ಹುಣ್ಣಿಮೆ (ಪೂರ್ಣಿಮೆ) ಪ್ರತಿ ತಿಂಗಳು ಆಕಾಶದಲ್ಲಿ ಪೂರ್ಣ ಚಂದ್ರನು ಕಾಣಿಸುವ ದಿನ (ತಿಥಿ), ಮತ್ತು ಪ್ರತಿ ತಿಂಗಳಿನಲ್ಲಿನ ಎರಡು ಚಾಂದ್ರ ಪಕ್ಷಗಳ ನಡುವಿನ ವಿಭಾಗವನ್ನು ಗುರುತಿಸುತ್ತದೆ.

ಕಾರ್ತಿಕ ಪೂರ್ಣಿಮೆ: ನವೆಂಬರ್ ೨೮, ೨೦೧೨

ಸೂರ್ಯ ಮತ್ತು ಚಂದ್ರರು 180° ಇಂದ ಬೇರೆಯಾದಂತೆ ಕಂಡಾಗ ಹುಣ್ಣಿಮೆ ಸಂಭವಿಸುತ್ತದೆ. ಈ ಚಾಂದ್ರದಿನವನ್ನು ಹೊಸ ಆರಂಭಗಳಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.[] ಶುಕ್ಲ ಪಕ್ಷವು ಹುಣ್ಣಿಮೆಗಿಂತ ಮೊದಲಿನ ಪಕ್ಷ, ಮತ್ತು ಕೃಷ್ಣ ಪಕ್ಷವು ಹುಣ್ಣಿಮೆಯ ನಂತರದ ಪಕ್ಷ.

ಹಬ್ಬಗಳು

ಬದಲಾಯಿಸಿ

ಹುಣ್ಣಿಮೆಯಂದು ಬರುವ ಕೆಲವು ಹಬ್ಬಗಳೆಂದರೆ:

  • ಕಾರ್ತಿಕ ಪೂರ್ಣಿಮೆಯನ್ನು ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ.
  • ರಕ್ಷಾ ಬಂಧನವು ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಬರುತ್ತದೆ. ಈ ದಿನ ಹಯಗ್ರೀವ ಜಯಂತಿಯನ್ನೂ ಆಚರಿಸಲಾಗುತ್ತದೆ. ಇದನ್ನು ನಾರಳಿ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ.
  • ಗುರು ಪೂರ್ಣಿಮೆಯಂದು ಭಕ್ತರು ತಮ್ಮ ಗುರುವಿನ ಪೂಜೆ ಮಾಡುತ್ತಾರೆ. ಇದು ವ್ಯಾಸ ಪೂರ್ಣಿಮೆ ಎಂದು ಸುಪರಿಚಿತವಾಗಿದೆ. ಈ ದಿನ ಮಹಾಭಾರತದ ಪ್ರಖ್ಯಾತ ಲೇಖಕರಾದ ವ್ಯಾಸರ ಹುಟ್ಟುಹಬ್ಬ.

ಉಲ್ಲೇಖಗಳು

ಬದಲಾಯಿಸಿ
  1. "Pournami Vratham– Fasting on the Full Moon". Retrieved 25 November 2017.