ಶ್ರೀಗಂಧದ ಮರ ಎಂಬುದು ವಿವಿಧ ಪರಿಮಳ ಬೀರುವ ಮರಗಳ ಹೆಸರು. ಸ್ಯಾಂಟಾಲಮ್‌ (Santalum) ಪ್ರಭೇದದ ಮರಗಳಿಂದ ಶ್ರೀಗಂಧದ ಹುಟ್ಟು ಪ್ರಾಪ್ತವಾಗಿದೆ. ಅದರಲ್ಲಿರುವ ಅತ್ಯಗತ್ಯ ತೈಲಕ್ಕಾಗಿ ಈ ಮರಗಳ ನ್ನು ಆಗಾಗ್ಗೆ ಬಳಸಲಾಗಿದೆ. ಶ್ರೀಗಂಧದ ಮರ ಹೆಚ್ಚು ತೂಕದ್ದಾಗಿದ್ದು, ಹಳದಿ ಬಣ್ಣದ್ದಾಗಿರುತ್ತದೆ. ಕಣ-ಕಣಗಳುಳ್ಳ ತೊಗಟೆ ನಯವಾಗಿರುತ್ತವೆ.

  • ಇತರೆ ಪರಿಮಳ ಬೀರುವ ಮರಗಳಿಗೆ ಹೋಲಿಸಿದರೆ, ಶ್ರೀಗಂಧದ ಮರವು ಹಲವು ದಶಕಗಳ ಕಾಲ ತನ್ನ ಪರಿಮಳವನ್ನು ಉಳಿಸಿಕೊಳ್ಳುತ್ತದೆ. ಶ್ರೀಗಂಧದ ಮರ ವಿಶಿಷ್ಟ ರೀತಿಯ ಪರಿಮಳ ಹೊಂದಿದ್ದು, ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ತನ್ನ ಪರಿಮಳ, ಕಲಾಕೆತ್ತನೆ, ವೈದ್ಯಕೀಯ ಹಾಗೂ ಧಾರ್ಮಿಕ ಗುಣಗಳಿಗಾಗಿ ಶ್ರೀಗಂಧದ ಮರವು ಅಮೂಲ್ಯವಾದ ಸ್ಥಾನವನ್ನು ಪಡೆದಿದೆ.
ಸ್ಯಾಂಟಾಲಮ್‌ ಪ್ಯಾನಿಕುಲೇಟಮ್‌ ([2]ಇಲಿಯಹಿ), ಹವಾಯಿ[3].
ಶ್ರೀಗಂಧದ ಮರದ ಎಲೆ
ಸ್ಯಾಂಟಾಲಮ್‌ ಅಲ್ಬಮ್‌

ಅಪ್ಪಟ ಶ್ರೀಗಂಧದ ಮರಗಳು

ಬದಲಾಯಿಸಿ
  • ಸ್ಯಾಂಟಾಲಮ್‌ ಪ್ರಭೇದಕ್ಕೆ ಸೇರಿದ, ಮಧ್ಯಮ-ಗಾತ್ರದ, ಅರೆ-ಪರಾವಲಂಬಿ ಮರಗಳು ಅಪ್ಪಟ ಶ್ರೀಗಂಧದ ಮರಗಳು ಎನ್ನಲಾಗಿದೆ. ಭಾರತದ ಶ್ರೀಗಂಧದ ಮರ (ಸ್ಯಾಂಟಾಲಮ್‌ ಅಲ್ಬಮ್ )‌ ಹಾಗೂ ಆಸ್ಟ್ರೇಲಿಯನ್‌ ಶ್ರೀಗಂಧದ ಮರ (ಸ್ಯಾಂಟಾಲಮ್‌ ಸ್ಪೈಕೇಟಮ್‌ ) ಈ ಗುಂಪಿಗೆ ಸೇರಿದ ಪ್ರಮುಖ ಮರಗಳು. ಇದೇ ಪ್ರಭೇದದ, ಪರಿಮಳ ಸೂಸುವ, ಹಲವು ಇತರೆ ಮರಗಳು ಭಾರತ, ಆಸ್ಟ್ರೇಲಿಯಾ, ಇಂಡೋನೇಶಿಯಾ ಹಾಗೂ ಪ್ರಶಾಂತ ಸಾಗರ ದ್ವೀಪಗಳಲ್ಲಿವೆ.
  • ಸ್ಯಾಂಟಾಲಮ್‌ ಅಲ್ಬಮ್‌ , ಅಥವಾ ಭಾರತೀಯ ಶ್ರೀಗಂಧದ ಮರವು ಸದ್ಯಕ್ಕೆ ಅಪಾಯವೆದುರಿಸುತ್ತಿರುವ ಜಾತಿಯಾಗಿದೆ. ಇದರ ಫಲವಾಗಿ ಈ ಮರವು ಅತಿ ದುಬಾರಿಯಾಗಿದೆ. ಇದು ದಕ್ಷಿಣ ಭಾರತದಲ್ಲಿ, ಪಶ್ಚಿಮ ಘಟ್ಟಗಳು ಸೇರಿದಂ ತೆ ಕಾಲರಾಯನ್ ಹಾಗೂ ಶೆವರೊಯನ್‌(ಸೇಲಂನಲ್ಲಿರುವ ಪರ್ವತ ಶ್ರೇಣಿ) ಬೆಟ್ಟಗಳಲ್ಲಿ ಬೆಳೆಯುತ್ತದೆ.
  • ಭಾರತದಲ್ಲಿನ ಎಲ್ಲಾ ಶ್ರೀಗಂಧದ ಮರಗಳು ಸರ್ಕಾರದ ಸ್ವಾಮ್ಯದಲ್ಲಿದ್ದರೂ, ಹಲವು ಮರಗಳನ್ನು ಕಾನೂನು ಬಾಹಿರವಾಗಿ ಕಡಿದು ಗುಟ್ಟಾಗಿ ದೇಶದಿಂದ ಆಚೆಗೆ ಸಾಗಿಸಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಶ್ರೀಗಂಧದ ಮರದ ಅತ್ಯಗತ್ಯ ತೈಲ ಬೆಲೆಗಳು ಪ್ರತಿ ಕೆಜಿಗೆ $೧,೦೦೦–೧,೫೦೦ರ ವರೆಗೂ ಹೆಚ್ಚಿದೆ. ಪರಿಸರದ ದೃಷ್ಟಿಯಿಂದ, ಶ್ರೀಗಂಧದ ತೈಲ ವಹಿವಾಟು ಪರಿಸರಕ್ಕೆ ಹಾನಿಕಾರಕ ಎಂದು ಕೆಲವು ದೇಶಗಳು ಪರಿಗಣಿಸಿವೆ.
  • ಏಕೆಂದರೆ ಇದು ಶ್ರೀಗಂಧದ ಮರಗಳ ಅತಿ-ಹೆಚ್ಚು ಕಡಿತ ಕ್ಕೆ ಕಾರಣವಾಗುತ್ತದೆ.(ಅತಿ ಹೆಚ್ಚು ಶ್ರೀಗಂಧ ಮರ ಬೆಳೆಯುವುದು ಕೂಡಾ ಪರಿಸರಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯವೂ ಇದೆ) ದಕ್ಷಿಣ ಭಾರತದಲ್ಲಿರುವ ಕರ್ನಾಟಕದ (ಮುಂಚೆ 'ಕಾರ್ನಾಟಿಕ್')‌ ಮೈಸೂರು ಜಿಲ್ಲೆಯ ಶ್ರೀಗಂಧದ ಮರವು ಇದುವರೆಗೂ ಲಭ್ಯವಾಗಿರುವ ಅತ್ಯುತ್ತಮ ಗುಣಮಟ್ಟದ್ದು ಎನ್ನಲಾಗಿದೆ.
  • ಶ್ರೀಗಂಧದ ಮರ ಬೆಳಸುವುದರಿಂದ ಉಂಟಾಗುವ ಆರ್ಥಿಕ ಅನುಕೂಲಗಳನ್ನು ಪಡೆಯಲು, ತಮಿಳುನಾಡು ರಾಜ್ಯದಲ್ಲಿ ಹೊಸದಾಗಿ ನೆಡು ತೋಪು ಗಳನ್ನು ನಿರ್ಮಿಸಲಾಗಿವೆ. ಇದಲ್ಲದೇ ಅಂತರರಾಷ್ಟ್ರೀಯ ನೆರವೂ ಸಹ ದೊರೆಯುತ್ತಿದೆ. ಇಂದು ಪಶ್ಚಿಮ ಆಸ್ಟ್ರೇಲಿಯಾದ ಕುನುನುರಾದಲ್ಲಿ, ಭಾರತೀಯ ಶ್ರೀಗಂಧದ ಮರ (ಸ್ಯಾಂಟಾಲಮ್‌ ಅಲ್ಬಮ್ ‌) ಮರವನ್ನು ಬೃಹತ್‌ ಪ್ರಮಾಣದಲ್ಲಿ ಬೆಳಸಲಾಗುತ್ತಿದೆ. ಈ ಆಕರ್ಷಕ ನಿಸರ್ಗವುಳ್ಳ ಕಿರು ಪಟ್ಟಣದ ಸುತ್ತಲೂ ಶ್ರೀಗಂಧದ ಭಾರೀ ನೆಡುತೋಪಗಳಿವೆ.
  • ಸ್ಯಾಂಟಾಲಮ್‌ ಎಲಿಪ್ಟಿಕಮ್‌ (Santalum ellipticum), ಸ್ಯಾಂಟಾಲಮ್‌ ಫ್ರೆಯಸಿನೆಟಿಯನಮ್‌ (S. freycinetianum) ಹಾಗೂ ಸ್ಯಾಂಟಾಲಮ್‌ ಪ್ಯಾನಿಕ್ಯುಲೇಟಮ್‌ (S. paniculatum), ಹವಾಯಿ ದ್ವೀಪದ ಶ್ರೀಗಂಧದ ಮರ (ʻಇಲಿಯಹಿ ), ಇವುಗಳು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಇವನ್ನೂ ಬಳಸಲಾಗುತ್ತಿತ್ತು. ಈ ಮೂರೂ ಜಾತಿಗಳನ್ನು ಅಲ್ಪಾವಧಿಯಲ್ಲಿ (ಇಸವಿ ಸುಮಾರು ೧೭೯೦ರಿಂದ ೧೮೨೫ರ ವರೆಗೆ) ಅತಿ ಹೆಚ್ಚು ಬಳಸಿಕೊಳ್ಳಲಾಯಿತು.
  • ಶೀಘ್ರದಲ್ಲಿಯೇ ಮರಗಳ ದಾಸ್ತಾನು ಪೂರೈಕೆ ಖಾಲಿಯಾಯಿತು. ಸ್ಯಾಂಟಾಲಮ್‌ ಫ್ರೇಸಿನೆಟಿಯನಮ್ ‌ ಹಾಗೂ ಸ್ಯಾಂಟಾಲಮ್‌ ಪ್ಯಾನಿಕುಲೇಟಮ್‌ ಇಂದಿಗೂ ಲಭ್ಯವಾಗಿದ್ದರೂ, ಅವುಗಳು ಮುಂಚಿನಂತೆ ತಮ್ಮ ಭಾರಿ ಪ್ರಮಾಣ ಹಾಗೂ ಗಾತ್ರ ಪಡೆದುಕೊಂಡಿಲ್ಲ. ಸ್ಯಾಂಟಾಲಮ್‌ ಎಲಿಪ್ಟಿಕಮ್‌ ಬಹಳ ಅಪರೂಪವಾಗಿಯೇ ಉಳಿದುಕೊಂಡಿದೆ. [][].

ಸ್ಯಾಂಟಾಲಮ್‌ ಸ್ಪೈಕೆಟಮ್‌ ನ್ನು (ಆಸ್ಟ್ರೇಲಿಯಾದ ಶ್ರೀಗಂಧದ ಮರ) ಸುಗಂಧ-ಚಿಕಿತ್ಸಕರು ಹಾಗೂ ಸುಗಂಧ ವಸ್ತುಗಳನ್ನು ತಯಾರಿಸುವವರು ಬಳಸುತ್ತಾರೆ.

  • ಇದರ ಅತ್ಯಗತ್ಯ ತೈಲದಲ್ಲಿರುವ ರಾಸಾಯನಿಕ ಅಂಶಗಳ ಸಾಂದ್ರತೆಯಿಂದಾಗಿ ಇದರ ಅಪೂರ್ವ ಪರಿಮಳವು ಸೂಸುತ್ತದೆ. ಇದು ಇತರೆ ಸ್ಯಾಂಟಾಲಮ್‌ ಜಾತಿಗಳಿಗಿಂತಲೂ ಗಮನಾರ್ಹ ವ್ಯತ್ಯಾಸ ತೋರುತ್ತದೆ. ೧೮೪೦ರ ದಶಕದಲ್ಲಿ, ಶ್ರೀಗಂಧದ ಮರಗಳಿಂದಲೇ ಪಶ್ಚಿಮ ಆಸ್ಟ್ರೇಲಿಯಾಗೆ ಅತಿ ಹೆಚ್ಚು ರಫ್ತು ಆದಾಯ ದೊರೆಯುತ್ತಿತ್ತು. ಮೊದಲ ಬಾರಿಗೆ ೧೮೭೫ರಲ್ಲಿ ತೈಲವನ್ನು ಶುದ್ದೀಕರಣಕ್ಕೆ (ಸಂಸ್ಕರಣಕ್ಕೆ)ಒಳಪಡಿಸಲಾಯಿತು. ಈ ಶತಮಾನದ ಅಂತ್ಯದಲ್ಲಿ ಆಸ್ಟ್ರೇಲಿಯಾದ ಶ್ರೀಗಂಧ ಮರದ ತೈಲ ಉತ್ಪಾದನೆಯು ಕಾಲದಿಂದ ಕಾಲಕ್ಕೆ ನಡೆಯುತ್ತಿತ್ತು.

ಉತ್ಪಾದನೆ

ಬದಲಾಯಿಸಿ
  • ಅತ್ಯುತ್ತಮ ಪರಿಮಳ ತೈಲ ನೀಡಬಹುದಾದ, ವಾಣಿಜ್ಯ ಮಟ್ಟದಲ್ಲಿ ಅಮೂಲ್ಯವಾದ ಶ್ರೀಗಂಧದ ಮರಗಳು ಲಭ್ಯವಾಗಬೇಕಿದ್ದಲ್ಲಿ, ಸ್ಯಾಂಟಾಲಮ್‌ ಮರಗಳಿಗೆ ಕನಿಷ್ಠಪಕ್ಷ ಎಂಟು ವರ್ಷಗಳಾಗಿರಬೇಕು. ಆದರೆ ಮಾರುಕಟ್ಟೆಯ ಪ್ರಕಾರ, ಮರಗಳಿಗೆ ಕನಿಷ್ಠ ಹದಿನಾಲ್ಕು ವರ್ಷಗಳಾಗಲೆಂದು ಬಯಸುತ್ತಾರೆ. ಇಂದು ಆಸ್ಟ್ರೇಲಿಯಾ ದೇಶವು ಸ್ಯಾಂಟಾಲಮ್ ಅಲ್ಬಮ್‌ ಮರಗಳ ಅತಿದೊಡ್ಡ ಉತ್ಪಾದಕವಾಗಿದೆ. ಇದರಲ್ಲಿ ಹೆಚ್ಚು ಪ್ರಮಾಣವು ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದ ಕುನುನುರಾ ಹಾಗೂ ಸುತ್ತಮುತ್ತಲ ಕ್ಷೇತ್ರಗಳಲ್ಲಿ ಬೆಳೆಸಲಾಗಿದೆ.
  • ಹಲವು ಮರಗಳಿಗಿಂತಲೂ ಭಿನ್ನವಾಗಿ, ಶ್ರೀಗಂಧದ ಮರವನ್ನು ವಿಭಿನ್ನವಾಗಿ ಕೊಯ್ಲು ಮಾಡಲಾಗುತ್ತದೆ. ಮರವನ್ನು ಕಾಂಡಭಾಗದಲ್ಲಿ ಕಡಿಯುವ ಬದಲಿಗೆ, ಇಡೀ ಮರವನ್ನು ಬೀಳಿಸಿ ಗಂಧದ ತುಂಡುಗಳ ಕೊಯ್ಲು ಮಾಡಲಾಗುತ್ತದೆ. ಈ ರೀತಿಯಲ್ಲಿ, ಮರದ ಅವಶೇಷಗಳಾಗಿ ಉಳಿದುಕೊಳ್ಳುವ ತುಂಡು ಹಾಗೂ ಬೇರು ಭಾಗದ ಮರವನ್ನೂ ಮಾರಬಹುದು ಅಥವಾ ತೈಲ ಸಂಸ್ಕರಣೆ ಮಾಡಬಹುದಾಗಿದೆ.
  • ಭಾರತದ ಕರ್ನಾಟಕ ರಾಜ್ಯದಲ್ಲಿ ಮೈಸೂರು ನಗರದಲ್ಲಿ ಶ್ರೀಗಂಧದ ಎಣ್ಣೆ ಕಾರ್ಖಾನೆ ಮತ್ತು ಸಾಬೂನು ಕಾರ್ಖಾನೆ ಇದೆ. ಅಲ್ಲಿ ಶ್ರೀಗಂಧದ ಎಣ್ಣೆ ತಯಾರಿಸಲಾಗುವುದು.ಅದರ ಪರಿಮಳವುಳ್ಳ ಸೋಪನ್ನೂ ತಯಾರಿಸಲಾಗುತ್ತದೆ. ಅದಕ್ಕೆ ಈಗ "ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ" (Karnataka Soap and Detergent Limited- KSDL) ಎಂದು ಹೆಸರಿಡಲಾಗಿದೆ.ಅದು ಜಗತ್ಪ್ರಸಿದ್ಧವಾಗಿದೆ.(ಪ್ರಜಾವಾಣಿ-೧೧-೨-೨೦೧೫)
  • ಶ್ರೀಗಂಧದ ಮರದ ಅತ್ಯಗತ್ಯ ತೈಲವು ಮರದ ಕಾಂಡದ ಆಧಾರವುಳ್ಳ ಭಾಗದಿಂದ ಪರಿಮಳವನ್ನು ಪಡೆಯಲಾಗುತ್ತದೆ. ಶ್ರೀಗಂಧದ ಮರದ ಪರಿಮಳವು ಇತರ ಮರಗಳ ಪರಿಮಳದಂತೆ ಎಂದು ಭಾಸವಾಗುತ್ತದೆ. ಆದರೂ, ಇತರ ಮರಗಳಿಗಿಂತಲೂ ಉತ್ತಮ ಮಟ್ಟದ ಹೊಳಪು ಹಾಗೂ ಸುಗಂಧ ಹೊಂದಿದೆ.
  • ಸುಗಂಧ ದ್ರವ್ಯವೊಂದರಲ್ಲಿ ಶ್ರೀಗಂಧದ ಅಂಶವನ್ನು ಕಡಿಮೆ ಪ್ರಮಾಣದಲ್ಲಿ ಬಳಸಿದಲ್ಲಿ, ಇದು ಅತ್ಯುತ್ತಮ ಬಂಧಕವಾಗಿ ಇತರೆ ಪರಿಮಳಗಳ ಪ್ರಭಾವವನ್ನು ಹೆಚ್ಚಿಸುತ್ತದೆ. ಶ್ರೀಗಂಧದ ಮರದ ತೈಲವನ್ನು ಕಾಂತಿವರ್ಧಕಗಳ ತಯಾರಿಕಾ ಉದ್ದಿಮೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರಿಂದಾಗಿ ಈ ತೈಲವು ಬಹಳ ದುಬಾರಿ. ಅಪ್ಪಟ ಶ್ರೀಗಂಧದ ಮರವು ರಕ್ಷಿತ ಜಾತಿಗೆ ಸೇರಿದ್ದು, ಅದಕ್ಕಾಗಿ ಇರುವ ಬೇಡಿಕೆಯನ್ನು ಪೂರೈಸಲಾಗದು.
  • 'ಶ್ರೀಗಂಧದ ಮರ' ಹೆಸರಿನಡಿ ಗಿಡಗಳ ಹಲವು ಜಾತಿಗಳ ಮರದ ತುಂಡುಗಳ ವಹಿವಾಟು ನಡೆಯುತ್ತಿದೆ. ಸ್ಯಾಂಟಾಲಮ್ ‌ ಪ್ರಭೇದದೊಂದರ ಅಡಿಯಲ್ಲೇ ಶ್ರೀಗಂಧದ ಮರ ಎನ್ನಬಹುದಾದ ಹತ್ತೊಂಬತ್ತಕ್ಕೂ ಹೆಚ್ಚು ಜಾತಿಗಳಿವೆ. ವರ್ತಕರು ಆಗಾಗ್ಗೆ ಸ್ಯಾಂಟಾಲಮ್‌ ಪ್ರಭೇದದೊಳಗೆ ಶ್ರೀಗಂಧದ ಮರದ ನಿಕಟ ಜಾತಿಯ ಸಸ್ಯಗಳಿಂದ ಪಡೆಯಲಾದ ತೈಲವನ್ನೂ ಸ್ವೀಕರಿಸುತ್ತಾರೆ.
  • ಜೊತೆಗೆ, ಯಾವುದೇ ಸಂಬಂಧವಿಲ್ಲದ ಸಸ್ಯಗಳಿಂದ ಹೊರತೆಗೆಯಲಾದ ತೈಲವನ್ನೂ ಸಹ ಸ್ವೀಕರಿಸುತ್ತಾರೆ. ಉದಾಹರಣೆಗೆ, ವೆಸ್ಟ್ ಇಂಡಿಯನ್‌ ಶ್ರೀಗಂಧದ ಮರ (ರುಟೇಸೀ (Rutaceae) ವಂಶದ ಅಮಿರಿಸ್‌ ಬಲ್ಸಮಿಫೆರಾ (Amyris balsamifera)

ಧಾರ್ಮಿಕ ಬಳಕೆ

ಬದಲಾಯಿಸಿ

ಹಿಂದೂ ಧರ್ಮ

ಬದಲಾಯಿಸಿ

ಧಾರ್ಮಿಕ ಕ್ರಮಗಳು ಹಾಗೂ ವ್ರತಗಳಲ್ಲಿ ಶ್ರೀಗಂಧದ ಮರದ ಗಂಧವನ್ನು ಬಳಸುವುದು ಸರ್ವೇಸಾಮಾನ್ಯ. ಧಾರ್ಮಿಕ ಉದ್ದೇಶಗಳಿಗಾಗಿ ಬಳಸುವ ಪಾತ್ರೆಗಳಿಗೆ ಲೇಪಿಸಲು ಹಾಗೂ ದೇವತೆಗಳ ವಿಗ್ರಹಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಇದನ್ನು ಅನಂತರ ಶ್ರದ್ದಾಳುಗಳಿಗೂ ಹಂಚಲಾಗುತ್ತದೆ. ಅವರು ತಮ್ಮ ಹಣೆ, ಕತ್ತು ಅಥವಾ ಎದೆಗೆ ಲೇಪನ ಮಾಡಿಕೊಳ್ಳುತ್ತಾರೆ.

  • ಈ ಗಂಧದ ಲೇಪನವನ್ನು ತಯಾರಿಸುವ ಹಕ್ಕು ಕೇವಲ ಶುದ್ಧ ಮನಸ್ಕರಿಗೆ ಮಾತ್ರ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಇದನ್ನು ಸಿದ್ಧಗೊಳಿಸುವ ಅಧಿಕಾರವನ್ನು ದೇವಾಲಯದಲ್ಲಿ ಕೇವಲ ಅರ್ಚಕರಿಗೆ ಮಾತ್ರ ನೀಡಲಾಗಿದೆ. ಗಂಧದ ಮರದ ತುಂಡನ್ನು ಬೆಣಚುಕಲ್ಲಿನ ಚಪ್ಪಡಿಯ ಮೇಲೆ ಸತತವಾಗಿ ಉಜ್ಜಿ ಲೇಪನದ ಲೇಹವನ್ನು ತಯಾರಿಸಲಾಗುತ್ತದೆ. ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿದಲ್ಲಿ ಗಟ್ಟಿಯಾದ ಲೇಹ ಲಭಿಸುತ್ತದೆ. ಇದಕ್ಕೆ ಕೇಸರಿ ಅಥವಾ ಇತರೆ ವರ್ಣವನ್ನು ಬೆರೆಸಿ ಚಂದನ ತಯಾರಿಸಬಹುದು.
  • ವ್ಯಕ್ತಿಯನ್ನು ದಿವ್ಯಶಕ್ತಿಗೆ ಸನಿಹ ತರಲು ಶ್ರೀಗಂಧವನ್ನು ಪರ್ಯಾಯ ಮದ್ದು ಎನ್ನಲಾಗಿದೆ. ಶ್ರೀಗಂಧದ ಮರದ ಅತ್ಯಗತ್ಯ ತೈಲವು ತನ್ನ ಶುದ್ಧ ರೂಪದಲ್ಲಿ ಬಹಳ ದುಬಾರಿಯಾಗಿದೆ. ಇದನ್ನು ಪ್ರಾಥಮಿಕವಾಗಿ ಆಯುರ್ವೇದ ಚಿಕಿತ್ಸೆ ಹಾಗೂ ತಳ ಮಳ ಅಥವಾ ಕಳವಳಕಾರಿ ಸ್ಥಿತಿಯನ್ನು ಶಮನಗೊಳಿಸುವ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಬೌದ್ಧ ಧರ್ಮ

ಬದಲಾಯಿಸಿ

ಶ್ರೀಗಂಧದ ಮರವನ್ನು ಪದ್ಮ (ಕಮಲ) ಗುಂಪಿಗೆ ಸೇರಿದೆ ಎಂದು ಪರಿಗಣಿಸಲಾಗಿದ್ದು, ಇದನ್ನು ಅಮಿತಾಭ ಬುದ್ಧನಿಗೆ ಹೋಲಿಸಲಾಗಿದೆ. ಶ್ರೀಗಂಧದ ಮರದ ಪರಿಮಳವು ವ್ಯಕ್ತಿಯ ಅಪೇಕ್ಷೆಗಳನ್ನು ರೂಪಾಂತರಿಸಿ, ತಾನು ಧ್ಯಾನದಲ್ಲಿ ರುವಾಗ ತನ್ನ ಮನಸ್ಸಿನ ಏಕಾಗ್ರತೆ ಹಾಗೂ ಎಚ್ಚರದ ಸ್ಥಿತಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಎನ್ನಲಾಗಿದೆ. ಬುದ್ಧನಿಗೆ ಅರ್ಪಿಸಲಾಗುವ ಪರಿಮಳ ಧೂಪದಲ್ಲಿ, ಶ್ರೀಗಂಧದ ಮರದ ಪರಿಮಳವೂ ಬಹಳಷ್ಟು ಪ್ರಮಾಣದಲ್ಲಿ ಬಳಸಲಾಗುವ ಪರಿಮಳವಾಗಿದೆ.

ಪಾರಸಿ ಧರ್ಮ

ಬದಲಾಯಿಸಿ
  • ಶ್ರೀಗಂಧದ ಮರದ ಅತ್ಯಗತ್ಯ ತೈಲವು ೧೯೨೦-೧೯೩೦ರ ತನಕ ಔಷಧ-ರೂಪದಲ್ಲಿ ಬಹಳ ವ್ಯಾಪಕವಾಗಿ ಬಳಸಲಾಯಿತು. ಮೂತ್ರಾಂಗ ಹಾಗೂ ಜನನೇಂದ್ರಿಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆಂತರಿಕ ಔಷಧ ಹಾಗೂ ಚರ್ಮಕ್ಕೆ ಸಂಬಂಧಿಸಿದ ಬಾಹ್ಯ ಪೂತಿನಾಶಕವಾಗಿ ಬಳಸಲಾಯಿತು. ಇದರಲ್ಲಿರುವ ಪ್ರಮುಖ ಅಂಶ ಬೀಟಾ-ಸ್ಯಾಂಟಲಾಲ್‌ (~೯೦%) ಸೂಕ್ಷ್ಮಜೀವಿ-ವಿರೋಧಿ ಗುಣಗಳನ್ನು ಹೊಂದಿವೆ.
  • ಇದನ್ನು ಪರಿಮಳ-ಚಿಕಿತ್ಸೆಯಲ್ಲಿ ಹಾಗೂ ಸಾಬೂನು ತಯಾರಿಕೆಯಲ್ಲಿ ಬಳಸಲಾಗಿದೆ. ಈ ರೀತಿಯ ಸೂಕ್ಷ್ಮಜೀವಿ-ವಿರೋಧಿ ಕ್ರಿಯೆಯ ಕಾರಣ, ಚರ್ಮದಿಂದ ಮೊಡವೆಗಳನ್ನು ಶಮನಗೊಳಿಸಲು ಬಳಸಬಹುದು. ಆದರೆ, ಮೊದಲಿಗೆ ಇದರ ಸಾಂದ್ರತೆಯನ್ನು ತೈಲದೊಂದಿಗೆ ಸಮರ್ಪಕವಾಗಿ ಕಡಿಮೆಗೊಳಿಸಬೇಕಾಗಿದೆ. ಇದು ಬಹಳ ಪ್ರಬಲವಾಗಿರುವ ಕಾರಣ, ತೈಲದೊಂದಿಗೆ ಕಡಿಮೆಗೊಳಿಸದೆ ಶ್ರೀಗಂಧದ ಮರ ತೈಲವನ್ನು ನೇರವಾಗಿ ಚರ್ಮಕ್ಕೆ ಲೇಪಿಸಬಾರದು.

ಇತರ ಉಪಯೋಗಗಳು

ಬದಲಾಯಿಸಿ

ಚ೦ದನಮರವು ಗ್ರಹೋಪಯೋಗಿ ಸಾಮಾನುಗಳನ್ನು ತಯಾರಿಸುವುದಕ್ಕೂ ಚಿತ್ರಕಲೆ, ದೇವತಾವಿಗ್ರಹ, ಶ್ರ೦ಗಾರ ವಸ್ತುಗಳ ಪೆಟ್ಟಿಗೆ ಮು೦ತಾದುವುಗಳನ್ನು ತಯಾರಿಸುವುದಕ್ಕೆ ಉಪಯೋಗಿಸುತ್ತಾರೆ.ಇದರ ಸುವಾಸನೆಯು ಬಹುಕಾಲ ಇರುತ್ತದೆ.

ತಂತ್ರಜ್ಞಾನ

ಬದಲಾಯಿಸಿ

ಶ್ರೀಗಂಧದ ತೈಲದ ಕಡಿಮೆ ಪ್ರತಿದೀಪ್ತಿ (ಫ್ಲುವೊರೆಸೆನ್ಸ್‌) ಹಾಗೂ ಅತ್ಯುತ್ತಮ ವಕ್ರೀಕರಣ ಸೂಚಿ (refractive index) ಹೊಂದಿರುವ ಕಾರಣ, ಈ ತೈಲವನ್ನು ಅತಿನೇರಳೆ ಹಾಗೂ ಪ್ರತಿದೀಪ್ತಿ ಸೂಕ್ಷ್ಮದರ್ಶನ (fluorescence microscopy) ದಲ್ಲಿ ಬಳಕೆಯಾಗುತ್ತದೆ.

ಶುದ್ದೀಕರಣದ ಸಂಸ್ಕರಣೆ(Distillation)

ಬದಲಾಯಿಸಿ

ಚೆನ್ನಾಗಿ ಕುದಿಸಿ ಅದನ್ನು (incorporating boiling), ಆವಿಯಾಗಿಸುವಿಕೆ (steaming), ಭಾಷ್ಪಿಕರಣ (condensation) ಹಾಗೂ ಬೇರ್ಪಡಿಸುವಿಕೆ (separation) - ಈ ನಾಲ್ಕು ಹಂತಗಳ ಪ್ರಕ್ರಿಯೆ ಮೂಲಕ ಶ್ರೀಗಂಧದ ಮರವನ್ನು ಭಟ್ಟಿ ಇಳಿಸುವ ಕ್ರಮವನ್ನು ಮಾಡಲಾಗುತ್ತದೆ.

ಆಸ್ಟ್ರೇಲಿಯಾದ ಅಬಾರಿಜಿನ್‌ಗಳು (ಮೂಲ ಬುಡಕಟ್ಟು ಜನಾಂಗದವರು) ಕ್ವಾನ್ಡಾಂಗ್‌ನಂತಹ (ಸ್ಯಾಂಟಾಲಮ್‌ ಅಕ್ಯುಮಿನೆಟಮ್‌ ) ಸ್ಥಳೀಯ ಶ್ರೀಗಂಧದ ಮರದ ಕರಟದ ತಿರುಳುಗಳು, ಬೀಜ ಹಾಗೂ ಫಲಗಳನ್ನು ತಿನ್ನುತ್ತಾರೆ. [ಸೂಕ್ತ ಉಲ್ಲೇಖನ ಬೇಕು]

ಇವನ್ನೂ ನೋಡಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ವ್ಯಾಗ್ನರ್‌, ಡಬ್ಲ್ಯೂ. ಎಲ್‌., ಡಿ. ಆರ್‌. ಹರ್ಬ್‌ಸ್ಟ್‌ ಹಾಗೂ ಎಸ್‌. ಹೆಚ್‌. ಸೊಹ್ಮರ್‌ (೧೯೯೦).
    • ಮ್ಯಾನುಯಲ್‌ ಆಫ್‌ ದಿ ಫ್ಲಾವರಿಂಗ್‌ ಪ್ಲ್ಯಾಂಟ್ಸ್‌ ಆಫ್‌ ಹವಾಯ್‌. ಹೊನೊಲುಲು: ಯುನಿವರ್ಸಿಟಿ ಆಫ್‌ ಹವಾಯ್ ಪ್ರೆಸ್‌
  2. ರಾಕ್‌, ಜೆ. ಎಫ್‌. (೧೯೧೩). ದಿ ಇಂಡಿಜೆನಸ್‌ ಟ್ರೀಸ್‌ ಆಫ್‌ ದಿ ಹವಾಯನ್‌ ಐಲೆಂಡ್ಸ್‌. ಹೊನೊಲುಲು.


  • ಮ್ಯಾಂಡಿ ಆಫ್ಟೆಲ್‌‌, ಎಸೆನ್ಸ್‌ ಅಂಡ್‌ ಆಲ್ಕೆಮಿ: ಎ ನ್ಯಾಚುರಲ್‌ ಹಿಸ್ಟರಿ ಆಫ್‌ ಪರ್ಫ್ಯುಮ್ಸ್‌ , ಜಿಬ್ಸ್‌ ಸ್ಮಿತ್‌, ೨೦೦೧, ISBN ೧-೫೮೬೮೫-೭೦೨-೯

ಹೊರಗಿನ ಕೊಂಡಿಗಳು

ಬದಲಾಯಿಸಿ