ಒಸಾಕಾ
ಒಸಾಕಾ ಜಪಾನ್‌ನ ಕಾನ್ಸಾಯಿ ಪ್ರದೇಶದಲ್ಲಿರುವ ನಗರ. ಇದು ಒಸಾಕಾ ಆಡಳಿತ ಪ್ರಾಂತ್ಯದ ರಾಜಧಾನಿ ಮತ್ತು ಕಯಿನ್ಶಿನ್ ಮೆಟ್ರೊಪಾಲಿಟನ್ ಪ್ರದೇಶದ ಅತಿ ದೊಡ್ಡ ಭಾಗವಾಗಿದೆ ಮತ್ತು ೧೯ಮಿಲಿಯನ್ ಜನರು ವಾಸಿಸುವ ಜಪಾನಿನ ಎರಡನೇ ದೊಡ್ಡ ನಗರವಾಗಿದೆ. ಯೊಡೊ ನದಿಯ ಮುಖಜಭೂಮಿಯಲ್ಲಿರುವ ಒಸಾಕ ಕೊಲ್ಲಿಯಲ್ಲಿ ಈ ನಗರವಿದೆ.
ಹೆಸರಿನ ಹಿನ್ನೆಲೆಸಂಪಾದಿಸಿ
"ಒಸಾಕಾ" ಎಂದರೆ ಅಕ್ಷರಶಃ "ದೊಡ್ಡ ಬೆಟ್ಟ" ಅಥವಾ "ದೊಡ್ಡದಾದ ಇಳಿಜಾರು" ಎಂದರ್ಥ.
ಭೂಗೋಳ ಮತ್ತು ಹವಾಗುಣಸಂಪಾದಿಸಿ
ಭೂಗೋಳಸಂಪಾದಿಸಿ
ನಗರದ ಪಶ್ಚಿಮ ಭಾಗ ಒಸಾಕಾ ಕೊಲ್ಲಿಯ ಕಡೆ ತೆರೆದಿರುತ್ತದೆ ಮತ್ತು ಒಸಾಕಾ ಆಡಳಿತ ಪ್ರಾಂತ್ಯದ ಹತ್ತಕ್ಕಿಂತ ಹೆಚ್ಚು ಉಪನಗರಗಳಿಂದ ಸಂಪೂರ್ಣವಾಗಿ ಸುತ್ತುವರೆದಿರುತ್ತದೆ.[೧]
ಹವಾಗುಣಸಂಪಾದಿಸಿ
ಒಸಾಕಾ ಜನವರಿಯ ಚಳಿಗಾಲದಲ್ಲಿ ಸರಾಸರಿ ೯.೩ °ಸೆ ತಾಪಮಾನದಿಂದ(೪೫ °ಫೆ) ಕೂಡಿರುತ್ತದೆ. ಬೇಸಿಗೆಯಲ್ಲಿ ಸರಾಸರಿ ೩೫ °ಸೆ ತಾಪಮಾನ ತಲುಪುತ್ತದೆ. ಚಳಿಗಾಲದಲ್ಲಿ ಅಪರೂಪಕ್ಕೊಮ್ಮೆ ಮಂಜು ಬೀಳುತ್ತದೆ. ಒಸಾಕದಲ್ಲಿ ವಸಂತಕಾಲವು ಸೌಮ್ಯವಾಗಿ ಪ್ರಾರಂಭವಾದರೂ ಕೊನೆಗೊಳ್ಳುವಾಗ ಸಾಕಷ್ಟು ಸೆಕೆ ಮತ್ತು ಆರ್ದ್ರತೆಯನ್ನು ಹೊಂದಿರುತ್ತದೆ.