ಬಾಗೇಶ್ವರ್
ಬಾಗೇಶ್ವರ್ ಭಾರತದ ಉತ್ತರಾಖಂಡ ರಾಜ್ಯದ ಬಾಗೇಶ್ವರ್ ಜಿಲ್ಲೆಯಲ್ಲಿನ ಒಂದು ಪಟ್ಟಣ ಮತ್ತು ಪುರಸಭೆ ಮಂಡಳಿಯಾಗಿದೆ. ಬಾಗೇಶ್ವರ್ ರಮಣೀಯ ಪರಿಸರ, ಹಿಮನದಿಗಳು, ನದಿಗಳು ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇದು ಬಾಗೇಶ್ವರ ಜಿಲ್ಲೆಯ ಆಡಳಿತ ಕೇಂದ್ರವೂ ಆಗಿದೆ.[೧]
ಬಾಗೇಶ್ವರ್ ಟಿಬೆಟ್ ಮತ್ತು ಕುಮಾವ್ಞು ನಡುವಿನ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು ಮತ್ತು ಭೋಟಿಯಾ ವ್ಯಾಪಾರಿಗಳು ಇಲ್ಲಿಗೆ ಆಗಾಗ್ಗೆ ಬಂದು ರತ್ನಗಂಬಳಿಗಳು ಮತ್ತು ಬಾಗೇಶ್ವರ್‌ನ ಇತರ ಸ್ಥಳೀಯ ಉತ್ಪನ್ನಗಳಿಗೆ ಬದಲಾಗಿ ಟಿಬೆಟಿಯನ್ ಸರಕುಗಳು, ಉಣ್ಣೆ, ಉಪ್ಪು ಮತ್ತು ಬೊರಾಕ್ಸ್ ಅನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.[೨]
ನಗರವು ಬಹಳ ಧಾರ್ಮಿಕ, ಐತಿಹಾಸಿಕ ಮತ್ತು ರಾಜಕೀಯ ಮಹತ್ವವನ್ನು ಹೊಂದಿದೆ. ಬಾಗೇಶ್ವರ್‌ವನ್ನು ವಿವಿಧ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಇದನ್ನು ಶಿವನೊಂದಿಗೆ ಸಂಬಂಧಿಸಲಾಗಿದೆ.[೩]
ದೇವಾಲಯಗಳು
ಬದಲಾಯಿಸಿಹಿಂದೂ ಧರ್ಮವು ಬಹುಪಾಲು ಜನರ ಧರ್ಮವಾಗಿರುವುದರಿಂದ ವಿವಿಧ ದೇವಾಲಯಗಳು ಬಾಗೇಶ್ವರ್‌ನಲ್ಲಿವೆ.[೪] ಪ್ರಮುಖವಾದದ್ದವೆಂದರೆ:
- ಬಾಗ್‍ನಾಥ್ ದೇವಸ್ಥಾನ
ಗೋಮತಿ ಮತ್ತು ಸರ್ಜು ನದಿಗಳ ಸಂಗಮದಲ್ಲಿ ಶಂಕುವಿನಾಕಾರದ ಗೋಪುರವಿರುವ ದೊಡ್ಡ ದೇವಾಲಯ ನಿಂತಿದೆ. ಇಲ್ಲಿ ಶಿವನ ಗುಣವಾಚಕವಾದ "ಹುಲಿ ಪ್ರಭು" ಎಂದು ಕರೆಯಲ್ಪಡುವ, ಬಾಗೇಶ್ವರ್ ಅಥವಾ ವ್ಯಾಗ್ರೇಶ್ವರ್‌ನ ದೇಗುಲವಿದೆ. ಈ ದೇವಾಲಯವನ್ನು ಕ್ರಿ.ಶ 1450 ರಲ್ಲಿ ಕುಮಾವ್ಞು ರಾಜ ಲಕ್ಷ್ಮಿ ಚಂದ್ ನಿರ್ಮಿಸಿದನು.[೫]
- ಬೈಜ್‍ನಾಥ್ ದೇವಸ್ಥಾನ
ಬೈಜ್‍ನಾಥ್ ದೇವಾಲಯವು ಗೋಮತಿ ನದಿಯ ಎಡದಂಡೆಯಲ್ಲಿದೆ. ಇದು ಶಿವನ ದೇವಾಲಯವಾಗಿದ್ದು, ಇದನ್ನು ಬ್ರಾಹ್ಮಣ ವಿಧವೆಯೊಬ್ಬಳು ನಿರ್ಮಿಸಿದಳು.[೬]
- ಚಂಡಿಕಾ ದೇವಸ್ಥಾನ
ಚಂಡಿಕಾ ದೇವಿಗೆ ಸಮರ್ಪಿತವಾದ ದೇವಾಲಯವು ಬಾಗೇಶ್ವರ್‌ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. [ ಉಲ್ಲೇಖದ ಅಗತ್ಯವಿದೆ ]
- ಶ್ರೀಹಾರು ದೇವಸ್ಥಾನ
ಮತ್ತೊಂದು ಪ್ರಮುಖ ದೇವಾಲಯವಾದ ಶ್ರೀಹಾರು ದೇವಸ್ಥಾನವು ಬಾಗೇಶ್ವರ್‌ನಿಂದ ಸುಮಾರು 5 ದೂರದಲ್ಲಿದೆ.
- ಗೌರಿ ಉಡಿಯಾರ್
ಇದು ಬಾಗೇಶ್ವರ್‌ನಿಂದ 8 ಕಿ.ಮಿ. ದೂರದಲ್ಲಿ. 20 ಮೀ. x 95 ಮೀ. ಅಳತೆಯ ಒಂದು ದೊಡ್ಡ ಗುಹೆ ಇಲ್ಲಿ ಸ್ಥಿತವಾಗಿದ್ದು ಇದರಲ್ಲಿ ಶಿವನ ವಿಗ್ರಹಗಳಿವೆ.
ಹೊರಗಿನ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Bageshwar PinCode". citypincode.in. Archived from the original on 2015-12-08. Retrieved 2014-03-17.
- ↑ Bageshwar, The Imperial Gazetter of India, 1909
- ↑ "Uttarayani fest to bring Kumaon, Garhwal together". ದಿ ಟೈಮ್ಸ್ ಆಫ್ ಇಂಡಿಯಾ. Almora. TNN. 3 January 2015. Retrieved 7 July 2017.
- ↑ Indusnettechnologies, Goutam Pal, Dipak K S, SWD. "Temples: District of Bageshwar, Uttarakhand, India". bageshwar.nic.in. Archived from the original on 20 July 2016. Retrieved 5 August 2016.
{{cite web}}
: CS1 maint: multiple names: authors list (link) - ↑ "Bagnath Temple (Bageshwar)". onlytravelguide.com.
- ↑ "Temples in Bageshwar".