ಖಿನ್ನತೆ
ಮನೋವಿಜ್ಞಾನ ಮತ್ತು ಮನೋವೈದ್ಯಶಾಸ್ತ್ರದ ಕಾರ್ಯಕ್ಷೇತ್ರಗಳಲ್ಲಿ, ಖಿನ್ನತೆಯು ಕುಗ್ಗಿದ ಮನಃಸ್ಥಿತಿ ಮತ್ತು ಚಟುವಟಿಕೆಗೆ ಜುಗುಪ್ಸೆಯಿರುವ ಸ್ಥಿತಿಯನ್ನು ತಿಳಿಸುತ್ತದೆ.
ಮಾನಸಿಕ ಖಿನ್ನತೆ
ಬದಲಾಯಿಸಿಮಾನಸಿಕ ಖಿನ್ನತೆಯು ದುರ್ಬಲ ಮನಸ್ಥಿತಿ ಮತ್ತು ಚಟುವಟಿಕೆಗಳ ಬಗ್ಗೆ ಕಡಿಮೆ ಒಲವಿರುವ ಸ್ಥಿತಿ. ಇದು ವ್ಯಕ್ತಿಯ ಆಲೋಚನೆಗಳು, ನಡವಳಿಕೆ, ಪ್ರೇರಣೆ, ಭಾವನೆಗಳು ಮತ್ತು ಯೋಗಕ್ಷೇಮದ ಪ್ರಜ್ಞೆಯ ಮೇಲೆ ಪರಿಣಾಮ ಬೀರಬಹುದು. ಇದು ದುಃಖ, ಆಲೋಚನೆ ಮತ್ತು ಏಕಾಗ್ರತೆಯ ತೊಂದರೆ ಮತ್ತು ಹಸಿವು ಮತ್ತು ನಿದ್ರೆಯಲ್ಲಿ ಗಮನಾರ್ಹ ಹೆಚ್ಚಳ ಅಥವಾ ಇಳಿಕೆಯನ್ನು ಒಳಗೊಂಡಿರಬಹುದು. ಖಿನ್ನತೆಯನ್ನು ಅನುಭವಿಸುವ ಜನರು ನಿರಾಕರಣೆ, ಹತಾಶತೆ ಮತ್ತು ಕೆಲವೊಮ್ಮೆ ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿರಬಹುದು. ಇದು ಅಲ್ಪಾವಧಿಯ ಅಥವಾ ದೀರ್ಘಾವಧಿಯದ್ದಾಗಿರಬಹುದು[೧]. ಖಿನ್ನತೆಯ ಪ್ರಮುಖ ಲಕ್ಷಣವೆಂದರೆ ಅನ್ಹೆಡೋನಿಯಾ ಎಂದು ಹೇಳಲಾಗುತ್ತದೆ, ಇದು ಸಾಮಾನ್ಯವಾಗಿ ಜನರಿಗೆ ಸಂತೋಷವನ್ನು ತರುವ ಕೆಲವು ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು ಅಥವಾ ಸಂತೋಷದ ಭಾವನೆ ಕಳೆದುಕೊಳ್ಳುವುದನ್ನು ಸೂಚಿಸುತ್ತದೆ.[೨] ಖಿನ್ನತೆಯು ಡಿಸ್ಥೈಮಿಯಾದಂತಹ ಕೆಲವು ಮನೋರೋಗಗಳ ಲಕ್ಷಣವಾಗಿದೆ[೩]; ಹಾಗೂ ಪ್ರೀತಿಪಾತ್ರರನ್ನು ಕಳೆದುಕೊಂಡಂತಹ ಘಟನೆಗಳಿಗೆ ಸಾಮಾನ್ಯ ತಾತ್ಕಾಲಿಕ ಪ್ರತಿಕ್ರಿಯೆಯಾಗಿದೆ; ಮತ್ತು ಇದು ಕೆಲವು ದೈಹಿಕ ಕಾಯಿಲೆಗಳ ಲಕ್ಷಣವಾಗಿದೆ ಮತ್ತು ಕೆಲವು ಔಷಧಿಗಳುಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳ ಅಡ್ಡಪರಿಣಾಮವಾಗಿದೆ.
ಕಾರಣಗಳು
ಬದಲಾಯಿಸಿಜೀವನದ ಘಟನೆಗಳು
ಬದಲಾಯಿಸಿಬಾಲ್ಯದಲ್ಲಿ ಪ್ರತಿಕೂಲತೆ, ಮರಣ, ನಿರ್ಲಕ್ಷ್ಯ, ಮಾನಸಿಕ ಕಿರುಕುಳ, ದೈಹಿಕ ಕಿರುಕುಳ, ಲೈಂಗಿಕ ಕಿರುಕುಳ ಮತ್ತು ಪೋಷಕರು ಮಕ್ಕಳನ್ನು ತಾರತಮ್ಯ ಭಾವದಿಂದ ಬೆಳೆಸುವುದು ಪ್ರೌಢಾವಸ್ಥೆಯಲ್ಲಿ ಖಿನ್ನತೆಗೆ ಕಾರಣವಾಗಬಹುದು.[೪][೫] ಬಾಲ್ಯದಲ್ಲಿ ಅನುಭವಿಸಿದ ದೈಹಿಕ ಅಥವಾ ಲೈಂಗಿಕ ಕಿರುಕುಳವು ಆ ವ್ಯಕ್ತಿಯು ತನ್ನ ಮುಂದಿನ ದಿನಗಳಲ್ಲಿ ಅಥವಾ ಭವಿಷ್ಯದಲ್ಲಿ ಮಾನಸಿಕ ಖಿನ್ನತೆಯನ್ನು ಅನುಭವಿಸುವ ಸಾಧ್ಯತೆಗಳಿವೆ.[೬]
ಮಾನಸಿಕ ಖಿನ್ನತೆಯು ಮನಸಿನ ಮೇಲೆ ಪ್ರಭಾವ ಬೀರಬಹುದಾದ ಜೀವನ ಘಟನೆಗಳು ಮತ್ತು ಬದಲಾವಣೆಗಳಿಗೆ ಸೇರಿವೆ ಆದರೆ ಅವುಗಳಿಗೆ ಸೀಮಿತವಾಗಿಲ್ಲ. ಖಿನ್ನತೆಯು ಹೆರಿಗೆ, ಮುಟ್ಟು ನಿಲ್ಲುವಿಕೆ, ಆರ್ಥಿಕ ತೊಂದರೆಗಳು, ನಿರುದ್ಯೋಗ, ಒತ್ತಡ (ಕೆಲಸ, ಶಿಕ್ಷಣ, ಕುಟುಂಬ, ಜೀವನ ಪರಿಸ್ಥಿತಿಗಳು ಇತ್ಯಾದಿ), ವೈದ್ಯಕೀಯ ರೋಗನಿರ್ಣಯ (ಕ್ಯಾನ್ಸರ್, ಎಚ್ಐವಿ, ಇತ್ಯಾದಿ), ಬೆದರಿಸುವಿಕೆ, ಪ್ರೀತಿಪಾತ್ರರ ನಷ್ಟ, ನೈಸರ್ಗಿಕ ವಿಪತ್ತುಗಳು, ಸಾಮಾಜಿಕ ಪ್ರತ್ಯೇಕತೆ, ಅತ್ಯಾಚಾರ, ಸಂಬಂಧದ ತೊಂದರೆಗಳು, ಅಸೂಯೆ, ಪ್ರತ್ಯೇಕತೆ ಮತ್ತು ದುರಂತಗಳಿಂದಾಗಿಆಗಬಹುದು.[೭][೮][೯] ಹದಿಹರೆಯದವರು ಸಾಮಾಜಿಕ ನಿರಾಕರಣೆ, ಸ್ನೇಹಿತರ ಒತ್ತಡ ಅಥವಾ ಬೆದರಿಕೆಯಿಂದಾಗಿ ಖಿನ್ನತೆಯ ಮನಸ್ಥಿತಿಯನ್ನು ಅನುಭವಿಸುವ ಸಾಧ್ಯತೆಯಿದೆ.[೧೦]
ವ್ಯಕ್ತಿತ್ವ
ಬದಲಾಯಿಸಿವ್ಯಕ್ತಿತ್ವದಲ್ಲಿನ ಬದಲಾವಣೆಗಳು ಅಥವಾ ಸಾಮಾಜಿಕ ವಾತಾವರಣವು ಖಿನ್ನತೆಯ ಮಟ್ಟದ ಪರಿಣಾಮ ಬೀರುತ್ತದೆ. ನ್ಯೂರೋಟಿಸಿಸಂ ವ್ಯಕ್ತಿತ್ವದಲ್ಲಿ ಹೆಚ್ಚಿನ ಅಂಕಗಳು ಖಿನ್ನತೆಯ ಲಕ್ಷಣಗಳ ಬೆಳವಣಿಗೆಯನ್ನು ತೋರುತ್ತದೆ ಮತ್ತು ಇತರ ಮಾನಸಿಕ ರೋಗಗಳಿಗೆ ಸೂಚನೆಯಾಗಿದೆ.[೧೧] ಇತರ ವ್ಯಕ್ತಿತ್ವ ಸೂಚಕಗಳು ಹೀಗಿರಬಹುದು: ತಾತ್ಕಾಲಿಕ ಆದರೆ ತ್ವರಿತ ಮನಸ್ಥಿತಿ ಬದಲಾವಣೆಗಳು, ಅಲ್ಪಾವಧಿಯ ಹತಾಶತೆ,ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು, ನಿದ್ರಾ ಭಂಗ, ಹಿಂದಿನ ಸಾಮಾಜಿಕ ಜೀವನದಿಂದ ಹಿಂದೆ ಸರಿಯುವುದು, ಹಸಿವು ಬದಲಾವಣೆಗಳು ಮತ್ತು ಏಕಾಗ್ರತೆಯಲ್ಲಿ ತೊಂದರೆ.[೧೨]
ವೈದ್ಯಕೀಯ ಚಿಕಿತ್ಸೆಗಳು
ಬದಲಾಯಿಸಿಖಿನ್ನತೆಯು ಇತರ ವೈದ್ಯಕೀಯ ಚಿಕಿತ್ಸೆಗಳ ಪರಿಣಾಮವಾಗಿರಬಹುದು, ಉದಾಹರಣೆಗೆ ಔಷಧಿ ಪ್ರೇರಿತ ಖಿನ್ನತೆ. ಖಿನ್ನತೆಗೆ ಸಂಬಂಧಿಸಿದ ಚಿಕಿತ್ಸೆಗಳಲ್ಲಿ ಇಂಟರ್ಫೆರಾನ್ ಥೆರಪಿ, ಬೀಟಾ-ಬ್ಲಾಕರ್ಸ್, ಐಸೊಟ್ರೆಟಿನೊಯಿನ್, ಗರ್ಭನಿರೋಧಕಗಳು[೧೩], ಕಾರ್ಡಿಯಾಕ್ ಏಜೆಂಟ್, ಆಂಟಿಕಾನ್ವಲ್ಸೆಂಟ್ಸ್, ಆಂಟಿಮೈಗ್ರೇನ್ ಡ್ರಗ್ಸ್, ಆಂಟಿ ಸೈಕೋಟಿಕ್ಸ್ ಮತ್ತು ಗೊನಡೋಟ್ರೋಪಿನ್-ಬಿಡುಗಡೆ ಮಾಡುವ ಹಾರ್ಮೋನ್ ಅಗೊನಿಸ್ಟ್ ನಂತಹ ಹಾರ್ಮೋನುಗಳ ಏಜೆಂಟ್ ಸೇರಿವೆ.[೧೪]
ಔಷಧಗಳ ದುರುಪಯೋಗ
ಬದಲಾಯಿಸಿಔಷಧಗಳ ದುರುಪಯೋಗತೆ, ಮಾದಕತೆ, ಮತ್ತು ದೀರ್ಘಕಾಲದ ಬಳಕೆಯು ಖಿನ್ನತೆಯನ್ನು ಉಂಟುಮಾಡಬಹುದು ಅಥವಾ ಉಲ್ಬಣಗೊಳಿಸಬಹುದು. ಇವುಗಳಲ್ಲಿ ಮದ್ಯಗಳು , ನಿದ್ರಾಜನಕಗಳು (ಪ್ರಿಸ್ಕ್ರಿಪ್ಷನ್ ಬೆಂಜೊಡಿಯಜೆಪೈನ್ಗಳು ಸೇರಿದಂತೆ), ಅಫೀಮುಗಳು (ಪ್ರಿಸ್ಕ್ರಿಪ್ಷನ್ ನೋವು ನಿವಾರಕಗಳು ಮತ್ತು ಹೆರಾಯಿನ್ ನಂತಹ ಅಕ್ರಮ ಔಷಧಗಳು ಸೇರಿದಂತೆ), ಉತ್ತೇಜಕಗಳು (ಕೊಕೇನ್ ಮತ್ತು ಆಂಫೆಟಮೈನ್ಗಳಂತಹವು), ಭ್ರಾಮಕಗಳು ಸೇರಿವೆ.[೧೫]
ಮನೋವೈದ್ಯಕೀಯವಲ್ಲದ ಕಾಯಿಲೆಗಳು
ಬದಲಾಯಿಸಿಹಲವಾರು ಸಾಂಕ್ರಾಮಿಕ ಕಾಯಿಲೆಗಳು, ಪೌಷ್ಠಿಕಾಂಶದ ಕೊರತೆ, ನರವೈಜ್ಞಾನಿಕ ಪರಿಸ್ಥಿತಿಗಳು[೧೬] ಮತ್ತು ದೈಹಿಕ ಸಮಸ್ಯೆಗಳಾದ ಹೈಪೋಆಂಡ್ರೊಜೆನಿಸಮ್ (ಪುರುಷರಲ್ಲಿ), ಅಡಿಸನ್ ಕಾಯಿಲೆ, ಕುಶಿಂಗ್ ಸಿಂಡ್ರೋಮ್, ಹೈಪೋಥೈರಾಯ್ಡಿಸಮ್, ಲೈಮ್ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಪಾರ್ಕಿನ್ಸನ್ ಕಾಯಿಲೆ, ದೀರ್ಘಕಾಲದ ನೋವು, ಪಾರ್ಶ್ವವಾಯು[೧೭], ಮಧುಮೇಹ[೧೮], ಮತ್ತು ಕ್ಯಾನ್ಸರ್[೧೯] ಮುಂತಾದವುಗಳಿಂದಾಗಿ ಖಿನ್ನತೆಯು ಉಂಟಾಗಬಹುದು.
ಮನೋವೈದ್ಯಕೀಯ ರೋಗಲಕ್ಷಣಗಳು
ಬದಲಾಯಿಸಿಹಲವಾರು ಮನೋವೈದ್ಯಕೀಯ ರೋಗಲಕ್ಷಣಗಳು ಖಿನ್ನತೆಯ ಮನಸ್ಥಿತಿಯನ್ನು ಮುಖ್ಯ ಲಕ್ಷಣವಾಗಿ ತೋರಿಸುತ್ತವೆ. ಮಾನಸಿಕ ಅಸ್ವಸ್ಥತೆಗಳು ಮನಸ್ಸಿನ ಪ್ರಾಥಮಿಕ ಅಡಚಣೆಗಳೆಂದು ಪರಿಗಣಿಸಲಾದ ಅಸ್ವಸ್ಥತೆಗಳ ಒಂದು ಗುಂಪು. ಇವುಗಳಲ್ಲಿ ಪ್ರಮುಖ ಖಿನ್ನತೆಯ ಅಸ್ವಸ್ಥತೆ (ಎಂಡಿಡಿ; ಸಾಮಾನ್ಯವಾಗಿ ಪ್ರಮುಖ ಖಿನ್ನತೆ ಅಥವಾ ಕ್ಲಿನಿಕಲ್ ಡಿಪ್ರೆಶನ್ ಎಂದು ಕರೆಯಲ್ಪಡುತ್ತದೆ) ಯಲ್ಲಿ ಒಬ್ಬ ವ್ಯಕ್ತಿಯು ಕನಿಷ್ಠ ಎರಡು ವಾರಗಳ ಕಾಲ ಮಾನಸಿಕ ಖಿನ್ನತೆಯನ್ನು ಹೊಂದಿರುತ್ತಾನೆ ಅಥವಾ ಬಹುತೇಕ ಎಲ್ಲಾ ಚಟುವಟಿಕೆಗಳಲ್ಲಿ ಆಸಕ್ತಿ ಅಥವಾ ಸಂತೋಷವನ್ನು ಕಳೆದುಕೊಳ್ಳುತ್ತಾನೆ; ಮತ್ತು ಡಿಸ್ಟೀಮಿಯಾ, ದೀರ್ಘಕಾಲದ ಖಿನ್ನತೆಯ ಮನಸ್ಥಿತಿಯ ಸ್ಥಿತಿ, ಇದರ ಲಕ್ಷಣಗಳು ಪ್ರಮುಖ ಖಿನ್ನತೆಯ ಪ್ರಸಂಗದ ತೀವ್ರತೆಯನ್ನು ಪೂರೈಸುವುದಿಲ್ಲ. ಮತ್ತೊಂದು ಮಾನಸಿಕ ಅಸ್ವಸ್ಥತೆ, ಬೈಪೋಲಾರ್ ಡಿಸಾರ್ಡರ್, ಅಸಹಜವಾಗಿ ಉತ್ತೇಜಿತ ಮನಸ್ಥಿತಿ, ಅರಿವಿನ ಮತ್ತು ಶಕ್ತಿಯ ಮಟ್ಟಗಳ ಒಂದು ಅಥವಾ ಹೆಚ್ಚಿನ ಕಂತುಗಳನ್ನು ಒಳಗೊಂಡಿದೆ, ಆದರೆ ಖಿನ್ನತೆಯ ಒಂದು ಅಥವಾ ಹೆಚ್ಚಿನ ಕಂತುಗಳನ್ನು ಸಹ ಒಳಗೊಂಡಿರಬಹುದು(20). ಗಡಿರೇಖೆಯ ವ್ಯಕ್ತಿತ್ವ ಆಗಾಗ್ಗೆ ತೀವ್ರವಾದ ಖಿನ್ನತೆಯ ಮನಸ್ಥಿತಿಯನ್ನು ಹೊಂದಿರುತ್ತದೆ; ಇದರಲ್ಲಿ ಉಂಟಾಗುವ ಭಾವನಾತ್ಮಕ ಅಥವಾ ನಡವಳಿಕೆಯ ಲಕ್ಷಣಗಳು ಗಮನಾರ್ಹವಾದರೂ ಪ್ರಮುಖ ಖಿನ್ನತೆಯೆಂದು ವಿಭಾಗಿಸಲು ಬೇಕಾಗುವ ಮಾನದಂಡಗಳನ್ನು ಹೊಂದಿಲ್ಲ.[೨೦]
ಸಂಪರ್ಕ
ಬದಲಾಯಿಸಿಮದ್ಯಪಾನ
ಬದಲಾಯಿಸಿಇದು ಮೆದುಳಿನ ಕೆಲವು ಪ್ರದೇಶಗಳು ಪ್ರಿಫ್ರಂಟಲ್ ಮತ್ತು ಟೆಂಪರಲ್ ಕಾರ್ಟೆಕ್ಸ್ ಇಂತಹವುಗಳ ಕಾರ್ಯಚಟುವಟಿಕೆಗಳನ್ನು ನಿಧಾನಗೊಳಿಸುತ್ತದೆ, ಇದು ನಮ್ಮ ವೈಚಾರಿಕತೆ ಮತ್ತು ಸ್ಮರಣಾ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.[೨೧] ಅಲ್ಲದೆಯೇ ಮದ್ಯಪಾನ ನಮ್ಮ ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಖಿನ್ನತೆಯ ಮನಸ್ಥಿತಿಯು ಉಲ್ಬಣಗೊಳ್ಳಲು ಕಾರಣವಾಗಬಹುದು.[೨೨]
ಮದ್ಯಸೇವನೆಯ ಪ್ರಮಾಣವು ಮಾನಸಿಕ ಖಿನ್ನತೆಯ ಮೇಲೆ ಹೇಗೆ ಪರಿಣಾಮಗಳನ್ನು ಅದು ಬೀರುತ್ತದೆ ಹಾಗೂ ಅವುಗಳ ನಡುವಿನ ಸಂಬಂಧವನ್ನು ಕಾಲೇಜು ವಿದ್ಯಾರ್ಥಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಅಧ್ಯಯನ ಮಾಡಲಾಗಿದೆ. ಅಧ್ಯಯನವು ವಿವಿಧ ಮದ್ಯಗಳ ಸೇವನೆ ಮತ್ತು ಖಿನ್ನತೆಯ ಮಟ್ಟದ ೪ ಸುಪ್ತ, ವಿಭಿನ್ನ ಪ್ರೊಫೈಲ್‌ಗಳನ್ನು ಬಳಸಿದೆ; ಸೌಮ್ಯ ಅಥವಾ ಮಧ್ಯಮ ಖಿನ್ನತೆ, ಮತ್ತು ಮಿತಿಮೀರಿ ಕುಡಿಯುವವರು. ಸಾಮಾಜಿಕ ಅಂಶಗಳು ಮತ್ತು ವೈಯಕ್ತಿಕ ನಡವಳಿಕೆಗಳನ್ನು ಒಳಗೊಂಡಿರುವ ಇತರ ಸೂಚಕಗಳನ್ನು ಸಹ ಸಂಶೋಧನೆಯಲ್ಲಿ ಪರಿಗಣಿಸಲಾಗಿದೆ. ರಕ್ಷಣಾತ್ಮಕ ನಡವಳಿಕೆಯ ಕಾರ್ಯತಂತ್ರಗಳೊಂದಿಗೆ ವಿಲೋಮ ಸಂಬಂಧವನ್ನು ಹೊಂದಿರುವಾಗ, ಭಾವನೆಯಂತೆ ಖಿನ್ನತೆಯ ಮಟ್ಟವು ಅಪಾಯಕಾರಿ ನಡವಳಿಕೆ ಮತ್ತು ಕುಡಿಯುವಿಕೆಯಿಂದ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದು ಫಲಿತಾಂಶಗಳು ತೋರಿಸಿಕೊಟ್ಟವು.[೨೩]
ಬೆದರಿಸುವಿಕೆ
ಬದಲಾಯಿಸಿಬೆದರಿಸುವಂತಹ ಸಾಮಾಜಿಕ ದುರುಪಯೋಗವನ್ನು ಪ್ರತ್ಯೇಕಿಸುವ ಮತ್ತು ದುರ್ಬಲ ವ್ಯಕ್ತಿಗಳ ಮೇಲೆ ಹಾನಿ ಮಾಡುವ ಕ್ರಿಯೆಗಳೆಂದು ವ್ಯಾಖ್ಯಾನಿಸಲಾಗಿದೆ. ಸಾಮಾಜಿಕ ದುರುಪಯೋಗದ ಹಾನಿಕಾರಕ ಪರಿಣಾಮಗಳು, ಬಲಿಪಶುವಿನ ಮಾನಸಿಕ ಆರೋಗ್ಯ ಮತ್ತು ಖಿನ್ನತೆಯ ಮನಸ್ಥಿತಿಯ ನಡುವಿನ ಸಂಬಂಧದ ದಿನನಿತ್ಯದ ವೀಕ್ಷಣೆಯನ್ನು ಸೆರೆಹಿಡಿಯುವ ಸಲುವಾಗಿ, ವ್ಯಕ್ತಿಗಳು ದೈನಂದಿನ ಕೃತ್ಯಗಳಿಗೆ ಒಡ್ಡಿಕೊಂಡಾಗ ಹೆಚ್ಚಿನ ಮಟ್ಟದ ಖಿನ್ನತೆಯ ಮನಸ್ಥಿತಿಯನ್ನು ಹೊಂದಿರುತ್ತಾರೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲಾಯಿತು. ನಕಾರಾತ್ಮಕ ವರ್ತನೆ ಅಥವಾ ಬೆದರಿಸುವಿಕೆಯಂತಹ ನಿಂದನಾತ್ಮಕ ನಡವಳಿಕೆಗಳಿಗೆ ಪ್ರತಿದಿನ ಬಲಿಯಾಗುವುದು ಖಿನ್ನತೆಗೆ ಕಾರಣವಾಗುತ್ತದೆ ಎಂದು ಫಲಿತಾಂಶವು ತೀರ್ಮಾನಿಸಿದೆ.[೨೪]
ನಿರ್ವಹಣೆ
ಬದಲಾಯಿಸಿಖಿನ್ನತೆಗೆ ಒಳಗಾದ ವ್ಯಕ್ತಿಯ ಮನಸ್ಥಿತಿಗೆ ವೃತ್ತಿಪರ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಇದು ಜೀವನದ ಘಟನೆಗಳಿಗೆ ಸಾಮಾನ್ಯವಾದ ಪ್ರತಿಕ್ರಿಯೆಯಾಗಿರಬಹುದು. ಕೆಲವು ವೈದ್ಯಕೀಯ ಸ್ಥಿತಿಯ ಲಕ್ಷಣವಾಗಿರಬಹುದು ಅಥವಾ ಕೆಲವು ಔಷಧಿಗಳ ಅಥವಾ ವೈದ್ಯಕೀಯ ಚಿಕಿತ್ಸೆಗಳ ಅಡ್ಡಪರಿಣಾಮವಾಗಿರಬಹುದು. ದೀರ್ಘಕಾಲ ಖಿನ್ನತೆಗೆ ಒಳ್ಳಗಾದ ವ್ಯಕ್ತಿಯ ಮನಸ್ಥಿತಿ, ವಿಶೇಷವಾಗಿ ಇತರ ರೋಗಲಕ್ಷಣಗಳೊಂದಿಗೆ, ಮನೋವೈದ್ಯಕೀಯ ಅಥವಾ ವೈದ್ಯಕೀಯ ಸ್ಥಿತಿಯ ರೋಗನಿರ್ಣಯಕ್ಕೆ ಕಾರಣವಾಗಬಹುದು. ಇದು ಚಿಕಿತ್ಸೆಯಿಂದ ಪ್ರಯೋಜನ ಪಡೆಯಬಹುದು. ಖಿನ್ನತೆಯ ಆರಂಭಿಕ ಚಿಕಿತ್ಸೆಗಾಗಿ ಖಿನ್ನತೆ-ಶಮನಕಾರಿಗಳನ್ನು ವಾಡಿಕೆಯಂತೆ ಬಳಸಬಾರದು ಎಂದು ಯುಕೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕೇರ್ ಎಕ್ಸಲೆನ್ಸ್ (ನೈಸ್) ೨೦೦೯ ಮಾರ್ಗಸೂಚಿಗಳು ಸೂಚಿಸುತ್ತವೆ. ಏಕೆಂದರೆ ಅಪಾಯ-ಲಾಭದ ಅನುಪಾತವು ಕಳಪೆಯಾಗಿದೆ. [೨೫] ದೈಹಿಕ ಚಟುವಟಿಕೆಯು ಖಿನ್ನತೆಯ ಹೊರಹೊಮ್ಮುವಿಕೆಯ ವಿರುದ್ಧ ರಕ್ಷಣಾತ್ಮಕ ಪರಿಣಾಮವನ್ನು ಬೀರುತ್ತದೆ. [೨೬]
ದೈಹಿಕ ಚಟುವಟಿಕೆಯು ಮೆದುಳಿನಲ್ಲಿನ ನ್ಯೂರೋಟ್ರೋಫಿಕ್ ಪ್ರೋಟೀನ್‌ಗಳ ಬಿಡುಗಡೆಯಿಂದಾಗಿ ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ, ಇದು ಖಿನ್ನತೆಯಿಂದಾಗಿ ಕಡಿಮೆಯಾದ ಹಿಪೊಕ್ಯಾಂಪಸ್ ಅನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತದೆ.[೨೭] ಖಿನ್ನತೆಯ ಅಸ್ವಸ್ಥತೆ ಹೊಂದಿರುವ ರೋಗಿಗಳಿಗೆ ಮತ್ತು ಹೆಚ್ಚು ಖಿನ್ನತೆಗೆ ಒಳಗಾದ ವ್ಯಕ್ತಿಗಳಿಗೆ ಯೋಗವನ್ನು ಪೂರಕ ಚಿಕಿತ್ಸೆಯ ಆಯ್ಕೆಯಾಗಿ ಪರಿಗಣಿಸಬಹುದು.[೨೮]
ಹಳೆಯ ನೆನಪುಗಳನ್ನು ನೆನಪಿಸುವುದು ಚಿಕಿತ್ಸೆಯ ಮತ್ತೊಂದು ಪರ್ಯಾರಾಗಿದ್ದಾರೆಯ ರೂಪವಾಗಿದೆ. ವಿಶೇಷವಾಗಿ ವಯಸ್ಸಾದವರು ಹೆಚ್ಚು ಕಾಲ ಬದುಕಿದವರು ಮತ್ತು ಜೀವನದಲ್ಲಿ ಹೆಚ್ಚಿನ ಅನುಭವಗಳನ್ನು ಹೊಂದಿರುವವರಾಗಿದ್ದಾರೆ.ಇದು ಒಬ್ಬ ವ್ಯಕ್ತಿಯು ತನ್ನ ಸ್ವಂತ ಜೀವನದ ನೆನಪುಗಳನ್ನು ನೆನಪಿಸಿಕೊಳ್ಳಲು ಕಾರಣವಾಗುವ ಒಂದು ವಿಧಾನ ಇದಾಗಿದೆ. ಇದು ಸ್ವಯಂ-ಗುರುತಿಸುವಿಕೆಯ ಪ್ರಕ್ರಿಯೆಗೆ ಕಾರಣವಾಗುತ್ತದೆ ಮತ್ತು ಪರಿಚಿತ ಪ್ರಚೋದನೆಗಳನ್ನು ಗುರುತಿಸುತ್ತದೆ. ಒಬ್ಬರ ವೈಯಕ್ತಿಕ ಗುರುತನ್ನು ಕಾಪಾಡಿಕೊಳ್ಳುವ ಮೂಲಕ ಜನರು ತಮ್ಮ ಜೀವನವನ್ನು ಹೆಚ್ಚು ವಸ್ತುನಿಷ್ಠ ಮತ್ತು ಸಮತೋಲಿತ ರೀತಿಯಲ್ಲಿ ವೀಕ್ಷಿಸಲು ಪ್ರೇರೇಪಿಸುವ ಒಂದು ತಂತ್ರವಾಗಿದೆ. ಅವರ ಜೀವನ ಕಥೆಗಳಲ್ಲಿನ ಸಕಾರಾತ್ಮಕ ಮಾಹಿತಿಯತ್ತ ಗಮನ ಹರಿಸಲು ಕಾರಣವಾಗುತ್ತದೆ. ಇದು ಖಿನ್ನತೆಯ ಮನಸ್ಥಿತಿಯ ಮಟ್ಟವನ್ನು ಯಶಸ್ವಿಯಾಗಿ ಕಡಿಮೆ ಮಾಡುತ್ತದೆ.[೨೯]
ಸಮಸ್ಯೆಗಳನ್ನು ಕಾರ್ಯತ್ಮಕವಾಗಿ ನಿರ್ವಹಿಸಿ ಪರಿಹರಿಸುವುದು ಖಿನ್ನತೆಯ ಪ್ರಮಾಣವನ್ನು ಕುಗ್ಗಿಸುವಂತೆ ಮಾಡುತ್ತದೆ.[೩೦] ಸಮಸ್ಯೆಯ ಮೇಲೆ ಕೇಂದ್ರೀಕರಿಸುವುದರಿಂದ ವಿಷಯಗಳು ಪರಿಸ್ಥಿತಿಯನ್ನು ವಸ್ತುನಿಷ್ಠ ರೀತಿಯಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ, ಹೀಗಾಗಿ ಇದು ಖಿನ್ನತೆ ಹಾಗು ಇತರ ಮಾನಸಿಕ ರೋಗಗಳ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ. ಯೋಗ, ಧ್ಯಾನ ,ಇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕೂಡ ಒತ್ತಡವನ್ನು ಕಡಿಮೆಗೊಳಿಸಿ ಉತ್ತಮ ಬದುಕನ್ನು ನಿರ್ವಹಿಸಲು ಸಹಕಾರಿಯಾಗಿವೆ.
ಸಾಂಕ್ರಾಮಿಕ ರೋಗಶಾಸ್ತ್ರ
ಬದಲಾಯಿಸಿವಿಶ್ವಾದ್ಯಂತ ಹಲವು ಕಾಯಿಲೆಗಳಿಗೆ ಖಿನ್ನತೆಯು ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರದಿ ಮಾಡಿದೆ. ಇದು ವಿಶ್ವಾದ್ಯಂತ ೩೦೦ ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು, ಯುವಕರು ಮತ್ತು ವೃದ್ಧರಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜಾಗತಿಕ ಜನಸಂಖ್ಯೆಯ ಶೇಕಡಾ ೪.೪ ರಷ್ಟು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದು ೨೦೦೫ ರಿಂದ ೨೦೧೫ರ ನಡುವೆ ಖಿನ್ನತೆಯೊಂದಿಗೆ ವಾಸಿಸುವ ಜನರ ಸಂಖ್ಯೆಯಲ್ಲಿ ಶೇಖಡಾ ೧೮% ರಷ್ಟು ಹೆಚ್ಚಳವನ್ನು ತೋರಿಸುತ್ತದೆ.[೩೧] [೩೨] [೩೩]
ಉಲ್ಲೇಖಗಳು
ಬದಲಾಯಿಸಿ- ↑ https://www.cambridge.org/core/journals/epidemiology-and-psychiatric-sciences/article/empirical-evidence-for-definitions-of-episode-remission-recovery-relapse-and-recurrence-in-depression-a-systematic-review/7FC54F95B5FC63FAD8D6709E873C1058
- ↑ Gilbert, Paul (2007). Psychotherapy and counselling for depression (3rd ed.). Los Angeles: SAGE. ISBN 9781849203494. OCLC 436076587.
- ↑ Diagnostic and Statistical Manual of Mental Disorders, Fifth Edition (DSM-5). American Psychiatric Association. 2013
- ↑ Heim C, Newport DJ, Mletzko T, Miller AH, Nemeroff CB (July 2008). "The link between childhood trauma and depression: insights from HPA axis studies in humans". Psychoneuroendocrinology. 33 (6): 693–710. doi:10.1016/j.psyneuen.2008.03.008. PMID 18602762.
- ↑ Pillemer K, Suitor JJ, Pardo S, Henderson C (April 2010). "Mothers' Differentiation and Depressive Symptoms among Adult Children". Journal of Marriage and the Family. 72 (2): 333–345. doi:10.1111/j.1741-3737.2010.00703.x. PMC 2894713. PMID 20607119.
- ↑ Lindert J, von Ehrenstein OS, Grashow R, Gal G, Braehler E, Weisskopf MG (April 2014). "Sexual and physical abuse in childhood is associated with depression and anxiety over the life course: systematic review and meta-analysis". International Journal of Public Health. 59 (2): 359–72. doi:10.1007/s00038-013-0519-5. PMID 24122075.
- ↑ Schmidt PJ (December 2005). "Mood, depression, and reproductive hormones in the menopausal transition". The American Journal of Medicine. 118 Suppl 12B (12): 54–8. doi:10.1016/j.amjmed.2005.09.033. PMID 16414327.
- ↑ Rashid T, Heider I (2008). "Life Events and Depression" (PDF). Annals of Punjab Medical College. 2 (1). Retrieved 15 October 2012.[ಶಾಶ್ವತವಾಗಿ ಮಡಿದ ಕೊಂಡಿ]
- ↑ Mata DA, Ramos MA, Bansal N, Khan R, Guille C, Di Angelantonio E, Sen S (December 2015). "Prevalence of Depression and Depressive Symptoms Among Resident Physicians: A Systematic Review and Meta-analysis". JAMA. 314 (22): 2373–83. doi:10.1001/jama.2015.15845. PMC 4866499. PMID 26647259.
- ↑ Davey CG, Yücel M, Allen NB (2008). "The emergence of depression in adolescence: development of the prefrontal cortex and the representation of reward". Neuroscience and Biobehavioral Reviews. 32 (1): 1–19. doi:10.1016/j.neubiorev.2007.04.016. PMID 17570526.
- ↑ Jeronimus BF, Kotov R, Riese H, Ormel J (October 2016). "Neuroticism's prospective association with mental disorders halves after adjustment for baseline symptoms and psychiatric history, but the adjusted association hardly decays with time: a meta-analysis on 59 longitudinal/prospective studies with 443 313 participants". Psychological Medicine. 46 (14): 2883–2906. doi:10.1017/S0033291716001653. PMID 27523506.
{{cite journal}}
: Unknown parameter|displayauthors=
ignored (help) - ↑ "Signs and Symptoms of Mild, Moderate, and Severe Depression". 2017-03-27.
- ↑ Rogers D, Pies R (December 2008). "General medical with depression drugs associated". Psychiatry. 5 (12): 28–41. PMC 2729620. PMID 19724774.
- ↑ Botts S, Ryan M. Drug-Induced Diseases Section IV: Drug-Induced Psychiatric Diseases Chapter 18: Depression. pp. 1–23. Archived from the original on 23 December 2010. Retrieved 14 January 2017.
- ↑ American Psychiatric Association (2013). Diagnostic and statistical manual of mental disorders, fifth edition. Arlington, VA: American Psychiatric Association.
- ↑ Murray ED, Buttner N, Price BH. (2012) Depression and Psychosis in Neurological Practice. In: Neurology in Clinical Practice, 6th Edition. Bradley WG, Daroff RB, Fenichel GM, Jankovic J (eds.) Butterworth Heinemann. 12 April 2012. ISBN 978-1437704341
- ↑ Saravane D, Feve B, Frances Y, Corruble E, Lancon C, Chanson P, et al. (September 2009). "[Drawing up guidelines for the attendance of physical health of patients with severe mental illness]". L'Encephale. 35 (4): 330–9. doi:10.1016/j.encep.2008.10.014. PMID 19748369.
- ↑ Rustad JK, Musselman DL, Nemeroff CB (October 2011). "The relationship of depression and diabetes: pathophysiological and treatment implications". Psychoneuroendocrinology. 36 (9): 1276–86. doi:10.1016/j.psyneuen.2011.03.005. PMID 21474250.
- ↑ Li M, Fitzgerald P, Rodin G (April 2012). "Evidence-based treatment of depression in patients with cancer". Journal of Clinical Oncology. 30 (11): 1187–96. doi:10.1200/JCO.2011.39.7372. PMID 22412144.
- ↑ Gabbard, Glen O. Treatment of Psychiatric Disorders. Vol. 2 (3rd ed.). Washington, DC: American Psychiatric Publishing. p. 1296.
{{cite book}}
: Unknown parameter|name-list-format=
ignored (help) - ↑ Gowin, Joshua (2010). "Your Brain on Alcohol". Psychology Today (in ಬ್ರಿಟಿಷ್ ಇಂಗ್ಲಿಷ್). Retrieved 2019-03-26.
{{cite web}}
: Unknown parameter|name-list-format=
ignored (help) - ↑ "Alcohol and mental health". www.drinkaware.co.uk (in ಇಂಗ್ಲಿಷ್). Archived from the original on 2016-07-17. Retrieved 2019-03-26.
- ↑ Geisner IM, Mallett K, Varvil-Weld L, Ackerman S, Trager BM, Turrisi R (March 2018). "An examination of heavy drinking, depressed mood, drinking related constructs, and consequences among high-risk college students using a person-centered approach". Addictive Behaviors. 78: 22–29. doi:10.1016/j.addbeh.2017.10.022. PMC 5783735. PMID 29121529.
- ↑ https://www.tandfonline.com/doi/abs/10.1080/1359432X.2018.1564279?journalCode=pewo20&
- ↑ https://www.nice.org.uk/guidance/cg90/chapter/key-priorities-for-implementation
- ↑ https://kclpure.kcl.ac.uk/ws/files/94279645/Physical_activity_and_incident_SCHUCH_Publishedonline25April2018_GREEN_AAM.pdf
- ↑ https://www.health.harvard.edu/mind-and-mood/exercise-is-an-all-natural-treatment-to-fight-depression
- ↑ https://www.ncbi.nlm.nih.gov/pmc/articles/PMC5839058/
- ↑ https://www.tandfonline.com/doi/abs/10.1080/00223980.2017.1393379?journalCode=vjrl20
- ↑ https://www.tandfonline.com/doi/abs/10.1080/13607863.2017.1387765?journalCode=camh20
- ↑ https://www.nytimes.com/2006/11/17/opinion/17solomon.html
- ↑ https://www.theguardian.com/society/2017/mar/31/depression-is-leading-cause-of-disability-worldwide-says-who-study
- ↑ https://news.un.org/en/story/2017/02/552062-un-health-agency-reports-depression-now-leading-cause-disability-worldwide