ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

(ಬನ್ನೇರ್ಘಟ್ಟ ಇಂದ ಪುನರ್ನಿರ್ದೇಶಿತ)

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು : ಭಾರತದ ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ಭಾತದ ಕರ್ನಾಟಕದಲ್ಲಿರುವ ಬೆಂಗಳೂರು ಮತ್ತು ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ 10ರಷ್ಟು ಮತ್ತು ರಾಮನಗರ ಜಿಲ್ಲೆಯ ಹಾರೋಹಳ್ಳಿ ಮತ್ತು ಕೋಡಿಹಳ್ಳಿ ತಾಲ್ಲೂಕಿನಲ್ಲಿ 90ರಷ್ಟು ಅರಣ್ಯ ಪ್ರದೇಶ ಹೊಂದಿದೆ. ಇದನ್ನು ೧೯೭೦ ರಲ್ಲಿ ಸ್ಥಾಪಿಸಲಾಯಿತು.[] ಇದನ್ನು ೧೯೭೪ ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ೨೦೦೨ ರಲ್ಲಿ, ಉದ್ಯಾನದ ಒಂದು ಸಣ್ಣ ಭಾಗವು ಬನ್ನೇರುಘಟ್ಟ ಜೈವಿಕ ಉದ್ಯಾನವನವಾಗಿ ಪ್ರಾಣಿಶಾಸ್ತ್ರದ ಉದ್ಯಾನವಾಯಿತು.[]

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
IUCN category II (national park)
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ
Map showing the location of ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
Map showing the location of ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
Bannerghatta Biological Park
ಸ್ಥಳಕರ್ನಾಟಕ, ಭಾರತ
ನಿರ್ದೇಶಾಂಕಗಳು12°48′03″N 77°34′32″E / 12.80083°N 77.57556°E / 12.80083; 77.57556
ಪ್ರದೇಶ260.51 km2 (100.58 sq mi)
ಸ್ಥಾಪನೆ೧೯೭೪
ಆಡಳಿತ ಮಂಡಳಿಪರಿಸರ ಮತ್ತು ಅರಣ್ಯ ಸಚಿವಾಲಯ, ಭಾರತ ಸರ್ಕಾರ
bannerghattabiologicalpark.org

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಟ್ರೆಕ್ಕಿಂಗ್ ಮತ್ತು ಹೈಕಿಂಗ್‌ಗೆ ಒಂದು ತಾಣವಾಗಿದೆ. ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ಕುರಿ ಮತ್ತು ಜಾನುವಾರು ಸಾಕಣೆಗಾಗಿ ಮೂರು ದೊಡ್ಡ ಆವರಣಗಳಲ್ಲಿ ಸುತ್ತುವರಿದ ಆರು ಗ್ರಾಮೀಣ ಹಳ್ಳಿಗಳಿವೆ.[]

೨೫ ಸಾವಿರ ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿರುವ ಈ ಮೀಸಲು ಪ್ರದೇಶ ಹುಲಿ, ಸಿಂಹ, ಚಿರತೆ, ಕಾಡುಕೋಣ, ಜಿಂಕೆ, ಕರಡಿಗಳು, ಪಕ್ಷಿಗಳು ಮತ್ತು ವಿವಿಧ ಜಾತಿಯ ಚಿಟ್ಟೆಗಳ ನೆಲೆಯಾಗಿದೆ. ಪ್ರವಾಸಿಗರು ಸಫಾರಿ ಮಾಡುವಾಗ ಚಿರತೆಗಳು, ಬಿಳಿ ಹುಲಿಗಳು, ಬಂಗಾಳದ ಹುಲಿ, ಮತ್ತು ಕಾಡಿನ ರಾಜ ಸಿಂಹ ಅರಣ್ಯದಲ್ಲಿ ಸುತ್ತಾಡುವುದನ್ನು ನೋಡಬಹುದು.

ಇಲ್ಲಿರುವ ಕೆಲವು ಪ್ರಾಣಿಗಳು ಸರ್ಕಸ್‌ಗಳಿಂದ ರಕ್ಷಿಸಲ್ಪಟ್ಟವುಗಳು. ಇನ್ನು ಕೆಲವು ದೇಶದ ಇತರೆಡೆಗಳಿಂದ ಕೂಡ ತರಿಸಿಕೊಳ್ಳಲಾಗಿದೆ. ಸಂಪೂರ್ಣ ರಕ್ಷಣೆಯಲ್ಲಿರುವ ಈ ಪ್ರಾಣಿಗಳು ನಾಡಿಗೆ ಬರದಂತೆ ಅರಣ್ಯದ ಸೂಕ್ಷ್ಮ ಸ್ಥಳಗಳಲ್ಲಿ ಬೇಲಿಯನ್ನು ಹಾಕಲಾಗಿದೆ.

ಭೂಗೋಳಶಾಸ್ತ್ರ

ಬದಲಾಯಿಸಿ

೬೫,೧೨೭.೫ ಎಕರೆ (೨೬೦.೫೧ ಚದರ ಕಿಲೋಮೀಟರ್)[] ಇರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಬೆಂಗಳೂರಿನಿಂದ ದಕ್ಷಿಣಕ್ಕೆ ೨೨ ಕಿಮೀ ದೂರದಲ್ಲಿ ಆನೇಕಲ್ ಶ್ರೇಣಿಯ ಬೆಟ್ಟಗಳಲ್ಲಿ ೧೨೪೫ - ೧೬೩೪ ಮೀ ಎತ್ತರದಲ್ಲಿದೆ.[] ಈ ಉದ್ಯಾನವನವು ತೇವಾಂಶವುಳ್ಳ ಎಲೆಯುದುರುವ ಅರಣ್ಯ ಕಣಿವೆಗಳು ಮತ್ತು ಎತ್ತರದ ಪ್ರದೇಶಗಳಲ್ಲಿ ಕುರುಚಲು ಪ್ರದೇಶದ ಅಡಿಯಲ್ಲಿ ಗ್ರಾನೈಟ್ ಹಾಳೆಗಳ ಗುಡ್ಡಗಾಡು ಪ್ರದೇಶವನ್ನು ಹೊಂದಿದೆ.[]

 
ಬನ್ನೇರುಘಟ್ಟ ಮೃಗಾಲಯದಲ್ಲಿ ಚಿರತೆ

ಹುಲಿ ಮತ್ತು ಸಿಂಹಧಾಮ

ಬದಲಾಯಿಸಿ
 
ಬನ್ನೇರುಘಟ್ಟದಲ್ಲಿರುವ ಮಲಗಿರುವ ಹುಲಿ

ಬನ್ನೇರುಘಟ್ಟ ಹುಲಿ ಮತ್ತು ಸಿಂಹಧಾಮ ಹುಲಿ, ಇಂಡಿಯನ್ ಹುಲಿಗಳನ್ನು ,ಸಿಂಹಗಳನ್ನು ಮತ್ತು ಇತರೆ ಸಸ್ತನಿಗಳನ್ನು ಹೊಂದಿದೆ. ಇಲ್ಲಿ ಹುಲಿ, ಸಿಂಹಗಳನ್ನು ನೋಡಲು ಮಿನಿ-ಸಫಾರಿಯ ವ್ಯವಸ್ಥೆ ಕೂಡ ಇದೆ.

ಮೃಗಾಲಯ

ಬದಲಾಯಿಸಿ
 
ಬನ್ನೇರುಘಟ್ಟ ಮೃಗಾಲಯದಲ್ಲಿರುವ ಮೊಸಳೆಗಳು

ಮೃಗಾಲಯದಲ್ಲಿ ಮೃಗಾಲಯದಲ್ಲಿ ಒಂದು ವಸ್ತು ಸ೦ಗ್ರಹಾಲಯವೂ ಸಹ ಇದೆ. ಅದರಲ್ಲಿ ಪ್ರಾಣಿಶಾಸ್ತ್ರಕ್ಕೆ ಸ೦ಬ೦ಧಪಟ್ಟ ವಸ್ತುಗಳ ಪ್ರದರ್ಶನ ಮಾಡಲಾಗಿದೆ. ಈ ಮೃಗಾಲಯದಲ್ಲಿ ಸರೀಸೃಪ ಉದ್ಯಾನ ಮತ್ತು ಒಂದು ಸಣ್ಣ ರ೦ಗಮ೦ದಿರವನ್ನೂ ಸಹ ಇದು ಹೊಂದಿದೆ.

ಜಂಗಲ್ ಸಫಾರಿ

ಬದಲಾಯಿಸಿ

ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಕೂಡ ಮಾಡಬಹುದು. ಪ್ರವಾಸಿಗರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡುತ್ತ ಕಾಡಾನೆಗಳು, ಕಾಡುಹಂದಿ, ಮಚ್ಚೆಯುಳ್ಳ ಜಿಂಕೆ ಸೇರಿದಂತೆ ವಿವಿಧ ಜಾತಿ ಜಿಂಕೆ, ಸಾಂಬಾರ್, ಗುಳ್ಳೆನರಿ, ಕರಡಿ, ಕಾಡು ಹಂದಿ, ಲಂಗೂರ್ ಗಳು ಮತ್ತು ಕೋತಿಗಳನ್ನು ನೋಡಬಹುದು. ಜಂಗಲ್ ಸಫಾರಿಯೊಂದಿಗೆ ಆನೆ ಸವಾರಿಯನ್ನು ಸಹ ಮಾಡಬಹುದು.

ಬನ್ನೇರಘಟ್ಟ ಅರಣ್ಯ ಪ್ರದೇಶದಲ್ಲಿಯೇ ಹುಟ್ಟಿದ ಸ್ವರ್ಣಮುಖಿ ಹೊಳೆಯು ಅರಣ್ಯದುದ್ದಕ್ಕೂ ಹರಿಯುತ್ತದೆ. ಅಲ್ಲಿ ಚಂಪಕ ಧಾಮ ಸ್ವಾಮಿಯ ದೇವಸ್ಥಾನ ಇದೆ. ಭಗವಾನ್ ವಿಷ್ಣು ಮತ್ತು ಅವನ ಪತ್ನಿಯರಾದ, ಶ್ರೀ ದೇವಿ ಮತ್ತು ಭೂದೇವಿಯರಮೂರ್ತಿಗಳಿವೆ.

ಮೃಗಾಲಯವು ವಾರದ ದಿನಗಳಲ್ಲಿ ಹಾಗೂ ವಾರದ ಕೊನೆಯ ದಿನಗಳಲ್ಲಿ (ರಜಾದಿನಗಳಲ್ಲಿ) ಬೇರೆ ಬೇರೆ ಪ್ರವೇಶ ಶುಲ್ಕವನ್ನು ಹೊಂದಿರುತ್ತದೆ.

ಬಟರ್‌ಫ್ಲೈ ಪಾರ್ಕ್

ಬದಲಾಯಿಸಿ
 
ಬಟರ್‌ಫ್ಲೈ ಪಾರ್ಕ್‌ನಲ್ಲಿ ಅರ್ಥವಿವರಣೆಯ ಕೇಂದ್ರ

ಈ ಉದ್ಯಾನವನದಲ್ಲಿ ದೇಶದಲ್ಲೇ ಮೊಟ್ಟ ಮೊದಲನೇಯದಾದ ಚಿಟ್ಟೆಗೆಂದೇ ಇರುವ ಉದ್ಯಾನವನವಿದೆ. ಇದು ೭.೫ ಎಕರೆ ವಿಸ್ತೀರ್ಣದಲ್ಲಿದೆ. ಈ ಚಿಟ್ಟೆ ಉದ್ಯಾನವನವನ್ನು ೨೦೦೬ ರಲ್ಲಿ ಕೇಂದ್ರ ಸಚಿವ ಕಪಿಲ ಸಿಬಲ್ ಉದ್ಘಾಟಿಸಿದ್ದಾರೆ. ಸುಮಾರು ೨೦ ರೀತಿಯ ವಿವಿಧ ಜಾತಿಯ ಚಿಟ್ಟೆಗಳನ್ನು ಬಟರ್‌ಫ್ಲೈ ಪಾರ್ಕ್‌ನಲ್ಲಿ ಕಾಣಬಹುದು.ಪ್ರತಿ ಮಂಗಳವಾರ ವಾರದ ರಜೆ ಇರುತ್ತದೆ.

ಬಟರ್‌ಫ್ಲೈ ಸಂರಕ್ಷಣೆ ಮಾಡುವ ಸ್ಥಳವು ಒಂದು ಪಾಲಿಕಾರ್ಬೊನೇಟ್ ಮೇಲ್ಛಾವಣಿಯನ್ನು ಹೊಂದಿದೆ. ಇದು ಸುಮಾರು ೧೦,೦೦೦ ಚದರ ಅಡಿ (೧,೦೦೦ ಚದರ ಮೀಟರ್) ವಿಸ್ತಾರವಾಗಿದೆ. ಇದು ಗೋಳಾಕೃತಿಯ ಸುತ್ತುವರಿಕೆ ಇದ್ದು, ಒಳಭಾಗದಲ್ಲಿ ಸುಮಾರು ೨೦ ತಳಿಗಳ ಬಟರ್‌ಫ್ಲೈಗಳು ವಾಸಿಸಲು ಬೇಕಾದ ವಾತಾವರಣವನ್ನು ವಿನ್ಯಾಸಗೊಳಿಸಿದ್ದಾರೆ.

ನೀರಿನ ಮೂಲಗಳು

ಬದಲಾಯಿಸಿ

ಉದ್ಯಾನವನದಲ್ಲಿ ಮಳೆಯು ವರ್ಷಕ್ಕೆ ಸುಮಾರು ೭೦೦ ಮಿಮೀನಷ್ಟು ಸುರಿಯುತ್ತದೆ. ಸುವರ್ಣಮುಖಿ ಹೊಳೆಯು ಈ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುತ್ತದೆ. ೧೫ ಮೇ ೨೦೧೪ ರಂದು ಒಣ(ಬೇಸಿಗೆ) ಸಮಯದಲ್ಲಿ ನೀರು ಒದಗಿಸಲು ನಾಲ್ಕು ಕೊಳವೆ ಬಾವಿಗಳನ್ನು ತೆರೆಯಲಾಯಿತು.[]

ಸಸ್ಯವರ್ಗ‌ಗಳು, ಪ್ರಾಣಿಸಂಕುಲಗಳು ಮತ್ತು ಸರೀಸೃಪಗಳು

ಬದಲಾಯಿಸಿ
 
ಕಾಡು ಕರಡಿ


ಇತರ ದೇಶಗಳ ಪ್ರಾಣಿಗಳು

ಗ್ಯಾಲರಿ

ಬದಲಾಯಿಸಿ

ಸಹ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Bannerghatta National Park" Karnataka.com Accessed 23 May 2014.
  2. "Bannerghatta Biological Park" Park website Accessed 23 May 2014.
  3. https://books.google.co.in/books?id=Iim0baRlWzcC&dq=bannerghatta+national+park&pg=PA131&redir_esc=y#v=onepage&q=bannerghatta%20national%20park&f=false
  4. Karnataka Government Gazette Notification vide No:FEE302 FWL2011-(11), Bangalore, dated:27-12-2011 [೧]
  5. "Bannerghatta National Park" Archived 11 August 2014[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. Bengaloorutourism.com Accessed 24 May 2014.
  6. "Bannerghatti national park" Archived 5 August 2020[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. Arocha organisation website. Accessed 23 May 2014.
  7. "Bannerghatta National Park gets four bore wells to quench thirst of animals." The Hindu 15 May 2014. Accessed 24 May 2014.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • Bannerghatta National Park travel guide from Wikivoyage
  • Criticisms of the National Park, The Hindu
  • Lions’ club grows at Bannerghatta park
  • Butterfly Park, The Hindu
  • Rangers in India capture tiger that killed girl, 5. Archived 22 September 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. Orlando Sentinel, 15 September 1992.
  • Travel Guide to Bannerghatta National Park Archived 22 December 2015[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., Onebangalore.com.
  • Bannerghatta National Park, Karnataka Tourism Official Website.
  • "Bangalore Bytes". Archived from the original on 4 ಮಾರ್ಚ್ 2016. Retrieved 22 ಜೂನ್ 2017.