ಅಪೌಷ್ಟಿಕತೆ ಎಂಬುದು ಸಾಕಷ್ಟಿಲ್ಲದ, ವಿಪರೀತದ ಅಥವಾ ಅಸಮತೋಲನದ ಪ್ರಮಾಣದಲ್ಲಿ ಪೌಷ್ಟಿಕದ್ರವ್ಯಗಳ ಸೇವನೆಯಾಗಿರುತ್ತದೆ.[][] ಆಹಾರದಲ್ಲಿ ಯಾವ ಯಾವ ಪೌಷ್ಟಿಕದ್ರವ್ಯಗಳು ಕಡಿಮೆಯಾಗಿವೆ ಅಥವಾ ಹೆಚ್ಚಾಗಿವೆ ಎಂಬುದನ್ನು ಆಧರಿಸಿ ಅನೇಕ ಬೇರೆಬೇರೆ ರೀತಿಯ ಪೋಷಣಶಾಸ್ತ್ರೀಯ ವ್ಯಾಧಿಗಳು ಉಂಟಾಗಬಹುದಾಗಿರುತ್ತದೆ. ವಿಶ್ವದ ಸಾರ್ವಜನಿಕರ ಆರೋಗ್ಯಕ್ಕೆ ಏಕೈಕ ಅತ್ಯಂತ ಮಾರಣಾಂತಿಕ ಅಪಾಯ/ಬೆದರಿಕೆ ಎಂದು ವಿಶ್ವ ಆರೋಗ್ಯ ಸಂಘಟನೆಯು ಅಪೌಷ್ಟಿಕತೆಯೆಡೆಗೆ ಬೊಟ್ಟುಮಾಡುತ್ತದೆ.[] ಪೋಷಣೆಯನ್ನು ಸುಧಾರಿಸುವುದು ಇದಕ್ಕೆ ಬಹು ಪ್ರಭಾವಿಯಾದ ಚಿಕಿತ್ಸೆಯೆಂದು ವ್ಯಾಪಕ ಭಾವನೆ ಇದೆ.[][] ಕಡಲೆಕಾಯಿ ಬೆಣ್ಣೆಯಂತಹಾ ಸಾರಭರಿತಗೊಳಿಸಿದ ಸ್ಯಾಷೆ/ಕಿರುಸಂಚಿಗಳಲ್ಲಿರುವ ಪುಡಿಗಳ ಮೂಲಕ ಅಥವಾ ನೇರವಾಗಿ ಪೂರಕಾಂಶಗಳ ಮೂಲಕ ತುರ್ತು ಚಿಕಿತ್ಸೆಗಳಲ್ಲಿ ಕೊರತೆಯಾದ ಸೂಕ್ಷ್ಮಪೌಷ್ಟಿಕದ್ರವ್ಯಗಳನ್ನು ಪೂರೈಸುವುದೂ ಸೇರಿದೆ.[][] ಸಾರ್ವಜನಿಕ ನೆರವು ಸಮುದಾಯಗಳು ಬಳಸುವ ದುರ್ಭಿಕ್ಷ ಪರಿಹಾರ ಸೂತ್ರಗಳಲ್ಲಿ ಇತ್ತೀಚೆಗೆ ಅನೇಕ ವೇಳೆ ಕಾನೂನು ಪ್ರಕಾರ ಕಡ್ಡಾಯಗೊಂಡಿರುವಂತೆ ಸಾಗಣೆ ವೆಚ್ಚಕ್ಕೆ ಹಣವು ವ್ಯರ್ಥವಾಗುವುದರಿಂದ ದಾನಿ ರಾಷ್ಟ್ರಗಳಿಂದ ಆಹಾರವನ್ನು ಕೊಂಡುಕೊಳ್ಳುವ ಬದಲಿಗೆ ಹಸಿದವರಿಗೆ ಅವರು ನೇರವಾಗಿ ಸ್ಥಳೀಯ ಕೃಷಿಕರಿಗೆ ಪಾವತಿಸಿ ಆಹಾರ ಪಡೆದುಕೊಳ್ಳುವಂತೆ ನಗದು ಇಲ್ಲವೇ ನಗದು ಸಲ್ಲಿಕೆ ಹುಂಡಿಗಳನ್ನು ದೇಣಿಗೆಯಾಗಿ ನೀಡಲು ಹೆಚ್ಚಾಗಿ ಪ್ರೋತ್ಸಾಹಿಸಲಾಗುತ್ತಿದೆ.[][] ರಾಸಾಯನಿಕ ಗೊಬ್ಬರಗಳು ಹಾಗೂ ನೀರಾವರಿಗಳಂತಹಾ ಆಧುನಿಕ ಕೃಷಿಯು ಬಳಕೆಯಲ್ಲಿಲ್ಲದ ಪ್ರದೇಶಗಳಲ್ಲಿ ಅದರ ಮೇಲೆ ಹಣ ಹೂಡುವುದು ಒಂದು ದೀರ್ಘಕಾಲೀನ ಪರಿಹಾರವಾಗಿದ್ದು, ಇದರಿಂದಾಗಿಯೇ ಬಹುಪಾಲು ಅಭಿವೃದ್ಧಿ ಹೊಂದಿದ ವಿಶ್ವದಲ್ಲಿ ಹಸಿವಿನ ಸಮಸ್ಯೆಯು ನೀಗಿದೆ.[] ಆದಾಗ್ಯೂ, ವಿಶ್ವ ಬ್ಯಾಂಕ್‌‌‌ನ ಕಠಿಣ ನಿಯಮಗಳಿಂದಾಗಿ ಸರ್ಕಾರದಿಂದ ರೈತರಿಗೆ ನೀಡಲಾಗುವ ಸಹಾಯಧನಗಳು ನಿಯಂತ್ರಿತವಾಗುತ್ತಿದ್ದರೆ ರಾಸಾಯನಿಕ ಗೊಬ್ಬರಗಳ ಬಳಕೆಯ ಪಸರಿಸುವಿಕೆಗೆ ಕೆಲ ಪರಿಸರಸಂರಕ್ಷಣಾ ಗುಂಪುಗಳು ಅಡ್ಡಿಪಡಿಸುತ್ತಿವೆ.[೧೦][೧೧]

Malnutrition
Classification and external resources
The orange ribbon—an awareness ribbon for malnutrition.
ICD-9263.9
eMedicineped/1360
MeSHD044342

ಪರಿಣಾಮಗಳು

ಬದಲಾಯಿಸಿ

ಮರಣಪ್ರಮಾಣ/ಸಾವಿನ ದರ

ಬದಲಾಯಿಸಿ

ಜೀನ್‌ ಜೀಯೆಗ್ಲರ್‌‌ರ ಪ್ರಕಾರ (2000ನೇ ಇಸವಿಯಿಂದ ಮಾರ್ಚ್‌ 2008ರವರೆಗೆ ಆಹಾರದ ಹಕ್ಕಿನ ಸಂಯುಕ್ತ ರಾಷ್ಟ್ರ ಸಂಘದ ವಿಶೇಷ ಕಾರ್ಯಕಲಾಪ ವರದಿಗಾರರು), ಅಪೌಷ್ಟಿಕತೆಯಿಂದ ಉಂಟಾದ ಮರಣಪ್ರಮಾಣ/ಸಾವಿನ ದರವು 2006ರಲ್ಲಿನ ಒಟ್ಟಾರೆ ಮರಣಪ್ರಮಾಣ/ಸಾವಿನ ದರದ 58%ರಷ್ಟಿದೆ : "ಪ್ರತಿ ವರ್ಷ ವಿಶ್ವದಲ್ಲಿ, ಎಲ್ಲಾ ರೀತಿಯ ಕಾರಣಗಳೂ ಸೇರಿ ಸರಿಸುಮಾರು 62 ದಶಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ವಿಶ್ವದಾದ್ಯಂತ ಹನ್ನೆರಡು ಜನರಲ್ಲಿ ಒಬ್ಬರು ಪೌಷ್ಟಿಕತೆಯ ಕೊರತೆ ಹೊಂದಿರುವವರಾಗಿರುತ್ತಾರೆ.[೧೨] 36 ದಶಲಕ್ಷಗಳಿಗಿಂತ ಹೆಚ್ಚಿನ ಜನರು ಹಸಿವಿನಿಂದ ಅಥವಾ ಸೂಕ್ಷ್ಮಪೌಷ್ಟಿಕದ್ರವ್ಯಗಳಲ್ಲಿನ ಕೊರತೆಗಳಿಂದಾಗಿ ಉಂಟಾಗುವ ಕಾಯಿಲೆಗಳಿಂದಾಗಿ 2006ರಲ್ಲಿ ಮರಣಿಸಿದ್ದರು".[೧೩] ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ, ಪ್ರಸ್ತುತ ಮಕ್ಕಳ ಮರಣಪ್ರಮಾಣದ ಅರ್ಧದಷ್ಟು ಪ್ರಕರಣಗಳಲ್ಲಿ ಅಪೌಷ್ಟಿಕತೆಯು ಪ್ರಮುಖ ಕಾರಣವಾಗಿದೆ.[] ಕೊರತೆತೂಕದ ಜನನಗಳು ಹಾಗೂ ಅಂತರ-ಗರ್ಭಕೋಶೀಯ ಬೆಳವಣಿಗೆಯ ಪರಿಮಿತಿಗಳು ಪ್ರತಿ ವರ್ಷ 2.2 ದಶಲಕ್ಷ ಮಕ್ಕಳ ಸಾವಿಗೆ ಕಾರಣವಾಗುತ್ತಿವೆ. ಇನ್ನೂ 1.4 ದಶಲಕ್ಷ ಮಕ್ಕಳ ಸಾವಿಗೆ ಎದೆಹಾಲು ಕುಡಿಸುವಿಕೆಯೇ ಇರದ ಅಥವಾ ಕನಿಷ್ಟ ಪ್ರಮಾಣದಲ್ಲಿ ಕುಡಿಸುತ್ತಿರುವ ಸ್ಥಿತಿ ಕಾರಣವಾಗಿರುತ್ತದೆ. ಇತರೆ ಕೊರತೆಗಳು ಉದಾಹರಣೆಗೆ A ಜೀವಸತ್ವ ಅಥವಾ ಸತುವುಗಳ ಕೊರತೆಯಂತಹವು 1 ದಶಲಕ್ಷ ಮಕ್ಕಳ ಸಾವಿಗೆ ಕಾರಣವಾಗುತ್ತಿವೆ. ದ ಲ್ಯಾನ್ಸೆಟ್‌‌ನ ಪ್ರಕಾರ, ಮೊದಲೆರಡು ವರ್ಷಗಳಲ್ಲಿನ ಅಪೌಷ್ಟಿಕತೆಯ ಸಮಸ್ಯೆಯನ್ನು ಎಂದಿಗೂ ಸರಿಪಡಿಸಲಾಗುವುದಿಲ್ಲ. ಪೌಷ್ಟಿಕತೆರಹಿತ ಮಕ್ಕಳು ಕನಿಷ್ಟ ಆರೋಗ್ಯ ಹಾಗೂ ಕೆಳಮಟ್ಟದ ಶೈಕ್ಷಣಿಕ ಸಾಧನೆಗಳೊಂದಿಗೆ ಬೆಳೆಯುತ್ತಾರೆ. ಅಂತಹವರುಗಳಿಗೇ ಹುಟ್ಟಿದ ಮಕ್ಕಳು ಕೂಡಾ ಕೃಶರಾಗುವ ಪ್ರವೃತ್ತಿ ಹೊಂದಿರುತ್ತಾರೆ. ಅಪೌಷ್ಟಿಕತೆಯನ್ನು ಈ ಮುನ್ನಾ ದಡಾರ/ದಢಾರ, ಶ್ವಾಸಕೋಸದ ಉರಿಯೂತ/ನ್ಯುಮೋನಿಯಾ ಹಾಗೂ ಅತಿಸಾರ/ಭೇದಿಗಳಂತಹಾ ಕಾಯಿಲೆಗಳ ಸಮಸ್ಯೆ/ಲಕ್ಷಣಗಳನ್ನು ಉಲ್ಬಣಗೊಳಿಸುವಂತಹಾ ಆರೋಗ್ಯ ಸಮಸ್ಯೆಯೆಂದು ಭಾವಿಸಲಾಗಿತ್ತು. ಆದರೆ ಅಪೌಷ್ಟಿಕತೆಯು ವಾಸ್ತವವಾಗಿ ಕಾಯಿಲೆಗಳನ್ನೂ ಉಂಟುಮಾಡುತ್ತದೆ, ಮಾತ್ರವಲ್ಲ ಸ್ವತಃ ತಾನೇ ಮಾರಣಾಂತಿಕ ಪರಿಣಾಮವನ್ನೂ ಬೀರಬಲ್ಲದಾಗಿದೆ.[]

ಅನಾರೋಗ್ಯ

ಬದಲಾಯಿಸಿ

ಅಪೌಷ್ಟಿಕತೆಯು ಸೋಂಕಿನ ಹಾಗೂ ಸೋಂಕು ಜಾಡ್ಯಗಳ ಅಪಾಯವನ್ನು ಹೆಚ್ಚಿಸುತ್ತದೆ; ಉದಾಹರಣೆಗೆ, ಕ್ಷಯರೋಗವು ಸಕ್ರಿಯವಾಗಿದ್ದು ಉಲ್ಬಣಗೊಂಡಾಗ ಇದು ಬಹಳ ಅಪಾಯಕಾರಿಯಾಗುವ ಸಾಧ್ಯತೆ ಇರುತ್ತದೆ.[೧೪] ಸುರಕ್ಷಿತ ಕುಡಿಯುವ ನೀರಿನ ಕೊರತೆ ಇರುವ ಸಮುದಾಯಗಳು ಮತ್ತು ಇತರೆ ಪ್ರದೇಶಗಳಲ್ಲಿ ಈ ಹೆಚ್ಚುವರಿ ಆರೋಗ್ಯದ ಅಪಾಯಗಳು ಬಹುದೊಡ್ಡ ಅಪಾಯವನ್ನುಂಟು ಮಾಡಬಲ್ಲದು. ಕನಿಷ್ಟ ಪ್ರಮಾಣದ ಶಕ್ತಿ ಮತ್ತು ಮೆದುಳಿನ ಅಸಮರ್ಪಕ ಕಾರ್ಯಾಚರಣೆಗಳು ಅಪೌಷ್ಟಿಕತೆಯು ತಳಮಟ್ಟದವರೆಗೂ ಪ್ರಭಾವ ಬೀರುತ್ತಿದೆಯೆಂಬ ಸೂಚನೆಯೂ ಆಗಿರಬಹುದು, ಏಕೆಂದರೆ ಇದರಿಂದಾಗಿ ಪೀಡಿತರು ಆಹಾರ ಪಡೆಯಲು, ಆದಾಯ ಗಳಿಸಲು ಅಥವಾ ವಿದ್ಯಾಭ್ಯಾಸಗಳ ವಿಚಾರಗಳಲ್ಲಿ ಅಗತ್ಯ ಕೆಲಸಗಳನ್ನು ಮಾಡಲು ಅಶಕ್ತರಾಗಿರುತ್ತಾರೆ.

ಪೌಷ್ಟಿಕದ್ರವ್ಯಗಳು ಕೊರತೆ ಅಧಿಕ್ಯತೆ
ಆಹಾರ ಚೈತನ್ಯ ನಿರಾಹಾರ/ಉಪವಾಸ, ದೇಹಕ್ಷಯ ಸ್ಥೂಲಕಾಯತೆ/ಬೊಜ್ಜು, ಮಧುಮೇಹ/ಸಿಹಿಮೂತ್ರರೋಗ, ಹೃದಯರಕ್ತನಾಳೀಯ ಕಾಯಿಲೆ
ಸರಳ ಕಾರ್ಬೋಹೈಡ್ರೇಟ್‌‌ಗಳು ಯಾವುದೂ ಇಲ್ಲ ಮಧುಮೇಹ/ಸಿಹಿಮೂತ್ರರೋಗ, ಸ್ಥೂಲಕಾಯತೆ/ಬೊಜ್ಜು
ಸಂಕೀರ್ಣ ಕಾರ್ಬೋಹೈಡ್ರೇಟ್‌‌ಗಳು ಯಾವುದೂ ಇಲ್ಲ ಸ್ಥೂಲಕಾಯತೆ/ಬೊಜ್ಜು
ಸಂತೃಪ್ತ ಕೊಬ್ಬು ಕಡಿಮೆ ಪ್ರಮಾಣದ ಲೈಂಗಿಕ ಹಾರ್ಮೋನುಗಳ ಮಟ್ಟಗಳು[೧೫] ಹೃದಯರಕ್ತನಾಳೀಯ ಕಾಯಿಲೆ
ಅಪರಿಮಿತ ಕೊಬ್ಬು ಯಾವುದೂ ಇಲ್ಲ ಹೃದಯರಕ್ತನಾಳೀಯ ಕಾಯಿಲೆ
ಅಸಂತೃಪ್ತ ಕೊಬ್ಬು ಯಾವುದೂ ಇಲ್ಲ ಸ್ಥೂಲಕಾಯತೆ/ಬೊಜ್ಜು
ಕೊಬ್ಬು ಮೇದಸ್ಸಿನಲ್ಲಿ ಕರಗುವ ಜೀವಸತ್ವಗಳ ಅರೆಜೀರ್ಣತೆ, ಮೊಲ ಉಪವಾಸ/ಪ್ರೊಟೀನ್‌ ವಿಷಪ್ರಾಶನ (ಪ್ರೊಟೀನ್‌‌‌ ಸೇವನೆ ಅತಿಯಾಗಿದ್ದ ಪಕ್ಷದಲ್ಲಿ) ಹೃದಯರಕ್ತನಾಳೀಯ ಕಾಯಿಲೆ (ಕೆಲವರು ಮಾತ್ರ ಈ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ)
ಒಮೇಗಾ/ಅಂತ್ಯದ ಬೆಳವಣಿಗೆ 3 ಕೊಬ್ಬಿನಂಶಗಳು ಹೃದಯರಕ್ತನಾಳೀಯ ಕಾಯಿಲೆ ರಕ್ತಸ್ರಾವ, ಅಧಿಕ ರಕ್ತಸ್ರಾವ
ಒಮೇಗಾ/ಅಂತ್ಯದ ಬೆಳವಣಿಗೆ 6 ಕೊಬ್ಬಿನಂಶಗಳು ಯಾವುದೂ ಇಲ್ಲ ಹೃದಯರಕ್ತನಾಳೀಯ ಕಾಯಿಲೆ, ಅರ್ಬುದ
ಕೊಲೆಸ್ಟರಾಲ್‌‌/ಮೇದಸ್ಸು ಯಾವುದೂ ಇಲ್ಲ ಹೃದಯರಕ್ತನಾಳೀಯ ಕಾಯಿಲೆ
ಪ್ರೊಟೀನ್‌‌‌ ಕ್ವಾಷಿಯೋರ್ಕರ್‌‌‌/ಕಾರ್ಬೋರೇಟ್‌ಗಳ ಅಧಿಕ್ಯತೆ ಮೊಲ ಉಪವಾಸ/ಪ್ರೊಟೀನ್‌ ವಿಷಪ್ರಾಶನ
ಸೋಡಿಯಂ ಸೋಡಿಯಂರಾಹಿತ್ಯತೆ ಸೋಡಿಯಂಅಧಿಕ್ಯತೆ, ರಕ್ತದೊತ್ತಡ
ಕಬ್ಬಿಣ ರಕ್ತಹೀನತೆ ಯಕೃತ್ತಿನ ತೀವ್ರರೋಗ, ಹೃದಯದ ಕಾಯಿಲೆ
ಅಯೋಡಿನ್‌‌ ಗಳಗಂಡ (ಗಾಯ್ಟರ್‌‌) , ತೀವ್ರತರ ಥೈರಾಯ್ಡ್‌ ಅಯೋಡಿನ್‌‌ ವಿಷತ್ವ (ಗಾಯ್ಟರ್‌‌/ಗಳಗಂಡ, ತೀವ್ರತರ ಥೈರಾಯ್ಡ್‌)
A ಜೀವಸತ್ವ ಕ್ಸೆರೋಫ್ತಾಲ್ಮಿಯಾ ಹಾಗೂ ಸಂಜೆಗುರುಡು/ರಾತ್ರಿಗುರುಡು, ಟೆಸ್ಟೋಸ್ಟಿರೋನ್‌‌ನ ಅಲ್ಪ ಮಟ್ಟ ಹೈಪರ್‌‌/ತೀವ್ರವಿಟಮಿನೋಸಿಸ್‌‌ A (ಯಕೃತ್ತಿನ ತೀವ್ರರೋಗ, ಕೂದಲಿಗೆ ಹಾನಿ/ನಷ್ಟ)
B1 ಜೀವಸತ್ವ ಬೆರಿ-ಬೆರಿ
B2 ಜೀವಸತ್ವ ಚರ್ಮದ ಬಿರುಕುಬಿಡುವಿಕೆ ಹಾಗೂ ಕಾರ್ನಿಯಾದಲ್ಲಿ ಹುಣ್ಣಾಗುವಿಕೆ
B3 ಜೀವಸತ್ವ (ನಿಕೊಟಿನಿಕ್‌ ಆಮ್ಲ/ನಯಸಿನ್) ಪಿಲೇಗ್ರ ಅಜೀರ್ಣ, ಹೃದಯದ ಸ್ನಾಯುಗಳ ಸಂಕೋಚನೆ, ಜನನದೋಷಗಳು
B12 ಜೀವಸತ್ವ ಪ್ರಬಲ/ಮಾರಕ ರಕ್ತಹೀನತೆ
C ಜೀವಸತ್ವ ರಕ್ತಪಿತ್ತವ್ಯಾಧಿ ನಿರ್ಜಲೀಕರಣವನ್ನು ಉಂಟುಮಾಡುವ ಅತಿಸಾರ/ಭೇದಿ
D ಜೀವಸತ್ವ ರಿಕೆಟ್ಸ್‌ ವ್ಯಾಧಿ ಹೈಪರ್‌‌/ತೀವ್ರವಿಟಮಿನೋಸಿಸ್‌‌ D (ನಿರ್ಜಲೀಕರಣ, ವಾಂತಿ, ಮಲಬದ್ಧತೆ)
E ಜೀವಸತ್ವ ನರದೌರ್ಬಲ್ಯದ ವ್ಯಾಧಿಗಳು ಹೈಪರ್‌‌/ತೀವ್ರವಿಟಮಿನೋಸಿಸ್‌‌ E (ರಕ್ತಹೆಪ್ಪುಗಟ್ಟಿಸಲಾಗದಿರುವಿಕೆ: ಅಧಿಕ ರಕ್ತಸ್ರಾವ)
K ಜೀವಸತ್ವ ರಕ್ತಸ್ರಾವ
ಕ್ಯಾಲ್ಸಿಯಂ ಅಸ್ಥಿರಂಧ್ರತೆ, ಟೆಟನಿ ಸ್ನಾಯು ಸೆಡೆತ, ಕೈ ಅಥವಾ ಕಾಲ್ಬೆರಳುಗಳ ಸ್ನಾಯು ಸೆಡೆತ, ಕಂಠಕುಹರದ ಸೆಳೆತ, ಹೃದಯದ ಸ್ನಾಯುಸೆಡೆತ ಆಯಾಸ/ದಣಿವು, ಖಿನ್ನತೆ, ದಿಗ್ಭ್ರಾಂತಿ, ಅನೋರೆಕ್ಸಿಯಾ, ಪಿತ್ತೋದ್ರೇಕ, ವಾಂತಿ, ಮಲಬದ್ಧತೆ, ಮೆದೋಜೀರಕದ ಉರಿಯೂತ, ಅಧಿಕ ಮೂತ್ರವಿಸರ್ಜನೆ
ಮೆಗ್ನೀಷಿಯಂ ಅಧಿಕ ರಕ್ತದೊತ್ತಡ ನಿಶ್ಶಕ್ತಿ, ಪಿತ್ತೋದ್ರೇಕ, ವಾಂತಿ, ಉಸಿರಾಟದ ತೊಂದರೆ, ಹಾಗೂ ಕಡಿಮೆ ರಕ್ತದೊತ್ತಡ
ಪೊಟ್ಯಾಷಿಯಮ್‌‌ ಪೊಟ್ಯಾಷಿಯಮ್‌‌ರಾಹಿತ್ಯತೆ, ಹೃದಯದ ಸ್ನಾಯುಸೆಡೆತ ಪೊಟ್ಯಾಷಿಯಮ್‌‌ಅಧಿಕ್ಯತೆ, ಹೃದಯಾತಿಸ್ಪಂದನ

ಮಾನಸಿಕ ಸಮಸ್ಯೆಗಳು

ಬದಲಾಯಿಸಿ

ದ ಲ್ಯಾನ್ಸೆಟ್‌‌ನ ಪ್ರಕಾರ, ಅಯೋಡಿನ್‌‌ ಕೊರತೆಯ ರೂಪದ ಅಪೌಷ್ಟಿಕತೆಯು "ಮಾನಸಿಕ ತೊಂದರೆಗಳನ್ನು ಉಂಟುಮಾಡುವ ತಡೆಯಬಹುದಾದ ವಿಶ್ವದಾದ್ಯಂತದ ಬಹುಪ್ರಧಾನ ಕಾರಣವಾಗಿದೆ."[೧೬] ವಿಶೇಷವಾಗಿ ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶಿಶುಗಳಲ್ಲಿ ಉಂಟಾಗುವ ಮಿತವಾದ ಅಯೋಡಿನ್‌‌ ಕೊರತೆ ಕೂಡಾ 10ರಿಂದ 15 I.Q. ಪಾಯಿಂಟ್‌/ಅಂಶಗಳಷ್ಟು ಬುದ್ಧಿಶಕ್ತಿಯ ಕೊರತೆಯನ್ನುಂಟು ಮಾಡಿ, ರಾಷ್ಟ್ರದ ಬೆಳವಣಿಗೆಯಲ್ಲಿ ಗಣನಾತೀತ ನಷ್ಟವನ್ನುಂಟು ಮಾಡುತ್ತದೆ.[೧೬] ಇವುಗಳಲ್ಲಿ ಎದ್ದು ಕಾಣುವ ಹಾಗೂ ತೀವ್ರ ಪರಿಣಾಮಗಳಾದ ಅಂಗವಿಕಲತೆಗೆ ದಾರಿಮಾಡುವ ಗಾಯ್ಟರ್‌‌/ಗಳಗಂಡ, ಕ್ರೆಟಿನ್‌ ರೋಗ ಹಾಗೂ ಕುಬ್ಜತೆ — ಗುಡ್ಡಗಾಡು ಹಳ್ಳಿಗಳ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ವಿಶ್ವದ ಶೇಕಡಾ 16 ಜನರು ಕನಿಷ್ಟ ಮಿತ ಪ್ರಮಾಣದ ಕುತ್ತಿಗೆಯಲ್ಲಿ ಊದಿಕೊಂಡ ಥೈರಾಯ್ಡ್‌ ಗ್ರಂಥಿಯಿರುವ ಗಾಯ್ಟರ್‌‌/ಗಳಗಂಡದಿಂದ ಪೀಡಿತರಾಗಿರುತ್ತಾರೆ.[೧೬] ಸಂಶೋಧನೆಯು ಸೂಚಿಸುವ ಪ್ರಕಾರ ಪೌಷ್ಟಿಕ ಆಹಾರದ ಆಯ್ಕೆಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಆರೋಗ್ಯಪೂರ್ಣ ಆಹಾರ ಸೇವನೆಯ ದೀರ್ಘಕಾಲೀನ ಹವ್ಯಾಸಗಳು, ಜ್ಞಾನಗ್ರಹಣ ಹಾಗೂ ನೆನಪಿನ ಶಕ್ತಿಯ ಅಗಾಧ ಸಾಮರ್ಥ್ಯಗಳ ಮೇಲೆ ಧನಾತ್ಮಕ ಪರಿಣಾಮ ಬೀರಿ, ಶೈಕ್ಷಣಿಕ ಮಾಹಿತಿಗಳನ್ನು ಅರ್ಥೈಸಿಕೊಳ್ಳುವ ಹಾಗೂ ಉಳಿಸಿಕೊಳ್ಳುವ ವಿದ್ಯಾರ್ಥಿಯ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಕೆಲ ಸಂಸ್ಥೆಗಳು ಶಿಕ್ಷಕರು, ನೀತಿ ನಿರೂಪಕರು ಹಾಗೂ ನಿರ್ವಹಣಾತ್ಮಕ ಆಹಾರಸೇವಾ ಗುತ್ತಿಗೆದಾರ ಸಂಸ್ಥೆಗಳೊಂದಿಗೆ ಸೇರಿ ಸುಧಾರಿತ ಪೋಷಣಾ ವಿಷಯ ಹಾಗೂ ಪೋಷಣೆಯ ಸಂಪನ್ಮೂಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಶಾಲೆಯಿಂದ ಸ್ನಾತಕೋತ್ತರ ವಿದ್ಯಾಸಂಸ್ಥೆಗಳವರೆಗಿನ ಸಂಸ್ಥೆಗಳ ಉಪಹಾರಕೇಂದ್ರಗಳಲ್ಲಿ ಲಭ್ಯವಿರುವುದನ್ನು ಕಡ್ಡಾಯಗೊಳಿಸಲು ಪ್ರಯತ್ನ ಆರಂಭಿಸಿದ್ದಾರೆ. ಆರೋಗ್ಯ ಹಾಗೂ ಪೋಷಣೆಗಳು ಒಟ್ಟಾರೆ ಶೈಕ್ಷಣಿಕ ಯಶಸ್ಸಿನೊಂದಿಗೆ ಹತ್ತಿರದ ಸಂಬಂಧ ಹೊಂದಿರುವುದು ದೃಢಪಟ್ಟಿದೆ.[೧೭] ಪ್ರಸ್ತುತ 10%ಕ್ಕಿಂತ ಕಡಿಮೆ ಅಮೇರಿಕನ್‌ ಸ್ನಾತಕ ವಿದ್ಯಾರ್ಥಿಗಳು ಮಾತ್ರವೇ ಶಿಫಾರಸು ಮಾಡಲಾದ ಐದು ಪ್ರಮಾಣದ ಹಣ್ಣು ಹಾಗೂ ತರಕಾರಿಗಳನ್ನು ತಾವು ಸೇವಿಸುತ್ತಿರುವುದಾಗಿ ತಿಳಿಸಿದ್ದಾರೆ.[೧೮] ಉತ್ತಮ ಪೋಷಣೆಯು ಜ್ಞಾನಗ್ರಹಣ ಹಾಗೂ ಹೆಚ್ಚಿನ ನೆನಪಿನ ಶಕ್ತಿಸಾಮರ್ಥ್ಯಗಳ ಮೇಲೆ ಪ್ರಭಾವ ಬೀರುತ್ತದೆ; ಅಧ್ಯಯನವೊಂದರ ಪ್ರಕಾರ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುವವರು ನಿರ್ದಿಷ್ಟ ಸ್ಮರಣೆಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ್ದರು.[೧೯] ಮತ್ತೊಂದು ಅಧ್ಯಯನದ ಪ್ರಕಾರ, ಕೆಫೀನ್‌ಮುಕ್ತ ಸೇವನೆಯೋಗ್ಯ ಸೋಡಾ ಅಥವಾ ಮಿಶ್ರಣ ತಿನಿಸುಗಳನ್ನು ಸೇವಿಸುವವರಿಗೆ ಹೋಲಿಸಿದರೆ ಮೊಸರನ್ನು ಸೇವಿಸುವವರು ವಿವೇಚನಾಯುಕ್ತ ಚಟುವಟಿಕೆಗಳಲ್ಲಿ ಹೆಚ್ಚು ಉತ್ತಮ ಸಾಧನೆ ತೋರಿದ್ದರು.[೨೦] ಪೋಷಣೆಯ ಕೊರತೆಗಳು 1951ರಷ್ಟು ಹಿಂದಿನ ಸಂಶೋಧನೆಗಳಲ್ಲಿಯೇ ಇಲಿಗಳಲ್ಲಿನ ಕಲಿಕೆಯ ನಡವಳಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದುದನ್ನು ವ್ಯಕ್ತಪಡಿಸಲಾಗಿತ್ತು.[೨೧]

"ಉತ್ತಮ ಕಲಿಕೆಯ ಸಾಧನೆಯು ಕಲಿಕೆ ಹಾಗೂ ಸ್ಮರಣೆ ಸಂಬಂಧಿ ಸಾಮರ್ಥ್ಯಗಳ ಮೇಲೆ ಆಹಾರದಿಂದ ಆಗುವ ಪ್ರಭಾವಗಳೊಂದಿಗೆ ಸಂಬಂಧ ಹೊಂದಿದೆ".[೨೨]

"ಪೋಷಣೆಶಾಸ್ತ್ರ-ಕಲಿಕೆಗಳ ನಡುವಿನ ನಂಟು" ಎಂಬುದು ಆಹಾರ ಹಾಗೂ ಕಲಿಕೆಗಳ ನಡುವಿನ ಪರಸ್ಪರ ಸಂಬಂಧವನ್ನು ವ್ಯಕ್ತಪಡಿಸುವುದಲ್ಲದೇ, ಉನ್ನತ ಶಿಕ್ಷಣ ಪರಿಸರದಲ್ಲಿ ಉಪಯೋಗಗಳನ್ನು ಹೊಂದಿರುತ್ತದೆ.

"ಉತ್ತಮ ಪೌಷ್ಟಿಕತೆಸಹಿತ ಮಕ್ಕಳು ಶಾಲೆಗಳಲ್ಲಿ ಗಮನಾರ್ಹ ಪ್ರಮಾಣದ ಸಾಧನೆ ತೋರುತ್ತಾರೆ, ಇದಕ್ಕೆ ಕಾರಣ ಭಾಗಶಃ ಅವರು ಶಾಲೆಗೆ ಬೇಗನೆ ಸೇರುವುದರಿಂದ ಕಲಿಸಲು ಹೆಚ್ಚಿನ ಸಮಯ ಸಿಗುವುದು ಒಂದು ವಿಧವಾದರೆ ಮತ್ತೊಂದು ರೀತಿಯಲ್ಲಿ ಶೈಕ್ಷಣಿಕ ಅವಧಿಯ ಪ್ರತಿ ವರ್ಷದ ಹೆಚ್ಚಿನ ಕಲಿಕಾ ಸಾಮರ್ಥ್ಯ ಏರಿಕೆಯಿಂದಾಗಿರುತ್ತದೆ."[೨೩]
ಶೇಕಡಾ 91%ರಷ್ಟು ಸ್ನಾತಕ ವಿದ್ಯಾರ್ಥಿಗಳು ತಾವು ಉತ್ತಮ ಆರೋಗ್ಯ ಹೊಂದಿದ್ದೇವೆಂದು ಭಾವಿಸಿದ್ದರೆ, ಕೇವಲ 7%ರಷ್ಟು ಮಂದಿ ಮಾತ್ರವೇ ಶಿಫಾರಸು ಮಾಡಲಾದ ಪ್ರಮಾಣದ ಹಣ್ಣು ತರಕಾರಿಗಳನ್ನು ಸೇವಿಸುತ್ತಿದ್ದರು.[೧೮]
ಪೋಷಣೆಶಾಸ್ತ್ರೀಯ ಶಿಕ್ಷಣವು ಉನ್ನತ ಶಿಕ್ಷಣದ ಪರಿಸರದಲ್ಲಿ ಉಪಯುಕ್ತ ಹಾಗೂ ಪ್ರಭಾವಿ ಕಾರ್ಯ ಮಾದರಿಯಾಗಿರುತ್ತದೆ.[೨೪][೨೫]
ಪೋಷಣೆಶಾಸ್ತ್ರವನ್ನು ಒಳಗೊಂಡಿರುವ ಹೆಚ್ಚು "ಬದ್ಧತೆಯಿರುವ" ಕಲಿಕಾ ಮಾದರಿಗಳು ಕಲಿಕಾ ಆವರ್ತನದ ಎಲ್ಲಾ ಹಂತಗಳಲ್ಲಿಯೂ ಹೆಚ್ಚು ಆವೇಗವನ್ನು ಪಡೆದುಕೊಳ್ಳುತ್ತಿರುವ ಕಲ್ಪನೆಯಾಗಿದೆ.[೨೬]

ಓರ್ವ ವಿದ್ಯಾರ್ಥಿಯ ಒಟ್ಟಾರೆ ಪೋಷಣೀಯ ಆರೋಗ್ಯಕ್ಕೂ ಆತನ/ಆಕೆಯ ಸರಾಸರಿ ಶ್ರೇಣಿಯಂಶ/ಗ್ರೇಡ್‌ ಪಾಯಿಂಟ್‌ ಆವರೇಜ್‌ (G.P.A.)ಗೂ ನೇರ ಸಂಪರ್ಕವಿದೆ ಎಂಬುದನ್ನು ಸಾಧಿಸುವಂತಹಾ ಸಂಶೋಧನೆಗಳು ಮಿತ ಪ್ರಮಾಣದಲ್ಲಿ ಮಾತ್ರವೇ ಲಭ್ಯವಿವೆ. ಒಟ್ಟಾರೆ ಬೌದ್ಧಿಕ ಆರೋಗ್ಯವು ವ್ಯಕ್ತಿಯ ಆಹಾರ ಸೇವನೆಯೊಂದಿಗೆ ನೇರ ಸಂಬಂಧ ಹೊಂದಿದೆಯೆಂಬುದು ಮತ್ತೊಂದು ಅಸಂಗತವಲ್ಲದ ಪರಸ್ಪರ ಸಂಬಂಧವೆಂಬುದನ್ನು ರುಜುವಾತುಪಡಿಸಲು ಹೆಚ್ಚುವರಿ ಸಾರಭೂತ ದತ್ತಾಂಶಗಳು ಅಗತ್ಯವಾಗಿವೆ. ಪೋಷಣೆಯ ಪೂರಕ ಚಿಕಿತ್ಸೆಗಳು ಪ್ರಮುಖ ಖಿನ್ನತೆ, ದ್ವಂದ್ವ ಮನಸ್ಕತೆ, ಛಿದ್ರಮನಸ್ಕತೆ ಹಾಗೂ ಅಂರ್ತರ್ನಿಬಂಧದಂತಹಾ ಮುಂದುವರಿದ ರಾಷ್ಟ್ರಗಳಲ್ಲಿ ನಾಲ್ಕು ಪ್ರಮುಖ ಸರ್ವೇಸಾಮಾನ್ಯವಾದ ಮನೋರೋಗಗಳ ಚಿಕಿತ್ಸೆಗೆ ಸೂಕ್ತವಾಗಿರಬಹುದು.[೨೭] ಮನೋಸ್ಥಿತಿಯ ಉತ್ತೇಜನ/ಉನ್ನತೀಕರಣ ಹಾಗೂ ಸ್ಥಿರೀಕರಣಗಳಿಗೆ ಕಾರಣವಾಗಬಹುದೆಂದು ಭಾವಿಸಿ ಅಧ್ಯಯನ ನಡೆಸಿದ ಪೂರಕಾಂಶಗಳೆಂದರೆ ಐಕೋಸೇಪೆಂಟ್‌ನೋಯಿಕ್‌ ಆಮ್ಲ ಹಾಗೂ ಡೊಕೊಸಾಹೆಕ್ಸೇನೋಯಿಕ್‌‌ ಆಮ್ಲ (ಅಗಸೆಬೀಜದ ತೈಲದಲ್ಲಿಲ್ಲದ ಆದರೆ ಮೀನಿನ ತೈಲದಲ್ಲಿರುವ ಇವೆರಡೂ ಒಮೇಗಾ/ಅಂತ್ಯದ ಬೆಳವಣಿಗೆ-3 ಕೊಬ್ಬುಯುಕ್ತ ಆಮ್ಲಗಳಾಗಿವೆ), B12 ಜೀವಸತ್ವ, ಫಾಲಿಕ್‌ ಆಮ್ಲ ಹಾಗೂ ಐನಾಸಿಟಾಲ್‌ಗಳಾಗಿವೆ.

ಅರ್ಬುದ

ಬದಲಾಯಿಸಿ

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅರ್ಬುದವು ಈಗ ಸರ್ವೇಸಾಮಾನ್ಯವಾಗಿದೆ. [[ಇಂಟರ್‌‌ನ್ಯಾಷನಲ್‌ ಏಜೆನ್ಸಿ ಫಾರ್‌ ರಿಸರ್ಚ್‌ ಆನ್‌ ಕ್ಯಾನ್ಸರ್‌‌/ಅರ್ಬುದದ ಮೇಲಿನ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆ]]ಯು ನಡೆಸಿದ ಅಧ್ಯಯನವೊಂದರ ಪ್ರಕಾರ "ಪ್ರಗತಿಶೀಲ ರಾಷ್ಟ್ರಗಳಲ್ಲಿ, ಸುಟ್ಟ ಅಥವಾ ಉಪ್ಪೇರಿದ ಆಹಾರ ಹಾಗೂ ಅರ್ಬುದಕಾರಕ ಸಂರಕ್ಷಿತ ಆಹಾರಗಳ ಸೇವನೆಯಿಂದಾಗಿ ಅಂಗಗಳ ಮೇಲೆ ದಾಳಿ ಮಾಡುವ ಪರಾವಲಂಬಿಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಯಕೃತ್ತು, ಜಠರ ಹಾಗೂ ಅನ್ನನಾಳಗಳ ಅರ್ಬುದಗಳು ಹೆಚ್ಚು ಸಾಮಾನ್ಯವಾಗಿವೆ." ಶ್ವಾಸಕೋಶೀಯ ಅರ್ಬುದದ ಪ್ರಮಾಣವು ತಂಬಾಕು ಬಳಕೆಯು ಹೆಚ್ಚುತ್ತಿರುವ ಹಾಗೆ ಬಡರಾಷ್ಟ್ರಗಳಲ್ಲಿ ತ್ವರಿತವಾಗಿ ಏರುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜನತೆಯು "ಸಮೃದ್ಧಿ ಅಥವಾ 'ಪಾಶ್ಚಿಮಾತ್ಯ ಜೀವನಶೈಲಿ'ಗಳೊಂದಿಗೆ ಸಂಬಂಧ ಹೊಂದಿರುವ ಅರ್ಬುದಗಳಾದ — ಸ್ಥೂಲಕಾಯತೆ/ಬೊಜ್ಜು, ಕಸರತ್ತಿನ ಕೊರತೆ, ಆಹಾರಸೇವನೆ ಹಾಗೂ ವಯಸ್ಸುಗಳಿಂದಾಗಿ ದೊಡ್ಡಕರುಳು, ಗುದನಾಳ, ಎದೆ/ಎದೆಗೂಡು ಹಾಗೂ ಪ್ರಾಸ್ಟೇಟ್‌‌ ಗ್ರಂಥಿಗಳ ಅರ್ಬುದಗಳನ್ನು ಹೊಂದಿರುವ ಪ್ರವೃತ್ತಿ ಹೊಂದಿದ್ದಾರೆ."[೨೮]

ಚಯಾಪಚಯಿಕ ರೋಗಲಕ್ಷಣಗಳು

ಬದಲಾಯಿಸಿ

ಅನೇಕ ಮಟ್ಟಗಳ ಕುರುಹುಗಳು ಇನ್‌ಸುಲಿನ್‌ ಅಧಿಕ್ಯತೆಯು ಜೀವನಶೈಲಿಯಿಂದ ಉಂಟಾಗಿರುತ್ತವೆ ಎಂಬುದನ್ನು ಶ್ರುತಪಡಿಸಿದರೆ ಇನ್‌ಸುಲಿನ್‌ನ ಚಟುವಟಿಕೆಯಲ್ಲಿನ ಇಳಿಕೆ (i.e. ಇನ್‌ಸುಲಿನ್‌ ನಿರೋಧಕತೆ)ಗಳು ಅನೇಕ ರೋಗಗಳ ಅನೇಕ ಹಂತಗಳ ವಿಚಾರದಲ್ಲಿ ನಿರ್ಧಾರಕ ಅಂಶವಾಗಿರುತ್ತದೆ. ಉದಾಹರಣೆಗೆ ಇನ್‌ಸುಲಿನ್‌ ಅಧಿಕ್ಯತೆಯು ಹಾಗೂ ಇನ್‌ಸುಲಿನ್‌ ನಿರೋಧಕತೆಗಳು ತೀವ್ರ ಪ್ರಮಾಣದ ಉರಿಯೂತಗಳೊಂದಿಗೆ ಬಲವಾದ ಸಂಬಂಧ ಹೊಂದಿದ್ದರೆ, ಅವು ಅಪಧಮನಿಯಲ್ಲಿನ ಸೂಕ್ಷ್ಮಗಾಯಗಳು ಹಾಗೂ ರಕ್ತಗರಣೆಗಟ್ಟುವಿಕೆ (i.e. ಹೃದಯ ರೋಗ) ಹಾಗೂ ಮಿತಿಮೀರಿದ ಕೋಶಗಳ ವಿಭಜನೆ (i.e. ಅರ್ಬುದ)ಗಳೂ ಸೇರಿದಂತೆ ಅನೇಕ ರೀತಿಯ ಪ್ರತಿಕೂಲ ಬೆಳವಣಿಗೆಗಳೊಂದಿಗೆ ಬಲವಾದ ಸಂಬಂಧ ಹೊಂದಿರುತ್ತದೆ. ಇನ್‌ಸುಲಿನ್‌ ಅಧಿಕ್ಯತೆ ಹಾಗೂ ಇನ್‌ಸುಲಿನ್‌ ನಿರೋಧಕತೆಗಳಲ್ಲಿ (ಚಯಾಪಚಯ ರೋಗಲಕ್ಷಣ ಎಂದು ಕರೆಯಲ್ಪಡುವ) ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುವ ಸ್ಥೂಲಕಾಯತೆ, ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಕೆ, ರಕ್ತದೊತ್ತಡದ ಏರಿಕೆ, ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳು ಹಾಗೂ HDL ಕೊಬ್ಬುಗಳ ಇಳಿಕೆಗಳೆಲ್ಲವುಗಳ ಸಂಯೋಜನೆಯ ರೋಗಲಕ್ಷಣಗಳು ಕಂಡುಬರುತ್ತವೆ. ಇನ್‌ಸುಲಿನ್‌ ಅಧಿಕ್ಯತೆಯ ಋಣಾತ್ಮಕ ಪರಿಣಾಮ ಪ್ರೋಸ್ಟಾಗ್ಲಾಂಡಿನ್‌ನ PGE1/PGE2ಗಳ ಸಮತೋಲನದ ಮೇಲೆ ಬೀರುವ ಪರಿಣಾಮ ಗಮನಾರ್ಹ ಮಟ್ಟದ್ದಾಗಿರುತ್ತದೆ. ಬೊಜ್ಜಿನ ಸ್ಥಿತಿಯು ಸ್ಪಷ್ಟವಾಗಿ ಇನ್‌ಸುಲಿನ್‌ ನಿರೋಧಕತೆಗೆ ತನ್ನ ಕೊಡುಗೆ ನೀಡಿರುತ್ತದಲ್ಲದೇ, ಇದರಿಂದಾಗಿ ಮಧುಮೇಹದ 2ನೆಯ ವಿಧಕ್ಕೆ ಕಾರಣವಾಗಬಲ್ಲುದಾಗಿರುತ್ತದೆ. ವಾಸ್ತವಿಕವಾಗಿ ಎಲ್ಲಾ ಬೊಜ್ಜಿರುವ ಹಾಗೂ ಬಹುತೇಕ ಮಧುಮೇಹದ 2ನೆಯ ವಿಧದಿಂದ ಪೀಡಿತರಾಗಿರುವ ವ್ಯಕ್ತಿಗಳು ಇನ್‌ಸುಲಿನ್‌ ನಿರೋಧಕತೆಯನ್ನು ಹೊಂದಿರುತ್ತಾರೆ. ಅಧಿಕತೂಕ ಹಾಗೂ ಇನ್‌ಸುಲಿನ್‌ ನಿರೋಧಕತೆಗಳ ನಡುವಿನ ಸಂಬಂಧವು ಸ್ಪಷ್ಟವಿದ್ದರೂ ಇನ್‌ಸುಲಿನ್‌ ನಿರೋಧಕತೆಗೆ ಖಚಿತ (ಸಂಭವನೀಯ ಬಹುವಿಧಗಳು) ಕಾರಣವು ಇನ್ನೂ ಅಷ್ಟು ಸ್ಪಷ್ಟವಾಗಿಲ್ಲ. ಮುಖ್ಯವಾಗಿ ಸೂಕ್ತ ಕಸರತ್ತು, ಬಹುಮಟ್ಟಿನ ನಿಯಮಿತ ಆಹಾರ ಸೇವನೆ ಹಾಗೂ ರಕ್ತದಲ್ಲಿನ ಗ್ಲೂಕೋಸ್‌ ಅಧಿಕ್ಯತೆಯ (ಕೆಳಗೆ ನೋಡಿ) ಇಳಿಕೆಗಳೆಲ್ಲವೂ ಅಧಿಕ ತೂಕದ ವ್ಯಕ್ತಿಗಳಲ್ಲಿನ ಇನ್‌ಸುಲಿನ್‌ ನಿರೋಧಕತೆಯನ್ನೇ ತಿರುವುಮುರುವು ಮಾಡಬಲ್ಲವೆಂಬುದು (ಅದರಿಂದಾಗಿ 2ನೆಯ ವಿಧದ ಮಧುಮೇಹ ಇದ್ದವರಿಗೆ ರಕ್ತದಲ್ಲಿನ ಸಕ್ಕರೆ ಅಂಶ ಇಳಿಸುವುದೆಂದು) ಸಾಬೀತಾಗಿದೆ. ಲೆಪ್ಟಿನ್‌ ಹಾರ್ಮೋನಿಗೆ ನಿರೋಧಕತೆ ವ್ಯಕ್ತಪಡಿಸುವುದರ ಮೂಲಕ ಹಾರ್ಮೋನಿನ ಹಾಗೂ ಚಯಾಪಚಯಿಕ ಸ್ಥಿತಿಗಳನ್ನು ಸ್ಥೂಲಕಾಯತೆ/ಬೊಜ್ಜು ಮಾರ್ಪಡಿಸುವುದರಿಂದ ಇನ್‌ಸುಲಿನ್‌/ಲೆಪ್ಟಿನ್‌ ಹಾರ್ಮೋನು ನಿರೋಧಕತೆ ಹಾಗೂ ಸ್ಥೂಲಕಾಯತೆ/ಬೊಜ್ಜುಗಳು ಪರಸ್ಪರ ಉಲ್ಬಣಗೊಳಿಸುವಿಕೆಯ ಅಪಾಯಕಾರಿ ಆವರ್ತನೆಯು ಆರಂಭವಾಗಬಹುದಾಗಿದೆ. ಅಪಾಯಕಾರಿ ಆವರ್ತನೆಯು ಇನ್‌ಸುಲಿನ್‌/ಲೆಪ್ಟಿನ್‌ ಹಾರ್ಮೋನನ್ನು ಉತ್ತೇಜಿಸುವ ಆಹಾರ ಮತ್ತು ಚೈತನ್ಯಗಳ ವಿಪರೀತ ಸೇವನೆಯಿಂದಾಗಿ ಉಂಟಾಗಬಹುದಾದ ಸತತವಾಗಿ ಹೆಚ್ಚಿನ ಮಟ್ಟದ ಇನ್‌ಸುಲಿನ್‌/ಲೆಪ್ಟಿನ್‌ ಹಾರ್ಮೋನು ಉದ್ದೀಪನ ಹಾಗೂ ಕೊಬ್ಬು ಸಂಗ್ರಹಗಳಿಂದ ಹೆಚ್ಚುವುದಾಗಿ ಭಾವಿಸಲಾಗಿದೆ. ಇನ್‌ಸುಲಿನ್‌ ಹಾಗೂ ಲೆಪ್ಟಿನ್‌ ಹಾರ್ಮೋನುಗಳೆರಡೂ ಸಾಧಾರಣವಾಗಿ ಮಿದುಳಿನಲ್ಲಿರುವ ಹೈಪೋಥೆಲಾಮಸ್‌ಗೆ ಪೂರ್ಣ ಸಂತೃಪ್ತಿಯ ಸಂದೇಶವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ; ಆದಾಗ್ಯೂ, ಇನ್‌ಸುಲಿನ್‌/ಲೆಪ್ಟಿನ್‌ ಹಾರ್ಮೋನು ನಿರೋಧಕತೆಯು ಈ ಸಂಕೇತಗಳನ್ನು ಕಡಿಮೆಗೊಳಿಸುತ್ತವೆ ಹಾಗೂ ಈ ಮೂಲಕ ಭಾರೀ ಪ್ರಮಾಣದ ಕೊಬ್ಬು ಸಂಗ್ರಹದ ಹೊರತಾಗಿಯೂ ಮಿತಿಮೀರಿದ ಆಹಾರಸೇವನೆಗೆ ಅವಕಾಶ ಕೊಡುತ್ತವೆ. ಇದರೊಂದಿಗೆ, ಮೆದುಳಿಗೆ ಲೆಪ್ಟಿನ್‌ ಹಾರ್ಮೋನಿನ ಸಂಕೇತ ನೀಡುವಿಕೆಯ ಇಳಿತವು ಸೂಕ್ತವಾಗಿ ಹೆಚ್ಚಿನ ಚಯಾಪಚಯಿಕ ಪ್ರಮಾಣವನ್ನು ಉಳಿಸಿಕೊಳ್ಳುವ ಲೆಪ್ಟಿನ್‌ ಹಾರ್ಮೋನಿನ ಸಾಧಾರಣ ಪ್ರಭಾವವನ್ನು ಕಡಿಮೆಗೊಳಿಸುತ್ತದೆ. ಸಂಸ್ಕರಿತ ಕಾರ್ಬೋಹೈಡ್ರೇಟ್‌‌ಗಳು, ಒಟ್ಟಾರೆ ಪ್ರೊಟೀನ್‌‌‌, ಕೊಬ್ಬು, ಹಾಗೂ ಕಾರ್ಬೋಹೈಡ್ರೇಟ್‌‌ ಸೇವನೆ, ಸಂತೃಪ್ತ ಹಾಗೂ ಅಪರಿಮಿತ ನೆಣಾಮ್ಲಗಳ ಸೇವನೆ ಮತ್ತು ಜೀವಸತ್ವಗಳು/ಖನಿಜಗಳ ಅಲ್ಪಪ್ರಮಾಣದ ಸೇವನೆಗಳಂತಹಾ ವಿವಿಧ ಆಹಾರ ಸೇವನೆಯ ಅಂಶಗಳು ಹೇಗೆ ಮತ್ತು ಯಾವ ಮಟ್ಟಿಗೆ ಇನ್‌ಸುಲಿನ್‌ ಮತ್ತು ಲೆಪ್ಟಿನ್‌ ಹಾರ್ಮೋನು ನಿರೋಧಕತೆಗಳ ಬೆಳವಣಿಗೆಗೆ ಕಾರಣವಾಗಬಹುದು ಎಂಬುದು ಚರ್ಚಾರ್ಹವಾಗಿದೆ. ಆಧುನಿಕ ಮಾನವ-ಕೃತ ಮಾಲಿನ್ಯವು ಸಮತೋಲನವನ್ನು ಕಾಪಾಡುವ ಪರಿಸರದ ಸಾಮರ್ಥ್ಯವನ್ನು ಹಾಳುಗೆಡವುವ ರೀತಿಯಲ್ಲಿ, ಮಾನವನ ಆಹಾರದಲ್ಲಿ ಇತ್ತೀಚಿನ ಸ್ಫೋಟಕ ಪ್ರಮಾಣದ ಹೆಚ್ಚಿನ ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ಸಂಸ್ಕರಿತ ಆಹಾರಗಳ ಸೇರ್ಪಡೆಯು (ಚಯಾಪಚಯಿಕ ಸಾಂಕ್ರಾಮಿಕ ರೋಗಲಕ್ಷಣಗಳು ತೋರ್ಪಡಿಸುವ ಹಾಗೆ) ಮಾನವ ದೇಹದ ಸಮತೋಲನ ಕಾಪಾಡುವಿಕೆಯ ಸಾಮರ್ಥ್ಯ ಹಾಗೂ ಆರೋಗ್ಯಗಳನ್ನು ಹಾಳುಗೆಡವಬಲ್ಲದು.

ಹೈಪೋನಾಟ್ರೆಮಿಯಾ/ಸೋಡಿಯಂ ರಾಹಿತ್ಯತೆ

ಬದಲಾಯಿಸಿ

ಸೋಡಿಯಮ್‌‌ ಮತ್ತು ಪೊಟ್ಯಾಷಿಯಮ್‌‌ ಲವಣಗಳ ಮರುಪೂರಣವಿಲ್ಲದೇ ಹೆಚ್ಚುವರಿ ನೀರಿನ ಸೇವನೆಯು, ಹೈಪೋನಾಟ್ರೆಮಿಯಾ/ಸೋಡಿಯಂ ರಾಹಿತ್ಯತೆಗೆ ದಾರಿ ಮಾಡಿ, ಪರಿಣಾಮವಾಗಿ ಅಪಾಯಕಾರಿ ಸಂದರ್ಭಗಳಲ್ಲಿ ನೀರನ್ನು ವಿಷಪೂರಿತಗೊಳಿಸುವ ಸಾಧ್ಯತೆ ಇರುತ್ತದೆ. 2007ರಲ್ಲಿ, ಜೆನ್ನಿಫರ್‌ ಸ್ಟ್ರೇಂಜ್‌ರು ನೀರು ಕುಡಿಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾಗ ಹೀಗೆ ಮರಣಿಸಿ ಇಂತಹುದೇ ಪ್ರಚಾರ ಕಂಡ ಘಟನೆ ನಡೆದಿತ್ತು.[೨೯] ಹೆಚ್ಚು ಸಾಮಾನ್ಯವಾಗಿ, ದೀರ್ಘ-ಅಂತರದ ಸಹಿಷ್ಣುತಾ ಚಟುವಟಿಕೆಗಳಲ್ಲಿ (ಸುದೀರ್ಘ ಓಟ/ಮ್ಯಾರಥಾನ್‌ ಅಥವಾ ಟ್ರೈಯಥ್ಲಾನ್‌ ಸ್ಪರ್ಧೆಗಳು ಹಾಗೂ ತರಬೇತಿಯಂತಹಾ) ಈ ಪರಿಸ್ಥಿತಿಯು ಕಂಡುಬರುತ್ತದಲ್ಲದೇ ಸಾವಕಾಶವಾಗಿ ಮಾನಸಿಕ ಕುಗ್ಗುವಿಕೆ, ತಲೆನೋವು, ಆಲಸ್ಯ/ಮಂಪರುಸ್ಥಿತಿ, ನಿಶ್ಶಕ್ತತೆ ಹಾಗೂ ಗೊಂದಲಗಳನ್ನು ಉಂಟುಮಾಡುತ್ತದೆ; ಇದರ ವೈಪರೀತ್ಯಗಳು ವಿಸ್ಮೃತಿ, ಸೆಳೆವು ಹಾಗೂ ಸಾವುಗಳನ್ನೂ ಉಂಟುಮಾಡುತ್ತದೆ. ರಕ್ತದಲ್ಲಿನ ಲವಣತ್ವವು ಕಡಿಮೆಯಾಗುತ್ತಿದ್ದ ಹಾಗೆ ಹೆಚ್ಚಿದ ಪರಾಸರಣ/ಆಸ್ಮಾಸಿಸ್‌‌ದಿಂದಾಗಿ ಮೆದುಳು ಊದಿಕೊಳ್ಳುವುದರಿಂದ ಪ್ರಮುಖ ಹಾನಿಯು ಉಂಟಾಗುತ್ತದೆ. ಓಟದ ಸ್ಪರ್ಧೆ/ಸೈಕಲ್‌ ಸ್ಪರ್ಧೆಗಳ ಸಮಯದಲ್ಲಿ, ತರಬೇತಿಗಳ ಸಮಯದಲ್ಲಿ ತರಬೇತುದಾರರು ಕುಡಿಯುವ ನೀರಿನ ತಾಣಗಳನ್ನು ಸ್ಥಾಪಿಸುವುದು ಮತ್ತು ಸಾಕರ್‌/ಕಾಲ್ಚೆಂಡಾಟದಂತಹಾ ತಂಡಕ್ರೀಡೆಗಳಲ್ಲಿ ನೀರಿನ ವ್ಯವಸ್ಥೆ ನೋಡಿಕೊಳ್ಳುವುದು ಹಾಗೂ ನೀರು ಕುಡಿಯಲು ತೀರಾ ಕಷ್ಟವಾಗದ ರೀತಿಯಲ್ಲಿ ಕ್ಯಾಮೆಲ್‌ ಬ್ಯಾಕ್ಸ್‌ನಂತಹಾ ಸಾಧನಗಳ ಬಳಕೆ ಮುಂತಾದುವು ಉಪಯುಕ್ತ ದ್ರವ ಮರುಪೂರಣ ತಂತ್ರಗಳಾಗಿವೆ.

ಕಾರಣಗಳು

ಬದಲಾಯಿಸಿ

ಅಪೌಷ್ಟಿಕತೆಯು ಅತಿಸಾರ/ಭೇದಿ ಕಾಯಿಲೆ ಅಥವಾ ವಿಶೇಷವಾಗಿ HIV/AIDS ಸರ್ವವ್ಯಾಪಿ ವ್ಯಾಧಿಗಳಂತಹಾ[೩೦] ಬೇರೂರಿದ ಕಾಯಿಲೆ [೩೧] ಗಳ ಇತರೆ ಆರೋಗ್ಯ ಸಮಸ್ಯೆಗಳ ಪರಿಣಾಮವೂ ಆಗಿರಬಹುದು

ಬಡತನ ಹಾಗೂ ಆಹಾರ ಬೆಲೆಗಳು

ಬದಲಾಯಿಸಿ

ಆಹಾರದ ಕೊರತೆಯು ತಂತ್ರಜ್ಞಾನ ರಹಿತ ರಾಷ್ಟ್ರಗಳಲ್ಲಿ ಅಪೌಷ್ಟಿಕತೆಗೆ ಕೊಡುಗೆ ನೀಡುವ ಅಂಶವಾಗಿರಬಹುದಾದರೂ, FAO (ಆಹಾರ ಮತ್ತು ಕೃಷಿ ಸಂಘಟನೆ) ಸಂಸ್ಥೆಯು ಅಂದಾಜಿಸಿದ ಪ್ರಕಾರ ಪ್ರಗತಿಶೀಲ ವಿಶ್ವದಲ್ಲಿ ವಾಸಿಸುವ ಸುಮಾರು ಎಂಬತ್ತು ಪ್ರತಿಶತ ಪೌಷ್ಟಿಕತೆರಹಿತ ಮಕ್ಕಳು ಹೆಚ್ಚುವರಿ ಆಹಾರಕ್ಕೆ ಕಾರಣರಾಗಿರುತ್ತಾರೆ.[೩೨] ಆರ್ಥಿಕತಜ್ಞ ಅಮರ್ತ್ಯ ಸೆನ್‌‌ರ ಪ್ರಕಾರ ಇತ್ತೀಚಿನ ದಶಕಗಳಲ್ಲಿ, ಇಡೀ ವಿಶ್ವದ ಜನಸಂಖ್ಯೆಗೆ ಸಾಕಾಗುವಷ್ಟು ಆಹಾರವು ಲಭ್ಯವಿರುವುದರಿಂದ ದುರ್ಭಿಕ್ಷ/ಬರವು ಯಾವಾಗಲೂ ಆಹಾರ ವಿತರಣೆ ಹಾಗೂ/ಅಥವಾ ಬಡತನಗಳಿಗೆ ಕಾರಣವಾಗಿದೆ. ಅವರು ಹೇಳುವ ಪ್ರಕಾರ ಅಪೌಷ್ಟಿಕತೆ ಹಾಗೂ ದುರ್ಭಿಕ್ಷ/ಬರಗಳು ಬಹುಮಟ್ಟಿಗೆ ಆಹಾರ ವಿತರಣೆ ಹಾಗೂ ಖರೀದಿ ಸಾಮರ್ಥ್ಯದ ಸಮಸ್ಯೆಗಳೊಂದಿಗೆ ಹೆಚ್ಚು ಸಂಬಂಧ ಹೊಂದಿದೆ.[೩೩] ಸರಕುಗಳ ಸಟ್ಟಾ ವ್ಯಾಪಾರಿಗಳು ಆಹಾರದ ವೆಚ್ಚವನ್ನು ಹೆಚ್ಚಿಸುತ್ತಿದ್ದಾರೆ ಎಂಬ ವಾದಗಳಿವೆ. ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿನ ಸ್ಥಿರಾಸ್ತಿ ಮಾರಾಟ ಉದ್ಯಮದ ಉತ್ಕರ್ಷವು ಕುಸಿಯುತ್ತಿದ್ದ ಹಾಗೆ, 2007-2008ರ ಸಾಲಿನ ಆಹಾರ ದರದ ಬಿಕ್ಕಟ್ಟು ಉಂಟಾಗುವ ಮಟ್ಟಿಗೆ ಲಕ್ಷ ಕೋಟಿಗಳಷ್ಟು ಡಾಲರ್‌ಗಳನ್ನು ಆಹಾರ ಮತ್ತು ಪ್ರಾಥಮಿಕ ಸರಕುಗಳ ಮೇಲಿನ ಹೂಡಿಕೆಗಳಿಗೆ ವರ್ಗಾಯಿಸಲಾಯಿತು ಎಂದು ಹೇಳಲಾಗುತ್ತಿತ್ತು.[೩೪] ಸಾಂಪ್ರದಾಯಿಕ ಇಂಧನಗಳ ಬದಲಿಗೆ ಜೈವಿಕಇಂಧನಗಳ ಬಳಕೆಯು ಪೋಷಣೆಯುಕ್ತ ಆಹಾರದ ಸರಬರಾಜನ್ನು ಕಡಿಮೆ ಮಾಡಿ ಆಹಾರದ ಬೆಲೆಯನ್ನು ಹೆಚ್ಚಿಸಬಹುದಾಗಿದೆ.[೩೫] ಸಂಯುಕ್ತ ರಾಷ್ಟ್ರ ಸಂಘದ ಆಹಾರ ಹಕ್ಕುಗಳ ವಿಶೇಷ ಕಾರ್ಯಕಲಾಪ ವರದಿಗಾರ, ಜೀನ್‌ ಜೀಯೆಗ್ಲರ್‌ರು‌ ಬೆಳೆಗಳ ಬದಲಿಗೆ ಮುಸುಕಿನ ಜೋಳದ ಜೊಂಡು ಹಾಗೂ ಬಾಳೆ ಎಲೆಗಳಂತಹಾ ಕೃಷಿ ತ್ಯಾಜ್ಯಗಳನ್ನೇ ಇಂಧನವಾಗಿ ಬಳಸುವ ಸಲಹೆ ನೀಡುತ್ತಾರೆ.[೩೬]

ಆಹಾರ ಸೇವನೆ ಪದ್ಧತಿಗಳು

ಬದಲಾಯಿಸಿ

ಶಿಶುಗಳು ಹಾಗೂ ಮಕ್ಕಳಲ್ಲಿ ಎದೆಹಾಲು ಕುಡಿಸದಿರುವಿಕೆಯು ಅಪೌಷ್ಟಿಕತೆಗೆ ದಾರಿ ಮಾಡುತ್ತದೆ. ಪ್ರಗತಿಶೀಲ ವಿಶ್ವದಲ್ಲಿ ಹೀಗೆ ಮಾಡಲು ಸಾಧಾರಣ ಕುಟುಂಬಗಳು ಶೀಷೆ/ಬಾಟಲ್‌ ಹಾಲಿನ ಸೇವನೆಯೇ ಉತ್ತಮವೆಂದು ಭಾವಿಸಿರುವುದು ಇದಕ್ಕೆ ಕಾರಣವಿರಬಹುದು.[೩೭] WHO ಸಂಸ್ಥೆಯು ಹೇಳುವ ಪ್ರಕಾರ ತಾಯಂದಿರಿಗೆ ಮಕ್ಕಳು ತಮ್ಮನ್ನು ಅರ್ಥೈಸಿಕೊಳ್ಳಲು ಏನು ಮಾಡಬೇಕೆಂದು ತಿಳಿಯದೇ ಅಥವಾ ನೋವು ಹಾಗೂ ಅಸೌಖ್ಯತೆಗಳಿಂದಾಗಿ ಎದೆಹಾಲು ಕುಡಿಸುವಿಕೆಯನ್ನು ನಿಲ್ಲಿಸುತ್ತಾರೆ.[೩೮] ಒಂದೇ ರೀತಿಯ ಆಹಾರಮೂಲದಿಂದ ತೀರಾ ಹೆಚ್ಚಿನ ಆಹಾರ ಸೇವನೆಯು, ಉದಾಹರಣೆಗೆ ಮುಸುಕಿನ ಜೋಳ ಅಥವಾ ಅಕ್ಕಿಯಿಂದಲೇ ಸಂಪೂರ್ಣ ಆಹಾರ ಸೇವನೆಯು ಕೂಡಾ ಅಪೌಷ್ಟಿಕತೆಯನ್ನುಂಟು ಮಾಡಬಹುದು. ಹೀಗಾಗಲು ಪೋಷಣೆಯ ಬಗೆಗಿನ ಸೂಕ್ತ ಜ್ಞಾನ ಇಲ್ಲದಿರುವುದು ಅಥವಾ ಒಂದೇ ರೀತಿಯ ಆಹಾರ ಮೂಲವು ಲಭ್ಯವಿರುವುದೂ ಕಾರಣಗಳಾಗಿರಬಹುದು. ಬಹುತೇಕ ಜನರು ಅಪೌಷ್ಟಿಕತೆಯನ್ನು ಹಸಿವಿನ ಮಾಪನದಿಂದಲೇ ಅಳೆಯುವರಾದರೂ, ಮಿತಿಮೀರಿ ತಿನ್ನುವಿಕೆಯು ಕೂಡಾ ಅದಕ್ಕೆ ಕೊಡುಗೆ ನೀಡಬಲ್ಲದು. ವಿಶ್ವದ ಬಹುತೇಕ ಭಾಗಗಳು ಕುಳಿತೇ ಇರುವ ಜೀವನಶೈಲಿಯು ಹೆಚ್ಚುತ್ತಿರುವುದರೊಂದಿಗೆ ಹೆಚ್ಚುವರಿ ಅಪೌಷ್ಟಿಕ ಆಹಾರವನ್ನು ಹೊಂದಿರುತ್ತಿವೆ. ಇದರ ಪರಿಣಾಮವಾಗಿ, ಸಾರ್ವತ್ರಿಕ ಸ್ಥೂಲಕಾಯತೆ/ಬೊಜ್ಜಿನ ತೊಂದರೆ ಉಂಟಾಗಿದೆ. ಯೇಲ್‌‌‌ ಮನೋತಜ್ಞರಾದ ಕೆಲ್ಲಿ ಬ್ರೌನೆಲ್‌‌ರು ಆರೋಗ್ಯಕರ ಪೌಷ್ಟಿಕ ಆಹಾರಗಳಿಗಿಂತ ಕೊಬ್ಬು ಹಾಗೂ ಸಕ್ಕರೆ ಪೂರಿತ ಆಹಾರಗಳು ಮೇಲುಗೈ ಸಾಧಿಸಿದ ಇಂತಹವನ್ನು "ವಿಷಪೂರಿತ ಆಹಾರ ಪರಿಸರ” ಎಂದು ಕರೆಯುತ್ತಾರೆ. ಸ್ಥೂಲಕಾಯತೆ/ಬೊಜ್ಜಿನ ಸಮಸ್ಯೆಯು ಕೇವಲ ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ಪ್ರಗತಿಶೀಲ ರಾಷ್ಟ್ರಗಳ ಆದಾಯವು ಹೆಚ್ಚುತ್ತಿರುವ ಪ್ರದೇಶಗಳಲ್ಲಿಯೂ ಕಂಡುಬರುತ್ತಿದೆ.[೩೨]

ಕೃಷಿ ಉತ್ಪಾದಕತೆ

ಬದಲಾಯಿಸಿ

ಸರದಿ ಬೆಳೆ ಬೆಳೆಯುವಿಕೆಯಂತಹಾ ಕೃಷಿ ನೈಪುಣ್ಯತೆಗಳ ಅನಜ್ಞತೆ ಅಥವಾ ತಂತ್ರಜ್ಞಾನದ ಅಲಭ್ಯತೆ ಅಥವಾ ಆಧುನಿಕ ಕೃಷಿಯಲ್ಲಿ ಕಂಡುಬರುವ ಉತ್ತಮ ಇಳುವರಿಗೆ ಬೇಕಾಗುವ ಸಾರಜನಕ ರಾಸಾಯನಿಕ/ಕೃತಕ ಗೊಬ್ಬರಗಳು, ಕ್ರಿಮಿನಾಶಕಗಳು ಹಾಗೂ ನೀರಾವರಿಯಂತಹಾ ಸಂಪನ್ಮೂಲಗಳ ಅಲಭ್ಯತೆಗಳಿಂದಾಗಿ ಆಹಾರ ಕೊರತೆಗಳು ಉಂಟಾಗುತ್ತಿರಬಹುದು. ವ್ಯಾಪಕ ಬಡತನದ ಪರಿಣಾಮದಿಂದಾಗಿ, ರೈತರು ತಂತ್ರಜ್ಞಾನದ ವೆಚ್ಚವನ್ನು ಭರಿಸಲಾಗದಿರುವುದಿಲ್ಲ ಅಥವಾ ಸರ್ಕಾರಗಳು ನೀಡಲಾಗುತ್ತಿರುವುದಿಲ್ಲ. ಯುನೈಟೆಡ್‌ ಸ್ಟೇಟ್ಸ್‌‌ ಹಾಗೂ ಯೂರೋಪ್‌‌ಗಳೂ ಕೂಡಾ ತಮ್ಮ ರೈತರಿಗೆ ವ್ಯಾಪಕ ಅನುದಾನ ನೀಡುತ್ತಿದ್ದರೂ ವಿಶ್ವ ಬ್ಯಾಂಕ್‌‌‌ ಹಾಗೂ ಕೆಲ ಶ್ರೀಮಂತ ದಾನಿ ರಾಷ್ಟ್ರಗಳು ನೆರವಿನ ಮೇಲೆ ಆಧಾರಿತವಾಗಿರುವ ರಾಷ್ಟ್ರಗಳಿಗೆ ಮುಕ್ತ ಮಾರುಕಟ್ಟೆ ನೀತಿಯ ಹೆಸರಿನಲ್ಲಿ ರಾಸಾಯನಿಕ/ಕೃತಕ ಗೊಬ್ಬರದಂತಹಾ ಕೃಷಿ ಆದಾನಗಳ ಮೇಲಿನ ಅನುದಾನಗಳನ್ನು ಕಡಿಮೆ ಮಾಡಲು ಅಥವಾ ನಿಲ್ಲಿಸಲು ಒತ್ತಾಯಿಸುತ್ತವೆ.[೧೦][೩೯] ಬಹುತೇಕ ಎಲ್ಲರೂ ಅಲ್ಲದಿದ್ದರೂ, ಸಾಕಷ್ಟು ಸಂಖ್ಯೆಯ ರೈತರು ಮಾರುಕಟ್ಟೆ ಬೆಲೆಯಲ್ಲಿ ರಾಸಾಯನಿಕ/ಕೃತಕ ಗೊಬ್ಬರವನ್ನು ಕೊಳ್ಳುವಷ್ಟು ಶಕ್ತರಾಗಿರುವುದಿಲ್ಲವಾದುದರಿಂದ, ಅಲ್ಪ ಕೃಷಿ ಉತ್ಪಾದನೆ ಹಾಗೂ ವೇತನ ಮತ್ತು ಅಧಿಕ, ತೆರಲಸಾಧ್ಯವಾದ ಆಹಾರ ದರಗಳ ಸಮಸ್ಯೆ ಎದುರಿಸಬೇಕಾಗುತ್ತದೆ.[೧೦]

 
ಸರಿಸುಮಾರು 14 ಪೌಂಡ್‌ಗಳಷ್ಟು ತೂಕದ 18-ತಿಂಗಳು ವಯಸ್ಸಿನ ಆಫ್ಘನ್‌ ಬಾಲಕಿಗೆ US ಸೇನೆಯ ವೈದ್ಯಕೀಯ ತಂಡವು ಪಾಕ್‌ತ್ಯಾ ಪ್ರಾಂತ್ಯದಲ್ಲಿ ಚಿಕಿತ್ಸೆ ನೀಡುತ್ತಿದೆ.

ಹಸಿರು ಕ್ರಾಂತಿಯ ಪ್ರವರ್ತಕರಾದ ನಾರ್ಮನ್‌ ಬೋರ್ಲಾಗ್‌‌ರು ಆಫ್ರಿಕಾದಲ್ಲಿ ಆಹಾರ ಪೂರೈಕೆ ಮಾಡಲು ಅಡೆತಡೆಗಳಾಗಿ ರಾಸಾಯನಿಕ/ಕೃತಕ ಗೊಬ್ಬರಗಳ ಅಲಭ್ಯತೆಗೆ ಕಾರಣಗಳೆಂದು ಪರಿಸರದ ಹಿತದೃಷ್ಟಿಯಿಂದ ರಾಸಾಯನಿಕ/ಕೃತಕ ಗೊಬ್ಬರದ ಪೂರೈಕೆಯನ್ನು ನಿಲ್ಲಿಸುವ ಪ್ರಯತ್ನಗಳೆಡೆ ಬೊಟ್ಟು ಮಾಡಿದ್ದರು.[೧೧]

ಭವಿಷ್ಯದ ಅಪಾಯಗಳು

ಬದಲಾಯಿಸಿ

ವ್ಯಾಪಕ ಅಪೌಷ್ಟಿಕತೆಗೆ ಕಾರಣವಾಗಬಹುದಾದ ಜಾಗತಿಕ ಆಹಾರ ಪೂರೈಕೆಗೆ ಅನೇಕ ಸಂಭಾವ್ಯ ಅಡ್ಡಿಗಳಿವೆ. ಆಹಾರ ಸುರಕ್ಷತೆಗೆ ಹವಾಮಾನ ಬದಲಾವಣೆಯು ಪ್ರಾಮುಖ್ಯತೆ ಹೊಂದಿರುತ್ತದೆ. ಎಲ್ಲಾ ಪೌಷ್ಟಿಕತೆರಹಿತ ಜನರಲ್ಲಿ 95%ರಷ್ಟು ಜನರು ಉಪೋಷ್ಣವಲಯಗಳು ಹಾಗೂ ಉಷ್ಣವಲಯಗಳ ಸಾಪೇಕ್ಷವಾಗಿ ಸ್ಥಾಯಿ ಹವಾಮಾನ ಹೊಂದಿರುವ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಇತ್ತೀಚಿನ IPCC ವರದಿಗಳ ಪ್ರಕಾರ, ಈ ಪ್ರದೇಶಗಳಲ್ಲಿ ತಾಪಮಾನ ಏರಿಕೆಯು "ಬಹಳವೇ ನಿರೀಕ್ಷಣೀಯ"ವೆನ್ನಲಾಗಿದೆ.[೪೦] ತಾಪಮಾನದಲ್ಲಿನ ಅಲ್ಪಸ್ವಲ್ಪ ವ್ಯತ್ಯಾಸಗಳು ಕೂಡಾ ಹವಾಮಾನ ವೈಪರೀತ್ಯಗಳ ಪುನರಾವರ್ತನೆಯು ಹೆಚ್ಚಾಗಲೂ ಕಾರಣವಾಗಬಲ್ಲವು.[೪೦] ಇವುಗಳಲ್ಲಿ ಅನೇಕ ಅಂಶಗಳು ಕೃಷಿ ಉತ್ಪಾದನೆಯ ಮೇಲೆ ಬಹಳ ಪ್ರಭಾವ ಹೊಂದಿದ್ದು, ಆದ್ದರಿಂದ ಪೋಷಣೆಯ ಮೇಲೂ ಪ್ರಭಾವ ಬೀರುತ್ತದೆ. ಉದಾಹರಣೆಗೆ, 1998-2001ರ ಸಾಲಿನ ಮಧ್ಯ ಏಷ್ಯಾದ ಬರಗಾಲವು ಇರಾನ್‌ನಲ್ಲಿ ಸುಮಾರು 80% ಜಾನುವಾರುಗಳ ಸಾವಿಗೆ ಹಾಗೂ ಗೋಧಿ ಮತ್ತು ಜವೆಗೋಧಿ ಬೆಳೆಗಳ ಇಳುವರಿಯಲ್ಲಿ 50% ಇಳಿಕೆಗೆ ಕಾರಣವಾಗಿತ್ತು.[೪೧] ಇತರೆ ರಾಷ್ಟ್ರಗಳಲ್ಲಿಯೂ ಇದೇ ರೀತಿಯ ಅಂಕಿಅಂಶಗಳು ಕಂಡುಬರುತ್ತಿವೆ. ಸಹಾರಾ ಉಪವಲಯಗಳಂತಹಾ ಪ್ರದೇಶಗಳಲ್ಲಿನ ಅನಾವೃಷ್ಟಿಯಂತಹಾ ಹವಾಮಾನ ವೈಪರೀತ್ಯದಲ್ಲಿನ ಏರಿಕೆಗಳು ಅಪೌಷ್ಟಿಕತೆಗೆ ಸಂಬಂಧಿಸಿದಂತೆ ಮತ್ತೂ ತೀವ್ರ ಪರಿಣಾಮಗಳನ್ನು ಬೀರಬಲ್ಲದಾಗಿರುತ್ತದೆ. ಹವಾಮಾನ ವೈಪರೀತ್ಯಗಳಲ್ಲಿ ಏರಿಕೆ ಇಲ್ಲದಿದ್ದಾಗ್ಯೂ, ತಾಪಮಾನದಲ್ಲಿನ ಸರಳ ಏರಿಕೆ ಕೂಡಾ ಅನೇಕ ತಳಿಗಳ ಬೆಳೆಗಳ ಉತ್ಪಾದಕತೆಯನ್ನು ಇಳಿಸುವುದಲ್ಲದೇ, ಆ ವಲಯದಲ್ಲಿನ ಆಹಾರ ಸುರಕ್ಷತೆಯನ್ನು ಕೂಡಾ ಕಡಿಮೆಗೊಳಿಸುತ್ತದೆ.[೪೦] ಜೇನ್ನೊಣ/ದುಂಬಿಗಳು ಅಪಾರ ಸಂಖ್ಯೆಯಲ್ಲಿ ಮರಣಿಸುವಿಕೆಯನ್ನು ಹಿಂಡು/ಸಮೂಹ ಕುಸಿತ ವ್ಯಾಧಿ ಎಂದು ಕರೆಯಲಾಗುತ್ತದೆ.[೪೨] ವಿಶ್ವದಾದ್ಯಂತದ ಅನೇಕ ಕೃಷಿಸಂಬಂಧಿ ಬೆಳೆಗಳಿಗೆ ಈ ದುಂಬಿ/ಜೇನ್ನೊಣಗಳು ಪರಾಗಸ್ಪರ್ಶ ಮಾಡುತ್ತವೆ, ಆದ್ದರಿಂದ ಇದು ಆಹಾರದ ಪೂರೈಕೆಗೆ ಸಂಬಂಧಿಸಿದ ಗಂಭೀರ ಅಪಾಯವಾಗಿದೆ.[೪೩] Ug99 ತಳಿಯಿಂದ ಉಂಟಾಗುವ ಗೋಧಿಯ ಕಾಂಡಕ್ಕೆ ತಗಲುವ ಶಿಲೀಂಧ್ರದ ಸಾಂಕ್ರಾಮಿಕ ರೋಗವೊಂದು ಆಫ್ರಿಕಾದಾದ್ಯಂತ ಹಾಗೂ ಏಷ್ಯಾದಲ್ಲಿ ಪಸರಿಸುತ್ತಿರುವುದಲ್ಲದೇ, ವಿಶ್ವದ ಗೋಧಿ ಬೆಳೆಗಳ 80%ರಷ್ಟನ್ನು ಇದು ನಾಶಗೊಳಿಸಬಹುದೆಂಬ ಭೀತಿ ಎದುರಾಗಿದೆ.[೪೪][೪೫]

ನಿರ್ವಹಣೆ

ಬದಲಾಯಿಸಿ

ವಿಶ್ವ ಬ್ಯಾಂಕ್‌‌‌ನ ಪ್ರಕಾರ ಬಹುತೇಕ ಸೂಕ್ಷ್ಮಪೌಷ್ಟಿಕದ್ರವ್ಯಗಳನ್ನು (ಜೀವಸತ್ವಗಳು ಹಾಗೂ ಖನಿಜಾಂಶಗಳು) ಸೇರಿಸಿ ಸಾರಭರಿತಗೊಳಿಸುವುದರ ಮೂಲಕ ನಡೆಸುವ ಅಪೌಷ್ಟಿಕತೆಯ ವಿರುದ್ಧದ ಹೋರಾಟವು ಇತರ ಪ್ರಯತ್ನಗಳಿಗಿಂತ ಕಡಿಮೆ ವೆಚ್ಚದಲ್ಲಿ ಹಾಗೂ ಅಲ್ಪಸಮಯದಲ್ಲಿ ಪರಿಸ್ಥಿತಿಯನ್ನು ಸುಧಾರಿಸುತ್ತದೆ.[೪೬] ಕೋಪೆನ್‌ಹೇಗನ್‌ ಬಹುಮತಾಭಿಪ್ರಾಯವು ವಿವಿಧ ರೀತಿಯ ಅಭಿವೃದ್ಧಿ ಪ್ರಸ್ತಾಪಗಳ ಬಗ್ಗೆ ಗಮನಹರಿಸಿದ ಸೂಕ್ಷ್ಮಪೌಷ್ಟಿಕದ್ರವ್ಯ ಪೂರಕಾಂಶಗಳಿಗೆ ಮೊದಲನೇ ಶ್ರೇಯಾಂಕ ನೀಡಿತ್ತು.[][೪೭] ಆದಾಗ್ಯೂ, ಸ್ಥೂಲವಾಗಿ ಅನುದಾನಗಳಲ್ಲಿ $300mನಷ್ಟು ಮೂಲಭೂತ ಪೋಷಣೆಗೆ ಪ್ರತಿ ವರ್ಷ ವಿನಿಯೋಗವಾದರೂ, ತೀವ್ರ ಸಮಸ್ಯೆಯಿರುವ 20 ರಾಷ್ಟ್ರಗಳ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಪ್ರತಿಯೊಂದಕ್ಕೆ $2ಕ್ಕಿಂತ ಕಡಿಮೆ ಮೊತ್ತ ಲಭ್ಯವಾಗಿರುತ್ತದೆ.[] ಇದಕ್ಕೆ ಪ್ರತಿಯಾಗಿ, ಮಕ್ಕಳ ಅಪೌಷ್ಟಿಕತೆಗಿಂತ ಕಡಿಮೆ ಸಾವುಗಳಿಗೆ ಕಾರಣವಾಗುವ HIV/AIDSನ ಚಿಕಿತ್ಸೆಗೆ ಎಲ್ಲಾ ರಾಷ್ಟ್ರಗಳಲ್ಲಿ ಪ್ರತಿ ವ್ಯಕ್ತಿಗೆ $67ರಂತೆ $2.2 ಶತಕೋಟಿ ಲಭ್ಯವಿರುತ್ತದೆ.[]

ತುರ್ತು ಕ್ರಮಗಳು

ಬದಲಾಯಿಸಿ

ಸೂಕ್ಷ್ಮಪೌಷ್ಟಿಕದ್ರವ್ಯಗಳನ್ನು ಆಹಾರವನ್ನು ಸಾರಭರಿತಗೊಳಿಸುವುದರ ಮೂಲಕ ಪಡೆಯಬಹುದು.[] ಕಡಲೆಕಾಯಿ ಬೆಣ್ಣೆಯ ಪುಡಿಕೆಗಳು (ನೋಡಿ ಪ್ಲಂಪಿ ಕಡಲೆಕಾಯಿಬೀಜಗಳು) ಮತ್ತು ಸ್ಪಿರುಲಿನಾನಂತಹಾ ಸಾರಭರಿತ ಆಹಾರಗಳು ಮಾನವ ಆರೋಗ್ಯದ ತುರ್ತುಪರಿಸ್ಥಿತಿಗಳಲ್ಲಿ ಆಹಾರ ಸೇವನೆಯಲ್ಲಿ ಕ್ರಾಂತಿಯನ್ನುಂಟು ಮಾಡಿವೆ, ಏಕೆಂದರೆ ಅವುಗಳನ್ನು ನೇರವಾಗಿ ಪೊಟ್ಟಣಗಳಿಂದಲೇ ಸೇವಿಸಬಹುದು, ಯಾವುದೇ ರೀತಿಯ ಶೈತ್ಯೀಕರಣ ಅಥವಾ ದುರ್ಲಭ ಶುದ್ಧ ನೀರಿನೊಂದಿಗೆ ಬೆರೆಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ, ಜೊತೆಗೆ ವರ್ಷಗಳ ಕಾಲ ಇಟ್ಟಿರಬಹುದಲ್ಲದೇ, ಮಹತ್ವದ ವಿಷಯವೆಂದರೆ ತೀವ್ರ ರೋಗಪೀಡಿತ ಮಕ್ಕಳೂ ಸಹಾ ಇದನ್ನು ಸೇವಿಸಬಹುದಾಗಿರುತ್ತದೆ.[] ಸಂಯುಕ್ತ ರಾಷ್ಟ್ರ ಸಂಘದ 1974ರ ವಿಶ್ವ ಆಹಾರ ಸಮ್ಮೇಳನದಲ್ಲಿ ಸ್ಪಿರುಲಿನಾವನ್ನು 'ಭವಿಷ್ಯದ ಅತ್ಯುತ್ತಮ ಆಹಾರ' ಎಂದು ಘೋಷಿಸಲಾಯಿತಲ್ಲದೇ ಪ್ರತಿ 24 ಗಂಟೆಗಳಲ್ಲಿ ಸಿದ್ಧವಾಗುವ ಸಾಧ್ಯತೆ ಇದನ್ನು ಅಪೌಷ್ಟಿಕತೆಯನ್ನು ನಿರ್ಮೂಲನಗೊಳಿಸಲು ಸಮರ್ಥ ಸಾಧನವನ್ನಾಗಿಸಿದೆ. ಇಷ್ಟೇ ಅಲ್ಲದೇ, A ಜೀವಸತ್ವದ ಕ್ಯಾಪ್ಸೂಲ್‌ಗಳು ಅಥವಾ ಸತುವು ಮಾತ್ರೆಗಳಂತಹಾ ಪೂರಕಾಂಶಗಳನ್ನು ಮಕ್ಕಳಲ್ಲಿನ ಅತಿಸಾರ/ಭೇದಿಗೆ ಚಿಕಿತ್ಸೆಯಾಗಿ ಬಳಸುತ್ತಾರೆ.[] ನೆರವು ನೀಡುವ ಗುಂಪುಗಳಲ್ಲಿ ಹಸಿದವರಿಗೆ ಆಹಾರ ನೀಡುವುದಕ್ಕಿಂತಲೂ ನಗದು ಅಥವಾ ನಗದು ಸಲ್ಲಿಕೆ ಹುಂಡಿಗಳನ್ನು ನೀಡುವುದು ಅಗ್ಗದ, ತ್ವರಿತ ಹಾಗೂ ಹೆಚ್ಚು ದಕ್ಷ ವಿಧಾನವಾಗಿದೆ, ಅದರಲ್ಲೂ ವಿಶೇಷವಾಗಿ ಆಹಾರವು ಲಭ್ಯವಿದ್ದು ತೆರಲಾಗದ ಬೆಲೆಗಳಿದ್ದ ಸಂದರ್ಭಗಳಲ್ಲಿ ಎಂಬುದು ಮನವರಿಕೆಯಾಗುತ್ತಲಿದೆ.[] ಅತಿದೊಡ್ಡ ಸರ್ಕಾರೇತರ ಆಹಾರದ ವಿತರಕ UN'ನ ವಿಶ್ವ ಆಹಾರ ಯೋಜನೆ ಸಂಸ್ಥೆಯು ಕೆಲ ಪ್ರದೇಶಗಳಲ್ಲಿ ತಾನು ಆಹಾರದ ಬದಲಿಗೆ ನಗದು ಹಾಗೂ ನಗದುಸಲ್ಲಿಕೆ ಹುಂಡಿಗಳನ್ನು ವಿತರಿಸುವುದಾಗಿ ಘೋಷಿಸಿದ್ದನ್ನು WFP'ನ ಕಾರ್ಯಕಾರಿ ನಿರ್ದೇಶಕ ಜೊಸೆಟ್ಟೆ ಷೀರನ್‌ರು ಇದನ್ನು ಆಹಾರ ನೆರವಿನಲ್ಲಿ "ಕ್ರಾಂತಿ"ಯೆಂದು ಕರೆದರು.[][] ನೆರವಿನ ಸಂಸ್ಥೆ ಕಾನ್ಸರ್ನ್‌ ವರ್ಲ್ಡ್‌ವೈಡ್‌ ಹಣ ವರ್ಗಾವಣೆಯ ವ್ಯವಸ್ಥೆಯನ್ನು ನೀಡುವ ಸಫಾರಿಕಾಮ್‌ ಎಂಬ ಸಂಚಾರಿ ದೂರವಾಣಿ ಸೇವಾದಾರ ಸಂಸ್ಥೆಯ ಮೂಲಕ ರಾಷ್ಟ್ರದ ಒಂದೆಡೆಯಿಂದ ಮತ್ತೊಂದೆಡೆಗೆ ನಗದನ್ನು ಹಸ್ತಾಂತರಿಸುವ ವಿಧಾನವನ್ನು ಕಾರ್ಯರೂಪಕ್ಕೆ ತರುತ್ತಿದೆ.[] ಆದಾಗ್ಯೂ, ಮಾರುಕಟ್ಟೆಯಿಂದ ದೂರವಿರುವ ಹಾಗೂ ಕಡಿಮೆ ಸಂಪರ್ಕವಿರುವ ಅನಾವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಆಹಾರವನ್ನು ತಲುಪಿಸುವುದೇ ಸಹಾಯ ಮಾಡುವ ಸೂಕ್ತ ವಿಧಾನವಾಗಿದೆ.[] ಫ್ರೆಡ್‌‌ ಕೂನಿಯವರು "ಪರಿಹಾರ ಚಟುವಟಿಕೆಗಳ ಸಂದರ್ಭದಲ್ಲಿ ಆಹಾರವನ್ನು ಆಮದು ಮಾಡಿಕೊಳ್ಳುವುದರಿಂದ ಹೆಚ್ಚೇನೂ ಜೀವಗಳನ್ನುಳಿಸಲು ಸಾಧ್ಯವಿಲ್ಲ. ಅದು ರಾಷ್ಟ್ರಕ್ಕೆ ಬಂದು ಜನರನ್ನು ತಲುಪುವ ಹೊತ್ತಿಗೆ ಅನೇಕರು ಸಾವು ಕಂಡಿರುವ ಸಾಧ್ಯತೆಗಳಿರುತ್ತವೆ" ಎಂದು ಹೇಳಿಕೆ ನೀಡಿದ್ದರು.[೪೮] ಹಸಿದವರು ವಾಸಿಸುವ ರಾಷ್ಟ್ರದ ಬದಲಿಗೆ ತವರು ರಾಷ್ಟ್ರದಲ್ಲೇ ಆಹಾರವನ್ನು ಕೊಂಡುಕೊಳ್ಳುವುದನ್ನು ಕಡ್ಡಾಯ ಮಾಡಿರುವ US ಕಾನೂನು ಅಸಮರ್ಥವಾಗಿದೆ, ಏಕೆಂದರೆ ಇದರಲ್ಲಿ ವೆಚ್ಚ ಮಾಡಿದ ಸರಿಸುಮಾರು ಅರ್ಧದಷ್ಟು ಹಣ ಸಾಗಣಿಕೆಗೆ ವ್ಯಯವಾಗಿರುತ್ತದೆ.[೪೭] ಫ್ರೆಡ್‌‌ ಕೂನಿ ಮತ್ತೂ ಹೇಳಿದ್ದೇನೆಂದರೆ "ಇತ್ತೀಚಿನ ಪ್ರತಿ ದುರ್ಭಿಕ್ಷ/ಬರದ ಅಧ್ಯಯನಗಳು ಆಹಾರವು ಆಹಾರ ಕೊರತೆಯ ಪ್ರದೇಶದ ಸನಿಹದಲ್ಲೇ ಯಾವಾಗಲೂ ಸಿಗದಿದ್ದರೂ ರಾಷ್ಟ್ರದಲ್ಲಿಯಂತೂ ಖಂಡಿತಾ ಲಭ್ಯವಿರುತ್ತದೆ ಎಂದು ತೋರಿಸಿವೆ" ಹಾಗೂ "ಸ್ಥಳೀಯ ಸನ್ನಿವೇಶಗಳಲ್ಲಿ ಬೆಲೆಗಳು ಬಡವರಿಗೆ ಕೊಳ್ಳಲು ತೀರ ದುಬಾರಿಯೆನಿಸಿದರೂ, ಸಾಧಾರಣವಾಗಿ ದಾನಿಗೆ ಸಂಗ್ರಹಿತ ಆಹಾರವನ್ನು ಏರಿದ ಬೆಲೆಗೆ ಕೊಳ್ಳುವುದು ವಿದೇಶದಿಂದ ಆಮದು ಮಾಡಿಕೊಳ್ಳುವುದಕ್ಕಿಂತ ಅಗ್ಗವಾಗಿರುತ್ತದೆ."[೪೯] ಇಥಿಯೋಪಿಯಾವು ಈಗ ವಿಶ್ವ ಬ್ಯಾಂಕ್‌‌‌'ನ ಆಹಾರ ಬಿಕ್ಕಟ್ಟುಗಳನ್ನು ಎದುರಿಸುವ ನಿರೂಪಿತ ಸೂತ್ರವಾಗಿ ಬಳಕೆಯಲ್ಲಿರುವ ಯೋಜನೆಯನ್ನು ಪ್ರವರ್ತಿಸಿತ್ತು, ಹಸಿವಿನ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳಿಗೆ ಹೇಗೆ ಎಷ್ಟು ಉತ್ತಮವಾಗಿ ಸಹಾಯ ಮಾಡಬಹುದೆಂಬುದರ ಬಗ್ಗೆ ಒಂದು ಮಾದರಿಯಾಗಿ ಇದನ್ನು ನೆರವು ಸಂಸ್ಥೆಗಳು ಭಾವಿಸುತ್ತಿವೆ. ರಾಷ್ಟ್ರದ ಪ್ರಧಾನ ಆಹಾರ ನೆರವಿನ ಯೋಜನೆಯಾದ ಪ್ರೊಡಕ್ಟಿವ್‌ ಸೇಫ್ಟಿ ನೆಟ್‌ ಪ್ರೋಗ್ರಾಮ್‌ನ ಮೂಲಕ ಇಥಿಯೋಪಿಯಾವು ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಗ್ರಾಮೀಣ ನಿವಾಸಿಗಳಿಗೆ, ಮಾಡಿದ ಕೆಲಸಕ್ಕೆ ಪ್ರತಿಯಾಗಿ ಆಹಾರ ಅಥವಾ ನಗದುಗಳನ್ನು ನೀಡುವ ಆಯ್ಕೆ ನೀಡುತ್ತದೆ. ವಿಶ್ವ ಆಹಾರ ಯೋಜನೆಯಂತಹಾ ವಿದೇಶಿ ನೆರವಿನ ಸಂಸ್ಥೆಗಳು ಆಗ ಆಹಾರವನ್ನು ಸ್ಥಳೀಯವಾಗಿ ಹೆಚ್ಚುವರಿಯಾಗಿರುವ ಸ್ಥಳಗಳಲ್ಲಿ ಕೊಂಡು ಆಹಾರದ ಕೊರತೆಯಿರುವ ಸ್ಥಳಗಳಲ್ಲಿ ಅದನ್ನು ವಿತರಿಸುವ ಅವಕಾಶ ಇರುತ್ತದೆ.[೫೦] ಕೇವಲ ಇಥಿಯೋಪಿಯಾ ಮಾತ್ರವಲ್ಲ ಬ್ರೆಝಿಲ್‌ ಕೂಡಾ ರೈತರಿಗೆ, ನಗರದ ಬಡವರು ಹಾಗೂ ಪ್ರಧಾನವಾಗಿ ಮಹಾನಗರದವರಿಗೆ ಅನುಕೂಲವಾಗುವ ಸಾವಯವ ತ್ಯಾಜ್ಯಗಳನ್ನು ಸಂಸ್ಕರಣೆಗೆ ಒಳಪಡಿಸುವ ಯೋಜನೆಯನ್ನು ಕೈಗೊಂಡಿದೆ. ಮಹಾನಗರ ವಾಸಿಗಳು ಸಾವಯವ ತ್ಯಾಜ್ಯಗಳನ್ನು ತಮ್ಮ ಗೃಹತ್ಯಾಜ್ಯಗಳಿಂದ ಪ್ರತ್ಯೇಕಿಸಿ ಚೀಲಕ್ಕೆ ಹಾಕಿ ತಾಜಾ ತರಕಾರಿ ಹಣ್ಣುಗಳ ಜೊತೆಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ, ಅಲ್ಲಿನ ರಾಷ್ಟ್ರೀಯ ತ್ಯಾಜ್ಯವನ್ನು ಕಡಿಮೆಗೊಳಿಸುತ್ತದಲ್ಲದೇ ಪೌಷ್ಟಿಕ ಆಹಾರದ ನಗರದ ನಾಗರಿಕರು ಸ್ಥಿರ ಪೂರೈಕೆಯನ್ನು ಹೊಂದಿರುತ್ತಾರೆ.[೫೧]

ದೀರ್ಘ ಕಾಲೀನ ಕ್ರಮಗಳು

ಬದಲಾಯಿಸಿ

ಸಾರಜನಕ ರಾಸಾಯನಿಕ/ಕೃತಕ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳಂತಹಾ ಪಶ್ಚಿಮದಲ್ಲಿನ ಆಧುನಿಕ ಕೃಷಿಸಂಬಂಧಿ ತಂತ್ರಗಳನ್ನು ಏಷ್ಯಾಗೆ ಕರೆತರುವ ಪ್ರಯತ್ನ ಹಸಿರು ಕ್ರಾಂತಿ ಎಂಬ ಯೋಜನೆಯು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಿಂದೆ ಕಂಡುಬರುತ್ತಿದ್ದಂತೆ ಅಪೌಷ್ಟಿಕತೆಯಲ್ಲಿ ಇಳಿಕೆ ಕಂಡಿತು. ಆಫ್ರಿಕಾದಲ್ಲಿ ಈಗಾಗಲೇ ಆ ರೀತಿಯ ರಸ್ತೆಗಳ ವ್ಯವಸ್ಥೆ ಅಥವಾ ಬೀಜ ವಿತರಣೆ ಮಾಡುವ ಸಾರ್ವಜನಿಕ ಬೀಜ ಕಂಪೆನಿಗಳಂತಹಾ ಆಧಾರಸ್ಥಾಪನೆಗಳು ಹಾಗೂ ಸಂಸ್ಥೆಗಳಿದ್ದು ಅವು ಪೂರೈಕೆಯಲ್ಲಿ ಕೊರತೆಯನ್ನು ಅನುಭವಿಸುತ್ತಿದ್ದುದರಿಂದ ಇದು ಸಾಧ್ಯವಾಯಿತು.[೫೨] ಅನುದಾನಿತ ರಾಸಾಯನಿಕ/ಕೃತಕ ಗೊಬ್ಬರಗಳು ಹಾಗೂ ಬೀಜಗಳ ಮೇಲಿನ ಕೃಷಿಯಲ್ಲಿನ ಹೂಡಿಕೆಗಳು ಆಹಾರ ಬೆಳೆಗಳ ಫಸಲನ್ನು ಹೆಚ್ಚು ಮಾಡುತ್ತದಲ್ಲದೇ ಆಹಾರದ ಬೆಲೆಗಳನ್ನು ಕಡಿಮೆ ಮಾಡುತ್ತದೆ.[೧೦][೫೩] ಉದಾಹರಣೆಗೆ, ಮಲಾವಿಯ ಸಂದರ್ಭದಲ್ಲಿ ಅಲ್ಲಿನ 13 ದಶಲಕ್ಷ ಜನರಲ್ಲಿ ಬಹು ಮಟ್ಟಿಗೆ ಐದು ದಶಲಕ್ಷ ಜನರು ಈ ರೀತಿಯ ತುರ್ತು ಆಹಾರ ನೆರವಿನ ಅಗತ್ಯ ಹೊಂದಿರುತ್ತಿದ್ದರು. ಆದಾಗ್ಯೂ, ಸರ್ಕಾರವು ಕಾರ್ಯ ನೀತಿಯನ್ನು ಬದಲಿಸಿದಾಗ ವಿಶ್ವ ಬ್ಯಾಂಕ್‌‌‌ನ ವಾಗ್ದಂಡನೆಗೆ ವಿರುದ್ಧವಾಗಿ ರಾಸಾಯನಿಕ/ಕೃತಕ ಗೊಬ್ಬರ ಹಾಗೂ ಬೀಜಗಳಿಗೆ ಅನುದಾನಗಳನ್ನು ಪರಿಚಯಿಸಿದಾಗ, ರೈತರು ದಾಖಲೆ ಪ್ರಮಾಣದ ಮುಸುಕಿನ ಜೋಳದ ಫಸಲನ್ನು 2005ರಲ್ಲಿನ 1.2 ದಶಲಕ್ಷದಿಂದ 2007ರಲ್ಲಿನ 3.4 ದಶಲಕ್ಷಕ್ಕೆ ಜಿಗಿದಾಗ ಮಲಾವಿ ಪ್ರಮುಖ ಆಹಾರ ರಫ್ತುದಾರ ರಾಷ್ಟ್ರವೆನಿಸಿಕೊಂಡಿತು.[೧೦] ಇದರಿಂದಾಗಿ ಆಹಾರದ ಬೆಲೆಗಳು ಇಳಿದು ಕೃಷಿ ಕಾರ್ಮಿಕರ ವೇತನಗಳು ಹೆಚ್ಚಿದವು.[೧೦] ಕೃಷಿಯಲ್ಲಿ ಹೂಡಿಕೆ ಮಾಡಬೇಕೆಂಬುದರ ಪ್ರತಿಪಾದಕರಲ್ಲಿ ಆಫ್ರಿಕಾ’ದ ರೈತರಿಗೆ ಅಗತ್ಯವಾದ ರಾಸಾಯನಿಕ/ಕೃತಕ ಗೊಬ್ಬರ ಹಾಗೂ ಬೀಜಗಳ ಮೇಲೆ ಶ್ರೀಮಂತ ರಾಷ್ಟ್ರಗಳು ಹೂಡಿಕೆ ಮಾಡಬೇಕೆಂಬ ಕಲ್ಪನೆಯನ್ನು ಬಿತ್ತಿದ ಜೆಫ್ರಿ ಸ್ಯಾಷ್ಸ್‌‌‌ ಕೂಡಾ ಇದ್ದಾರೆ.[][೧೦] ಎದೆಹಾಲು ಕುಡಿಸುವಿಕೆಯ ಬಗೆಗಿನ ಅರಿವು ಮೂಡಿಸುವಿಕೆಯು ನಿಜಕ್ಕೂ ಉಪಯುಕ್ತವಾಗಿರುತ್ತದೆ. ಮೊದಲೆರಡು ವರ್ಷಗಳಲ್ಲಿನ ಎದೆಹಾಲು ಕುಡಿಸುವಿಕೆ ಅದರಲ್ಲೂ ನಿರ್ದಿಷ್ಟವಾಗಿ ಮೊದಲ ಆರು ತಿಂಗಳಲ್ಲಿನ ಎದೆಹಾಲು ಕುಡಿಸುವಿಕೆಯು 1.3 ದಶಲಕ್ಷ ಮಕ್ಕಳ ಜೀವಗಳನ್ನು ಉಳಿಸಬಲ್ಲದು.[೫೪] ದೀರ್ಘಕಾಲೀನ ಅವಧಿಯಲ್ಲಿ, ಕೆಲ ಸಂಸ್ಥೆಗಳು ದೈನಂದಿನ ಆಹಾರಗಳನ್ನು ಸೂಕ್ಷ್ಮಪೌಷ್ಟಿಕದ್ರವ್ಯಗಳೊಂದಿಗೆ ಸಾರಭರಿತಗೊಳಿಸಿ ಗ್ರಾಹಕರಿಗೆ ಮಾರುವ ಈಜಿಪ್ಟ್‌‌ನಲ್ಲಿನ ಬೆಲದಿ/ಡಿ ರೊಟ್ಟಿ/ಬ್ರೆಡ್‌ನಲ್ಲಿನ ಗೋಧಿ ಹಿಟ್ಟು ಅಥವಾ ವಿಯೆಟ್ನಾಮ್‌‌ನಲ್ಲಿನ ಮೀನಿನ ವ್ಯಂಜನ ಮತ್ತು ಉಪ್ಪನ್ನು ಅಯೋಡೀಕರಣಗೊಳಿಸುವಿಕೆಗಳಂತಹಾ ಪ್ರಯತ್ನಗಳಿಗೆ ಕೈಹಾಕುತ್ತಿವೆ.[] ಜನಸಮೂಹದ ಗಾತ್ರವನ್ನು ನಿಯಂತ್ರಿಸುವುದು ಒಂದು ಪ್ರಸ್ತಾಪಿತ ಪರಿಹಾರವಾಗಿದೆ. ಜನಸಂಖ್ಯೆ/ಸಮೂಹ ಬೆಳವಣಿಗೆಯನ್ನು ನೈಸರ್ಗಿಕ ವಿಪತ್ತುಗಳು ಹಾಗೂ “ನೈತಿಕ ನಿಗ್ರಹಗಳ” ಮೂಲಕ ಸ್ವಯಂಪ್ರೇರಿತವಾಗಿ ಮಿತಿಗಳನ್ನು ಇಟ್ಟುಕೊಳ್ಳಬಹುದು ಎಂದು ಥಾಮಸ್‌ ಮಾಲ್ತಸ್‌‌ ಆಗ್ರಹಿಸಿದರು.”[೫೫] ರಾಬರ್ಟ್‌ ಛಾಪ್‌ಮನ್‌‌ ಸಲಹೆಯ ಪ್ರಕಾರ ಜಾಗತಿಕ ಜನಸಂಖ್ಯೆ/ಸಮೂಹ ಬೆಳವಣಿಗೆಯನ್ನು ಮೊಟಕುಗೊಳಿಸಲು ನೀತಿಗಳ ಮೂಲಕ ಸರ್ಕಾರದ ಹಸ್ತಕ್ಷೇಪವು ಅಗತ್ಯವಾಗಿರುತ್ತದೆ.[೫೬] ವಲಸೆ-ವಿರೋಧಿ, ಪ್ರತ್ಯೇಕತಾವಾದಿ ನಿಲುವು ತಳೆಯುವ ಗ್ಯಾರೆಟ್‌ ಹಾರ್ಡಿನ್‌ರು “…ಎಲ್ಲಾ ಸಾರ್ವಭೌಮ ಸರ್ಕಾರಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಜನಸಂಖ್ಯೆ/ಸಮೂಹ ಸಮಸ್ಯೆಗಳನ್ನು ತಾವೇ ಪರಿಹಾರಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು" ಎಂದು ಆಗ್ರಹಿಸಿದ್ದರಲ್ಲದೇ ವಲಸೆಯು ರಾಷ್ಟ್ರಗಳು ತಮ್ಮ ಜನಸಂಖ್ಯೆ/ಸಮೂಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದನ್ನು ಕಡೆಗಣಿಸುವುದನ್ನು ಮುಂದುವರೆಸುವ ರೀತಿಯಲ್ಲಿ ಒತ್ತಡ ನಿವಾರಣಾ ಕವಾಟದ ರೀತಿ ವರ್ತಿಸುತ್ತದೆ ಎಂದು ಹೇಳಿದ್ದರು.[೫೭] ಅಮರ್ತ್ಯ ಸೆನ್‌‌ರ ಮಟ್ಟಿಗೆ, “ದುರ್ಭಿಕ್ಷ/ಬರವು ಹೇಗೆ ಬಂದರೂ, ಅದನ್ನು ನಿವಾರಿಸುವ ಪ್ರಮುಖ ವಿಧಾನವೆಂದರೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಆಹಾರದ ಭಾರಿ ಪ್ರಮಾಣದ ಸರಬರಾಜು ಮಾಡುವುದಾಗಿರುತ್ತದೆ. ಇದು ಕೇವಲ ಪಡಿತರ ಮಿತಿ ಹಾಗೂ ನಿಯಂತ್ರಣಗಳನ್ನು ವ್ಯವಸ್ಥೆಗೊಳಿಸುವುದಕ್ಕೆ ಮಾತ್ರವಲ್ಲದೆ, ಸಾಧಾರಣ ಹಣದುಬ್ಬರದ ಪರಿಸ್ಥಿತಿಯಲ್ಲಿ ವಿನಿಮಯ ಧನಗಳಲ್ಲಾದ ವ್ಯತ್ಯಾಸದಿಂದ ಬಾಧಿತರಾದವರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ಯೋಗ ಯೋಜನೆ ಹಾಗೂ ಇನ್ನಿತರ ವಿಧಾನಗಳನ್ನು ಕಾರ್ಯರೂಪಕ್ಕೆ ತರುವುದಕ್ಕೂ ಅನ್ವಯಿಸುತ್ತದೆ.”[೫೮] ಅವಕಾಶ/ಪ್ರವೇಶಾನುಮತಿ ಸಮಸ್ಯೆಗಳನ್ನು ಪರಿಹರಿಸಲು ಸೂಚಿತವಾದ ಒಂದು ನೀತಿಚೌಕಟ್ಟನ್ನು ಆಹಾರ ಸಾರ್ವಭೌಮತೆ ಎನ್ನಲಾಗುತ್ತದೆ, ಇದು ಜನರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಶಕ್ತಿಗಳ ಮೇಲೆ ನಿರ್ಭರವಾದ ಆಹಾರದ ವ್ಯವಸ್ಥೆಯ ಬದಲಿಗೆ ತಮ್ಮದೇ ಆದ ಆಹಾರ, ಕೃಷಿ, ಜಾನುವಾರುಗಳು, ಹಾಗೂ ಮೀನುಗಾರಿಕಾ ವ್ಯವಸ್ಥೆಗಳನ್ನು ನಿರ್ಧರಿಸುವ ಹಕ್ಕನ್ನು ನೀಡುತ್ತದೆ. ಫುಡ್‌ ಫರ್ಸ್ಟ್‌ ಎಂಬುದು ಆಹಾರ ಸಾರ್ವಭೌಮತೆಗೆ ಬೆಂಬಲವನ್ನು ಕಟ್ಟಿಕೊಟ್ಟ ಪ್ರಮುಖ ಚಿಂತಕರ ಚಾವಡಿಗಳಲ್ಲಿ ಒಂದಾಗಿದೆ. ನವ್ಯಪುರೋಗಾಮಿಗಳು ಮುಕ್ತ ಮಾರುಕಟ್ಟೆಗೆ ಹೆಚ್ಚಿನ ಕಾರ್ಯವನ್ನು ನಿಯೋಜಿಸುವುದರ ಪರ ವಕಾಲತ್ತು ವಹಿಸುತ್ತಾರೆ. ವಿಶ್ವ ಬ್ಯಾಂಕ್‌‌‌ ಸ್ವತಃ ತನ್ನನ್ನೇ ಅಪೌಷ್ಟಿಕತೆಯ ಪರಿಹಾರದ ಭಾಗವಾಗಿ ಹೆಸರಿಸಿಕೊಳ್ಳುತ್ತದಲ್ಲದೇ, ರಾಷ್ಟ್ರಗಳು ಬಡತನ ಹಾಗೂ ಅಪೌಷ್ಟಿಕತೆಗಳ ಆವರ್ತದಿಂದ ಹೊರಬರುವುದರಲ್ಲಿ ಯಶಸ್ಸನ್ನು ಹೊಂದಲು ಅತ್ಯುತ್ತಮ ಮಾರ್ಗವೆಂದರೆ ವಿಶ್ವ ಮಾರುಕಟ್ಟೆಯಿಂದ ಆಹಾರಸಾಮಗ್ರಿಗಳನ್ನು ಕೊಳ್ಳುವಷ್ಟು ಆರ್ಥಿಕ ಸಾಮರ್ಥ್ಯವನ್ನು ಹೊಂದುವ ಮಟ್ಟಿಗೆ ರಫ್ತು-ಆಧಾರಿತ ಆರ್ಥಿಕತೆಗಳನ್ನು ನಿರ್ಮಿಸಿಕೊಳ್ಳುವುದಾಗಿರುತ್ತದೆ ಎಂದು ಆಗ್ರಹಿಸುತ್ತದೆ. ಅಪೌಷ್ಟಿಕತೆಯ ಒಂದು ರೂಪವಾದ ಮಿತಿಮೀರಿದ ಆಹಾರ ಸೇವನೆಗೆ ಚಿಕಿತ್ಸೆ ಮಾಡುವುದಕ್ಕಿಂತ ಅದನ್ನು ತಡೆಯುವುದು ಗುರಿಯಾಗಿದ್ದಾಗ ಶಾಲಾ ಪರಿಸರದಲ್ಲಿ ಇದನ್ನು ಆರಂಭಿಸುವುದು ಸೂಕ್ತವಾಗಿರುತ್ತದೆ, ಏಕೆಂದರೆ ಅಲ್ಲಿಯೇ ಮಕ್ಕಳು ಅಂದು ಪಡೆಯುವ ಶಿಕ್ಷಣವು ಬಾಲ್ಯದಲ್ಲಿ ಹಾಗೂ ಪ್ರೌಢಾವಸ್ಥೆಯಲ್ಲಿ ಅವರು ಆರೋಗ್ಯಪೂರ್ಣ ಆಹಾರದ ಆಯ್ಕೆಯನ್ನು ಮಾಡಲು ಸಹಾಯಕವಾಗಿರುತ್ತದೆ. ಸಿಂಗಪೂರ್‌ನಲ್ಲಿ ಗಮನಿಸಿದ ಹಾಗೆ, ಮಕ್ಕಳು ಹಾಗೂ ಶಿಕ್ಷಕರ ಶಾಲೆಗಳ ಮಧ್ಯಾಹ್ನದ ಊಟದ ಯೋಜನೆಗಳು ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಪೋಷಣೆಯ ಅಂಶವನ್ನು ಹೆಚ್ಚಿಸಿದರೆ ಸ್ಥೂಲಕಾಯತೆ/ಬೊಜ್ಜನ್ನು ಬಹುತೇಕ 30-50%ರವರೆಗೆ ಕಡಿಮೆ ಮಾಡಬಹುದಾಗಿದೆ.[೩೨] ಅಪೌಷ್ಟಿಕತೆಯ, ವಿಶೇಷವಾಗಿ ಹಸಿವಿನ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲ ಪ್ರಯತ್ನಗಳನ್ನು ಉಪಕ್ರಮಿಸಲಾಗಿದೆ. ಒಂದು ಶ್ರೇಷ್ಠ ಉದಾಹರಣೆಯೆಂದರೆ ಹಸಿವನ್ನು ಹೋಗಲಾಡಿಸಲು ಮುಹಮ್ಮದ್‌‌ ಯೂನಸ್‌ರು ಆರಂಭಿಸಿದ ಗ್ರಾಮೀಣ್‌ ಬ್ಯಾಂಕ್‌ ಎಂಬ ಯೋಜನೆ. ಈ ಯೋಜನೆಯು ತೀರ ಬಡ ಮಹಿಳೆಯರಿಗೆ ಆದಾಯವನ್ನು ಕಂಡುಕೊಳ್ಳಲಾಗುವಂತೆ ಸಣ್ಣ ಸಾಲಗಳನ್ನು ನೀಡುತ್ತದೆ, ಈ ಸಾಲಗಳು ಮಹಿಳೆಯರನ್ನು ಬಡತನದಿಂದ ಮೇಲೆತ್ತುವುದು ಮಾತ್ರವಲ್ಲದೇ, ಪೋಷಣಾತ್ಮಕ ಅನುಕೂಲಗಳನ್ನೂ ನೀಡುತ್ತದೆ. ಕೆಲ ಅಧ್ಯಯನಗಳು ತೋರಿಸಿದ ಪ್ರಕಾರ ಮಹಿಳೆಯೋರ್ವಳಿಗೆ ಆದಾಯದ ದಾರಿಯೊಂದು ಕಂಡಿತೆಂದರೆ, ಆಕೆ ಅದರಲ್ಲಿ ಬಹುಪಾಲನ್ನು ಮನೆವಾರ್ತೆ ಅಗತ್ಯಗಳಿಗೆ, ವಿಶೇಷವಾಗಿ ಆಹಾರಕ್ಕೆ ಖರ್ಚು ಮಾಡುತ್ತಾಳೆ.[೩೨] ಆದ್ದರಿಂದ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರೆ, ಬಡತನವನ್ನೂ ಕಡಿಮೆ ಮಾಡಬಹುದಲ್ಲದೇ ಅಪೌಷ್ಟಿಕತೆ, ವಿಶೇಷವಾಗಿ ಹಸಿವಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ. ಕಿರು-ಸಾಲ ಯೋಜನೆಗಳು ಪ್ರಮುಖವಾಗಿ ಮಹಿಳೆಯರ ಮೇಲೆ ಕೇಂದ್ರಿತವಾಗಿರುವುದು ಏಕೆಂದರೆ ಹಸಿವು ಪುರುಷರಿಗೆ ಹೋಲಿಸಿದರೆ ವಿಷಮ ಪ್ರಮಾಣದಲ್ಲಿ ಮಹಿಳೆಯರನ್ನು ಬಾಧಿಸುತ್ತದೆ.[೩೨] ಮಹಿಳೆಯರೆಡೆಗೆ ಗಮನ ಕೇಂದ್ರೀಕರಿಸುವ ಮೂಲಕ ಕಿರುಸಾಲ ಯೋಜನೆಗಳು ಉದ್ಯೋಗ ಹಾಗೂ ಶಿಕ್ಷಣ ಎರಡೂ ಅವಕಾಶಗಳನ್ನು ನೀಡುವ ಮೂಲಕ ಅಪೌಷ್ಟಿಕತೆಯೊಂದಿಗೆ ಹೋರಾಡುತ್ತವೆ. ಮಹಿಳೆಯರು ಉದ್ಯೋಗಗಳನ್ನು ಪಡೆಯಲು ಆರಂಭಿಸಿದರೆ ಅವರು ತಮ್ಮ ಹಾಗೂ ತಮ್ಮ ಕುಟುಂಬಕ್ಕೆ ಆಹಾರ ಕೊಳ್ಳಬಲ್ಲಷ್ಟು ಹಣವನ್ನು ದುಡಿಯಬಲ್ಲರಾಗಿರುತ್ತಾರೆ. ಇಷ್ಟೇ ಅಲ್ಲದೇ, ಹುಡುಗಿಯರಿಗೆ ಶಿಕ್ಷಣವನ್ನು ಹೊಂದುವ ಅವಕಾಶ ನೀಡಿದರೆ ಅವರು ಪುರುಷರೊಂದಿಗೆ ಮತ್ತಷ್ಟು ಹೆಚ್ಚಿನ ಸಮಾನವಾದ ಸ್ಥಾನವನ್ನು ಪಡೆಯುವ ಮೂಲಕ, ಪುರುಷರು ಮಹಿಳೆಯರಿಗಿಂತ ಹೆಚ್ಚು ಆಹಾರದ ಅಗತ್ಯ ಹೊಂದಿರುತ್ತಾರೆಂಬ ಲಿಂಗ ತಾರತಮ್ಯವನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಅಂತಿಮವಾಗಿ ಕಿರು-ಸಾಲ ಯೋಜನೆಗಳ ಉಪಸ್ಥಿತಿಯಿಂದಾಗಿ ನಾವು ಆಶಾದಾಯಕವಾಗಿ ವಿಶ್ವದಾದ್ಯಂತ ಪೌಷ್ಟಿಕತೆರಹಿತ ಮಹಿಳೆಯರ ಸಂಖ್ಯೆಯನ್ನು ಕಡಿಮೆಗೊಳಿಸಲು ಸಾಧ್ಯ.[೩೨]

ಸಾಂಕ್ರಾಮಿಕಶಾಸ್ತ್ರ

ಬದಲಾಯಿಸಿ
 
2002ರಲ್ಲಿ ಪ್ರತಿ 100,000 ನಿವಾಸಿಗಳಲ್ಲಿ ಪೋಷಣಾ ಕೊರತೆಗಳು ಅಂಗವಿಕಲತೆ-ಹೊಂದಿಕೆಯ ವರ್ಷದ ಜೀವನ ನಡೆಸುವಂತೆ ಮಾಡಿದ್ದವು.ಪ್ರೊಟೀನ್‌‌‌-ಶಕ್ತಿ ಅಪೌಷ್ಟಿಕತೆ, ಅಯೋಡಿನ್‌‌ ಕೊರತೆ, A ಜೀವಸತ್ವ ಕೊರತೆ, ಹಾಗೂ ಕಬ್ಬಿಣದ ಕೊರತೆ ರಕ್ತಹೀನತೆ ಪೋಷಣಶಾಸ್ತ್ರೀಯ ಕೊರತೆಗಳಲ್ಲಿ ಸೇರಿವೆ.[೫೯][116][117][118][119][120][121][122][123][124][125][126][127][128]

2007ರಲ್ಲಿ ವಿಶ್ವದಲ್ಲಿ 923 ದಶಲಕ್ಷ ಪೌಷ್ಟಿಕತೆರಹಿತ ಜನರಿದ್ದರು, ವಿಶ್ವವು ಈಗಾಗಲೇ ಎಲ್ಲರಿಗೂ - 6 ಶತಕೋಟಿ ಜನರಿಗೆ - ಸಾಕಾಗುವಷ್ಟು ಆಹಾರವನ್ನು ಉತ್ಪಾದಿಸುತ್ತಿದೆ ಹಾಗೂ ಇದರ ಎರಡರಷ್ಟು - 12 ಶತಕೋಟಿ ಜನರಿಗೆ ಆಹಾರ ಒದಗಿಸಬಲ್ಲದು ಎಂಬ ವಾಸ್ತವದ ಹೊರತಾಗಿಯೂ 1990ಕ್ಕಿಂತ,[೬೦] 80 ದಶಲಕ್ಷ ಜನರ ಏರಿಕೆಯನ್ನು ಇದು ಹೊಂದಿತ್ತು.[೬೧]

ವರ್ಷ 1990 1995 2005 2007
ಪೌಷ್ಟಿಕತೆರಹಿತ ವಿಶ್ವದಲ್ಲಿನ ಜನರ ಸಂಖ್ಯೆ (ದಶಲಕ್ಷಗಳಲ್ಲಿ)[೬೨] 842 832 848 923
ವರ್ಷ 1970 1980 1990 2005 2007
ಪ್ರಗತಿಶೀಲ ವಿಶ್ವದಲ್ಲಿ ಪೌಷ್ಟಿಕತೆರಹಿತ ಜನರ ಪಾಲು [೬೩][೬೪] 37 % 28 % 20 % 16 % 17 %
  • ಸರಾಸರಿ ಲೆಕ್ಕಾಚಾರದಂತೆ, ಅಪೌಷ್ಟಿಕತೆಯ ಪ್ರತ್ಯಕ್ಷ ಅಥವಾ ಪರೋಕ್ಷ ಪರಿಣಾಮವಾಗಿ ಪ್ರತಿ ಸೆಕೆಂಡಿಗೆ ಓರ್ವ ವ್ಯಕ್ತಿ - ಪ್ರತಿ ಗಂಟೆಗೆ 4000 ಜನರು - ಪ್ರತಿ ದಿನ 100 000 - ಪ್ರತಿ ವರ್ಷ 36 ದಶಲಕ್ಷ - ಜನ ಸಾವನ್ನು ಕಾಣುತ್ತಾರೆ. ಇದು ಎಲ್ಲಾ ಸಾವುಗಳ 58 %ರಷ್ಟಿದೆ (2001-2004ರ ಅವಧಿಯ ಅಂದಾಜುಗಳು).[೬೫][೬೬][೬೭]
  • ಸರಾಸರಿ ಲೆಕ್ಕಾಚಾರದಂತೆ, ಅಪೌಷ್ಟಿಕತೆಯ ಪ್ರತ್ಯಕ್ಷ ಅಥವಾ ಪರೋಕ್ಷ ಪರಿಣಾಮವಾಗಿ ಪ್ರತಿ 5 ಸೆಕೆಂಡುಗಳಿಗೆ ಒಂದು ಮಗುವು ಸಾವು ಕಾಣುತ್ತದೆ - ಪ್ರತಿ ಗಂಟೆಗೆ 700 ಮಕ್ಕಳು - ಪ್ರತಿ ದಿನ 16 000 - ಪ್ರತಿ ವರ್ಷ 6 ದಶಲಕ್ಷ ಮಕ್ಕಳು - ಇದು ಮಕ್ಕಳ ಎಲ್ಲಾ ಸಾವುಗಳ 60%ರಷ್ಟಿದೆ (2002-2008ರ ಅವಧಿಯ ಅಂದಾಜುಗಳು).[೬೮][೬೯][೭೦][೭೧][೭೨]
 
ಸಂಯುಕ್ತ ರಾಷ್ಟ್ರ ಸಂಘದ ಅಂಕಿಅಂಶಗಳ ಪ್ರಕಾರ ರಾಷ್ಟ್ರವಾರು ಕ್ರಮದಲ್ಲಿ ನ್ಯೂನಪೋಷಣೆ ಪೀಡಿತ ಜನಸಂಖ್ಯೆಯ ಶೇಕಡಾವಾರು ವಿವರ.

ಪೌಷ್ಟಿಕತೆಯ ಕೊರತೆ ಹೊಂದಿರುವ ಜನರ ಸಂಖ್ಯೆಯು (ದಶಲಕ್ಷಗಳಲ್ಲಿ) 2001-2003ರ ಅವಧಿಯಲ್ಲಿ, FAOನ ಪ್ರಕಾರ, ಕೆಳಕಂಡ ರಾಷ್ಟ್ರಗಳು 5 ದಶಲಕ್ಷ ಅಥವಾ ಹೆಚ್ಚಿನ ಸಂಖ್ಯೆಯ ಪೌಷ್ಟಿಕತೆಯ ಕೊರತೆ ಹೊಂದಿರುವ ಜನರನ್ನು ಹೊಂದಿದ್ದವು [೨]:

ರಾಷ್ಟ್ರ ಪೌಷ್ಟಿಕತೆಯ ಕೊರತೆ ಹೊಂದಿರುವ ಜನರ ಸಂಖ್ಯೆ (ದಶಲಕ್ಷ)
ಭಾರತ 217.05
ಚೀನಾ 154.0
ಬಾಂಗ್ಲಾದೇಶ 43.45
ಪ್ರಜಾಪ್ರಭುತ್ವದ ಕಾಂಗೋ ಗಣರಾಜ್ಯ 37.0
ಪಾಕಿಸ್ತಾನ 35.2
ಇಥಿಯೋಪಿಯಾ 31.5
ಟಾಂಜೇನಿಯಾ 16.1
ಫಿಲಿಪ್ಪೀನ್ಸ್‌‌ 15.2
ಬ್ರೆಝಿಲ್‌ 14.4
ಇಂಡೋನೇಷಿಯಾ 13.8
ವಿಯೆಟ್ನಾಮ್‌‌ 13.8
ಥೈಲೆಂಡ್‌‌ 13.4
ನೈಜೀರಿಯಾ 11.5
ಕೀನ್ಯಾ 9.7
ಸೂಡಾನ್‌ 8.8
ಮೊಝಾಂಬಿಕ್‌ 8.3
ಉತ್ತರ ಕೊರಿಯಾ 7.9
ಯೆಮನ್‌‌ 7.1
ಮಡಗಾಸ್ಕರ್‌‌ 7.1
ಕೊಲಂಬಿಯಾ 5.9
ಜಿಂಬಾಬ್ವೆ 5.7
ಮೆಕ್ಸಿಕೋ 5.1
ಝಾಂಬಿಯಾ 5.1
ಅಂಗೋಲಾ 5.0

ಸೂಚನೆ: ಮೇಲ್ಕಂಡ ಕೋಷ್ಟಕದಲ್ಲಿ "ಪೌಷ್ಟಿಕತೆಕೊರತೆಯನ್ನು", FAO ಸಂಸ್ಥೆಯು ನಿರ್ದಿಷ್ಟಪಡಿಸಿದ ವಿಧಾನದಲ್ಲಿ ಅಳತೆಯನ್ನು ಮಾಡಿದ್ದು, (2001ರಿಂದ 2003ರವರೆಗಿನ ವರ್ಷಗಳ ಸರಾಸರಿಯಲ್ಲಿ) ಲಘು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಓರ್ವ ಸಾಧಾರಣ ವ್ಯಕ್ತಿಗೆ ಉತ್ತಮ ಆರೋಗ್ಯದಿಂದಿರಲು ಬೇಕಾದ ಕನಿಷ್ಟ ಪ್ರಮಾಣದ ಆಹಾರ ಚೈತನ್ಯಕ್ಕಿಂತ (ಪ್ರತಿ ದಿನದ ತಲಾ ಸೇವನೆ ಕಿಲೋಕ್ಯಾಲರಿಗಳಲ್ಲಿ) ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುತ್ತಿರುವ ಜನರ ಸಂಖ್ಯೆಯನ್ನು ಪ್ರತಿನಿಧಿಸುತ್ತಿದೆ. ಇದು ಹೆಚ್ಚುವರಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರಿಗೆ ಅಗತ್ಯವಾದ ಹೆಚ್ಚುವರಿ ಅಗತ್ಯಗಳನ್ನು ಅಥವಾ ಆಹಾರ ಸೇವನೆಯಲ್ಲಿ ಆಗುವ ಕಾಲೋಚಿತ ವ್ಯತ್ಯಾಸಗಳನ್ನಾಗಲಿ ಅಥವಾ ಚೈತನ್ಯ ಅಗತ್ಯಗಳಲ್ಲಿನ ವ್ಯಕ್ತಿಗಳ ನಡುವಿನ ವ್ಯತ್ಯಾಸದಂತಹಾ ಇತರೆ ವ್ಯತ್ಯಾಸಗಳನ್ನು ಗಮನಕ್ಕೆ ತೆಗೆದುಕೊಳ್ಳದ ಸಂಪ್ರದಾಯವಾದಿ ಸೂಚಕವಾಗಿದೆ. ಅಪೌಷ್ಟಿಕತೆ ಮತ್ತು ಪೋಷಣೆಕೊರತೆಗಳು ಸಂಚಿತ ಅಥವಾ ಸರಾಸರಿ ಸನ್ನಿವೇಶಗಳದ್ದಾಗಿರುವುದಲ್ಲದೇ ಒಂದು ದಿನದ ಆಹಾರ ಸೇವನೆಯ (ಅಥವಾ ಅದರ ಕೊರತೆ) ಲೆಕ್ಕಾಚಾರವಾಗಿರುವುದಿಲ್ಲ. ಈ ಕೋಷ್ಟಕವು "ಇಂದು ರಾತ್ರಿ ಮಲಗುವವರೆಗೆ ಹಸಿವಿನಿಂದಿದ್ದವರ" ಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲ." ಅಪೌಷ್ಟಿಕತೆಯ ಸಾಮಾಜಿಕ-ರಾಜಕೀಯ ಕಾರಣಗಳನ್ನು ನಿರ್ಧರಿಸಲು ವಿವಿಧ ಮಟ್ಟಗಳ ವಿಶ್ಲೇಷಣೆಗಳನ್ನು ಕೂಡಾ ಪರಿಗಣಿಸಲಾಗಿದೆ. ಉದಾಹರಣೆಗೆ ಒಂದು ಸಮುದಾಯದ ಜನಸಮೂಹವು ಆರೋಗ್ಯ-ಸಂಬಂಧಿ ಸೇವೆಗಳ ಕೊರತೆಯಿಂದಾಗಿ ಅಪಾಯದಲ್ಲಿರಬಹುದು, ಆದರೆ ಅಲ್ಪ ಮಟ್ಟದಲ್ಲಿಯಾದರೂ ನಿರ್ದಿಷ್ಟ ಕುಟುಂಬಗಳು ಅಥವಾ ವ್ಯಕ್ತಿಗಳು ಆದಾಯಮಟ್ಟದಲ್ಲಿನ ವ್ಯತ್ಯಾಸ, ಆ ಸ್ಥಳಕ್ಕೆ ಪ್ರವೇಶಾನುಮತಿ ಅಥವಾ ವಿದ್ಯಾರ್ಹತೆಗಳಿಂದಾಗಿ ಮತ್ತೂ ಅಪಾಯದಲ್ಲಿರುವ ಸಾಧ್ಯತೆ ಇರುತ್ತದೆ.[೭೩] ಅಷ್ಟೇ ಅಲ್ಲದೇ ಕುಟುಂಬಗಳ ಒಳಗೆಯೇ ಪುರುಷರು ಹಾಗೂ ಮಹಿಳೆಯರ ನಡುವೆ ಅಪೌಷ್ಟಿಕತೆಯ ಮಟ್ಟದಲ್ಲಿ ವ್ಯತ್ಯಾಸವಿರಬಹುದು ಹಾಗೂ ಈ ತರಹದ ಸಮಸ್ಯೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಗಮನಾರ್ಹ ಪ್ರಮಾಣದ ವ್ಯತ್ಯಾಸ ಹೊಂದಿರುವುದಲ್ಲದೇ ಸಮಸ್ಯೆಯ ವಲಯಗಳಲ್ಲಿ ಸಾಪೇಕ್ಷವಾಗಿ ಮಹಿಳೆಯರ ಕಡೆಗಣಿಸುವಿಕೆಗಳನ್ನು ಒಳಗೊಂಡಂತೆ ವ್ಯತ್ಯಾಸವನ್ನು ಹೊಂದಿರುತ್ತವೆ.[೭೪] ಮಕ್ಕಳು ಹಾಗೂ ವೃದ್ಧರು ವಿಶೇಷವಾಗಿ ಇದಕ್ಕೆ ಪಕ್ಕಾಗುವ ಸಾಧ್ಯತೆ ಇರುತ್ತದೆ. ಪ್ರಗತಿಶೀಲ ವಿಶ್ವದಲ್ಲಿನ 5 ವರ್ಷದೊಳಗಿನ ಮಕ್ಕಳಲ್ಲಿ ಸರಿಸುಮಾರು 27 ಪ್ರತಿಶತ ಮಕ್ಕಳು ಪೌಷ್ಟಿಕತೆರಹಿತವಾಗಿದ್ದು, ಈ ಪ್ರಗತಿಶೀಲ ರಾಷ್ಟ್ರಗಳಲ್ಲಿ, 5 ವರ್ಷದೊಳಗಿನ ಮಕ್ಕಳಲ್ಲಿ ಪ್ರತಿ ವರ್ಷ ಸಂಭವಿಸುವ 10 ದಶಲಕ್ಷ ಮರಣಗಳಲ್ಲಿ ಸುಮಾರು ಅರ್ಧದಷ್ಟನ್ನು ಅಪೌಷ್ಟಿಕತೆಯು ಬಲಿ ತೆಗೆದುಕೊಳ್ಳುತ್ತದೆ.

ಮಧ್ಯ ಪ್ರಾಚ್ಯ

ಬದಲಾಯಿಸಿ

ಇರಾಕ್‌ನಲ್ಲಿನ ಅಪೌಷ್ಟಿಕತೆಯ ದರಗಳು US-ನೇತೃತ್ವದ ಆಕ್ರಮಣಕ್ಕಿಂತ ಮುಂಚಿನ 19%ನಿಂದ ನಾಲ್ಕು ವರ್ಷಗಳ ನಂತರ ರಾಷ್ಟ್ರೀಯ ಸರಾಸರಿ 28%ರಷ್ಟಕ್ಕೆ ಏರಿಕೆ ಕಂಡಿದೆ.[೭೫]

ದಕ್ಷಿಣ ಏಷ್ಯಾ

ಬದಲಾಯಿಸಿ

ಜಾಗತಿಕ ಹಸಿವು ಸೂಚಿಯ ಪ್ರಕಾರ, ವಿಶ್ವದ ವಲಯಗಳಲ್ಲೇ ದಕ್ಷಿಣ ಏಷ್ಯಾವು ಅತ್ಯಧಿಕ ಪ್ರಮಾಣದ ಮಕ್ಕಳ ಅಪೌಷ್ಟಿಕತೆ ದರವನ್ನು ಹೊಂದಿದೆ.[೭೬] ಒಟ್ಟಾರೆಯಾಗಿ ವಿಶ್ವದ ಅರ್ಧಕ್ಕಿಂತ ಹೆಚ್ಚು ಪ್ರಮಾಣವಾದ ಪ್ರತಿ ವರ್ಷ 5.6 ದಶಲಕ್ಷ ಮಕ್ಕಳ ಮರಣಗಳು ಭಾರತದಲ್ಲಿ ಸಂಭವಿಸುತ್ತಿವೆ.[೭೭] 2006ರ ವರದಿಯು ದಕ್ಷಿಣ ಏಷ್ಯಾದ ರಾಷ್ಟ್ರಗಳ ಮಹಿಳೆಯರಲ್ಲಿನ ಕೆಳಮಟ್ಟ ಹಾಗೂ ಅವರಿಗೆ ಪೋಷಣೆಯ ಬಗೆಗಿರುವ ಅಜ್ಞಾನಗಳು ಆ ಪ್ರದೇಶದಲ್ಲಿ ತೂಕಕೊರತೆ ಪೀಡಿತ ಮಕ್ಕಳ ಸಂಖ್ಯೆಗೆ ಹೆಚ್ಚಲು ಕಾರಣವಾಗಿದೆ" ಎಂದು ನಮೂದಿಸಿರುವುದಲ್ಲದೇ ದಕ್ಷಿಣ ಏಷ್ಯಾವು "ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಹಾಗೂ ಆಹಾರ ನೀಡುವ ಸೂಕ್ತ ಪದ್ಧತಿಗಳನ್ನು ಹೊಂದಿಲ್ಲ" ಎಂದು ಆತಂಕ ವ್ಯಕ್ತಪಡಿಸಿದೆ.[೭೭] ಭಾರತದಲ್ಲಿನ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ತೂಕಕೊರತೆಯನ್ನು ಹೊಂದಿದ್ದು,[೭೮] ಇದು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣಗಳಲ್ಲಿ ಒಂದಾಗಿರುವುದಲ್ಲದೇ ಆಫ್ರಿಕಾದ ಸಹಾರಾ ಉಪವಲಯಗಳಿಗಿಂತ ಬಹುಪಾಲು ಎರಡು ಪಟ್ಟು ಹೆಚ್ಚಿನದಾಗಿದೆ.[೭೯] ಪೋಷಣೆಕೊರತೆಯ ಅವಿಚ್ಛಿನ್ನತೆಯನ್ನು ಹೋಗಲಾಡಿಸಲು ಇನ್‌ಸ್ಟಿಟ್ಯೂಟ್‌ ಆಫ್‌ ಡೆವೆಲಪ್‌ಮೆಂಟ್‌ ಸ್ಟಡೀಸ್‌ ಸಂಸ್ಥೆಯು ನಡೆಸಿದ ಸಂಶೋಧನೆಯೊಂದು ಭಾರತದ 'ಆರ್ಥಿಕ ಶಕ್ತಿ'ಯಾಗಿ ಹೊರಹೊಮ್ಮುವಿಕೆ ಹಾಗೂ ವಿಶ್ವದ ಮೂರನೇ ಒಂದರಷ್ಟು ಪೌಷ್ಟಿಕಕೊರತೆ ಪೀಡಿತ ಮಕ್ಕಳನ್ನು ಹೊಂದಿರುವ ಪರಿಸ್ಥಿತಿಯು ಪೋಷಣಾ ನಿರ್ವಹಣೆಯ ಸೋಲನ್ನು ಪ್ರತಿಬಿಂಬಿಸುತ್ತಿದೆ : "ಸೂಕ್ತ ಸೇವೆಗಳನ್ನು ಸೂಕ್ತ ಸಮಯದಲ್ಲಿ ಸೂಕ್ತ ಜನಸಮೂಹಕ್ಕೆ ನೀಡಲಾಗದ ಅಸಾಮರ್ಥ್ಯ, ನಾಗರಿಕರ ಅಗತ್ಯಗಳಿಗೆ ಪ್ರತಿಕ್ರಯಿಸಲಾಗದಿರುವಿಕೆ ಹಾಗೂ ದುರ್ಬಲ ಉತ್ತರದಾಯಿತ್ವಗಳೆಲ್ಲವೂ ದುರ್ಬಲ ಪೋಷಣಾ ನಿರ್ವಹಣೆಯ ಲಕ್ಷಣಗಳಾಗಿವೆ."[೮೦] ಸಂಶೋಧನೆಯು ಭಾರತದಲ್ಲಿ ನ್ಯೂನಪೋಷಣೆಯನ್ನು ಇತಿಹಾಸವೆಂದೆನಿಸಲು ಪೋಷಣಾ ನಿರ್ವಹಣೆಯನ್ನು ಬಲಪಡಿಸಬೇಕೆಂದು ಹಾಗೂ ನವೀನ ಸಂಶೋಧನೆಗಳು ರಾಜಕೀಯ ಹಾಗೂ ಪೋಷಣಾ ನಿರ್ವಹಣೆಯ ಬಗ್ಗೆ ಕೇಂದ್ರೀಕೃತವಾಗಿರಬೇಕೆಂದು ಸಲಹೆ ನೀಡಿದೆ. ಪ್ರಸಕ್ತ ಪ್ರಗತಿಯ ದರದಲ್ಲಿ MDG1ನ ಮಾನವ ಯೋಗಕ್ಷೇಮ ಹಾಗೂ ಆರ್ಥಿಕ ಬೆಳವಣಿಗೆಗಳಲ್ಲಾಗುವ ವೈಪರೀತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪೋಷಣೆಯ ಗುರಿಯನ್ನು ಕೇವಲ 2042ರಲ್ಲಿ ಮುಟ್ಟಲು ಸಾಧ್ಯ.[೮೦]

ಯುನೈಟೆಡ್‌ ಸ್ಟೇಟ್ಸ್‌

ಬದಲಾಯಿಸಿ

ಬಾಲ್ಯದಲ್ಲಿನ ಅಪೌಷ್ಟಿಕತೆಯನ್ನು ಸಾಧಾರಣವಾಗಿ ಪ್ರಗತಿಶೀಲ ರಾಷ್ಟ್ರಗಳಿಗೆ ಸಂಬಂಧಪಟ್ಟಿದ್ದು ಎಂದು ಭಾವಿಸಲಾಗುತ್ತದೆ, ಆದರೆ ಬಹುತೇಕ ಅಪೌಷ್ಟಿಕತೆಯ ಸಮಸ್ಯೆ ಅಲ್ಲಿಯೇ ಇದ್ದರೂ, ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿಯೂ ಸಮಸ್ಯೆಯಿದೆ. ಉದಾಹರಣೆಗೆ ಯುನೈಟೆಡ್‌ ಸ್ಟೇಟ್ಸ್‌‌ ಆಫ್‌ ಅಮೇರಿಕಾದಲ್ಲಿ, ಪ್ರತಿ ಆರು ಮಕ್ಕಳಲ್ಲಿ ಒಂದು ಮಗು ಹಸಿವಿನ ಸಮಸ್ಯೆ ಎದುರಿಸುತ್ತಿದೆ.[೮೧] U.S. ಜನಗಣತಿ ಸಂಸ್ಥೆ ಹಾಗೂ ಕೃಷಿ ಇಲಾಖೆಗಳ 2005-2007ರ ಅವಧಿಯ ದತ್ತಾಂಶದ ಮೇಲೆ ಆಧರಿಸಿದ ಅಧ್ಯಯನವೊಂದು, ಐದು ವರ್ಷದೊಳಗಿನ ಅಂದಾಜು 3.5 ದಶಲಕ್ಷ ಮಕ್ಕಳು ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸುತ್ತದೆ.[೮೨] ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ, ಬಹುಕಾಲದಿಂದಿರುವ ಹಸಿವಿನ ಸಮಸ್ಯೆಯು ಆಹಾರದ ಅಥವಾ ಆಹಾರ ಯೋಜನೆಗಳ ಕೊರತೆಯಿಂದಲ್ಲ, ಬದಲಿಗೆ ಆ ಸಮಸ್ಯೆಯನ್ನು ಎದುರಿಸಲು ಆಹಾರ ಲಕೋಟೆಗಳು ಅಥವಾ ಶಾಲಾ ಭೋಜನದಂತಹಾ ಸಿದ್ಧಪಡಿಸಿದ ಯೋಜನೆಗಳ ನ್ಯೂನಉಪಯೋಗದಿಂದಾಗಿಯೇ ಬಹುತೇಕ ಉಂಟಾಗಿದೆ. ಯುನೈಟೆಡ್‌ ಸ್ಟೇಟ್ಸ್‌‌ ಆಫ್‌ ಅಮೇರಿಕಾದಂತಹಾ ಶ್ರೀಮಂತ ರಾಷ್ಟ್ರಗಳ ಅನೇಕ ನಾಗರಿಕರು ಆಹಾರ ಯೋಜನೆಗಳ ಮೇಲೆ ಅಪವಾದವನ್ನು ಹೊರಿಸುತ್ತಾರೆ ಇಲ್ಲವೇ ಅದರ ಬಳಕೆಯನ್ನು ಪ್ರೋತ್ಸಾಹಿಸುವುದಿಲ್ಲ. USAನಲ್ಲಿ, ಆಹಾರ ಲಕೋಟೆ/ಫುಡ್‌ ಸ್ಟಾಂಪ್‌ ಯೋಜನೆಗೆ ಅರ್ಹರಲ್ಲಿ ಕೇವಲ 60%ರಷ್ಟು ಜನರು ಮಾತ್ರ ವಾಸ್ತವವಾಗಿ ಅದರ ಪ್ರಯೋಜನ ಪಡೆದುಕೊಳ್ಳುತ್ತಾರೆ.[೮೩] U.S. ಕೃಷಿ ಇಲಾಖೆಯು 2003ರಲ್ಲಿ, ನೀಡಿದ ವರದಿ ಪ್ರಕಾರ ಮಕ್ಕಳಿರುವ ಪ್ರತಿ 200 U.S. ಕುಟುಂಬಗಳಲ್ಲಿ ಕೇವಲ 1 ಕುಟುಂಬ ಮಾತ್ರವೇ ವರ್ಷದ ಅವಧಿಯಲ್ಲಿ ಯಾವುದೊಂದು ಮಗುವು ಒಮ್ಮೆ ಮಾತ್ರ ಹಸಿವಿನಿಂದ ಬಳಲುವ ಮಟ್ಟಿಗೆ ತೀವ್ರ ಆಹಾರ ಕೊರತೆಯನ್ನು ಹೊಂದಿದ್ದವು. ಇವೇ ಕುಟುಂಬಗಳಲ್ಲಿ ಗಮನಾರ್ಹ ದೊಡ್ಡ ಪ್ರಮಾಣದಷ್ಟು (3.8 ಪ್ರತಿಶತ) ಕುಟುಂಬಗಳು ಇಡೀ ಕುಟುಂಬಕ್ಕೆ ಸಾಕಾಗುವಷ್ಟು ಆಹಾರ ಪಡೆಯಲು ಅಸಮರ್ಥವಾಗಿದ್ದರಿಂದ ವರ್ಷದ ಅವಧಿಯಲ್ಲಿ ಕನಿಷ್ಟ ಒಂದು ದಿನ ಹಸಿವಿನಿಂದ ಬಳಲಿದ ಕುಟುಂಬದ ಪ್ರೌಢ ಸದಸ್ಯರುಗಳನ್ನು ಹೊಂದಿದ್ದವು.[೩] Archived 2014-11-12 ವೇಬ್ಯಾಕ್ ಮೆಷಿನ್ ನಲ್ಲಿ.

ಮಿತಿಮೀರಿ ತಿನ್ನುವಿಕೆ vs. ಹಸಿವು

ಬದಲಾಯಿಸಿ

ಅಪೌಷ್ಟಿಕತೆಯ ಕುರಿತಾದ ಬಹಳ ಚರ್ಚೆಗಳು ಪೋಷಣೆಕೊರತೆಯಲ್ಲಿಯೇ ಗಮನ ಕೇಂದ್ರೀಕರಿಸಿದ್ದರೂ, ಮಿತಿಮೀರಿ ತಿನ್ನುವಿಕೆಯು ಕೂಡಾ ಒಂದು ವಿಧದ ಅಪೌಷ್ಟಿಕತೆಯಾಗಿದೆ. ಮಿತಿಮೀರಿ ತಿನ್ನುವಿಕೆಯು ಬಹುತೇಕ ಜನರಿಗೆ ಆಹಾರದ ಲಭ್ಯತೆಯು ಸಮಸ್ಯೆಯೇ ಅಲ್ಲದಿರುವ ಯುನೈಟೆಡ್‌ ಸ್ಟೇಟ್ಸ್‌‌[೮೪] ನಲ್ಲಿ ಹೆಚ್ಚು ಸಾಧಾರಣ ವಿಷಯವಾಗಿದೆ. ಈ ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿನ ಸಮಸ್ಯೆ ಎಂದರೆ ಸೂಕ್ತ ವಿಧವಾದ ಆಹಾರದ ಆಯ್ಕೆ. ಇತರೆ ಯಾವುದೇ ರಾಷ್ಟ್ರಕ್ಕೆ ಹೋಲಿಸಿದರೆ ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿ ಸೇವಿಸುವ ತಲಾ ತ್ವರಿತ ಆಹಾರ/ಫಾಸ್ಟ್‌ ಫುಡ್‌‌ ಪ್ರಮಾಣ ಹೆಚ್ಚಿನದಾಗಿದೆ. ಈ ರೀತಿಯ ರಾಶಿ ಆಹಾರ ಸೇವನೆಗೆ ಕಾರಣವೆಂದರೆ ಅದನ್ನು ಪಡೆಯುವ ಶಕ್ತತೆ ಹಾಗೂ ಲಭ್ಯತೆ. ಅನೇಕ ವೇಳೆ ತ್ವರಿತ ಆಹಾರ/ಫಾಸ್ಟ್‌ ಫುಡ್‌‌, ವೆಚ್ಚದಲ್ಲಿ ಹಾಗೂ ಪೋಷಕಾಂಶಗಳಲ್ಲಿ ಕಡಿಮೆ ಮಟ್ಟದ್ದಾಗಿದ್ದು ಕ್ಯಾಲೊರಿಗಳ ಲೆಕ್ಕದಲ್ಲಿ ಹೆಚ್ಚಿನದಾಗಿದ್ದರೂ ಹೆಚ್ಚು ಪ್ರೋತ್ಸಾಹ ಪಡೆದಿರುತ್ತದೆ. ಈ ರೀತಿಯ ಆಹಾರ ಸೇವನೆ ಅಭ್ಯಾ/ಹವ್ಯಾಸಗಳು ಹೆಚ್ಚು ನಗರೀಕೃತ, ಸ್ವಯಂಚಾಲಿತ ಹಾಗೂ ಹೆಚ್ಚು ಕುಳಿತುಕೊಂಡಿರುವ ಜೀವನಶೈಲಿಯೊಂದಿಗೆ ಸೇರಿಕೊಂಡಾಗ, ತೂಕ ಹೆಚ್ಚುವುದನ್ನು ಕಡಿಮೆ ಮಾಡಿಕೊಳ್ಳುವುದು ಏಕೆ ಕಷ್ಟ ಎಂಬುದು ಸ್ಪಷ್ಟವಾಗುತ್ತದೆ.[೫೧] ಆದಾಗ್ಯೂ, ಮಿತಿಮೀರಿ ತಿನ್ನುವಿಕೆಯು ಹಸಿವು ಹಾಗೂ ಬಡತನಗಳು ಬೇರೂರಿರುವ ರಾಷ್ಟ್ರಗಳಲ್ಲಿಯೂ ಸಮಸ್ಯೆಯಾಗಿಯೇ ಇದೆ. ಚೀನಾದಲ್ಲಿ ಅಧಿಕ-ಕೊಬ್ಬಿನ ಆಹಾರ ಸೇವನೆಯು ಹೆಚ್ಚಿ ಅಕ್ಕಿ ಹಾಗೂ ಇನ್ನಿತರ ಸಾಮಗ್ರಿಗಳ ಸೇವನೆಯು ಇಳಿಕೆ ಕಂಡಿದೆ.[೩೨] ಮಿತಿಮೀರಿ ತಿನ್ನುವಿಕೆ ಹಾಗೂ ಹಸಿವುಗಳೆರಡೂ ವಿಶ್ವದ ಯಾವ ಭಾಗದಲ್ಲಿ ನೀವಿದ್ದೀರೆಂಬುದರ ಮೇಲೆ ಅವಲಂಬಿತವಾಗಿ ಸಮಾನವಾಗಿ ಗಂಭೀರ ಸಮಸ್ಯೆಗಳಾಗಿವೆ. ಮಿತಿಮೀರಿ ತಿನ್ನುವಿಕೆಯು ಹೃದಯ ಕಾಯಿಲೆ ಹಾಗೂ ಮಧುಮೇಹ/ಸಿಹಿಮೂತ್ರರೋಗದಂತಹಾ ಸಾವಿಗೆ ಕಾರಣವಾಗುವ ಅನೇಕ ಕಾಯಿಲೆಗಳಿಗೆ ದಾರಿ ಮಾಡುತ್ತದೆ. ಮಿತಿಮೀರಿ ತಿನ್ನುವಿಕೆಯ ಈ ಸಮಸ್ಯೆಯನ್ನು ಸರಿಪಡಿಸಲು, ಆರೋಗ್ಯಪಾಲನೆಯಲ್ಲಿ ಸ್ಥೂಲಕಾಯತೆ/ಬೊಜ್ಜನ್ನು ಒಂದು ಕಾಯಿಲೆಯಂತೆ ಪರಿಗಣಿಸಿ ಅದರಲ್ಲಿ ತೂಕಇಳಿಯುವಿಕೆ ಮುಂತಾದ ಪೋಷಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿರುತ್ತದೆ. ಈ ಬಗ್ಗೆಯ ಒಂದು ಪ್ರೋತ್ಸಾಹದಾಯಕ ಹೆಜ್ಜೆ ಎಂದರೆ ಒಬಾಮಾರು ಆರಂಭಿಸಿರುವ ಹೃದಯರೋಗವನ್ನು ಹೊಂದಿರುವ ರೋಗಿಗಳಿಗೆ ಮುಂದಿನ ತಿಂಗಳುಗಳು ಅಥವಾ ವರ್ಷಗಳ ಅವಧಿಯಲ್ಲಿ ಅಗತ್ಯವಾಗಬಹುದಾದ ವೆಚ್ಚದಾಯಕ ಔಷಧಿಗಳು ಹಾಗೂ ಶಸ್ತ್ರಚಿಕಿತ್ಸೆಗಳನ್ನು ಅನವಶ್ಯಕಗೊಳಿಸಬಹುದೆಂದು ಆಶಿಸಿರುವ ತೀವ್ರ ಆಹಾರ ಸೇವನೆ ಹಾಗೂ ಜೀವನಶೈಲಿ ಬದಲಾವಣೆ ಯೋಜನೆ. ಉದ್ಯಮವು ಕೈಗೊಳ್ಳಬಹುದಾದ ತಾರ್ಕಿಕ ಮುಂದಿನ ಕ್ರಮವೆಂದರೆ ನಿಯತ ಹಲ್ಲಿನ ತಪಾಸಣೆಗೆ ಸದೃಶವಾದ ಪೋಷಕಾಂಶಗಳ ತಪಾಸಣೆಗಳನ್ನು ಮೂಲಭೂತ ವಿಮಾ ವ್ಯಾಪ್ತಿಗೆ ಸೇರಿಸಿಕೊಳ್ಳುವುದು.[೩೨]

ಇವನ್ನೂ ನೋಡಿ

ಬದಲಾಯಿಸಿ

ಸಂಸ್ಥೆಗಳು

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. "malnutrition" at Dorland's Medical Dictionary
  2. Sullivan, arthur (2003). Economics: Principles in action. Upper Saddle River, New Jersey 07458: Prentice Hall. p. 481. ISBN 0-13-063085-3. Archived from the original on 2018-12-26. Retrieved 2021-02-24. {{cite book}}: Unknown parameter |coauthors= ignored (|author= suggested) (help)CS1 maint: location (link)
  3. ೩.೦ ೩.೧ ೩.೨ ೩.೩ ೩.೪ ೩.೫ ಮಾಲ್‌ನ್ಯೂಟ್ರಿಷನ್‌ ದ ಸ್ಟಾರ್ವೆಲಿಂಗ್ಸ್‌
  4. ೪.೦ ೪.೧ ೪.೨ ದ ಹಿಡನ್‌ ಹಂಗರ್‌
  5. ೫.೦ ೫.೧ ೫.೨ ಸಂಸ್ಥೆಗಳು ಬಡವರ ಪೋಷಣೆಯತ್ತ ಗಮನ ಹರಿಸುತ್ತಿವೆ
  6. ೬.೦ ೬.೧ http://www.time.com/time/magazine/article/0,9171,1914655,00.html Archived 2013-08-26 ವೇಬ್ಯಾಕ್ ಮೆಷಿನ್ ನಲ್ಲಿ. ಒಂದು ಮಾತ್ರೆ ಅನಾರೋಗ್ಯವನ್ನು ಸರಿಪಡಿಸಬಲ್ಲದೇ? ಯಾರೂ ಚರ್ಚಿಸಲು ಇಷ್ಟಪಡುತ್ತಿಲ್ಲ
  7. ೭.೦ ೭.೧ ೭.೨ ೭.೩ ೭.೪ UN ಸಹಾಯದ ಚರ್ಚೆ: ಆಹಾರ ಬೇಡ ಹಣವನ್ನು ನೀಡಿ?
  8. ೮.೦ ೮.೧ "ದುರ್ಭರ ಹಸಿವು ಪೀಡಿತ ಪ್ರದೇಶಗಳಿಗೆ ಸಹಾಯ ಮಾಡಲು ನಗದು/ಹಣವು ಹರಿಯುತ್ತಿದೆ". Archived from the original on 2009-02-12. Retrieved 2022-10-14.
  9. ೯.೦ ೯.೧ ಒಬಾಮಾರು ತಮ್ಮ $15 ಶತಕೋಟಿ ಮೊತ್ತದ ಯೋಜನೆಯಿಂದ ಬಡ ರೈತರಿಗೆ ಸಹಾಯ ನೀಡಲು ಪ್ರಮುಖ ಶಕ್ತಿಗಳ ಸಹಾಯ ಪಡೆಯಲಿದ್ದಾರೆ
  10. ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ ೧೦.೬ ಎಂಡಿಂಗ್‌ ಫೆಮೈನ್‌, ಸಿಂಪ್ಲಿ ಬೈ ಇಗ್ನೋರಿಂಗ್‌ ದ ಎಕ್ಸ್‌ಪರ್ಟ್ಸ್‌‌
  11. ೧೧.೦ ೧೧.೧ https://www.theatlantic.com/issues/97jan/borlaug/borlaug.htm ಮರೆಯಲಾದ ಮಾನವಕುಲದ ಮಹಾದಾನಿ
  12. "ಆರ್ಕೈವ್ ನಕಲು". Archived from the original on 2011-11-18. Retrieved 2010-07-12.
  13. ಜೀನ್‌ ಜೀಯೆಗ್ಲರ್, L'Empire de la honte , ಫಾಯರ್ಡ್‌, 2007 ISBN 978-2-253-12115-2 p.130.
  14. Schaible UE, Kaufmann SH (2007). "Malnutrition and infection: complex mechanisms and global impacts". PLoS Med. 4 (5): e115. doi:10.1371/journal.pmed.0040115. PMID 17472433.{{cite journal}}: CS1 maint: unflagged free DOI (link)[ಶಾಶ್ವತವಾಗಿ ಮಡಿದ ಕೊಂಡಿ]
  15. "ಆರ್ಕೈವ್ ನಕಲು". Archived from the original on 2014-03-17. Retrieved 2010-07-12.
  16. ೧೬.೦ ೧೬.೧ ೧೬.೨ ವಿಶ್ವದ IQ ಹೆಚ್ಚಿಸುವ ರಹಸ್ಯವು ಉಪ್ಪಿನಲ್ಲಿದೆ
  17. Jere R. Behrman (1996). "The impact of health and nutrition on education". World Bank Research Observer. 11 (1): 23–37.
  18. ೧೮.೦ ೧೮.೧ "American College Health Association National College Health Assessment Spring 2006 Reference Group data report (abridged)". J Am Coll Health. 55 (4): 195–206. 2007. PMID 17319325.
  19. Benton D, Sargent J (1992). "Breakfast, blood glucose and memory". Biol Psychol. 33 (2–3): 207–10. PMID 1525295. {{cite journal}}: Unknown parameter |month= ignored (help)
  20. Kanarek RB, Swinney D (1990). "Effects of food snacks on cognitive performance in male college students". Appetite. 14 (1): 15–27. PMID 2310175. {{cite journal}}: Unknown parameter |month= ignored (help)
  21. Whitley JR, O'Dell BL, Hogan AG (1951). "Effect of diet on maze learning in second generation rats; folic acid deficiency". J. Nutr. 45 (1): 153–60. PMID 14880969. {{cite journal}}: Unknown parameter |month= ignored (help)CS1 maint: multiple names: authors list (link)
  22. Umezawa M, Kogishi K, Tojo H; et al. (1999). "High-linoleate and high-alpha-linolenate diets affect learning ability and natural behavior in SAMR1 mice". J. Nutr. 129 (2): 431–7. PMID 10024623. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  23. Glewwe P, Jacoby H, King E (2001). "Early childhood nutrition and academic achievement: A longitudinal analysis". Journal of Public Economics. 81 (3): 345–68.{{cite journal}}: CS1 maint: multiple names: authors list (link)
  24. ಮ್ಯಾನೇಜ್‌ಡ್‌ ಫುಡ್‌ ಸರ್ವೀಸ್‌‌ ಕಾಂಟ್ರಾಕ್ಟರ್ಸ್‌ ರಿಯಾಕ್ಟ್‌ ಕ್ವಿಕ್‌ಲಿ ಟು ದ ಡಿಮ್ಯಾಂಡ್ಸ್‌ ಆಫ್‌ ದೇರ್‌ ಕ್ಲಯಂಟ್ಸ್‌ ಅಚೀವ್‌ಮೆಂಟ್‌ : A ಲಾಂಗಿಟ್ಯೂಡಿನಲ್‌ ಅನಾಲಿಸಿಸ್‌‌. ಜರ್ನಲ್‌ ಆಫ್‌‌ ಪಬ್ಲಿಕ್‌ ಇಕನಾಮಿಕ್ಸ್‌‌, 81(3), 345-368.
  25. Guernsey L (1993). "Many colleges clear their tables of steak, substitute fruit and pasta". Chronicle of Higher Education. 39 (26): A30.
  26. Duster T, Waters A (2006). "Engaged learning across the curriculum: The vertical integration of food for thought". Liberal Education. 92 (2): 42.
  27. Lakhan SE, Vieira KF (2008). "Nutritional therapies for mental disorders". Nutr J. 7: 2. doi:10.1186/1475-2891-7-2. PMID 18208598.{{cite journal}}: CS1 maint: unflagged free DOI (link)
  28. Coren, Michael (2005-03-10). "Study: Cancer no longer rare in poorer countries". CNN. Retrieved 2007-01-01.
  29. "Why is too much water dangerous?". BBC News. 2007-01-15. Retrieved 2008-11-09.
  30. ಬಾರೊ, ಮಮಡೌ ಹಾಗೂ ತಾರಾ F. ಡ್ಯುಬೆಲ್‌ "ಪರ್ಸಿಸ್ಟೆಂಟ್‌ ಹಂಗರ್‌ : ಪರ್ಸ್‌ಪೆಕ್ಟೀವ್ಸ್‌ ಆನ್‌ ವಲ್ನರೆಬಿಲಿಟಿ, ಫೆಮೈನ್‌‌ ಅಂಡ್‌ ಫುಡ್‌ ಸೆಕ್ಯೂರಿಟಿ ಇನ್‌ ಸಬ್‌-ಸಹಾರನ್‌ ಆಫ್ರಿಕಾ" ವಾರ್ಷಿಕ ಮಾನವಶಾಸ್ತ್ರೀಯ ವಿಮರ್ಶೆ. (2006) 35:521-38.
  31. http://www.emedicine.com/ped/TOPIC1360.HTM
  32. ೩೨.೦ ೩೨.೧ ೩೨.೨ ೩೨.೩ ೩೨.೪ ೩೨.೫ ೩೨.೬ ೩೨.೭ ಗಾರ್ಡ್‌ನರ್‌, ಗೇರಿ, ಮತ್ತು ಬ್ರಿಯಾನ್‌ ಹಲ್‌ವೇಲ್‌‌. 2000. ಎಸ್ಕೇಪಿಂಗ್‌ ಹಂಗರ್‌‌‌, ಎಸ್ಕೇಪಿಂಗ್‌ ಎಕ್ಸೆಸ್‌‌. ವರ್ಲ್ಡ್‌ ವಾಚ್‌ 13(4):24.
  33. ಸೆನ್‌‌, A.K. ಪಾವರ್ಟಿ ಅಂಡ್‌ ಫೆಮೈನ್ಸ್‌ : ಆನ್‌ ಎಸ್ಸೇ ಆನ್‌ ಎನ್‌ಟೈಟಲ್‌ಮೆಂಟ್‌‌ ಅಂಡ್‌ ಡಿಪ್ರೈವೇಷನ್ . ಆಕ್ಸ್‌ಫರ್ಡ್‌ : ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮುದ್ರಣಾಲಯ. (1981)
  34. http://www.spiegel.de/international/world/0,1518,549187,00.html ಜಾಗತಿಕ ಆಹಾರ ಬಿಕ್ಕಟ್ಟಿನಲ್ಲಿ ಸರಕು ವ್ಯಾಪಾರಿಗಳ ಪಾತ್ರ
  35. http://news.bbc.co.uk/2/hi/europe/7472532.stm ಜೈವಿಕ ಇಂಧನದ ಬಳಕೆ ಬಡತನವನ್ನು ಹೆಚ್ಚಿಸುತ್ತಿದೆ
  36. http://news.bbc.co.uk/2/hi/americas/7065061.stm ಜೈವಿಕ ಇಂಧನಗಳು ‘ಮಾನವಕುಲದ ಮೇಲಿನ ಅಪರಾಧ/ದೌರ್ಜನ್ಯ'
  37. BBC ನ್ಯೂಸ್‌. ಏಷ್ಯಾದಲ್ಲಿ ಎದೆಹಾಲು ಕುಡಿಸುವಿಕೆಯು ಕಡಿಮೆಯಾಗುತ್ತಿದೆ
  38. http://www.reuters.com/article/healthNews/idUSTRE56U25T20090731 ಎದೆಹಾಲು ಕುಡಿಸುವಿಕೆಯು 1.3 ದಶಲಕ್ಷ ಜೀವಗಳನ್ನು ಉಳಿಸಬಲ್ಲದು
  39. ಝಾಂಬಿಯಾ: ಫಲದಾಯಕ ಆದರೆ ಹಸಿವಿನಿಂದ ಪೀಡಿತ
  40. ೪೦.೦ ೪೦.೧ ೪೦.೨ "Climate Change 2007: Synthesis Report" (PDF). Intergovernmental Panel on Climate Change. 12–17 Nov 2007. Retrieved 2010-01-27.{{cite web}}: CS1 maint: date format (link)
  41. ಬಟಿಸ್ಟಾ, ಡೇವಿಡ್‌. "ಕ್ಲೈಮೇಟ್‌‌ ಚೇಂಜ್‌‌ ಇನ್‌ ಡೆವೆಲಪಿಂಗ್‌ ಕಂಟ್ರೀಸ್‌‌." ವಾಷಿಂಗ್ಟನ್‌ ವಿಶ್ವವಿದ್ಯಾಲಯ. ಸಿಯಾಟಲ್‌. 27 Oct 2008.
  42. [೧] ಜೇನುನೊಣಗಳ ಸಾವಿನ ಸರಣಿಯು ಜೇನುಸಾಕಾಣಿಕೆದಾರರನ್ನು, ಫಸಲು ಬೆಳೆಯುವವರನ್ನು ಹಾಗೂ ಸಂಶೋಧಕರನ್ನು ಎಚ್ಚರಿಸುತ್ತಿದೆ
  43. http://news.bbc.co.uk/2/hi/americas/6438373.stm ಕಣ್ಮರೆಯಾಗುತ್ತಿರುವ ಜೇನ್ನೊಣಗಳು US ಬೆಳೆಗಳ ಸುರಕ್ಷತೆಗೆ ಆತಂಕ ಮೂಡಿಸಿವೆ
  44. ದಶಲಕ್ಷಗಳಷ್ಟು ಜನರು ಬೆಳೆಗಳ ಕಾಯಿಲೆ ವ್ಯಾಪಿಸುತ್ತಿರುವುದರಿಂದ ದುರ್ಭಿಕ್ಷ ಪೀಡಿತರಾಗಿದ್ದಾರೆ
  45. http://articles.latimes.com/2009/jun/14/science/sci-wheat-rust14 ವಿಶ್ವದ ಗೋಧಿ ಬೆಳೆಗೆ ಒಂದು ಟೈಮ್‌‌ ಬಾಂಬ್‌
  46. https://www.nytimes.com/2008/12/04/opinion/04kristof.html ವಿಶ್ವದ IQ ಹೆಚ್ಚಿಸುವಿಕೆ
  47. ೪೭.೦ ೪೭.೧ ಲೆಟ್‌ ದೆಮ್‌ ಈಟ್‌ ಮೈಕ್ರೋನ್ಯೂಟ್ರಿಯೆಂಟ್ಸ್‌
  48. ಆಂಡ್ರ್ಯೂ S. ನಾಟ್ಸಿಯೋಸ್‌ (U.S. ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ ನಿರ್ವಾಹಕ)
  49. ಮಾಜಿ ಪ್ರತಿನಿಧಿ ಸ್ಟೀಬ್‌ ಸೋಲಾರ್ಜ್‌ಗೆ ಅನೌಪಚಾರಿಕ ಪತ್ರ (ಯುನೈಟೆಡ್‌ ಸ್ಟೇಟ್ಸ್‌‌, ಡೆಮೋಕ್ರಾಟಿಕ್‌‌ ಪಕ್ಷ, ನ್ಯೂಯಾರ್ಕ್‌‌) - ಜುಲೈ 1994
  50. ಆಫ್ರಿಕನ್‌ ಆಹಾರ ನೆರವು ಯೋಜನೆಯ ಮಾದರಿಯೊಂದು ಅಪಾಯದಲ್ಲಿದೆ
  51. ೫೧.೦ ೫೧.೧ ಗಾರ್ಡ್‌ನರ್‌, ಗೇರಿ, ಮತ್ತು ಬ್ರಿಯಾನ್‌ ಹಲ್‌ವೇಲ್‌‌. 2000. ಎಸ್ಕೇಪಿಂಗ್‌ ಹಂಗರ್‌‌‌, ಎಸ್ಕೇಪಿಂಗ್‌ ಎಕ್ಸೆಸ್‌. ವರ್ಲ್ಡ್‌ ವಾಚ್‌ 13(4):5.
  52. https://www.nytimes.com/2007/10/10/world/africa/10rice.html?_r=1&hp&oref=slogin ಆಫ್ರಿಕಾದಲ್ಲಿ ಬೀಜಗಳಿಂದಾಗುವ ಸಮೃದ್ಧಿಯು ಸಾಲುತ್ತಿಲ್ಲ
  53. ಕೀನ್ಯಾದ ಹಳ್ಳಿಯೊಂದು ಹೇಗೆ ತನ್ನ ಮುಸುಕಿನ ಜೋಳದ ಬೆಳೆಯನ್ನು ಮುಮ್ಮಡಿಗೊಳಿಸಿಕೊಂಡಿತು
  54. http://news.bbc.co.uk/2/hi/health/3022558.stm ಅನಗತ್ಯವಾಗಿ ದಶಲಕ್ಷಗಳಷ್ಟು ಮಕ್ಕಳು ಸಾವನ್ನಪ್ಪುತ್ತಿದ್ದಾರೆ.
  55. ಮಾಲ್ತಸ್‌‌, ರಾಬರ್ಟ್‌ ಥಾಮಸ್‌. 1976 (1798). ಆನ್‌ ಎಸ್ಸೇ ಆನ್‌ ದ ಪ್ರಿನ್ಸಿಪಲ್‌‌ ಆಫ್‌ ಪಾಪ್ಯುಲೇಷನ್. ಫಿಲಿಪ್‌ ಆಪಲ್‌ಮ್ಯಾನ್‌‌, ed. ನ್ಯೂಯಾರ್ಕ್: ನಾರ್ಟನ್.
  56. ಚಾಪ್‌ಮನ್‌‌, ರಾಬರ್ಟ್. 1999. “ನೋ ರೂಮ್‌ ಅಟ್‌ ದ ಇನ್‌‌, ಆರ್‌ ವೈ ಪಾಪ್ಯುಲೇಷನ್‌ ಪ್ರಾಬ್ಲಮ್ಸ್‌‌‌ ಆರ್‌ ನಾಟ್‌ ಆಲ್‌ ಇಕನಾಮಿಕ್‌.” ಪಾಪ್ಯುಲೇಷನ್‌ ಅಂಡ್‌ ಎನ್‌ವಿರಾನ್‌ಮೆಂಟ್‌, 21(1): 81-97.
  57. ಹಾರ್ಡಿನ್‌, ಗರ್ರೆಟ್‌‌. 1992. “ದ ಎಥಿಕ್ಸ್‌ ಆಫ್‌ ಪಾಪ್ಯುಲೇಷನ್‌ ಗ್ರೋತ್‌ ಅಂಡ್‌‌ ಇಮಿಗ್ರೇಷನ್‌ ಕಂಟ್ರೋಲ್.” ಇನ್‌ ಕ್ರೌಡಿಂಗ್‌ ಔಟ್‌ ದ ಫ್ಯೂಚರ್‌‌: ವರ್ಲ್ಡ್‌ ಪಾಪ್ಯುಲೇಷನ್‌ ಗ್ರೋತ್‌‌, US ಇಮಿಗ್ರೇಷನ್‌, ಅಂಡ್‌‌ ಪ್ರೆಷರ್ಸ್‌ ಆನ್‌ ನ್ಯಾಚುರಲ್‌ ರಿಸೋರ್ಸಸ್‌‌, ರಾಬರ್ಟ್‌ W. ಫಾಕ್ಸ್‌‌ ಮತ್ತು ಇರಾ H. ಮೆಲ್ಹಮ್‌‌, eds. ವಾಷಿಂಗ್ಟನ್‌‌, DC: ಫೆಡರೇಷನ್‌ ಫಾರ್‌ ಅಮೇರಿಕನ್‌ ಇಮಿಗ್ರೇಷನ್‌ ರಿಫಾರ್ಮ್‌.
  58. ಸೆನ್‌, ಅಮರ್ತ್ಯ. 1982. ಪಾವರ್ಟಿ ಅಂಡ್‌ ಫೆಮೈನ್ಸ್‌‌: ಆನ್‌ ಎಸ್ಸೇ ಆನ್‌ ಎನ್‌ಟೈಟಲ್‌ಮೆಂಟ್ಸ್‌ ಅಂಡ್‌ ಡಿಪ್ರೈವೇಷನ್‌, ಆಕ್ಸ್‌ಫರ್ಡ್‌: ಕ್ಲಾರೆಂಡನ್‌ ಮುದ್ರಣಾಲಯ.
  59. [115]
  60. ಆಹಾರ ಮತ್ತು ಕೃಷಿ ಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ ಇಲಾಖೆ. “ದ ಸ್ಟೇಟ್‌ ಆಫ್‌ ಫುಡ್‌ ಇನ್‌ಸೆಕ್ಯೂರಿಟಿ ಇನ್‌ ದ ವರ್ಲ್ಡ್‌, 2008 : ಹೈ ಫುಡ್‌ ಪ್ರೈಸಸ್‌‌ ಅಂಡ್‌ ಫುಡ್‌ ಸೆಕ್ಯೂರಿಟಿ -ಥ್ರೆಟ್ಸ್‌ ಅಂಡ್‌ ಆಪರ್ಚುನಿಟೀಸ್”. ಸಂಯುಕ್ತ ರಾಷ್ಟ್ರ ಸಂಘಆಹಾರ ಮತ್ತು ಕೃಷಿ ಸಂಸ್ಥೆ, 2008, p. 2. “FAO'ನ ತೀರ ಇತ್ತೀಚಿನ ಅಂದಾಜುಗಳ ಪ್ರಕಾರ 2007ರಲ್ಲಿನ ಹಸಿವಿನಿಂದ [ವಾಸ್ತವವಾಗಿ, ನ್ಯೂನಪೋಷಣೆಗೊಳಗಾದವರು] ಪೀಡಿತರ ಸಂಖ್ಯೆಯನ್ನು 923 ದಶಲಕ್ಷವೆಂದು ತಿಳಿದುಬಂದಿದೆ, 1990–92ರ ಮೂಲ ಅವಧಿಗಿಂತ 80 ದಶಲಕ್ಷಕ್ಕೂ ಹೆಚ್ಚಿನ ಏರಿಕೆಯಾಗಿದೆ.”.
  61. ಜೀನ್‌ ಜೀಯೆಗ್ಲರ್‌. “ಪ್ರೊಮೋಷನ್‌ ಅಂಡ್‌ ಪ್ರೊಟೆಕ್ಷನ್‌ ಆಫ್‌ ಆಲ್‌ ಹ್ಯೂಮನ್‌ ರೈಟ್ಸ್‌, ಸಿವಿಲ್‌, ಪೊಲಿಟಿಕಲ್‌, ಇಕನಾಮಿಕ್‌‌, ಸೋಷಿಯಲ್‌ ಅಂಡ್‌ ಕಲ್ಚರಲ್‌ ರೈಟ್ಸ್‌‌, ಇನ್‌ಕ್ಲೂಡಿಂಗ್‌ ದ ರೈಟ್‌ ಟು ಡೆವಲಪ್‌ಮೆಂಟ್‌ : ರಿಪೋರ್ಟ್‌ ಆಫ್‌ ದ ಸ್ಪೆಷಲ್‌ ರ್ರ್ಯಾಪರ್ಟಿಯರ್‌‌ ಆನ್‌ ದ ರೈಟ್‌ ಟು ಫುಡ್‌‌, ಜೀನ್‌ ಜೀಯೆಗ್ಲರ್”. ಸಂಯುಕ್ತ ರಾಷ್ಟ್ರ ಸಂಘಮಾನವ ಹಕ್ಕುಗಳ ಸಮಿತಿ, ಜನವರಿ 10, 2008.“ಸಂಯುಕ್ತ ರಾಷ್ಟ್ರ ಸಂಘದ ಆಹಾರ ಮತ್ತು ಕೃಷಿ ಸಂಸ್ಥೆ|ಸಂಯುಕ್ತ ರಾಷ್ಟ್ರ ಸಂಘದ ಆಹಾರ ಮತ್ತು ಕೃಷಿ ಸಂಸ್ಥೆ]]ಯ (FAO), ಪ್ರಕಾರ‌ ವಿಶ್ವವು ಈಗಾಗಲೇ ಪ್ರತಿ ಮಗು, ಮಹಿಳೆ ಹಾಗೂ ಪುರುಷನಿಗೆ ಸಾಕಾಗುವಷ್ಟು ಆಹಾರವನ್ನು ಉತ್ಪಾದಿಸುತ್ತಿದ್ದು 12 ಶತಕೋಟಿ ಜನರಿಗೆ ಅಥವಾ ಈಗಿನ ಜನಸಂಖ್ಯೆಯ ದುಪ್ಪಟ್ಟು ಮಂದಿಗೆ ಆಹಾರ ನೀಡಬಲ್ಲದು.”
  62. ಆಹಾರ ಮತ್ತು ಕೃಷಿ ಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ ಇಲಾಖೆ. “ದ ಸ್ಟೇಟ್‌ ಆಫ್‌ ಫುಡ್‌ ಇನ್‌ಸೆಕ್ಯೂರಿಟಿ ಇನ್‌ ದ ವರ್ಲ್ಡ್‌, 2008 : ಹೈ ಫುಡ್‌ ಪ್ರೈಸಸ್‌‌ ಅಂಡ್‌ ಫುಡ್‌ ಸೆಕ್ಯೂರಿಟಿ -ಥ್ರೆಟ್ಸ್‌ ಅಂಡ್‌ ಆಪರ್ಚುನಿಟೀಸ್”. ಸಂಯುಕ್ತ ರಾಷ್ಟ್ರ ಸಂಘಆಹಾರ ಮತ್ತು ಕೃಷಿ ಸಂಸ್ಥೆ, 2008, p. 48.
  63. ಆಹಾರ ಮತ್ತು ಕೃಷಿ ಸಂಸ್ಥೆ ಕೃಷಿ ಹಾಗೂ ಅಭಿವೃದ್ಧಿ ಆರ್ಥಿಕತೆ ವಿಭಾಗ. “ದ ಸ್ಟೇಟ್‌‌ ಆಫ್‌ ಫುಡ್‌ ಸೆಕ್ಯೂರಿಟಿ ಇನ್‌ ದ ವರ್ಲ್ಡ್‌, 2006 : ಎರಾಡಿಕೇಟಿಂಗ್‌ ವರ್ಲ್ಡ್‌ ಹಂಗರ್‌ – ಟೇಕಿಂಗ್‌ ಸ್ಟಾಕ್‌ ಟೆನ್‌ ಇಯರ್ಸ್‌‌ ಆಫ್ಟರ್‌ ದ ವರ್ಲ್ಡ್‌ ಫುಡ್‌ ಸಮ್ಮಿಟ್‌”. ಸಂಯುಕ್ತ ರಾಷ್ಟ್ರ ಸಂಘಆಹಾರ ಮತ್ತು ಕೃಷಿ ಸಂಸ್ಥೆ, 2006, p. 8. “ಜನಸಂಖ್ಯಾ ಸ್ಫೋಟದಿಂದಾಗಿ ಹಸಿದ ಜನರ ಸಂಖ್ಯೆಯಲ್ಲಿನ ಅಲ್ಪ ಇಳಿಕೆಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ನ್ಯೂನಪೋಷಣೆಯ ಪ್ರಮಾಣವು – 1990–92ರ ಅವಧಿಯಲ್ಲಿನ 20 ಪ್ರತಿಶತದಿಂದ 2001–03ರಲ್ಲಿನ 17 ಪ್ರತಿಶತದವರೆಗೆ ಪ್ರತಿಶತ 3 ಅಂಶಗಳಷ್ಟು ಇಳಿಕೆ ತೋರಿಸುತ್ತಿದೆ. (…) 1969–71ರಿಂದ 1979–81ರ ನಡುವೆ ನ್ಯೂನಪೋಷಣೆಯ ಪ್ರಮಾಣವು ಪ್ರತಿಶತ 9ರಷ್ಟು ಇಳಿಕೆ ಕಂಡರೆ (37 ಪ್ರತಿಶತದಿಂದ 28 ಪ್ರತಿಶತಕ್ಕೆ) 1979–81ರಿಂದ 1990–92ರ ನಡುವೆ ಮತ್ತೂ 8 ಪ್ರತಿಶತ ಅಂಶಗಳ (20 ಪ್ರತಿಶತಕ್ಕೆ) ಏರಿಕೆ ಕಂಡಿತು.”.
  64. ಆಹಾರ ಮತ್ತು ಕೃಷಿ ಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ ಇಲಾಖೆ. “ದ ಸ್ಟೇಟ್‌ ಆಫ್‌ ಫುಡ್‌ ಇನ್‌ಸೆಕ್ಯೂರಿಟಿ ಇನ್‌ ದ ವರ್ಲ್ಡ್‌, 2008 : ಹೈ ಫುಡ್‌ ಪ್ರೈಸಸ್‌‌ ಅಂಡ್‌ ಫುಡ್‌ ಸೆಕ್ಯೂರಿಟಿ -ಥ್ರೆಟ್ಸ್‌ ಅಂಡ್‌ ಆಪರ್ಚುನಿಟೀಸ್”. ಸಂಯುಕ್ತ ರಾಷ್ಟ್ರ ಸಂಘಆಹಾರ ಮತ್ತು ಕೃಷಿ ಸಂಸ್ಥೆ, 2008, p. 6. “ಪ್ರಗತಿಶೀಲ ವಿಶ್ವದಲ್ಲಿ ಹಸಿವಿನಿಂದ ಪೀಡಿತರ ಪ್ರಮಾಣವನ್ನುಕಡಿಮೆ ಮಾಡುವಲ್ಲಿ ಉತ್ತಮ ಸಾಧನೆ ತೋರಲಾಗಿದೆ – 1990–92ರಲ್ಲಿನ ಬಹುತೇಕ ಶೇಕಡಾ 20ರಿಂದ 1995–97ರಲ್ಲಿನ 18 ಶೇಕಡಾಗಿಂತ ಕಡಿಮೆಗೆ ಹಾಗೂ 2003–05ರಲ್ಲಿ 16 ಶೇಕಡಾಗಿಂತ ಸ್ವಲ್ಪ ಹೆಚ್ಚಿಗೆ ಇರುವಂತೆ ಇಳಿಕೆ ಕಂಡಿದೆ. ಅಂದಾಜುಗಳ ಪ್ರಕಾರ ಆಹಾರದ ಬೆಲೆ ಏರಿಕೆಗಳು ಈ ಪ್ರಗತಿಯನ್ನು ತಿರುವುಮುರುವು ಮಾಡಿದ್ದು ವಿಶ್ವದಾದ್ಯಂತದ ನ್ಯೂನಪೋಷಣೆಯ ಜನರ ಪ್ರಮಾಣವನ್ನು ಹಿಂದಕ್ಕೆ 17 ಶೇಕಡಾಗೆ ತಲುಪಿಸಿವೆ.”.
  65. ಜೀನ್‌ ಜೀಯೆಗ್ಲರ್. “ದ ರೈಟ್‌ ಟು ಫುಡ್‌ : ರಿಪೋರ್ಟ್‌ ಬೈ ದ ಸ್ಪೆಷಲ್‌ ರ್ರ್ಯಾಪರ್ಟಿಯೋರ್‌ ಆನ್‌ ದ ರೈಟ್‌ ಟು ಫುಡ್‌, Mr. ಜೀನ್‌ ಜೀಯೆಗ್ಲರ್, ಸಬ್‌ಮಿಟ್ಟೆಡ್‌ ಇನ್‌ ಅಕಾರ್ಡೆನ್ಸ್‌ ವಿತ್‌ ಕಮಿಷನ್‌ ಆನ್‌ ಹ್ಯೂಮನ್‌ ರೈಟ್ಸ್‌ ರೆಸೊಲ್ಯೂಷನ್‌ 2000/10”. ಸಂಯುಕ್ತ ರಾಷ್ಟ್ರ ಸಂಘ, ಫೆಬ್ರವರಿ 7, 2001, p. 5. “ಸರಾಸರಿಯಾಗಿ, 62 ದಶಲಕ್ಷ ಜನರು ಪ್ರತಿ ವರ್ಷ ಮರಣಿಸಿದರೆ ಇವರಲ್ಲಿ ಬಹುಶಃ 36 ದಶಲಕ್ಷ (58 ಶೇಕಡಾ) ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪೋಷಣೆಯ ಕೊರತೆಗಳು, ಸೋಂಕುಗಳು, ಸರ್ವವ್ಯಾಪಿ ವ್ಯಾಧಿಗಳು ಅಥವಾ ನ್ಯೂನಪೋಷಣೆ ಹಾಗೂ ಹಸಿವುಗಳಿಂದ ದೇಹವು ದುರ್ಬಲಗೊಂಡಾಗ ದಾಳಿ ಮಾಡುವ ಕಾಯಿಲೆಗಳಿಂದಾಗಿ ಮರಣಿಸುತ್ತಾರೆ.”.
  66. ಮಾನವ ಹಕ್ಕುಗಳ ಸಮಿತಿ. “ದ ರೈಟ್‌ ಟು ಫುಡ್‌‌ : ಕಮಿಷನ್‌ ಆನ್‌ ಹ್ಯೂಮನ್‌ ರೈಟ್ಸ್‌ ರೆಸೊಲ್ಯೂಷನ್‌ 2002/25”. ಮಾನವ ಹಕ್ಕುಗಳ ಹೈಕಮೀಷನರ್‌ ಕಛೇರಿ, ಸಂಯುಕ್ತ ರಾಷ್ಟ್ರ ಸಂಘ, ಏಪ್ರಿಲ್‌ 22, 2002, p. 2. “ಇಡೀ ಜಾಗತಿಕ ಜನಸಂಖ್ಯೆಗೆ ಸಾಕಾಗುವಷ್ಟು ಆಹಾರವನ್ನು ಈಗಾಗಲೇ ಉತ್ಪಾದಿಸುತ್ತಿರುವ ವಿಶ್ವದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಸಿವು ಹಾಗೂ ಪೋಷಣೆಯ ಕೊರತೆಗಳಿಂದಾಗಿ ಪ್ರತಿ ವರ್ಷ 36 ದಶಲಕ್ಷ ಜನರು ಮರಣಿಸುತ್ತಾರೆ ಅವರಲ್ಲಿ ಬಹುಪಾಲು ಮಹಿಳೆಯರು ಹಾಗೂ ಮಕ್ಕಳು, ನಿರ್ದಿಷ್ಟವಾಗಿ ಪ್ರಗತಿಶೀಲ ರಾಷ್ಟ್ರಗಳಲ್ಲಿ”.
  67. ಸಂಯುಕ್ತ ರಾಷ್ಟ್ರ ಸಂಘದ ಮಾಹಿತಿ ಸೇವೆ. “ಇಂಡಿಪೆಂಡೆಂಟ್‌ ಎಕ್ಸ್‌‌ಪರ್ಟ್‌ ಆನ್‌ ಎಫೆಕ್ಟ್ಸ್‌ ಆಫ್‌ ಸ್ಟ್ರಕ್ಚರಲ್‌‌ ಅಡ್‌ಜಸ್ಟ್‌ಮೆಂಟ್‌, ಸ್ಪೆಷಲ್‌ ರ್ರ್ಯಾಪರ್ಟಿಯರ್‌ ಆನ್‌ ರೈಟ್‌ ಟು ಫುಡ್‌ ಪ್ರೆಸೆಂಟ್‌ ರಿಪೋರ್ಟ್ಸ್‌‌ : ಕಮಿಷನ್‌ ಕಂಟಿನ್ಯೂಸ್‌ ಜನರಲ್‌ ಡಿಬೇಟ್‌ ಆನ್‌ ಇಕನಾಮಿಕ್‌, ಸೋಷಿಯಲ್‌ ಅಂಡ್‌ ಕಲ್ಚರಲ್‌ ರೈಟ್ಸ್‌”. ಸಂಯುಕ್ತ ರಾಷ್ಟ್ರ ಸಂಘ, ಮಾರ್ಚ್‌ 29, 2004, p. 6. “ಪ್ರತಿ ವರ್ಷ ಸುಮಾರು 36 ದಶಲಕ್ಷ ಜನರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಸಿವಿನಿಂದ ಸಾಯುತ್ತಿದ್ದಾರೆ.”.
  68. ಆಹಾರ ಮತ್ತು ಕೃಷಿ ಸಂಸ್ಥೆ ಸಿಬ್ಬಂದಿ. “ದ ಸ್ಟೇಟ್‌ ಆಫ್‌ ಫುಡ್‌ ಇನ್‌ಸೆಕ್ಯೂರಿಟಿ ಇನ್‌ ದ ವರ್ಲ್ಡ್‌, 2002: ಫುಡ್‌ ಇನ್‌ಸೆಕ್ಯೂರಿಟಿ : ವೆನ್‌ ಪೀಪಲ್‌ ಲಿವ್‌ ವಿತ್‌ ಹಂಗರ್‌ ಅಂಡ್ ಫಿಯರ್ ಸ್ಟಾರ್ವೇಷನ್‌”. ಸಂಯುಕ್ತ ರಾಷ್ಟ್ರ ಸಂಘಆಹಾರ ಮತ್ತು ಕೃಷಿ ಸಂಸ್ಥೆ, 2002, p. 6. “ಐದು ವರ್ಷದೊಳಗಿನ 6 ದಶಲಕ್ಷ ಮಕ್ಕಳು ಪ್ರತಿ ವರ್ಷ ಹಸಿವಿನಿಂದಾಗಿ ಮರಣಿಸುತ್ತಿದ್ದಾರೆ.”
  69. ಸಂಯುಕ್ತ ರಾಷ್ಟ್ರ ಸಂಘಆಹಾರ ಮತ್ತು ಕೃಷಿ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ Dept. ದ ಸ್ಟೇಟ್‌ ಆಫ್‌ ಫುಡ್‌ ಇನ್‌ಸೆಕ್ಯೂರಿಟಿ ಇನ್‌ ದ ವರ್ಲ್ಡ್ 2004: ಮಾನಿಟರಿಂಗ್‌ ಪ್ರೋಗ್ರೆಸ್‌‌ ಟುವರ್ಡ್ಸ್‌ ದ ವರ್ಲ್ಡ್‌ ಫುಡ್‌ ಸಮ್ಮಿಟ್‌ ಅಂಡ್‌ ಮಿಲೇನಿಯಮ್‌ ಡೆವೆಲಪ್‌ಮೆಂಟ್‌ ಗೋಲ್ಸ್”. ಸಂಯುಕ್ತ ರಾಷ್ಟ್ರ ಸಂಘಆಹಾರ ಮತ್ತು ಕೃಷಿ ಸಂಸ್ಥೆ, 2004, p. 8. “ನ್ಯೂನಪೋಷಣೆ ಹಾಗೂ ಅಗತ್ಯ ಜೀವಸತ್ವಗಳು ಹಾಗೂ ಖನಿಜಾಂಶಗಳ ಕೊರತೆಯು 5 ದಶಲಕ್ಷಕ್ಕೂ ಹೆಚ್ಚಿನ ಮಕ್ಕಳು ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ”.
  70. ಜ್ಯಾಕ್ವೆಸ್‌ ಡಿಯೋಫ್‌‌. “ದ ಸ್ಟೇಟ್‌ ಆಫ್‌ ಫುಡ್‌ ಇನ್‌ಸೆಕ್ಯೂರಿಟಿ ಇನ್‌ ದ ವರ್ಲ್ಡ್ 2004: ಮಾನಿಟರಿಂಗ್‌ ಪ್ರೋಗ್ರೆಸ್‌‌ ಟುವರ್ಡ್ಸ್‌ ದ ವರ್ಲ್ಡ್‌ ಫುಡ್‌ ಸಮ್ಮಿಟ್‌ ಅಂಡ್‌ ಮಿಲೇನಿಯಮ್‌ ಡೆವೆಲಪ್‌ಮೆಂಟ್‌ ಗೋಲ್ಸ್”. ಸಂಯುಕ್ತ ರಾಷ್ಟ್ರ ಸಂಘಆಹಾರ ಮತ್ತು ಕೃಷಿ ಸಂಸ್ಥೆ, 2004, p. 4. “ಹಸಿವು ಹಾಗೂ ಅಪೌಷ್ಟಿಕತೆಗಳಿಂದಾಗಿ ಪ್ರತಿ ಐದು ಸೆಕೆಂಡುಗಳಿಗೆ ಒಂದು ಮಗು ಸಾವನ್ನಪ್ಪುತ್ತಿದೆ”.
  71. ಆಹಾರ ಮತ್ತು ಕೃಷಿ ಸಂಸ್ಥೆ, ಆರ್ಥಿಕ ಮತ್ತು ಸಾಮಾಜಿಕ Dept. ದ ಸ್ಟೇಟ್‌ ಆಫ್‌ ಫುಡ್‌ ಇನ್‌ಸೆಕ್ಯೂರಿಟಿ ಇನ್‌ ದ ವರ್ಲ್ಡ್ 2005: ಎರಾಡಿಕೇಟಿಂಗ್‌ ವರ್ಲ್ಡ್‌ ಹಂಗರ್‌ -ಕೀ ಟು ಅಚೀವಿಂಗ್‌ ದ ಮಿಲೇನಿಯಮ್‌ ಡೆವೆಲಪ್‌ಮೆಂಟ್‌ ಗೋಲ್ಸ್‌”. ಸಂಯುಕ್ತ ರಾಷ್ಟ್ರ ಸಂಘಆಹಾರ ಮತ್ತು ಕೃಷಿ ಸಂಸ್ಥೆ, 2005, p. 18. ಹಸಿವು ಹಾಗೂ ಅಪೌಷ್ಟಿಕತೆಗಳು ಎಲ್ಲಾ ಮಕ್ಕಳ ಸಾವುಗಳ ಅರ್ಧಕ್ಕಿಂತ ಹೆಚ್ಚಿನವುಗಳಲ್ಲಿ ಮೂಲಭೂತ ಕಾರಣವಾಗಿದ್ದು ಪ್ರತಿವರ್ಷ ಬಹುಮಟ್ಟಿಗೆ 6 ದಶಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದು – ಇದು ಸರಿಸುಮಾರು ಇಡೀ ಜಪಾನ್‌ನ ಶಾಲಾಪೂರ್ವ ಮಕ್ಕಳ ಸಂಖ್ಯೆಗೆ ಸಮನಾಗಿದೆ. ಸಾಪೇಕ್ಷವಾಗಿ ಈ ಮಕ್ಕಳಲ್ಲಿ ಕೆಲವು ಮಾತ್ರ ನಿರಾಹಾರದಿಂದ ಮರಣಿಸಿರುತ್ತವೆ. ವ್ಯಾಪಕ ಪ್ರಮಾಣದ ಮಕ್ಕಳು ನವಜಾತ ಶಿಶುವಿಗೆ ತಗಲುವ ವ್ಯಾಧಿಗಳಿಂದ ಹಾಗೂ ಕೆಲವು ಅತಿಸಾರ/ಭೇದಿ, ಶ್ವಾಸಕೋಸದ ಉರಿಯೂತ/ನ್ಯುಮೋನಿಯಾ, ಮಲೇರಿಯಾ ಹಾಗೂ ದಡಾರ/ದಢಾರಗಳೂ ಸೇರಿದಂತೆ ಚಿಕಿತ್ಸೆ ನೀಡಬಹುದಾದ ಸಾಂಕ್ರಾಮಿಕ ರೋಗಗಳಿಂದ ಮರಣಿಸಿರುತ್ತವೆ. ಇವುಗಳಲ್ಲಿ ಬಹುತೇಕವು ಅವರ ದೇಹ ಹಾಗೂ ರೋಗನಿರೋಧಕ ವ್ಯವಸ್ಥೆಗಳು ಹಸಿವು ಮತ್ತು ಅಪೌಷ್ಟಿಕತೆಗಳಿಂದ ದುರ್ಬಲಗೊಂಡಿರದಿದ್ದಲ್ಲಿ ಸಾಯುತ್ತಿರಲಿಲ್ಲ, ಸಾಧಾರಣದಿಂದ ತೀವ್ರ ತೂಕಕೊರತೆಯಿಂದಾಗಿ, ಸಾವಿನ ಅಪಾಯಗಳು ಐದರಿಂದ ಎಂಟು ಪಟ್ಟು ಹೆಚ್ಚಿನದಾಗಿದೆ.”.
  72. ಮಾನವ ಹಕ್ಕುಗಳ ಸಮಿತಿ. “ರೆಸೊಲ್ಯೂಷನ್‌ 7/14. ದ ರೈಟ್‌ ಟು ಫುಡ್”. ಸಂಯುಕ್ತ ರಾಷ್ಟ್ರ ಸಂಘ, ಮಾರ್ಚ್‌ 27, 2008, p. 3. “ಈಗಲೂ ಪ್ರತಿ ವರ್ಷ ತಮ್ಮ ಐದನೇ ಹುಟ್ಟುಹಬ್ಬಕ್ಕಿಂತ ಮುಂಚೆ 6 ದಶಲಕ್ಷ ಮಕ್ಕಳು ಹಸಿವು-ಸಂಬಂಧಿಸಿದ ರೋಗಗಳಿಂದಾಗಿ ಮರಣಿಸುತ್ತಿದ್ದಾರೆ”.
  73. ಫಾಟ್ಸೋ, ಜೀನ್‌-ಕ್ರಿಸ್ಟೋಫೆ ಮತ್ತು ಬಾರ್ತೆಲೆಮಿ ಕುವಾಟೆ-ಡೆಫೋ. "ಮೆಷರಿಂಗ್‌ ಸೋಷಿಯೋ-ಇಕನಾಮಿಕ್‌ ಸ್ಟೇಟಸ್‌ ಇನ್‌ ಹೆಲ್ತ್‌ ರೀಸರ್ಚ್‌ ಇನ್‌ ಡೆವಲಪಿಂಗ್‌ ಕಂಟ್ರೀಸ್‌‌ : ಷುಡ್‌ ವಿ ಬೀ ಫೋಕಸಿಂಗ್‌ ಆನ್‌ ಹೌಸ್‌ಹೋಲ್ಡ್ಸ್‌‌, ಕಮ್ಯುನಿಟೀಸ್‌ ಆರ್‌ ಬೋತ್‌?" ಸೋಷಿಯಲ್‌ ಇಂಡಿಕೇಟರ್ಸ್‌ ರಿಸರ್ಚ್. (2005) 72:189-237.
  74. ನ್ಯೂಬ್‌, M. and G.J.M. ವಾನ್‌ ಡೆಮ್‌ ಬೂಮ್‌ . "ಜೆಂಡರ್‌ ಅಂಡ್‌ ಅಡಲ್ಟ್‌ ಅಂಡರ್‌ನ್ಯೂಟ್ರಿಷನ್‌ ಇನ್‌ ಡೆವಲಪಿಂಗ್‌ ಕಂಟ್ರೀಸ್‌‌." ಆನ್ನಲ್ಸ್‌‌ ಆಫ್‌ ಹ್ಯೂಮನ್‌ ಬಯಾಲಜಿ (2003) 30:5:520-537.
  75. US ದಾಳಿಯ ನಾಲ್ಕು ವರ್ಷಗಳ ನಂತರ ಈಗ ಇರಾಕಿ ಮಕ್ಕಳಲ್ಲಿ ಮೂವರಲ್ಲೊಬ್ಬರು ಪೌಷ್ಟಿಕತೆರಹಿತರಾಗಿರುತ್ತಾರೆ Archived 2008-10-07 ವೇಬ್ಯಾಕ್ ಮೆಷಿನ್ ನಲ್ಲಿ. ರಾಯಿಟರ್ಸ್‌. 16 ಮಾರ್ಚ್‌ 2007
  76. . 2008 Global Hunger Index Key Findings & Facts http://www.ifpri.org/publication/challenge-hunger-2008-global-hunger-index Global Hunger Index Key Findings & Facts. {{cite web}}: Check |url= value (help); Missing or empty |title= (help)
  77. ೭೭.೦ ೭೭.೧ "'Hunger critical' in South Asia". BBC. 2006-10-13. Retrieved 2010-05-12.
  78. ಸಮೀಕ್ಷೆಯ ಪ್ರಕಾರ ಭಾರತದ ಸುಮಾರು ಅರ್ಧದಷ್ಟು ಮಕ್ಕಳು ಪೌಷ್ಟಿಕತೆರಹಿತರಾಗಿದ್ದಾರೆ, CBS ನ್ಯೂಸ್‌, ಫೆಬ್ರವರಿ 10, 2007
  79. "India: Undernourished Children: A Call for Reform and Action". World Bank. Archived from the original on 2018-06-13. Retrieved 2010-07-12.
  80. ೮೦.೦ ೮೦.೧ "Lifting the Curse: Overcoming Persistent Undernutrition in India". IDS Bulletin. 40 (4). 2009-07-02. Archived from the original on 2018-06-13. Retrieved 2010-07-12.
  81. "Childhood Hunger in America". Share Our Strength. 2009. Archived from the original on 2012-08-21. Retrieved 2010-07-12.
  82. "3.5M Kids Under 5 On Verge Of Going Hungry
    Study: 11 Percent Of U.S. Households Lack Food For Healthy Lifestyle"
    . Health. CBS NEWS. 2009-05-07. Archived from the original ("SHTML) on 2013-05-13. Retrieved 2009-05-08.
  83. "Plan to End Childhood Hunger in America". Share Our Strength. 2009. Archived from the original on 2011-07-29. Retrieved 2010-07-12.
  84. ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿ, ಎಲ್ಲಾ ಪ್ರೌಢರಲ್ಲೂ ಅರ್ಧಕ್ಕೂ ಹೆಚ್ಚು ಮಂದಿ ಈಗ ಅಧಿಕತೂಕದವರಾಗಿದ್ದಾರೆ - ಹಸಿವಿನಂತೆಯೇ, ಕಾಯಿಲೆ ಹಾಗೂ ಅಂಗವಿಕಲತೆಗೆ ದಾರಿ ಮಾಡುವ ಪರಿಸ್ಥಿತಿಗೆ ಇದಾಗಿದೆ, ಇದರಿಂದಾಗಿ ಕೆಲಸಗಾರರ ಉತ್ಪಾದಕತೆ ಕಡಿಮೆಯಾಗುತ್ತದಲ್ಲದೇ ಜೀವಿತಾವಧಿಯು ಕಡಿಮೆಯಾಗುತ್ತದೆ.

ಹೊರಗಿನ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Diseases of Poverty