ಹಿಮವು ವಾತಾವರಣದಲ್ಲಿ ತೇಲಾಡುತ್ತಿರುವಾಗ ಬೆಳೆಯುವ (ಸಾಮಾನ್ಯವಾಗಿ ಮೋಡಗಳೊಳಗೆ) ಮತ್ತು ನಂತರ ಬೀಳುವ ಪ್ರತ್ಯೇಕ ಮಂಜುಗಡ್ಡೆ ಹರಳುಗಳನ್ನು ಹೊಂದಿರುತ್ತದೆ. ಇವು ನೆಲದ ಮೇಲೆ ಶೇಖರಣೆಯಾಗಿ ಮತ್ತಷ್ಟು ಬದಲಾವಣೆಗಳನ್ನು ಹೊಂದುತ್ತವೆ.[] ಇದು ತನ್ನ ಜೀವನಚಕ್ರದಾದ್ಯಂತ ಘನೀಭವಿಸಿದ ಸ್ಫಟಿಕೀಯ ನೀರನ್ನು ಹೊಂದಿರುತ್ತದೆ. ಸೂಕ್ತ ಪರಿಸ್ಥಿತಿಗಳಲ್ಲಿ ವಾತಾವರಣದಲ್ಲಿ ಮಂಜುಗಡ್ಡೆ ಹರಳುಗಳು ರೂಪಗೊಂಡಾಗ ಆರಂಭವಾಗಿ, ಮಿಲಿಮೀಟರ್ ಗಾತ್ರಕ್ಕೆ ಹೆಚ್ಚಿ, ಮೇಲ್ಮೈಗಳ ಮೇಲೆ ಪಾತವಾಗಿ ಶೇಖರಣೆಯಾಗುತ್ತವೆ. ನಂತರ ಸ್ಥಳದಲ್ಲಿಯೇ ರೂಪಾಂತರಗೊಂಡು ಅಂತಿಮವಾಗಿ ಕರಗುತ್ತವೆ, ಜಾರುತ್ತವೆ ಅಥವಾ ಉತ್ಪತಿಸುತ್ತವೆ. ಹಿಮಬಿರುಗಾಳಿಗಳು ವಾತಾವರಣದ ತೇವ ಹಾಗೂ ತಂಪು ಗಾಳಿಯ ಮೂಲಗಳಿಂದ ಪೂರೈಕೆ ಪಡೆದು ಸಂಘಟಿತಗೊಂಡು ವೃದ್ಧಿಯಾಗುತ್ತವೆ. ಹಿಮದ ಹಲ್ಲೆಗಳು ಅತಿತಂಪಾದ ನೀರಿನ ಹನಿಗಳನ್ನು ಆಕರ್ಷಿಸುವ ಮೂಲಕ ವಾತಾವರಣದಲ್ಲಿನ ಕಣಗಳ ಸುತ್ತ ಬೀಜೀಕರಣಗೊಳ್ಳುತ್ತವೆ. ಈ ಹನಿಗಳು ಷಟ್ಕೋನಾಕಾರದ ಹರಳುಗಳಾಗಿ ಘನೀಭವಿಸುತ್ತವೆ.

ಆಗತಾನೇ ಬಿದ್ದಿರುವ ಹಿಮದ ಹಲ್ಲೆಗಳು

ಉಲ್ಲೇಖಗಳು

ಬದಲಾಯಿಸಿ
  1. Hobbs, Peter V. (2010). Ice Physics. Oxford: Oxford University Press. p. 856. ISBN 978-0199587711.


"https://kn.wikipedia.org/w/index.php?title=ಹಿಮ&oldid=946242" ಇಂದ ಪಡೆಯಲ್ಪಟ್ಟಿದೆ