ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ
ಶ್ರೇಯಾಂಕ ತಂಡ ಪಂದ್ಯ ಅಂಕ ರೆಟಿಂಗ್
1  ಭಾರತ 35 4208 120
2  ಆಸ್ಟ್ರೇಲಿಯಾ 44 4797 109
3  ದಕ್ಷಿಣ ಆಫ್ರಿಕಾ 29 2944 102
4  ಇಂಗ್ಲೆಂಡ್ 50 5071 101
5  ಪಾಕಿಸ್ತಾನ 36 3494 97
6  ನ್ಯೂ ಜೀಲ್ಯಾಂಡ್ 38 3666 96
7  ಶ್ರೀಲಂಕಾ 35 3370 96
8  ವೆಸ್ಟ್ ಇಂಡೀಸ್ 30 2077 69
9  ಬಾಂಗ್ಲಾದೇಶ 15 978 65
10  ಜಿಂಬಾಬ್ವೆ 10 48 5
Reference: ICC Rankings, 7 January 2017
"Matches" is no. matches + no. series played in the 12-24 months since the May before last, plus half the number in the 24 months before that.

ಟೆಸ್ಟ್ ಕ್ರಿಕೆಟ್ ಕ್ರಿಕೆಟ್ ಕ್ರೀಡೆಯ ಅತಿ ದೀರ್ಘ ಪ್ರಕಾರ. ಸಾಮಾನ್ಯವಾಗಿ ಈ ಕ್ರೀಡೆಯಲ್ಲಿ ಇದನ್ನು ಆಟವಾಡುವ ಸಾಮರ್ಥ್ಯದ ಕಟ್ಟಕಡೆಯ ಪರೀಕ್ಷೆಯೆಂದು ಪರಿಗಣಿಸಲಾಗುತ್ತದೆ. "ಟೆಸ್ಟ್" ಎಂಬ ಹೆಸರು ಈ ಪಂದ್ಯಗಳು ಒಳಗೊಂಡಿರುವ ತಂಡಗಳ ನಡುವಣ "ಶಕ್ತಿ ಮತ್ತು ಸಾಮರ್ಥ್ಯದ ಪರೀಕ್ಷೆ (ಟೆಸ್ಟ್)" ಆಗಿರುವ ಕಲ್ಪನೆಯಿಂದ ಉದ್ಭವಿಸಿರಬಹುದು. ಟೆಸ್ಟ್ ಪಂದ್ಯಗಳು ಗರಿಷ್ಟ ೫ ದಿನಗಳವರೆಗೆ ಒಟ್ಟು ನಾಲ್ಕು ಇನ್ನಿಂಗ್ಸ್ ಗಳಂತೆ "ಟೆಸ್ಟ್ ಸ್ಥಾನಮಾನ"ವಿರುವ ಎರಡು ರಾಷ್ಟೀಯ ಪ್ರತಿನಿಧಿ ತಂಡಗಳ ನಡುವೆ ಆಡಲಾಗುತ್ತದೆ. ಇದನ್ನು ನಿರ್ಧರಿಸುವುದು ಮಾತ್ರ "ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ". ಒಂದು ತಂಡಗಳಲ್ಲಿ ಗರಿಷ್ಟ ೧೧ ಆಟಗಾರರು ಆಡಬಹುದು.

ಈ ಟೆಸ್ಟ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ಜನವರಿ 2005 ರಲ್ಲಿ ನಡೆದದ್ದು. ಕಪ್ಪು ಷರಾಯಿಗಳನ್ನು ಧರಿಸಿದ್ದು ಅಂಪೈರ್ ಗಳು. ಟೆಸ್ಟ್ ಕ್ರಿಕೆಟ್ ಪಂದ್ಯ ಸಾಂಪ್ರದಾಯಿಕ ಬಿಳಿ ಉಡುಗೆ ಧರಿಸಿ ಮತ್ತು ಒಂದು ಕೆಂಪು ಚೆಂಡಿನೊಂದಿಗೆ ಆಡಲಾಗುತ್ತದೆ.

ಮೊದಲ ಅಧಿಕೃತವಾಗಿ ಮಾನ್ಯತೆ ಪಡೆದ ಟೆಸ್ಟ್ ಪಂದ್ಯ ಮಾರ್ಚ್ ೧೮೭೭ ೧೫ ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG)ನಲ್ಲಿ ನಡೆಯಿತು. ಅದರಲ್ಲಿ ಆಸ್ಟ್ರೇಲಿಯಾ ೪೫ ರನ್ ಗಳ ಜಯ ಸಾಧಿಸಿತು.[] ಅದೇ ಸರಣಿಯ ಎರಡನೇ ಪಂದ್ಯ (ಸಹ MCG ನಲ್ಲಿ)ದಲ್ಲಿ ಇಂಗ್ಲೆಂಡ್ ತಂಡ ನಾಲ್ಕು ವಿಕೆಟ್ಗಳ ಜಯ ಸಾಧಿಸಿ ಸರಣಿಯನ್ನು ೧-೧ ರಂತೆ ಸಮಬಲಗೊಳಿಸಿದರು.[] ಆದಾಗ್ಯೂ ಇದು ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಅಲ್ಲ. ಮೊದಲ ಪಂದ್ಯ ಸೆಪ್ಟೆಂಬರ್ ೧೮೪೪ , ೨೪ ಮತ್ತು ೨೫ ರಂದು ಕೆನಡಾ, ಯುನೈಟೆಡ್ ಸ್ಟೇಟ್ಸ್ ನಡುವೆ ಆಡಲಾಯಿತು.[]

೧೦೦ ನೆ ವರ್ಷಾಚರಣೆಯ ಟೆಸ್ಟ್ ಪಂದ್ಯ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮಾರ್ಚ್ ೧೯೭೭ ,೧೨ ರಿಂದ ೧೭ ರವರಗೆ ಮೆಲ್ಬೋರ್ನ್ ನಲ್ಲಿ ನಡೆಯಿತು. ಈ ಪಂದ್ಯದಲ್ಲಿ, ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡವನ್ನು ೧೮೭೭ ರಲ್ಲಿ ನಡೆದ ಪಂದ್ಯದಂತೆ ಇಲ್ಲೂ ಕೂಡ ೪೫ ರನ್ ಗಳ ಅಂತರದಲ್ಲಿ ಸೋಲಿಸಿದರು.[]

ಟೆಸ್ಟ್ ನ ಸ್ಥಿತಿಗತಿ

ಬದಲಾಯಿಸಿ

ಟೆಸ್ಟ್ ಮ್ಯಾಚ್ ಗಳು ಮೊದಲದರ್ಜೆ ಕ್ರಿಕೆಟ್ ನ ಉಪವಿಭಾಗಗಳಾಗಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿರ್ಧರಿಸಿದ "ಟೆಸ್ಟ್ ಸ್ಥಾನಮಾನ" ದೊಂದಿಗೆ ರಾಷ್ಟ್ರೀಯ ಪ್ರತಿನಿಧಿ ತಂಡಗಳ ನಡುವೆ ಟೆಸ್ಟ್ ಪಂದ್ಯ ಆಡಿಸಲಾಗುತ್ತದೆ.ಜಿಂಬಾಬ್ವೆ ತಂಡ ತನ್ನ ಕಳಪೆ ಪ್ರದರ್ಶನದಿಂದ ಟೆಸ್ಟ್ ಸ್ಥಾನಮಾನವನ್ನು ಕಳೆದುಕೊಂಡಿತು. ನಂತರ ಆಗಸ್ಟ್ ೪ ೨೦೧೧ ರಂದು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯ ಆಡುವ ಮೂಲಕ ಟೆಸ್ಟ್ ಗೆ ಹಿಂತಿರುಗಿದರು.[]

೧೯೭೦ ರಲ್ಲಿ, ಐದು ಪಂದ್ಯಗಳ "ಟೆಸ್ಟ್ ಸರಣಿ" ಇಂಗ್ಲೆಂಡ್ ನಲ್ಲಿ ಇಂಗ್ಲೆಂಡ್ ಮತ್ತು ವಿಶ್ವ ೧೧ ನಡುವೆ ಆಡಲಾಯಿತು.ಮೂಲತಃ ಈ ಟೆಸ್ಟ್ ಪಂದ್ಯಗಳ ಸರಣಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಬೇಕಾಗಿತ್ತು, ಆದರೆ ದಕ್ಷಿಣ ಆಫ್ರಿಕಾ ತಂಡವನ್ನು ವರ್ಣಭೇದ ನೀತಿಯ ಕಾರಣ ಹೇಳಿ ಅವರ ಸರ್ಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತುಗೊಳಿಸಿದರು. ಅನಂತರ ಈ ಸರಣಿಯನ್ನು ತಿದ್ದುಪಡಿ ಮಾಡಲಾಯಿತು.ಆರಂಭದಲ್ಲಿ ಇಂತಹ ಸರಣಿಯನ್ನು (ಟೆಸ್ಟ್ ಪಂದ್ಯಗಳ ಮಾಹಿತಿ ಒಳಗೊಂಡಿರುವ ವಿಸ್ಡನ್ ಪುಸ್ತಕ ಆಧರಿಸಿ) ಅನಧಿಕೃತ ಟೆಸ್ಟ್ ಗಳ ಗುಂಪಿಗೆ ಸೇರಿಸಿದರು. ನಂತರ ಅದನ್ನು ಹಿಂತೆಗೆದುಕೊಂಡು, ಅಧಿಕೃತ ಟೆಸ್ಟ್ ಪಂದ್ಯಗಳು ಕೇವಲ ರಾಷ್ಟ್ರ ರಾಷ್ಟ್ರಗಳ ನಡುವೆ ನಡೆಯಬೇಕೆಂಬ ತತ್ವವನ್ನು ಸ್ಥಾಪಿಸಲಾಯಿತು.೧೯೭೧/೭೨ರಲ್ಲಿ ಆಸ್ಟ್ರೇಲಿಯಾದಲ್ಲಿ , ಆಸ್ಟ್ರೇಲಿಯಾ ಮತ್ತು ವಿಶ್ವ ೧೧ ನಡುವೆ ಆಡಿದ "ಟೆಸ್ಟ್ ಪಂದ್ಯಗಳು" ಟೆಸ್ಟ್ ಸ್ಥಾನಮಾನವನ್ನು ಹೊಂದಿಲ್ಲ.

ಇತಿಹಾಸ

ಬದಲಾಯಿಸಿ

೧೭೮೯–೧೮೮೩

ಬದಲಾಯಿಸಿ

೧೭೮೯ ರಲ್ಲಿ ಡಾರ್ಸೆಟ್ ನ ೩ ನೇ ದಳಪತಿ ಜಾನ್ ಸ್ಯಾಕ್ವಿಲ್ಲೆ ಸಂಘಟಿಸಿದ ಫ್ರಾನ್ಸ್ ಪ್ರವಾಸದಲ್ಲಿ ಪ್ರಮುಖ ಇಂಗ್ಲೀಷ್ ಕ್ರಿಕೆಟ್ ಆಟಗಾರರು ತಮ್ಮ ಮೊದಲ ವಿದೇಶಿ ಪ್ರವಾಸ ಮಾಡಿದರು.ಆದರೆ,ಫ್ರೆಂಚ್ ಕ್ರಾಂತಿಯ ಕಾರಣ ಈ ಪ್ರವಾಸ ಬಲುಬೇಗನೆ ಕೈಬಿಡಲಾಯಿತು.೧೮ ನೇ ಶತಮಾನದಲ್ಲಿ ಆಡಲು ಪ್ರಾರಂಭಿಸಿದ ಇಂಗ್ಲೆಂಡ್ ತಂಡ ಮೊದಲು ನಿಜವಾದ ಪ್ರಾತಿನಿಧಿಕತೆ ಹೊಂದಿರಲಿಲ್ಲ. ೧೮೪೬ ರಲ್ಲಿ ವಿಲಿಯಂ ಕ್ಲಾರ್ಕೆ ಎನ್ನುವವನು ಇಂಗ್ಲೆಂಡ್ ನ ೧೧ರ ಬಳಗವನ್ನು ರೂಪಿಸಿ ಮತ್ತು ಈ ತಂಡ ಮೊದಲ ದೇಶದ ಪ್ರತಿನಿಧ್ಯ ತಂಡವಾಗಿ ಪ್ರವಾಸ ಮಾಡಲಾಯಿತು.೧೮೫೨ ರಲ್ಲಿ ಜಿಮ್ಮಿ ಡೀನ್ ಮತ್ತು ಜಾನ್ ವಿಸ್ಡೆನ್ , ಯುನೈಟೆಡ್ ಆಲ್ ಇಂಗ್ಲೆಂಡ್ ಇಲೆವೆನ್ ಎಂಬ ಪ್ರತಿಸ್ಪರ್ಧಿ ತಂಡವನ್ನು ರಚಿಸಿದರು.ವಿಸ್ಡೆನ್ ತಂಡ ಮತ್ತು ಕ್ಲಾರ್ಕ್ ತಂಡದ ನಡುವೆ ನಡೆದ ಪಂದ್ಯಗಳು ಕ್ರಿಕೆಟ್ ವರ್ಷದ ಮುಖ್ಯಾಂಶವಾಯಿತು.ಈ ಎರಡು ತಂಡದ ಪ್ರಮುಖ ೧೨ ಆಟಗಾರರನ್ನೊಳಗೊಂಡ ಒಂದು ತಂಡ ರಚಿಸಿ ೧೮೫೯ ರಲ್ಲಿ ಉತ್ತರ ಅಮೇರಿಕಾ ಪ್ರವಾಸ ಮಾಡಿದರು. ಈ ಪ್ರವಾಸ ಅತ್ಯಂತ ಯಶಸ್ವಿಯಾಯಿತು.೧೮೬೧ ರ ಹೊತ್ತಿಗೆ ಈ ತಂಡ ಯುನೈಟೆಡ್ ಸ್ಟೇಟ್ ಪ್ರವಾಸಕ್ಕೆ ಹೋಗಬೇಕಾಗಿ ಬಂತು. ಆದರೆ ಆ ದೇಶದಲ್ಲಿ ಸಿವಿಲ್ ವಾರ್ ನ ಹಾವಳಿಯಿಂದಾಗಿ ಈ ತಂಡ ಆಸ್ಟ್ರೇಲಿಯಾದ ಕಡೆ ಮುಖ ಮಾಡಿತು.ನಂತರ ಅವರು ೧೮೬೩/೬೪ ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಎರಡೂ ದೇಶಗಳಿಗೆ ಭೇಟಿ ನೀಡಿದರು.

ಉಲ್ಲೇಖಗಳು

ಬದಲಾಯಿಸಿ