Samanea saman
The Hitachi Tree at the Moanalua Gardens, Hawaii
Conservation status

Secure  (NatureServe)
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: Eudicots
ಏಕಮೂಲ ವರ್ಗ: Rosids
ಗಣ: Fabales
ಕುಟುಂಬ: Fabaceae
ಉಪಕುಟುಂಬ: Caesalpinioideae
ಏಕಮೂಲ ವರ್ಗ: ಮಿಮೊಸಾಯ್ಡಿಯೇ
ಕುಲ: ಸಾಮಾನಿಯಾ
ಪ್ರಜಾತಿ:
S. saman
Binomial name
Samanea saman
Synonyms[]
List
    • Acacia propinqua A.Rich.
    • Albizia saman (Jacq.) F.Muell.
    • Albizzia saman (Jacq.) Merr.
    • Calliandra saman (Jacq.) Griseb.
    • Enterolobium saman (Jacq.) Prain
    • Feuilleea saman (Jacq.) Kuntze
    • Inga cinerea Willd.
    • Inga salutaris Kunth
    • Inga saman (Jacq.) Willd.
    • Mimosa pubifera Poir.
    • Mimosa saman Jacq.
    • Pithecellobium cinereum Benth.
    • Pithecellobium saman (Jacq.) Benth.
    • Pithecolobium saman (Jacq.) Benth. [Spelling variant]
    • Samanea saman (Jacq.) Merr.
    • Zygia saman (Jacq.) A.Lyons

ಮಳೆಮರ ರಸ್ತೆಬದಿಗಳಲ್ಲಿ ಅಲಂಕಾರಕ್ಕಾಗಿಯೂ ನೆರಳಿಗಾಗಿಯೂ ಬೆಳಸಲಾಗುವ ಮರ (ರೇನ್ ಟ್ರೀ). ಮೈಮಸೇಸೀ ಕುಟುಂಬಕ್ಕೆ ಸೇರಿದೆ. ಸಾಮಾನಿಯ ಸಾಮಾನ್ ಅಥವಾ ಎಂಟರೊಲೋಬಿಯಮ್ ಸಾಮಾನ್ ಇದರ ವೈಜ್ಞಾನಿಕ ಹೆಸರು, ಛತ್ರಿಮರವೆಂಬ ಹೆಸರೂ ಇದಕ್ಕಿದೆ. ಜಾಲಿ, ಚುಜ್ಜಲು, ಬಾಗೆ, ಬಿಲ್ವಾರ ಮುಂತಾದವುಗಳ ಹತ್ತಿರ ಸಂಬಂಧಿಯಾದ ಇದು ಅವುಗಳಂತೆಯೇ ಉಷ್ಣವಲಯದ ಹಲವಡೆಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.

ಗುಣಲಕ್ಷಣಗಳು

ಬದಲಾಯಿಸಿ

20-30 ಮೀ ಎತ್ತರಕ್ಕೆ ಬೆಳೆಯುವ ಪರ್ಣಪಾತಿಮರ.[] ಒಟ್ಟು ಗಾತ್ರಕ್ಕೆ ಹೋಲಿಸಿದರೆ ಕೊಂಚ ಚಿಕ್ಕದಾಗಿ ಕಾಣುವ ಬೊಡ್ಡೆ ಮತ್ತು ವಿಶಾಲವಾಗಿ ಹರಡಿಕೊಂಡಿರುವ ಹಂದರದಿಂದಾಗಿ ಮರ ಚೆಲುವಾಗಿ ಕಾಣುತ್ತದೆ. ಎಲೆಗಳು ದ್ವಿಪಿಚ್ಛಕ ಸಂಯುಕ್ತ ಬಗೆಯವು. ಒಂದೊಂದು ಎಲೆಯಲ್ಲೂ ಅಂಡಾಕಾರದ ಅನೇಕ ಕಿರು ಎಲೆಗಳುಂಟು, ಕಿರು ಎಲೆಗಳ ಮೇಲ್ಮೈ ನಯಹೊಳಪಿನಿಂದ ಕೂಡಿದೆಯಾದರೆ, ತಳಭಾಗ ನವುರಿನಿಂದ ಕೂಡಿದೆ. ರಾತ್ರಿ ವೇಳೆಯಲ್ಲೂ ಮಳೆಬೀಳುವ ಸೂಚನೆ ಕಂಡುಬಂದಾಗಲೂ ಕಿರುಎಲೆಗಳು ಮಡಿಚಿಕೊಂಡು ಬಾಗುತ್ತವೆ.[] ಇವುಗಳ ಬಣ್ಣ ನಸುಗೆಂಪು ಮಿಶ್ರಿತ ಹಸುರು. ಕಾಯಿಗಳು ೧೫-೨೦ ಸೆಂಮೀ ಉದ್ದದ ಮತ್ತು ೨ ಸೆಂಮೀ ಅಗಲದ ಹಲ್ಲೆಗಳಂತಿವೆ. ಒಳಗೆ ಸಿಹಿಯಾದ ತಿರುಳೂ ಅದರೊಳಗೆ ಹುದುಗಿರುವ ೧೦-೧೨ ಬೀಜಗಳೂ ಉಂಟು.

ಮಳೆಮರವನ್ನು ಬೀಜ ಇಲ್ಲವೆ ಗೆಲ್ಲುಗಳ ಮೂಲಕ ವೃದ್ಧಿಸಲಾಗುತ್ತದೆ. ಉಷ್ಣತೆ ಮತ್ತು ಆರ್ದ್ರತೆ ಹೆಚ್ಚಾಗಿರುವ ತಾಣಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕತ್ತರಿಸಿದರೆ ಹುಲುಸಾಗಿ ಚಿಗುರೊಡೆಯುವ ಸ್ವಭಾವ ಇದರದು.

ಉಪಯೋಗಗಳು

ಬದಲಾಯಿಸಿ

ಇದರ ಸೊಪ್ಪು ಮತ್ತು ಕಾಯಿಗಳಲ್ಲಿ ಹೆಚ್ಚು ಮೊತ್ತದ ಪೌಷ್ಟಿಕಾಂಶಗಳೂ ಅಪೇಕ್ಷಣೀಯ ರುಚಿಯೂ ಇದೆಯಾಗಿ ದನಗಳಿಗೆ ಕುದುರೆಗಳಿಗೆ ಇವು ಒಳ್ಳೆಯ ಮೇವು ಎನಿಸಿವೆ. ಕರಾವಿನ ದನಗಳಿಗೆ ಕಾಯಿಗಳನ್ನು ತಿನಿಸಿದರೆ ಹಾಲಿನ ಮೊತ್ತ ಹೆಚ್ಚುವುದೆಂದು ಹೇಳಲಾಗಿದೆ. ತಾಜಾ ಮಾತ್ರವಾಗಿ ಅಲ್ಲದೆ ಕಾಯಿಗಳನ್ನು ಒಣಗಿಸಿ ಹಲವುಕಾಲ ಸಂಗ್ರಹಿಸಿಟ್ಟು ದನಗಳಿಗೆ ಕೊಡಬಹುದು. ಕಾಯಿಯ ತಿರುಳಿನಿಂದ ಆಲ್ಕೊಹಾಲನ್ನು ತಯಾರಿಸಬಹುದು. ಮಳೆಮರದ ಕಾಂಡದಿಂದ ಕೆಳದರ್ಜೆಯ ಗೋಂದನ್ನು ತಯಾರಿಸುವುದಿದೆ. ಇದರ ಚೌಬೀನೆ ಹಗುರ ಮತ್ತು ಮೆತು ತೆರನಾದುದು. ಇದರಿಂದ ಪೀಠೋಪಕರಣಗಳನ್ನು ತಯಾರಿಸಬಹುದಾದರೂ ಈ ತೆರನ ಬಳಕೆ ಕಡಿಮೆ. ಉರುವಲಾಗಿ ಕೂಡ ಬಳಕೆಯಲ್ಲಿಲ್ಲ. ದಕ್ಷಿಣ ಭಾರತ ಹಾಗೂ ಬರ್ಮದ ಹಲವೆಡೆಗಳಲ್ಲಿ ಅರಗು ಕೀಟಗಳಿಗೆ ಆಶ್ರಯದಾತವಾಗಿದೆಯಾದರೂ ಇದರಿಂದ ಲಭಿಸುವ ಅರಗು ಉತ್ತಮ ಬಗೆಯದಲ್ಲ.

ವ್ಯಾಪ್ತಿ

ಬದಲಾಯಿಸಿ

ಮ್ಯಾಲಗ್ಯಾಸೀ, ಉಗಾಂಡ, ಇಂಡೋನೇಷ್ಯ ಮುಂತಾದಡೆಗಳಲ್ಲಿ ಕಾಫಿ, ಕೊಕೊ, ವ್ಯಾನಿಲ, ಪಚೌಲಿ ಮುಂತಾದ ವಾಣಿಜ್ಯ ಬೆಳೆಗಳ ತೋಟಗಳಲ್ಲಿ ನೆರಳು ನೀಡುವ ಮರವಾಗಿ ಮಳೆಮರವನ್ನು ಬೆಳಸಲಾಗುತ್ತದೆ.

ಗ್ಯಾಲರಿ

ಬದಲಾಯಿಸಿ

ಅಡಿಟಿಪ್ಪಣಿಗಳು

ಬದಲಾಯಿಸಿ
  1. ೧.೦ ೧.೧ "Samanea saman (Jacq.) Merr". Plants of the World Online. Royal Botanic Gardens, Kew. Retrieved 3 March 2020.
  2. Merrill, E.D. (1916). Journal of the Washington Academy of Sciences. 6: 47. {{cite journal}}: Missing or empty |title= (help)
  3. Staples, George W.; Elevitch, Craig R. (2006). "Samanea saman (rain tree)". In Elevitch, Craig R. (ed.). Traditional Trees of Pacific Islands: Their Culture, Environment, and Use. Holualoa, Hawaii, USA: Permanent Agricultural Resources. pp. 662–664. ISBN 978-0-9702544-5-0.
  4. "Samanea saman (Jacq.) Merr". National Parks, A Singapore Government Official Website.{{cite web}}: CS1 maint: url-status (link)


ಉಲ್ಲೇಖಗಳು

ಬದಲಾಯಿಸಿ
  • Arditti, Joseph & On, Mak Chin (2004): The Golden Rain Tree. Version of 2004-MAY-01. Retrieved 2008-MAR-31.
  • International Legume Database & Information Service (ILDIS) (2005): Albizia saman. Version 10.01, November 2005. Retrieved 2008-MAR-30.
  • von Humboldt, Alexander & Bonpland, Aimé (1815): Reise in die Aequinoctial-Gegenden des neuen Continents (Part 3). J.G. Cotta, Stuttgart and Tübingen. Image/PDF fulltext at Google Books

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮಳೆಮರ&oldid=1196737" ಇಂದ ಪಡೆಯಲ್ಪಟ್ಟಿದೆ