ಉತ್ತರಾಖಂಡ

ಭಾರತದ ರಾಜ್ಯ

ಉತ್ತರಾಖಂಡ (ಹಿಂದಿಯಲ್ಲಿ: उत्तराखण्ड ಅಥವಾ उत्तराखंड),(ಸಂಸ್ಕೃತದಲ್ಲಿ: उत्तराखण्डराज्यं ಅಥವಾ उत्तराखंडराज्यम्)( ಮೊದಲಿನ ಹೆಸರು ಉತ್ತರಾಂಚಲ ) ರಾಜ್ಯವನ್ನು ಭಾರತ ಗಣರಾಜ್ಯದ ೨೭ನೆಯ ರಾಜ್ಯವನ್ನಾಗಿ ೨೦೦೦ರ ನವೆಂಬರ್ ೯ ರಂದು ರಚಿಸಲಾಯಿತು. ಉತ್ತರಪ್ರದೇಶ ರಾಜ್ಯದ ಹಿಮಾಲಯಪರ್ವತ ಪ್ರಾಂತ್ಯವನ್ನು ಬೇರಾಗಿಸಿ ಉತ್ತರಾಖಂಡ ರಾಜ್ಯವನ್ನು ಅಸ್ತಿತ್ವಕ್ಕೆ ತರಲಾಗಿದೆ. ರಾಜ್ಯದ ಉತ್ತರಕ್ಕೆ ಟಿಬೆಟ್ , ಪೂರ್ವಕ್ಕೆ ನೇಪಾಲ , ದಕ್ಷಿಣ ಹಾಗೂ ಪಶ್ಚಿಮಕ್ಕೆ ಉತ್ತರಪ್ರದೇಶ ರಾಜ್ಯ ಇವೆ. ರಾಜ್ಯದ ಹೆಸರನ್ನು ೨೦೦೭ರ ಜನವರಿಯಲ್ಲಿ ಉತ್ತರಾಂಚಲದಿಂದ ಉತ್ತರಾಖಂಡವೆಂದು ಬದಲಿಸಲಾಯಿತು. ರಾಜ್ಯದ ನೂತನ ರಾಜಧಾನಿಯು ಅಸ್ತಿತ್ವಕ್ಕೆ ಬರುವವರೆಗೆ ಡೆಹ್ರಾಡೂನ್ ನಗರವು ರಾಜಧಾನಿಯ ಸ್ಥಾನದಲ್ಲಿದೆ. ರಾಜ್ಯದ ಸರಿಸುಮಾರು ಮಧ್ಯಭಾಗದಲ್ಲಿರುವ ಗೈರ್ಸನ್ ಪಟ್ಟಣವನ್ನು ಹೊಸ ರಾಜಧಾನಿಯನ್ನಾಗಿ ರೂಪಿಸುವ ಅಭಿಪ್ರಾಯಗಳಿವೆ. ತಾತ್ಕಾಲಿಕ ರಾಜಧಾನಿಯಾಗಿರುವ ಡೆಹ್ರಾಡೂನ್ ನಾಡಿನ ಅತಿ ದೊಡ್ಡ ನಗರ ಮತ್ತು ಮುಖ್ಯ ರೈಲು ನಿಲ್ದಾಣವಾಗಿರುವುದಲ್ಲದೆ ವಾಯು ಸಂಪರ್ಕವನ್ನು ಸಹ ಹೊಂದಿದೆ. ರಾಜ್ಯದ ಉಚ್ಚ ನ್ಯಾಯಾಲಯವು ನೈನಿತಾಲ್ ನಗರದಲ್ಲಿದೆ. ರಾಜ್ಯವು ಗಢ್ವಾಲ್ ಮತ್ತು ಕುಮಾವ್ ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ. ರಾಜ್ಯದ ಜಿಲ್ಲೆಗಳ ಸಂಖ್ಯೆ ೧೩. ಗಢ್ವಾಲ್ ವಿಭಾಗದಲ್ಲಿ ಚಮೋಲಿ , ಡೆಹ್ರಾಡೂನ್ , ಹರಿದ್ವಾರ , ಪೌಡಿ ಗಢ್ವಾಲ್ , ರುದ್ರಪ್ರಯಾಗ , ಟಿಹ್ರಿ ಗಢ್ವಾಲ್ ಮತ್ತು ಉತ್ತರಕಾಶಿ ಜಿಲ್ಲೆಗಳಿವೆ. ಕುಮಾವ್ ವಿಭಾಗದಲ್ಲಿ ಅಲ್ಮೋರಾ , ಬಾಗೇಶ್ವರ್ , ನೈನಿ ತಾಲ್ , ಪಿಥೋರಾಗಢ್ ,ಚಂಪಾವತ್ ಮತ್ತು ಉಧಮ್ ಸಿಂಘ್ ನಗರ ಜಿಲ್ಲೆಗಳಿವೆ. ರಾಜ್ಯದ ಆಡಳಿತ ಭಾಷೆ ಹಿಂದಿ. ಈಚೆಗೆ ರಾಜ್ಯ ಸರಕಾರವು ತೀವ್ರಗತಿಯಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮದ ಲಾಭ ಪಡೆದುಕೊಳ್ಳುವತ್ತ ಕ್ರಮ ಕೈಗೊಂಡಿದೆ. ಇದಲ್ಲದೆ ಉನ್ನತ ತಂತ್ರಜ್ಞಾನದ ಉದ್ದಿಮೆಗಳನ್ನು ಆಕರ್ಷಿಸುವ ದಿಸೆಯಲ್ಲಿ ಪ್ರಯತ್ನಗಳು ಸಾಗಿವೆ. ವಿವಾಸ್ಪದ ಟಿಹ್ರಿ ಯೂ ಸೇರಿದಂತೆ ಹಲವು ಬೃಹತ್ ಆಣೆಕಟ್ಟುಗಳ ನಿರ್ಮಾಣ ಸಾಗಿದೆ. ಪರಿಸರ ಕುರಿತ ಜನಹೋರಾಟಗಳಲ್ಲಿ ಬಲು ಖ್ಯಾತಿ ಗಳಿಸಿದ ಚಿಪ್ಕೋ ಚಳುವಳಿಯ ( ಅಪ್ಪಿಕೋ ಚಳುವಳಿ ) ಉಗಮ ಉತ್ತರಾಖಂಡ ರಾಜ್ಯದಲ್ಲಾಯಿತು. ಉತ್ತರಾಖಂಡದ ವಿಸ್ತೀರ್ಣ ೫೧,೧೨೫ ಚ.ಕಿ.ಮೀ. ಮತ್ತು ಜನಸಂಖ್ಯೆ ಸುಮಾರು ೮೫ ಲಕ್ಷ. ಡೆಹ್ರಾಡೂನ್,ಹರಿದ್ವಾರ ಮತ್ತು ನೈನಿತಾಲ್ ಗಳು ರಾಜ್ಯದ ಮುಖ್ಯ ನಗರಗಳು. ರಾಜ್ಯದ ೯೨.೫೭% ಪ್ರದೇಶ ಪರ್ವತ ಪ್ರಾಂತ್ಯ. ೬೩% ಭಾಗ ಅರಣ್ಯ ಪ್ರದೇಶ. ಉತ್ತರಾಖಂಡದ ಮುಖ್ಯ ಪರ್ವತಶಿಖರಗಳು : ನಂದಾದೇವಿ (೭೮೧೬ಮೀ), ಬದರಿನಾಥ್(೭೧೪೦), ಚೌಖಂಬಾ(೭೧೩೮) ಮತ್ತು ತ್ರಿಶೂಲ(೭೧೨೦) ಶಿಖರಗಳು. ಪ್ರವಾಸೋದ್ಯಮ,ಜಲವಿದ್ಯುತ್,ಹೈನುಗಾರಿಕೆ,ಕೃಷಿ,ತೋಟಗಾರಿಕೆ,ಪುಷ್ಪೋದ್ಯಮಗಳು ನಾಡಿನ ಪ್ರಮುಖ ಆರ್ಥಿಕ ಚಟುವಟಿಕೆಗಳು.

ಉತ್ತರಾಖಂಡ उत्तराखण्ड
उत्तराखंडराज्यम्
Map of India with the location of ಉತ್ತರಾಖಂಡ उत्तराखण्ड उत्तराखंडराज्यम् highlighted.
Map of India with the location of ಉತ್ತರಾಖಂಡ उत्तराखण्ड
उत्तराखंडराज्यम् highlighted.
ರಾಜಧಾನಿ
 - ಸ್ಥಾನ
ಡೆಹ್ರಾಡೂನ್
 - 30.05° N 79.31° E
ಅತಿ ದೊಡ್ಡ ನಗರ ಡೆಹ್ರಾಡೂನ್
ಜನಸಂಖ್ಯೆ (2001)
 - ಸಾಂದ್ರತೆ
8479562 (19ನೆಯದು)
 - 290.98/km²
ವಿಸ್ತೀರ್ಣ
 - ಜಿಲ್ಲೆಗಳು
53,566 km² (18ನೆಯದು)
 - 13
ಸಮಯ ವಲಯ IST (UTC+5:30)
ಸ್ಥಾಪನೆ
 - [[ ಉತ್ತರಾಖಂಡ उत्तराखण्ड
उत्तराखंडराज्यम् ರಾಜ್ಯದ ರಾಜ್ಯಪಾಲರು|ರಾಜ್ಯಪಾಲ]]
 - [[ಉತ್ತರಾಖಂಡ उत्तराखण्ड
उत्तराखंडराज्यम् ರಾಜ್ಯದ ಮುಖ್ಯಮಂತ್ರಿಗಳು|ಮುಖ್ಯ ಮಂತ್ರಿ]]
 - ಶಾಸನಸಭೆ (ಸ್ಥಾನಗಳು)
ನವೆಂಬರ್ ೯ , ೨೦೦೦
 - ಸುದರ್ಶನ್ ಅಗರ್ವಾಲ್
 - ಬಿ.ಸಿ.ಖಂಡೂರಿ
 - ಏಕಸದನ (71)
ಅಧಿಕೃತ ಭಾಷೆ(ಗಳು) ಹಿಂದಿ,

ಸಂಸ್ಕೃತ

Abbreviation (ISO) IN-UL
ಅಂತರ್ಜಾಲ ತಾಣ: ua.nic.in

ಉತ್ತರಾಖಂಡ उत्तराखण्ड
उत्तराखंडराज्यम् ರಾಜ್ಯದ ಮುದ್ರೆ

ಇತಿಹಾಸ

ಬದಲಾಯಿಸಿ

ಉತ್ತರಾಖಂಡವೆಂಬುದು ಪ್ರಾಚೀನಕಾಲದಿಂದಲೂ ಈ ಪರ್ವತಪ್ರಾಂತ್ಯದ ಹೆಸರಾಗಿದೆ. ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ಕೇದಾರಖಂಡ ಮತ್ತು ಮಾನಸಖಂಡಗಳನ್ನು ಒಟ್ಟಾಗಿ ಉತ್ತರಾಖಂಡವೆಂದು ಉಲ್ಲೇಖಿಸಲಾಗಿದೆ. ಉನ್ನತ ಪರ್ವತಗಳು,ಕಣಿವೆಗಳು,ಅನೇಕ ನದಿಗಳು ಮತ್ತು ಹಲವು ಪವಿತ್ರ ಕ್ಷೇತ್ರಗಳನ್ನು ಹೊಂದಿರುವ ನಾಡಾಗಿರುವ ಈ ಪ್ರದೇಶವನ್ನು ದೇವಭೂಮಿ ಎಂದು ಸಹ ಕರೆಯುವರು.ಕೋಲ್ ಎಂಬ ಜನಾಂಗದವರು ಇಲ್ಲಿನ ಮೂಲನಿವಾಸಿಗಳು. ನಂತರ ವೇದಕಾಲದಲ್ಲಿ ಆರ್ಯಸಂತತಿಯ ರಾವತ್ ಬುಡಕಟ್ಟಿನವರು ಇಲ್ಲಿ ನೆಲೆಯಾದರು. ಆ ಕಾಲದಲ್ಲಿ ಈ ಪ್ರಾಂತ್ಯವು ಋಷಿಗಳಿಗೆ ಮತ್ತು ಸಾಧುಗಳಿಗೆ ಮೆಚ್ಚಿನ ತಾಣವಾಗಿತ್ತು. ವ್ಯಾಸಮಹರ್ಷಿಗಳು ಇಲ್ಲಿಯೇ ಮಹಾಭಾರತ ಕಾವ್ಯವನ್ನು ರಚಿಸಿದರೆಂದುನಂಬಲಾಗಿದೆ.ಪಾಂಡವರ ಸ್ವರ್ಗಾರೋಹಣ ಯಾತ್ರೆಯು ಈ ಪ್ರದೇಶದ ಮೂಲಕವೇ ಸಾಗಿತೆಂಬುದು ಇನ್ನೊಂದು ನಂಬಿಕೆ.ಸಾಮ್ರಾಟ ಅಶೋಕ ಚಕ್ರವರ್ತಿಯ ಕಾಲದಲ್ಲಿ ಬೌದ್ಧ ಧರ್ಮದ ಪ್ರಭಾವಕ್ಕೊಳಗಾಗಿದ್ದ ಈ ಪ್ರಾಂತ್ಯವು ಆದಿ ಶಂಕರಾಚಾರ್ಯರ ಕಾಲದಲ್ಲಿ ಮತ್ತೆ ವೈದಿಕ ಧರ್ಮದ ತೆಕ್ಕೆಗೆ ಮರಳಿತು. ಈ ಸಮಯದ ನಂತರ ದೊಡ್ಡ ಪ್ರಮಾಣದಲ್ಲಿ ಮೈದಾನ ಪ್ರದೇಶದ ಜನರು ಇಲ್ಲಿಗೆ ವಲಸೆ ಬರಲಾರಂಭಿಸಿದರು. ಮಧ್ಯಕಾಲದಲ್ಲಿ ಗಢ್ವಾಲ್ ಮತ್ತು ಕುಮಾವ್ ಸಂಸ್ಥಾನಗಳು ಉತ್ತರಾಖಂಡದಲ್ಲಿ ಅಸ್ತಿತ್ವದಲ್ಲಿದುವು. ಕುಮಾವ್ ನಲ್ಲಿ ಚಂದ್ ವಂಶದ ಅರಸರು ಹಾಗೂ ಗಢ್ವಾಲ್ ನಲ್ಲಿ ಪರ್ಮಾರ್ ವಂಶದ ಅರಸರು ರಾಜ್ಯಭಾರ ನಡೆಸುತ್ತಿದ್ದರು. ಪಕ್ಕದ ನೇಪಾಲದ ಗೂರ್ಖಾ ಅರಸರು ೧೭೯೧ರಲ್ಲಿ ಕುಮಾವ್ ರಾಜವನ್ನು ಮತ್ತು ೧೮೦೩ರಲ್ಲಿ ಗಢ್ವಾಲ್ ರಾಜ್ಯವನ್ನು ವಶಪಡಿಸಿಕೊಂಡರು. ೧೮೧೬ರಲ್ಲಿ ಆಂಗ್ಲರೊಡನೆ ನಡೆಸಿದ ಯುದ್ಧದಲ್ಲಿ ಗೂರ್ಖಾ ಅರಸರು ಪರಾಜಯ ಹೊಂದಿದ ಮೇಲೆ ಗಢ್ವಾಲ್ ನ ಪಶ್ಚಿಮ ಭಾಗವು ಟಿಹ್ರಿಯಲ್ಲಿ ಸ್ವತಂತ್ರ ಸಂಸ್ಥಾನವಾದರೆ ಪೂರ್ವದ ಗಢ್ವಾಲ್ ಮತ್ತು ಕುಮಾವ್ ಭಾಗಗಳು ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟವು. ಭಾರತವು ಸ್ವತಂತ್ರವಾದ ನಂತರ ಟಿಹ್ರಿ ಸಂಸ್ಥಾನವನ್ನು ಉತ್ತರಪ್ರದೇಶ ರಾಜ್ಯದಲ್ಲಿ ವಿಲೀನಗೊಳಿಸಲಾಯಿತು. ಇದರಲ್ಲಿ ಅಂದು ಗಢ್ವಾಲ್ ಮತ್ತು ಕುಮಾವ್ ವಿಭಾಗಗಳಿದ್ದುವು. ೯೦ರ ದಶಕದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ತೀವ್ರಗೊಂಡು ೧೯೯೮ರಲ್ಲಿ ಈ ಪ್ರಾಂತ್ಯವನ್ನು ಉತ್ತರಪ್ರದೇಶ ರಾಜ್ಯದಿಂದ ಪ್ರತ್ಯೇಕಿಸಿ ಉತ್ತರಾಂಚಲ ಎಂಬ ಹೆಸರಿನ ಹೊಸ ರಾಜ್ಯವನ್ನಾಗಿ ಅಸ್ತಿತ್ವಕ್ಕೆ ತರಲಾಯಿತು. ಬಹುಸಂಖ್ಯಾಕ ಜನತೆಯ ಅಭಿಪ್ರಾಯಕ್ಕೆ ಮಣಿದು ರಾಜ್ಯದ ಹೆಸರನ್ನು ಡಿಸೆಂಬರ್ ೨೦೦೬ರಲ್ಲಿ ಮಸೂದೆಯೊಂದರ ಮೂಲಕ ಭಾರತದ ಸಂಸತ್ತು ಉತ್ತರಾಖಂಡವೆಂಬುದಾಗಿ ಮಾರ್ಪಡಿಸಿತು.

ರಾಜ್ಯದ ಜನಸಮುದಾಯ

ಬದಲಾಯಿಸಿ

ಉತ್ತರಾಖಂಡದ ಜನಸಮುದಾಯವು ಸಾಮಾನ್ಯವಾಗಿ ತಮ್ಮ ಮೂಲಸ್ಥಳಕ್ಕೆ ಅನುಗುಣವಾಗಿ ಗಢ್ವಾಲಿ ಅಥವಾ ಕುಮಾವಿ ಎಂಬುದಾಗಿ ಕರೆಯಲ್ಪಡುತ್ತಾರೆ. ಒಟ್ಟಾಗಿ ಎಲ್ಲರನ್ನೂ ಪಹಾಡಿ ಎಂದೂ ಕರೆಯಲಾಗುತ್ತದೆ. ಹಿಮಾಲಯದ ತಪ್ಪಲಲ್ಲಿರುವ ತೇರಾಯ್ ಪ್ರದೇಶದಲ್ಲಿ ಪಂಜಾಬಿನಿಂದ ಬಂದ ವಲಸಿಗರೇ ಹೆಚ್ಚು. ಇವರಲ್ಲದೇ ನೇಪಾಲಿಗಳು, ಟಿಬೆ44ಟಿಯನ್ನರು, ಗುಜ್ಜರ್ ಗಳು ಸಹ ಇಲ್ಲಿ ನೆಲೆಯಾಗಿರುವರು. ನಾಡಿನ ಬಹುಸಂಖ್ಯಾಕರು ರಜಪೂತರು.

ಪ್ರಾಕೃತಿಕ ಮೇಲ್ಮೈ

ಬದಲಾಯಿಸಿ

ಉತ್ತರಾಖಂಡವು ಅದ್ಭುತ ಪ್ರಕೃತಿಸೌಂದರ್ಯದ ನಾಡು. ರಾಜ್ಯದ ಉತ್ತರಭಾಗದ ಬಹುತೇಕ ಪ್ರದೇಶವು ಹಿಮಾಲಯಪರ್ವತ ಶ್ರೇಣಿಯ ಒಂದು ಅಂಗ. ಈ ಭಾಗದಲ್ಲಿ ಹಲವು ಉನ್ನತ ಶಿಖರಗಳು ಮತ್ತು ಹಿಮನದಿಗಳು ಇವೆ. ಹಿಮಾಲಯದ ತಪ್ಪಲು ಪ್ರದೇಶವು ಒಂದೊಮ್ಮೆ ಬಲು ದಟ್ಟ ಅರಣ್ಯಪ್ರದೇಶವಾಗಿತ್ತು. ಇಂದು ಮರಮಟ್ಟುಗಳ ಉದ್ಯಮವು ಈ ಅರಣ್ಯಗಳಿಗೆ ದೊಡ್ಡ ಕಂಟಕವಾಗಿದೆ. ಆರಣ್ಯಗಳನ್ನು ಮತ್ತೆ ಅಭಿವೃದ್ಧಿಪಡಿಸುವ ಈಚಿನ ಯತ್ನಗಳಿಂದಾಗಿ ಈ ಭಾಗದಲ್ಲಿ ಮತ್ತೆ ಕಾಡು ಕಾಣತೊಡಗಿದೆ. ಹಿಮಾಲಯದ ಪರಿಸರವ್ಯವಸ್ಥೆಯು ಹಲವು ಬಗೆಯ ವನ್ಯಜೀವಿಗಳಿಗೆ ಆಶ್ರಯವೊದಗಿಸಿದೆ. ಇವುಗಳಲ್ಲಿ ಭಾರಲ್, ಹಿಮಚಿರತೆ, ಚಿರತೆ ಮತ್ತು ಹುಲಿಗಳು ಮುಖ್ಯವಾದವು. ಅನೇಕ ಬಗೆಯ ಅತಿ ಅಪರೂಪದ ಸಸ್ಯಗಳು ಮತ್ತು ಮೂಲಿಕೆಗಳು ಇಲ್ಲಿನ ಪರಿಸರದಲ್ಲಿ ಕಾಣಸಿಗುವುವು. ಭಾರತದ ಎರಡು ಮಹಾನದಿಗಳಾದ ಗಂಗಾ ಮತ್ತು ಯಮುನಾ ಉತ್ತರಾಖಂಡದ ಹಿಮನದಿಗಳಿಂದ ಉಗಮಿಸುವುವು. ಹಿಮಾಲಯಪರ್ವತಶ್ರೇಣಿಯ ದಕ್ಷಿಣ ಇಳಿಜಾರಿನಲ್ಲಿ ಉತ್ತರಾಖಂಡವು ಇದೆ. ಇಲ್ಲಿನ ಹವಾಮಾನ ಮತ್ತು ಸಸ್ಯರಾಜಿಯು ಸ್ಥಳದ ಎತ್ತರಕ್ಕೆ ಅನುಗುಣವಾಗಿ ಭಾರೀ ಬದಲಾವಣೆ ಹೊಂದುತ್ತವೆ. ಅತಿ ಎತ್ತರದ ಪ್ರದೇಶದಲ್ಲಿ ಹಿಮನದಿಗಳು ಇದ್ದರೆ ತಪ್ಪಲಿನಲ್ಲಿ ಉಷ್ಣವಲಯದ ಕಾಡು ಕಂಡುಬರುತ್ತದೆ. ಅತ್ಯುನ್ನತ ಪ್ರದೇಶಗಳು ಹಿಮ ಮತ್ತು ಬರಿದಾದ ಕಲ್ಲುಬಂಡೆಗಳಿಂದ ತುಂಬಿದೆ. ತೇರಾಯ್ ಮತ್ತು ಗಂಗಾಬಯಲಿನ ಮೇಲ್ಭಾಗಗಳಲ್ಲಿ ಸವಾನ್ನಾ ಹುಲ್ಲುಗಾವಲು ಮತ್ತು ಎಲೆ ದುರಿಸುವ ಕಾಡುಗಳು ವ್ಯಾಪಿಸಿವೆ. ನೈನಿತಾಲ್ ಜಿಲ್ಲೆಯ ರಾಮನಗರದಲ್ಲಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ, ಚಮೋಲಿ ಜಿಲ್ಲೆಯಲ್ಲಿ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಮತ್ತು ನಂದಾದೇವಿ ರಾಷ್ಟ್ರೀಯ ಉದ್ಯಾನ, ಉತ್ತರಕಾಶಿ ಜಿಲ್ಲೆಯಲ್ಲಿ ಗೋವಿಂದ್ ಪಶು ರಾಷ್ಟ್ರೀಯ ಉದ್ಯಾನ ಮತ್ತು ಗಂಗೋತ್ರಿ ರಾಷ್ಟ್ರೀಯ ಉದ್ಯಾನ ಹಾಗೂ ಹರಿದ್ವಾರ ಜಿಲ್ಲೆಯಲ್ಲಿ ರಾಜಾಜಿ ರಾಷ್ಟ್ರೀಯ ಉದ್ಯಾನಗಳು ಇವೆ.

ಪ್ರವಾಸೋದ್ಯಮ

ಬದಲಾಯಿಸಿ

ಪ್ರವಾಸೋದ್ಯಮವು ಉತ್ತರಾಖಂಡದ ಪ್ರಮುಖ ಆದಾಯಮೂಲವಾಗಿದೆ. ರಾಜ್ಯವು ವರ್ಷದ ಎಲ್ಲ ಕಾಲದಲ್ಲಿಯೂ ತೀರ್ಥಯಾತ್ರೆ ಕೈಗೊಳ್ಳುವವರು ಯಾ ಇತರ ಪ್ರವಾಸಿಗರು, ಪರ್ವತಾರೋಹಿಗಳು ಮತ್ತು ಚಾರಣಿಗರಿಂದ ತುಂಬಿರುತ್ತದೆ. ನೈನಿತಾಲ್, ಮಸ್ಸೂರಿ, ಅಲ್ಮೋರಾ ಮತ್ತು ರಾಣಿಖೇತ್ ಗಳು ರಾಜ್ಯದ ಪ್ರಮುಖ ಗಿರಿಧಾಮಗಳು. ಹೇಮಕುಂಡದ ಬಳಿಯ ಪುಷ್ಪಕಣಿವೆ ಮತ್ತು ನಂದಾದೇವಿ ರಾಷ್ಟ್ರೀಯ ಉದ್ಯಾನಗಳು ವಿಶ್ವ ಪರಂಪರೆಯ ತಾಣಗಳಾಗಿದ್ದು ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಧಾರ್ಮಿಕ ಕ್ಷೇತ್ರಗಳು

ಬದಲಾಯಿಸಿ

ಹಿಂದೂಧರ್ಮೀಯರು ಅತಿ ಪವಿತ್ರವೆಂದು ಪರಿಗಣಿಸುವ ಕ್ಷೇತ್ರಗಳಲ್ಲಿ ಹಲವು ಉತ್ತರಾಖಂಡದಲ್ಲಿ ಇವೆ. ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ಕ್ಶೇತ್ರಗಳು ಒಟ್ಟಾಗಿ ಚಾರ್ ಧಾಮ್ ಎಂದು ಕರೆಯಲ್ಪಡುತ್ತವೆ. ಹರಿದ್ವಾರ ಮತ್ತು ರಿಷಿಕೇಶಗಳು ಸಹ ಅತಿ ಪಾವನ ಕ್ಷೇತ್ರಗಳೆಂದು ಹೆಸರಾಗಿವೆ. ಹೇಮಕುಂಡ್ ಸಾಹಿಬ್ ಕ್ಷೇತ್ರವು ಸಿಖ್ ಧರ್ಮೀಯರಿಗೆ ಅತಿ ಪ್ರಮುಖ ಪುಣ್ಯಸ್ಥಾನವಾಗಿದೆ. ಟಿಬೆಟಿಯನ್ ಬೌದ್ಧಧರ್ಮವು ಸಹ ಉತ್ತರಾಖಂಡದಲ್ಲಿ ತಕ್ಕಮಟ್ಟಿಗೆ ಆಚರಣೆಯಲ್ಲಿದೆ. ಜಗತ್ತಿನಲ್ಲಿಯೇ ಅತಿ ಎತ್ತರದ್ದೆಂದು ಹೇಳಲಾಗುವ ಬುದ್ಧಸ್ತೂಪವನ್ನೊಳಗೊಂಡಿರುವ ಮಿಂಡ್ರೋಲಿಂಗ್ ಬುದ್ಧವಿಹಾರವನ್ನು ಈಚೆಗೆ ಜೀರ್ಣೋದ್ಧಾರ ಮಾಡಲಾಯಿತು.

ರಾಜಕೀಯ

ಬದಲಾಯಿಸಿ

೨೦೦೯ ರಲ್ಲಿ ಲೋಕ ಸಭೆಗೂ ೨೦೧೭ರಲ್ಲಿ ವಿಧಾನ ಸಭೆಗೂ ಚುನಾವಣೆಗಳು ನೆಡೆದವು ಅದರ ಫಲಿತಾಂಶ :

  • ಉತ್ತರಾಖಂಡ
  • ಮುಖ್ಯ ಮಂತ್ರಿ : ಬಿ. ಸಿ. ಖಂಡೂರಿ 12-03-2007 ರಿಂದ ಭಾರತೀಯ ಜನತಾ ಪಕ್ಷ
  • ೨೦೦೭ ಚುನಾವಣೆ
  • ಉತ್ತರಾಖಂಡ (೭೦)
  • ಕಾಂಗ್ರೆಸ್ ------೨೧,
  • ಬಿಜೆಪಿ --------೩೪;
  • ಬಿಎಸ್ ಪಿ ------೦೮
  • ಯು.ಕೆ.ಕೆ ----- ೦೩ ;
  • ಪಕ್ಷೇತರ / ಇತರೆ ---೦೩.
  • ಒಟ್ಟು ---------೭೦
  • ಉತ್ತರಾಖಂಡ ವಿಧಾನ ಸಬೆ ಚುನಾವಣೆ (ಎಣಿಕೆ 6-3-2012 )
  • ದಿನಾಂಕ ೧೩-೩-೨೦೧೨ ರಿಂದ ಮುಖ್ಯ ಮಂತ್ರಿ : ವಿಜಯ ಬಹುಗುಣ -ಕಾಂಗ್ರೆಸ್
    • ಉತ್ತರಾಖಂಡ ೩೧-೨೦೧೪ ವಿಜಯ ಬಹುಗುಣ ರಾಜೀನಾಮೆ ; ೧-೨-೨೦೧೪ ಹರೀಶ್ ರಾವುತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ. (ಹೈಕಮ್ಯಾಂಡ್ ನಿರ್ಧಾರ)

ಉತ್ತರಾಖಂಡ ಚುನಾವಣೆ ೨೦೧೨

ಬದಲಾಯಿಸಿ
  • (೩೦-೧-೨೦೧೨)- ಮಾರ್ಚಿ

UTTARAKHAND STATE ASSEMBLY

ಸ್ಥಾನ ಪಾರ್ಟಿ(ಉತ್ತರಾಖಂಡ-2012) ನಿಂತ ಸ್ಥಾನ ಗೆಲವು % ಓಟು/2012 % ಓಟು 2007
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 70 32 33.79 33.79
3 ಬಹುಜನ ಸಮಾಜ ಪಾರ್ಟಿ (BSP) 70 3 12.1 9 19
4 ಪಕ್ಷೇತರ -- 3 12.34 --
5 ಉತ್ತರಖಂಡಕ್ರಾಂತಿ ದಳUKD(P) 44 1 1.93 3.18
2 ಭಾರತೀಯ ಜನತಾದಳ (BJP) 70 31 33.13 33.13
- ಒಟ್ಟು - Total 70 -- -- --

ಲೋಕ ಸಭೆ ೨೦೦೯

  • ಕಾಂಗ್ರೆಸ್ ------೫, (43.14% )
  • ಬಿಜೆಪಿ --------೦;( 33.80%)
  • ಬಿಎಸ್ ಪಿ ----- ೦(15.24%)
  • ಒಟ್ಟು --------೫

ಲೋಕ ಸಭೆ ೨೦೧೪ ಬಿಜೆಪಿ.......೫ ಒಟ್ಟು ....೫

ವಿಧಾನಸಭೆ ಉಪಚುನಾವಣೆ ೨೪-೭-೨೦೧೪

ಬದಲಾಯಿಸಿ
  • (ಉತ್ತರಾಂಚಲ ಮರುಚುನಾವಣೆ: ಕಾಂಗ್ರೆಸ್‌ ಸ್ವೀಪ್‌ಏಜೆನ್ಸೀಸ್ | Jul 25, 2014, 04.18PM)
  • ಧಾರ್ಚೂಲಾ ಕ್ಷೇತ್ರದಲ್ಲಿ ಸಿಎಂ ರಾವತ್‌ 20 ಸಾವಿರ ಮತಗಳಿಂದ ಗೆದ್ದರೆ, ದೊಯ್ವಾಲದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಾಸಿಂಗ್‌ ಬಿಸ್ತ್‌(6 ಸಾವಿರ) ಹಾಗೂ ಸೋಮೇಶ್ವರ ಮೀಸಲು ಕ್ಷೇತ್ರದಲ್ಲಿ ರೇಖಾ ಆರ್ಯ(9 ಸಾವಿರ) ಮತಗಳಿಂದ ಗೆಲುವು ದಾಖಲಿಸಿದ್ದಾರೆ ಎಂದು ಉತ್ತರಾಖಂಡ್ ನ ಮುಖ್ಯ ಚುನಾವಣಾ ಅಧಿಕಾರಿ ರಾಧಾ ರಾತುರಿ ಹೇಳಿದ್ಧಾರೆ.
  • ಧಾರ್ಚೂಲಾ ಕ್ಷೇತ್ರದಲ್ಲಿ ರಾವತ್‌ಗೆ 31214 ಮತಗಳು ಬಂದಿದ್ದರೆ ಪ್ರತಿಸ್ಪರ್ಧಿ ಬಿಜೆಪಿಯ ಬಿ.ಡಿ.ಜೋಷಿಗೆ ಸಿಕ್ಕಿದ್ದು 10610 ಮತಗಳು ಮಾತ್ರ. ಅದೇ ವೇಳೆ ದೊಯ್ವಾಲದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಾಸಿಂಗ್‌ ಬಿಸ್ತ್‌ಗೆ 35980 ಹಾಗೂ ಪ್ರತಿಸ್ಪರ್ಧಿ ಬಿಜೆಪಿಯ ತ್ರಿವೇಂದ್ರಸಿಂಗ್‌ ರಾವತ್‌ಗೆ 29465 ಮತಗಳು ಬಂದಿವೆ. ಸೋಮೇಶ್ವರ ಮೀಸಲು ಕ್ಷೇತ್ರದಲ್ಲಿ ರೇಖಾ ಆರ್ಯಗೆ 22996 ಹಾಗೂ ಎದುರಾಳಿ ಬಿಜೆಪಿಯ ಮೋಹನ್‌ರಾಮ್‌ ಆರ್ಯಗೆ 13091 ಮತಗಳು ಸಿಕ್ಕಿವೆ ಎಂದು ರಾಧಾ ರಾತುರಿ ಹೇಳಿದರು.
  • 70 ಸದಸ್ಯರಿರುವ ವಿದಾನ ಸಭೆಯಲ್ಲಿ ಕಾಂಗ್ರೆಸ್‌ ತನ್ನ ಬಲವನ್ನು 32ರಿಂದ 35(+1=36?)ಕ್ಕೇರಿಸಿಕೊಂಡಿದೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯನ್ನು 30ರಿಂದ 28ಕ್ಕೆ ಕುಗ್ಗಿಸಿದೆ

ಇತ್ತೀಚನ ಬೆಳವಣಿಗೆ ೨೬-೩-೨೦೧೬

ಬದಲಾಯಿಸಿ
  • 20-3-2016 ಕಾಂಗ್ರೆಸ್'ನ 9 ಶಾಸಕರು ಬಂಡಾಯವೆದ್ದು ಬಿಜೆಪಿ ಬೆಂಬಲಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಮಾ.28ರ ಒಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂ ಹರೀಶ್ ರಾವತ್ಗೆ ರಾಜ್ಯಪಾಲ ಕೆ.ಕೆ.ಪಾಲ್ ಸೂಚಿಸಿದ್ದಾರೆ. ಅಟಾರ್ನಿ ಜನರಲ್ ಉಮಾಕಾಂತ್ ಉನಿಯಾಲ್ ಮತ್ತು ಬಂಡಾಯ ಸಚಿವ ಹರಕ್ ಸಿಂಗ್ ರಾವತ್ರನ್ನು ಸಿಎಂ ವಜಾಗೊಳಿಸಿದ್ದಾರೆ.[]
  • 27-3-2016 ಮುಖ್ಯಮಂತ್ರಿ ಹರೀಶ್‌ ರಾವತ್ ಅವರು ಸೋಮವಾರ ವಿಶ್ವಾಸಮತ ಯಾಚಿಸುವುದಕ್ಕೂ ಮುನ್ನ ವಿಧಾನಸಭಾ ಸ್ಪೀಕರ್‌ ಗೋವಿಂದ್‌ ಸಿಂಗ್ ಕುಂಜ್ವಾಲ್‌ ಅವರು ಒಂಬತ್ತು ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರು. ರಾಜ್ಯಪಾಲ ಕೆ.ಕೆ.ಪಾಲ್‌ ಅವರು ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ವರದಿ ಸಲ್ಲಿಸಿದ ಆಧಾರದಲ್ಲಿ ಕೇಂದ್ರ ಸಂಪುಟ ಸಭೆ ಸೇರಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಚರ್ಚೆ ನಡೆಸಿದೆ.[]

ದಿ.೨೬-೩-೨೦೧೬ರ ಸದಸ್ಯರ ಬಲಾಬಲ

ಬದಲಾಯಿಸಿ
30-12-2012 ರ ವಿಧಾನ ಸಭೆ ಚುನಾವಣೆ= ಒಟ್ಟು ಸ್ಥಾನಗಳು 70 -
ಕ್ರ.ಸಂ. ಪಕ್ಷದ ಹೆಸರು ಸದಸ್ಯಬಲ ನಾಯಕ
01. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC 36 ಹರೀಶ್ ರಾವತ್
02. ಭಾರತೀಯ ಜನತಾ ಪಕ್ಷ (ಬಿಜೆಪಿ 28 ಅಜಯ್ ಭಟ್
03. ಬಹುಜನ ಸಮಾಜ ಪಕ್ಷ (ಬಿಎಸ್ಪಿ) 02 02 ಹರಿ ದಾಸ್
೦4 ಉತ್ತರಾಖಂಡ್ ಕ್ರಾಂತಿ ದಳ (ಪಿ)(UKD (ಪಿ) 01 ಪ್ರೀತಮ್ ಸಿಂಗ್ ಪನ್ವಾರ್
೦5. ಪಕ್ಷೇತರರು 03 -
೦6. ಒಟ್ಟು 70
07 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC 36 36-9ಬಂಡಾಯ=27+3+2+1(ಇತರೆ) =33
  • ಉತ್ತರಾಖಂಡ್ ರಾಜ್ಯದ ಅಸ್ಥಿರತೆ ಬಗ್ಗೆ ರಾಜ್ಯಪಾಲ ಕೆಕೆ ಪಾಲ್ ಅವರ ವರದಿಗಳನ್ನು ಅನುಸರಿಸಿ, 2016 ಮಾರ್ಚ್ 27,ಭಾನುವಾರ ದಿಂದ ಜಾರಿಗೆ ಬರುವಂತೆ ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿದೆ.[]
  • (ಚುನಾವನೆ ಕಮಿಶನ್-ವದಿ ವಿಜಯ ಕರ್ನಾಟಕ-೨೫-೭-೨೦೧೪)[]

ಹಿಮನದಿ ಸ್ಪೋಟ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯

ಉಲ್ಲೇಖ

ಬದಲಾಯಿಸಿ