ಫಾಲ್ಗುಣ ಮಾಸ
ಫಾಲ್ಗುಣ ಮಾಸವು ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹನ್ನೆರಡನೇ ಮಾಸ. ಸೂರ್ಯ ಕುಂಭ ರಾಶಿಯಲ್ಲಿರುವಾಗ ಬರುವ ಅಮಾವಾಸ್ಯೆಯ ಮಾರನೆಯ ದಿನದಿಂದ ಈ ಮಾಸ ಪ್ರಾರಂಭವಾಗಿ ಮೀನಮಾಸದ ಅಮಾವಾಸ್ಯೆಯಂದು ಪೂರ್ತಿಯಾಗುತ್ತದೆ. ಕುಂಭ ಮತ್ತು ಮೀನ ಈ ಎರಡು ಮಾಸಗಳಲ್ಲಿ ಬರುವ ಅಮಾವಾಸ್ಯೆಗಳ ಮಧ್ಯವರ್ತಿಯ ಕಾಲವೇ ಫಾಲ್ಗುಣ ಮಾಸ. ಶಿಶಿರ ಋತುವಿನ ಮಾಸಗಳಲ್ಲಿ ಇದು ಎರಡನೆಯದು. ಭಾರತ ಸರ್ಕಾರದ ಸಾಯನಸೌರಮಾಸ ಗಣನಾ ಪದ್ಧತಿಯಂತೆ ಈ ತಿಂಗಳಿಗೆ ಮಧು ಎಂದು ಹೆಸರು. ಮಧು ಮಾಸ ಫೆಬ್ರವರಿ 13ನೆಯ ತಾರೀಕು ಪ್ರಾರಂಭವಾಗಿ ಮಾರ್ಚ್ 13 ಅಥವಾ 14 ನೆಯ ತಾರೀಕು ಮುಗಿಯುತ್ತದೆ.[೧] ಈ ಮಾಸದ ಅಮಾವಾಸ್ಯೆಯಂದು ಚಾಂದ್ರಮಾನ ವರ್ಷ ಮುಕ್ತಾಯವಾಗುತ್ತದೆ. ಸಾಮಾನ್ಯವಾಗಿ ಈ ತಿಂಗಳಿನ ಹುಣ್ಣಿಮೆಯ ದಿವಸ ಫಲ್ಗುನೀ ನಕ್ಷತ್ರ ಸೇರುವುದರಿಂದ ಇದನ್ನು ಫಲ್ಗುನ ಎಂದು ಕರೆಯುವುದು ರೂಢಿಗೆ ಬಂದಿದೆ. ಪೂರ್ವ ಫಲ್ಗುನೀ (ಪುಬ್ಬು), ಉತ್ತರ ಫಲ್ಗುನೀ (ಉತ್ತರಾ) ಈ ಎರಡು ನಕ್ಷತ್ರಗಳಲ್ಲೊಂದು ಅಥವಾ ಇವುಗಳ ಹಿಂದುಮುಂದಿನ ನಕ್ಷತ್ರಗಳಲ್ಲೊಂದು ಈ ಹುಣ್ಣಿಮೆಯಂದು ಸೇರುತ್ತದೆ. ಈ ತಿಂಗಳಿನ ಕೃಷ್ಣಪಕ್ಷದ ಅಷ್ಟಮೀ ದಿವಸ ಮಾಡುವ ಅಷ್ಟಕಾಶ್ರಾದ್ಧವೇ ವರ್ಷಾಂತ್ಯದ ಅಷ್ಟಕಾಶ್ರಾದ್ಧ. ಹೋಳಿ ಹಬ್ಬ ಬರುವುದು ಈ ತಿಂಗಳಿನ ಹುಣ್ಣಿಮೆಯ ದಿವಸ. ಶ್ರೀರಾಮಕೃಷ್ಣ ಪರಮಹಂಸರು ಹುಟ್ಟಿದುದು ಈ ತಿಂಗಳಿನ ಶುಕ್ಲಪಕ್ಷದ ದ್ವಿತೀಯಾ ತಿಥಿಯ ದಿವಸ. ಈ ಮಾಸದಲ್ಲಿ ಹಲವಾರು ಕಡೆ ಪ್ರಸಿದ್ಧ ಜಾತ್ರೆ ಮತ್ತು ರಥೋತ್ಸವಗಳು ನಡೆಯುತ್ತವೆ.
ಈ ಮಾಸದ ಪ್ರಮುಖ ಹಬ್ಬಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Henderson, Helene. (Ed.) (2005) Holidays, festivals, and celebrations of the world dictionary Third edition. Electronic edition. Detroit: Omnigraphics, p. xxix. ISBN 0-7808-0982-3
ಚಾಂದ್ರಮಾನ ಮಾಸಗಳು |
---|
ಚೈತ್ರ • ವೈಶಾಖ • ಜ್ಯೇಷ್ಠ • ಆಷಾಢ • ಶ್ರಾವಣ • ಭಾದ್ರಪದ • ಆಶ್ವಯುಜ • ಕಾರ್ತಿಕ • ಮಾರ್ಗಶಿರ • ಪುಷ್ಯ • ಮಾಘ • ಫಾಲ್ಗುಣ |