ಕೇಂದ್ರ ಸಾಹಿತ್ಯ ಅಕಾಡೆಮಿ

ಕೇಂದ್ರ ಸಾಹಿತ್ಯ ಅಕಾಡೆಮಿಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ.[] ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು ೧೯೫೪ರಲ್ಲಿ ಸ್ಥಾಪಿಸಲಾಯಿತು. ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ ೧೯೫೫ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.

Sahitya Akademi
ರವೀಂದ್ರ ಭವನ,ದೆಹಲಿ ಸಂಗೀತ ನಾಟಕ ಅಕಾಡೆಮಿ, ಲಲಿತ್ ಕಲಾ ಅಕಾಡೆಮಿ ಮತ್ತು ಸಾಹಿತ್ಯ ಅಕಾಡಮಿ ಕಛೇರಿ.
ಸಂಕ್ಷಿಪ್ತ ಹೆಸರುSA
ಸ್ಥಾಪನೆಮಾರ್ಚ್ 12, 1954; 25852 ದಿನ ಗಳ ಹಿಂದೆ (1954-೦೩-12)
ಪ್ರಧಾನ ಕಚೇರಿರವೀಂದ್ರ ಭವನ,ದೆಹಲಿ
ಸ್ಥಳ
ಪ್ರದೇಶ served
ಭಾರತ
ಅಧ್ಯಕ್ಷರು
ಡಾ. ಚಂದ್ರಶೇಖರ ಕಂಬಾರ
ಪತ್ರಿಕೆಗಳು
ಪೋಷಕ ಸಂಸ್ಥೆಗಳು
ಸಂಸ್ಕೃತಿ ಸಚಿವಾಲಯ, ಭಾರತ ಸರಕಾರ
ಅಧಿಕೃತ ಜಾಲತಾಣಅಧಿಕೃತ ಜಾಲತಾಣ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬದಲಾಯಿಸಿ

ಭಾರತದ ಈ ಕೆಳಕಂಡ ೨೪ ಭಾಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಅಸ್ಸಾಮಿ, ಬಂಗಾಳಿ, ಬೋಡೋ, ಇಂಗ್ಲಿಷ್, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಷ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಹಾಗು ಉರ್ದು

ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಕಾರ್ಯ ಸುಮಾರು ೧೨ ತಿಂಗಳು ನಡೆಯುತ್ತದೆ. ವಿಜೇತರಿಗೆ ೧ ಲಕ್ಷ ರೂ ನಗದು ಹಾಗು ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ. ಭಾರತೀಯ ಭಾಷೆಗಳ ಉತ್ತಮ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಮಾಹಿತಿ ಕುತೂಹಲ

ಬದಲಾಯಿಸಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪಡೆದ ತಂದೆ ಮತ್ತು ಮಗ ಎಂಬ ದಾಖಲೆ ನಿರ್ಮಿಸಿದ ಕನ್ನಡದ ಎರಡು ಜೋಡಿ:

  1. ಡಿ.ವಿ.ಗುಂಡಪ್ಪ (೧೯೬೭) - ಬಿ.ಜಿ.ಎಲ್.ಸ್ವಾಮಿ (೧೯೭೮)[]
  2. ಕುವೆಂಪು (೧೯೫೫) - ಕೆ.ಪಿ.ಪೂರ್ಣಚಂದ್ರ ತೇಜಸ್ವಿ (೧೯೮೭)[]

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಕೃತಿಗಳು []

ಬದಲಾಯಿಸಿ
ವರ್ಷ ಪುರಸ್ಕೃತರು ಕೃತಿ
೧೯೫೫ ಕುವೆಂಪು ಶ್ರೀ ರಾಮಾಯಣ ದರ್ಶನಂ (ಮಹಾಕಾವ್ಯ)
೧೯೫೬ ರಂ.ಶ್ರೀ.ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ)
೧೯೫೮ ದ.ರಾ.ಬೇಂದ್ರೆ ಅರಳು-ಮರಳು (ಕವನ ಸಂಕಲನ)
೧೯೫೯ ಕೆ. ಶಿವರಾಮ ಕಾರಂತ ಯಕ್ಷಗಾನ ಬಯಲಾಟ (ಪರಿಚಯ ಗ್ರಂಥ)
೧೯೬೦ ವಿ. ಕೃ. ಗೋಕಾಕ ದ್ಯಾವಾ-ಪೃಥಿವಿ (ಕವನ)
೧೯೬೧ ಎ. ಆರ್. ಕೃಷ್ಣಶಾಸ್ತ್ರಿ ಬೆಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ (ವಿಮರ್ಶೆ)
೧೯೬೨ ದೇವುಡು ನರಸಿಂಹ ಶಾಸ್ತ್ರಿ ಮಹಾಕ್ಷತ್ರಿಯ (ಕಾದಂಬರಿ)
೧೯೬೪ ಬಿ. ಪುಟ್ಟಸ್ವಾಮಯ್ಯ ಕ್ರಾಂತಿ ಕಲ್ಯಾಣ (ಕಾದಂಬರಿ)
೧೯೬೫ ಎಸ್. ವಿ. ರಂಗಣ್ಣ ರಂಗ ಬಿನ್ನಪ (ತತ್ವಶಾಸ್ತ್ರೀಯ ಹೊಳಹುಗಳು)
೧೯೬೬ ಪು. ತಿ. ನರಸಿಂಹಾಚಾರ್ ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ)
೧೯೬೭ ಡಿ. ವಿ. ಗುಂಡಪ್ಪ ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (ತತ್ವಶಾಸ್ತ್ರೀಯ ಹೊಳಹುಗಳು)
೧೯೬೮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣ ಕಥೆಗಳು (ಸಂಪುಟ ೧೨-೧೩) (ಸಣ್ಣ ಕಥೆಗಳು)
೧೯೬೯ ಎಚ್. ತಿಪ್ಪೇರುದ್ರಸ್ವಾಮಿ ಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಸಾಂಸ್ಕೃತಿಕ ಅಧ್ಯಯನ)
೧೯೭೦ ಶಂ. ಬಾ. ಜೋಶಿ ಕರ್ನಾಟಕ ಸಂಸ್ಕ್ಟತಿಯ ಪೂರ್ವ ಪೀಠಿಕೆ (ಸಾಂಸ್ಕೃತಿಕ ಅಧ್ಯಯನ)
೧೯೭೧ ಆದ್ಯ ರಂಗಾಚಾರ್ಯ ಕಾಳಿದಾಸ (ಸಾಹಿತ್ಯ ವಿಮರ್ಶೆ)
೧೯೭೨ ಸಂ. ಶಿ. ಭೂಸನೂರ ಮಠ ಶೂನ್ಯ ಸಂಪಾದನೆಯ ಪರಾಮರ್ಶೆ (ವಿವರಣೆ)
೧೯೭೩ ವಿ. ಸೀತಾರಾಮಯ್ಯ ಅರಲು ಬರಲು (ಕವನ)
೧೯೭೪ ಎಂ. ಗೋಪಾಲಕೃಷ್ಣ ಆಡಿಗ ವರ್ಧಮಾನ (ಕವನ)
೧೯೭೫ ಎಸ್. ಎಲ್. ಭೈರಪ್ಪ ದಾಟು (ಕಾದಂಬರಿ)
೧೯೭೬ ಎಂ. ಶಿವರಾಂ ಮನ ಮಂಥನ (ಮನೋವೈಜ್ಞಾನಿಕ ಅಧ್ಯಯನ)
೧೯೭೭ ಕೆ. ಎಸ್. ನರಸಿಂಹಸ್ವಾಮಿ ತೆರೆದ ಬಾಗಿಲು (ಕವನ)
೧೯೭೮ ಬಿ. ಜಿ. ಎಲ್. ಸ್ವಾಮಿ ಹಸುರು ಹೊನ್ನು (ಪ್ರವಾಸ ಕಥನ)
೧೯೭೯ ಎ. ಎನ್. ಮೂರ್ತಿರಾವ್ ಚಿತ್ರಗಳು ಪತ್ರಗಳು (ನೆನಪುಗಳು)
೧೯೮೦ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅಮೆರಿಕದಲ್ಲಿ ಗೊರೂರು (ಪ್ರವಾಸ ಕಥನ)
೧೯೮೧ ಚನ್ನವೀರ ಕಣವಿ ಜೀವಧ್ವನಿ (ಕವನ)
೧೯೮೨ ಚದುರಂಗ ವೈಶಾಖ (ಕಾದಂಬರಿ)
೧೯೮೩ ಯಶವಂತ ಚಿತ್ತಾಲ ಕಥೆಯಾದಳು ಹುಡುಗಿ (ಸಣ್ಣ ಕಥೆಗಳು)
೧೯೮೪ ಜಿ. ಎಸ್. ಶಿವರುದ್ರಪ್ಪ ಕಾವ್ಯಾರ್ಥ ಚಿಂತನ (ಸಾಹಿತ್ಯ ವಿಮರ್ಶೆ)
೧೯೮೫ ತ. ರಾ. ಸುಬ್ಬರಾವ್ ದುರ್ಗಾಸ್ತಮಾನ (ಕಾದಂಬರಿ)
೧೯೮೬ ವ್ಯಾಸರಾಯ ಬಲ್ಲಾಳ ಬಂಡಾಯ (ಕಾದಂಬರಿ)
೧೯೮೭ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಚಿದಂಬರ ರಹಸ್ಯ (ಕಾದಂಬರಿ)
೧೯೮೮ ಶಂಕರ ಮೊಕಾಶಿ ಪುಣೇಕರ ಅವಧೇಶ್ವರಿ (ಕಾದಂಬರಿ)
೧೯೮೯ ಹಾ. ಮಾ. ನಾಯಕ ಸಂಪ್ರತಿ (ಅಂಕಣ ಬರಹಗಳ ಸಂಕಲನ)
೧೯೯೦ ದೇವನೂರು ಮಹಾದೇವ ಕುಸುಮಬಾಲೆ (ಕಾದಂಬರಿ)
೧೯೯೧ ಚಂದ್ರಶೇಖರ ಕಂಬಾರ ಸಿರಿಸಂಪಿಗೆ (ನಾಟಕ)
೧೯೯೨ ಸು. ರಂ. ಎಕ್ಕುಂಡಿ ಬಕುಳದ ಹೂವುಗಳು (ಕವನ)
೧೯೯೩ ಪಿ. ಲಂಕೇಶ್ ಕಲ್ಲು ಕರಗುವ ಸಮಯ (ಸಣ್ಣ ಕಥೆಗಳು)
೧೯೯೪ ಗಿರೀಶ್ ಕಾರ್ನಾಡ್ ತಲೆದಂಡ (ನಾಟಕ)
೧೯೯೫ ಕೀರ್ತಿನಾಥ ಕುರ್ತಕೋಟಿ ಉರಿಯ ನಾಲಗೆ (ವಿಮರ್ಶೆ)
೧೯೯೬ ಜಿ. ಎಸ್. ಆಮೂರ ಭುವನದ ಭಾಗ್ಯ (ಸಾಹಿತ್ಯ ವಿಮರ್ಶೆ)
೧೯೯೭ ಎಂ. ಚಿದಾನಂದಮೂರ್ತಿ ಹೊಸತು ಹೊಸತು (ವಿಮರ್ಶೆ)
೧೯೯೮ ಬಿ. ಸಿ. ರಾಮಚಂದ್ರ ಶರ್ಮ ಸಪ್ತಪದಿ (ಕವನ)
೧೯೯೯ ಡಿ. ಆರ್. ನಾಗರಾಜ್ ಸಾಹಿತ್ಯ ಕಥನ (ಪ್ರಬಂಧಗಳು)
೨೦೦೦ ಶಾಂತಿನಾಥ ದೇಸಾಯಿ ಓಂ ಣಮೋ (ಕಾದಂಬರಿ)
೨೦೦೧ ಎಲ್. ಎಸ್. ಶೇಷಗಿರಿ ರಾವ್ ಇಂಗ್ಲೀಷ್ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ)
೨೦೦೨ ಎಸ್.ನಾರಾಯಣ ಶೆಟ್ಟಿ ಯುಗಸಂಧ್ಯಾ (ಮಹಾಕಾವ್ಯ)
೨೦೦೩ ಕೆ. ವಿ. ಸುಬ್ಬಣ್ಣ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (ಪ್ರಬಂಧಗಳು)
೨೦೦೪ ಗೀತಾ ನಾಗಭೂಷಣ ಬದುಕು (ಕಾದಂಬರಿ)
೨೦೦೫ ರಾಘವೇಂದ್ರ ಪಾಟೀಲ್ ತೇರು (ಕಾದಂಬರಿ)
೨೦೦೬ ಎಂ. ಎಂ. ಕಲಬುರ್ಗಿ ಮಾರ್ಗ - ೪ (ಸಂಶೋಧನಾ ಪ್ರಬಂಧಗಳು)
೨೦೦೭ ಕುಂ. ವೀರಭದ್ರಪ್ಪ ಅರಮನೆ (ಕಾದಂಬರಿ)
೨೦೦೮ ಶ್ರೀನಿವಾಸ ಬಿ. ವೈದ್ಯ ಹಳ್ಳ ಬಂತು ಹಳ್ಳ (ಕಾದಂಬರಿ)
೨೦೦೯ ವೈದೇಹಿ ಕ್ರೌಂಚ ಪಕ್ಷಿಗಳು (ಸಣ್ಣ ಕಥೆಗಳು)
೨೦೧೦ ರಹಮತ್ ತರೀಕೆರೆ ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ)
೨೦೧೧ ಗೋಪಾಲಕೃಷ್ಣ ಪೈ ಸ್ವಪ್ನ ಸಾರಸ್ವತ (ಕಾದಂಬರಿ)
೨೦೧೨ ಎಚ್. ಎಸ್. ಶಿವಪ್ರಕಾಶ್ ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ)
೨೦೧೩ ಸಿ. ಎನ್. ರಾಮಚಂದ್ರನ್ ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ)
೨೦೧೪ ಜಿ. ಎಚ್. ನಾಯಕ ಉತ್ತರಾರ್ಧ (ಪ್ರಬಂಧಗಳು)
೨೦೧೫ ಕೆ. ವಿ. ತಿರುಮಲೇಶ್ ಅಕ್ಷಯ ಕಾವ್ಯ (ಕವನ ಸಂಕಲನ)
೨೦೧೬ ಬೊಳುವಾರು ಮಹಮದ್ ಕುಂಞ್ ಸ್ವಾತಂತ್ರ್ಯದ ಓಟ (ಕಾದಂಬರಿ)
೨೦೧೭ ಟಿ.ಪಿ.ಅಶೋಕ ಕಥನ ಭಾರತಿ (ವಿಮರ್ಶೆ)
೨೦೧೮ ಕೆ. ಜಿ. ನಾಗರಾಜಪ್ಪ ಅನುಶ್ರೇಣಿ ಯಜಮಾನಿಕೆ (ವಿಮರ್ಶೆ)
೨೦೧೯ ವಿಜಯಮ್ಮ ಕುದಿ ಎಸರು (ಆತ್ಮಕಥೆ)
೨೦೨೦ ವೀರಪ್ಪ ಮೊಯ್ಲಿ ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯ (ಮಹಾಕಾವ್ಯ)
೨೦೨೧ ಡಿ.ಎಸ್. ನಾಗಭೂಷಣ ಗಾಂಧಿ ಕಥನ
೨೦೨೨ ಮೂಡ್ನಾಕೂಡು ಚಿನ್ನಸ್ವಾಮಿ ಬಹುತ್ವದ ಭಾರತ ಮತ್ತು ಬೌದ್ಧ ಧರ್ಮದ ತಾತ್ವಿಕತೆ
[[

೧೯೫೭ ಮತ್ತು ೧೯೬೩ರಲ್ಲಿ ಯಾವುದೇ ಪ್ರಶಸ್ತಿಗಳನ್ನು ನೀಡಲಾಗಿಲ್ಲ.

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


ಹೊರಕೊಂಡಿಗಳು

ಬದಲಾಯಿಸಿ