ರವೀಂದ್ರ ಕೇಳೆಕರ್
ರವೀಂದ್ರ ಕೇಳೆಕರ್ (೭ ಮಾರ್ಚ್ ೧೯೨೫ ರಿಂದ ೨೭ ಆಗಸ್ಟ್ ೨೦೧೦), ಕೊಂಕಣಿ ಪಂಡಿತ, ಭಾಷಾಶಾಸ್ತ್ರಜ್ಞ ಮತ್ತು ಸೃಜನಶೀಲ ಚಿಂತಕರಾಗಿದ್ದಾರೆ. ಇವರು ಕೊಂಕಣಿ ಭಾಷೆಯಲ್ಲಿ ಬರೆಯುತ್ತಿದ್ದ ಭಾರತದ ಓರ್ವ ಲೇಖಕ. ಜೊತೆಗೆ ಹಿಂದಿ ಹಾಗೂ ಮರಾಠಿಯಲ್ಲೂ ತಮ್ಮ ಲೇಖನಗಳನ್ನು ಪ್ರಕಟಿಸಿದ್ದಾರೆ. ರವೀಂದ್ರ ಕೇಳೆಕರ್ ಅವರು ಗಾಂಧಿವಾದಿಗಳಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರಾಗಿ ಹಾಗೂ ಆಧುನಿಕ ಕೊಂಕಣಿ ಚಳುವಳಿಯ ಪ್ರವರ್ತಕರಾಗಿ ಪ್ರಖ್ಯಾತರಾಗಿದ್ದಾರೆ. ಕೇಳೆಕರ್ ಅವರು ಭಾರತೀಯ ಸ್ವಾತಂತ್ರ್ಯ ಚಳುವಳಿ, ಗೋವಾ ವಿಮೋಚನೆ ಚಳುವಳಿ, ಹೊಸದಾಗಿ ರೂಪುಗೊಂಡ ಗೋವಾ ಜೊತೆ ಮಹಾರಾಷ್ಟದ ವಿಲೀನದ ವಿರುದ್ದ ನಡೆದ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇವರು ಕೊಂಕಣಿ ಭಾಷಾ ಮಂಡಲವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು, ಇದರಿಂದ ಕೊಂಕಣಿಯು ಪೂರ್ಣಪ್ರಮಾಣದಲ್ಲಿ ಒಂದು ಭಾಷೆಯಾಗಿ ಗುರುತಿಸುವಂತಹ ಸಾಹಿತ್ಯ ಪ್ರಕಾರವಾಗುವಂತೆ ಮಂಡಲವು ಮಾಡುತ್ತದೆ. ಈ ಕಾರಣದಿಂದ ಕೊಂಕಣಿಯು ಗೋವಾದ ರಾಜ್ಯ ಭಾಷೆಯಾಗುತ್ತದೆ. ಕೇಳೆಕರ್ ಅವರು ಸುಮಾರು ೧೦೦ ಪುಸ್ತಕಗಳನ್ನು ಕೊಂಕಣಿಯಲ್ಲಿ ಬರೆದಿದ್ದಾರೆ. ಅವುಗಳಲ್ಲಿ ಅಂಚಿ ಭಾಸ್ ಕೊಂಕನೀಚ್, ಶಾಲೆಂಟ್ ಕೊಂಕಣಿ ಕಿತ್ಯಕ್, ಸಮಾಜ್ ಶಾಸ್ತ್ರ ಮತ್ತು ಹಲವಾರು. ಇವರು ಜಾಗ ಎಂಬ ಮಾಸ ಪತ್ರಿಕೆಯನ್ನು ಎರಡು ದಶಕಗಳಿಗಿಂತ ಹೆಚ್ಚು ಕಾಲ ಸಂಪಾದಿಸಿದ್ದಾರೆ. ಕೇಳೆಕರ್ ಶುಕ್ರವಾರ ಆಗಸ್ಟ್ ೨೭ ರಂದು ಸುಮಾರು ೧೧:೩೦ಕ್ಕೆ ಗೋವಾದ ಮಡಗಾಂವ್‍ನ ಅಪೋಲೋ ಆಸ್ಪತ್ರೆಯಲ್ಲಿ ತಮ್ಮ ಎಂಬತ್ತೈದನೇಯ ವಯಸ್ಸಿನಲ್ಲಿ ನಿಧನರಾದರು.[೧] ಅವರ ಅಂತ್ಯಸಂಸ್ಕಾರವನ್ನು ರಾಜ್ಯ ಗೌರವಗಳ ಸಮೇತ ಸ್ವಗ್ರಾಮದಲ್ಲಿ ನಡೆಸಲಾಯಿತು. ಕೇಳೆಕರ್ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಅವುಗಳಲ್ಲಿ ಪದ್ಮಭೂಷಣ(೨೦೦೮)[೨], ಕಲಾ ಅಕಾಡೆಮಿಯ ಗೋಮಂತ್ ಶಾರದ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಫಿಪ್ (೨೦೦೭) -ಇದು ಸಾಹಿತ್ಯ ಅಕಾಡೆಮಿಯ ಅತ್ಯುನ್ನತ ಪ್ರಶಸ್ತಿ ಹಾಗೂ ಜ್ಙಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ (ಇವರು ಜ್ಙಾನಪೀಠ ಪ್ರಶಸ್ತಿ ಪಡೆದ ಮೊದಲ ಕೊಂಕಣಿ ಲೇಖಕ)[೩]. ಇದನ್ನು ಜುಲೈ ೨೦೧೦ ರಂದು ನೀಡಲಾಯಿತು.
ರವೀಂದ್ರ ಕೇಳೆಕರ್ | |
---|---|
ಜನನ | ಗೋವಾ, ಭಾರತ | ೭ ಮಾರ್ಚ್ ೧೯೨೫
ಮರಣ | 27 August 2010 ಗೋವಾ, ಭಾರತ | (aged 85)
ಅಂತ್ಯ ಸಂಸ್ಕಾರ ಸ್ಥಳ | ಪ್ರಿಯಾಲ್, ಗೋವಾ, ಭಾರತ. |
ವೃತ್ತಿ | ಸ್ವಾತಂತ್ರ್ಯ ಹೊರಾಟಗಾರ, ಕವಿ, ಬರಹಗಾರ |
ಭಾಷೆ | ಕೊಂಕಣಿ |
ಜನಾಂಗೀಯತೆ | ಕೊಂಕಣಿ |
ಜನನ ಮತ್ತು ಬಾಲ್ಯ
ಬದಲಾಯಿಸಿಕೇಳೆಕರ್ ಅವರು ೨೫ನೇ ಮಾರ್ಚ್ ೧೯೨೫ರಂದು ದಕ್ಷಿಣ ಗೋವಾದ ಕುನ್ಕೊಲಿಮ್‍ನಲ್ಲಿ ಜನಿಸಿದರು. ಅವರ ತಂದೆ ಡಾ.ರಾಜಾರಾಮ್ ಕೇಳೆಕರ್ ಒಬ್ಬ ವೈದ್ಯ. ನಂತರ ಅವರು ಭಗವದ್ಗೀತೆಯನ್ನು ಪೊರ್ಚುಗೀಸ್ ಭಾಷೆಗೆ ಅನುವಾದಿಸಿ ಪ್ರಸಿದ್ದರಾದರು. ರವೀಂದ್ರರವರು ಪಣಜಿಯ ಲೈಸಿಯಂ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವಾಗಲೇ ೧೯೪೬ರ ಗೋವಾ ವಿಮೋಚನೆ ಚಳುವಳಿಯಲ್ಲಿ ಭಾಗವಹಿಸಿದ್ದರು. ಇದರಿಂದ ಅವರಿಗೆ ರಾಮ್ ಮನೋಹರ್ ಲೋಹಿಯಾರಂತಹ ರಾಷ್ಟ್ರನಾಯಕರೊಂದಿಗೆ ನಿಕಟ ಸಂಪರ್ಕ ಬೆಳೆಯಿತು. ಇಂಥ ನಾಯಕರ ಪ್ರಭಾವದ ಅಡಿಯಲ್ಲಿ ರವೀಂದ್ರರವರಿಗೆ ಸ್ಥಳೀಯ ಜನರನ್ನು ರಾಷ್ಟ್ರಿಯತೆಗಾಗಿ ಸಜ್ಜುಗೊಳಿಸುವಲ್ಲಿ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಯುವಂತಾಯಿತು. ಮುಂದೆ ಅವರು ತಮ್ಮ ಮಾತೃಭಾಷೆಯಾದ ಕೊಂಕಣಿಯ ಶಕ್ತಿಯನ್ನು ಅರಿಯುತ್ತಾರೆ.
ವೃತ್ತಿ ಜೀವನ
ಬದಲಾಯಿಸಿಈಗಾಗಲೇ ಗಾಂಧಿಯನ್ ತತ್ವಗಳಿಂದ ಪ್ರಭಾವಿತರಾಗಿದ್ದ ಕೇಳೆಕರ್ ೧೯೪೯ರಲ್ಲಿ ತಮ್ಮ ನಾಡಾದ ಗೋವಾವನ್ನು ಬಿಟ್ಟು ವಾರ್ಧಗೆ ತೆರಳಿದರು. ಅಲ್ಲಿ ಅವರು ಪ್ರಸಿದ್ಧ ಬರಹಗಾರ ಹಾಗೂ ಗಾಂಧಿಯನ್ ಆದ ಕಾಕಸಾಹೆಬ್ ಕಲೆಲ್ಲ್ಕಾರ್ ಜೊತೆಯಲ್ಲಿ ೧೯೫೫ರವರೆಗೆ ಇದ್ದು ಅವರ ಮಾರ್ಗದರ್ಶದಲ್ಲಿ ನಡೆಯುತ್ತಾರೆ. ಈ ಮಧ್ಯದಲ್ಲಿ ರವೀಂದ್ರರವರು ದಿಲ್ಲಿಯ 'ಗಾಂಧಿ ಮೆಮೋರಿಯಲ್ ಮ್ಯೂಸಿಯಮ್'ನಲ್ಲಿ ಗ್ರಂಥಾಲಯದ ಮೇಲ್ವಿಚಾರಕರಾಗಿ ನೇಮಕಗೊಳ್ಳುತ್ತಾರೆ. ಇದರಿಂದ ಗೋವಾ ಸ್ವಾತಂತ್ರ್ಯ ಚಳುವಳಿಯಿಂದ ಒಂದು ವರ್ಷ ದೂರ ಉಳಿಯುತ್ತಾರೆ ಮತ್ತೆ ಬಂದು ಚಳುವಳಿಯಲ್ಲಿ ಭಾಗವಹಿಸುತ್ತಾರೆ. ಇದರ ಉದ್ದೇಶ ಗೋವಾದಿಂದ ಪ್ರಪಂಚದಾದ್ಯಂತ ವಲಸೆ ಹೋಗಿರುವ ಜನರನ್ನು ಮತ್ತೆ ಒಗ್ಗೂಡಿಸುವುದಾಗಿತ್ತು. ಅದ್ದಕ್ಕಾಗಿ ಅವರು ಗೋಮಂತ್ ಭಾರತಿಯಂಬ ವಾರಪತ್ರಿಕೆಯನ್ನು ಲ್ಯಾಟಿನ್ ಭಾಷೆಯಲ್ಲಿ ಬಾಂಬೆಯಲ್ಲಿ (೧೯೫೬-೧೯೬೦) ಪ್ರಕಟಿಸಿದರು. ನಂತರದಲ್ಲಿ ಗೋವಾ ಚಳುವಳಿಯಲ್ಲಿ ಭಾಗವಹಿಸಿದ ಕಾರಣದಿಂದ ಪೊರ್ಚುಗೀಸರಿಂದ ಜೈಲು ಶಿಕ್ಷೆಗೆ ಒಳಗಾದರು. ೧೯೬೧ರಲ್ಲಿ ಭಾರತದ ಸೇನೆ ಗೋವಾದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಿದ್ದ ಸಂದರ್ಭದಲ್ಲಿ ರವೀಂದ್ರರವರನ್ನು ಜೈಲಿನಿಂದ ಬಿಡಿಸಲಾಯಿತು. ಕೇಳೆಕರ್ ಅವರು ಮಹಾರಾಷ್ಟ್ರ ಜೊತೆ ಗೋವಾ ವಿಲೀನವನ್ನು ವಿರೋಧಿಸಿ ಸಾಮಾಜಿಕ ಪ್ರಚಾರವನ್ನು ಕೈಗೊಳ್ಳುತ್ತಾರೆ. ನಂತರ ೧೯೬೭ರಲ್ಲಿ ಜನಮತದ ಆಧಾರದ ಮೇಲೆ ಗೋವಾ ಕೇಂದ್ರಾಡಳಿತಕ್ಕೆ ಒಳಪಡುತ್ತದೆ, ಮುಂದೆ ೧೯೮೭ರಲ್ಲಿ ಗೋವಾ ಒಂದು ಪ್ರತ್ಯೇಕ ರಾಜ್ಯವೆಂದು ಘೋಷಿಸಲಾಗುತ್ತದೆ. ಗೋವಾ ಸ್ವಾತಂತ್ರ್ಯಗೊಂಡ ಮೇಲೆ ರವೀಂದ್ರರವರು ಸ್ಥಳಿಯ ಭಾಷೆಯಾದ ಕೊಂಕಣಿಯನ್ನು ಒಂದು ಸ್ವತಂತ್ರ ಭಾಷೆಯನ್ನಾಗಿಸಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಕೃತಿಗಳಲ್ಲಿ ಕೊಂಕಣಿ ಭಾಷೆಯ ಪ್ರಮುಖ್ಯತೆಯನ್ನು ವಿವರಿಸಿದ್ದಾರೆ. ಅವರ ಕೃತಿಗಳಾದ 'ಅಮಚಿ ಭಾಸ್ ಕೊಂಕಣಿಚ್' ಇದು ಕೊಂಕಣಿ ಭಾಷೆಯ ಪ್ರಾಮುಖ್ಯತೆಯನ್ನು ಜನರಿಗೆ ಬೀದಿಗಳಲ್ಲಿ ತಿಳಿಸುವ ಸಂಭಾಷಣೆಯನ್ನು ಒಳಗೊಂಡಿದೆ. 'ಶಾಲೆಂಟ್ ಕೊಂಕಣಿ ಕಿತಿಯಾಕ್' ಇದರಲ್ಲಿ ಗೋವಾದಲ್ಲಿ ಕೊಂಕಣಿ ಮಾಧ್ಯಮ ಶಾಲೆಗಳ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ ಹಾಗೂ ಅದು ಕನ್ನಡ, ದೇವನಾಗರಿ, ಕನ್ನಡ ಅಕ್ಷರಗಳಿಗೆ ಕೊಂಕಣಿಯ ಗ್ರಂಥಸೂಚಿಯಾಗಿದೆ. ೧೯೮೭ನಲ್ಲಿ ಕೊಂಕಣಿಯನ್ನು ಗೋವಾದ ಅಧಿಕೃತ ಭಾಷೆಯಾಗಿಸಲು ಭಾಷಾಮಸೂದೆಯನ್ನು ಜಾರಿ ಮಾಡಿತು. ಇದರಿಂದ ಕೇಳೆಕರ್ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿ ಸಾಹಿತ್ಯದ ಮೇಲೆ ಹೆಚ್ಚು ಗಮನ ಹರಿಸಿದರು. ೨೬ನೇ ಫೆಬ್ರವರಿ ೧೯೭೫ರಂದು ಸಾಹಿತ್ಯ ಅಕಾಡೆಮಿ ಹಾಗೂ ಭಾರತದ ರಾಷ್ಟೀಯ ಲೆಟರ್ಸ ಅಕಾಡೆಮಿ ಕೊಂಕಣಿಯನ್ನು ಒಂದು ಸ್ವತಂತ್ರ ಭಾಷೆಯಂದು ಗುರುತಿಸಿತು.
ಪ್ರಶಸ್ತಿಗಳು
ಬದಲಾಯಿಸಿ- ಕೊಂಕಣಿಯಲ್ಲಿ ಮೊದಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ಹಿಮಾಲಯತ್ (ಪ್ರವಾಸಕಥನ)
- ಜೀವಮಾನ ಸಾಧನೆಗಾಗಿ - ೨೦೦೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್
- ೨೦೦೬ರಲ್ಲಿ ಕೊಂಕಣಿಯಲ್ಲಿ ಮೊದಲ ಜ್ಙಾನಪೀಠ ಪ್ರಶಸ್ತಿಯನ್ನು ಪಡೆದ್ದಿದ್ದಾರೆ
ವೈಯಕ್ತಿಕ ಜೀವನ
ಬದಲಾಯಿಸಿಕೇಳೆಕರ್ ಅವರು ೧೯೪೯ರಲ್ಲಿ ಗೋಡುಬಾಯಿಸರ್ದೀಸಾಯಿಯವರನ್ನು ಮದುವೆಯಾದರಯ. ಅವರಿಗೆ ಗಿರೀಶ್ ಎಂಬ ಪುತ್ರ ಜನಿಸಿದನು. ಕೇಳೆಕರ್ ಅವರು ತಮ್ಮ ಪೂರ್ವಜರು ಬಾಳಿದ ಮನೆಯಲ್ಲೇ ಇದ್ದರು. ಅದನ್ನು ಅವರ ತಂದೆಯವರು ಕಟ್ಟಿದ್ದರು. ಅದನ್ನು ಕೇಳೆಕರ್ ಮನೆಯಂದೆ ಕರೆಯಲಾಗುತ್ತದೆ. ಅವರಲ್ಲಿ ಗೋವಾ ಸಮುದಾಯದ ಸಂಪ್ರದಾಯ ಅನುಕರಣೀಯವಾಗಿದೆ.
ಕೇಳೆಕರ್ ಬರೆದ ಕೃತಿಗಳು
ಬದಲಾಯಿಸಿಕೊಂಕಣಿಲ್ಲಿ
ಹಿಮಾಲಯತ್
ನವೀ ಶಾಲ
ಸತ್ಯಗ್ರಹ
ಮಂಗಲ್ ಪ್ರಭಾತ್
ಮಹಾತ್ಮ
ಆಶೇ ಆಷಿಲ್ಲೇ ಗಾಂಧೀಜಿ
ಕಥಾ ಆನಿ ಕನ್ಯೊ
ತುಳಶಿ
ಭಜ ಗೊವಿಂದಮ‍್
ಟೀನ್ ಜೀವನ ನಡೆಸು ಟೀನ್
ಲಾಲಾ ಬಾಲಾ
ಮಹಾಭಾರತ(ಎರಡು ಸಂಪುಟಗಳು)
ಮರಾಠಿ
ಜಪಾನ್ ಜಸ ದಿಲ್ ಸ
ಇವರು ಜ್ಞಾನ ಪ್ರಶಸ್ತಿಯನ್ನು ಪಡೆದ ಸಂದರ್ಭದ ಭಾಷಣದಲ್ಲಿ ಅವರು ಪ್ರಾದೇಶಿಕ ಭಾಷೆಗಳು ತಮ್ಮ ಮೌಲ್ಯಗಳನ್ನು ಕಳೆದುಕೊಂಡಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ, ಹಾಗೂ ಪ್ರಾದೇಶಿಕ ಭಾಷೆಯ ಕೃತಿಗಳನ್ನು ಜನರು ಹೆಚ್ಚಾಗಿ ಓದಬೇಕೆಂಬ ಕರೆಯನ್ನು ನೀಡಿದ್ದಾರೆ. ವಿಶ್ವ ಕೊಂಕಣಿಯ ಸಾಹಿತ್ಯ ಅಕಾಡೆಮಿಯು (೨೦೦೬) ಕೇಳೆಕರ್‍ರವರ ಮೊದಲ ಕೃತಿ 'ವೆಲವ್ಯದೋ ಧುಲೊ'(ಪ್ರಬಂಧ ಸಂಕಲನ)ವನ್ನು ಅನುವಾದಿಸಿತು.
ಹೊರಗಿನ ಸಂಪರ್ಕಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಕೇಳೆಕರ್ ನಿಧನ".
- ↑ "ಪದ್ಮಭೂಷಣ ಪ್ರಶಸ್ತಿಗಳು".
- ↑ "ಜ್ಙಾನಪೀಠ ಪ್ರಶಸ್ತಿ ಪಡೆದ ಮೊದಲ ಕೊಂಕಣಿ ಲೇಖಕ".[ಶಾಶ್ವತವಾಗಿ ಮಡಿದ ಕೊಂಡಿ]