ಇಯಾನ್ ರೊನಾಲ್ಡ್ ಬೆಲ್ MBE (ಜನನ ೧೧ ಏಪ್ರಿಲ್ ೧೯೮೨) ಒಬ್ಬ ಇಂಗ್ಲೆಂಡ್ ನಟೆಸ್ಟ್ ಕ್ರಿಕೆಟ್ ಆಟಗಾರರಾಗಿದ್ದಾರೆ. ಅಲ್ಲದೆ ಅವರು ವಾರ್ವಿಕ್ ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪರವಾಗಿ ಕೌಂಟಿ ಕ್ರಿಕೆಟ್ ಸಹ ಆಡುತ್ತಾರೆ. ಅವರು ಉತ್ತಮ/ಮಧ್ಯಮ ಕ್ರಮಾಂಕದ ಬಲಗೈ ಬ್ಯಾಟ್ಸ್ ಮನ್ ಆಗಿದ್ದು, ದ ಟೈಮ್ಸ್ ಅವರನ್ನು "ಶ್ರೇಷ್ಠ ಅಸ್ತ್ರ"[] ಎಂದು ಬಣ್ಣಿಸಿದೆ; ಬೆಲ್ ಆಗಾಗ್ಗೆ ಮಧ್ಯಮವೇಗದಲ್ಲಿ ಬೋಲ್ ಮಾಡುವಂತಹ ಬಲಗೈ ಬೋಲರ್ ಸಹ ಆಗಿದ್ದಾರೆ. ತಮ್ಮ ಚುರುಕಾದ ಚಲನವಲನಗಳಿಗೂ ಹೆಸರಾದ ಇವರು ಸಾಮಾನ್ಯವಾಗಿ ವಿಕೆಟ್ ನ ಹತ್ತಿರದ ಕ್ಯಾಚ್ ಹಿಡಿಯುವ ಸ್ಥಾನಗಳಲ್ಲಿ ಫೀಲ್ಡ್ ಮಾಡುತ್ತಾರೆ. ಬೆಲ್ ಇಂಗ್ಲೆಂಡ್ ನ ಪರವಾಗಿ ಟೆಸ್ಟ್ ಮತ್ತು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳೆರಡರಲ್ಲೂ ಆಡುತ್ತಾರೆ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಹತ್ತು ಶತಕಗಳನ್ನು ಬಾರಿಸಿದ್ದಾರೆ. ೨೦೦೬ ರ ನೂತನ ವರ್ಷದ ಗೌರವಾನ್ವಿತರ ಪಟ್ಟಿಯಲ್ಲಿ, ಇಯಾನ್ ಬೆಲ್ ರಿಗೆ ೨೦೦೫ರ ಯಶಸ್ವಿ ಆಶಸ್ ಪ್ರವಾಸದಲ್ಲಿ ಬೆಲ್ ವಹಿಸಿದ ಪಾತ್ರಕ್ಕಾಗಿ ಅವರ ಹೆಸರನ್ನು ದಾಖಲಿಸಿ, ಅವರಿಗೆ ಪ್ರತಿಷ್ಠಿತ MBE ಯನ್ನು ನೀಡಲಾಯಿತು ಹಾಗೂ ನವೆಂಬರ್ ೨೦೦೬ರಲ್ಲಿ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನೀಡುವ ಪ್ರತಿಷ್ಠಿತ ಎಮರ್ಜಿಂಗ್ ಪ್ಲೇಯರ್ ಆಫ್ ದ ಇಯರ್ (ವರ್ಷದ ಉದಯೋನ್ಮುಖ ಆಟಗಾರ) ಪ್ರಶಸ್ತಿ ಪ್ರದಾನ ಮಾಡಲಾಯಿತು. ೨೦೦೮ ಮತ್ತು ೨೦೦೯,ರ ಅವಧಿಯಲ್ಲಿ ಅವರು ಇಂಗ್ಲೆಂಡ್ ತಂಡದ ಖಾಯಂ ಸದಸ್ಯರಾಗದೆ, ಕೆಲವು ಪಂದ್ಯಗಳನ್ನು ಮಾತ್ರ ಆಡಿದ್ದರು, ಆದರೆ ೨೦೦೯ ಆಶಸ್ ಸರಣಿಯಲ್ಲಿ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು; ಈ ಸರಣಿಯನ್ನು ಇಂಗ್ಲೆಂಡ್ ಗೆದ್ದಿತು. ಮರುವರ್ಷ ಅವರು ಹಲವಾರು ಓಡಿಐಗಳಲ್ಲಿ ತಂಡದ ಸದಸ್ಯರಾಗಿ ಕಾಣಿಸಿಕೊಂಡರು. ೨೦೧೦ರಲ್ಲಿ ಅವರ ನೇತೃತ್ವದಲ್ಲಿ ವಾರ್ವಿಕ್ ಷೈರ್ CB೪೦ ಅಂತಿಮ ಪಂದ್ಯವನ್ನು ಗೆದ್ದಿತು; ನಂತರ ಬೆಲ್ ಮುಂದಿನ ಚಳಿಗಾಲದಲ್ಲಿ ನಡೆದ ಆಶಸ್ ಸರಣಿಯಲ್ಲಿ ತಮ್ಮ ಚೊಚ್ಚಲ ಆಶಸ್ ಶತಕವನ್ನು ಬಾರಿಸಿದರು ಹಾಗೂ ತನ್ಮೂಲಕ ಇಂಗ್ಲೆಂಡ್ ಆಸ್ಟ್ರೇಲಿಯಾದಲ್ಲಿ ಆಶಸ್ ಮೇಲಿನ ಹಿಡಿತವನ್ನು ಕಾಪಾಡಿಕೊಳ್ಳಲು ಸಹಾಯಕವಾದರು.

Ian Bell

ಇಂಗ್ಲೆಂಡ್
ವೈಯಕ್ತಿಕ ಮಾಹಿತಿ
ಪೂರ್ಣಹೆಸರು Ian Ronald Bell MBE
ಅಡ್ಡಹೆಸರು Belly
ಹುಟ್ಟು 4 11 1982
Coventry, West Midlands, England
ಎತ್ತರ 5 ft 10 in (1.78 m)
ಪಾತ್ರ Batsman
ಬ್ಯಾಟಿಂಗ್ ಶೈಲಿ Right-handed
ಬೌಲಿಂಗ್ ಶೈಲಿ Right-arm medium
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap 626) 19 August 2004: v West Indies
ಕೊನೆಯ ಟೆಸ್ಟ್ ಪಂದ್ಯ 04 June 2010: v Bangladesh
ODI ಪಾದಾರ್ಪಣೆ (cap 184) 28 November 2004: v Zimbabwe
ಕೊನೆಯ ODI ಪಂದ್ಯ 26 March 2011: v Sri Lanka
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
1999–present Warwickshire
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIFCLA
ಪಂದ್ಯಗಳು 62 97 180 216
ಒಟ್ಟು ರನ್ನುಗಳು 4,192 3021 12,277 7,153
ಬ್ಯಾಟಿಂಗ್ ಸರಾಸರಿ 44.12 35.12 45.13 38.45
೧೦೦/೫೦ 12/26 1/18 33/65 7/51
ಅತೀ ಹೆಚ್ಚು ರನ್ನುಗಳು 199 126* 262* 158
ಬೌಲ್ ಮಾಡಿದ ಚೆಂಡುಗಳು 108 88 2,809 1,290
ವಿಕೆಟ್ಗಳು 1 6 47 33
ಬೌಲಿಂಗ್ ಸರಾಸರಿ 76.00 14.66 33.27 34.48
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 0 0 0 1
೧೦ ವಿಕೆಟುಗಳು ಪಂದ್ಯದಲ್ಲಿ 0 0 0 0
ಶ್ರೇಷ್ಠ ಬೌಲಿಂಗ್ 1/33 3/9 4/4 5/41
ಕ್ಯಾಚುಗಳು /ಸ್ಟಂಪಿಂಗ್‍ಗಳು 50/– 29/– 126/– 75/–

ದಿನಾಂಕ 9 March, 2011 ವರೆಗೆ.
ಮೂಲ: Cricinfo

ಆರಂಭಿಕ ಜೀವನ

ಬದಲಾಯಿಸಿ

ಯುವಕ ಬೆಲ್ ಪ್ರಿನ್ಸ್ ಥಾರ್ಪ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಮೊದಲನೆಯ XI ನಲ್ಲಿ ಏಳನೆಯ ವರ್ಷದಲ್ಲಿ ಆಯ್ಕೆಯಾದರು. ಬೆಲ್ ಕೇವಲ ಸಮರ್ಥ ಯುವ ಕ್ರಿಕೆಟಟಿಗರಲ್ಲದೆ, ಆಸ್ಟನ್ ವಿಲ್ಲಾದ ಬೆಂಬಲಿಗರಾಗಿದ್ದರೂ ಸಹ, ಕೋವೆಂಟ್ರಿ ಸಿಟಿಯ ಸ್ಕೂಲ್ ಆಫ್ ಎಕ್ಸಲೆನ್ಸ್ ಗೂ ಹಾಜರಾದರು. ಅವರಿಗಿಂತಲೂ ಎರಡು ವರ್ಷ ಕಿರಿಯವರಾದ ತಮ್ಮ ಕೀತ್ ಸ್ಟಾಫರ್ಡ್ ಷೈರ್ ನ ಹವ್ಯಾಸಿ ಕ್ರಿಕೆಟಿಗರಾಗಿದ್ದಾರೆ; ಅವರು ವಾರ್ವಿಕ್ ಷೈರ್ ನ ಎರಡನೆಯ XI ಪರವಾಗಿಯೂ ಏಳು ಪಂದ್ಯಗಳನ್ನು ಆಡಿದ್ದಾರೆ.

ಆರಂಭಿಕ ವೃತ್ತಿಜೀವನ

ಬದಲಾಯಿಸಿ

ಬೆಲ್ ೧೯೯೮ರಲ್ಲಿ ವಾರ್ವಿಕ್ ಷೈರ್ ನ ಎರಡನೆಯ ತಂಡದ ಸದಸ್ಯರಾಗಿ ಮೂರು ಪಂದ್ಯಗಳನ್ನು ಆಡಿದರು, ನಂತರ ಅವರು ಹಿರಿಯರ ಮಟ್ಟದಲ್ಲಿ ಆಡಿದ ಪಂದ್ಯಗಳು ಇಂಗ್ಲೆಂಡ್ ನ ೧೯ ವರ್ಷಕ್ಕಿಂತಲೂ ಕಿರಿಯರ ಕ್ರಿಕೆಟ್ ತಂಡದ ಸದಸ್ಯರಾಗಿ ಆ ಚಳಿಗಾಲದಲ್ಲಿ ನ್ಯೂಝಿಲೆಂಡ್ ಪ್ರವಾಸದಲ್ಲಿ ಆಡಿದ ಪಂದ್ಯಗಳಾಗಿದ್ದವು. ಅವರು ಮೊದಲ "ಟೆಸ್ಟ್" ನ ಮೊದಲ ಇನಿಂಗ್ಸ್ ನಲ್ಲಿ ೯೧ ರನ್ನುಗಳನ್ನು ಹೊಡೆದರು ಮತ್ತು ಮೂರನೆಯ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ೧೧೫ ರನ್ ಗಳನ್ನು ಹೊಡೆದರು; ಡೇಲ್ ಹ್ಯಾಡ್ಲೀ ಇವರ ಆಟದಿಂದ ಎಷ್ಟು ಪ್ರಭಾವಿತರಾದರೆಂದರೆ ಅವರು "ನಾನು ಕಂಡ ಎಲ್ಲಾ ೧೬ ವರ್ಷದ ಆಟಗಾರರಲ್ಲಿ ಬೆಲ್ ಸರ್ವಶ್ರೇಷ್ಠ"[] ಎಂದು ಸಾರಿದರು. ಇವರ ಆಟವನ್ನು ಇಂಗ್ಲೆಂಡ್ ನ ಮಾಜಿ ಕ್ರಿಕೆಟ್ ನಾಯಕ ಮೈಕೆಲ್ ಆಥರ್ ಟನ್ ರ ಆಟದೊಡನೆ ಹೋಲಿಸಲಾಗುತ್ತಿತ್ತು. ಬೆಲ್ ಮತ್ತಷ್ಟು ೧೯ ವರ್ಷಕ್ಕಿಂತಲೂ ಕಿರಿಯರ ಸರಣಿಗಳನ್ನು ಆಡಿದರು; ಶ್ರೀಲಂಕಾದ ವಿರುದ್ಧ ತಾಯ್ನಾಡಿನಲ್ಲೇ ನಡೆದ ೨೦೦೦ದ ಸರಣಿ, ಭಾರತದ ವಿರುದ್ಧ ೨೦೦೦/೦೧ರಲ್ಲಿ ಭಾರತದಲ್ಲಿ ನಡೆದ ಸರಣಿ ಹಾಗೂ ಇಂಗ್ಲೆಂಡ್ ನಲ್ಲೇ ೨೦೦೧ರಲ್ಲಿ ನಡೆದ ವೆಸ್ಟ್ ಇಂಡೀಸ್ ನ ವಿರುದ್ಧದ ಮೊದಲ ಟೆಸ್ಟ್ ಗಳ ನಾಯಕತ್ವ ವಹಿಸಿದರು. ಈ ವೇಳೆಗೆ ಬೆಲ್ ತಮ್ಮ ಮೊದಲ ದರ್ಜೆಯ ಚೊಚ್ಚಲ ಪಂದ್ಯವನ್ನು, ವಾರ್ವಿಕ್ ಷೈರ್ ಪ್ರಥಮ ತಂಡದ ಪರವಾಗಿ, ೧೯೯೯ ರಲ್ಲಿ ಒಂದೇ ಒಂದು ಪಂದ್ಯವನ್ನು ಆಡುವುದರ ಮೂಲಕ, ಆಡಿದುದಾಗಿತ್ತು. ಆದರೆ ಆ ಪಂದ್ಯದಲ್ಲಿ ಆಡಿದ ಒಂದೇ ಇನಿಂಗ್ಸ್ ನಲ್ಲಿ ಅವರು ಗಳಿಸಿದ್ದು ಸೊನ್ನೆ; ಇದರ ನಂತರ ೨೦೦೦/೦೧ರ ವರೆಗೆ ಅವರು ಬೇರೆ ಯಾವ ಪಂದ್ಯವನ್ನೂ ಆಡಲಿಲ್ಲ ಹಾಗೂ ಆ ಇಸವಿಯಲ್ಲಿ ಆಂಗ್ವಿಲ್ಲಾದಲ್ಲಿ ನಡೆದ ಬುಸ್ಟಾ ಕಪ್ ಟೂರ್ನಮೆಂಟ್ ಪಂದ್ಯದಲ್ಲಿ ಇಂಗ್ಲೆಂಡ್ ಪರವಾಗಿ ಲೀವರ್ಡ್ ಐಲ್ಯಾಂಡ್ಸ್ ವಿರುದ್ಧ ಆಡಿದರು; ಇದು ಅವರು ೧೯ ವರ್ಷದೊಳಗಿನವರ ಪಂದ್ಯ ಆಡಿದ ಅನತಿ ದಿನಗಳಲ್ಲೇ ಆಡಿದ ಪಂದ್ಯವಾಗಿತ್ತು. ೨೦೧೧ರಲ್ಲಿ ಬೆಲ್ ವಾರ್ವಿಕ್ ಷೈರ್ ನ ಮೊದಲ ತಂಡಕ್ಕೆ ಪ್ರವೇಶಿಸಿದರು ಮತ್ತು ೧೬ ಇನಿಂಗ್ಸ್ ಗಳಲ್ಲಿ ೮೩೬ ರನ್ನುಗಳನ್ನು ಗಳಿಸಿದರು; ಅದರಲ್ಲಿ ಎರಡು ಶತಕಗಳು ಮತ್ತು ಎರಡು ೯೮ ರನ್ ಗಳ ಇನಿಂಗ್ಸ್ ಗಳೂ ಸೇರಿದ್ದವು. ಆಕ್ಸ್ ಫರ್ಡ್ UCCE ವಿರುದ್ಧ ಅವರು ಗಳಿಸಿದ ಅವರ ಮೊದಲ ಶತಕವಾದ ೧೩೦ ರನ್ ಗಳಿಸಿದಾಗ ಅವರು ಕೇವಲ ೧೯ ವರ್ಷ ೫೬ ದಿನಗಳ ವಯಸ್ಸಿನವರಾಗಿದ್ದು, ಶತಕ ಬಾರಿಸಿದ ಅತಿ ಕಿರಿಯನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಋತುವಿನ ಕಡೆಯ ಪಂದ್ಯದಲ್ಲಿ ವಾರ್ವಿಕ್ ಷೈರ್ ಬೆಲ್ ಗೆ ಕೌಂಟಿಯ ಕ್ಯಾಪ್ ಅನ್ನು ಇತ್ತಾಗ, ಬೆಲ್ ಕೌಂಟಿ ಕ್ಯಾಪ್ ಅನ್ನು ಪಡೆದ ಅತಿ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾದರು. ೨೦೦೧/೦೨ ರ ಶಿಶಿರವನ್ನು ಆಸ್ಟ್ರೇಲಿಯಾದಲ್ಲಿ ಕಳೆದ ECB ನ್ಯಾಷನಲ್ ಅಕಾಡೆಮಿಗೆ ಮೊದಲಿಗೆ ಆಯ್ಕೆಯಾದವರ ಪೈಕಿ ಬೆಲ್ ಸಹ ಒಬ್ಬರು.[] ಬೆಲ್ ಅಡಿಲೇಡ್ ನಿಂದ ಹಿಂತಿರುಗಿದ ದಿನವೇ, ಗಾಯಗೊಂಡ ಮಾರ್ಕ್ ಬುಚರ್ ರ ಸ್ಥಾನ ತುಂಬಲು, ಅವರನ್ನು ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳುತ್ತಿದ್ದ ಪೂರ್ಣಪ್ರಮಾಣದ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಯಿತು. ೨೦೦೨ ರಲ್ಲಿ ಬೆಲ್ ನಾಲ್ಕುದಿನಗಳ ಪಂದ್ಯಗಳಲ್ಲಿ ಕಳಪೆ ಮಟ್ಟದ ಸರಾಸರಿ ಹೊಂದಿದರು; ಬೆಲ್ ೨೪.೩೭ ರ ಸರಾಸರಿಯಲ್ಲಿ ೬೫೮ ರನ್ನುಗಳನ್ನು ಬೊಡೆದರು. ಆದರೆ ತಮ್ಮ ಕೌಂಟಿ ಬೆನ್ಸನ್ & ಹೆಡ್ಜಸ್ ಕಪ್ ಗೆಲ್ಲುವಲು ಅವರು ಪ್ರಮುಖ ಪಾತ್ರ ವಹಿಸಿದರು. ಬೆಲ್ ಕ್ವಾರ್ಟರ್ ಫೈನಲ್ ನಲ್ಲಿ ( ಆಜೇಯ ೮೫ ), ಸೆಮಿ-ಫೈನಲ್ (೪೬) ಮತ್ತು ಫೈನಲ್ (ಆಜೇಯ ೬೫) ಗಳಲ್ಲಿ ಗರಿಷ್ಠ ರನ್ ಗಳಿಸಿದರು, ಫೈನಲ್ ನಲ್ಲಿನ ಅವರ ಆಟಕ್ಕೆ ಕಟ್ಟಕಡೆಯ ಬೆನ್ಸನ್ & ಹೆಡ್ಜಸ್ ಕಪ್ ಫೈನಲ್ ನಲ್ಲಿ ನೀಡಿದ ಗೋಲ್ಡ್ ಅವಾರ್ಡ್ ಬೆಲ್ ರ ಪಾಲಿಗೆ ದಕ್ಕಿತು. ಬೆಲ್ ರ ಉತ್ತಮ ಪ್ರದರ್ಶನಗಳು ಮತ್ತೆ ಏಕದಿವಸೀಯ ಪಣದ್ಯಗಳಲ್ಲಿ ಆವಿರ್ಭವಿಸಿದವು; ಕೌಂಟಿ ಚಾಂಪಿಯನ್ ಶಿಪ್ ನಲ್ಲಿ ಅವರು ೨೮.೮೫ ರ ಸರಾಸರಿಯಲ್ಲಿ ೭೭೯ ರನ್ ಗಳನ್ನು ಹೊಡೆದರು ಮತ್ತು ನ್ಯಾಷನಲ್ ಲೀಗ್ ನಲ್ಲಿ ೪೩.೦೭ ರ ಸರಾಸರಿಯಲ್ಲಿ ೫೬೦ ರನ್ ಗಳನ್ನು ಹೊಡೆದರು. ಅವರ ಅತ್ಯತ್ತಮ ಪ್ರದರ್ಶನ ಚೆಲ್ ಮ್ಸ್ ಫರ್ಡ್ ನಲ್ಲಿ ಮೂಡಿತು - ಅಲ್ಲಿ ಅವರು ತಮ್ಮ ಚೊಚ್ಚಲ ಏಕದಿವಸೀಯ ಶತಕವಾದ ೧೨೫ ರನ್ ಗಳನ್ನು ಕೇವಲ ೧೧೩ ಚೆಂಡುಗಳನ್ನು ಎದುರಿಸಿ ಹೊಡೆದರು ಹಾಗೂ ತಮ್ಮ ಏಕದಿವಸೀಯ ಪಂದ್ಯಗಳಲ್ಲೇ ಅತ್ಯುತ್ತಮ ಬೋಲಿಂಗ್ ಪ್ರದರ್ಶನ ನೀಡಿ ೪೧ ರನ್ ಇತ್ತು ೫ ವಿಕೆಟ್ ಪಡೆದರು. ಈ ಸಾಧನೆಯನ್ನು ಒಬ್ಬ ವಾರ್ವಿಕ್ ಷೈರ್ ಆಟಗಾರ ಮಾಡಿದ್ದು ಇದು ಕೇವಲ ಎರಡನೆಯ ಬಾರಿಯಾಗಿತ್ತು.[] ಎರಡು ಕಳಪೆ ಋತುಗಳ ನಂತರ ಬೆಲ್ ಮತ್ತೆ ಚಿಗುರಿಕೊಂಡರು; ೨೦೦೪ ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೆಲ್ ಚಾಂಪಿಯನ್ ಶಿಪ್ ನಲ್ಲಿ ಆರು ಶತಕಗಳನ್ನೊಳಗೊಂಡ ೧೪೯೮ ರನ್ ಬಾರಿಸಿದರು. ಆ ಆರು ಶತಕಗಳ ಪೈಕಿ ಒಂದು ಸಸೆಕ್ಸ್ ವಿರುದ್ಧ ಹೊಡೆದ, ಅವರ ಜೀವನದ ಸರ್ವೋಚ್ಛ ಸ್ಕೋರ್ ಆದ ಆಜೇಯ ೨೬೨; ಈ ಇನಿಂಗಸ್ ಹತ್ತು ಗಂಟೆಗಳಿಗೆ ಕೇವಲ ಹತ್ತು ನಿಮಿಷ ಕಡಿಮೆ ಅವಧಿಯ ವಿಸ್ತಾರದ್ದಾಗಿತ್ತು, ಬೆಲ್ ಡಬಲ್ ಸೆಂಚುರಿ (ದ್ವಿಶತಕ) ಬಾರಿಸಿದ ಕೌಂಟಿಯ ಅತಿ ಕಿರಿಯ ಆಟಗಾರರಾದರು. ಜುಲೈ ಅಂತ್ಯದಲ್ಲಿ ಬೆಲ್ ಸತತ ಐದು ಇನಿಂಗ್ಸ್ ನಲ್ಲಿ ನಾಲ್ಕು ಶತಕ ಬಾರಿಸುವ ಅಮೋಘ ಸಾಧನೆ ಗೈದರು; ಇನ್ನೊಂದು ಇನಿಂಗ್ಸ್ ನಲ್ಲಿ ಅವರು ಗಳಿಸಿದ್ದು ಆಜೇಯ ೯೬. ಲಂಕಾಷೈರ್ ವಿರುದ್ಧ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ಬೆಲ್ , ೧೯೯೪ ರಲ್ಲಿ ಬ್ರಿಯಾನ್ ಲಾರಾ ಈ ವಿಧದ ಸಾಧನೆ ಮಾಡಿದ ತರುವಾಯ, ವಾರ್ವಿಕ್ ಷೈರ್ ಪರವಾಗಿ ಒಂದು ಅಧಿಕೃತ ಆಕ್ರಮಣದ ವಿರುದ್ಧ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ ಮನ್ ಆದರು(ಡೇವಿಡ್ ಹೆಂಪ್ ಈ ಸಾಧನೆಯನ್ನು ಒಂದು ಘೋಷಿತ ಆಕ್ರಮಣದ ವಿರುದ್ಧ ಮಾತ್ರ ಸಾಧಿಸಿದ್ದರು).[] ಈ ವಿಧವಾದ ಬೆಲ್ ರ ಫಾರ್ಮ್ ಗ್ರಹಾಂ ಥಾರ್ಪ್ ಗೆ ಬೆರಳಿನ ಗಾಯವಾಗಿ, ಅವರು ಆಡುವ ಶಂಕೆ ಉದ್ಭವಿಸಿದಾಗ, ಬೆಲ್ ಇಂಗ್ಲೆಂಡ್ ತಂಡಕ್ಕೆ ಮರಳಲು ಸಹಾಯಕವಾಯಿತು.[]

ಅಂತರರಾಷ್ಟ್ರೀಯ ವೃತ್ತಿಜೀವನ

ಬದಲಾಯಿಸಿ

೨೦೦೪ - ವೆಸ್ಟ್ ಇಂಡೀಸ್

ಬದಲಾಯಿಸಿ

ಬೆಲ್ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನುಓವಲ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಆಡಿದರು. ಮೊದಲ ಇನಿಂಗ್ಸ್ ನಲ್ಲಿ ಐದನೆಯ ಕ್ರಮಾಂಕದಲ್ಲಿ ಆಡಿದ ಬೆಲ್ ೭೦ ರನ್ ಗಳಿಸಿದರು; ಇಂಗ್ಲೆಂಡ್ ವೆಸ್ಟ್ ಇಂಡೀಸ್ ಅನ್ನು ಫಾಲೋ ಆನ್ ಮಾಡಲು ಆದೇಶಿಸಿ, ಹತ್ತು ವಿಕೆಟ್ ಗಳ ಅಂತರದಿಂದ ಪಂದ್ಯವನ್ನು ಗೆದ್ದುದರಿಂದ ಬೆಲ್ ಈ ಪಂದ್ಯದಲ್ಲಿ ಮತ್ತೆ ಬ್ಯಾಟ್ ಮಾಡುವ ಅಗತ್ಯ ಬೀಳಲಿಲ್ಲ.[]

೨೦೦೪/೫ - ಝಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕ

ಬದಲಾಯಿಸಿ

ಝಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಗಳಲ್ಲಿ ಪಂದ್ಯಗಳನ್ನಾಡುವ ತಂಡಕ್ಕೆ ಬೆಲ್ ರನ್ನು ಸೇರಿಸಿಕೊಳ್ಳಲಾಯಿತು; ಬೆಲ್ ಕೆವಿನ್ ಪೀಟರ್ಸನ್ ರೊಡನೆ ಝಿಂಬಾಬ್ವೆಯ ಹರಾರೆಯಲ್ಲಿ ಝಿಂಬಾಬ್ವೆಯ ವಿರುದ್ಧದ ಅಂತರರಾಷ್ಟ್ರೀಯ ಏಕದಿವಸೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಬೆಲ್ ಇನಿಂಗ್ಸ್ ಆರಂಭಿಸಿದರು ಮತ್ತು ೭೫ ರನ್ ಗಳಿಸುವುದರ ಮೂಲಕ ಮೊದಲ ಓಡಿಐ ಪಂದ್ಯ-ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.[] ಆ ಸರಣಿಯ ನಾಲ್ಕೂ ಪಂದ್ಯಗಳನ್ನು ಆಡಿದ ಅವರ ಆ ಸರಣಿಯ ಸರಾಸರಿ ೪೦.೭೫. ಬೆಲ್ ರನ್ನು ದಕ್ಷಿಣ ಆಫ್ರಿಕದ ವಿರುದ್ಧದ ಯಾವುದೇ ಟೆಸ್ಟ್ ಗಳಿಗೆ ಆಯ್ಕೆ ಮಾಡದಿದ್ದರೂ, ಆಡಿದ ಏಳು ಓಡಿಐಗಳ ಪೈಕಿ ನಾಲ್ಕರಲ್ಲಿ ಆಡಿದರು, ಆದರೆ ತಿಣುಕಾಡಿ, ಮೂರು ಇನಿಂಗ್ಸ್ ನಲ್ಲಿ ಕೇವಲ ೨೬ ರನ್ ಗಳಿಸಿದರು.

೨೦೦೫ - ಬಾಂಗ್ಲಾದೇಶ ಮತ್ತು ಆಶಸ್

ಬದಲಾಯಿಸಿ

೨೦೦೫ ರಲ್ಲಿ ಬೆಲ್ ಆ ಋತುವಿಗೆ ಅಮೋಘ ಆರಂಭವನ್ನು ಪಡೆದರು; ಏಪ್ರಿಲ್ ಮಾಸವೊಂದರಲ್ಲೇ ಅವರು ೪೮೦ ಪ್ರಥಮದರ್ಜೆಯ ರನ್ ಗಳನ್ನು ಬಾರಿಸಿ, ೧೭ ವರ್ಷಗಳ ಕಾಲ ಇದ್ದ ಗ್ರೀಮ್ ಹಿಕ್ ರ ದಾಖಲೆಯನ್ನು ಅಳಿಸಿಹಾಕಿದರು ಬೆಲ್ ಬಾಂಗ್ಲಾದೇಶದ ವಿರುದ್ಧದ ಎರಡು ಟೆಸ್ಟ್ ಗಳ ಸರಣಿಗೆ ಕರೆಯಲ್ಪಟ್ಟರು, ಆದರೆ ಇಂಗ್ಲೆಂಡ್ ಎರಡೂ ಟೆಸ್ಟ್ ಗಳಲ್ಲಿ ಇನಿಂಗ್ಸ್ ಗೆಲುವು ಸಾಧಿಸಿದುದರಿಂದ ಬೆಲ್ ಎರಡೇ ಇನಿಂಗ್ಸ್ ಗಳಲ್ಲಿ ಆಡಲು ಸಾಧ್ಯವಾಯಿತು. ಲೆ-ಸ್ಟ್ರೀಟ್ ನಲ್ಲಿ ನಡೆದ ಎರಡನೆಯ ಟೆಸ್ಟ್ ನಲ್ಲಿ ಆಜೇಯ ೧೬೨ ಗಳಿಸುವ ಹಾದಿಯಲ್ಲಿ, ೧೯೩೫ ರಲ್ಲಿ ಲೆಸ್ಲಿ ಎಮಿಸ್ ಲಂಚ್ ಗೆ ಮುನ್ನ ಶತಕ ಗಳಿಸಿದ ನಂತರ, ಆ ಸಾಧನೆ ಗೈದ ಮೊದಲ ಇಂಗ್ಲಿಷ್ ಬ್ಯಾಟ್ಸ್ ಮನ್ ಆದರು.[] ಲಾರ್ಡ್ಸ್ ನ ಮೊದಲ ಟೆಸ್ಟ್ ನಲ್ಲಿ ಬೆಲ್ ಆಜೇಯ ೬೫ ರನ್ ಗಳಿಸಿದರು, ಮತ್ತು ಚೆಸ್ಟರ್- ೨೦೦೫ ರ ಆಶಸ್ ಸರಣಿಗೆ ಮೂರು ಆಟಗಾರರು - ಬೆಲ್, ಗ್ರಹಾಂ ಥಾರ್ಪ್, ಮತ್ತು ಕೆವಿನ್ ಪೀಟರ್ಸನ್ - ಇರುವ ಎರಡು ಸ್ಥಾನಗಳನ್ನು ತುಂಬಲು ಪೈಪೋಟಿಯಲ್ಲಿದ್ದರು ಹಾಗೂ ಬೆಲ್ ಮತ್ತು ಪೀಟರ್ಸನ್ ಆಯ್ಕೆಯಾಗಿ, ಥಾರ್ಪ್ ಹೊರಗುಳಿದರು. ಲಾರ್ಡ್ಸ್ ನಲ್ಲಿ ನಡೆದ ಮೊದಲ ಟೆಸ್ಟ್ ಗೆ ಮುನ್ನ ಬೆಲ್ ರ ಸರಾಸರಿ ಇದ್ದದ್ದು ೩೦೩, ಇದು ಬೆಲ್ ರ ವೃತ್ತಿಜೀವನದ ಸರ್ವಕಾಲಿಕ ಸರಾಸರಿಗಳಲ್ಲಿ ಐದನೆಯ ಅತ್ಯುತ್ತಮ ಸರಾಸರಿಯಾಗಿತ್ತು.[೧೦] ಬೆಲ್ ಲಾರ್ಡ್ಸ್ ಮತ್ತು ಎಡ್ಜ್ ಬ್ಯಾಸ್ಟನ್ ಗಳಲ್ಲಿ ನಡೆದ ಎರಡು ಪಂದ್ಯಗಳಲ್ಲಿ ವಿಫಲರಾದರು, ಆದರೆ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಮೂರನೆಯ ಪಂದ್ಯದಲ್ಲಿ ಶೇನ್ ವಾರ್ನ್ ರ ವಿರುದ್ಧ ಮೊದಮೊದಲು ತಿಣುಕಿದರೂ, ನಂತರ ಎರಡೂ ಇನಿಂಗ್ಸ್ ಗಳಲ್ಲಿ ಅರ್ಧಶತಕ ಹೊಡೆಯುವಲ್ಲಿ ಯಶಸ್ವಿಯಾದರು. ಆದರೆ ನಾಲ್ಕನೆಯ ಮತ್ತು ಐದನೆಯ ಟೆಸ್ಟ್ ಗಳ ನಾಲ್ಕೂ ಇನಿಂಗ್ಸ್ ಸೇರಿ ಅವರು ಕೇವಲ ಆರು ರನ್ ಗಳನ್ನು ಗಳಿಸಿದರು, ಓವಲ್ ನಲ್ಲಂತೂ ಎರಡೂ ಇನಿಂಗ್ಸ್ ನಲ್ಲಿ ಸೊನ್ನೆ ಹೊಡೆದು, ಇಡೀ ಸರಣಿಯಲ್ಲಿ ಸರಾಸರಿ ೧೭.೧೦ ಗಳಿಸಿದರು; ಇದು ಇಂಗ್ಲಿಪ್ ಬ್ಯಾಟ್ಸ್ ಮನ್ ಒಬ್ಬನು ಪಡೆದ ಕನಿಷ್ಠ ಸರಾಸರಿಯಾಗಿತ್ತು. ಇಂಗ್ಲೆಂಡ್ ಸರಣಿಯನ್ನು ಗೆದ್ದು, ಆಶಸ್ ಮರುಪಡೆದರೂ ಹಾಗೂ ಬೆಲ್ MBE ಸ್ವೀಕರಿಸಿದರಾದರೂ, ಬೆಲ್ ಈ ೨೦೦೫ ರ ಸರಣಿಯನ್ನು ತಮ್ಮ ಜೀವನದ ಕಳಪೆ ಮಟ್ಟದ ಕಾಲವೆಂದು ಪರಿಗಣಿಸುತ್ತಾರೆ; ಆ ಅವಧಿಯಲ್ಲಿ ತಮ್ಮ ಆತ್ಮವಿಶ್ವಾಸವೇ ಕುಗ್ಗಿದ್ದಿತು ಎನ್ನುತ್ತಾರೆ ಬೆಲ್.[]

೨೦೦೫/೬ - ಪಾಕಿಸ್ತಾನ ಮತ್ತು ಭಾರತ

ಬದಲಾಯಿಸಿ

ಆಸ್ಟ್ರೇಲಿಯಾದ ವಿರುದ್ಧ ವಿಫಲರಾಗಿದ್ದರೂ, ಅವರನ್ನು ಶಿಶಿರದ ಪಾಕಿಸ್ತಾನದ ಪ್ರವಾಸಕ್ಕೆಂದು ಆಯ್ದ ೧೭ ಪಟುಗಳ ತಂಡದಲ್ಲಿ ಸೇರಿಸಿಕೊಳ್ಳಲಾಯಿತು. ಅವರನ್ನು ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಲಾರರು ಎಂದು ಮಾಧ್ಯಮಗಳು ಅಭಿಪ್ರಾಯ ಸೂಚಿಸುತ್ತಿದ್ದವು, ಆದರೆ ಮೈಕಲ್ ವಾನ್ ಮೊದಲ ಟೆಸ್ಟ್ ಗೆ ಮುಂಚೆಯೇ ಗಾಯಗೊಂಡದ್ದರಿಂದ ಬೆಲ್ ಗೆ ಆಡುವ ಅವಕಾಶ ಸಿಕ್ಕಿತು. ಅವಕಾಶವನ್ನು ಬಳಸಿಕೊಂದ ಬೆಲ್ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಆ ಮೂರು ಪಂದ್ಯಗಳ ಸರಣಿಯಲ್ಲಿ ಬಾರಿಸಿದರು ಹಾಗೂ ೫೨.೧೬ ರ ಸರಾಸರಿಯಲ್ಲಿ ೩೧೩ ರನ್ ಗಳಿಸುವುದರ ಮೂಲಕ ಸರಣಿಯ ಅತಿ ಹೆಚ್ಚು ರನ್ ಹೊಡೆದ ಬ್ಯಾಟ್ಸ್ ಮನ್ ಆದರು. ತಮ್ಮ ಅರೆ-ಕಾಲಿಕ ಬೋಲಿಂಗ್ ಮೂಲಕ ತಮ್ಮ ಮೊದಲ ಟೆಸ್ಟ್ ವಿಕೆಟ್ ಅನ್ನೂ ಪಡೆದರು. ಪರ್ಯಾಯದ್ವೀಪದಲ್ಲಿನ ಈ ಉತ್ತಮ ಪ್ರದರ್ಶನವು ಮುಂದುವರಿದು ೧೮ ಫೆಬ್ರವರಿ ೨೦೦೬ ರಂದು, ಭಾರತದ ವಿರುದ್ಧ ಟೆಸ್ಟ್ ಸರಣಿ ಆರಂಭವಾಗುವುದಕ್ಕೆ ಮುನ್ನ ಮುಂಬೈನಲ್ಲಿ ನಡೆದ ಇಂಗ್ಲೆಂಡ್ ನ ಮೊದಲ 'ಚಳಿ-ಬಿಡಿಸುವ' ಪಂದ್ಯದಲ್ಲಿ ಬೆಲ್ ೭೮ ರನ್ ಗಳಿಸಿದರು. ಈ ಉತ್ತಮತೆಯನ್ನು ಬೆಲ್ ಟೆಸ್ಟ್ ಸರಣಿಯಲ್ಲಿ ಕಾಪಾಡಿಕೊಳ್ಳಲು ಆಗಲಿಲ್ಲ; ಟೆಸ್ಟ್ ಗಳ ಆರು ಇನಿಂಗ್ಸ್ ಗಳಲ್ಲಿ ೨೨ ಕ್ಕೂ ಕಡಿಮೆ ಸರಾಸರಿಯಲ್ಲಿ ಬೆಲ್ ೧೩೧ ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

೨೦೦೬ -ಶ್ರೀಲಂಕಾ ಮತ್ತು ಪಾಕಿಸ್ತಾನ

ಬದಲಾಯಿಸಿ

ಭಾರತದಿಂದ ಮರಳಿದ ಬೆಲ್ ವಾರ್ವಿಕ್ ಷೈರ್ ಪರ ಆಡಿದ ಋತುವಿನಲ್ಲಿ ಸಾಮಾನ್ಯ ಯಶ ಗಳಿಸಿದರು. ಶ್ರೀಲಂಕಾದ ವಿರುದ್ಧ ತಾಯ್ನಾಡಿನಲ್ಲಿ ನಡೆಯುವ ಸರಣಿಗೆ ಆಯ್ದ ೧೩ ಜನರ ತಂಡದಲ್ಲಿ ಬೆಲ್ ಹೆಸರೂ ಸೇರಿತ್ತು, ಆದರೆ ಮಾರ್ಕಸ್ ಟ್ರೆಸ್ಕಾತಿಕ್ ರ ಮರಳುವಿಕೆ, ಪಾಲ್ ಕಾಲಿಂಜ್ ವುಡ್ ರ ಉತ್ತಮ ಪ್ರದರ್ಶನ ಮತ್ತು ಅಲಿಸ್ಟೇರ್ ಕುಕ್ ರ ಪ್ರವರ್ಧಮಾನಗಳಿಂದ ಬೆಲ್ ಗೆ ಅಂತಿಮ ೧೧ ರಿಂದ ಕೊಕ್ ಕೊಡಲಾಯಿತು. ಶ್ರೀಲಂಕಾದ ವಿರುದ್ಧದ ಐದು ಓಡಿಐ ಪಂದ್ಯಗಳಿಗೆಗೆ ಬೆಲ್ ಆಯ್ಕೆಯಾದರು ಮತ್ತು ಆ ಸರಣಿಯಲ್ಲಿ ಚೆನ್ನಾಗಿ ಆಡಿದ ಕೆಲವೇ ಆಟಗಾರರ ಪೈಕಿ ಇವರೂ ಒಬ್ಬರಾಗಿದ್ದರು. ತತ್ಕಾರಣವಾಗಿ, ಹಾಗೂ ಆಂಡ್ರೂ ಫ್ಲಿಂಟಾಫ್ ಗೆ ಪೆಟ್ಟು ಬಿದ್ದುದರಿಂದ, ಬೆಲ್ ರನ್ನು ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಆಡಲು ಮತ್ತೆ ಕರೆಯಲಾಯಿತು. ಮೊದಲ ನಾಲ್ಕು ಕ್ರಮಾಂಕಗಳಲ್ಲೇ ತಮ್ಮ ಜೀವಿತದ ಬಹುವಂಶ ಆಡಿದ ಬೆಲ್ ರನ್ನು ಆರನೆಯ ಕ್ರಮಾಂಕದಲ್ಲಿ ಆಡಲು ನಿರ್ದೇಶಿಸಲಾಯಿತು. ಮೂರು ಸತತ ಟೆಸ್ಟ್ ಗಳಲ್ಲಿ ಮೂರು ಶತಕಗಳನ್ನು ಹೊಡೆದಿದ್ದ ಗ್ರಹಾಂ ಗೂಚ್ ರ ನಂತರಬೆಲ್ ಮೊದಲ ಮೂರೂ ಟೆಸ್ಟ್ ಗಳಲ್ಲಿ ತಲಾ ಒಂದೊಂದು ಶತಕ ಬಾರಿಸಿದರು, ಆದರೆ ನಾಲ್ಕನೆಯ ಟೆಸ್ಟ್ ನಲ್ಲಿ ಮೊದಲ ಇನಿಂಗ್ಸ್ ನಲ್ಲಿ ಕೇವಲ ಒಂಬತ್ತು ರನ್ ಗಳಿಸಿ ಔಟ್ ಆಗಿ, ಎರಡನೆಯ ಇನಿಂಗ್ಸ್ ನಲ್ಲಿ ಒಂಬತ್ತು ರನ್ ಹೊಡೆದು ಆಡುತ್ತಿದ್ದಾಗ ಅನಿರೀಕ್ಷಿತವಾಗಿ ಭುಗಿಲೆದ್ದ ಚೆಂಡು ಕೆಡಿಸುವ ಹಗರಣದ ಕಾರಣದಿಂದ ಟೆಸ್ಟ್ ನಾಲ್ಕನೆಯ ದಿನವೇ ಕೊನೆಗೊಂಡುದರಿಂದ ಸತತ ನಾಲ್ಕನೆಯ ಶತಕ ಹೊಡೆಯುವ ಅವಕಾಶದಿಂದ ವಂಚಿತರಾದರು. ಅವರು ಈ ಸರಣಿಯಲ್ಲಿ ಪಡೆದ ಸರಾಸರಿ ೯೩.೭೫, ಆದರೆ ಆಶ್ಚರ್ಯಕರವಾಗಿ ಇವರಿಗೆ ಸರಣಿ-ಶ್ರೇಷ್ಠ ಪ್ರಶಸ್ತಿ ನೀಡದೆ ಸರಾಸರಿ ೬೩.೪೨ ಹೊಂದಿದ್ದ ಆಂಡ್ರೂ ಸ್ಟ್ರಾಸ್ ರನ್ನು ಸರಣಿ ಶ್ರೇಷ್ಠರೆಂದು ಘೋಷಿಸಲಾಯಿತು. ಈ ಶ್ರೇಷ್ಠ ಪ್ರದರ್ಶನ (೧೦೦*, ೨೮, ೧೦೬*, ೧೧೯, ೪, ೯, ೯*) ವು ಬೆಲ್ ರ ಒಟ್ಟಾರೆ ಟೆಸ್ಟ್ ಸರಾಸರಿಯನ್ನು ಸುಮಾರು ೪೮ ಕ್ಕೆ ಏರಿಸಿತು. ಆಸ್ಟ್ರೇಲಿಯಾ ವಿರುದ್ಧದ ಅವರ ಸರಾಸರಿ ಕೇವಲ ೧೭ ಇದ್ದು, ಬೇರೆಲ್ಲಾ ತಂಡಗಳ ವಿರುದ್ಧದ ಸರಾಸರಿ ಸುಮಾರು ೬೮ ಆಗಿದ್ದಿತು. ಅವರು ಪಾಕಿಸ್ತಾನದ ವಿರುದ್ಧ ಓಡಿಐಗಳಲ್ಲೂ ಆಡಿ, ಆಗಿನ ಅವರ ಗರಿಷ್ಠ ಸ್ಕೋರ್ ಗಳನ್ನು ಪಡೆದಿದ್ದರು: ೮೮ ರನ್ ಗಳನ್ನು ಸೋಫಿಯಾ ಗಾರ್ಡನ್ಸ್ ನಲ್ಲಿ ಮತ್ತು ೮೬* ಟ್ರೆಂಟ್ ಬ್ರಿಡ್ಜ್ ನಲ್ಲಿ ಗಳಿಸಿದರು; ಇಂಗ್ಲೆಂಡ್ ಗೆದ್ದ ಟ್ರೆಂಟ್ ಬ್ರಿಡ್ಜ್ ನ ಪಂದ್ಯದಲ್ಲಿ ಬೆಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

೨೦೦೬ - ಚಾಂಪಿಯನ್ಸ್ ಟ್ರೋಫಿ

ಬದಲಾಯಿಸಿ

ಸೆಪ್ಟೆಂಬರ್ ೨೦೦೬ ರಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತು ಆಶಸ್ ರಕ್ಷಿಸಿಕೊಳ್ಳುವ ಸಲುವಾಗಿ ಆಸ್ಟ್ರೇಲಿಯಾದಲ್ಲಿ ಭಾಗವಹಿಸುವ ತಂಡದಲ್ಲಿ ಆಯ್ಕೆ ಮಾಡಲಾಯಿತು. ಮಾರ್ಕಸ್ ಟ್ರೆಸ್ಕಾತಿಕ್ ರ ಅನುಪಸ್ಥಿತಿಯಲ್ಲಿ ಬೆಲ್ ರನ್ನು ಏಕದಿವಸೀಯ ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಲು ಕ್ರಮಾಂಕದಲ್ಲಿ ಬಡ್ತಿ ನೀಡಲಾಯಿತು. ಇಂಗ್ಲೆಂಡ್ ನ ಮೂರು ಪಂದ್ಯಗಳಲ್ಲಿ ಬೆಲ್ ೩೨.೩೩ ರ ಸರಾಸರಿಯಲ್ಲಿ ೯೭ ರನ್ ಗಳಿಸಿದರು. ಇಂಗ್ಲೆಂಡ್ ತನ್ನ ಮೊದಲ ಎರಡು ಪಂದ್ಯಗಳನ್ನು (ಭಾರತ ಮತ್ತು ಆಸ್ಟ್ರೇಲಿಯಾಗಳ ವಿರುದ್ಧ) ಸೋತು ಟೂರ್ನಮೆಂಟ್ ನಿಂದ ಹೊರನಡೆಯಿತು; ಕಡೆಯ ಗುಂಪು-ಮಟ್ಟದ ಪಂದ್ಯದಲ್ಲಿ ಅಂತಿಮವಾಗಿ ರನ್ನರ್ಸ್ ಅಪ್ ಆದ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದರೂ ಟೂರ್ನಮೆಂಟಿಗೆ ಅದು ಯಾವ ವಿಧದಲ್ಲೂ ಸಹಾಯಕವಾಗಲಿಲ್ಲ.

೨೦೦೬/೭ ಆಶಸ್ ಸರಣಿ

ಬದಲಾಯಿಸಿ

ಆಂಡ್ರೂ ಫ್ಲಿಂಟಾಫ್ ರ ನೇತೃತ್ವದಲ್ಲಿ ಆಶಸ್ ಸರಣಿ ಆಡಲು ಮತ್ತು ತಮ್ಮ ಆರನೆಯ ಕ್ರಮಾಂಕವನ್ನು ಉಳಿಸಿಕೊಳ್ಳಲು ಬಂದ ಬೆಲ್ ಆಡುವ ಹನ್ನೊಂದು ಆಟಗಾರರ ಪೈಕಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಅಲಿಸ್ಟೇರ್ ಕುಕ್ ಮತ್ತು ಪಾಲ್ ಕಾಲಿಂಜ್ ವುಡ್ ರೊಡನೆ ಪೈಪೋಟಿ ನಡೆಸುತ್ತಿರುವುದಾಗಿ ಕಾಣಲಾಯಿತು. ಆದರೆ ಮಾರ್ಕಸ್ ಟ್ರೆಸ್ಕಾತಿಕ್ ಮೊದಲನೆಯ ಟೆಸ್ಟ್ ನ ಆರಂಭಕ್ಕೆ ಮುಂಚೆಯೇ ಇಂಗ್ಲೆಂಡ್ ಗೆ ಮರಳಿದುದರಿಂದ ಬೆಲ್, ಕುಕ್ ಮತ್ತು ಕಾಲಿಂಜ್ ವುಡ್ ಮೂವರೂ ಸರಣಿಯುದ್ದಕ್ಕೂ ತಂಡದಲ್ಲಿ ಸ್ಥಾನ ಗಳಿಸಿ ಆಡಿದರು. ನಾಲ್ಕು ಅರ್ಧಶತಕಗಳಿದ್ದ ೩೩೧ ರನ್ ಗಳಿಸಿದ ಬೆಲ್ ರ ಆ ಸರಣಿಯ ಸರಾಸರಿ ೩೩.೧೦ ಆಗಿದ್ದಿತು. ಬೆಲ್ ತಮ್ಮ ಇನಿಂಗ್ಸ್ ಗಳನ್ನು ಚೆನ್ನಾಗಿಯೇ ಆರಂಭಿಸಿದರೂ, ಬೃಹತ್ ಸ್ಕೋರುಗಳನ್ನು ಗಳಿಸುವಲ್ಲಿ ವಿಫಲರಾದರು ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ೫ -೦ ಅಂತರದಿಂದ ಸೋತಿತು. ಇದೇ ವಿಫಲತೆಯು ಏಕದಿವಸೀಯ ಪಂದ್ಯಗಳಲ್ಲೂ ಮುಂದುವರಿಯಿತು. ಇಂಗ್ಲೆಂಡ್ ಟ್ವೆಂಟಿ೨೦ ಪಂದ್ಯ ಮತ್ತು ಮೊದಲನೆಯ ಓಡಿಐಗಳನ್ನು ಸೋತಿತು. ಆದರೆ, ಇಂಗ್ಲೆಂಡ್ ಕಾಮನ್ ವೆಲ್ತ್ ಬ್ಯಾಂಕ್ ಸರಣಿಯ ಫೈನಲ್ ಗೆ ನುಸುಳಿ ಸೇರಿತು ಮತ್ತು ಸತತವಾಗಿ ಎರಡು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಆಸ್ಟ್ರೇಲಿಯಾವನ್ನು ಸೋಲಿಸಿ ಸರಣಿ ಗೆದ್ದಿತು; ಆ ಸತತ ಪಂದ್ಯಗಳ ಮೊದಲನೆಯದರಲ್ಲಿ ಬೆಲ್ ೬೫ ರನ್ ಹೊಡೆದರು.

ವಿಶ್ಚ ಕಪ್ ೨೦೦೭

ಬದಲಾಯಿಸಿ

ವೆಸ್ಟ್ ಇಂಡೀಸ್ ನಲ್ಲಿ ನಡೆಯುವ ವಿಶ್ವ ಕಪ್ ಗೆಂದು ಆಯ್ಕೆ ಮಾಡಿದ ೧೫ ಆಟಗಾರರ ಪೈಕಿ ಬೆಲ್ ಒಬ್ಬರಾಗಿದ್ದರು. ಇಂಗ್ಲೆಂಡ್ ಈ ಪಂದ್ಯಾವಳಿಯಲ್ಲಿ ಬಹಳ ಕಳಪೆ ಪ್ರದರ್ಶನ ನೀಡಿತು ಮತ್ತು ಬೆಲ್ ರ ಆಟವೂ ತಂಡದ ಆಟಕ್ಕೆ ಪೂರಕವಾಗುವಂತೆಯೇ ಇದ್ದಿತು. ಪಂದ್ಯಾವಳಿಯ ಆರಂಭದಲ್ಲಿ ಅವರನ್ನು ಮೂರನೆಯ ಕ್ರಮಾಂಕದಲ್ಲಿ ಆಡಲು ಆಯ್ಕೆ ಮಾಡಲಾಯಿತು; ಇಂಗ್ಲೆಂಡ್ ನ್ಯೂಝಿಲೆಂಡ್ ವಿರುದ್ಧ ಸೋತು, ಕೀನ್ಯಾ, ಕೆನಡಾ ಮತ್ತು ಐರ್ಲೆಂಡ್ ಗಳ ವಿರುದ್ಧ ತಟ್ಟಾಡಿಕೊಂಡು ಗೆದ್ದಿತು. ಈ ಪಂದ್ಯಗಳಲ್ಲಿ ಬೆಲ್ ಸಾಧಾರಣ ಮಟ್ಟದ ಪ್ರದರ್ಶನ ನೀಡಿ ಕ್ರಮಶಃ ೫, ೨೮, ೧೬ ಮತ್ತು ೩೧ ರನ್ ಗಳನ್ನು ಹೊಡೆದರು. ಕಡೆಗೆ ರನ್ನರ್ಸ್ ಅಪ್ ಆದ ಶ್ರೀಲಂಕಾದ ವಿರುದ್ಧ ಸೋಲು ಅನುಭವಿಸಿದ ನಂತರ - ಈ ಪಂದ್ಯದಲ್ಲಿ ಬೆಲ್ ೪೭ ರನ್ ಹೊಡೆದರು - ಇಂಗ್ಲೆಂಡ್ ಎಡ್ ಜಾಯ್ಸ್ ರನ್ನು ಕ್ರಮಾಂಕದ ಮೇಲ್ಪಂಕ್ತಿಯಿಂದ ಇಳಿಸಿತು ಮತ್ತು ನಾಯಕ ಮೈಕಲ್ ವಾನ್ ರೊಡನೆ ಬೆಲ್ ರನ್ನು ಇನಿಂಗ್ಸ್ ಆರಂಭಿಸಲು ಕಳುಹಿಸಲಾಯಿತು. ಈ ಸ್ಥಾನಾಂತರವು ಮೊದಲಿಗೆ ಫಲ ನೀಡಿತು - ಇಂಗ್ಲೆಂಡ್ ಆಸ್ಟ್ರೇಲಿಯಾಗೆ ಸೋತ ಆ ಪಂದ್ಯದಲ್ಲಿ ಬೆಲ್ ೭೭ ರನ್ ಹೊಡೆದರು - ಆದರೆ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಗಳ ವಿರುದ್ಧದ ನಂತರದ ಎರಡು ಪಂದ್ಯಗಳಲ್ಲಿ ಬೆಲ್ ಕೇವಲ ೦ ಮತ್ತು ೭ ರನ್ ಗಳನ್ನು ಹೊಡೆದರು ಹಾಗೂ ಇಂಗ್ಲೆಂಡ್ ನ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಪಂದ್ಯಕ್ಕೆ ಬೆಲ್ ರನ್ನು ತೆಗೆದುಹಾಕಲಾಯಿತು; ಆ ಪಂದ್ಯವನ್ನು ಇಂಗ್ಲೆಂಡ್ ಗೆದ್ದಿತು. ಇಂಗ್ಲೆಂಡ್ ಸೂಪರ್ ೮ ಹಂತದಲ್ಲಿ ೫ ನೆಯ ಸ್ಥಾನವನ್ನೊ ಹೊಂದಿದ ಕಾರಣ ಸೆಮಿ ಪೈನಲ್ ತಲುಪುವಲ್ಲಿ ಅಸಮರ್ಥವಾಯಿತು.

೨೦೦೭ - ವೆಸ್ಟ್ ಇಂಡೀಸ್ ಮತ್ತು ಭಾರತ

ಬದಲಾಯಿಸಿ

ಮೇ ತಿಂಗಳಲ್ಲಿ ಲಾರ್ಡ್ಸ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಬೆಲ್ ಇನಿಂಗ್ಸ್ ನ ನಾಲ್ಕನೆಯ ಶತಕವನ್ನು ಇಂಗ್ಲೆಂಡ್ ಪರವಾಗಿ ಬಾರಿಸಿದರು; ಆ ಇನಿಂಗ್ಸ್ ನ ಇತರ ಶತಕವೀರರೆಂದರೆ ಅಲಿಸ್ಟೇರ್ ಕುಕ್, ಪಾಲ್ ಕಾಲಿಂಜ್ ವುಡ್ ಮತ್ತು ಮ್ಯಾಟ್ ಪ್ರಿಯರ್; ಈ ನಾಲ್ವರು ೧೯೩೮ರ ನಂತರ ಇಂಗ್ಲೆಂಡ್ ಪರವಾಗಿ ಒಂದೇ ಇನಿಂಗ್ಸ್ ನಲ್ಲಿ ಶತಕ ಬಾರಿಸಿದ ಮೊದಲ ಚತುರ್ಥರು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬೆಲ್ ರ ಇನಿಂಗ್ಸ್ ಆರನೆಯ ಕ್ರಮಾಂಕದಲ್ಲಿ ಆಡಿದುದಾಗಿತ್ತು ಹಾಗೂ ಇಂಗ್ಲೆಂಡ್ ಡಿಕ್ಲೇರ್ ಮಾಡಿದಾಗ ಆರನೆಯ ಕ್ರಮಾಂಕದಲ್ಲಿ ೪೮೪ ರನ್ ಗಳನ್ನು ಹೊಡೆದಿದ್ದ ಬೆಲ್ ರ ಸರಾಸರಿ ಅಮೋಘ ಎನಿಸುವ೧೨೧.೦೦. ೨೧ ಆಗಸ್ಟ್ ೨೦೦೭ ರಂದು ಬೆಲ್ ತಮ್ಮ ಚೊಚ್ಚಲ ಓಡಿಐ ಶತಕವನ್ನು ಭಾರತದ ವಿರುದ್ಧದ ಏಳು ಏಕದಿವಸೀಯ ಪಂದ್ಯಗಳ ಪೈಕಿ ಮೊದಲನೆಯದರಲ್ಲಿ ಬಾರಿಸಿದರು; ಬೆಲ್ ೧೧೮ ಚೆಂಡುಗಳನ್ನೆದುರಿಸಿ ೧೨೬ ರನ್ ಹೊಡೆದರು (ಸ್ಟ್ರೈಕ್ ರೇಟ್ ೧೦೬.೮). ಮುಂದಿನ ಎರಡು ಪಂದ್ಯಗಳಲ್ಲಿ ಬೆಲ್ ಮತ್ತೆರಡು ಅರ್ಧಶತಕಗಳನ್ನು ಹೊಡೆದರು; ಅವರು ಎಡ್ಗ್ ಬಾಸ್ಟನ್ ನಲ್ಲಿ ಹೊಡೆದ ೭೯ ರನ್ ಗಳಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು, ಇಂಗ್ಲೆಂಡ್ ಸರಣಿಯಲ್ಲಿ ೨-೧ ರ ಮುನ್ನಡೆ ಪಡೆಯಿತು. ಕ್ರಮೇಣ ಬೆಲ್ ಏಳು ಪಂದ್ಯಗಳಿಂದ ೭೦.೩೩ ಸರಾಸರಿಯನ್ನು ಹೊಂದಿದರು ಮತ್ತು ಇಂಗ್ಲೆಂಡ್ ಆ ಏಳು ಪಂದ್ಯಗಳ ಸರಣಿಯನ್ನು ೪-೩ ರಿಂದ ಗೆದ್ದಿತು; ಲಾರ್ಡ್ಸ್ ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ೭ ವಿಕೆಟ್ ಗಳ ಭರ್ಜರಿ ಜಯ ಗಳಿಸಿತು ಮತ್ತು ಬೆಲ್ ಸರಣಿಯ ಪುರುಷೋತ್ತಮರೆಂದು ಆಯ್ಕೆಯಾದರು.[೧೧]

೨೦೦೭/೮ - ಶ್ರೀಲಂಕಾ

ಬದಲಾಯಿಸಿ

ಸೆಪ್ಟೆಂಬರ್ ೨೦೦೭ ರ ಶ್ರೀಲಂಕಾ ಪ್ರವಾಸದಲ್ಲಿ ಬೆಲ್ ತಮ್ಮ ಮೆಚ್ಚಬಲ್ಲ ಏಕದಿವಸೀಯ ಆಟವನ್ನು ಮುಂದುವರಿಸಿ ೧೨೧ ಎಸೆತಗಳಲ್ಲಿ ೧೩೧ ರನ್ ಗಳನ್ನು ಇಂಗ್ಲೆಂಡ್ ನಶ್ರೀಲಂಕಾ ಕ್ರಿಕೆಟ್ ಬೋರ್ಡ್ XI ವಿರುದ್ಧದ ಏಕೈಕ 'ಚಳಿ ಬಿಡಿಸುವ' ಪಂದ್ಯ (ವಾರ್ಮ್ ಅಪ್ ಗೇಮ್)ದಲ್ಲಿ ಗಳಿಸಿದರು.[೧೨] ಆದರೆ ನಂತರದ ೫ ಪಂದ್ಯಗಳ ಓಡಿಐ ಪಂದ್ಯದಲ್ಲಿ ತಿಣುಕಿದ ಬೆಲ್ ೧೪.೦೦ ಸರಾಸರಿಯಲ್ಲಿ ಕೇವಲ ೭೦ ರನ್ ಹೊಡೆದರು. ಬೆಲ್ ಮೊದಲನೆಯ ಟೆಸ್ಟ್ ಪಂದ್ಯದಲ್ಲಿ ಮತ್ತೆ ಚೆನ್ನಾಗಿ ಆಡಿ, ೮೩ ಮತ್ತು ೭೪ ರನ್ ಗಳನ್ನು ಪಡೆದರಾದರೂ ಇಂಗ್ಲೆಂಡ್ ಈ ಟೆಸ್ಟ್ ಅನ್ನು ೮೮ ರನ್ ಗಳಿಂದ ಸೋತಿತು.[೧೩] ಎರಡನೆಯ ಮತ್ತು ಮೂರನೆಯ ಟೆಸ್ಟ್ ಗಳು ಡ್ರಾದಲ್ಲಿ ಕೊನೆಗೊಂಡದ್ದರಿಂದ ಶ್ರೀಲಂಕಾ ಟೆಸ್ಟ್ ಸರಣಿಯನ್ನು ೧-೦ ಅಂತರದಿಂದ ಗೆದ್ದಿತು ಹಾಗೂ ಈ ಸರಣಿಯಲ್ಲಿ ಬೆಲ್ ಪಡೆದ ಬ್ಯಾಟಿಂಗ್ ಸರಾಸರಿ ೪೩.೫೦.[೧೪]

೨೦೦೭/೮ - ನ್ಯೂಝಿಲೆಂಡ್

ಬದಲಾಯಿಸಿ

ಇಂಗ್ಲೆಂಡ್ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಓಡಿಐ ಸರಣಿಯನ್ನು ಎರಡು ಸೋಲುಗಳಿಂದ ಆರಂಭಿಸಿತು; ಈ ಪಂದ್ಯಗಳಲ್ಲಿ ಬೆಲ್ ತಮ್ಮ ಎಂದಿನ ಆಟ ಆಡಲಾಗದೆ ಕೇವಲ ೫ ಮತ್ತು ೦ ರನ್ ಗಳನ್ನು ಗಳಿಸಿದರು. ಆದರೆ, ತಂಡದಲ್ಲಿ ತನ್ನ ಸ್ಥಾನ ಅಭದ್ರವಾದಾಗ, ಬೆಲ್ ಇಂಗ್ಲೆಂಡ್ ಆಕ್ ಲೆಂಡ್ ನಲ್ಲಿ ಗೆದ್ದ ಸರಣಿಯ ಮೂರನೆಯ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆದ ೭೩ ರನ್ ಗಳನ್ನು ಗಳಿಸಿದರು ಹಾಗೂ ನಾಪಿಯರ್ ಅಲ್ಲಿ ನಡೆದ ನಾಲ್ಕನೆಯ ಪಂದ್ಯದಲ್ಲಿ ೪೧ ಎಸೆತಗಳಲ್ಲಿ ೪೩ ರನ್ ಗಳಿಸಿ ಪಂದ್ಯ ಟೈ ಆಗಲು ಸಹಾಯಕರಾದರು. ಕೊನೆಯ ಪಂದ್ಯದಲ್ಲಿ ಬೆಲ್ ೨೪ ರನ್ ಹೊಡೆದರು ಮತ್ತು ನ್ಯೂಝಿಲೆಂಡ್ ಸರಣಿಯನ್ನು ೩-೧ ಅಂತರದಿಂದ ಗೆದ್ದಿತು. ಹ್ಯಾಮಿಲ್ಟನ್ ನಲ್ಲಿ ನಡೆದ ಮೊದಲ ಪಂದ್ಯದದಲ್ಲಿ ಮೊದಲ ಇನಿಂಗ್ಸ್ ನಲ್ಲಿ ನ್ಯೂಝಿಲೆಂಡ್ ಬ್ಯಾಟ್ ಮಾಡುತ್ತಿದ್ದಾಗ ಷಾರ್ಟ್ ಲೆಗ್ ನಲ್ಲಿ ನಿಂತಿದ್ದ ಬೆಲ್ ರ ಮಣಿಕಟ್ಟಿಗೆ ಚೆಂಡು ಬಿರುಸಾಗಿ ಬಡಿಯಿತು. ಮೊದಲಿಗೆ ಅವರು ಮಣಿಕಟ್ಟು ಮುರಿದಿದೆ ಮತ್ತು ಅವರು ಪ್ರವಾಸದಲ್ಲಿ ಇನ್ನು ಭಾಗವಹಿಸಲಾರರೆಂಬ ಶಂಕೆ ಮೂಡಿದರೂ, ಆ ಪೆಟ್ಟಿನಿಂದ ಕೇವಲ ಗಾಯ ಮತ್ತು ಊತ ಉಂಟಾಗಿದೆಯೆಂದು ತಿಳಿದುಬಂದಿತು. ಬೆಲ್ ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ನಲ್ಲಿ ೨೫ ರನ್ ಗಳನ್ನು ಹೊಡೆದರು ಮತ್ತು ಎರಡನೆಯ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ೧೧೦ ರನ್ ಗಳಿಗೆ ಕುಸಿದು ಆಲ್ ಔಟ್ ಆದಾಗ ಆಜೇಯ ೫೪ ರನ್ ಗಳಿಸಿದರು; ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇವರ ನಂತರದ ಹೆಚ್ಚಿನ ಸ್ಕೋರ್ ಅಲಿಸ್ಟೇರ್ ಕುಕ್ ಹೊಡೆದ ೧೩ ರನ್ ಗಳು. ಇಂಗ್ಲೆಂಡ್ ಈ ಪಂದ್ಯವನ್ನು ೧೮೯ ರನ್ ಗಳಿಂದ ಸೋತಿತು.[೧೫] ಎರಡನೆಯ ಟೆಸ್ಟ್ ನಲ್ಲಿ ಬೆಲ್ ೧೧ ಮತ್ತು ೪೧ ರನ್ ಗಳನ್ನು ಹೊಡೆದರು ಮತ್ತು ಇಂಗ್ಲೆಂಡ್ ಪಂದ್ಯ ಗೆದ್ದು ಸರಣಿಯನ್ನು ಸಮವಾಗಿಸಿತು.[೧೬] ಈ ಪ್ರವಾಸದಲ್ಲಿ ಅವರು ಆಡಿದ ಅತ್ಯುತ್ತಮ ಆಟ ಕಡೆಯ ಟೆಸ್ಟ್ ನಲ್ಲಿನದ್ದಾಗಿತ್ತು. ಮೊದಲನೆಯ ಇನಿಂಗ್ಸ್ ನಲ್ಲಿ ೯ ರನ್ ಗಳಿಸಿದ ಬೆಲ್ ಹೆಚ್ಚಿನ ಮೊತ್ತವನ್ನು ಸ್ಕೋರ್ ಮಾಡಬೇಕಾದ ಒತ್ತಡವನ್ನು ಹೊಂದಿದ್ದರು. ಅವರು ಆಂಡ್ರೂ ಸ್ಟ್ರಾಸ್ ರನ್ನು ಕ್ರೀಸ್ ನಲ್ಲಿ ಜೊತೆಗೂಡಿದಾಗ ಇಂಗ್ಲೆಂಡ್ ನ ಮೊತ್ತ ೧೪೦/೩; ಈ ಜೋಡಿ ನಾಲ್ಕನೆಯ ವಿಕೆಟ್ ಗೆ ೧೮೭ ರನ್ ಗಳನ್ನು ಜೊತೆಗೂಡಿಸಿದರು ಮತ್ತು ಪಂದ್ಯವನ್ನು ನಿಃಸಂದೇಹವಾಗಿ ನ್ಯೂಝಿಲೆಂಡ್ ನ ಬಂಧದಿಂದ ಮುಕ್ತಗೊಳಿಸಿದರು.[೧೭] ಈ ಇನಿಂಗ್ಸ್ ನಲ್ಲಿ ಬೆಲ್ ತಮ್ಮ ೭ ನೆಯ ಶತಕವನ್ನು ಬಾರಿಸಿದರು; ಇದು ಎರಡು ವರ್ಷಗಳಲ್ಲಿ ಹೊರದೇಶಗಳಲ್ಲಿ ಬೆಲ್ ಹೊಡೆದ ಮೊದಲ ಶತಕವಾಗಿತ್ತು. ಈ ಸರಣಿಯಲ್ಲಿ ಬೆಲ್ ರ ಸರಾಸರಿ ೫೦.೦೦; ಬೆಲ್ ೨,೫೦೦ ರನ್ ಗಳನ್ನು ಗಳಿಸಿದ ಇಂಗ್ಲೆಂಡ್ ನ ಅತಿ ಕಿರಿಯ ವಯಸ್ಸಿನ ಆಟಗಾರರಾದರು.[೧೮] ಆದರೆ ಬೆಲ್ ಇಂಗ್ಲೆಂಡ್ ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮತ್ತೆ ಸರಿಯಾಗಿ ಆಡಲು ತಿಣುಕಿದರು ಮತ್ತು ನಾಲ್ಕು ಇನಿಂಗ್ಸ್ ಗಳಲ್ಲಿ ಗರಿಷ್ಠ ೨೧*ಅನ್ನೂ ಒಳಗೊಂಡು ಕೇವಲ ೪೫ ರನ್ ಗಳನ್ನು ಸಂಪಾದಿಸಿದರು.[೧೯] ನಂತರ ನಡೆದ ಟ್ವೆಂಟಿ೨೦ ಪಂದ್ಯದಲ್ಲಿ ಬೆಲ್ ಕೊಂಚ ಉತ್ತಮ ಆಟ ಆಡಿದರು ಮತ್ತು ಆ ವಿನ್ಯಾಸದ ಪಂದ್ಯಗಳಲ್ಲಿ ತಮ್ಮ ಗರಿಷ್ಠ ಸ್ಕೋರ್ ಆದ ೬೦* ಗಳಿಸಿ ಇಂಗ್ಲೆಂಡ್ ೯ ವಿಕೆಟ್ ಗಳಿಂದ ಪಂದ್ಯ ಗೆಲ್ಲಲು ನೆರವಾದರು.[೨೦] ತರುವಾಯ ನಡೆದ ಓಡಿಐ ಸರಣಿಯಲ್ಲಿ ಅವರು ಆರಂಭಿಕ ಆಟಗಾರರಾಗಿ ಬ್ಯಾಟ್ ಮಾಡಿದರು, ಆದರೆ ಅವರ ಆಟದಲ್ಲಿ ಹೆಚ್ಚು ಏರುಪೇರುಗಳು ಕಂಡುಬಂದು ಈ ಮುಂದೆ ಸೂಚಿಸಿದ ರೀತಿಯಲ್ಲಿ ರನ್ ಗಳನ್ನು ಗಳಿಸಿದರು: ೪೬,[೨೧] ೦,[೨೨] ೨೦,[೨೩] ಮತ್ತು ೪೬.[೨೪]

೨೦೦೮ - ದಕ್ಷಿಣ ಆಫ್ರಿಕ, ಭಾರತ ಮತ್ತು ವೆಸ್ಟ್ ಇಂಡೀಸ್

ಬದಲಾಯಿಸಿ

ಬೆಲ್ ಈ ಸರಣಿಯ ಮೊದಲ ಪಂದ್ಯದಲ್ಲೇ ೧೯೯ ರನ್ ಗಳನ್ನು ಗಳಿಸಿ ಪಾಲ್ ಹ್ಯಾರಿಸ್ ರ ಬೋಲಿಂಗ್ ನಲ್ಲಿ ದ್ವಿಶತಕ್ಕೆ ಕೇವಲ ಒಂದು ರನ್ ಅಂತರದಲ್ಲಿದ್ದಾಗ ತಮ್ಮ ವಿಕೆಟ್ ಒಪ್ಪಿಸುವುದರ ಮೂಲಕ ೧೯೯ ಕ್ಕೆ ಔಟಾದ ಮೊದಲ ಇಂಗ್ಲಿಷ್ ಆಟಗಾರರಾದರು..[೨೫] ಮೊದಲ ಪಂದ್ಯದಲ್ಲಿ ಶುಭಾರಂಭ ಹೊಂದಿದ ಬೆಲ್ ನಂತರದ ದಿನಗಳಲ್ಲಿ ತಮ್ಮ ಫಾರ್ಮ್ ಕಳೆದುಕೊಂಡರು ಹಾಗೂ ಮೂರನೆಯ ಟೆಸ್ಟ್ ನಲ್ಲಿ ಹೊಡೆದ ೫೦ ರನ್ ಗಳ ಹೊರತಾಗಿ.[೨೬] ಇಪ್ಪತ್ತು, ಮೂವತ್ತು ರನ್ ಗಳಿಗಿಂತ ಹೆಚ್ಚು ಸ್ಕೋರ್ ಮಾಡಲು ಆಗಲಿಲ್ಲ. ಅವರು ಭಾರತ ಮತ್ತು ವೆಸ್ಟ್ ಇಂಡೀಸ್ ನಲ್ಲೂ ಹೀಗೆಯೇ ಕಷ್ಟಪಟ್ಟರು ಹಾಗೂ ಮೊದಲನೆಯ ಟೆಸ್ಟ್ ನಲ್ಲಿ ಇಂಗ್ಲೆಂಡ್ ೫೧ ಕ್ಕೆ ಆಲ್ ಔಟ್ ಆದ ನಂತರ ಇಂಗ್ಲೆಂಡ್ ಇವರ ಸ್ಥಾನಕ್ಕೆ ಒವೈಸ್ ಷಾರನ್ನು ಆಯ್ಕೆ ಮಾಡಿತು.

೨೦೦೯ - ಆಶಸ್

ಬದಲಾಯಿಸಿ

ತಮ್ಮನ್ನು ತಂಡದಿಂದ ಕೈಬಿಟ್ಟುದಕ್ಕೆ ಬೆಲ್ ಬಹಳ ಚೆನ್ನಾಗಿ ಪ್ರತಿಸ್ಪಂದಿಸಿ ಕೌಂಟಿ ಚಾಂಪಿಯನ್ ಶಿಪ್ ನಲ್ಲಿ ನಿರಂತರವಾಗಿ ಒಳ್ಳೆಯ ಸ್ಕೋರ್ ಗಳನ್ನು ಮಾಡುತ್ತಾ ಬಂದರು; ತತ್ಕಾರಣವಾಗಿ ಬೆಲ್ ರನ್ನು ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್ ಗಳಿಗಾಗಿ ಆಯ್ಕೆಯಾದ ೧೬-ಆಟಗಾರರ ತರಬೇತಿ ತಂಡಕ್ಕೆ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡುವ ಇಂಗ್ಲೆಂಡ್ ಲಯನ್ಸ್ ತಂಡದ ನಾಯಕರಾಗಿ ಆಯ್ಕೆ ಮಾಡಲಾಯಿತು. ಬೆಲ್ ಆ ಪಂದ್ಯದಲ್ಲಿ ಹೊಡೆದದ್ದು ೦ (ಒಂದು ಚಿನ್ನದ ಬಾತು) ಮತ್ತು ೨೦,[೨೭] ಆದರೂ ಸರಣಿಯ ಮೊದಲ ಎರಡು ಟೆಸ್ಟ್ ಗಳಲ್ಲಿ ತಂಡದ ಪಾರ್ಶ್ವದಲ್ಲಿ ಇದ್ದರು. ತಮ್ಮ ತವರಾದ ಎಡ್ಗ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಮೂರನೆಯ ಟೆಸ್ಟ್ ನಲ್ಲಿ ಗಾಯಗೊಂಡ ಕೆವಿನ್ ಪೀಟರ್ಸನ್ ರ ಬದಲಿಗೆ ಆಡಲು ಬೆಲ್ ಮತ್ತೆ ಆಯ್ಕೆಯಾದರು. ಟೆಸ್ಟ್ ರಂಗಕ್ಕೆ ಮರಳಿ, ಮೂರನೆಯ ಕ್ರಮಾಂಕದಲ್ಲಿ ಆಡುತ್ತಾ ಬೆಲ್ ಡ್ರಾ ಆದ ಆ ಪಂದ್ಯದ ಏಕೈಕ ಇನಿಂಗ್ಸ್ ನಲ್ಲಿ ೫೩ ರನ್ ಗಳನ್ನು ಗಳಿಸಿದರು. ಹೆಡಿಂಗ್ಲಿಯಲ್ಲಿ ನಡೆದ ೪ನೆಯ ಟೆಸ್ಟ್ ಪಂದ್ಯದಲ್ಲಿ ಬೆಲ್ ಮಿಚೆಲ್ ಜಾನ್ಸನ್ ಎಸೆದ ಚೆಂಡನ್ನು ಎಡ್ಜ್ ಮಾಡಿ ಎಂಟು ಮತ್ತು ಮೂರು ರನ್ ಗಳಿಗೆ ಔಟ್ ಆಗುವುದರ ಮೂಲಕ ಟೆಸ್ಟ್ ಕ್ರಿಕೆಟ್ ನ ಒಂದು ದಾಖಲೆಯ ಭಾಗವಾದರು - ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅದೇ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು, ಮೂರನೆಯ ಕ್ರಮಾಂಕ (ರವಿ ಬೊಪಾರಾ), ನಾಲ್ಕನೆಯ ಕ್ರಮಾಂಕ (ಬೆಲ್) ಮತ್ತು ಐದನೆಯ ಕ್ರಮಾಂಕ (ಪಾಲ್ ಕಾಲಿಂಜ್ ವುಡ್), ಮೂವರೂ ಎರಡೂ ಇನಿಂಗ್ಸ್ ಗಳಲ್ಲಿ ಎರಡಂಕಿಯನ್ನು ದಾಟುವಲ್ಲಿ ಅಸಮರ್ಥರಾದರು ಮತ್ತು ಮೂವರೂ ಸೇರಿ ಒಟ್ಟಾರೆ ೧೬ ರನ್ ಗಳನ್ನು ಹೊಡೆದರು.[೨೮] ಆದರೆ ನಂತರದ ವಾರದಲ್ಲಿಯೇ ಬೆಲ್ ನಾಟಿಂಗ್ ಹ್ಯಾಂಷೈರ್ ವಿರುದ್ಧ ಟ್ರೆಂಟ್ ಬ್ರಿಡ್ಜ್ ನಲ್ಲಿ ೧೨೬ ರನ್ ಗಳಿಸಿದರು. ಅವರನ್ನು ನಂತರ ಓವಲ್ ನಲ್ಲಿ ನಡೆಯುವ ಕೊನೆಯ ಟೆಸ್ಟ್ ಗೆ ಆಡಲು ಕರೆಯಲಾಯಿತು ಮತ್ತು ಆ ಟೆಸ್ಟ್ ನಲ್ಲಿ ಬೆಲ್ ೭೨ ರನ್ ಹೊಡೆಯುವುದರ ಮೂಲಕ ಇಂಗ್ಲೆಂಡ್ ೧೭೨ ರನ್ ಗಳ ಮುನ್ನಡೆ ಸಾಧಿಸಲು ಭದ್ರ ಬುನಾದಿ ಹಾಕಿಕೊಟ್ಟರು ಅವರು ಎರಡನೆಯ ಇನಿಂಗ್ಸ್ ನಲ್ಲಿ ನಾಲ್ಕು ರನ್ ಗಳಿಸಿ ಔಟಾದರೂ, ವಾರ್ವಿಕ್ ಷೈರ್ ಮ ಸಹ ಆಟಗಾರ ಜೊನಾಥನ್ ಟ್ರಾಟ್ ರ ಚೊಚ್ಚಲ ಶತಕದ ನೆರವಿನಿಂದ ಇಂಗ್ಲೆಂಡ್ ಆ ಟೆಸ್ಟ್ ಅನ್ನು ೧೯೭ ರನ್ ಗಳ ಅಂತರದಿಂದ ಗೆದ್ದಿತು ಹಾಗೂ ತನ್ಮೂಲಕ ಆಶಸ್ ಸರಣಿಯನ್ನು ೨–೧ ಅಂತರದಿಂದ ಗೆದ್ದಿತು. ಬೆಲ್ ರನ್ನು ಮಿಚೆಲ್ ಜಾನ್ಸನ್ ೫ ಇನಿಂಗ್ಸ್ ಗಳ ಪೈಕಿ ೪ ಬಾರಿ ಔಟ್ ಮಾಡಿದರು ಹಾಗೂ, ಎರಡು ಅರ್ಧಶತಕಗಳನ್ನು ಹೊಡೆದೂ ಸಹ, ಬೆಲ್ ೧೪೦ ರನ್ ಗಳನ್ನು ಕೇವಲ ೨೮ ರ ಸರಾಸರಿಯಲ್ಲಿ ಗಳಿಸಲು ಸಾಧ್ಯವಾಯಿತು.[೨೯]

೨೦೦೯/೧೦ - ದಕ್ಷಿಣ ಆಫ್ರಿಕ ಮತ್ತು ಬಾಂಗ್ಲಾದೇಶ

ಬದಲಾಯಿಸಿ

ಸೆಂಚೂರಿಯನ್ ನಲ್ಲಿ ನಡೆದ, ಹಾಗೂ ಇಂಗ್ಲೆಂಡ್ ಕಳಪೆ ಪ್ರದರ್ಶನ ನೀಡಿಯೂ ಡ್ರಾ ಆದ ಟೆಸ್ಟ್ ನಲ್ಲಿ ಬೆಲ್ ೫ ಮತ್ತು ೨ ರನ್ ಗಳನ್ನು ಗಳಿಸಿದ ನಂತರ ಅವರನ್ನು ತಂಡದಲ್ಲಿ ಇರಿಸಿಕೊಂಡಿರುವುದಕ್ಕೆ ಖಾರವಾದ ಟೀಕೆಗಳು ಬರಲಾರಂಭಿಸಿದವು. ಇಂಗ್ಲೆಂಡ್ ತಂಡದ ನಿರ್ದೇಶಕ ಆಂಡಿ ಫ್ಲವರ್ ಬೆಲ್ ಗೆ ತಮ್ಮ ವಿಶ್ವಾಸಮತವನ್ನು ನೀಡಿದರು[೩೦] ಮತ್ತು ಬೆಲ್, ಜುಲೈ ೨೦೦೮ ರಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಹೊಡೆದಿದ್ದ ೧೯೯ ರನ್ ಗಳ ನಂತರದ, ಮೊದಲ ಶತಕವನ್ನು ಬಾರಿಸುವುದರ ಮೂಲಕ ಆ ವಿಶ್ವಾಸವನ್ನು ಉಳಿಸಿಕೊಂಡರು. ಡರ್ಬನ್ ನಲ್ಲಿ ನಡೆದ ಎರಡನೆಯ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಬೆಲ್ ೧೪೦ ಹೊಡೆಯುವುದರ ಮೂಲಕ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದರು. ಕಡೆಯ ಎರಡು ಟೆಸ್ಟ್ ಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದ ಬೆಲ್ ೪ ಇನಿಂಗ್ಸ್ ನಲ್ಲಿ ಸರಾಸರಿ ೪೧ .೫೦ ಯ ಹಾಗೆ ೧೬೬ ರನ್ ಗಳಿಸಿದರು. ಬಾಂಗ್ಲಾದೇಶದ ಪ್ರವಾಸದಲ್ಲಿ ಚಿಟ್ಟಗಾಂಗ್ ನಲ್ಲಿ ನಡೆದ ಇಂಗ್ಲೆಂಡ್ ನ ಮೊದಲ ಟೆಸ್ಟ್ ನ ಮೊದಲ \\ ನಲ್ಲಿ ಬೆಲ್ ೧೦೫ ಎಸೆತಗಳಲ್ಲಿ ೮೪ ರನ್ ಗಳನ್ನು ವಿಶ್ವಾಸದಿಂದ ಆಡುತ್ತಾ ವೇಗವಾಗಿ ಗಳಿಸಿದರು ಮತ್ತು ಎರಡನೆಯ \\ ನಲ್ಲಿ ಆಜೇಯ ೩೯ ರನ್ ಗಳಿಸಿದರು. ಕ್ರಮಾಂಕದಲ್ಲಿ ಕೆಳಗಿನ ಸ್ಥಳಗಳಲ್ಲಿ ಆಡುತ್ತಾ, ವಿಶೇಷತಃ ೬ ನೆಯ ಕ್ರಮಾಂಕದಲ್ಲಿ, ಬೆಲ್ ತಮ್ಮ ಸ್ಕೋಡ್ ಗಳು ಉತ್ತಮಗೊಳ್ಳುವುದನ್ನು ಮನಗಂಡರು; ಬೆಲ್ ತಮ್ಮ ೧೦ ಶತಕಗಳ ಪೈಕಿ ಐದನ್ನು ಆರನೆಯ ಕ್ರಮಾಂಕದಲ್ಲಿ ಆಡುವಾಗ ಗಳಿಸಿದ್ದಾರೆ. ಮೀರ್ಪುರ್ ನಲ್ಲಿ ನಡೆದ ಎರಡನಯ ಟೆಸ್ಟ್ ನಲ್ಲಿ ಇಂಗ್ಲೆಂಡ್ ೧೦೭-೩ ರ ಸಂಕಷ್ಟಕರ ಸ್ಥಿತಿಯಲ್ಲಿದ್ದಾಗ ಬೆಲ್ ೫ ನೆಯ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದು ಪ್ರಮುಖವಾದ ಜೊತೆಯಾಟಗಳಲ್ಲಿ ಭಾಗಿಯಾದರು; ಜೊನಾಥನ್ ಟ್ರಾಟ್ ರೊಡನೆ (೬೭ ರನ್ ಜೊತೆಯಾಟ), ಮ್ಯಾಟ್ ಪ್ರಿಯರ್ ರೊಡನೆ (೯೮ ರನ್ ಜೊತೆಯಾಟ) ಮತ್ತು ೬ ನೆಯ ವಿಕೆಟ್ ಗೆ ೧೪೩-ರನ್ ಜೊತೆಯಾಟ ಟಿಮ್ ಬ್ರೆನ್ಸನ್ ರೊಡನೆ ಜೋಡಿಸಿ, ತಮ್ಮ ೧೦ ನೆಯ ಟೆಸ್ಟ್ ಶತಕವನ್ನು ಪೂರೈಸಿ, ಕಡೆಗೆ ೧೩೮ ರನ್ ಗಳಿಸಿ ಔಟಾದರು. ಈ ಶತಕ ಬಾರಿಸುತ್ತಿದ ಅವಧಿಯಲ್ಲಿ ಬೆಲ್ ರ ಬಾಂಗ್ಲಾದೇಶದ ವಿರುದ್ಧದ ಸರಾಸರಿ ೪೮೮ ತಲುಪಿತು; ಇದು ಯಾವುದೇ ದೇಶದ ವಿರುದ್ಧ ಟೆಸ್ಟ್ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್ ಮನ್ ಗಳಿಸಿದ ಅತ್ಯಧಿಕ ಸರಾಸರಿಯಾಗಿತ್ತು.[೩೧]

೨೦೧೦ - ಬಾಂಗ್ಲಾದೇಶ ಮತ್ತು ಗಾಯಗೊಂಡದ್ದರಿಂದ ಗೈರುಹಾಜರಿ

ಬದಲಾಯಿಸಿ

ಋತುವಿನ ಆರಂಭದಲ್ಲಿ ಬೆಲ್ ಬಾಂಗ್ಲಾದೇಶದ ವಿರುದ್ಧ ಇಂಗ್ಲೆಂಡ್ ನಲ್ಲಿ ನಡೆದ ಸರಣಿಯಲ್ಲಿ ಭಾಗವಹಿಸಿ, ಎರಡನೆಯ ಟೆಸ್ಟ್ ನಲ್ಲಿ ಶತಕ ಬಾರಿಸಿದರು. ಆದರೆ ನಂತರ ಜರುಗಿದ ಏಕದಿವಸೀಯ ಪಂದ್ಯಗಳಲ್ಲಿ ಆಡುವಾಗ ಸೊಂಟದ ಬಳಿಯ ಸ್ನಾಯುವೊಂದು ಜಖಂ ಆದುದರಿಂದ ಬೆಲ್ ಪಾಕಿಸ್ತಾನದ ವಿರುದ್ಧದ ಪ್ರಮುಖ ಸರಣಿಯನ್ನು ಆ ಬೇಸಿಗೆಯಲ್ಲಿ ಆಡುವುದರಿಂದ ವಂಚಿತರಾದರು. ಋತುವಿನ ಅಂತ್ಯಭಾಗದಲ್ಲಿ ಅವರು ತಮ್ಮ ಕೌಂಟಿಯಾದ ವಾರ್ವಿಕ್ ಷೈರ್ ತಂಡಕ್ಕೆ ಮರಳಿ, ಸಾಮರ್ಸೆಟ್ ವಿರುದ್ಧ ಹಂಗಾಮಿ ನಾಯಕರಾಗಿ ಆಡುತ್ತಾ CB೪೦ ಫೈನಲ್ ಪಂದ್ಯದಲ್ಲಿ ಪಂದ್ಯ ಗೆಲ್ಲುವಂತಹ ಶತಕವನ್ನು ಬಾರಿಸಿದರು.

೨೦೧೦/೧೧ - ಆಸ್ಟ್ರೇಲಯಾದಲ್ಲಿ ಆಶಸ್

ಬದಲಾಯಿಸಿ

ಮತ್ತೆ ಆಶಸ್ ಸರಣಿ ಆರಂಭವಾಗುವ ವೇಳೆಗೆ ಬೆಲ್ ತಂಡದಲ್ಲಿ ತಮ್ಮ ಆರನೆಯ ಕ್ರಮಾಂಕವನ್ನು ಭದ್ರಪಡಿಸಿಕೊಂಡಿದ್ದರು. ಸರಣಿಯುದ್ದಕ್ಕೂ, ಸರಿಯಾಗಿ ಆಡದಿದ್ದ ಪಾಲ್ ಕಾಲಿಂಜ್ ವುಡ್ ರನ್ನು ಕ್ರಮಾಂಕದಲ್ಲಿ ಕೆಳಗಿಳಿಸಿ ಬೆಲ್ ರನ್ನು ಕ್ರಮಾಂಕದಲ್ಲಿ ಮೇಲೆ ಕಳುಹಿಸುವ ಮಾತುಗಳು ಕೇಳಿಬರುತ್ತಿದ್ದವು. ಸರಣಿಯಲ್ಲಿ ಉತ್ತಮ ಆರಂಭ ಹೊಂದಿದ ಬೆಲ್ ಸರಣಿಯುದ್ದಕ್ಕೂ ರಮಣೀಯವಾದ ಡ್ರೈವ್ ಗಳು, ಕಟ್ ಗಳು ಮತ್ತು ಪುಲ್ ಗಳಿಂದ ರಂಜನೀಯವಾದ ಆಟ ಆಡಿದರು. ಆದರೆ, ಹನ್ನೊಂದು ಅರ್ಧಶತಕಗಳನ್ನು ಹೊಡೆದಿದ್ದರೂ, ಬೆಲ್ ತಮ್ಮ ಮೊದಲನೆಯ ಆಶಸ್ ಶತಕವನ್ನು ಬಾರಿಸಲು ಸಿಡ್ನಿಯಲ್ಲಿ ನಡೆದ ೫ ನೆಯ ಟೆಸ್ಟ್ ವರೆಗೆ ಕಾಯಬೇಕಾಯಿತು. ಬೆಲ್ ಇಂಗ್ಲೆಂಡ್ ನ ಬ್ಯಾಟ್ಸ್ ಮನ್ ಗಳ ಪೈಕಿ ಶ್ರೇಷ್ಠ ಆಟ ಮೆರೆದವರಲ್ಲೊಬ್ಬರಾಗಿದ್ದರು ಮತ್ತು ಸರಣಿಯನ್ನು ೩-೧ ಅಂತರದಿಂದ ಗೆಲ್ಲವುದರಲ್ಲಿ ಇವರ ಕೊಡುಗೆ ಹಿರಿದಾದುದಾಗಿತ್ತು; ಇದಕ್ಕೂ ಮೊದಲು, ಈ ಅಂತರದಿಂದ ಕೇವಲ ಗ್ಯಾಟಿಂಗ್ ರ ತಂಡ ಮಾತ್ರ ೧೯೮೬/೮೭ ರಲ್ಲಿ ಆಶಸ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

೨೦೧೧ - ಐಸಿಸಿ ಕ್ರಿಕೆಟ್ ವಿಶ್ವ ಕಪ್

ಬದಲಾಯಿಸಿ

ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಬಾಂಗ್ಲಾದೇಶ, ಭಾರತ ಮತ್ತು ಶ್ರೀಲಂಕಾ ಸೇರಿ ೨೦೧೧ ವಿಶ್ವ ಕಪ್ ಗೆ ಅತಿಥೇಯವಾದವು. ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಪೇರಿಸಿದ ುತ್ತಮ ಮೊತ್ತವನ್ನು ಯಶಸ್ವಿಯಾಗಿ ದಾಟಿದರು; ಬೆಲ್ ಈ ಪಂದ್ಯದಲ್ಲಿ ೩೩ ರನ್ ಹೊಡೆದರು. ನಂತರ ಇಂಗ್ಲೆಂಡ್ ಭಾರತದ ಮೇಲೆ ಸ್ಪರ್ಧಾತ್ಮಕವಾದ ೩೩೮ ರನ್ ಗಳನ್ನು ಕಲೆಹಾಕಿತು. ಬೆಲ್ ಮತ್ತು ತಂಡದ ನಾಯಕ ಸ್ಟ್ರಾಸ್ ಇಂಗ್ಲೆಂಡ್ ನ ಸ್ಥಾನವನ್ನು ಭದ್ರಪಡಿಸುತ್ತಿದ್ದಾಗ, ಎಡಗೈ ಸ್ಪಿನ್ನರ್ ಯುವರಾಜ್ ಸಿಂಗ್ ರ ಬೋಲಿಂಗ್ ನಲ್ಲಿ ಬೆಲ್ ಒಂದು ಎಲ್ ಬಿ ಡಬ್ಲ್ಯೂ ನಿರ್ಣಯವನ್ನು ಎದುರಿಸಬೇಕಾಗಿ ಬಂದಿತು ಹಾಗೂ ಅಂಪೈರ್ ನಾಟೌಟ್ ಎಂಬ ನಿರ್ಣಯ ಇತ್ತರು. ಎದುರಾಳಿ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮರುವೀಕ್ಷಣೆಯನ್ನು ಕೋರಿದರು. ಟಿವಿ ರೀಪ್ಲೇಗಳು ಮತ್ತು ಹದ್ದಿನ-ಕಣ್ಣು ಬೆಲ್ ವಿಕೆಟ್ ಮುಂದೆ ಇದ್ದದ್ದನ್ನು ಹಾಗೂ ತನ್ಮೂಲಕ ಔಟ್ ಎಂಬುದನ್ನು ಧೃಡಪಡಿಸಿದವು. ಆದರೆ ಬ್ಯಾಟ್ಸ್ ಮನ್ ವಿಕೆಟ್ ನಿಂದ ೨.೫ಮೀಟರ್ ಗಳಷ್ಟು ಮುಂದಿದ್ದರೆ ಅಂತಿಮ ತೀರ್ಮಾನವನ್ನು ಮೈದಾನದಲ್ಲಿರುವ ಅಂಪೈರ್(ಈ ಸಂದರ್ಭದಲ್ಲಿ ಬಿಲ್ಲಿ ಬೌಡೆನ್) ತೆಗೆದುಕೊಳ್ಳಬಹುದೆಂಬ ನಿಯಮವಿರುವುದರಿಂದ, ಬೌಡೆನ್ ತಮ್ಮ 'ನಾಟೌಟ್' ನಿರ್ಣಯಕ್ಕೇ ಜೋತುಬಿದ್ದರು. ಬೆಲ್ ಮುಂದುವರಿದು ೬೯ ರನ್ ಗಳನ್ನು ಪೇರಿಸಿದರು ಮತ್ತು ಇಂಗ್ಲೆಂಡ್ ಸುಲಭವಾಗಿ ಗೆಲ್ಲುವತ್ತ ಕೊಂಡೊಯ್ದಿದ್ದರು. ಕಡೆಗೆ ಪಂದ್ಯವು ಟೈ ಆಗಿ ಕೊನೆಗೊಂಡಿತು.

ಅಂಕಿಅಂಶಗಳು

ಬದಲಾಯಿಸಿ

ಟೆಸ್ಟ್ ಅಂಕಿ-ಅಂಶಗಳು

ಬದಲಾಯಿಸಿ
 
ಇಯಾನ್ ಬೆಲ್ ರ ಟೆಸ್ಟ್‌ ಮ್ಯಾಚ್‌ ಬ್ಯಾಟಿಂಗ್‌ ವೃತ್ತಿಯ ಇನ್ನಿಂಗ್ಸ್‌ವಾರು ವಿವರಗಳು ಗಳಿಸಿದ ರನ್‌ಗಳನ್ನು ಕಂಪು ರೇಖೆಗಳಲ್ಲಿ ಮತ್ತು ಕೊನೆಯ ಹತ್ತು ಇನ್ನಿಂಗ್‌ಗಳ ಸರಾಸರಿಯನ್ನು ನೀಲಿ ರೇಖೆಯಲ್ಲಿ ಸೂಚಿಸಲಾಗಿದೆ.

ಟೆಸ್ಟ್ ಶತಕಗಳು

Ian Bell's Test Centuries
Runs Match Against City/Country Venue Year
[1] ೧೬೨*   ಬಾಂಗ್ಲಾದೇಶ ಚೆಸ್ಟರ್-ಲಿ-ಸ್ಟ್ರೀಟ್, ಇಂಗ್ಲೆಂಡ್ ರಿವರ್ ಸೈಡ್ ಮೈದಾನ ೨೦೦೫
[2] ೧೧೫ ೧೦   ಪಾಕಿಸ್ತಾನ ಫೈಸಲಾಬಾದ್, ಪಾಕಿಸ್ತಾನ ಇಕ್ಬಾಲ್ ಸ್ಟೇಡಿಯಂ ೨೦೦೫
[3] ೧೦೦* ೧೫   ಪಾಕಿಸ್ತಾನ ಲಂಡನ್, ಇಂಗ್ಲೆಂಡ್ ಲಾರ್ಡ್ಸ್ ೨೦೦೬
[4] ೧೦೬* ೧೬   ಪಾಕಿಸ್ತಾನ ಮ್ಯಾಂಚೆಸ್ಟರ್, ಇಂಗ್ಲೆಂಡ್ ಓಲ್ಡ್ ಟ್ರಾಫರ್ಡ್ ೨೦೦೬
[5] ೧೧೯ ೧೭   ಪಾಕಿಸ್ತಾನ ಲೀಡ್ಸ್, ಇಂಗ್ಲೆಂಡ್ ಹೆಡಿಂಗ್ಲಿ ಕಾರ್ನೀಗಲ್ ಕ್ರೀಡಾಂಗಣ ೨೦೦೬
[6] ೧೦೯* ೨೪   ವೆಸ್ಟ್ ಇಂಡೀಸ್ ಲಂಡನ್, ಇಂಗ್ಲೆಂಡ್ ಲಾರ್ಡ್ಸ್ ೨೦೦೭
[7] ೧೧೦ ೩೬   ನ್ಯೂ ಜೀಲ್ಯಾಂಡ್ ನ್ಯಾಪಿಯರ್, ನ್ಯೂಝಿಲೆಂಡ್ ಮೆಕ್ಲೀನ್ ಪಾರ್ಕ್ ೨೦೦೮
[8] ೧೯೯ ೪೦   ದಕ್ಷಿಣ ಆಫ್ರಿಕಾ ಲಂಡನ್, ಇಂಗ್ಲೆಂಡ್ ಲಾರ್ಡ್ಸ್ ೨೦೦೮
[9] ೧೪೦ ೫೧   ದಕ್ಷಿಣ ಆಫ್ರಿಕಾ ಡರ್ಬನ್, ದಕ್ಷಿಣ ಆಫ್ರಿಕ ಸಹಾರಾ ಕ್ರೀಡಾಂಗಣ, ಕಿಂಗ್ಸ್ ಮೀಡ್ ೨೦೦೯
[10] ೧೩೮ ೫೫   ಬಾಂಗ್ಲಾದೇಶ ಢಾಕಾ, ಬಾಂಗ್ಲಾದೇಶ ಶೇರ್-ಎ-ಬಾಂಗ್ಲಾ ಕ್ರಿಕೆಟ್ ಕ್ರೀಡಾಂಗಣ ೨೦೧೦
[11] ೧೨೮ ೫೭   ಬಾಂಗ್ಲಾದೇಶ ಮ್ಯಾಂಚೆಸ್ಟರ್, ಇಂಗ್ಲೆಂಡ್ ಓಲ್ಡ್ ಟ್ರಾಫರ್ಡ್ ೨೦೧೦
[12] ೧೧೫ ೬೧   ಆಸ್ಟ್ರೇಲಿಯಾ ಸಿಡ್ನಿ, ಆಸ್ಟ್ರೇಲಿಯ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣ ೨೦೧೧

ವೃತ್ತಿಬದುಕಿನ ಸಾಧನೆಗಳು

  ಬ್ಯಾಟಿಂಗ್‌[೩೨] Bowling[೩೩]
ಎದುರಾಳಿ ಪಂದ್ಯಗಳು ಓಟಗಳು ಸರಾಸರಿ ಉನ್ನತ ಸ್ಕೋರು ೧೦೦ / ೫೦ ಓಟಗಳು ವಿಕೆಟ್‌ಗಳು ಸರಾಸರಿ ಅತ್ಯುತ್ತಮ
  ಆಸ್ಟ್ರೇಲಿಯಾ ೧೮ ೯೭೧ ೩೨.೩೬ ೧೧೫ ೧ / ೧೫ ೩೨ - -
  ಬಾಂಗ್ಲಾದೇಶ ೬೩೩ ೧೫೮.೨೫ ೧೬೨* ೩,೯೪೦ - - - -
  ಭಾರತ ೩೭೦ ೨೪.೬೬ ೬೭ ೧೫–೩ - -
  ನ್ಯೂ ಜೀಲ್ಯಾಂಡ್ ೨೯೫ ೩೬.೮೭ ೧೧೦ ೧/೧ - - - -
  ಪಾಕಿಸ್ತಾನ ೬೮೮ ೬೮.೮೦ ೧೧೯ ೧೪/−೨ ೪೨ ೪೨.೦೦ ೧ / ೧೫
  ದಕ್ಷಿಣ ಆಫ್ರಿಕಾ ೬೪೫ ೪೬.೦೭ ೧೯೯ ೨/೨ - - - -
  ಶ್ರೀಲಂಕಾ ೨೬೧ ೪೩.೫೦ ೮೩ ೧೫–೩ - - - -
  ವೆಸ್ಟ್ ಇಂಡೀಸ್ ೩೨೯ ೧/೧೨[13] ^ ೧೦೯* ೧ / ೧೫ - - - -
ಒಟ್ಟಾರೆ ೬೨ ೪೧೯೨ ೧/೧೨[13] ^ ೧೯೯* ೧೨/೨೬ ೭೬ ೭೬.೦೦ ೧ / ೧೫

ಏಕದಿನದ ಅಂತರರಾಷ್ಟ್ರೀಯ ಪಂದ್ಯಗಳ ಅಂಕಿ-ಅಂಶಗಳು

ಬದಲಾಯಿಸಿ

ಶತಕಗಳು

Ian Bell's One Day International Centuries
Runs Match Against City/Country Venue Year
[1] 126* 48   ಭಾರತ Southampton, England Rose Bowl 2007

ವೃತ್ತಿಜೀವನದ ಸಾಧನೆಗಳು

  ಬ್ಯಾಟಿಂಗ್‌[೩೪] ಬೋಲಿಂಗ್[೩೫]
ಎದುರಾಳಿಗಳು ಪಂದ್ಯಗಳು ಓಟಗಳು ಸರಾಸರಿ ಗರಿಷ್ಠ ಸ್ಕೋರು ೧೦೦ / ೫೦ ಓಟಗಳು ವಿಕೆಟ್‌ಗಳು ಸರಾಸರಿ ಅತ್ಯುತ್ತಮ
  ಆಸ್ಟ್ರೇಲಿಯಾ ೧೫ ೪೭೬ ೩೧.೭೩ ೭೭ ೧೫–೩ - - - -
  ಬಾಂಗ್ಲಾದೇಶ ೮೪ ೮೪.೦೦ ೮೪* ೮.೧ - - - -
  ಕೆನಡಾ ೨೮ ೨೮.೦೦ ೨೮ ೦/೦ - - - -
  ಭಾರತ ೧೪ ೫೮೮ ೪೫.೨೩ ೧೨೬* ೧ / ೧೫ - - - -
  ಐರ್ಲೆಂಡ್‌ ೧೧೧ ೫೫.೫೦ ೮೦ ೮.೧ [39] ಎಂಬ ಶೀರ್ಷಿಕೆಯನ್ನು ಇರಿಸಲಾಗಿತ್ತು. ೧೯.೫೦ ೨.೦
  ಕೀನ್ಯಾ ೧೬ ೧೬.೦೦ ೧೬ ೦/೦ - - - -
  ನ್ಯೂ ಜೀಲ್ಯಾಂಡ್ ೧೫ ೩೭೯ ೨೫.೨೬ ೭೩ ೮.೧ - - - -
  ಪಾಕಿಸ್ತಾನ ೩೧೯ ೯–೧೬ ೮೮ ೧೪/−೨ ೧೦ - -
  ಸ್ಕಾಟ್ಲೆಂಡ್ ೬* ೦/೦ - - - -
  ದಕ್ಷಿಣ ಆಫ್ರಿಕಾ ೧೦ ೧೮೨ ೩೦.೩೩ ೭೩ ೮.೧ - - - -
  ಶ್ರೀಲಂಕಾ ೧೧ ೨೮೯ ೨೬.೨೭ ೭೭ ೮.೧ ೩೦ ೩೦ ೧ / ೧೫
  ವೆಸ್ಟ್ ಇಂಡೀಸ್ ೧೩೫ ೩೩.೭೫ ೫೬ ೧೪/−೨ - - - -
  ಜಿಂಬಾಬ್ವೆ ೧೬೩ ೪೦.೭೫ ೭೫ ೧೪/−೨ ೩,೯೪೦ ೩,೯೪೦
ಒಟ್ಟಾರೆ ೯೦ ೨.೦ ೩೫.೧೩ ೧೨೬* ೧ / ೧೫ ೮೮ ೧೪/−೨ ೩,೯೪೦

ಪ್ರಶಸ್ತಿಗಳು

ಬದಲಾಯಿಸಿ
ಪಂದ್ಯ ಶ್ರೇಷ್ಠ ಪ್ರಶಸ್ತಿಗಳು:

ಪ್ರಶಸ್ತಿಗಳು

ಬದಲಾಯಿಸಿ
ಪಂದ್ಯ ಶ್ರೇಷ್ಠ ಪ್ರಶಸ್ತಿಗಳು:
ದಿನಾಂಕ ಎದುರಾಳಿ ಕ್ರೀಡಾಂಗಣ ದಾಖಲೆ/ ಸ್ಕೋರ್ ವಿವರಗಳು
28 ನವೆಂಬರ್‌ 2004   ಜಿಂಬಾಬ್ವೆ ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ ಬ್ಯಾಟಿಂಗ್‌: 75
೮ ಸೆಪ್ಟೆಂಬರ್ ೨೦೦೬   ಪಾಕಿಸ್ತಾನ ಟ್ರೆಂಟ್ ಬ್ರಿಡ್ಜ್, ನಾಟಿಂಗ್ ಹ್ಯಾಂ ಬ್ಯಾಟಿಂಗ್‌ 86 *
೨೧ಆಗಸ್ಟ್‌ ೨೦೦೭   ಭಾರತ ರೋಸ್ ಬೌಲ್, ಸೌಥಾಂಪ್ಟನ್ ಬ್ಯಾಟಿಂಗ್‌ 126 *
೨೭ ಆಗಸ್ಟ್‌ ೨೦೦೭   ಭಾರತ ಎಡ್ಜ್‌ಬ್ಯಾಸ್ಟನ್‌, ಬರ್ಮಿಂಗ್‌ಹ್ಯಾಮ್‌ ಬ್ಯಾಟಿಂಗ್‌ 79
ಪೂರ್ವಾಧಿಕಾರಿ
Kevin Pietersen
Emerging Player of the Year
೨೦೦೬
ಉತ್ತರಾಧಿಕಾರಿ
Shaun Tait

ಟಿಪ್ಪಣಿಗಳು

ಬದಲಾಯಿಸಿ
  1. Westerby, John (14 June 2008). "Bell puts himself in contention for pot of gold". The Times. London. Archived from the original on 16 ಡಿಸೆಂಬರ್ 2019. Retrieved 4 May 2010.
  2. ೨.೦ ೨.೧ John Stern (2008). "Waiting for the punchline". Cricinfo.com. Retrieved 2008-02-23. {{cite web}}: Unknown parameter |month= ignored (help)
  3. ಇಂಗ್ಲೆಂಡ್ ನ ಪ್ರದರ್ಶನ ಕಾರ್ಯಕ್ರಮ ಒಳಾಂಶಗಳು Archived 2011-05-21 ವೇಬ್ಯಾಕ್ ಮೆಷಿನ್ ನಲ್ಲಿ., ECB, ೯ ಅಕ್ಟೋಬರ್ ೨೦೦೮ ರಂದು ಪುನಶ್ಚೇತನಗೊಳಿಸಲಾಯಿತು.
  4. ವಾರ್ವಿಕ್ ಷೈರ್ ಗಾಗಿ ಶತಕ ಮತ್ತು ಒಂದು ಇನಿಂಗ್ಸ್ ನಲ್ಲಿ 5 ವಿಕೆಟ್ ಗಳು, ಕ್ರಿಕೆಟ್ ಆರ್ಕೈವ್, ಪುನಃಸ್ಥಾಪನೆ ೯ ಅಕ್ಟೋಬರ್ ೨೦೦೮
  5. ವಾರ್ವಿಕ್ ಷೈರ್ ಗಾಗಿ ಪಂದ್ಯವೊಂದರ ಎರಡೂ ಇನಿಂಗ್ಸ್ ನಲ್ಲಿ ಶತಕ, ಕ್ರಿಕೆಟ್ ಆರ್ಕೈವ್, ಪುನಃಸ್ಥಾಪನೆ ೯ ಅಕ್ಟೋಬರ್ ೨೦೦೮
  6. ನಾಲ್ಕನೆಯ ಟೆಸ್ಟ್ ನಲ್ಲಿ ಆಡಲು ಇಯಾನ್ ಬೆಲ್ ಗೆ ಕರೆ, ಕ್ರಿಕಿನ್ಫೋ, ಪುನಃಸ್ಥಾಪನೆ ೯ ಅಕ್ಟೋಬರ್ ೨೦೦೮
  7. ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಾಲ್ಕನೆಯ ಟೆಸ್ಟ್ ಪಂದ್ಯ ಕ್ರಿಕಿನ್ಫೋ ಪುನಶ್ಚೇತನ ೧೧ ಮಾರ್ಚ್ ೨೦೦೮
  8. ಝಿಂಬಾಬ್ವೆ vs ಇಂಗ್ಲೆಂಡ್ ಪ್ರಥಮ ಓಡಿಐ ಕ್ರಿಕಿನ್ಫೋ ಪುನಶ್ಚೇತನ ೧೧ ಮಾರ್ಚ್ ೨೦೦೮
  9. Andrew Miller (2005-06-04). "Bell relieved to reach first Test century". Cricinfo.com. Retrieved 2008-02-23.
  10. "Highest averages at any point of time". Cricinfo. Retrieved ೧೭ June ೨೦೧೦. {{cite web}}: Check date values in: |accessdate= (help)
  11. 7 ನೆಯ ಓಡಿಐ vs ಭಾರತ (ಸ್ಕೋರುಪಟ್ಟಿ ಮತ್ತು ಪ್ರಶಸ್ತಿಗಳು) ಕ್ರಿಕಿನ್ಫೋ, ಪುನಶ್ಚೇತನ ೯ ಸೆಪ್ಟೆಂಬರ್ ೨೦೦೭
  12. ಪ್ರವಾಸ ಪಂದ್ಯ: ಶ್ರೀಲಂಕಾ ಕ್ರಿಕೆಟ್t XI v ಇಂಗ್ಲೆಂಡ್ BBC ನ್ಯೂಸ್, ಪುನಶ್ಚೇತನ ೨೮ ಸೆಪ್ಟೆಂಬರ್ ೨೦೦೭
  13. {1ಶ್ರೀಲಂಕಾ vs ಇಂಗ್ಲೆಂಡ್ ಮೊದಲನೆಯ ಟೆಸ್ಟ್{/1} BBC ನ್ಯೂಸ್ ಪುನಶ್ಚೇತನ ೫ ಡಿಸೆಂಬರ್ ೨೦೦೭
  14. ಶ್ರೀಲಂಕಾದಲ್ಲಿನ ಟೆಸ್ಟ್ ಸರಣಿಯ ಸರಾಸರಿಗಳು Archived 2011-03-20 ವೇಬ್ಯಾಕ್ ಮೆಷಿನ್ ನಲ್ಲಿ. BBC ನ್ಯೂಸ್ ಪುನಶ್ಚೇತನ ೨೨ ಡಿಸೆಂಬರ್ ೨೦೦೭
  15. ನ್ಯೂಝಿಲೆಂಡ್ vs ಇಂಗ್ಲೆಂಡ್ ಮೊದಲ ಟೆಸ್ಟ್ ಕ್ರಿಕಿನ್ಫೋ ಪುನಶ್ಚೇತನ ೧೧ ಮಾರ್ಚ್ ೨೦೦೮
  16. ನ್ಯೂಝಿಲೆಂಡ್ vs ಇಂಗ್ಲೆಂಡ್ ಎರಡನೆಯ ಟೆಸ್ಟ್ ಕ್ರಿಕಿನ್ಫೋ ಪುನಶ್ಚೇತನ ೨೪ ಮಾರ್ಚ್ ೨೦೦೮
  17. ಸ್ಟ್ರಾಸ್ ಮತ್ತು ಬೆಲ್ ರಿಂದ ನ್ಯೂಝಿಲೆಂಡ್ ಗೆ ಗೋರಿ' ಕ್ರಿಕಿನ್ಫೋ, ಪುನಶ್ಚೇತನ ೨೪ ಮಾರ್ಚ್ ೨೦೦೮
  18. ನ್ಯೂಝಿಲೆಂಡ್ vs ಇಂಗ್ಲೆಂಡ್ ಮೂರನೆಯ ಟೆಸ್ಟ್' BBC ನ್ಯೂಸ್ ಪುನಶ್ಚೇತನ ೨೪ ಮಾರ್ಚ್ ೨೦೦೮
  19. ನ್ಯೂಝಿಲೆಂಡ್ ವಿರುದ್ಧದ ಸರಾಸರಿಗಳು (h) 2008 Archived 2008-12-19 ವೇಬ್ಯಾಕ್ ಮೆಷಿನ್ ನಲ್ಲಿ. from BBC ನ್ಯೂಸ್ ಪುನಶ್ಚೇತನ ೧೩ ಜೂನ್ ೨೦೦೮
  20. ಬೆಲ್ ರಿಂದ ಪ್ರೇರೇಪಿಸಲ್ಪಟ್ಟ ಇಂಗ್ಲೆಂಡ್ ಗೆ ಭಾರಿ ಜಯ ಇಂದ BBCನ್ಯೂಸ್ ಪುನಶ್ಚೇತನ ೧೩ ಜೂನ್ ೨೦೦೮
  21. ನ್ಯಾಟ್ ವೆಸ್ಟ್ ಅಂತರರಾಷ್ಟ್ರೀಯ ಏಕದಿವಸೀಯ ಪಂದ್ಯ ಸರಣಿ: ಇಂಗ್ಲೆಂಡ್ v ನ್ಯೂಝಿಲೆಂಡ್ - 15-06-2008 ರಿವರ್ ಸೈಡ್ ನಲ್ಲಿ BBC ನ್ಯೂಸ್ ನಿಂದ ಪುನಶ್ಚೇತನ ೨೫ ಜೂನ್ ೨೦೦೮
  22. ನ್ಯಾಟ್ ವೆಸ್ಟ್ ಅಂತರರಾಷ್ಟ್ರೀಯ ಏಕದಿವಸೀಯ ಪಂದ್ಯ ಸರಣಿ: ಇಂಗ್ಲೆಂಡ್ v ನ್ಯೂಝಿಲೆಂಡ್- 18-06-2008 ಎಡ್ಗ್ ಬಾಸ್ಟನ್ ನಲ್ಲಿ BBC ನ್ಯೂಸ್ ನಿಂದ, ಪುನಶ್ಚೇತನ ೨೫ ಜೂನ್ ೨೦೦೮
  23. }ನ್ಯಾಟ್ ವೆಸ್ಟ್ ಅಂತರರಾಷ್ಟ್ರೀಯ ಏಕದಿವಸೀಯ ಪಂದ್ಯ ಸರಣಿ: ಇಂಗ್ಲೆಂಡ್ v ನ್ಯೂಝಿಲೆಂಡ್ - ೨೧-೦೬-೨೦೦೮ ಬ್ರಿಸ್ಟಾಲ್ ನಲ್ಲಿBBC ನ್ಯೂಸ್ ನಿಂದ, ಪುನಶ್ಚೇತನ ೨೫ ಜೂನ್ ೨೦೦೮
  24. }ನ್ಯಾಟ್ ವೆಸ್ಟ್ ಅಂತರರಾಷ್ಟ್ರೀಯ ಏಕದಿವಸೀಯ ಪಂದ್ಯ ಸರಣಿ: ಇಂಗ್ಲೆಂಡ್ v ನ್ಯೂಝಿಲೆಂಡ್ - ೨೫-೦೬-೨೦೦೮ ಬ್ರಿಟ್ ಓವಲ್ Archived 2009-05-19 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ BBC ನ್ಯೂಸ್ ನಿಂದ, ಪುನಶ್ಚೇತನ ೨೫ ಜೂನ್ ೨೦೦೮
  25. ಇಂಗ್ಲೆಂಡ್ v ದಕ್ಷಿಣ ಆಫ್ರಿಕ ಮೊದಲ ಟೆಸ್ಟ್: ದಕ್ಷಿಣ ಆಫ್ರಿಕದ ಮೇಲೆ ಒತ್ತಡ ಹೇರಿದ ಅಮೋಘ ಬೆಲ್ BBC ನ್ಯೂಸ್ ನಿಂದ, ಪುನಶ್ಚೇತನ ೧೧ ಜುಲೈ ೨೦೦೮
  26. ಕ್ರಿಕಿನ್ಫೋ - 3 ನೆಯ ಟೆಸ್ಟ್: Eಇಂಗ್ಲೆಂಡ್ v ದಕ್ಷಿಣ ಆಫ್ರಿಕ ಬರ್ಮಿಂಗ್ ಹ್ಯಾಂನಲ್ಲಿ, ಜುಲೈ 30-ಆಗಸ್ಟ್ 2, 2008 ಕ್ರಿಕಿನ್ಫೋದಿಂದ, ಪುನಶ್ಚೇತನ ೧೮ ಆಗಸ್ಟ್ ೨೦೦೮
  27. - ವಾನ್ ಮತ್ತು ಹಾರ್ಮೀಸನ್ ರನ್ನು ಆಶಸ್ ತರಬೇತಿ ತಂಡದಿಂದ ಕೈಬಿಡಲಾಗಿದೆ, 22 ಜೂನ್, 2009 ಕ್ರಿಕಿನ್ಫೋದಿಂದ, ಪುನಶ್ಚೇತನ ೨೨ ಜೂನ್ ೨೦೦೯
  28. Selvey, Mike (9 August 2009). "Incompetent England cannot hide behind the camouflage against". The Guardian. London. Retrieved 17 June 2010.
  29. "Australia in the British Isles 2009". Cricket Archive. Retrieved 17 June 2010.
  30. "Vote of confidence for Bell". Sky Sports. Retrieved ೧೭ June ೨೦೧೦. {{cite web}}: Check date values in: |accessdate= (help)
  31. "The List: The highest batting average against a particular team or at a particular venue". Cricinfo. Retrieved ೧೭ June ೨೦೧೦. {{cite web}}: Check date values in: |accessdate= (help)
  32. "Statsguru - IR Bell - Test Batting - Career summary". Cricinfo. Retrieved 2009-12-18.
  33. "Statsguru - IR Bell - Test Bowling - Career summary". Cricinfo. Retrieved 2009-12-18.
  34. "Statsguru - IR Bell - ODI Batting - Career summary". Cricinfo. Retrieved 2011-02-09.
  35. "Statsguru - IR Bell - ODI Bowling - Career summary". Cricinfo. Retrieved 2010-03-26.

ಬಾಹ್ಯ ಕೊಂಡಿಗಳು‌

ಬದಲಾಯಿಸಿ