ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Council - ICC) ಕ್ರಿಕೆಟ್ ಕ್ರೀಡೆಯನ್ನು ನಿಯಂತ್ರಿಸುವ ಅಂತರರಾಷ್ಟ್ರೀಯ ಸಂಘ. ಇದನ್ನು ೧೯೦೯ರಲ್ಲಿ ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ ಎಂಬ ಹೆಸರಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕದ ಪ್ರತಿನಿಧಿಗಳು ಸಂಸ್ಥಾಪಿಸಿದರು. ೧೯೬೫ರಲ್ಲಿ ಇದು ಇಂಟರ್‌ನ್ಯಾಷನಲ್ ಕ್ರಿಕೆಟ್ ಕಾನ್ಫರೆನ್ಸ್ ಎಂದು ಮರುನಾಮಕರಣಗೊಂಡು ಮುಂದೆ ೧೯೮೯ರಲ್ಲಿ ಪ್ರಸಕ್ತ ಹೆಸರನ್ನು ಪಡೆಯಿತು. ಈ ಮಂಡಳಿಗೆ ಪ್ರಸಕ್ತವಾಗಿ ೧೦೧ ಸದಸ್ಯ ದೇಶಗಳು ಸೇರಿದ್ದು, ಇವುಗಳಲ್ಲಿ ೧೦ ಟೆಸ್ಟ್ ಕ್ರಿಕೆಟ್ ಆಡುವ ಸಂಪೂರ್ಣ ಸದಸ್ಯರಿದ್ದಾರೆ.
ಸಂಕ್ಷಿಪ್ತ ಹೆಸರು | ಐಸಿಸಿ |
---|---|
ಧ್ಯೇಯವಾಕ್ಯ | ಗ್ರೇಟ್ ಸ್ಪೋರ್ಟ್ ಗ್ರೇಟ್ ಸ್ಪಿರಿಟ್ |
ಸ್ಥಾಪನೆ | 15 ಜೂನ್ 1909 |
ಶೈಲಿ | ರಾಷ್ಟ್ರೀಯ ಸಂಘಗಳ ಒಕ್ಕೂಟ |
ಪ್ರಧಾನ ಕಚೇರಿ | ದುಬೈ, ಸಂಯುಕ್ತ ಅರಬ್ ಸಂಸ್ಥಾನ |
Membership | ೧೦೬ ಸದಸ್ಯ ರಾಷ್ಟ್ರಗಳು |
ಅಧಿಕೃತ ಭಾಷೆs | ಆಂಗ್ಲ |
ಶಶಾಂಕ್ ಮನೋಹರ್ | |
ಜಹೀರ್ ಅಬ್ಬಾಸ್ | |
ಸಿಇಒ | ಡೇವಿಡ್ ರಿಚರ್ಡ್ಸನ್ |
ಅಧಿಕೃತ ಜಾಲತಾಣ | www |