ಸತಿ ಪದ್ಧತಿ
ಸತಿ ಪದ್ದತಿ ಭಾರತದ ಕೆಲವು ಸಮಾಜಗಳಲ್ಲಿ ಬಳಕೆಯಲ್ಲಿದ್ದ ಒಂದು ಪ್ರಾಚೀನ ಪದ್ಧತಿ. ಇಲ್ಲಿ ಗಂಡ ಸತ್ತ ಹೆಣ್ಣು (ವಿಧವೆ) ಬದುಕುವ ಯಾವುದೇ ಹಕ್ಕನ್ನು ಕಳೆದುಕೊಂಡು, ಗಂಡನ ಶವದೊಂದಿಗೆ ಚಿತೆಯೇರಿ ಅತ್ಮಾಹುತಿ ಮಾಡಿಕೊಳ್ಳುತ್ತಾಳೆ. ಕೆಲವೊಮ್ಮೆ ಅಲ್ಲಿರುವ ಹಿರಿಯರೇ ಈ ಹೆಣ್ಣನ್ನು ಬಲವಂತವಾಗಿ ಚಿತೆಗೆ ತಳ್ಳಲ್ಪಟ್ಟ ದಾಖಲೆಗಳು ಇತಿಹಾಸದಲ್ಲಿ ಹುದುಗಿವೆ. ಇಲ್ಲಿ ಸ್ವ ಇಚ್ಛೆಗಿಂತ ಒತ್ತಾಯಕ್ಕೆ, ದಾಕ್ಷಿಣ್ಯಕ್ಕೆ ಬಲಿಯಾಗಿರುವ ಪ್ರಕರಣಗಳೆ ಹೆಚ್ಚಾಗಿವೆ. ಇದನ್ನು ಹಿಂದೂ ಸಮಾಜದ ಅನಿಷ್ಟ ಪದ್ಧತಿಯೆಂದು ಕರೆಯಲಾಗಿದೆ.
ಇತಿವೃತ್ತ
ಬದಲಾಯಿಸಿ- ಜನಪದದಲ್ಲಿ ಈ ಬಗೆಯ ಖಂಡಕಾವ್ಯಗಳು ಹೇರಳವಾಗಿ ಸಿಗುತ್ತವೆ. ಮೊಟ್ಟಮೊದಲು ಲಾರ್ಡ್ ಬೆಂಟಿಂಕ್ ಈ ಪದ್ಧತಿಯನ್ನು ನಿಷೇಧಿಸಿದನು. ರೂಪಕನ್ವರ್ ಸಾವಿನ ನಂತರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಈ ಪದ್ಧತಿಯನ್ನು ಕಡ್ಡಾಯವಾಗಿ ನಿಷೇಧಿಸಿವೆ. ಹಾಗೊಂದು ವೇಳೆ ಸರ್ಕಾರದ ಮಾತನ್ನು ಮೀರಿ 'ಸತಿ ಪದ್ದತಿ' ನಡೆಸಿದರೆ, ನಡೆಸಿದವರ ವಿರುದ್ದ ಉಗ್ರಕ್ರಮವನ್ನು ಕೈಗೊಳ್ಳಲಾಗುತ್ತದೆ.
- ಪುರಾಣ, ಇತಿಹಾಸ, ಜನಪದ, ಐತಿಹ್ಯ ಮತ್ತು ದಂತಕಥೆಗಳಲ್ಲಿ 'ಸತಿ ಪದ್ದತಿ'ಯನ್ನು ಹೆಚ್ಚಾಗಿ ಕಾಣಬಹುದಾಗಿದೆ. ಸತಿಯಾದ ಹೆಣ್ಣನ್ನು ದೇವರೆಂದು ಪೂಜಿಸಿ ಸತಿಕಲ್ಲುಗಳನ್ನು ನೆಟ್ಟರೆಂದು ಶಾಸನಗಳು ಹೇಳುತ್ತವೆ. ಹೆಣ್ನು ಪುರುಷ ಸಮಾಜದ ಪ್ರಮುಖ ಆಸ್ತಿ. ಗಂಡನ ಮರಣದ ನಂತರ ಅವಳ ಬದುಕು ಗಾಳಿಗೋಪುರವಾಗಬಾರದು, ಅವಳು ಕಾಮುಕರ ಕಾಕಾ ದೃಷ್ಟಿಗೆ ಬಲಿಯಾಗಬಾರದು ಹಾಗೂ ಯಾವುದೇ ಬಗೆಯ ಲಾಲಸೆಗಳಿಗೂ ಒಳಗಾಗಬಾರದು ಎಂಬ ಕಾರಣದಿಂದ 'ಸತಿ ಪದ್ದತಿ' ಆಚರಣೆಗೆ ಬಂದಿದೆ ಎಂದು ಪುರಾಣಗಳು ಉಲ್ಲೇಖಿಸುತ್ತವೆ.
ಮಹಾಕಾವ್ಯಗಳಲ್ಲಿ
ಬದಲಾಯಿಸಿ- ಪಾಂಡುವಿನ ನಿಧನದ ನಂತರ ಮಾದ್ರಿ ಗಂಡನೊಂದಿಗೆ ಚಿತೆಯೇರಿ ಸತಿಯಾಗುತ್ತಾಳೆ.
ಇತಿಹಾಸದಲ್ಲಿ
ಬದಲಾಯಿಸಿ- ಮೊಗಲರ ಕಾಲದಲ್ಲಿ ರಾಜನು ಮರಣ ಹೊಂದಿದರೆ ಅವನ ಅಷ್ಟು ರಾಣಿಯರು 'ಸತಿ ಪದ್ದತಿ'ಯನ್ನು ಅನುಸರಿಸಿರುವುದನ್ನು ಕಾಣಬಹುದಾಗಿದೆ.
ಜನಪದ
ಬದಲಾಯಿಸಿ- ಜನಪದ ಖಂಡಕಾವ್ಯಗಳಲ್ಲಿ "ಈರೋಬಿ" ಯ ಕತೆ ಪ್ರಸಿದ್ದವಾಗಿದೆ. ಇದು 'ವೀರ ಒಬವ್ವ'ನ ಕಥೆ. ಶೋಕಸ್ಥಾಯಿಯ ಹಿನ್ನೆಲೆಯಲ್ಲಿ ಹೃದಯ ಮಿಡಿಯುವ ಒಂದು ದುರಂತ ಚಿತ್ರ. ಮಡಿದ ಗಂಎನೊಡನೆ ಕೊಂಡವನ್ನು ಏರುವ ವೀರಮಹಿಳೆ ಈರೋಬಿ. ಈಕೆಯ ಪತಿ ಶೆಟ್ಟಿ ಶಂಕರರಾಯ ಮಡದಿಗೆ ಚಿನ್ನದ ಹರಿವಾಣ ತರಲೆಂದು ಘಟ್ಟದ ಕೆಳಗೆ ಹೋದವನು ದುರ್ಮರಣಕ್ಕೆ ಈಡಾಗುತ್ತಾನೆ.
- ವೀರನಾದ ಪತಿ ಮಡಿದಿರಲಾರನೆಂದು ಭಾವಿಸಿದ ಈರೋಬಿ ಸರಿಯಾದ ಗುರುತು ಬರುವವರೆಗೆ ಗಂಡ ಸತ್ತ ಸುದ್ದಿಯನ್ನು ನಂಬದೆ ದಿಟ್ಟ ಸ್ವಭಾವವನ್ನು ವ್ಯಕ್ತಪಡಿಸುವಳು. ಗುರುತು ಬಂದಾಗ ಎದೆಗುಂದದೆ ಈರೋಬಿ ತನ್ನ ಪತಿಯೊಡನೆ ಕೊಂಡವ ನ್ನೇರಲು ಅಣಿಯಾಗುತ್ತಾಳೆ.
- ಆಕೆ ಕೊಂಡವೇರದಂತೆ ಬಂಧುಬಳಗವೆಲ್ಲಾ ಬಂದು ಗೋಳಿಟ್ಟು ತಡೆದರೂ, ಅವಳು ಯಾರ ಮಾತನ್ನೂ ಕೇಳುವುದಿಲ್ಲ. ಈರೋಬಿ ಯಾರ ಒತ್ತಾಯಕ್ಕೂ ಮಣಿಯದೆ ಕೊಂವೇರಲು ಅಣಿಯಾಗಿ ಕೊಂಡವೇರಿದ ಬಗೆಯ ಕಥನಗೀತೆ ಮಂಡ್ಯದಲ್ಲಿ ಪ್ರಚಲಿತವಾಗಿದೆ.
ಈರೋಬಿ ಖಂಡಕಾವ್ಯ
ಬದಲಾಯಿಸಿಬಾಣತಿರೋಬಿ ಬಟ್ಟಲಲ್ಲುಣುತಾಳೆಂದು
ಘಟ್ಟದ ಕೆಳಗಲ ಹರಿವಾಣಾ-ತರಲ್ಹೋಗಿ
ಶೆಟ್ಟಿ ಶಂಕರರಾಯ ಮಡಿದಾನೆ||ಕೋ||
ಕನ್ನೆ ಈರೋಬಿ ತಣಿಗೇಲುಣುತಾಳೆಂದು
ಕಣೀವೆಯ ಕೆಳಗಲ ಹರಿವಾಣ ತರಲ್ಹೋಗಿ
ರಾಯ ಶಂಕರರಾಯ ಮಡಿದಾನೆ||ಕೋ||
ಸತ್ತ ಸುದ್ದಿ ಬಂತು ನೆತ್ತರದರಬಿ ಬಂತು
ಕತ್ತಿ ಬಂತು ಅವನ ಗುರುತಿಗೆ-ಈರೋಬಿ
ಹೆತ್ತೊರಿಗೇಳು ನಿಲುಭಾರ
ಕರ್ಮಿ ಹೆಣ್ಹುಟ್ಟಿ ನೀ ವನವನೆ ಸೇರಿದೆ
ಮನವೇ ನಿಂದುರುದು ಬೇಯ್ತದೆ-ನನ್ನಂಥ
ಕರ್ಮಿ ಹೆಣ್ಹುಂಟೆ ಧರೆಯಲಿ
ಕೊಂಡ ತಗಿಯೋರು ನೀವು ಚೆಂದಾಗಿ ತೆಗಿರಯ್ಯ
ಕೊಂಡದ ಮೇಲೆ ಗುಡಿಕಟ್ಟಿ-ತೆಗಿದಾರೆ
ನಿಮಗೆ ಗಂಡು ಸಂತಾನ ದೊರೆಯೋದು
ಗಂಡ ಸಾಯೋಕಿಂತ ಮುಂಡ್ಯಾಗೊಕಿಂತ
ಕಂಡೋರ ಮನೆಯ ಕಸನ್ಹಾಕಿ-ಸಾಯೋಕಿಂತ
ಕೊಂಡವನ್ನೇರೋದೆ ಕಡುಲೇಸು
ಕೊಂಡ ತೆಗೆಸ್ಯಾಳೆ ಕೊಂಡಾ ಕೂಡಿಸ್ಯಾಳೆ
ಮುಂದಾಕೊಂಟಾಳೆ ಈರೋಬಿ
ಬಣ್ಣ ಇಟುಗೊಂಡು ಬಂಗಾರ ತೊಟುಗೊಂಡು
ಬೀದೀಲಿ ಹೊರಟಾಳೆ ಈರೋಬಿ
ಹುಟ್ಟಿದ್ದಳಿಸಂದ್ರ ಬೆಳೆದಿದ್ದು ನಾಗ್ತಿಹಳ್ಳಿ
ಕೆಟ್ಟು ಬಾಳಿದ್ದು ಬೆಳ್ಳೂರು-ಹೆಣ್ಣು ಮಕ್ಕಳು
ನನ್ನಂಗೆ ನಿಂದು ಉರಿಯಾಲಿ
ಕಳಸ ಹೊತ್ತುಕೊಂಡು ಬಂದಳು-ಈರೋಬಿ
ಕೊಂಡ ಮೂರು ಸುತ್ತು ಬಳಸ್ಯಾಳು-ಈರೋಬಿ
ಕಳಸವ ಮಡಗಿ ಕೈಯೆತ್ತಿ ಮುಗಿದಾಳು-ಈರೋಬಿ
ಕೊಂಡಕೆ ಮುಂದಾಗಿ ನಡೆದಾಳು