ಭಾರತೀಯ ಜ್ಞಾನಪೀಠ
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಛ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ರಚಿಸಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೧೧ ಲಕ್ಷ ರೂಪಾಯಿ ನಗದು ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
ಜ್ಞಾನಪೀಠ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ವರ್ಗ | ಸಾಹಿತ್ಯ (ವೈಯುಕ್ತಿಕ) | |
ಪ್ರಾರಂಭವಾದದ್ದು | 1961 | |
ಮೊದಲ ಪ್ರಶಸ್ತಿ | 1965 | |
ಕಡೆಯ ಪ್ರಶಸ್ತಿ | 2018 | |
ಒಟ್ಟು ಪ್ರಶಸ್ತಿಗಳು | 59 | |
ಪ್ರಶಸ್ತಿ ನೀಡುವವರು | ಭಾರತೀಯ ಜ್ಞಾನಪೀಠ | |
ವಿವರ | ಭಾರತದ ಸಾಹಿತ್ಯ ಪುರಸ್ಕಾರ | |
ಮೊದಲ ಪ್ರಶಸ್ತಿ ಪುರಸ್ಕೃತರು | ಜಿ. ಶಂಕರ ಕುರುಪ್ | |
ಕೊನೆಯ ಪ್ರಶಸ್ತಿ ಪುರಸ್ಕೃತರು | ಅಮಿತಾವ್ ಘೋಷ್ |
ಜ್ಞಾನಪೀಠದ ಹಿನ್ನೆಲೆ
ಬದಲಾಯಿಸಿಈ ಪ್ರಶಸ್ತಿಯನ್ನು ಭಾರತ ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನ ಪೀಠ ಟ್ರಸ್ಟ್. ಟೈಮ್ಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಕನ್ನಡ ಸಾಹಿತಿಗಳು ಎಂಟು ಪ್ರಶಸ್ತಿಗಳನ್ನು ಪಡೆದು ಕನ್ನಡವನ್ನು ೧ನೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಹಿಂದಿ ಇದುವರೆಗು ೮ ಪ್ರಶಸ್ತಿಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ.
- ನೋಡಿ:ಜ್ಞಾನಪೀಠ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಬದಲಾಯಿಸಿ
ಈ ಪುಟಗಳನ್ನೂ ನೋಡಿ
ಬದಲಾಯಿಸಿ- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
- ಭಾರತೀಯ ಜ್ಞಾನಪೀಠ ಸಂಸ್ಥೆ Archived 2007-10-13 ವೇಬ್ಯಾಕ್ ಮೆಷಿನ್ ನಲ್ಲಿ.