ಪಕ್ಷ
ಪಕ್ಷ ಶಬ್ದವು ಹಿಂದೂ ಚಾಂದ್ರಮಾನ ಪಂಚಾಂಗದ ಒಂದು ತಿಂಗಳಿನಲ್ಲಿ ಎರಡುವಾರದ ಅವಧಿ ಅಥವಾ ಒಂದು ಚಾಂದ್ರಹಂತವನ್ನು ಸೂಚಿಸುತ್ತದೆ.[೧][೨]
ಈ ಶಬ್ದದ ಅರ್ಥ ಅಕ್ಷರಶಃ ಪಕ್ಕ ಅಥವಾ ಬದಿ ಎಂದು. ಪಕ್ಷವು ಹುಣ್ಣಿಮೆ ದಿನದ ಎರಡೂ ಪಕ್ಕದಲ್ಲಿನ ಅವಧಿ. ಹಿಂದೂ ಪಂಚಾಂಗದಲ್ಲಿ ಒಂದು ಚಾಂದ್ರಮಾಸವು ಎರಡು ಪಕ್ಷಗಳನ್ನು ಹೊಂದಿರುತ್ತದೆ ಮತ್ತು ಅಮಾವಾಸ್ಯೆಯೊಂದಿಗೆ ಆರಂಭವಾಗುತ್ತದೆ. ಚಾಂದ್ರದಿನಗಳನ್ನು ತಿಥಿಗಳು ಎಂದು ಕರೆಯಲಾಗುತ್ತದೆ ಮತ್ತು ಪ್ರತಿ ತಿಂಗಳು ೩೦ ತಿಥಿಗಳನ್ನು ಹೊಂದಿರುತ್ತದೆ. ಒಂದು ತಿಥಿಯ ಅವಧಿ 20 – 27 ಗಂಟೆಗಳ ನಡುವೆ ಬದಲಾಗಬಹುದು. ಒಂದು ಪಕ್ಷವು ೧೫ ತಿಥಿಗಳನ್ನು ಹೊಂದಿರುತ್ತದೆ. ಇವನ್ನು ಚಂದ್ರನ ೧೨ ಡಿಗ್ರಿ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆ ನಡುವಿನ ಮೊದಲ ಪಕ್ಷವನ್ನು "ಗೌರ ಪಕ್ಷ" ಅಥವಾ ಶುಕ್ಲ ಪಕ್ಷವೆಂದು ಕರೆಯಲಾಗುತ್ತದೆ. ಇದು ಚಂದ್ರ ಪ್ರಕಾಶಮಾನವಾಗುತ್ತ ಹೋಗುವ ಅವಧಿ. ತಿಂಗಳ ಎರಡನೇ ಪಕ್ಷವನ್ನು "ಕೃಷ್ಣ ಪಕ್ಷ" ಅಥವಾ ವದ್ಯ ಪಕ್ಷವೆಂದು ಕರೆಯಲಾಗುತ್ತದೆ. ಇದು ಚಂದ್ರ ಮಬ್ಬಾಗುತ್ತ ಹೋಗುವ ಅವಧಿ. ನಿಮಚ್ ಪಂಚಾಂಗವು ಹೊಸ ಚಾಂದ್ರಮಾಸವನ್ನು ಕೃಷ್ಣಪಕ್ಷದ ಮೊದಲ ದಿನದಿಂದ ಆರಂಭಿಸಿದರೆ ಗುಜರಾತ್ ಪಂಚಾಂಗವು ಹೊಸ ಚಾಂದ್ರಮಾಸವನ್ನು ಶುಕ್ಲಪಕ್ಷದ ಮೊದಲ ದಿನದಿಂದ ಆರಂಭಿಸುತ್ತದೆ.
ಶುಕ್ಲ ಒಂದು ಸಂಸ್ಕೃತ ಶಬ್ದ. ಇದರರ್ಥ "ಬಿಳಿ". ಈ ಪಕ್ಷವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಅಸ್ತಿತ್ವದ ಪ್ರತಿ ಸಮತಲದ ಬೆಳವಣಿಗೆ ಅಥವಾ ವಿಸ್ತರಣೆಗೆ ಅನುಕೂಲಕರವಾಗಿರುತ್ತದೆ.
ಈ ಅವಧಿಯಲ್ಲಿ ಅಸಂಖ್ಯಾತ ಹಬ್ಬಗಳನ್ನು ಆಚರಿಸಲಾಗುತ್ತದೆ, ಉದಾಹರಣೆಗೆ ನವರಾತ್ರಿ ಹಬ್ಬ, ತುಂಬಾ ಮುಖ್ಯವಾಗಿ ಚೈತ್ರ ನವರಾತ್ರಿ ಮತ್ತು ಆಶ್ವಯುಜ ನವರಾತ್ರಿ.
ದಿನ |
ತಿಥಿ |
ಹಬ್ಬ | ಮಾಸ |
---|---|---|---|
೧ನೇ ದಿನ | ಪಾಡ್ಯ |
ಬಲಿ ಪ್ರತಿಪದ, ಗೋವರ್ಧನ ಪೂಜೆ | ಕಾರ್ತಿಕ |
೨ನೇ ದಿನ | ಬಿದಿಗೆ | ಭಾಯಿ ಬೀಜ್ |
ಕಾರ್ತಿಕ |
೩ನೇ ದಿನ | ತದಿಗೆ | ತೀಜ್ |
ಭಾದ್ರಪದ |
೩ನೇ ದಿನ | ತದಿಗೆ | ಅಕ್ಷಯ ತೃತೀಯಾ | ವೈಶಾಖ |
೪ನೇ ದಿನ | ಚತುರ್ಥಿ |
ಗಣೇಶ ಚತುರ್ಥಿ | ಭಾದ್ರಪದ |
೪ನೇ ದಿನ | ಚತುರ್ಥಿ | ಗಣೇಶ ಜಯಂತಿ | ಮಾಘ |
೫ನೇ ದಿನ | ಪಂಚಮಿ |
ನುವಾಖಾಯ್ | ಭಾದ್ರಪದ |
೫ನೇ ದಿನ | ಪಂಚಮಿ | ವಿವಾಹ ಪಂಚಮಿ | ಮಾರ್ಗಶಿರ |
೬ನೇ ದಿನ | ಷಷ್ಠಿ |
ಶೀತಲ ಷಷ್ಠಿ | ಜ್ಯೇಷ್ಠ |
೯ನೇ ದಿನ | ನವಮಿ |
ರಾಮ ನವಮಿ | ಚೈತ್ರ |
೧೦ನೇ ದಿನ | ದಶಮಿ | ವಿಜಯದಶಮಿ | ಆಶ್ವಯುಜ |
೧೧ನೇ ದಿನ | ಏಕಾದಶಿ | ಶಯನೀ ಏಕಾದಶಿ | ಆಷಾಢ |
೧೧ನೇ ದಿನ | ಏಕಾದಶಿ | ವೈಕುಂಠ ಏಕಾದಶಿ | ಮಾರ್ಗಶಿರ |
೧೪ನೇ ದಿನ | ಚತುರ್ದಶಿ |
ಸಂವತ್ಸರಿ |
ಭಾದ್ರಪದ |
೧೫ನೇ ದಿನ |
ಹುಣ್ಣಿಮೆ | ಗುರು ಪೂರ್ಣಿಮೆ | ಆಷಾಢ |
ಉಲ್ಲೇಖಗಳು
ಬದಲಾಯಿಸಿ- ↑ Defouw, Hart; Robert Svoboda (2003). Light on Life: An Introduction to the Astrology of India. Lotus Press. p. 186. ISBN 0-940985-69-1.
- ↑ Kumar, Ashwini (2005). Vaastu: The Art And Science Of Living. Sterling Publishers Pvt. Ltd. p. 50. ISBN 81-207-2569-7.