ಸೌದಿ ಅರೇಬಿಯಾ ಸಾಮ್ರಾಜ್ಯ ಅಥವಾ ಸೌದಿ ಅರಬ್ದೇಶ, ಅಥವಾ ಸರಳವಾಗಿ: ಸೌದಿ ಅರೇಬಿಯೆ (ಅರಬ್ಬಿ: المملكة العربية السعودية ಆಂಗ್ಲ: Kingdom of Saudi Arabia) ― ಪಶ್ಚಿಮ ಏಷ್ಯೆಯ ಒಂದು ದೇಶ. ಇದು ಅರಬೀಯ ಪರ್ಯಾಯದ್ವೀಪದ ಅತಿದೊಡ್ಡ ದೇಶ. ಇದರ ವಾಯವ್ಯದಲ್ಲಿ ಜೋರ್ಡಾನ್, ಉತ್ತರ ಮತ್ತು ಈಶಾನ್ಯದಲ್ಲಿ ಇರಾಕ್, ಪೂರ್ವದಲ್ಲಿ ಕುವೈತ್, ಕತಾರ್, ಬಹ್ರೈನ್ ಮತ್ತು ಯು.ಎ.ಇ., ಆಗ್ನೇಯಕ್ಕೆ ಒಮಾನ್ ಮತ್ತು ದಕ್ಷಿಣದಲ್ಲಿ ಯಮನ್ ದೇಶಗಳಿವೆ. ಸೌದಿ ಅರೇಬಿಯಾದ ಈಶಾನ್ಯದಲ್ಲಿ ಪರ್ಶಿಯನ್ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಕೆಂಪು ಸಮುದ್ರಗಳಿವೆ. ರಾಷ್ಟ್ರದ ವಿಸ್ತೀರ್ಣ ಸುಮಾರು ೨೧.೫೦ ಲಕ್ಷ ಚ.ಕಿ.ಮೀ.ಗಳು ಮತ್ತು ಜನಸಂಖ್ಯೆ ೨.೭೫ ಕೋಟಿ. ದೇಶದ ರಾಜಧಾನಿ ರಿಯಾದ್.

ಸೌದಿ ಅರೇಬಿಯಾ ಸಾಮ್ರಾಜ್ಯ
المملكة العربية السعودية
ಅಲ್-ಮಮ್ಲಕತುಲ್-ಅರಬಿಯ್ಯತು-ಸ್ಸಊದಿಯ್ಯ
Flag of ಸೌದಿ ಅರೇಬಿಯಾ
Flag
Coat of arms of ಸೌದಿ ಅರೇಬಿಯಾ
Coat of arms
Motto: "ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದು ರ್‍ರಸೂಲುಲ್ಲಾಹ್"
(ಅರ್ಥ: ಅಲ್ಲಾಹನ ಹೊರತು ಅನ್ಯ ದೇವರಿಲ್ಲ ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು)
Anthem: النشيد الوطني السعودي
"ಸೌದಿ ಅರೇಬಿಯಾದ ರಾಷ್ಟ್ರಗೀತೆ"
Location of ಸೌದಿ ಅರೇಬಿಯಾ
Capital
and largest city
ರಿಯಾಧ್
Official languagesಅರಬ್ಬಿ
Demonym(s)ಸೌದಿ
Governmentಅರಸೊತ್ತಿಗೆ
• ಅರಸ
ಸಲ್ಮಾನ್ ಬಿನ್ ಅಬ್ದುಲ್ ಅಝೀಝ್
ಮುಹಮ್ಮದ್ ಬಿನ್ ಸಲ್ಮಾನ್
ಸ್ಥಾಪನೆ
• ದಿರ್‌ಇಯ್ಯ ರಾಜ್ಯ
1727
• ನಜ್ದ್ ರಾಜ್ಯ
1824
• ರಿಯಾಧ್ ರಾಜ್ಯ
13 ಜನವರಿ 1902
• ಒಗ್ಗೂಡುವಿಕೆ
23 ಸೆಪ್ಟೆಂಬರ್ 1932
• ವಿಶ್ವಸಂಸ್ಥೆಗೆ ದಾಖಲು
24 ಅಕ್ಟೋಬರ್ 1945
• ಈಗಿನ ಸಂವಿಧಾನ
31 ಜನವರಿ 1992
• Water (%)
0.7
Population
• 2022 estimate
38,401,000 (40ನೆಯದು)
GDP (PPP)2022 estimate
• Total
$2.00 ಟ್ರಿಲಿಯನ್ (17ನೆಯದು)
• Per capita
$55,800 (27ನೆಯದು)
HDI (2021)Increase 0.875
Error: Invalid HDI value · 35ನೆಯದು
Currencyಸೌದಿ ರಿಯಾಲ್ (SR) (SAR)
Time zoneUTC+3 (AST)
Calling code+966
Internet TLD.sa