ಜೈವಿಕ ಯಂತ್ರಶಾಸ್ತ್ರದಲ್ಲಿ, ಸಮತೋಲನ ಎಂದರೆ ಆಧಾರದ ತಳದೊಳಗೆ ದೇಹದ ಗುರುತ್ವ ರೇಖೆಯನ್ನು (ದ್ರವ್ಯರಾಶಿಯ ಕೇಂದ್ರದಿಂದ ಲಂಬ ರೇಖೆ) ಭಂಗಿಯಲ್ಲಿ ಕನಿಷ್ಠತಮ ತೂಗಾಟದೊಂದಿಗೆ ಕಾಪಾಡಿಕೊಳ್ಳುವ ಸಾಮರ್ಥ್ಯ.[] ಓಲಾಡುವಿಕೆ ಎಂದರೆ ಒಬ್ಬ ವ್ಯಕ್ತಿಯು ನಿಶ್ಚಲವಾಗಿ ನಿಂತಾಗಲೂ ಆಗುವ ಗುರುತ್ವ ಕೇಂದ್ರದ ಅಡ್ಡಡ್ಡವಾದ ಚಲನೆ. ದೇಹದೊಳಗಿನ ಸಣ್ಣ ಪ್ರಕ್ಷುಭ್ದತೆಗಳು (ಉದಾ. ಉಸಿರಾಟ, ದೇಹದ ತೂಕವನ್ನು ಒಂದು ಪಾದದಿಂದ ಮತ್ತೊಂದು ಪಾದಕ್ಕೆ ಅಥವಾ ಪಾದದ ಮುಂಭಾಗದಿಂದ ಹಿಂಭಾಗಕ್ಕೆ ಸ್ಥಳಾಂತರಿಸುವುದು) ಅಥವಾ ಬಾಹ್ಯ ಪ್ರಚೋದಕಗಳ (ಉದಾ. ದೃಶ್ಯ ವಿರೂಪಗಳು, ನೆಲಹಾಸು ಬದಲಾವಣೆಗಳು) ಕಾರಣ ಸ್ವಲ್ಪ ಪ್ರಮಾಣದ ಓಲಾಡುವಿಕೆಯು ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ. ಓಲಾಟದಲ್ಲಿನ ಹೆಚ್ಚಳವು ಕಡಿಮೆಯಾದ ಸಂವೇದನಾಚಲನೆ ನಿಯಂತ್ರಣದ ಸೂಚಕವಾಗಿರುವಷ್ಟು ಅಗತ್ಯವಾಗಿ ಅಪಸಾಮಾನ್ಯ ಸಮತೋಲನದ ಸೂಚಕವಾಗಿಲ್ಲ.[]

ಸಮತೋಲನದಲ್ಲಿರುವ ಸಾಮರ್ಥ್ಯವನ್ನು ಪ್ರಸ್ತುತಪಡಿಸುತ್ತಿರುವ ಒಬ್ಬ ಮಹಿಳೆ

ಉಲ್ಲೇಖಗಳು

ಬದಲಾಯಿಸಿ
  1. "Postural sway biofeedback: its effect on reestablishing stance stability in hemiplegic patients". Arch. Phys. Med. Rehabil. 69 (6): 395–400. 1988. PMID 3377664.
  2. Davidson; Madigan, Nussbaum (2004). "Effects of lumbar extensor fatigue and fatigue rate on postural sway". European Journal of Applied Physiology. 93 (92): 183–189. doi:10.1007/s00421-004-1195-1. PMID 15549370.
"https://kn.wikipedia.org/w/index.php?title=ಸಮತೋಲನ&oldid=962536" ಇಂದ ಪಡೆಯಲ್ಪಟ್ಟಿದೆ