂಪಿಯನ್‌ಗಳಾದ ಅಲ್‌-ವಾಸ್‌ಲ್‌ರು UAE ಲೀಗ್‌ನಲ್ಲಿ ಅಲ್‌ ಅಐನ್‌ರ ನಂತರದ ಎರಡನೇ ಸ್ಥಾನದಲ್ಲಿ ಅತಿ ಹೆಚ್ಚು ಸಂಖ್ಯೆಯ ಚಾಂಪಿಯನ್‌ಷಿಪ್‌ ಪ್ರಶಸ್ತಿಯನ್ನು ಹೊಂದಿದ್ದಾರೆ. ದುಬೈನ ಅತಿ ದೊಡ್ಡ ದಕ್ಷಿಣ ಏಷ್ಯಾದ ಸಮುದಾಯದವರು ಕ್ರಿಕೆಟ್‌ನ್ನು ಇಚ್ಛಿಸುತ್ತಾರೆ ಹಾಗೂ ೨೦೦೫ರಲ್ಲಿ, ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್‌ (ICC) ತನ್ನ ಕೇಂದ್ರ ಕಛೇರಿಯನ್ನು ಲಂಡನ್‌ನಿಂದ ದುಬೈಗೆ ಸ್ಥಳಾಂತರಿಸಿತು. ಈ ನಗರವು ಅನೇಕ ಭಾರತ-ಪಾಕಿಸ್ತಾನ ಪಂದ್ಯಗಳನ್ನು ನಡೆಸಿಕೊಟ್ಟಿದ್ದು, ಎರಡು ಹೊಸ ಹಸಿರುಹುಲ್ಲಿನ ಮೈದಾನಗಳನ್ನು ದುಬೈ ಸ್ಪೋರ್ಟ್ಸ್‌ ಸಿಟಿಯಲ್ಲಿ ನಿರ್ಮಿಸಲಾಗುತ್ತಿದೆ. ದುಬೈ ವಿಶ್ವದ ಕ್ರೀಡಾ ತಾರೆಗಳೆಲ್ಲರನ್ನೂ ಆಕರ್ಷಿಸುವ ವಾರ್ಷಿಕ ದುಬೈ ಟೆನಿಸ್‌ ಚಾಂಪಿಯನ್‌ಷಿಪ್‌ಗಳನ್ನು ಮತ್ತು ಲೆಜೆಂಡ್ಸ್‌ ರಾಕ್‌ ದುಬೈ ಟೆನಿಸ್‌ ಟೂರ್ನಮೆಂಟ್‌ಗಳ ಜೊತೆಗೆ ದುಬೈ ಡೆಸರ್ಟ್‌ ಕ್ಲಾಸಿಕ್‌ ಗಾಲ್ಫ್‌‌ ಟೂರ್ನಮೆಂಟ್‌ಗಳೆಲ್ಲವನ್ನೂ ನಡೆಸಿಕೊಡುತ್ತದೆ. ದುಬೈ ವರ್ಲ್ಡ್‌ ಕಪ್‌ ಎನ್ನಲಾಗುವ, ಮಿಶ್ರತಳಿಯ ಜೂಜುಕುದುರೆಗಳ ಓಟದ ಪಂದ್ಯಗಳನ್ನು ವಾರ್ಷಿಕವಾಗಿ ನಾಡ್‌ ಅಲ್‌ ಷೆಬಾ ರೇಸ್‌ಕೋರ್ಸ್‌ ಎಂಬಲ್ಲಿ ನಡೆಸಲಾಗುತ್ತದೆ.

ದುಬೈನ ಪ್ರಗತಿಪರ ಹಾಗೂ ಆಡಂಬರದ ಛಾಪಿನ ಹೊರತಾಗಿಯೂ ದುಬೈನಲ್ಲಿ ಸೆನ್ಸಾರ್‌ ವ್ಯವಸ್ಥೆ ಇದ್ದು ಸರ್ಕಾರವು ಅದನ್ನು ಎಮಿರೇಟ್‌ನ ಸಾಂಸ್ಕೃತಿಕ ಹಾಗೂ ರಾಜಕೀಯ ವ್ಯವಸ್ಥೆಗೆ ವಿರೋಧವೆನಿಸಿದ ವಿಚಾರವಸ್ತುಗಳನ್ನು ನಿಯಂತ್ರಿಸಲು ಬಳಸುತ್ತದೆ. ಸಲಿಂಗಕಾಮ, ಮಾದಕದ್ರವ್ಯಗಳು ಮತ್ತು ವಿಕಸನ ಪದ್ಧತಿಯ ಸಿದ್ಧಾಂತಗಳಿಗೆ ಅಲ್ಲಿ ನಿಷೇಧ ಹೇರಲಾಗಿದೆ.[೮೬]

ದುಬೈ ತನ್ನ ರಾತ್ರಿಯ ಬದುಕಿಗಾಗಿ ಪ್ರಸಿದ್ಧವಾಗಿದೆ. ಅಲ್ಲಿನ ಮದ್ಯದ ನಿಯಮಗಳಿಂದಾಗಿ ಬಹುಮಟ್ಟಿಗೆ ಎಲ್ಲಾ ಹೋಟೆಲ್‌ಗಳಲ್ಲೂ ಕ್ಲಬ್‌ಗಳು ಹಾಗೂ ಬಾರ್‌ಗಳು ಕಂಡುಬರುತ್ತವೆ. ದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯು ೨೦೦೮ರ ಸಾಲಿನಲ್ಲಿ ತನ್ನ ಮೋಜಿನ ಕೂಟಗಳ ಪ್ರವಾಸೀ ತಾಣದ ಆಯ್ಕೆಯ ವಿಷಯದಲ್ಲಿ ದುಬೈಯನ್ನು ಹೆಸರಿಸಿದೆ.[೮೭]

ಶಿಕ್ಷಣ

ಬದಲಾಯಿಸಿ

thumb|200px|right|ದುಬೈನಲ್ಲಿ ವಿಶ್ವವಿದ್ಯಾನಿಲಯಗಳು ತಮ್ಮ ಶಾಖೆಗಳನ್ನು ಹಾಗೂ ಕ್ಯಾಂಪಸ್‌ಗಳನ್ನು ತೆರೆಯಲು ನಿರ್ಮಿಸಿದ ದುಬೈ ನಾಲೆಡ್ಜ್‌ ವಿಲೇಜ್‌

ದುಬೈನ ಶಿಕ್ಷಣ ವ್ಯವಸ್ಥೆಯು ಯುನೈಟೆಡ್‌ ಅರಬ್‌ ಎಮಿರೇಟ್ಸ್‌‌ನ ವ್ಯವಸ್ಥೆಯಿಂದ ಹೊರತಾಗಿಲ್ಲ. ೨೦೦೬ರ ಹಾಗೆ, ಶಿಕ್ಷಣ ಇಲಾಖೆಯಿಂದ ನಿರ್ವಹಿಸಲ್ಪಡುವ ಹಾಗೂ ಎಮಿರೇಟ್‌ನ ನಾಗರೀಕರಿಗೆ ಹಾಗೂ ವಲಸಿಗ ಅರಬರಿಗೆ ಸೇವೆ ನೀಡುವ ೮೮ ಸಾರ್ವಜನಿಕ ಶಾಲೆಗಳು ಹಾಗೂ ೧೩೨ ಖಾಸಗಿ ಶಾಲೆಗಳೂ ಇದ್ದವು.[೫೪] ಶಿಕ್ಷಣ ಮಾಧ್ಯಮ/ಶೈಕ್ಷಣಿಕ ಭಾಷೆಯಾಗಿ ಸಾರ್ವಜನಿಕ ಶಾಲೆಗಳಲ್ಲಿ ಅರೇಬಿಕ್‌ ಭಾಷೆಯನ್ನು ಬಳಸಿ ಹಾಗೂ ಆಂಗ್ಲವನ್ನು ದ್ವಿತೀಯ ಭಾಷೆಯಾಗಿ ಪ್ರಾಮುಖ್ಯತೆ ನೀಡಿದ್ದರೆ, ಖಾಸಗಿ ಶಾಲೆಗಳು ಬಹುಮಟ್ಟಿಗೆ ತಮ್ಮ ಶಿಕ್ಷಣಮಾಧ್ಯಮವಾಗಿ ಆಂಗ್ಲವನ್ನೇ ಬಳಸುತ್ತವೆ. ಬಹಳಷ್ಟು ಖಾಸಗಿ ಶಾಲೆಗಳು ಒಂದು ಅಥವಾ ಹೆಚ್ಚಿನ ವಲಸಿಗ ಸಮುದಾಯದವರಿಗೆ ತಮ್ಮ ಸೇವೆ ನೀಡುತ್ತವೆ. ದುಬೈನ ನ್ಯೂ ಇಂಡಿಯನ್‌ ಮಾಡೆಲ್‌ ಸ್ಕೂಲ್‌ ,ದುಬೈ (NIMS),ದೆಹಲಿ ಪ್ರೈವೇಟ್‌ ಸ್ಕೂಲ್‌ , ಅವರ್‌ ಓನ್‌ ಇಂಗ್ಲಿಷ್‌ ಹೈಸ್ಕೂಲ್‌, ದುಬೈ ಮಾಡರ್ನ್‌ ಹೈಸ್ಕೂಲ್‌, ಮತ್ತು ದ ಇಂಡಿಯನ್‌ ಹೈಸ್ಕೂಲ್‌ಗಳು CBSE ಅಥವಾ ICSE ಭಾರತೀಯ ಪಠ್ಯಕ್ರಮಗಳಲ್ಲಿ ಶಿಕ್ಷಣ ನೀಡುತ್ತವೆ. ಇದೇ ರೀತಿ, ಅನೇಕ ಪ್ರಖ್ಯಾತ ಪಾಕಿಸ್ತಾನಿ ಶಾಲೆಗಳಿದ್ದು FBISE ಪಠ್ಯಕ್ರಮವನ್ನು ವಲಸಿಗ ಮಕ್ಕಳಿಗೆ ನೀಡುತ್ತವೆ. ದುಬೈ ಇಂಗ್ಲಿಷ್‌ ಸ್ಪೀಕಿಂಗ್‌ ಸ್ಕೂಲ್‌, ಜುಮೇರಾ ಪ್ರೈಮರಿ ಸ್ಕೂಲ್‌, ಜೆಬೆಲ್‌ ಅಲಿ ಪ್ರೈಮರಿ ಸ್ಕೂಲ್‌, ಕೇಂಬ್ರಿಡ್ಜ್‌ ಹೈಸ್ಕೂಲ್‌ (ಅಥವಾ ಕೇಂಬ್ರಿಡ್ಜ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌), ಜುಮೇರಾ ಇಂಗ್ಲಿಷ್‌ ಸ್ಪೀಕಿಂಗ್‌ ಸ್ಕೂಲ್‌, ಕಿಂಗ್ಸ್‌ ಸ್ಕೂಲ್‌ ಮತ್ತು ಹಾರಿಜನ್‌ ಸ್ಕೂಲ್‌ಗಳೆಲ್ಲವೂ ಹನ್ನೊಂದರ ವಯೋಮಾನದವರೆಗೆ ಬ್ರಿಟಿಷ್‌ ಪಠ್ಯಕ್ರಮದ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತವೆ. ದುಬೈ ಬ್ರಿಟಿಷ್‌ ಸ್ಕೂಲ್‌, ದುಬೈ ಕಾಲೇಜ್‌, ಇಂಗ್ಲಿಷ್‌ ಕಾಲೇಜ್‌ ದುಬೈ, ಜುಮೇರಾ ಇಂಗ್ಲಿಷ್‌ ಸ್ಪೀಕಿಂಗ್‌ ಸ್ಕೂಲ್‌ , ಜುಮೇರಾ ಕಾಲೇಜ್‌ ಮತ್ತು St. ಮೇರೀಸ್‌ ಕ್ಯಾಥೊಲಿಕ್‌ ಹೈಸ್ಕೂಲ್‌ ಎಲ್ಲವೂ ಹನ್ನೊಂದರಿಂದ-ಹದಿನೆಂಟರ ವಯಸ್ಸಿನವರ ಬ್ರಿಟಿಷ್‌ ಮಾಧ್ಯಮಿಕ ಶಾಲೆಗಳಾಗಿದ್ದು GCSE ಮತ್ತು A-Levelಗಳ ಪಠ್ಯಕ್ರಮವನ್ನು ಬೋಧಿಸುತ್ತವೆ. ಎಮಿರೇಟ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಕೇಂಬ್ರಿಡ್ಜ್‌ ಹೈಸ್ಕೂಲ್‌ಗಳೆರಡೂ ವಿದ್ಯಾರ್ಥಿಗಳಿಗೆ ೧೮ರ ವಯೋಮಾನದವರೆಗೆ IGCSE ಮತ್ತು A-Levelಗಳ ಪಠ್ಯಕ್ರಮವನ್ನೊಳಗೊಂಡಂತೆ ಪೂರ್ಣ ಶಿಕ್ಷಣ ನೀಡುತ್ತವೆ. ವೆಲ್ಲಿಂಗ್‌ಟನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ೪ರಿಂದ ೧೮ರ ವಯೋಮಾನದವರೆಗಿನ ವಿದ್ಯಾರ್ಥಿಗಳಿಗೆ ಬೋಧನೆ ನೀಡುವುದಲ್ಲದೇ, IGCSE ಮತ್ತು A-Levelಗಳ ಪಠ್ಯಕ್ರಮವನ್ನು ಬೋಧಿಸುತ್ತದೆ. ಡೇರಾ ಇಂಟರ್‌ನ್ಯಾಷನಲ್‌ ಸ್ಕೂಲ್‌ ಮತ್ತು ದುಬೈ ಇಂಟರ್‌ನ್ಯಾಷನಲ್‌ ಅಕಾಡೆಮಿಗಳು IGCSE ಪಠ್ಯಕ್ರಮವನ್ನೊಳಗೊಂಡಂತೆ IB ಪಠ್ಯಕ್ರಮವನ್ನು ಬೋಧಿಸುತ್ತವೆ. ಜುಮೇರಾ ಇಂಗ್ಲಿಷ್‌ ಸ್ಪೀಕಿಂಗ್‌ ಸ್ಕೂಲ್‌ ೪ರಿಂದ ೧೮ರ ವಯೋಮಾನದವರೆಗಿನ ವಿದ್ಯಾರ್ಥಿಗಳಿಗೆ ೧೬(GCSE)ರ ವಯೋಮಾನದವರೆಗೆ ಬ್ರಿಟಿಷ್‌ ಪಠ್ಯಕ್ರಮವನ್ನು ಹಾಗೂ ನಂತರ ಇಂಟರ್‌ನ್ಯಾಷನಲ್‌ ಬಕ್ಕಾಲಾರಿಯೇಟ್‌(IB) ಪಠ್ಯಕ್ರಮವನ್ನು ಬೋಧಿಸುತ್ತದೆ. ದುಬೈ ನಗರವು ದುಬೈ ಅಮೇರಿಕನ್‌ ಅಕಾಡೆಮಿ, ಅಮೇರಿಕನ್‌ ಸ್ಕೂಲ್‌ ಆಫ್‌ ದುಬೈ ಮತ್ತು ಯೂನಿವರ್ಸಲ್‌ ಅಮೇರಿಕನ್‌ ಸ್ಕೂಲ್‌ ಆಫ್‌ ದುಬೈನಂತಹಾ ಅಮೇರಿಕನ್‌ ಪಠ್ಯಕ್ರಮದಲ್ಲಿ ಬೋಧಿಸುವಂತಹಾ ಅನೇಕ ಶಾಲೆಗಳನ್ನು ಹೊಂದಿದೆ.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌‌ನ ಶಿಕ್ಷಣ ಸಚಿವಾಲಯವು ಶಾಲೆಗಳಿಗೆ ಮಾನ್ಯತೆ ನೀಡುವ ಜವಾಬ್ದಾರಿಯನ್ನು ಹೊಂದಿದೆ. ದುಬೈ ಎಜುಕೇಷನ್‌ ಕೌನ್ಸಿಲ್‌ ಅನ್ನು ಜುಲೈ ೨೦೦೫ರಲ್ಲಿ ದುಬೈನ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಉದ್ದೇಶದಿಂದ ರಚಿಸಲಾಯಿತು.[೮೮] ನಾಲೆಡ್ಜ್‌ ಅಂಡ್‌ ಹ್ಯೂಮನ್‌ ಡೆವಲಪ್‌ಮೆಂಟ್‌ ಅಥಾರಿಟಿ (KHDA) ಎಂಬ ಸಂಸ್ಥೆಯನ್ನು ೨೦೦೬ರಲ್ಲಿ ದುಬೈನಲ್ಲಿ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಕ್ಷೇತ್ರಗಳ ಅಭಿವೃದ್ಧಿಗೆಂದು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಪರಿಶೀಲಿಸಿ ಪರವಾನಗಿ ನೀಡುವ ಉದ್ದೇಶದಿಂದ ಸ್ಥಾಪಿಸಲಾಯಿತು.[೮೯]

ಬಹುಮಟ್ಟಿಗೆ ಜನಸಂಖ್ಯೆಯ ೧೦%ದಷ್ಟು ಮಂದಿ ವಿಶ್ವವಿದ್ಯಾಲಯದ ಅಥವಾ ಸ್ನಾತಕೋತ್ತರ ಪದವಿಗಳನ್ನು ಪಡೆದಿರುತ್ತಾರೆ. ಅನೇಕ ವಲಸಿಗರು ತಮ್ಮ ಮಕ್ಕಳನ್ನು ಸ್ವದೇಶಕ್ಕೆ ಅಥವಾ ಪಾಶ್ಚಿಮಾತ್ಯ ದೇಶಗಳಿಗೆ ವಿಶ್ವವಿದ್ಯಾಲಯದ ಪದವಿ ಶಿಕ್ಷಣ ಪಡೆಯಲು ಹಾಗೂ ತಾಂತ್ರಿಕ ಶಿಕ್ಷಣ ಪಡೆಯಲು ಭಾರತಕ್ಕೆ ಕಳಿಸುತ್ತಾರೆ. ಆದಾಗ್ಯೂ, ಗಮನಾರ್ಹ ಪ್ರಮಾಣದಲ್ಲಿ ಮಾನ್ಯತೆ ಹೊಂದಿದ ವಿದೇಶೀ ವಿಶ್ವವಿದ್ಯಾಲಯಗಳು ಕಳೆದ ಹತ್ತು ವರ್ಷಗಳಲ್ಲಿ ನಗರದಲ್ಲಿ ತಮ್ಮ ಕಛೇರಿಯನ್ನು ಆರಂಭಿಸಿವೆ. ಆ ತರಹದ ಕೆಲ ವಿಶ್ವವಿದ್ಯಾಲಯಗಳೆಂದರೆ ಮಿಷಿಗನ್‌ ಸ್ಟೇಟ್‌ ಯೂನಿವರ್ಸಿಟಿ ದುಬೈ (MSU ದುಬೈ), ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ & ಸೈನ್ಸ್‌‌, ಪಿಲಾನಿ-ದುಬೈ(BITS ಪಿಲಾನಿ), ಹೀರಿಯಟ್‌-ವಾಟ್‌ ಯೂನಿವರ್ಸಿಟಿ ದುಬೈ, ಅಮೇರಿಕನ್‌ ಯೂನಿವರ್ಸಿಟಿ ಇನ್‌ ದುಬೈ (AUD), ಅಮೇರಿಕನ್‌ ಕಾಲೇಜ್‌ ಆಫ್‌ ದುಬೈ, ಮಹಾತ್ಮಾ ಗಾಂಧಿ ಯೂನಿವರ್ಸಿಟಿ (ಬಾಹ್ಯ ಕೇಂದ್ರ), SP ಜೈನ್‌ ಸೆಂಟರ್‌ ಆಫ್‌ ಮ್ಯಾನೇಜ್‌ಮೆಂಟ್‌ , ದುಬೈನ ಯೂನಿವರ್ಸಿಟಿ ಆಫ್‌ ವಾಲ್ಲಾಂಗಾಂಗ್‌, ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಅಂಡ್‌ ಟೆಕ್ನಾಲಜಿ ಅಂಡ್‌ MAHE ಮಣಿಪಾಲ್. ೨೦೦೪ರಲ್ಲಿ, ದುಬೈ ಸ್ಕೂಲ್‌ ಆಫ್ ಗವರ್ನಮೆಂಟ್‌ ಸಂಸ್ಥೆಯು ಹಾರ್ವರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜಾನ್‌ F. ಕೆನಡಿ ಸ್ಕೂಲ್‌ ಆಫ್‌ ಗವರ್ನಮೆಂಟ್‌ ಮತ್ತು ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ದುಬೈ ಸೆಂಟರ್‌ಗಳನ್ನು (HMSDC) ದುಬೈನಲ್ಲಿ ಸ್ಥಾಪಿಸಲಾಯಿತು.

ದುಬೈ ಪಬ್ಲಿಕ್‌ ಲೈಬ್ರರೀಸ್‌ ಎಂಬುದು ದುಬೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ.

ಮಾಧ್ಯಮ

ಬದಲಾಯಿಸಿ

ನಗರಕ್ಕೆ ಸೇವೆ ನೀಡುತ್ತಿರುವ ಮುದ್ರಣ, ರೇಡಿಯೋ, ದೂರದರ್ಶನ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳ ಉತ್ತಮ ಜಾಲವನ್ನು ದುಬೈ ಹೊಂದಿದೆ. ಮಧ್ಯಪೂರ್ವ ಪ್ರದೇಶದಲ್ಲಿನ ಪ್ರಪ್ರಥಮ ಟಾಕ್‌ ರೇಡಿಯೋ ಕೇಂದ್ರವಾದ ದುಬೈ ಐ 103.8 ವಾಹಿನಿಯೂ ಸೇರಿದಂತೆ ಎಂಟು FM ರೇಡಿಯೋ ವಾಹಿನಿಗಳನ್ನು ಬಿತ್ತರಿಸುವ ಅರೇಬಿಯನ್‌ ರೇಡಿಯೋ ನೆಟ್‌ವರ್ಕ್‌ ಸಂಸ್ಥೆಯ ಕೇಂದ್ರ ಕಛೇರಿಯು ದುಬೈ ನಗರದಲ್ಲಿದೆ. ಕೇಬಲ್‌ ವ್ಯವಸ್ಥೆಯ ಮೂಲಕ ಅನೇಕ ಅಂತರರಾಷ್ಟ್ರೀಯ ವಾಹಿನಿಗಳು ಲಭ್ಯವಿವೆಯಾದರೆ, ಉಪಗ್ರಹ, ರೇಡಿಯೋ ಮತ್ತು ಸ್ಥಳೀಯ ವಾಹಿನಿಗಳನ್ನು ಅರೇಬಿಯನ್‌ ರೇಡಿಯೋ ನೆಟ್‌ವರ್ಕ್ ಮತ್ತು ದುಬೈ ಮೀಡಿಯಾ ಇನ್‌ಕಾರ್ಪೋರೇಟೆಡ್‌ ವ್ಯವಸ್ಥೆಗಳ ಮೂಲಕ ಪ್ರಸಾರ ಮಾಡಲಾಗುತ್ತದೆ. ಅನೇಕ ಅಂತರರಾಷ್ಟ್ರೀಯ ಸುದ್ದಿಸಂಸ್ಥೆಗಳಾದ Reuters, APTN, Bloomberg L.P. ಮತ್ತು MBC ಹಾಗೂ ಜಾಲ ಸುದ್ದಿವಾಹಿನಿಗಳೂ ದುಬೈ ಮೀಡಿಯಾ ಸಿಟಿ ಮತ್ತು ದುಬೈ ಇಂಟರ್ನೆಟ್‌ ಸಿಟಿಗಳಿಂದ ಬಾಹ್ಯವಾಗಿ ಕಾರ್ಯಾಚರಿಸುತ್ತವೆ. ಇದರೊಂದಿಗೆ, ಅನೇಕ ಸ್ಥಳೀಯ ಕಿರುತೆರೆ ಜಾಲ ವಾಹಿನಿಗಳಾದ ದುಬೈ ಒನ್‌ (ಪೂರ್ವದಲ್ಲಿ ಚಾನೆಲ್‌ 33), ಮತ್ತು ದುಬೈ TV (ಪೂರ್ವದಲ್ಲಿ EDTV)ಗಳು ಆಂಗ್ಲ ಹಾಗೂ ಅರೇಬಿಕ್‌ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ದುಬೈ-ಮೂಲದ FM ಕೇಂದ್ರಗಳಾದ ದುಬೈ FM (೯೩.೯), ದುಬೈi೯೨ (೯೨.೦), ಅಲ್‌ ಖಲೀಜಿಯಾ (೧೦೦.೯) ಮತ್ತು ಹಿಟ್‌ FM (೯೬.೭)ಗಳು ಆಂಗ್ಲ, ಅರೇಬಿಕ್‌ ಮತ್ತು ದಕ್ಷಿಣ ಏಷ್ಯಾದ ಕೆಲ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ದುಬೈ ನಗರವು ಅನೇಕ ಮುದ್ರಣ ಮಾಧ್ಯಮ ಮಾರುಕಟ್ಟೆಗಳಿಗೆ ಕೇಂದ್ರಸ್ಥಳವೂ ಆಗಿದೆ. ಅಲ್‌ ಖಲೀಜ್‌ , ಅಲ್‌ ಬಯನ್‌ ಮತ್ತು ಅಲ್‌ ಇತ್ತಿಹಾದ್‌ ಪತ್ರಿಕೆಗಳು ನಗರದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಅರೇಬಿಕ್‌ ಭಾಷೆಯ ಪತ್ರಿಕೆಗಳಾದರೆ ,[೯೦] ಗಲ್ಫ್‌ ನ್ಯೂಸ್‌ ಮತ್ತು ಖಲೀಜ್‌ ಟೈಮ್ಸ್‌ [೯೧] ಪತ್ರಿಕೆಗಳು ಅತಿ ಹೆಚ್ಚು ಪ್ರಸಾರದ ಆಂಗ್ಲ ಪತ್ರಿಕೆಗಳಾಗಿವೆ. ದುಬೈ ನಗರವು ಎಕ್ಸ್‌ಪ್ಲೋಸಿಟಿ ದುಬೈ Archived 2009-07-21 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ದುಬೈ ಸಿಟಿ ಗೈಡ್‌ನಂತಹಾ ಆನ್‌ಲೈನ್‌ ಮಾಹಿತಿ ಮೂಲಗಳಿಗೆ ಪುಷ್ಕಳ ಸ್ಥಳವಾಗಿದೆ.

೨೦೦೬ರಲ್ಲಿ ಇತರೆ ಸಣ್ಣ, ದೂರಸಂಪರ್ಕ ಕಂಪೆನಿಗಳಾದ ಎಮಿರೇಟ್ಸ್‌ ಇಂಟೆಗ್ರೇಟೆಡ್‌ ಟೆಲಿಕಮ್ಯೂನಿಕೇಷನ್ಸ್‌ ಕಂಪೆನಿ (EITC — ದುಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ) ಕಂಪೆನಿಗಳ ಸ್ಥಾಪನೆಗೆ ಮುನ್ನ ಎಟಿಸಾಲಟ್‌‌, ಎಂಬ ಸರ್ಕಾರಿ ಮಾಲೀಕತ್ವದ ದೂರಸಂಪರ್ಕ ಸೇವಾದಾರ ಸಂಸ್ಥೆಯು ದುಬೈನ ದೂರಸಂಪರ್ಕ ಸೇವೆಗಳಲ್ಲಿ ವಾಸ್ತವಿಕ ಏಕಸ್ವಾಮ್ಯ ಹೊಂದಿತ್ತು. ಅಂತರಜಾಲವನ್ನು UAEನಲ್ಲಿ (ಆದ್ದರಿಂದ ದುಬೈನಲ್ಲಿ) ೧೯೯೫ರಲ್ಲಿ ಪರಿಚಯಿಸಲಾಯಿತು. ಇಲ್ಲಿನ ಪ್ರಸ್ತುತ ಜಾಲವು ೫೦,೦೦೦ ಡಯಲ್‌ಅಪ್‌ ಮತ್ತು ೧೫೦,೦೦೦ ಬ್ರಾಡ್‌ಬ್ಯಾಂಡ್‌ ಪೋರ್ಟ್‌ಗಳ ಸಹಾಯದೊಂದಿಗೆ ೬ GBಗಳ ಬ್ಯಾಂಡ್‌ವಿಡ್ತ್‌ ಸೌಲಭ್ಯವನ್ನು ನೀಡಬಲ್ಲದು. ದುಬೈ ರಾಷ್ಟ್ರದ ನಾಲ್ಕು DNS ದತ್ತ ಕೇಂದ್ರಗಳಲ್ಲಿ ಎರಡನ್ನು (DXBNIC೧, DXBNIC೨) ತಾನೇ ಹೊಂದಿದೆ.[೯೨] ಅಂತರಜಾಲದ ವಿಷಯವಸ್ತುವನ್ನು ದುಬೈನಲ್ಲಿ ನಿಯಂತ್ರಿತಗೊಳಿಸಲಾಗಿದೆ. ಎಟಿಸಾಲಟ್‌ ಸಂಸ್ಥೆಯು ಪ್ರಾಕ್ಸಿ ಸರ್ವರ್‌ ಯಂತ್ರಾಂಶ-ತಂತ್ರಾಂಶಗಳ ವ್ಯವಸ್ಥೆಯ ಸಹಾಯದಿಂದ ಅಂತರಜಾಲ ವಿಷಯವಸ್ತುಗಳನ್ನು ಶೋಧಿಸಿ ರಾಷ್ಟ್ರದ ಮೌಲ್ಯಗಳ ಪ್ರಕಾರ ಸೂಕ್ತವಲ್ಲದ ಹಾಗೂ ಪ್ರಾಕ್ಸಿ ವ್ಯವಸ್ಥೆಯನ್ನು ತಪ್ಪಿಸಬಲ್ಲ ವಿಧಾನಗಳ ಬಗ್ಗೆ , ವಿಹಾರ, ಪುರುಷ ಸಲಿಂಗಕಾಮ ಮತ್ತು ಸ್ತ್ರೀ ಸಲಿಂಗಕಾಮ ಜಾಲಗಳು, ಅಶ್ಲೀಲಚಿತ್ರಗಳ ಬಗ್ಗೆ ಮಾಹಿತಿ ನೀಡುವ ಜಾಲತಾಣಗಳು, ಬಹಾಯ್‌ ನಂಬಿಕೆಯ ಬಗ್ಗೆಯ ಜಾಲತಾಣಗಳು, ಇಸ್ರೇಲ್‌ ಮೂಲದ ಜಾಲತಾಣಗಳು ಹಾಗೂ UAEಗೆ ಅಪಾಯ ತರಬಹುದಾದ ಜಾಲತಾಣಗಳನ್ನೂ ಕೂಡ ಶೋಧಿಸಿ ತಡೆಯಬಲ್ಲ ವ್ಯವಸ್ಥೆ ಹೊಂದಿದೆ. ಎಮಿರೇಟ್ಸ್‌ ಮೀಡಿಯಾ ಅಂಡ್‌ ಇಂಟರ್ನೆಟ್‌ (ಎಟಿಸಾಲಟ್‌ನ ಒಂದು ಅಂಗ) ಸಂಸ್ಥೆಯ ಅಧ್ಯಯನದ ಪ್ರಕಾರ ೨೦೦೨ರ ಸಾಲಿನ ಹಾಗೆ ಅಂತರಜಾಲದ ಬಳಕೆದಾರರಲ್ಲಿ ೭೬% ಮಂದಿ ಪುರುಷರು. ಅಂತರಜಾಲದ ಬಳಕೆದಾರರಲ್ಲಿ ಸುಮಾರು ೬೦% ಬಳಕೆದಾರರು ಏಷ್ಯನ್ನರು, ೨೫% ಬಳಕೆದಾರರು ಅರಬ್ಬರಾಗಿದ್ದರು. ದುಬೈ ಸಾಂಖ್ಯಿಕ ಸಹಿಗಳು ಮತ್ತು ಎಲೆಕ್ಟ್ರಾನಿಕ್‌ ರೆಜಿಸ್ಟರ್‌ಗಳ ಬಗೆಗಿನ ಎಲೆಕ್ಟ್ರಾನಿಕ್‌ ಟ್ರಾನ್ಸಾಕ್ಷನ್ಸ್‌ ಅಂಡ್‌ ಕಾಮರ್ಸ್‌ ಲಾ ಎಂಬ ಕಾನೂನನ್ನು ೨೦೦೨ರಲ್ಲಿ ಜಾರಿಗೆ ತಂದಿತು. ಅಂತರಜಾಲ ಸೇವಾದಾರರು (ISPಗಳು) ತಾವು ಸೇವೆ ನೀಡುವ ಸಮಯದಲ್ಲಿ ದೊರಕಿದ ಮಾಹಿತಿಯನ್ನು ಬಹಿರಂಗ ಮಾಡುವುದನ್ನು ಇದು ನಿಷೇಧಿಸುತ್ತದೆ. ದಂಡ ಸಂಹಿತೆಯು ಕೆಲ ನಿಬಂಧನೆಗಳನ್ನು ಕೂಡಾ ವಿಧಿಸಿದೆ; ಆದಾಗ್ಯೂ, ಸೈಬರ್‌ ಅಪರಾಧ ಅಥವಾ ದತ್ತ ಸಂರಕ್ಷಣೆಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.[೯೩]

ಜಂಟಿ/ಜೋಡಿ/ಸಹೋದರಿ ನಗರಗಳು

ಬದಲಾಯಿಸಿ

ದುಬೈ ನಗರವು ೩೧ ಸಹೋದರಿ/ಜೋಡಿ ನಗರಗಳನ್ನು ಹೊಂದಿದ್ದು, ಅವುಗಳಲ್ಲಿ ಬಹಳಷ್ಟರ ಜೊತೆಗೆ ಜೋಡಿಸುವಿಕೆಯ ಒಪ್ಪಂದಗಳನ್ನು ೨೦೦೨ರ ನಂತರ ಕೈಗೊಳ್ಳಲಾಗಿದೆ.[೯೪]

ಇದನ್ನೂ ನೋಡಿರಿ

ಬದಲಾಯಿಸಿ

ಕನಸುಗಳ ನಗರದಲ್ಲಿ ಮೂರು ದಿನ ಕಂಡದ್ದು;ಪದ್ಮರಾಜ ದಂಡಾವತಿ [೬] Archived 2016-10-02 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು

ಬದಲಾಯಿಸಿ
 1. "UAE Constitution". Helplinelaw.com. Archived from the original on 2013-02-17. Retrieved 2008-07-21.
 2. Area of "Dubai emirate", includes artificial islands.
 3. "Dubai: Profile of geographical entity including name variants. World Gazetteer.
 4. "Dubai Metropolitan Statistical Area". Archived from the original on 2018-12-24. Retrieved 2009-04-07.
 5. "United Arab Emirates: metropolitan areas". World-gazetteer.com. Archived from the original on 2012-12-04. Retrieved 2009-07-31.
 6. ದ ಗವರ್ನಮೆಂಟ್‌ ಅಂಡ್‌ ಪಾಲಿಟಿಕ್ಸ್‌‌ ಆಫ್‌ ದ ಮಿಡಲ್‌ ಈಸ್ಟ್‌ ಅಂಡ್‌ ನಾರ್ಥ್‌ ಆಫ್ರಿಕಾ. D ಲಾಂಗ್‌, B ರೇಚ್‌. p.೧೫೭
 7. ೭.೦ ೭.೧ ಆನ್‌ ಇಕನಾಮಿಕ್‌ ಪ್ರೊಫೈಲ್‌ ಆಫ್‌ ದುಬೈ ದುಬೈ ಹೆಲ್ತ್‌ಕೇರ್‌ ಸಿಟಿ. ೨೦೦೦
 8. ೮.೦ ೮.೧ "ದುಬೈ - ಅವಲೋಕನ:", USAToday.com. ೨೮ ಜುಲೈ ೨೦೦೮ರಂದು ಪರಿಷ್ಕರಿಸಲಾಗಿದೆ.
 9. ೯.೦ ೯.೧ ದುಬೈ ಆರ್ಥಿಕತೆಯು 2015ರ ವೇಳೆಗೆ ತ್ರಿಗುಣವಾಗಲಿದೆ ArabianBusiness.com (೩ ಫೆಬ್ರವರಿ ೨೦೦೭) ಮರುಕಳಿಕೆಯ ದಿನಾಂಕ ೧೫ ಅಕ್ಟೋಬರ್‌ ೨೦೦೭.
 10. ೧೦.೦ ೧೦.೧ "Dubai diversifies out of oil". AMEInfo. 2005-09-07. Retrieved 2008-08-12. {{cite web}}: Italic or bold markup not allowed in: |publisher= (help)
 11. "Dubai map with upcoming freehold developments". Startpagedubai.com. Retrieved 2009-07-31.
 12. ೨೦೦೮ರ ಜಾಗತಿಕ ನಗರಗಳ ಸೂಚಿ [೧] Archived 2010-01-10 ವೇಬ್ಯಾಕ್ ಮೆಷಿನ್ ನಲ್ಲಿ.. ವಿದೇಶೀ ಕಾರ್ಯನೀತಿ ಮರುಕಳಿಕೆಯ ದಿನಾಂಕ ಜುಲೈ ೧೧, ೨೦೦೯.
 13. ಮೈಕ್‌ ಡೇವಿಸ್‌‌ (೨೦೦೬) ದುಬೈನಲ್ಲಿನ ಭಯ ಮತ್ತು ಹಣ, ನ್ಯೂ ಲೆಫ್ಟ್‌ ರಿವ್ಯೂ ೪೧, pp. ೪೭-೬೮
 14. ದುಬೈ ಹಣಕಾಸು ಅಧ್ಯಕ್ಷರ ಬದಲಾವಣೆ, ಮಿರ್ನಾ ಸ್ಲೇಮನ್‌‌ ಮತ್ತು ಮಾರಿಯಾ ಅಬಿ-ಹಬೀಬ್‌, ೨೦೦೯, WSJ
 15. ದುಬೈ, ಅಬು ದಾಭಿ ಮತ್ತು ಇತರೆ ನಗರಗಳು ತಮ್ಮ ಹೆಸರನ್ನು ಹೇಗೆ ಪಡೆದುಕೊಂಡವು? Archived 2009-08-25 ವೇಬ್ಯಾಕ್ ಮೆಷಿನ್ ನಲ್ಲಿ.ಎಕ್ಸ್‌ಪರ್ಟ್ಸ್‌ ರಿವೀಲ್‌ ಆಲ್‌ Archived 2009-08-25 ವೇಬ್ಯಾಕ್ ಮೆಷಿನ್ ನಲ್ಲಿ.. UAEInteract.com. ೧೦ ಮಾರ್ಚ್‌ ೨೦೦೭
 16. ೧೬.೦ ೧೬.೧ ೧೬.೨ "030_hist_trad06_amend" (PDF). Archived from the original (PDF) on 2009-03-26. Retrieved 2009-07-31.
 17. "CHAPTER 2: HISTORY AND BACKGROUND OF THE UAE" (PDF). Archived from the original (PDF) on 2006-09-25. Retrieved 2009-07-31.
 18. ೧೮.೦ ೧೮.೧ ದ ಕಮಿಂಗ್‌ ಆಫ್ ಇಸ್ಲಾಂ ಅಂಡ್‌ ದ ಇಸ್ಲಾಮಿಕ್‌ ಪೀರಿಯಡ್‌ ಇನ್‌ ದ UAE Archived 2013-01-16 ವೇಬ್ಯಾಕ್ ಮೆಷಿನ್ ನಲ್ಲಿ.. ಕಿಂಗ್‌, ಜೆಫ್ರೀ R.
 19. ೧೯.೦ ೧೯.೧ ಇಕನಾಮಿಕ್‌ ಅಂಡ್‌ ಎನ್‌ವಿರಾನ್‌ಮೆಂಟಲ್‌ ಇಂಪ್ಯಾಕ್ಟ್ಸ್‌‌ ಆಫ್‌ ಟೂರಿಸಂ ಆನ್‌ ದುಬೈ ಅಂಡ್‌ ಹವಾಯ್‌‌. ಮೆಕ್‌ಈಚರ್ನ್‌, ನಾಡೆಯೂ, et al.
 20. ೨೦.೦ ೨೦.೧ ೨೦.೨ "United Arab Emirates" (PDF). Retrieved 2009-07-31.
 21. ೨೧.೦ ೨೧.೧ "Modernity and tradition in Dubai architecture. Karim, Luiza". Alshindagah.com. Retrieved 2009-07-31.
 22. ೨೨.೦ ೨೨.೧ ಡೇವಿಡ್‌ಸನ್‌, ಕ್ರಿಸ್ಟೋಫರ್‌, ದ ಎಮಿರೇಟ್ಸ್‌ ಆಫ್‌ ಅಬು ಧಾಬಿ ಅಂಡ್‌ ದುಬೈ: ಕಾಂಟ್ರಾಸ್ಟಿಂಗ್‌ ರೋಲ್ಸ್‌ ಇನ್‌ ದ ಇಂಟರ್‌ನ್ಯಾಷನಲ್‌ ಸಿಸ್ಟಂ . ಮಾರ್ಚ್‌ ೧೯೮೩.
 23. [36]
 24. ದ UAE: ಇಂಟರ್ನಲ್‌ ಬೌಂಡರೀಸ್‌ ಅಂಡ್‌ ದ ಬೌಂಡರಿ ವಿತ್‌ ಓಮನ್‌ Archived 2009-09-18 ವೇಬ್ಯಾಕ್ ಮೆಷಿನ್ ನಲ್ಲಿ.. ರಕ್ಷಿತ ಆವೃತ್ತಿಗಳು. ವಾಕರ್‌‌, J.
 25. ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾ. ಷೋಫೀಲ್ಡ್‌, C. p ೧೭೫
 26. ದುಬೈ. ಕಾರ್ಟರ್‌, T ಮತ್ತು ಡನ್ಸ್‌ಟನ್‌, L. ಲೋನ್ಲಿ ಪ್ಲಾನೆಟ್‌ ಪಬ್ಲಿಕೇಷನ್ಸ್‌
 27. ದುಬೈ ಸಿಟಿ. ಮೆಲಾಮಿಡ್‌‌, ಅಲೆಕ್ಸಾಂಡರ್‌. Jul ೧೯೮೯
 28. ೨೮.೦ ೨೮.೧ "Historic population statistics" (PDF). Archived from the original (PDF) on 2009-03-26. Retrieved 2009-07-31.
 29. "ಆರು ಪರ್ಷಿಯನ್‌ ಕೊಲ್ಲಿ ಎಮಿರೇಟ್‌ಗಳಿಂದ ಒಕ್ಕೂಟಕ್ಕೆ ಒಪ್ಪಿಗೆ". ನ್ಯೂ ಯಾರ್ಕ್‌ ಟೈಮ್ಸ್ Jul ೧೯, ೧೯೭೧. pg. [4];
 30. "ಯುದ್ಧದ ಆಘಾತದಿಂದ ಚೇತರಿಸಿಕೊಳ್ಳುವ ಸೂಚನೆ ನೀಡುತ್ತಿರುವ ಬೇರಟ್‌". ನ್ಯೂ ಯಾರ್ಕ್‌ ಟೈಮ್ಸ್ ೨೬ ಮೇ ೧೯೭೭. pg.೨
 31. [೨]. UAEFreeZones.com.
 32. ೩೨.೦ ೩೨.೧ "Microsoft Word - DUBAI FOCUS.doc" (PDF). Archived from the original (PDF) on 2009-09-23. Retrieved 2009-07-31.
 33. ತನ್ನ ಅತ್ಯದ್ಭುತ ಬೆಳವಣಿಗೆಯಿಂದ ಹಣದುಬ್ಬರ ದರದ ಏರಿಕೆಯ ಭೀತಿ ಎದುರಿಸುತ್ತಿರುವ ದುಬೈ Archived 2009-07-29 ವೇಬ್ಯಾಕ್ ಮೆಷಿನ್ ನಲ್ಲಿ.. ಕುವೈತ್‌ ಟೈಮ್ಸ್‌. Mar. ೮, ೨೦೦೭
 34. UAEನಲ್ಲಿನ ಪರಿಸರದ ಅಭಿವೃದ್ಧಿ ಹಾಗೂ ರಕ್ಷಣೆ Archived 2016-12-20 ವೇಬ್ಯಾಕ್ ಮೆಷಿನ್ ನಲ್ಲಿ.. ಅಸ್ಪಿನಲ್‌, ಸಿಮನ್‌
 35. ೩೫.೦ ೩೫.೧ ದುಬೈ ನಗರಕ್ಕೆ ಇರುವ ಭೂಕಂಪದ ಅಪಾಯ' Archived 2010-02-15 ವೇಬ್ಯಾಕ್ ಮೆಷಿನ್ ನಲ್ಲಿ. ಲಂಡನ್ ನಗರಕ್ಕಿಂತ ಅಲ್ಪ ಪ್ರಮಾಣದ್ದು‌‌']. UAEInteract.com
 36. "Climate". Dubai Meteorological Office. Retrieved 2008-12-20.
 37. "Dubai, Emirates". Climatebase.ru. Retrieved 10 February 2013.
 38. "Climate Normals for Dubai". National Oceanic and Atmospheric Administration. Retrieved 10 February 2013.
 39. ಕಾರ್ಯಾಂಗ ಮತ್ತು ಶಾಸಕಾಂಗ ವಿಭಾಗಗಳು. US ಲೈಬ್ರರಿ ಆಫ್‌ ಕಾಂಗ್ರೆಸ್‌‌
 40. ಆಡಳಿತ ವ್ಯವಸ್ಥಾ ಮಾದರಿ . ದುಬೈ ಮುನಿಸಿಪಾಲಿಟಿ
 41. ದ UAE ಕೋರ್ಟ್‌ ಸಿಸ್ಟಂ Archived 2011-09-07 ವೇಬ್ಯಾಕ್ ಮೆಷಿನ್ ನಲ್ಲಿ.. ಯುನೈಟೆಡ್‌ ಸ್ಟೇಟ್ಸ್‌ನ ರಾಯಭಾರಿ ಕಛೇರಿ.
 42. Wheeler, Julia (2008-10-13). "Raw sewage threat to booming Dubai". BBC News. Retrieved 2009-07-31.
 43. "Human Rights Watch - Building Towers, Cheating Workers: Exploitation of Migrant Construction Workers in the United Arab Emirates". Hrw.org. 2006-11-11. Archived from the original on 2014-10-06. Retrieved 2009-07-31.
 44. "Human Rights Watch - Building Towers, Cheating Workers: Exploitation of Migrant Construction Workers in the United Arab Emirates - PDF" (PDF). Retrieved 2009-07-31.
 45. "UAE to Allow Construction Unions". BBC News. 2006-03-30. Retrieved 2009-07-31.
 46. "Dubai Fire Investigation Launched". BBC News. 2007-01-19. Retrieved 2009-07-31.
 47. ಕಾರ್ಮಿಕರ ವಿಪ್ಲವದಿಂದ ಕುಸಿತ ಕಂಡ ಬುರ್ಜ್‌‌ ದುಬೈ ನಿರ್ಮಾಣ ಕಾಮಗಾರಿ‌‌‌ Archived 2014-11-29 ವೇಬ್ಯಾಕ್ ಮೆಷಿನ್ ನಲ್ಲಿ. ಖಲೀಜ್‌ ಟೈಮ್ಸ್‌‌ (AP ವರದಿ), ೨೨ ಮಾರ್ಚ್‌ ೨೦೦೬
 48. "ಪ್ರತಿಭಟನೆ ನಡೆಸಿದ ಬುರ್ಜ್‌‌ ದುಬೈ ಕಾರ್ಮಿಕರ ವಿರುದ್ಧ ದಾವೆ ಹೂಡುವ ಸಾಧ್ಯತೆ ಇದೆ" Archived 2013-08-16 ವೇಬ್ಯಾಕ್ ಮೆಷಿನ್ ನಲ್ಲಿ. ಖಲೀಜ್‌ ಟೈಮ್ಸ್‌‌, ೨೪ ಮಾರ್ಚ್‌ ೨೦೦೬
 49. LABOUR IN THE UAE Archived 2008-02-17 ವೇಬ್ಯಾಕ್ ಮೆಷಿನ್ ನಲ್ಲಿ. UAEನ ಕಾರ್ಮಿಕ ಕಾನೂನುಗಳ ಬಗೆಗಿನ ಗಲ್ಫ್‌ ನ್ಯೂಸ್‌ ಪತ್ರಿಕೆಯ ಲೇಖನಗಳು, ಪ್ರತಿಭಟನೆಗಳು, etc
 50. ""The dark side of Dubai"". Independent.co.uk. Retrieved 2009-07-31.
 51. ಮಿಮಿ ಚಕರೋವಾ. ದುಬೈ: ನೈಟ್‌ ಸೀಕ್ರೆಟ್ಸ್‌, PBS ಫ್ರಂಟ್‌ಲೈನ್‌ , ೧೩ ಸೆಪ್ಟೆಂಬರ್‌ ೨೦೦೭
 52. ನ್ಯೂಯಾರ್ಕ್‌ ಟೈಮ್ಸ್‌ - ಹತೋಟಿಗೆ ಬಾರದ ವಿದೇಶಿ ಕಾರ್ಮಿಕರ ನಡತೆಯಿಂದ ಭೀತಿಗೊಂಡ ದುಬೈ ಸುಧಾರಣೆಗಳೆಡೆ ಕಣ್ಣು ಹಾಯಿಸುತ್ತಿದೆ
 53. "ಮಿಡಲ್‌ ಈಸ್ಟ್‌ ಟೈಮ್ಸ್‌ - ದುಬೈನಲ್ಲಿನ ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ಮುಷ್ಕರದ ವಿಕೋಪ". Archived from the original on 2009-02-18. Retrieved 2009-12-28.
 54. ೫೪.೦ ೫೪.೧ ದುಬೈ ಇನ್‌ ಫಿಗರ್ಸ್ 2006.ಗವರ್ನಮೆಂಟ್‌ ಆಫ್‌ ದುಬೈ.ಸ್ಟ್ಯಾಟಿಸ್ಟಿಕಲ್‌ ಸೆಂಟರ್‌[ಮಡಿದ ಕೊಂಡಿ]
 55. "Cost of living — The world's most expensive cities". City Mayors.
 56. ೫೬.೦ ೫೬.೧ "ಕಂಟ್ರಿ ಅಂಡ್‌ ಮೆಟ್ರೋಪಾಲಿಟನ್‌ ಸ್ಟಾಟ್ಸ್‌ ಇನ್‌ ಬ್ರೀಫ್‌. MPI ಡಾಟಾ ಹಬ್‌
 57. "ಯಂಗ್‌ ಇರಾನಿಯನ್ಸ್‌‌ ಫಾಲೋ ಡ್ರೀಮ್ಸ್‌ ಟು ದುಬೈ"ನ್ಯೂಯಾರ್ಕ್‌‌ ಟೈಮ್ಸ್‌‌, ಲೇ: HASSAN M. FATTAH. ಪ್ರಕಟಣೆ : ೪ ಡಿಸೆಂಬರ್‌ ೨೦೦೫
 58. "ದ ಚೇಂಜಿಂಗ್‌ ಡೆಮೋಗ್ರಫೀಸ್‌ ಆಫ್‌ ದ UAE" (PDF). Archived from the original (PDF) on 2007-08-09. Retrieved 2009-12-28.
 59. ೫೯.೦ ೫೯.೧ ಬೇಸಿಕ್‌ ವೈಟಲ್‌ ಸ್ಟಾಟಿಸ್ಟಿಕಲ್‌ ಇಂಡಿಕೇಟರ್ಸ್‌ - ಎಮಿರೇಟ್‌‌ ಆಫ್‌ ದುಬೈ[ಮಡಿದ ಕೊಂಡಿ]
 60. ೬೦.೦ ೬೦.೧ ಕಂಟ್ರಿ ಪ್ರೊಫೈಲ್‌: ಯುನೈಟೆಡ್‌ ಅರಬ್‌ ಎಮಿರೇಟ್ಸ್‌‌‌ (UAE). ಯುನೈಟೆಡ್‌ ಸ್ಟೇಟ್ಸ್‌ ಲೈಬ್ರರಿ ಆಫ್‌ ಕಾಂಗ್ರೆಸ್‌‌
 61. "International Religious Freedom Report 2007 - United Arab Emirates". State.gov. Retrieved 2009-07-31.
 62. ಉಲ್ಲೇಖ ದೋಷ: Invalid <ref> tag; no text was provided for refs named oilrev
 63. ""UAE Oil and Gas"". Uae.gov.ae. 1999-06-19. Archived from the original on 2008-07-05. Retrieved 2009-07-31.
 64. ಪ್ರಾಸ್ಪೆಕ್ಟ್ಸ್‌‌ ಆಫ್‌ ದುಬೈ ಇಕನಾಮಿಕ್‌ ಸೆಕ್ಟರ್ಸ್‌‌ Archived 2008-02-16 ವೇಬ್ಯಾಕ್ ಮೆಷಿನ್ ನಲ್ಲಿ.. ದುಬೈ ಚೇಂಬರ್‌ ಆಫ್‌ ಕಾಮರ್ಸ್. ೨೦೦೩
 65. "Citgy Mayors: World's best financial cities". Citymayors.com. 2008-06-10. Retrieved 2009-08-26.
 66. "World's richest cities by purchasing power". City Mayors. Retrieved 2009-08-26.
 67. "MW-IndexRpt-CoComm FA.indd" (PDF). Retrieved 2008-10-10.
 68. "ದುಬಾಯ್‌‌" Archived 2013-09-03 ವೇಬ್ಯಾಕ್ ಮೆಷಿನ್ ನಲ್ಲಿ.. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ. ೨೦೦೮
 69. ವಿಶ್ವ ಬಂದರುಗಳ ಶ್ರೇಯಾಂಕಗಳು - 2006. ಅಮೇರಿಕನ್‌ ಅಸೋಸಿಯೇಷನ್‌ ಆಫ್‌ ಪೋರ್ಟ್ ಅಥಾರಿಟೀಸ್‌. ೨೦೦೬
 70. "Dubai's Palm Jumeirah sees prices fall as crunch moves in". The Daily Telegraph. 2008-11-20. Retrieved 2008-11-20. {{cite web}}: Italic or bold markup not allowed in: |publisher= (help)
 71. "World's Tallest Hotel Opens Its Doors". BBC News. 1999-12-01. Retrieved 2009-07-31.
 72. "Job losses hasten property decline in Dubai but medium-long term outlook upbeat | Middle East | News". Propertywire.com. 2008-12-03. Retrieved 2009-07-14.
 73. "ದುಬೈ ಕುಸಿತ ಕಾಣುತ್ತಿದ್ದ ಹಾಗೆಯೇ ದೇಶ ತೊರೆಯುತ್ತಿರುವ ವಜಾಗೊಂಡ ವಿದೇಶಿ ಕಾರ್ಮಿಕರು" ರಾಬರ್ಟ್‌ F. ವರ್ತ್‌ರಿಂದ ದ ನ್ಯೂಯಾರ್ಕ್‌ ಟೈಮ್ಸ್‌ ನಲ್ಲಿನ ಲೇಖನ ಫೆಬ್ರವರಿ ೧೧, ೨೦೦೯
 74. "Dubai Economy | The Economy of Dubai". Dubai-livethedream.com. Archived from the original on 2009-08-27. Retrieved 2009-08-26.
 75. "Gulfnews: Dubai traffic woes inflict losses of Dh4.6b a year". Archive.gulfnews.com. Archived from the original on 2009-08-25. Retrieved 2009-07-14.
 76. "Dubai International - world's fastest growing airport in 2007". AMEInfo. 2008-01-09. Retrieved 2008-01-10. {{cite web}}: Italic or bold markup not allowed in: |publisher= (help)
 77. DIA ಮತ್ತು ನವೀನ ದೊಡ್ಡ ವಿಮಾನ ನಿಲ್ದಾಣಗಳ ನಡುವೆ ಕಾರಿಡಾರ್‌ ನಿರ್ಮಿಸಲು ಯೋಜಿಸಿರುವ ಎಮಿರೇಟ್‌ಗಳು Archived 2008-10-25 ವೇಬ್ಯಾಕ್ ಮೆಷಿನ್ ನಲ್ಲಿ. ಗಲ್ಫ್‌ ನ್ಯೂಸ್‌ (೨೭ ಅಕ್ಟೋಬರ್‌ ೨೦೦೭). ಮರುಕಳಿಕೆಯ ದಿನಾಂಕ ೩ ನವೆಂಬರ್‌ ೨೦೦೭.
 78. "Dubai buses may be privatised - The National Newspaper". Thenational.ae. 2009-06-08. Archived from the original on 2009-07-19. Retrieved 2009-07-14.
 79. Dhs12.45 ಶತಕೋಟಿ ಮೌಲ್ಯದ ಮೆಟ್ರೋ ಗುತ್ತಿಗೆಗೆ ಸಹಿ ಹಾಕಿದ ದುಬೈ ಮುನಿಸಿಪಾಲಿಟಿ‌ Archived 2007-05-09 ವೇಬ್ಯಾಕ್ ಮೆಷಿನ್ ನಲ್ಲಿ.. ದುಬೈ ಮೆಟ್ರೋ. ೨೯ ಮೇ ೨೦೦೫
 80. "Will metro change Dubai car culture?". BBC News. 2009-09-11. {{cite web}}: Check date values in: |date= (help); Italic or bold markup not allowed in: |publisher= (help)
 81. "Dubai Overtakes Cairo in Traffic Congestion - GulfTalent.com". GulfTalent.com<!. 2007-02-07. Archived from the original on 2009-01-16. Retrieved 2009-07-14.
 82. ದ ಡಾರ್ಕ್‌ ಸೈಡ್‌ ಆಫ್ ದುಬೈ, ಜೋಹಾನ್ನ್‌ ಹರಿ, ದ ಇಂಡಿಪೆಂಡೆಂಟ್‌, ೭ ಏಪ್ರಿಲ್‌ ೨೦೦೯.
 83. UAEನಲ್ಲಿ ಪ್ರವಾಸ ಹಾಗೂ ಖರೀದಿ : ಹೆಚ್ಚುವರಿ ದಿನ ವ್ಯಯಿಸುವುದು" Archived 2009-03-26 ವೇಬ್ಯಾಕ್ ಮೆಷಿನ್ ನಲ್ಲಿ.. ಎಡ್‌ವರ್ಡ್ಸ್‌ ಇಕನಾಮಿಕ್‌ ರಿಸರ್ಚ್‌ FZ
 84. ಫುಡ್‌ ಅಂಡ್‌ ಅಗ್ರಿಕಲ್ಚರಲ್‌ ಇಂಪೋರ್ಟ್‌ ರೆಗ್ಯುಲೇಷನ್ಸ್‌ ಅಂಡ್‌ ಸ್ಟ್ಯಾಂಡರ್ಡ್ಸ್‌ Archived 2008-02-26 ವೇಬ್ಯಾಕ್ ಮೆಷಿನ್ ನಲ್ಲಿ.. GAIN ವರದಿ . ಯುನೈಟೆಡ್‌ ಸ್ಟೇಟ್ಸ್‌ ಕೃಷಿ ಸಚಿವಾಲಯ
 85. ವೆಲ್‌ಕಂ ಟು ದುಬೈ ನ್ಯೂಜಿಲೆಂಡ್‌ ಟ್ರೇಡ್‌ ಅಂಡ್‌ ಎಂಟರ್‌ಪ್ರೈಸ್‌
 86. ಗೆರಾಲ್ಡೀನ್‌ ಬೆಡೆಲ್ಸ್‌ ನಾವೆಲ್‌ ಬ್ಯಾನ್‌ಡ್‌ ಇನ್‌ ದುಬೈ ಬಿಕಾಸ್‌ ಆಫ್‌ ಗೇ ಕ್ಯಾರಕ್ಟರ್‌ [ಮಡಿದ ಕೊಂಡಿ]
 87. ಮರಳುಗಾಡಿನಲ್ಲಿ ಅರಳುತ್ತಿರುವ ಕ್ಲಬ್‌ಗಳು. ನ್ಯೂ ಯಾರ್ಕ್‌ ಟೈಮ್ಸ್ ೯ ಡಿಸೆಂಬರ್ ೨೦೦೭
 88. ದುಬೈ ಎಜುಕೇಷನ್‌ ಕೌನ್ಸಿಲ್‌ ಸ್ಥಾಪನೆಯ ಕಟ್ಟಳೆ ಹೊರಡಿಸಿದ HH ಷೇಕ್‌ ಮೊಹಮ್ಮದ್‌ Archived 2008-01-10 ವೇಬ್ಯಾಕ್ ಮೆಷಿನ್ ನಲ್ಲಿ., DEC , ೧೪ ಜುಲೈ ೨೦೦೫
 89. KHDA Q&A, KHDA , ೨೦೦೬
 90. ಅರೇಬಿಕ್‌ ಭಾಷೆಯ ಅತಿಹೆಚ್ಚು ಪ್ರಸಾರ ಕಾಣುತ್ತಿರುವ ವೃತ್ತಪತ್ರಿಕೆಗಳು ‌ Archived 2011-06-14 ವೇಬ್ಯಾಕ್ ಮೆಷಿನ್ ನಲ್ಲಿ.. ಕಾರ್ನೆಗಿ ಎಂಡೋಮೆಂಟ್‌ ಫಾರ್‌ ಇಂಟರ್‌ನ್ಯಾಷನಲ್‌ ಪೀಸ್‌. ಅರನ್‌ ರೀಫಾರ್ಮ್‌ ಬುಲೆಟಿನ್‌ , ಡಿಸೆಂಬರ್‌ ೨೦೦೪
 91. ನಾವೇ ಅಗ್ರಸ್ಥಾನದಲ್ಲಿರುವ ವೃತ್ತಪತ್ರಿಕೆ‌. ಗಲ್ಫ್ ನ್ಯೂಸ್‌ ಸೆಪ್ಟೆಂಬರ್ ೨೦೦೬
 92. UAEನಿಕ್‌ ಅಟ್‌ ಎ ಗ್ಲಾನ್ಸ್‌[ಶಾಶ್ವತವಾಗಿ ಮಡಿದ ಕೊಂಡಿ]. ಸುಲ್ತಾನ್‌ ಅಲ್‌ ಷಮ್ಸಿ
 93. ಸೈಲೆನ್ಸ್‌ಡ್‌ - ಯುನೈಟೆಡ್‌ ಅರಬ್‌ ಎಮಿರೇಟ್ಸ್‌‌‌ Archived 2010-06-02 ವೇಬ್ಯಾಕ್ ಮೆಷಿನ್ ನಲ್ಲಿ.. ಪ್ರೈವೆಸಿ ಇಂಟರ್‌ನ್ಯಾಷನಲ್‌.
 94. ಮಹಾನಗರಗಳ ಜೋಡಿಕೆಯ ಒಪ್ಪಂದಗಳು ‌‌ Archived 2013-05-17 ವೇಬ್ಯಾಕ್ ಮೆಷಿನ್ ನಲ್ಲಿ. UAE ಅಧಿಕೃತ ಜಾಲತಾಣ
 95. UAEinteract.com. "Twinning agreement brings a taste of Spain to Dubai UAE - The Official Web Site - News". Uaeinteract.com. Archived from the original on 2013-05-30. Retrieved 2009-07-14.
 96. "Barcelona internacional - Ciutats agermanades" (in Spanish). © 2006-2009 Ajuntament de Barcelona. Archived from the original on 2012-11-27. Retrieved 2009-07-13. {{cite web}}: External link in |publisher= (help)CS1 maint: unrecognized language (link)
 97. UAEinteract.com. "Dubai, Granada discuss cooperation UAE - The Official Web Site - News". Uaeinteract.com. Archived from the original on 2013-05-30. Retrieved 2009-07-14.
 98. UAEinteract.com. "Dubai partners with the U.S. city of Phoenix UAE - The Official Web Site - News". Uaeinteract.com. Archived from the original on 2013-05-30. Retrieved 2009-07-14.
 99. UAEinteract.com. "Los Angeles cultural body takes Dubai as sister city UAE - The Official Web Site - News". Uaeinteract.com. Archived from the original on 2013-05-30. Retrieved 2009-07-14.
 100. UAEinteract.com. "Dubai, Detroit ink sister-city accord UAE - The Official Web Site - News". Uaeinteract.com. Archived from the original on 2013-05-30. Retrieved 2009-07-14.
 101. "Dynamic Busan - City Government - Sister Cities - Dubai". English.busan.go.kr. Retrieved 2009-07-14.

ಹೊರಗಿನ ಕೊಂಡಿಗಳು

ಬದಲಾಯಿಸಿ

25°12′N 55°18′E / 25.2°N 55.3°E / 25.2; 55.3

ಟೆಂಪ್ಲೇಟು:United Arab Emirates

"https://kn.wikipedia.org/w/index.php?title=ದುಬೈ&oldid=1233951" ಇಂದ ಪಡೆಯಲ್ಪಟ್ಟಿದೆ