ಆಶ್ವಯುಜ ಮಾಸ
ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಎಳನೇ ಮಾಸ. ಆಡು ಭಾಷೆಯಲ್ಲಿ ಆಶ್ವೀಜ ಎಂದೂ ಕರೆಯಲಾಗುತ್ತದೆ. ಶರತ್ ಋತುವಿನ ಮೊದಲ ಮಾಸ ಆಶ್ವಯುಜ ಮಾಸ.
ಈ ಮಾಸದ ಪ್ರಮುಖ ಹಬ್ಬಗಳು
ಬದಲಾಯಿಸಿ- ನವರಾತ್ರಿ (ಶುಕ್ಲ ಪಾಡ್ಯ- ನವಮಿ)
- ಸರಸ್ವತಿ ಹಬ್ಬ (ಶುಕ್ಲ ಸಪ್ತಮಿ)
- ಮಹಾನವಮಿ, ಆಯುಧ ಪೂಜೆ (ಶುಕ್ಲ ನವಮಿ)
- ವಿಜಯದಶಮಿ (ಶುಕ್ಲ ದಶಮಿ)
- ಪಾಶಾಂಕುಶಾ ಏಕಾದಶಿ (ಶುಕ್ಲ ಏಕಾದಶಿ)
- ಶರತ್ ಪೂರ್ಣಿಮ; ಕೋಜಾಗರ ವ್ರತ; ಕಾರ್ತಿಕ ಸ್ನಾನಾರಾಂಭ (ಹುಣ್ಣಿಮೆ)
- ರಮಾ ಏಕಾದಶಿ (ಕೃಷ್ಣ ಏಕಾದಶಿ)
- ಧನ ತ್ರಯೋದಶಿ (ಕೃಷ್ಣ ತ್ರಯೋದಶಿ)
- ಜಲಪೂರ್ಣ ತ್ರಯೊದಶಿ (ಕೃಷ್ಣ ತ್ರಯೊದಶಿ)
- ನರಕ ಚತುರ್ದಶಿ, ಯಮ ತರ್ಪಣ (ಕೃಷ್ಣ ಚತುರ್ದಶಿ)
- ದೀಪಾವಳಿ ಅಮಾವಾಸ್ಯೆ (ಅಮಾವಾಸ್ಯೆ)
ಈ ಮಾಸದಲ್ಲಿ ಜರುಗುವ ವಿವಿಧ ಉತ್ಸವ ಅಥವಾ ಜಾತ್ರೆಗಳು
ಬದಲಾಯಿಸಿ- ಶ್ರೀ ಚಾಮುಂಡೇಶ್ವರಿ ವರ್ಧ0ತಿ ಉತ್ಸವ - ಆಷಾಡ ಮಾಸ ಕೃಷ್ಣಪಕ್ಷ ಸಪ್ತಮಿ ರೇವತಿ ನಕ್ಷತ್ರದ ದಿವಸ.
- ಶ್ರೀ ಚಾಮುಂಡೇಶ್ವರಿ ಶಯನೋತ್ಸವ - ಆಶ್ವಯುಜ ಕೃಷ್ಣಪಕ್ಷ ತೃತೀಯಾ ದಿವಸ.
- ಶ್ರೀ ಚಾಮುಂಡೇಶ್ವರಿ ಮುಡಿ ಉತ್ಸವ - ಅಶ್ವಯುಜ ಕೃಷ್ಣಪಕ್ಷ ಪಂಚಮಿ ದಿವಸ.
- ಶ್ರೀ ಚಾಮುಂಡೇಶ್ವರಿ ವಸಂತೋತ್ಸವ - ಚೈತ್ರಶುಕ್ಲ ಪಾಡ್ಯದ ದಿವಸ.
- ಶ್ರಿ ಚಾಮುಂಡೇಶ್ವರಿ ಶರನ್ನವರಾತ್ರಿ ಉತ್ಸವಗಳು - ಆಶ್ವಯುಜ ಶುಕ್ಲ ಪಾಡ್ಯದ ದಿನದಿಂದ ದಶಮಿ ದಿನದವರೆಗೆ.
- ಶ್ರೀ ಚಾಮುಂಡೇಶ್ವರಿ ಕೈತ್ತಿಕೋತ್ಸವ - ಕಾರ್ತೀಕಮಾಸ ಪೂರ್ಣಮಿ ದಿವಸ.
- ಶ್ರೀ ಚಾಮುಂಡೇಶ್ವರಿ ಕೊಠಾರೋತ್ಸವ - ಪುಷ್ಯಮಾಸದಲ್ಲಿ ೪ನೇ ದಿನಾಂಕದಿಂದ .
- ಶ್ರೀ ಚಾಮುಂಡೇಶ್ವರಿ (ಜಾತ್ರೆ) ರಥೋತ್ಸವ - ಆಶ್ವಯುಜ ಮಾಸ ಪೂರ್ಣಿಮೆ ಉತ್ತರಾ ನಕ್ಷತ್ರ.
- ತೆಪ್ಪೋತ್ಸವ - ಆಶ್ವಯುಜ ಕೃಷ್ಣಪಕ್ಷ ದ್ವಿತೀಯಾ ದಿವಸ.
- ಶ್ರೀ ಮಹಾಬಲೇಶ್ವರಸ್ವಾಮಿ ರಥೋತ್ಸವ - ಪಾಲ್ಗುಣ ಕ್ರಷ್ಣ ಷಷ್ಟಿ ದಿವಸ.
- ಉತ್ತನಹಳ್ಳಿ ಜ್ವಾಲಾಮುಖಿ ಅಮ್ಮನವರ ಜಾತ್ರೆ - ಮಾಘಮಾಸದ ೩ನೇ ಭಾನುವಾರ.
ಚಾಂದ್ರಮಾನ ಮಾಸಗಳು |
---|
ಚೈತ್ರ • ವೈಶಾಖ • ಜ್ಯೇಷ್ಠ • ಆಷಾಢ • ಶ್ರಾವಣ • ಭಾದ್ರಪದ • ಆಶ್ವಯುಜ • ಕಾರ್ತಿಕ • ಮಾರ್ಗಶಿರ • ಪುಷ್ಯ • ಮಾಘ • ಫಾಲ್ಗುಣ |