'ವಿಂದಾ ಕರಂದೀಕರ್' ಎಂದು ಕರೆಯಲ್ಪಡುವ ಗೋವಿಂದ್ ವಿನಾಯಕ್ ಕರಂದೀಕರ್ (೨೩ ಆಗಸ್ಟ್ ೧೯೧೮ - ೧೪ ಮಾರ್ಚ್ ೨೦೧೦), ಒಬ್ಬ ಭಾರತೀಯ ಕವಿ, ಬರಹಗಾರ, ಸಾಹಿತ್ಯ ವಿಮರ್ಶಕ ಮತ್ತು ಮರಾಠಿ ಭಾಷೆಯ ಅನುವಾದಕ.[]

ಗೋವಿಂದ್ ವಿನಾಯಕ್ ಕರಂದೀಕರ್
ಜನನ(೧೯೧೮-೦೮-೨೩)೨೩ ಆಗಸ್ಟ್ ೧೯೧೮
ಧಲಾವಲಿ, ಬಾಂಬೆ ಪ್ರಾಂತ್ಯ, ಬ್ರಿಟಿಷ್ ಭಾರತ
ಮರಣ೧೪ ಮಾರ್ಚ್ ೨೦೧೦(ವಯಸ್ಸು ೯೧)
ಮುಂಬೈ, ಭಾರತ
ಕಾವ್ಯನಾಮವಿಂದಾ ಕರಂದೀಕರ್
ವೃತ್ತಿ
  • ಬರಹಗಾರ
  • ಕವಿ
  • ಪ್ರಬಂಧಕಾರ
  • ವಿಮರ್ಶಕ
ರಾಷ್ಟ್ರೀಯತೆ British Raj (೧೯೧೮-೧೯೪೭)
 India (೧೯೪೭-೨೦೧೦)
ವಿದ್ಯಾಭ್ಯಾಸಎಂ.ಎ.
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯ ಅಕಾಡೆಮಿ ಫೆಲೋಶಿಪ್ (೧೯೯೬)
ಜ್ಞಾನಪೀಠ ಪ್ರಶಸ್ತಿ (೨೦೦೬)
ಬಾಳ ಸಂಗಾತಿಸುಮತಿ ಕರಂದೀಕರ್ ಮಕ್ಕಳು ಆನಂದ್, ಜಯಶ್ರೀ

ಆರಂಭಿಕ ಜೀವನ

ಬದಲಾಯಿಸಿ

ಕರಂದೀಕರ್ ಅವರು ೨೩ ಆಗಸ್ಟ್ ೧೯೧೮ ರಂದು ಮಹಾರಾಷ್ಟ್ರದ ಇಂದಿನ ಸಿಂಧುದುರ್ಗ ಜಿಲ್ಲೆಯ ದೇವಗಡ ತಾಲೂಕಿನ ಢಲವಲಿ ಗ್ರಾಮದಲ್ಲಿ ಜನಿಸಿದರು.

ಕೃತಿಗಳು

ಬದಲಾಯಿಸಿ

ಕರಂದೀಕರ್ ಅವರ ಕಾವ್ಯ ಕೃತಿಗಳು ಸ್ವೇದಗಂಗಾ (ಬೆವರಿನ ನದಿ) (೧೯೪೯), ಮೃದ್ಗಂಧ (೧೯೫೪), ಧ್ರುಪದ್ (೧೦೫೯), ಜಾತಕ್ (೧೯೬೮), ಮತ್ತು ವಿರೂಪಿಕಾ' (೧೯೮೦).[] ಅವರ ಆಯ್ದ ಕವಿತೆಗಳ ಎರಡು ಸಂಕಲನಗಳಾದ ಸಂಹಿತಾ (೧೯೭೫) ಮತ್ತು ಆದಿಮಯ (೧೯೯೦) ಕೂಡ ಪ್ರಕಟಗೊಂಡವು. ಮಕ್ಕಳಿಗಾಗಿ ಅವರ ಕಾವ್ಯ ಕೃತಿಗಳು ರಾಣಿಚಾ ಬಾಗ್ (೧೯೬೧), ಸಶ್ಯಾಚೆ ಕಾನ್ (೧೯೬೩), ಮತ್ತು ಪರಿ ಗಾ ಪರಿ (೧೯೬೫) ಸೇರಿವೆ. ಕರಂದೀಕರ್ ಅವರ ಮರಾಠಿ ಕವಿತೆಗಳು ವೈಶಿಷ್ಟ್ಯವಾಗಿದೆ. ಅವರು ಇಂಗ್ಲಿಷ್‌ನಲ್ಲಿ ತಮ್ಮದೇ ಆದ ಕವಿತೆಗಳನ್ನು ಅನುವಾದಿಸಿದರು, ಅದನ್ನು "ವಿಂದಾ ಕವಿತೆಗಳು" (೧೯೭೫) ಎಂದು ಪ್ರಕಟಿಸಲಾಯಿತು. ಅವರು ಜ್ಞಾನೇಶ್ವರಿ ಮತ್ತು ಅಮೃತಾನುಭವದಂತಹ ಹಳೆಯ ಮರಾಠಿ ಸಾಹಿತ್ಯವನ್ನು ಆಧುನಿಕಗೊಳಿಸಿದರು.

ಪ್ರಮುಖ ಮರಾಠಿ ಕವಿಯಾಗುವುದರ ಜೊತೆಗೆ, ಕರಂದೀಕರ್ ಅವರು ಮರಾಠಿ ಸಾಹಿತ್ಯಕ್ಕೆ ಪ್ರಬಂಧಕಾರ, ವಿಮರ್ಶಕ ಮತ್ತು ಅನುವಾದಕರಾಗಿ ಕೊಡುಗೆ ನೀಡಿದ್ದಾರೆ. ಅವರು ಮರಾಠಿಯಲ್ಲಿ ಪೊಯೆಟಿಕ್ಸ್ ಆಫ್ ಅರಿಸ್ಟಾಟಲ್ ಮತ್ತು ಕಿಂಗ್ ಲಿಯರ್ ಆಫ್ ಷೇಕ್ಸ್‌ಪಿಯರ್ ಅನ್ನು ಅನುವಾದಿಸಿದರು. ಕರಂದೀಕರ್ ಅವರ ಕಿರು ಪ್ರಬಂಧಗಳ ಸಂಗ್ರಹಗಳಲ್ಲಿ ಸ್ಪರ್ಶಾಚಿ ಪಾಲ್ವಿ (೧೯೫೮) ಮತ್ತು ಆಕಾಶಚಾ ಅರ್ಥ (೧೯೬೫) ಸೇರಿವೆ. ಪರಂಪರಾ ಅನಿ ನವತ (೧೯೬೭), ಇದು ಅವರ ವಿಶ್ಲೇಷಣಾತ್ಮಕ ವಿಮರ್ಶೆಗಳ ಸಂಗ್ರಹವಾಗಿದೆ.[]

ಕವಿಗಳಾದ ವಸಂತ ಬಾಪಟ್, ವಿಂದಾ ಕರಂದೀಕರ್ ಮತ್ತು ಮಂಗೇಶ್ ಪಡ್ಗಾಂವ್ಕರ್ ಅವರು ಮಹಾರಾಷ್ಟ್ರದ ವಿವಿಧ ಪಟ್ಟಣಗಳಲ್ಲಿ ತಮ್ಮ ಕವನಗಳ ಸಾರ್ವಜನಿಕ ವಾಚನಗೋಷ್ಠಿಯನ್ನು ಹಲವು ವರ್ಷಗಳ ಕಾಲ ಮಾಡಿದರು. ವಸಂತ ಬಾಪಟ್ ಮತ್ತು ಪಡ್ಗಾಂವ್ಕರ್ ಅವರೊಂದಿಗೆ, ಕರಂದೀಕರ್ ಅವರು ೧೯೬೦ ಮತ್ತು ೧೯೭೦ ರ ದಶಕಗಳಲ್ಲಿ ಕವನ ವಾಚನ ಮಾಡುತ್ತಾ ಮಹಾರಾಷ್ಟ್ರದಾದ್ಯಂತ ಪ್ರಯಾಣಿಸಿದರು.[] ಕರಂದೀಕರ್ ಅವರು "ಮುರ್ಗಿ ಕ್ಲಬ್" ಎಂಬ ಮರಾಠಿ ಸಾಹಿತ್ಯ ಗುಂಪಿನ ಸದಸ್ಯರಾಗಿದ್ದರು. ಕರಂದೀಕರ್ ಜೊತೆಗೆ ವಸಂತ ಬಾಪಟ್, ಮಂಗೇಶ್ ಪಡಗಾಂವ್ಕರ್, ಗಂಗಾಧರ ಗಾಡ್ಗೀಳ್, ಸದಾನಂದ್ ರೇಗೆ ಮತ್ತು ಶ್ರೀ ಪು ಭಾಗವತ್ ಕೂಡ ಸೇರಿದ್ದರು. ಅವರು ಹಲವಾರು ವರ್ಷಗಳಿಂದ ಒಟ್ಟಿಗೆ ಕೂತು ಊಟ ಮಾಡಲು ಪ್ರತಿ ತಿಂಗಳು ಭೇಟಿಯಾಗುತ್ತಿದ್ದರು, ಇದರ ಜೊತೆಗೆ ಪದಗಳ ಆಟ ಮತ್ತು ಸಾಹಿತ್ಯದ ಹಾಸ್ಯಗಳಲ್ಲಿ ಪರಸ್ಪರ ತೊಡಗಿಸಿಕೊಂಡರು.[]

ಪ್ರಶಸ್ತಿಗಳು

ಬದಲಾಯಿಸಿ

ಕರಂದೀಕರ್ ಅವರಿಗೆ ೨೦೦೬ ರಲ್ಲಿ ೩೯ ನೇ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಯಿತು, ಇದು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ.[] ವಿಷ್ಣು ಸಖಾರಾಮ್ ಖಾಂಡೇಕರ್ (೧೯೭೪) ಮತ್ತು ವಿಷ್ಣು ವಾಮನ್ ಶಿರ್ವಾಡ್ಕರ್ (ಕುಸುಮಾಗ್ರಜ್) (೧೯೮೭) ನಂತರ ಜ್ಞಾನಪೀಠ ಪ್ರಶಸ್ತಿಯನ್ನು ಗೆದ್ದ ಮೂರನೇ ಮರಾಠಿ ಬರಹಗಾರರಾಗಿದ್ದರು. ಕರಂದೀಕರ್ ಅವರು ಕೇಶವಸುತ್ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರು ಸಾಹಿತ್ಯ ಪ್ರಶಸ್ತಿ, ಕಬೀರ್ ಸಮ್ಮಾನ್ ಮತ್ತು ೧೯೯೬ ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಸೇರಿದಂತೆ ಅವರ ಸಾಹಿತ್ಯಿಕ ಕೆಲಸಕ್ಕಾಗಿ ಇತರ ಕೆಲವು ಪ್ರಶಸ್ತಿಗಳನ್ನು ಪಡೆದರು.[]

ವಿಂದಾ ಕರಂದೀಕರ್ ಅವರು ೧೪ ಮಾರ್ಚ್ ೨೦೧೦ ರಂದು ತಮ್ಮ ೯೧ ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು.

ಹೊರಗಿನ ಸಂಪರ್ಕ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Gokhale, Meena (19 August 2018). "बहुरूपी विंदा". Loksatta (in ಮರಾಠಿ). Retrieved 2019-04-16.
  2. "'Study of human, nature reflected in Vinda's poetry'". The Times of India. 3 August 2018. Retrieved 16 April 2019.
  3. "Marathi Poet Govind Vinayak Passes Away". Mumbai: Outlook. 14 ಮಾರ್ಚ್ 2010. Archived from the original on 18 ಜುಲೈ 2011. Retrieved 15 ಮಾರ್ಚ್ 2010.
  4. "Arun Date, Mangesh Padgaonkar to perform at KA". Navhind Times. 24 ಏಪ್ರಿಲ್ 2010. Archived from the original on 3 ಮಾರ್ಚ್ 2012. Retrieved 7 ಸೆಪ್ಟೆಂಬರ್ 2012.
  5. Loksatta. "माझा विक्षिप्त मित्र". लोकसत्ता लोकरंग. Loksatta Newspaper. Retrieved 31 December 2015.
  6. "Marathi litterateur Karandikar conferred Jnanpith". Indian Express. 11 Aug 2006.
  7. Fellowships Archived 30 June 2007 ವೇಬ್ಯಾಕ್ ಮೆಷಿನ್ ನಲ್ಲಿ. Sahitya Akademi Official website.


ಹೆಚ್ಚಿನ ಓದುವಿಕೆ

ಬದಲಾಯಿಸಿ