ಗಂಗಾ

ಏಷ್ಯಾದ ಪ್ರಮುಖ ನದಿ

ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾ ನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಗಂಗಾನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಗಂಗಾ ನದಿ
ನದಿ
[[Image:| 256px|none
]]
Kintras ಭಾರತ, ನೇಪಾಳ, ಬಾಂಗ್ಲಾದೇಶ
Tributaries
 - left ಮಹಾಕಾಳಿ, ಕರ್ನಾಲಿ, ಕೋಸಿ, ಗಂಡಕಿ, ಘಾಘ್ರಾ
 - right ಯಮುನಾ, ಸೋನ್, ಮಹಾನಂದಾ
Ceeties ಹರಿದ್ವಾರ, ಸೊರೊನ್, ಕನ್ನೋಜ್, ಕಾನ್ಪುರ, ಅಲಹಾಬಾದ್, ವಾರಾಣಸಿ, ಪಾಟ್ನಾ, ರಾಜ್‌ಶಾಹಿ
Soorce ಗಂಗೋತ್ರಿ ಹಿಮನದಿ
 - location ಉತ್ತರಾಖಂಡ, ಭಾರತ
 - elevation ೭,೭೫೬ m (೨೫,೪೪೬ ft)
Mooth ಗಂಗಾ ಮುಖಜಭೂಮಿ
 - location ಬಂಗಾಳ ಕೊಲ್ಲಿ, ಬಾಂಗ್ಲಾದೇಶ
 - elevation ೦ m (೦ ft)
Lenth ೨,೫೧೦ km (೧,೫೬೦ mi)
Basin ೯,೦೭,೦೦೦ km² (೩,೫೦,೧೯೫ sq mi)
Discharge for ಸಾಗರಕ್ಕೆ
 - average ೧೨,೦೧೫ /s (೪,೨೪,೩೦೬ cu ft/s)
[[Image:| 256px|none
]]
ಚಿತ್ರ:Devprayag - Confluence of Bhagira and Alaknanda.JPG
Devprayag, confluence of Alaknanda (right) and Bhagirathi (left) rivers, beginning of the Ganges proper.
The river Ganges at ಕೊಲ್ಕತ್ತ, with Howrah Bridge in the background
Lower Ganges in Lakshmipur, Bangladesh
The Gandhi Setu bridge across the Ganges in Patna
The Vikranmshila Setu bridge across the Ganges in Bhagalpur
The Himalayan headwaters of the Ganges river in the Garhwal region of Uttarakhand, India. The headstreams and rivers are labeled in italics; the heights of the mountains, lakes, and towns are displayed in parentheses in metres.

ಗಂಗಾ ನದಿಯ ವೈಶಿಷ್ಟ್ಯ

ಬದಲಾಯಿಸಿ

ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ಗಂಗೋತ್ರಿ. ಹಿಮಾಲಯ ಕೇವಲ ಹಿಮಶಿಖರಗಳ ಆಲಯವಲ್ಲ. ಋಷಿ ಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಹನಿಗಳ ಉಪಯೋಗದಿಂದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿದೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ ಜಿಜ್ಞಾಸೆಗಳು, ಸಾಧಕರು, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳನ್ನು, ಅನಾನುಕೂಲಗಳನ್ನು ಪರಿಗಣಿ ಸದೇ ಅತೀ ಕಠಿಣ ರಸ್ತೆ ಕ್ರಮಿಸಿ ಬರುತ್ತಾರೆ. ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸಿದ್ಧವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ.

ಗಂಗೆಯ ಇತಿವೃತ್ತ

ಬದಲಾಯಿಸಿ
  • ಉತ್ತರ ಭಾರತದಲ್ಲಿ 'ದೇವಭೂಮಿ' ಎಂದೇ ಪ್ರಸಿದ್ಧವಾದ ಹಿಮಾಲಯದ ನಾಲ್ಕು ಧಾಮಗಳಲ್ಲಿ ಒಂದು ಪಾವನ ಜಲವೆಂದು ಪೂಜಿಸುವ ಗಂಗೆಯ ಉಗಮ ಸ್ಥಳ ಗಂಗೋತ್ರಿ. ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದಿಂದ ಹೊರಡಬೇಕಾಗುತ್ತದೆ. ಹರಿದ್ವಾರ ಅಂದರೆ ಬದರಿನಾರಾಯಣ(ಹರಿ)ಕ್ಕೆ ಇಲ್ಲಿಂದ ಯಾತ್ರೆ ಆರಂಭಿಸು ವುದರಿಂದ ಇದಕ್ಕೆ 'ಹರಿದ್ವಾರ'ವೆಂತಲೂ ಕರೆಯುತ್ತಾರೆ, ಇಲ್ಲಿ ಗಂಗೆ ಎಲ್ಲಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ.
  • ಹರಿದ್ವಾರದಿಂದ ೨೩ ಕಿ.ಮೀ. ದೂರದಲ್ಲಿ ಋಷಿಕೇಶ ಮಹಾ ಉತ್ತಮ ತೀರ್ಥ ಮತ್ತು ತಪೋಭೂಮಿಯಿದೆ. ಉತ್ತುಂಗ ಪರ್ವತಗಳ ಶಿಖರಗಳ ನಡುವೆ ಹರಿವ ಗಂಗೆಯ ಝಳು ಝಳು ನಿನಾದವೊಂದಿಗೆ ಜಲಧಾರೆ ಹರಿವು, ತಪ್ಪಲ ಪ್ರದೇಶಗಳನ್ನು ಸೇರುತ್ತದೆ.
  • ಹರಿದ್ವಾರದಿಂದ ಗಂಗೋತ್ರಿಗೆ ೨೨೮.ಕಿ.ಮೀ. ಋಷಿಕೇಶ ದಾಟಿ ಚಂಬಾ ಪಟ್ಟಣದ ತನಕ (೨೯೦ ಅಡ್ಡಿ ಎತ್ತರ) ಉತ್ತಮವಾದ ಅತೀ ಕಡಿದಾದ, ಸಣ್ಣ, ತೀವ್ರ ತಿರುವುಗಳಿಂದ ಕೂಡಿದ ರಸ್ತೆ ಅಲ್ಲಿಂದ (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ) ಉತ್ತರ ಕಾಶಿಯ ಕಡೆಗೆ ಹೊರಡಬೇಕು. ಉತ್ತರಕಾಶಿ ಒಂದು ಅಧುನಿಕ ಬಗೆಯಿಂದ ರಚಿತ ಸುಮಾರು ೫೦೦೦೦ ಜನಸಂಖ್ಯೆಯುಳ್ಳ ನಗರ. ಇಲ್ಲಿ ಈ ಜಿಲ್ಲೆಯ ಪ್ರಮುಖ ಕಾರ್ಯಾಲಯಗಳಿವೆ.

ಉತ್ತರ ಕಾಶಿ

ಬದಲಾಯಿಸಿ
  • ಉತ್ತರ ಕಾಶಿಯು ನೈಸರ್ಗಿಕ ಸೌಂದರ್ಯ, ಧಾರ್ಮಿಕ ಆಸ್ತಿಕತೆಯ ಅಪೂರ್ವ ಸಂಗಮ ಪ್ರದೇಶ. ಮನುಷ್ಯನ ಮನಸ್ಸಿಗೆ ರೋಮಾಂಚನ ತರುವ ಸ್ಥಳ ಮನಮೋಹಕ ದೃಶ್ಯ. ಭಕ್ತರ ಪಾಲಿಗೆ ಕಲ್ಯಾಣಕಾರಿ. ಪ್ರಕೃತಿಯ ಅನುಪಮ ನೋಟ ತಲೆ ಎತ್ತಿದರೆ ಗಗನಚುಂಬಿ ಬೆಟ್ಟಗಳು, ತಲೆ ತಗ್ಗಿಸಿದರೆ ನೀಳವಾಗಿ ಹರಿಯುವ ಗಂಗೆ, ಇದನ್ನೆಲ್ಲ ಹೋಗಿಯೇ ಅನುಭವಿಸಬೇಕು, ಆಸ್ವಾದಿಸಬೇಕು.
  • ಉತ್ತರಕಾಶಿಯಲ್ಲಿ ಉಳಿದು ವಿಶ್ರಾಂತಿ ಪಡೆದು ಮುಂದೆ ಹೊರಡಬಹುದು. ಇಲ್ಲಿ ತಂಗಲು ಅನೇಕ ಧರ್ಮಶಾಲೆಗಳು, ವಸತಿಗಳು ಇವೆ. ನೂರು ವರುಷದಷ್ಟು ಹಳೆಯದಾದ ಕೈಲಾಸ ಆಶ್ರಮವೂ ಇದೆ. ಇಲ್ಲಿ ರಾತ್ರಿ ಎಂಟರವರೇಗೆ ಬೆಳಕು ಇರುತ್ತದೆ. ಸೂರ್ಯಾಸ್ತಮ ತಡವಾಗಿ ಆಗುತ್ತದೆ ಇದೇ ಇಲ್ಲಿನ ವೈಶಿಷ್ಟ್ಯ.
  • ಹಾಗೆ ಬೆಳಿಗ್ಗೆ ೪-೩೦ ಕ್ಕೆಲ್ಲಾ ಇಲ್ಲಿ ಬೆಳಕಾಗುತ್ತದೆ (ಸೂರ್ಯೋದಯವೂ ಬೇಗ). ಇದಕ್ಕೆ ಉತ್ತರ ಕಾಶಿಯೆಂದು ಹೆಸರು ಬಂದಿದ್ದು, ಇಲ್ಲೆ ನೆಲೆಸಿರುವ ಶಿವನಿಂದಾಗಿ. ಉತ್ತರದ ಕಡೆ ಮುಖ ಮಾಡಿರುವ ಶಿವನ ದೇವಾಲಯ ಇಲ್ಲಿದೆ. ಅದಕ್ಕೆ ಎದುರಾಗಿ ಆದಿಶಕ್ತಿಯ ದೇವಸ್ಥಾನವಿದೆ.
  • ಅಲ್ಲಿನ ವಿಶೇಷ ಸುಮಾರು ೧೦೦ ಅಡಿ ಎತ್ತರದ ಹಿತ್ತಾಳೆಯ ತರ ಇರುವ ಲೋಹದ ತ್ರಿಶೂಲವಿದೆ. ಅದನ್ನು ಅದಿಶಕ್ತಿಯೇ ರಕ್ಕಸರ ಸಂಹಾರದ ನಂತರ ಅಲ್ಲಿ ನೆಟ್ಟಿರುವುದು ಪಾತಾಳಕ್ಕೆ ಹೋಗಿದೆ ಎಂಬುದು ಅಲ್ಲಿನವರ ಹೇಳಿಕೆ. ಅದನ್ನು ತಿಳಿಯಲು ಅನೇಕ ವೈಜ್ಞಾನಿಕ ಪ್ರಯೋಗಗಳಾದರೂ ಸತ್ಯವನ್ನು ತಿಳಿಯಲು ಇನ್ನು ಸಾದ್ಯವಾಗಿಲ್ಲ. ಉತ್ತರ ಕಾಶಿಯಿಂದ ಬೆಳಿಗ್ಗೆ ಬೇಗ ೫ ಗಂಟೆಗೆ ಹೊರಟರೆ ಸಂಜೆಗೆ ವಾಪಾಸ್ಸು ಉತ್ತರ ಕಾಶಿಗೆ ಬಂದು ಸೇರಬಹುದು.
  • ಉತ್ತರ ಕಾಶಿಯಿಂದ ಗಂಗೋತ್ರಿಗೆ ಹೊರಟಾಗ ದಾರಿಯಲ್ಲಿ ಸಿಗುವ ಸುಂದರ ತಾಣ 'ಹಸ್ಲಿಲ'. ಈ ಪ್ರದೇಶವು 'ಸೇಬು ಮರ'ಗಳಿಂದ ತುಂಬಿ ತುಳುಕುತ್ತದೆ. ಉತ್ತರ ಕಾಶಿ ಯಿಂದ ೧೫.ಕಿ.ಮೀ. ದೂರದಲ್ಲಿ ಮನೇರಿ ಡ್ಯಾಂ ಇದೆ. ಇಲ್ಲಿಯ ನಂತರ ಗಂಗೆ ತನ್ನ ಗಾತ್ರವನ್ನು ಕುಗ್ಗಿಸುತ್ತಾಳೆ. ಬೆಟ್ಟದ ಅಡಿಯಿಂದ ಉತ್ತರಕಾಶಿ ತನಕ ಹೋಗುತ್ತಾಳೆ. ಇಲ್ಲಿಂದ ಮುಂದೆ ಭೂ ಕುಸಿತಗಳ ಪ್ರಕರಣಗಳು ಹೆಚ್ಚು, ಹಾಗೇನಾದರು ಆದರೆ ಗಂಟೆಗಟ್ಟಲೆ-ದಿನಗಟ್ಟಲೆ ಸಾಲುಸಾಲಾಗಿ ವಾಹನಗಳು ನಿಲ್ಲುತ್ತವೆ.
  • ಮಿಲಿಟ್ರಿಯವರು ಬಂದು ತೆರವು ಮಾಡಿದ ಮೇಲೆ ಹೊರಡಬೇಕಾಗುತ್ತದೆ. ಹಸ್ಲಿಲದಲ್ಲಿ ಮಿಲಿಟ್ರಿ ಕ್ಯಾಂಪ್ ಇದೆ, ಆ ಸ್ಥಳದ ಸುತ್ತ ಮುತ್ತಲೇ 'ರಾಮತೇರಿ ಗಂಗಾಮೈಲಿ' ಹಿಂದಿ ಸಿನಿಮಾ ತೆಗೆದದ್ದನ್ನು ಅಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ನಂತರ ಸಿಗುವುದೇ ಭೈರವ ಘಾಟಿ. ಇಲ್ಲಿ ಭೈರವನ ದೇವಸ್ಥಾನವಿದೆ. ಊಟ-ತಿಂಡಿ ಚಾಯ್ ಹೋಟೆಲುಗಳಿವೆ. ಯಾತ್ರಿಕರು ವಿಶ್ರಾಂತಿ ಪಡೆದು ಮುಂದೆ ಹೊರಡ್ತಾರೆ.
  • ಭೈರವ ಘಾಟಿಯ ನಂತರ ಗಂಧಕ ಪರ್ವತಗಳ ತಾಣವಿದೆ. ಇಲ್ಲಿ ಬಿಸಿನೀರಿನ ಬುಗ್ಗೆಗಳನ್ನು ನೋಡಬಹುದು. ಯಾತ್ರಿಕರು ಅಲ್ಲಿ ಸ್ನಾನ ಮಾಡಿ ಮುಂದಕ್ಕೆ ಹೊರಡುತ್ತಾರೆ. ಅಲ್ಲಿ ದಾರಿಯುದ್ದಕ್ಕೂ ಪಾದಯಾತ್ರಿಕರನ್ನು ನೋಡುತ್ತೇವೆ (ಸನ್ಯಾಸಿಗಳು-ಸಿಖ್ಖ್‌ರು ಹೆಚ್ಚು) ಸಿಖ್ಖ್‌ರು ಡೋಲಿಯ ತರದಲ್ಲಿ ಇರುವ ಗಾಡಿಯಲ್ಲಿ ಗಂಗಾ ಜಲವನ್ನು ಇಟ್ಟು ಭಜನೆ ಮಾಡುತ್ತಾ ಹೋಗುವುದನ್ನು ಕಾಣಬಹುದು.
  • ಥಂಡಿ ಹವಾ-ತುಂತುರು ಮಳೆ (ಜುಲೈ ತಿಂಗಳು) ಎರಡು ಕಡೆ ಕಡಿದಾದ ಎತ್ತರ ಬೆಟ್ಟಗಳು ಮೇಲಿನಿಂದ ಸಣ್ಣದಾಗಿ ಬೀಳುವ ನೀರಿನಿಂದ ಝರಿಗಳು, ಮೋಡಗಳು, ಪಾತಾಳ ದಲ್ಲಿ ಭೋರ್ಗರೆದು ಹರಿಯುವ ಗಂಗೆ. ಬ್ರಹ್ಮ ಸೃಷ್ಠಿಯನ್ನೇ ಕಡೆದು ಅಲ್ಲಿ ಇಟ್ಟಿದ್ದಾನೆನ್ನುವಂತಿದೆ. ಗಂಗೋತ್ರಿ ಸಮುದ್ರ ಮಟ್ಟದಿಂದ ೩೧೦೦ ಮೀಟರ್(೧೦,೩೫೫ ಅಡಿ) ಎತ್ತರದಲ್ಲಿದೆ. ಗಂಗೋತ್ರಿ ತಲುಪುವ ವೇಳೆಗೆ ಎಲ್ಲ ಆಯಾಸಗಳನ್ನು ಮರೆತುಬಿಡುತ್ತೇವೆ.
  • ಗಂಗೆಯ ದಡದಲ್ಲಿ ಕೂತರೆ, ಆಕೆ ಹಿಮಾಲಯದಿಂದ ವೋ ಎಂದು ಸದ್ದು ಮಾಡುತ್ತಾ ಭೋರ್ಗರೆದು ಹರಿದು ಬರುವ ದಾರಿ(ಹರಿದ್ವಾರದಲ್ಲಿ ಶಾಂತವಾಗಿ ಹರಿಯುತಾಳೆ)ಯ ದೃಶ್ಯ ನಮ್ಮನ್ನು ತಲ್ಲೀನವಾಗಿಸುತ್ತದೆ. ಆಕೆಯನ್ನು ಸ್ಪರ್ಶಿಸಿದರೆ ತಣ್ಣಗೆ ಕೊರೆಯುತ್ತಾಳೆ. ಇಲ್ಲಿ ಗಂಗಾಮಾತೆಯ ವಿಶಾಲ ದೇವಾಲಯವಿದೆ. ಇದರಲ್ಲಿ ಗಂಗಾ, ಜಮುನಾ, ಸರಸ್ವತಿ, ಲಕ್ಷ್ಮೀ ಪಾರ್ವತಿ ಮತ್ತು ಸರಸ್ವತಿ ದೇವತೆಗಳ ಪ್ರಾಚೀನ ಪ್ರತಿಮೆಗಳಿವೆ.
  • ಭಗೀರಥ ಮಹಾರಾಜ ಎದುರಿಗೆ ಕೈ ಜೋಡಿಸಿ ನಿಂತಿರುವ ಪ್ರತಿಮೆಯಿದೆ. ಇಲ್ಲಿ ಪೂಜಿಸುವ ವಸ್ತುಗಳೆಲ್ಲ ಚಿನ್ನದವು. ಇಲ್ಲಿ ಒಂದು ಸ್ಥಳದಲ್ಲಿ ಗಂಗೆ ಶಿವಲಿಂಗದ ಮೇಲೆಯೇ ಬೀಳುತ್ತಾಳೆ. ಇಲ್ಲಿ ಶೀತಗಾಳಿ ಹೆಚ್ಚು. ನಾವು ಗಂಗೆಯಲ್ಲಿ ಇಳಿದು ಸ್ನಾನ ಮಾಡುವುದು ಅತ್ಯಂತ ಕಷ್ಟಕರ. ತಲೆ ಮೇಲೆ ಪ್ರೋಕ್ಷಣೆ ಮಾಡುವಷ್ಟರಲ್ಲಿಯೇ ಕೈ ಶೀತದಿಂದ ಮರಗಟ್ಟಿರು ತ್ತದೆ. ದುರ್ಗಮ ಘಟ್ಟಗಳ ಮಧ್ಯೆ ಪಾಪ ಕಳೆಯುವ ಪತೀತ ಪಾವನೆ ಈ ಗಂಗಾ ಮಾತೆಯ ಮುಂದಿರುವ ಸ್ಥಳ ಸಗರರಾಜ ಭಗೀರಥ ಕುಳಿತು ತಪಸ್ಸು ಮಾಡಿದ ಸ್ಥಳ ಎಂದು ಹೇಳುವ ದೊಡ್ಡ ಕಲ್ಲು ಹಾಸಿಗೆ ಇದೆ.
  • ಈ ಸ್ಥಳದಲ್ಲಿ ಮಾಡುವಂತಹ ಪೂಜೆ ಮಂಗಳಕಾರಿ ಇಲ್ಲಿ ವರ್ಷದ ೬ ತಿಂಗಳು ಮಾತ್ರ ಪೂಜೆ ನಡೆಯುತ್ತದೆ. ಇನ್ನು ೬ ತಿಂಗಳು ಹಿಮದಿಂದ ತುಂಬಿ ಹೋಗಿರುತ್ತದೆ. ಆಗ ಬೆಟ್ಟದ ಕೆಳಗಿರುವ ಮುಖೀಮಠದಲ್ಲಿ ಪೂಜೆ ನಡೆಯುತ್ತದೆ. ಅಲ್ಲಿ ಯಾರೂ ಇರಲು ಸಾಧ್ಯವಿಲ್ಲ. ಉನ್ನತ ಪರ್ವತಗಳ ನಡುವೆ ಕಿಲಕಿಲ ನಗುತ್ತಾ ತಂಪಾಗಿ ಕೊರೆಯುತ್ತಾ ಹರಿಯುವ ಗಂಗಾಜಲ ಧಾರೆಯು ದೃಶ್ಯ ನಮಗೊಂದು ಅಲೌಕಿಕ ಆನಂದ ಕೊಡುತ್ತದೆ (ಇಲ್ಲಿ ಯಾತ್ರೆಗೆ ಮೇ-ಸೆಫ್ಟೆಂಬರ್).
  • ಇಲ್ಲಿ ಗಂಗೆಯ ಪೂಜೆ ಮಾಡಿಸಲು ಪೂಜಾರಿಗಳು ಅನೇಕರು ಹಿಂದೆ ಹಿಂದೆ ಬರುತ್ತಾರೆ. ಪೂಜೆ ಮಾಡಿಸಿದರೆ ಮನೆತನದ ಹಿರಿಯರಿಗೆ ಮುಕ್ತಿ ಸಿಗುತ್ತದೆ ಎನ್ನುವ ಪ್ರತೀತಿ. ಇಲ್ಲಿ ಅನೇಕ ಕ್ಷೇತ್ರಗಳು ಮತ್ತು ಧರ್ಮಶಾಲೆಗಳು, ಸಣ್ಣ ಪೇಟೆಯು ಇದೆ.

ಗಂಗೋತ್ರಿಯ ಬಗ್ಗೆ

ಬದಲಾಯಿಸಿ
  • ಹರಿದ್ವಾರದಿಂದ ಗಂಗೋತ್ರಿಗೆ ೨೯೭.ಕಿ.ಮೀ. ಋಷಿಕೇಶ ದಾಟಿ ಚಂಬಾ ಪಟ್ಟಣದ ತನಕ (೨೯೦೦ ಅಡ್ಡಿ ಎತ್ತರ) ಉತ್ತಮವಾದ ಕಡಿದಾದ, ಸಣ್ಣ, ತೀವ್ರ ತಿರುವುಗಳಿಂದ ಕೂಡಿದ ರಸ್ತೆಯ ಮುಖಾಂತರ ಹೋಗಬೇಕು. (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ ) ಇಲ್ಲಿಂದ ಉತ್ತರ ಕಾಶಿಯ ಕಡೆಗೆ ಹೊರಡಬೇಕು. ಗಂಗೋತ್ರಿಯು ಗಂಗೆಯ ಉಗಮ ಸ್ಥಳವಲ್ಲ. ಅಲ್ಲಿಂದ ೧೮ ಕಿ.ಮಿ ಮುಂದಿರುವ 'ಗೋಮುಖ' ಗಂಗೆಯ ಉಗಮವೆನ್ನುತ್ತಾರೆ.
  • ೩೬೫ ದಿನಗಳು ಹಿಮ ಬೀಳುವ ಪ್ರದೇಶ, ಅತೀ ಕಡಿದಾದ ಸ್ಥಳ ಗೋಮುಖ. ಗೋಮುಖ ಸಮುದ್ರ ಮಟ್ಟದಿಂದ ೧೨,೭೭೦ ಅಡಿ ಎತ್ತರ. ಅಲ್ಲಿಂದ ನೀಳವಾಗಿ ಹೊರಟ ಗಂಗೆ ಗಂಗೋತ್ರಿಗೆ ಬರುವಷ್ಟರಲ್ಲಿಯೇ ಭೋರ್ಗರೆಯ ತೊಡಗುತ್ತಾಳೆ. (ಮಿಲಿಟರಿ ಪರವಾನಿಗೆ ಪಡೆದೇ ಗೋಮುಖಕ್ಕೆ ಹೋಗಬೇಕು. ಅತೀ ಸಾಹಸದ ಚಾರಣದ ಸ್ಥಳವಿದು. ಅಲ್ಲಿನ ಗೈಡ್ ಜೊತೆಗಿದ್ದರೆ ಇಡೀ ಒಂದು ದಿನ ಬೇಕು.
  • ಗೋಮುಖಕ್ಕೆ ಹೋಗುವವರು ಪೂರ್ಣ ಸ್ವಸ್ಥ ಹಾಗೂ ಸಾಹಸಿಗಳಾಗಿರಬೇಕು. ಯೋಗ್ಯ ಸಾಧನಗಳನ್ನು ತೆಗೆದುಕೊಂಡೇ ಹೋಗಬೇಕು. ಇದು ಅತ್ಯಂತ ಕಠಿಣ ದಾರಿ, ಗೈಡ್ ಇಲ್ಲದೇ ಹೋಗುವುದು ಕಷ್ಟವಾಗುತ್ತದೆ. ಇಲ್ಲಿ ದೊಡ್ಡ ದೊಡ್ಡ ಹಿಮ ಶಿಲಾಖಂಡಗಳು ಕಾಣಸಿಗುತ್ತವೆ. ಯಾತ್ರಿಕರ ನಕ್ಷೆ, ಉಣ್ಣೆಯ ಬಟ್ಟೆಗಳು, ಅಗತ್ಯ ಔಷಧಗಳು, ಧರ್ಮಶಾಲೆ ಯ ವಿವರಗಳು, ಈ ಅಂಶಗಳು ಯಾತ್ರಿಕರು ಗಮನದಲ್ಲಿಟ್ಟುಕೊಳ್ಳುವ ಅಂಶಗಳು.

ಹಿಮಾಲಯದ ನಾಲ್ಕು ಧಾಮಗಳು

ಬದಲಾಯಿಸಿ
  • ೧. ಕೇದಾರನಾಥ,
  • ೨. ಬದರಿನಾಥ,
  • ೩. ಗಂಗೋತ್ರಿ ಮತ್ತು
  • ೪. ಯಮುನೋತ್ರಿ.
  • ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ನಾಲ್ಕು ಧಾಮಗಳು ಹಿಮಾಲಯ ಕೇವಲ ಹಿಮ ಶಿಖರಗಳಲ್ಲ. ಋಷಿಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಅಗ್ನಿಗಳ ಉಪಯೋಗದಿಂದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿವೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ, ಜಿಜ್ಞಾಸಿಗಳು, ಸಾಧಕರು, ಅತೀ ಕಠಿಣ ರಸ್ತೆ ಕ್ರಮಿಸುವಾಗ, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳನ್ನು, ಅನಾನುಕೂಲಗಳನ್ನು ಪರಿಗಣಿಸದೇ ಬರುತ್ತಾರೆ.
  • ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸ್ಧಿವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೂಡುಗೆಯಾಗಿ ಕೊಟ್ಟಿದ್ದಾರೆ. ಋಷಿಕೇಶದಿಂದ ಮೂರು ರಸ್ತೆಗಳು ಇವೆ. ಒಂದು ಗಂಗೋತ್ರಿ, ಇನ್ನೊಂದು ರಸ್ತೆ ಯಮುನೋತ್ರಿ, ಮತ್ತೊಂದು ಬದರಿನಾಥಕ್ಕೆ ಹಾಗೂ ಕೇದಾರನಾಥಕ್ಕೆ.
  • ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದ ಮೂಲಕವೇ ಹೊರಡಬೇಕಾಗುತ್ತದೆ. ಹರಿದ್ವಾರಕ್ಕೆ ದೆಹಲಿಯಿಂದ ೬ ಗಂಟೆ ಪ್ರವಾಸ ಮಾಡಬೇಕು. ಹರಿ ಅಂದರೆ ಬದರಿನಾರಾಯಣ ಹಿಮಾಲಯದ ನಾಲ್ಕು ಧಾಮಗಳಿಗೆ ಇಲ್ಲಿಂದ ಯಾತ್ರೆ ಆರಂಭಿಸುವುದರಿಂದ ಇದಕ್ಕೆ ಹರಿದ್ವಾರವೆಂತಲೂ ಕರೆಯುತ್ತಾರೆ. ಇಲ್ಲಿ ಗಂಗೆ ಎಲ್ಲೆಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ.

ಋಷಿಕೇಶದಿಂದ ಬದರೀನಾಥದವರೆಗೆ

ಬದಲಾಯಿಸಿ

ಕೇದಾರನಾಥ ೩೨೦ಕಿ ಮೀ, ದೂರ ಇದೆ. ಯಮುನೋತ್ರಿ, ಗಂಗೋತ್ರಿ ೨೨೨ ಕಿ,ಮೀ, ಋಷಿಕೇಶದಿಂದ ಹೊರಡುವ ಮೂರು ರಸ್ತೆಗಳಲ್ಲಿ ಒಂದು ಗಂಗೋತ್ರಿ , ಯಮುನೋತ್ರಿ, ಬದರೀನಾಥಕ್ಕೆ ಹೊರಡುತ್ತವೆ.

ಹರಿದ್ವಾರ

ಬದಲಾಯಿಸಿ
  • ಹರಿದ್ವಾರಕ್ಕೆ ಹಿಂದೆ 'ಮಾಯಾಪುರಿ' ಎಂಬ ಹೆಸರಿತ್ತ್ತು. ಇಲ್ಲಿ ಹರ ಕಿ ಪೌಡಿ ಮುಖ್ಯ ಸ್ಥಳ. ಪ್ರತಿನಿತ್ಯ ಸಂಜೆ ಗಂಗಾಮಾತೆಗೆ ಆರತಿ ನೋಡುವುದಕ್ಕೆ, ಎರಡು ಕಣ್ಣು ಸಾಲದು. ಹರ ಕಿ ಪೌಡಿಯ ಎರಡು ಕಡೆ ಪರ್ವತಗಳ ಶಿಖರಗಳಲ್ಲಿ ದೇವಿಯರಿದ್ದಾರೆ. ಒಂದು ಕಡೆ ಮಾನಸದೇವಿ ಪರ್ವತ, ಇನ್ನೊಂದು ಕಡೆ ಚಂಡಿದೇವಿ ಪರ್ವತ.
  • ಇಲ್ಲಿ ಮಂದಿರಗಳಿಗೆ ಹೋಗಲು ಟ್ರಾಲಿಯ ಸೌಲಭ್ಯವಿದೆ. ಶುಂಭ-ನಿಶುಂಭ ರಂತಹ ಅಸುರರಿಗೆ ಮುಕ್ತಿ ನೀಡಲು ದೇವಿಯರು ಇಲ್ಲಿ ಅವತಾರವೆತ್ತಿದರು. ದಾರಿಯಲ್ಲಿ ಮಾತೆ ಕಾಳಿ ದೇವಿಯ ಪ್ರಾಚೀನ ಮಂದಿರ- ಇಲ್ಲಿ ತಂತ್ರಸಾಧನೆಗಾಗಿ ಹುಲಿಯ ಬುರುಡೆ ಈಗಲೂ ಇದೆ.

ಸ್ಕಂಧ ಪುರಾಣದ ಹಿನ್ನೆಲೆಯಲ್ಲಿ ಗಂಗೆ

ಬದಲಾಯಿಸಿ

ಗಂಗಾಮಾತೆ ಶಿವನ ಪತ್ನಿ. ತನ್ನ ಜಟೆಯಲ್ಲಿ ಶಿವ ಆಕೆಗೆ ಸ್ಥಾನ ನೀಡಿದ್ದಾನೆ. ಆಕೆಯನ್ನು ಭೂಮಿಗೆ ತರಲು ದೇವತೆಗಳು ಉಪಾಯ ಹೂಡಿದರು ಎನ್ನುತ್ತಾರೆ ಸ್ಥಳೀಯರು. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ- ಗಂಗೆಯನ್ನು ಭೂಮಿಗೆ ತಂದ ಶ್ರೇಯಸ್ಸು ಭಗೀರಥ ರಾಜನಿಗೆ ಸಲ್ಲುತ್ತದೆ. ಇಕ್ವಾಕು ವಂಶದ ಸಗರರಾಜನೆಂಬ ಚಕ್ರವರ್ತಿ ಅಶ್ವಮೇಧವೆಂಬ ಯಜ್ಙಕ್ಕಾಗಿ ಕುದುರೆಯನ್ನು ಬಿಟ್ಟಿದ್ದ. ಅಶ್ವಮೇಧ ಯಜ್ಞ ಮುಗಿದರೆ, ಇಂದ್ರ ತನ್ನ ಪದವಿ ಹೋಗುವ ಭಯದಿಂದ ಅದನ್ನು ಕದ್ದು ಕಪಿಲ ಮುನಿ ಆಶ್ರಮದಲ್ಲಿ ಕಟ್ಟಿದ್ದ. (ಪಶ್ಚಿಮ ಬಂಗಾಳದಲ್ಲಿನ -ಸಮುದ್ರ ತೀರ) ಕುದುರೆಗಾಗಿ ಅಲ್ಲಿಗೆ ಬಂದ ಸಗರರಾಜ ೬೦೦೦೦ ಪುತ್ರರು, ಧ್ಯಾನಸ್ಥರಾಗಿದ್ದ ಕಪಿಲ ಮಹರ್ಷಿಗಳನ್ನು ಅವಹೇಳನ ಮಾಡತೊಡಗಿದರು. ಅದರಿಂದ ಕುಪಿತರಾದ ಮುನಿಗಳು ಅವರನ್ನು ಭಸ್ಮಗೊಳಿಸಿದರು. ಅವರಿಗೆ ಮುಕ್ತಿ ಸಿಗದೆ ಮೃತ್ಯುಲೋಕದಲ್ಲಿಯೇ ಅಲೆಯತೊಡಗಿದರು. ಈ ಸಂಧರ್ಭದಲ್ಲಿ ಭಗೀರಥ ಗಂಗೆಯನ್ನು ಭೂಮಿಗೆ ತಂದು ಸಗರರಾಜನ ೬೦೦೦೦ ಪುತ್ರರಿಗೆ ಶಾಪ ವಿಮೋಚನೆ ಮಾಡಿದನೆಂದು ಹೇಳಲಾಗಿದೆ.[]

ಕೇದಾರನಾಥ

ಬದಲಾಯಿಸಿ
  • ಹಿಮಾಲಯದ ಕೇದಾರನಾಥವು ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ. ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ. ಚರಿತ್ರೆಯ ಪ್ರಕಾರ ೮ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ ಕೇದಾರನಾಥ. ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು ೮ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು.
  • ಚತುರ್ಧಾಮ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರು, ಶ್ರೀಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಇಲ್ಲಿನ ಕೇದಾರನಾಥ ಲಿಂಗವು ೮ ಅಡಿ ಎತ್ತರ, ೫ ಅಡಿ ಸುತ್ತಳತೆಯನ್ನು ಹೊಂದಿದೆ. ಇಲ್ಲಿ ಬೆಳಿಗ್ಗೆ ನಿರ್ವಾಣ ಪೂಜೆ ಮತ್ತು ರಾತ್ರಿ ಶೃಂಗಾರ ಪೂಜೆ ನಡೆಯುವುದೊಂದು ವಿಶೇಷ.
  • ಇದರ ಒಂದು ಭಾಗಕ್ಕೆ ಜಲ ಪುಷ್ಪಾದಿಗಳ ಅರ್ಚನೆಯಾದರೆ, ಇನ್ನೊಂದು ಭಾಗಕ್ಕೆ ಘೃತ ಲೇಪನವಾಗುತ್ತದೆ. ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ಈ ದೇವಸ್ಥಾನದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳ್ಲಲೊಂದಾದ ಕೇದಾರರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ. ಕೇದಾರನಾಥ ಗರ್ಭಗುಡಿಯು ತೆಗೆಯುವುದು ಶಿವರಾತ್ರಿಯಂದು ನಿರ್ಧಾರವಾಗುತ್ತದೆ.

ಬದರಿನಾಥ ಕ್ಷೇತ್ರ

ಬದಲಾಯಿಸಿ
  • ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರವೇ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಸಾಮಾನ್ಯವಾಗಿ ಜೂನ್‌ ನಿಂದ - ಸೆಪ್ಟೆಂಬರ್ ವರೆಗೆ ಬದರಿನಾಥ ಕ್ಷೇತ್ರವನ್ನು ದರ್ಶಿಸಲು ಉತ್ತಮ ಕಾಲ.
  • ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆಗಳನ್ನು ಸಲ್ಲಿಸುವನೆಂದು ಒಂದು ನಂಬಿಕೆ.

ಇಲ್ಲಿನ ಐದು ವೈಶಿಷ್ಟ್ಯಗಳೆಂದರೆ-

  • ವಿಶಾಲ ಬದರಿ : ಬದರಿನಾಥ ಕ್ಷೇತ್ರ
  • ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿ ದರ್ಶನವೀಯುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು.
  • ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು. ಆದ್ದರಿಂದಲೇ ಇದು ಭವಿಷ್ಯ ಬದರಿ.
  • ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು.
  • ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.

ಗಂಗಾನದಿಯ ಮಾಲಿನ್ಯತೆ

ಬದಲಾಯಿಸಿ
  • ‘ಗಂಗಾ ನದಿ ಉದ್ದಕ್ಕೂ ಹೋಗುವ 39 ಸ್ಥಳಗಳಲ್ಲಿ, ಕೇವಲ ಒಂದು ಸ್ಥಳದಲ್ಲಿ ಮಾತ್ರ ನದಿಯ ನೀರು ಶುದ್ಧವಾಗಿದೆ. ಉಳಿದ ಕಡೆಗಳಲ್ಲಿ ನೀರು ಮಲಿನಗೊಂಡಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಮಂಡಳಿಯು ಮುಂಗಾರಿಗೂ ಮುನ್ನ ಮತ್ತು ಮುಂಗಾರಿನ ನಂತರ 39 ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿತು; ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಈ ಅಧ್ಯಯನ ಅವುಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈಗ ಅಧ್ಯಯನದ ವರದಿಯನ್ನು ಮಂಡಳಿಯು ಬಿಡುಗಡೆ ಮಾಡಿದೆ.‘ಮುಂಗಾರಿಗೂ ಮೊದಲು 41 ಸ್ಥಳಗಳಲ್ಲಿ ಮಂಡಳಿ ಅಧ್ಯಯನ ಮಾಡಿತ್ತು. ಅವುಗಳಲ್ಲಿ 37 ಸ್ಥಳಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಮಲಿನಗೊಂಡಿರುವುದು ಕಂಡುಬಂದಿತ್ತು. ಒಂದು ಸ್ಥಳದಲ್ಲಿ ಮಾತ್ರ ನೀರು ಶುದ್ಧವಾಗಿತ್ತು. ಉಳಿದ ಮೂರು ಸ್ಥಳಗಳಲ್ಲಿ ನೀರು ಸ್ವಲ್ಪ ಮಲಿನಗೊಂಡಿತ್ತು’ ಎಂದು ವರದಿಯಲ್ಲಿ ವಿವರಿಸಲಾಗಿದೆ.[]

ಹರಿವು ಕಡಿತ

ಬದಲಾಯಿಸಿ
  • ನದಿಯ ನೀರು ಶುದ್ಧವಾಗಿರಲು ಮತ್ತು ಮಾಲಿನ್ಯಮುಕ್ತವಾಗಿರಲು ನದಿಯು ಹರಿಯುತ್ತಲೇ ಇರಬೇಕು. 2,525 ಕಿ.ಮೀ. ಉದ್ದ ಹರಿಯುವ ಗಂಗಾ ನದಿಗೆ ಆರು ಬೃಹತ್ ಅಣೆಕಟ್ಟು ಮತ್ತು ನಾಲ್ಕು ಜಲಾಶಯಗಳನ್ನು ನಿರ್ಮಿಸಲಾಗಿದೆ. ಅಣೆಕಟ್ಟು ಒಡೆತನದ ಅಲಕ್‌ನಂದಾ ಕಂಪನಿಯು ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ 330 ಮೆ.ವಾ. ಶಕ್ತಿಯನ್ನು ರಾಯಧನದ ರೂಪದಲ್ಲಿ ಉಚಿತವಾಗಿ ಕೊಡುತ್ತಿದೆ. ರಾಜ್ಯ ಸರ್ಕಾರಿ ಅಧೀನದ ಮನೇರಿಭಾಲಿ ಎರಡನೇ ಹಂತದ ಡ್ಯಾಂಗಳ ಆಡಳಿತ ಮಂಡಳಿಗಳು ತಮ್ಮ ವರಮಾನವನ್ನೇ ಮುಂದು ಮಾಡಿ, ಕೇಂದ್ರೀಯ ಜಲ ಆಯೋಗ ಆದೇಶಿಸಿದಷ್ಟು ನೀರನ್ನು ಅಣೆಕಟ್ಟೆಯಿಂದ ಹೊರಬಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿವೆ. ಆಯೋಗದ ನಿಬಂಧನೆ ಅವೈಜ್ಞಾನಿಕ ಮತ್ತು ತಾನು ಈಗಾಗಲೇ ಉತ್ತರಾಖಂಡ ಹೈಕೋರ್ಟ್‌ನ ಆದೇಶದಂತೆ ಶೇ 15 ರಷ್ಟು ಹೊರಹರಿವನ್ನು ಕಾಪಾಡಿಕೊಂಡಿರುವುದರಿಂದ ಆಯೋಗದ ಶಿಫಾರಸನ್ನು ಪಾಲಿಸಲು ಸಾಧ್ಯವೇ ಇಲ್ಲ ಎಂದು ಹಟ ಹಿಡಿದಿದೆ. ಉತ್ತರ ಭಾರತದ ಜೀವನದಿ ಗಂಗೆ, ಖಾಸಗಿ ಒಡೆತನದ ಅಣೆಕಟ್ಟುಗಳ ಮಾಲೀಕರ ಹಟಮಾರಿ ಧೋರಣೆಯಿಂದ ತನ್ನ ಸ್ವಾಭಾವಿಕ ಹರಿವನ್ನು ಕಳೆದುಕೊಂಡು, ಅಣೆಕಟ್ಟಿನ ಕೆಳಪಾತಳಿಯಲ್ಲಿ ಜೀವಿಸುವ ಅಪರೂಪದ ಜೀವಿಪ್ರಭೇದಗಳನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ವ್ಯವಸಾಯ, ಉದ್ಯಮ, ವಿದ್ಯುತ್ ಉತ್ಪಾದನೆಗೆ ನೀರು ಕೊಡುವುದರ ಜೊತೆಗೆ 2020ರ ಅಂತ್ಯಕ್ಕೆ ಗಂಗಾ ನದಿಯ ಪುನಶ್ಚೇತನ ಮುಗಿಯಬೇಕಿದೆ. ಕಂಪನಿಗಳಿಗಾಗುವ ಆರ್ಥಿಕ ನಷ್ಟವನ್ನು ತುಂಬಿಕೊಡಬಹುದು. ಆದರೆ ನದಿಯಲ್ಲಿನ ಅಪರೂಪದ ಜೀವಿಪ್ರಭೇದ ಶಾಶ್ವತವಾಗಿ ಕಣ್ಮರೆ ಯಾದರೆ ಅದನ್ನೆಲ್ಲಿಂದ ತರುವುದು ಎಂದು ಪ್ರಶ್ನಿಸಿರುವ ಪರಿಸರವಾದಿಗಳು, ಹೊರಹರಿವಿನ ಪ್ರಮಾಣ ಏರಿಸಿ ನದಿಯನ್ನು ಕಾಪಾಡಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.[]

ಆಕರ ಗ್ರಂಥ

ಬದಲಾಯಿಸಿ
  • ಪುರಾಣನಾಮ ಚೂಡಾಮಣಿ -ಬೆನಗಲ್ ರಾಮರಾವ್

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
"https://kn.wikipedia.org/w/index.php?title=ಗಂಗಾ&oldid=1172665" ಇಂದ ಪಡೆಯಲ್ಪಟ್ಟಿದೆ