ಡಿಸೆಂಬರ್ ೪
ದಿನಾಂಕ
ಡಿಸೆಂಬರ್ ೪ - ಡಿಸೆಂಬರ್ ತಿಂಗಳಿನ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೮ನೇ (ಅಧಿಕ ವರ್ಷದಲ್ಲಿ ೩೩೯ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೬೩೯ - ಇಂಗ್ಲೆಂಡ್ನ ಖಗೋಳಶಾಸ್ತ್ರ ತಜ್ಞ ಜೆರೆಮಿಯ ಹೊರ್ರೊಕ್ಸ್ ಶುಕ್ರ ಗ್ರಹವು ಸೂರ್ಯನ ಮುಂದೆ ಹಾಯುವುದನ್ನು ಮೊದಲ ಬಾರಿಗೆ ಪ್ರದರ್ಶಿಸಿದನು.
- ೧೮೨೯ - ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಲಾರ್ಡ್ ವಿಲಿಯಮ್ ಬೆನ್ಟಿನ್ಕ್ ಸತಿ ಪದ್ಧತಿಯನ್ನು ರದ್ದುಪಡಿಸಿದನು.
- ೧೯೫೨ - ಲಂಡನ್ ನಗರದಲ್ಲಿ ಉಂಟಾದ ಹೊಗೆ ಮತ್ತು ಮಂಜಿನ ಮಿಶ್ರಣವು (ಸ್ಮೊಗ್) ಮುಂದಿನ ದಿನಗಳಲ್ಲಿ ಸುಮಾರು ೧೨,೦೦೦ ಜನರ ಮರಣಕ್ಕೆ ಕಾರಣವಾಯಿತು.
- ೧೯೭೧ - ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ಜಲಸೇನೆಯು ಕರಾಚಿಯ ಮೇಲೆ ಆಕ್ರಮಣ ಮಾಡಿತು.
- ೧೯೮೨ - ಚೀನಿ ಜನರ ಗಣರಾಜ್ಯ ತನ್ನ ಪ್ರಸಕ್ತ ಸಂವಿಧಾನವನ್ನು ಅಳವಡಿಸಿಕೊಂಡಿತು.
ಜನನ
ಬದಲಾಯಿಸಿ- ೧೮೮೮ - ಆರ್. ಸಿ. ಮಜುಮ್ದಾರ್, ಭಾರತದ ಇತಿಹಾಸಕಾರ
- ೧೮೯೨ - ಫ್ರಾನ್ಸಿಸ್ಕೊ ಫ್ರಾಂಕೊ, ಸ್ಪೇನ್ನ ಸರ್ವಾಧಿಕಾರಿ.
- ೧೮೯೮ - ಕೆ. ಎಸ್. ಕೃಷ್ಣನ್, ಭಾರತದ ಖ್ಯಾತ ಭೌತವಿಜ್ಞಾನಿ
- ೧೯೦೮ - ಆಲ್ಫ಼್ರೆಡ್ ಹರ್ಶಿ, ಅಮೇರಿಕಾದ ಖ್ಯಾತ ಬ್ಯಾಕ್ಟೀರಿಯಾ ತಜ್ಞ
- ೧೯೧೦ - ಆರ್. ವೆಂಕಟರಾಮನ್, ಭಾರತದ ೮ನೇ ರಾಷ್ಟ್ರಪತಿ
- ೧೯೧೯ - ಇಂದ್ರ ಕುಮಾರ್ ಗುಜರಾಲ್, ಭಾರತದ ೧೩ನೇ ಪ್ರಧಾನ ಮಂತ್ರಿ
- ೧೯೬೩ - ಸೆರ್ಗೈ ಬುಬ್ಕ, ಯುಕ್ರೇನ್ನ ಪೋಲ್ ವಾಲ್ಟ್ ಕ್ರೀಡಾಪಟು.
- ೧೯೭೭ - ಅಜಿತ್ ಅಗರ್ಕರ್, ಭಾರತದ ಕ್ರಿಕೆಟ್ ಆಟಗಾರ
ಮರಣ
ಬದಲಾಯಿಸಿ- ೧೧೨೩ - ಒಮಾರ್ ಖಯ್ಯಾಮ್, ಪರ್ಶಿಯಾದ ಕವಿ, ಗಣಿತಜ್ಞ ಮತ್ತು ತತ್ವಜ್ಞಾನಿ.
- ೧೯೪೫ - ಥಾಮಸ್ ಹಂಟ್ ಮಾರ್ಗನ್, ಅಮೇರಿಕ ದೇಶದ ವಂಶವಾಹಿಶಾಸ್ತ್ರದ ತಜ್ಞ.
ದಿನಾಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |