ಜೈವಿಕ ಯಂತ್ರಶಾಸ್ತ್ರ

Expression error: Unexpected < operator.

ಜೈವಿಕ ಯಂತ್ರಶಾಸ್ತ್ರ ( ಜೈವಿಕ ಅಂಶದಪ್ರಾಚೀನ ಗ್ರೀಕ್:βίος ಮತ್ತು μηχανική ಯಂತ್ರಶಾಸ್ತ್ರ) ಯಾಂತ್ರಿಕ ತತ್ವಗಳನ್ನು ಜೀವಿಗಳಲ್ಲಿ ಅನ್ವಯಿಸುವುದಾಗಿದ್ದು, `ಮಾನವ, ಪ್ರಾಣಿಗಳು, ಸಸ್ಯಗಳು ಮತ್ತು ಜೀವನದ ಮೂಲಭೂತ ಕಾರ್ಯಗಳ ಘಟಕಗಳು, ಜೀವಕೋಶಗಳು ಮುಂತಾದವುಗಳಿಗೆ ಅನ್ವಯಿಸುತ್ತದೆ.[] ಜೈವಿಕ ಯಂತ್ರಶಾಸ್ತ್ರ ಎಂಬ ಪದವು 1970ರ ಪ್ರಾರಂಭದಲ್ಲಿ ಬಳಕೆಗೆ ಬಂದಿದ್ದು, ಇದು ಜೀವಿಗಳ ರಚನೆ ಮತ್ತು ಕಾರ್ಯಗಳ ಅಧ್ಯಯನದ ಮೂಲಕ ವೈದ್ಯಕೀಯ ಸಮಸ್ಯೆಗಳನ್ನು ನಿವಾರಿಸಲು ಜೀವ ವ್ಯವಸ್ಥೆಗಳಿಗೆ ಇಂಜಿನಿಯರಿಂಗ್ ಅನ್ವಯಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ವಿವರಿಸುತ್ತದೆ ಯಾಂತ್ರಿಕತೆ ಭೌತಶಾಸ್ತ್ರದ ಒಂದುಭಾಗವಾಗಿದ್ದು, ಬಲಗಳ ವಿಶ್ಲೇಷಣೆಯ ಬಗ್ಗೆ ತಿಳಿಸುತ್ತದೆ. ಆದ್ದರಿಂದ ಜೈವಿಕ ಯಂತ್ರಶಾಸ್ತ್ರ ಈ ತತ್ವಗಳ ಸಹಾಯದಿಂದ "ಒಳಾಂಗಗಳ ಹಾಗೂ ಕಾರ್ಯಾವಿಧಾನಗಳ" ಅಧ್ಯಯನ ಮಾಡಲು ಸಹಾಯಮಾಡುತ್ತದೆ.[]

ಸಂಬಂಧಿಸಿದ ಕ್ಷೇತ್ರಗಳು

ಬದಲಾಯಿಸಿ

ಜೈವಿಕಯಂತ್ರಶಾಸ್ತ್ರವು ಜೈವಿಕ ಇಂಜಿನಿಯರಿಂಗ್, ಜೀವಿಗಳ ಯಾಂತ್ರಿಕತೆಯ ಸಂಶೋಧನೆ ಮತ್ತು ವಿಶ್ಲೇಷಣೆ ಮತ್ತು ಜೈವಿಕ ವ್ಯವಸ್ಥೆಗಳಿಗೆ ಇಂಜಿನಿಯರಿಂಗ್ ತತ್ವಗಳ ಅನ್ವಯಗಳನ್ನು ಒಳಗೊಂಡಿದೆ. ಈ ಸಂಶೋಧನೆಮತ್ತು ವಿಶ್ಲೇಷಣೆಯನ್ನು ಬಹುಮುಖಿ ಹಂತಗಳಲ್ಲಿ ಮಾಡಬಹುದಾಗಿದ್ದು, ಅಣುಗಳ ಹಂತದಿಂದ, ಜೈವಿಕ ವಸ್ತುಗಳಾದ ಕೊಲ್ಲ್ಯಾಜನ್ ಮತ್ತು ಎಲಾಸ್ಟಿನ್‌ಗಳಿಂದ ಹಿಡಿದು, ಅಂಗಾಂಶ ಮತ್ತು ಅಂಗಮಟ್ಟದವರೆಗೆ ಪರಿಗಣಿಸಲಾಗುತ್ತದೆ.

ನ್ಯೂಟನ್ನಿನ ಯಂತ್ರಶಾಸ್ತ್ರದ ಕೆಲವು ಅನ್ವಯಗಳು ಪ್ರತಿಯೊಂದು ಹಂತದಲ್ಲಿ ಸರಿಯಾದ ಅಂದಾಜುಗಳನ್ನು ಕೊಡಬಲ್ಲವು, ಆದರೆ ನಿಖರವಾದ ವಿವರಗಳಿಗೆ ಅನಂತ ಚಲನಶಾಸ್ತ್ರದ ಬಳಕೆ ಅಗತ್ಯ.

 
ಗಲ್ಲಪಟ್ಟಿ ಪೆಂಗ್ವಿನ್

ಸಸ್ಯ ಮತ್ತು ಸಸ್ಯ ಅಂಗಗಳಿಗೆ ಅನ್ವಯಿಸಲಾಗಿರುವ ಜೈವಿಕಯಂತ್ರಶಾಸ್ತ್ರದ ತತ್ವಗಳನ್ನು ಸಸ್ಯ ಜೈವಿಕ ಯಂತ್ರಶಾಸ್ತ್ರದ ಕ್ಷೇತ್ರದ ಅಭಿವೃದ್ಧಿಯಲ್ಲೂ ಬಳಸಲಾಗುತ್ತಿದೆ. ಸಸ್ಯ ಜೈವಿಕ ಯಂತ್ರಶಾಸ್ತ್ರದ ವಿಷಯದಲ್ಲಿ ಕಾರ್ಲ್ ನಿಕ್ಲಾಸ್ ಬರೆದಿರುವ ಒಂದು ಅನ್ ಇಂಜಿನಿಯರಿಂಗ್ ಅಪ್ರೋಚ್ ಟು ಪ್ಲಾಂಟ್ ಫಾರ್ಮ್ ಅಂಡ್ ಫಂಕ್ಷನ್ ಎಂಬ ಪಠ್ಯ ಪುಸ್ತಕದಲ್ಲಿ ಸಸ್ಯಜೈವಿಕ ಯಂತ್ರಶಾಸ್ತ್ರದ ಅನೇಕ ಶಾಖೆಗಳ ಬಗ್ಗೆ ವಿವರಣೆ ನೀಡಲಾಗಿದೆ.

ಅನ್ವಯ ಚಲನಶಾಸ್ತ್ರ, ವಿಶೇಷವಾಗಿ ಉಷ್ಣಚಲನಶಾಸ್ತ್ರ ಮತ್ತು ಅನಂತ ಚಲನ ಶಾಸ್ತ್ರ, ಹಾಗೂ ಯಾಂತ್ರಿಕ ಇಂಜಿನಿಯರಿಂಗ್ ವಿಭಾಗಗಳಾದ ದ್ರವ ಚಲನಶಾಸ್ತ್ರ ಮತ್ತು ಘನ ಚಲನಶಾಸ್ತ್ರಗಳು, ಜೈವಿಕ ಯಂತ್ರಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಭೌತಶಾಸ್ತ್ರದ ನಿಯಮ ಮತ್ತು ಪರಿಕಲ್ಪನೆಗಳ ಅನ್ವಯಗಳ ಮೂಲಕ, ಜೈವಿಕ ಯಾಂತ್ರಿಕತೆ ಮತ್ತು ರಚನೆಗಳ ಬಗ್ಗೆ ಅಧ್ಯಯನ ಮಾಡಬಹುದು. ಇಂತಹ ಪರಿಕಲ್ಪನೆಗಳನ್ನು ಕ್ರೀಡಾ ಜೈವಿಕ ಯಾಂತ್ರಿಕತೆಗಳ ಕ್ಷೇತ್ರದಲ್ಲಿ ಕಾಣಬಹುದಾಗಿದ್ದು, ಇದರಲ್ಲಿ ನಾವು ಯಾಂತ್ರಿಕತೆ ಮತ್ತು ಭೌತಶಾಸ್ತ್ರದ ನಿಯಮಗಳ ಅನ್ವಯದಮೂಲಕ ಮಾನವನ ಕಾರ್ಯಾಚರಣೆಯನ್ನು ಅಥ್ಲೆಟಿಕ್ನ ಕೆಲವು ಸನ್ನಿವೇಶಗಳನ್ನು ಮಾಡೆಲಿಂಗ್, ಕಂಪ್ಯೂಟರ್ ಸಿಮುಲೇಷನ್ ಮತ್ತು ಅಳತೆಗಳ ಮುಖಾಂತರ ಹೆಚ್ಚು ತಿಳುವಳಿಕೆಯನ್ನು ಪಡೆಯಬಹುದು.

ಯಾಂತ್ರಿಕ ಇಂಜಿನಿಯರಿಂಗ್ (ಉದಾ:ಸ್ಟ್ರೈನ್ ಗೇಜ್ಗಳು), ಎಲೆಕ್ಟ್ರಿಕಲ್ ಇಂಜಿನಿಯರಿಂಗ್ (ಉದಾ:ಡಿಜಿಟಲ್ ಫಿಲ್ಟರ್ಯಿಂಗ್ ), ಭೌತಶಾಸ್ತ್ರ/ಚಲನಶಾಸ್ತ್ರ (ಉದಾ: ಜಡತ್ವ), ಗಣಕ ಯಂತ್ರವಿಜ್ಞಾನ (ಉದಾ: ಸಂಖ್ಯಾ ಪದ್ದತಿಗಳು) ಮತ್ತು ಚಿಕಿತ್ಸಕ ನ್ಯೊರೋಫಿಸಿಯಾಲಜಿ (ಉದಾ: ಮೇಲ್ಮೈ ಇಎಮ್‌ಜಿ)ಗಳ ಮೂಲಭೂತಗಳು ಈ ವಿಶ್ಲೇಷಣೆಯಲ್ಲಿ ಬಳಸುವ ಸಾಮಾನ್ಯ ವಿಧಾನಗಳು.

ಇದಕ್ಕೆ ಸಂಬಂದಿಸಿದ ಗಣಿತ ಸಾಧನಗಳೆಂದರೆ ರೇಖಾ ಬೀಜಗಣಿತ, ವಿಬೇಧ ಸಮೀಕರಣಗಳು, ದಿಶಾಯುಕ್ತಗಳು ಮತ್ತು ಟೆನ್ಸರ್ ಕ್ಯಾಲ್ಕುಲಸ್, ಸಂಖ್ಯೆಗಳು ಮತ್ತು ಗಣಕೀಕೃತ ತಂತ್ರಗಳಾದ ಪರಿಮಿತ ಧಾತು ವಿಧಾನಗಳನ್ನು ಒಳಗೊಂಡಿದೆ.

ಜೈವಿಕ ವಸ್ತುಗಳ ಅಧ್ಯಯನವು ಜೈವಿಕ ಯಂತ್ರ ಶಾಸ್ತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಉದಾಹರಣೆಗೆ, ದೇಹದ ಅಂಗಗಳಲ್ಲಿರುವ ಹಲವಾರು ಅಂಗಾಂಶಗಳಾದ, ಚರ್ಮ, ಮೂಳೆ ಮತ್ತು ಅಪಧಮನಿಗಳು. ಒಂದು ನಿರ್ಧಿಷ್ಟ ಅಂಗಾಂಶದ ನಿಷ್ಕ್ರಿಯ ಚಲನಾ ಪ್ರತಿಕ್ರಿಯೆಯು ಹಲವಾರು ಪ್ರೋಟೀನ್‌ಗಳಾದ ಎಲಾಸ್ಟಿನ್ ಮತ್ತು ಕೊಲ್ಯಾಜನ್, ಸಜೀವ ಜೀವಕೋಶಗಳು, ಮತ್ತು ಮೂಲಭೂತ ವಸ್ತುಗಳಾದ ಪ್ರೋಟಿಯೋ ಗ್ಲೈಕಾನ್ಗಳು ಮತ್ತು ಅಂಗಾಂಶಗಳಲ್ಲಿರುವ ತಂತುಗಳ ವಿಕಸನಾ ಶಕ್ತಿಯ ಗುಣಲಕ್ಷಣಗಳನ್ನು ಅವಲಂಬಿಸಿರುತ್ತದೆ.

ಉದಾಹರಣೆಗೆ, ಮಾನವನ ಚರ್ಮವು ಕೊಲ್ಯಾಜನ್‌ಗಿಂತ ಪ್ರೋಟೀನ್‌ನ ಪ್ರಮಾಣವನ್ನು ಹೆಚ್ಚು ಹೊಂದಿದ್ದರೆ, ಇದರ ಸ್ಥಿತಿ ಸ್ಥಾಪಕ ನಿರ್ಣಾಯಕ‍ಗಳಂತಹ ಹಲವಾರು ಯಾಂತ್ರಿಕ ಲಕ್ಷಣಗಳು ಬದಲಾಗುತ್ತಿದ್ದವು.

ಅನ್ವಯ ಹೊರೆಗಳು ಮತ್ತು ವಿರೂಪಗಳು ಜೈವಿಕ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಕಂಡುಹಿಡಿಯಲಾಗಿದೆ. ಅನ್ವಯ ಹೊರೆಗಳಿಗೆ ಪ್ರತ್ಯುತ್ತರವಾಗಿ ಅಭಿವೃದ್ಧಿಯಕ್ಷೇತ್ರ ಮತ್ತು ಮರುಮಾದರಿಗಳಲ್ಲಿ ಸಾಕಷ್ಟು ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ.

ಉದಾಹರಣೆಗೆ, ಅಪಧಮನಿಯ ಒಳಗೋಡೆಯ ಮೇಲೆ ಬೀಳುವ ಹೆಚ್ಚಿನ ರಕ್ತದೊತ್ತಡದ ಯಾಂತ್ರಿಕ ಬಲ, ಹೃದಯದಲ್ಲಿ ಕಾರ್ಡಿಯಾಕ್ ಇನ್ಫಾರ್ಕ್ಟ್ ನೊಂದಿಗೆ ಕಾರ್ಡಿಯೂಮಯೋಸೈಟ್‌ಗಳ ವರ್ತನೆ ಮತ್ತು ವ್ಯಾಯಾಮಕ್ಕೆ ಪ್ರತಿಯಾಗಿ ಮೂಳೆಗಳ ಬೆಳವಣಿಗೆ ಮತ್ತು ಗಾಳಿಯಚಲನೆಗೆ ಅನುಗುಣವಾಗಿ ಸಸ್ಯಗಳಬೆಳವಣಿಗೆ,ಮುಂತಾದವುಗಳನ್ನು ಅನ್ವಯ ಹೊರೆಗಳ ಮೂಲಕ ಸಜೀವ ಕೋಶಗಳಲ್ಲಿ ಮರುರೂಪಗಳನ್ನು ಕೊಡುವುದಕ್ಕೆ ವ್ಯಾಪಕವಾದ ಉದಾಹರಣೆಗಳಾಗಿವೆ.

ರಸಾಯನಶಾಸ್ತ್ರ, ಅಣುಜೀವಶಾಸ್ತ್ರ ಮತ್ತು ಜೀವಕೋಶಶಾಸ್ತ್ರಗಳು ಸಜೀವ ಕೋಶಗಳ ಸಕ್ರಿಯ ಮತ್ತು ಜಡ ಲಕ್ಷಣಗಳನ್ನು ವಿವರಿಸುವುದಕ್ಕೆ ಹೆಚ್ಚಿನ ಮಾರ್ಗವನ್ನು ಒದಗಿಸಿವೆ. ಉದಾಹರಣೆಗೆ, ಸ್ನಾಯು ಸಂಕೋಚನೆಯಲ್ಲಿ, ಮಯೋಸಿನ್ ಆಕ್ಟಿನ್ ನೊಂದಿಗೆ ಬಂಧಿಸಲ್ಪಡುವುದು ಜೈವಿಕ ರಾಸಯನಿಕ ಕ್ರಿಯೆಗಳನ್ನು ಆಧರಿಸಿದ್ದು ಕ್ಯಾಲ್ಸಿಯಂ ಮತ್ತು ಎ‌ಟಿಪಿಪ್ರಮುಖ ಪಾತ್ರ ವಹಿಸುತ್ತವೆ.

ಇತಿಹಾಸ

ಬದಲಾಯಿಸಿ

ಅರಿಸ್ಟಾಟಲ್ ಜೈವಿಕ ಯಂತ್ರಶಾಸ್ತ್ರದ ಬಗ್ಗೆ ಡೆ ಮೊಟು ಅನಿಮಲಿಯಂ , ಅಥವಾ ಆನ್ ದಿ ಮೂವ್‌ಮೆಂಟ್ ಆಫ್ ಅನಿಮಲ್ಸ್ ಎಂಬ ಮೊದಲ ಪುಸ್ತಕವನ್ನುಬರೆದನು. ಈತನು ಮಾನವನ ದೇಹದವನ್ನು ಬರೀ ಯಾಂತ್ರಿಕ ವ್ಯವಸ್ಥೆಯೆಂದಷ್ಟೇ ಪರಿಗಣಿಸದೇ, ದೇಹದ ಚಟುವಟಿಕೆಗಳ ಮತ್ತು ಅವುಗಳ ಕಾರ್ಯಗಳಲ್ಲಿರುವ ಶಾರೀರಿಕ ವ್ಯತ್ಯಾಸಗಳ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದನು. ಜೈವಿಕ ಯಂತ್ರಶಾಸ್ತ್ರದ ಕೆಲವು ಸರಳ ಉದಾಹರಣೆಗಳೆಂದರೆ, ಚಲನಾಂಗಗಳ ಮೇಲೆ ವರ್ತಿಸುವ ಬಲಗಳ ಸಂಶೋಧನೆ, ಪಕ್ಷಿಗಳ ವಾಯು ಚಲನಶಾಸ್ತ್ರ ಮತ್ತು ಕೀಟಗಳ ಹಾರಾಟ, ಮೀನುಗಳಲ್ಲಿ ಈಜುವಿಕೆಯ ಜಲ ಚಲನಶಾಸ್ತ್ರ ಮತ್ತು ಚಲನೆ ಒಟ್ಟಾರೆ ಒಂದು ಜೀವಕೋಶದಿಂದ ಹಿಡಿದು ಸಂಪೂರ್ಣ ಜೀವಿಯವರೆಗೆ, ಎಲ್ಲಾ ವಿಧಗಳ ಸಂಶೋಧನೆಯನ್ನು ಒಳಗೊಂಡಿದೆ.

ಜೈವಿಕ ಯಾಂತ್ರಿಕ ಶಾಸ್ತ್ರವು ಮಾನವನ ಕೈನಿಸಾಲಜಿಯ ತಿರುಳಾಗಿದೆ.

ಉಪಯೋಗಗಳು

ಬದಲಾಯಿಸಿ

ಜೈವಿಕ ಯಂತ್ರ ಶಾಸ್ತ್ರದ ಅಧ್ಯಯನವು ಜೀವಕೋಶದ ಆಂತರಿಕ ಕಾರ್ಯದಿಂದ ಹಿಡಿದು , ಕೈಕಾಲುಗಳ ಚಲನೆ ಮತ್ತು ಅಭಿವೃದ್ಧಿಯವರೆಗೂ, ಮೃದು ಅಂಗಾಂಶಗಳ, ಮತ್ತು ಮೂಳೆಯ ಯಾಂತ್ರಿಕ ಲಕ್ಷಣಗಳವರೆಗೂ ಹಮ್ಮಿಕೊಂಡಿದೆ. ಸಜೀವ ಅಂಗಾಂಶಗಳ ಶಾರೀರಿಕ ವರ್ತನೆಗಳು ನಮಗೆ ಹೆಚ್ಚಾಗಿ ತಿಳಿದು ಬಂದಂತೆಲ್ಲಾ, ಅಂಗಾಂಶ ಇಂಜಿನಿಯರಿಂಗ್ನ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಹೆಚ್ಚಾಗಿ ಮಾಡಲು ಸಾಧ್ಯವಾಗಿದೆ, ಅಷ್ಟೇ ಅಲ್ಲದೆ ವ್ಯಾಪಕವಾದ ರೋಗಶಾಸ್ತ್ರಗಳಿಗೆ ಸುಧಾರಿತ ಚಿಕಿತ್ಸೆಯನ್ನು ಕೊಡಲು ಸಾಧ್ಯವಾಗಿದೆ.

ಜೈವಿಕ ಯಾಂತ್ರಿಕತೆಯನ್ನು ಮಾನವನ ಸ್ನಾಯು-ಅಸ್ಥಿಪಂಜರ ವ್ಯವಸ್ಥೆಗಳಲ್ಲಿಯೂ ಬಳಸಲಾಗುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ, ಮಾನವನ ಕೀಲು ಪ್ರತಿಕ್ರಿಯಾ ಬಲಗಳನ್ನು ಅಧ್ಯಯನ ಮಾಡಲು ಅನ್ವಯ ಬಲ ಒಂದು ವೇದಿಕೆಯನ್ನು ಒದಗಿಸಿದ್ದು, ಮಾನವನ 3D ಚಲನೆಯ ಅಧ್ಯಯನಕ್ಕೆ ಸಹಾಯಕವಾಗಿದೆ. ಮಾನವನ ಚಲನೆಯನ್ನು , ಮಾನವ ಚಲನಾ ಸೆರೆಯ ವ್ಯವಸ್ಥೆಗಳ (ಉದಾ: ವೈಕಾನ್ ಸಿಸ್ಟಮ್ಸ್) ಮೂಲಕ ಸೆರೆ ಹಿಡಿಯಬಹುದಾಗಿದ್ದು ಅದರ ಮೂಲಕ ಮಾನವನ 3D ಚಲನೆಯನ್ನು ಅಭ್ಯಸಿಸಬಹುದು. ಬಲದ ವೇದಿಕೆ ಮತ್ತು ವಿಕಾನ್ ವಿಧಾನಗಳ ಸಹಾಯದಿಂದ. ಮಾನವನ ಸ್ನಾಯುಕಂಕಾಲಕ ವರ್ತನೆ, ಕೀಲು ಪ್ರತಿಕ್ರಿಯಾಬಲಗಳು, ಮಾನವನ ಭಂಗಿಗಳ ನಿಯಂತ್ರಣ ಇತ್ಯಾದಿ. ಗಳನ್ನು ಅಧ್ಯಯನ ಮಾಡಬಹುದು. ಸಂಶೋಧನೆಗಳು ಎಲೆಕ್ಟ್ರೋಮ್ಯೋಗ್ರಾಫಿ [](ಇಎಮ್‌ಜಿ) ಪದ್ದತಿಯನ್ನು ಸ್ನಾಯುಗಳ ಕ್ರಿಯಾಶೀಲತೆಗೆ ಬಳಸಬಹುದು ಎಂದು ತೋರಿಸಿವೆ. ಇದರ ಮೂಲಕ, ಬಾಹ್ಯ ಬಲಗಳಿಂದಾಗುವ ಸ್ನಾಯುಗಳ ಪ್ರತಿಕ್ರಿಯೆಗಳು ಮತ್ತು ಗೊಂದಲಗಳನ್ನು ಕಂಡುಹಿಡಿಯಬಹುದು.

ಜೈವಿಕ ಯಂತ್ರಶಾಸ್ತ್ರವನ್ನು ವ್ಯಾಪಕವಾಗಿ ಅಸ್ಥಿ ಉದ್ದಿಮೆಯಲ್ಲಿ ಮಾನವನ ಕೀಲುಗಳನ್ನು ಜೋಡಿಸಲು ಬಳಸುವ ಅಸ್ಥಿ ಮಾದರಿಗಳಲ್ಲಿ, ದಂತ ಭಾಗಗಳಲ್ಲಿ, ಬಾಹ್ಯ ಜೋಡಣೆಗಳಲ್ಲಿ ಮತ್ತು ಇತರ ವೈದ್ಯಕೀಯ ಉದ್ದೇಶಗಳಲ್ಲಿ ಬಳಸಲಾಗುತ್ತಿದೆ. ಬಯೋಟ್ರೈಬಾಲಜಿ ಎಂಬುದು ಇದರ ಪ್ರಮುಖ ಭಾಗವಾಗಿದೆ. ಇದು ಅಸ್ಥಿ ಮಾದರಿಗಳಲ್ಲಿ ಬಳಸುವ ಜೈವಿಕ ವಸ್ತುಗಳ ಕಾರ್ಯ ಮತ್ತು ಅವುಗಳ ಕಾರ್ಯವಿಧಾನದ ಅಧ್ಯಯನವಾಗಿದೆ.

ಇದು ವೈದ್ಯಕೀಯ ಮತ್ತು ಚಿಕಿತ್ಸಕ ಉದ್ದೇಶಗಳಲ್ಲಿ ಬಲಸುವ ಜೈವಿಕ ವಸ್ತುಗಳನ್ನು ತಯಾರಿಸಲು ಮತ್ತು ಅವುಗಳ ವಿನ್ಯಾಸವನ್ನು ಅಭಿವೃದ್ಧಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಅನಂತ ಚಲನಶಾಸ್ತ್ರ

ಬದಲಾಯಿಸಿ
 
ಮಾನವ ಸ್ನಾಯು ಅಸ್ಥಿಪಂಜರ ವ್ಯವಸ್ಥೆ.

ಕೆಲವೊಮ್ಮೆ ಸಜೀವಕೋಶಗಳನ್ನು ನಿರಂತರ ಮಾಧ್ಯಮಗಳಾಗಿರೂಪುಗೊಳಿಸುವುದು ಸೂಕ್ತ. ಉದಾಹರಣೆಗೆ, ಅಂಗಾಂಶ ಮಟ್ಟದಲ್ಲಿ, ಅಪಧಮನಿಯ ಒಳಗೋಡೆಯನ್ನು ಅನಂತವಾಗಿ ರೂಪುಗೊಳಿಸಬಹುದು. ಈ ಕಲ್ಪನೆಯು ಉದ್ದ ಅಳತೆ ವಸ್ತುಗಳ ಸೂಕ್ಷ್ಮ ರಚನಾ ವಿವರಗಳ ಕ್ರಮವನ್ನು ಸಮೀಪಿಸಿದಾಗ ವಿಫಲವಾಯಿತು. ಅನಂತ ಯಂತ್ರಶಾಸ್ತ್ರದ ಮೂಲ ಸಿದ್ದಾಂತಗಳೆಂದರೆ, ಸರಳ ರೇಖೆಯ ಮತ್ತು ಕೋನಿಯ ಸಂವೇಗಗಳ, ಪರಿವರ್ತನೆ, ರಾಶಿಯ ಸಂರಕ್ಷಣೆ, ಶಕ್ತಿಯ ಸಂರಕ್ಷಣೆ, ಮತ್ತು ಎಂಟ್ರೋಫಿ ಅಸಮಾನತೆ. ಘನವಸ್ತುಗಳನ್ನು ಸಾಮಾನ್ಯವಾಗಿ "ಪರಾಮರ್ಶ" ಅಥವಾ "ಲಗ್ರಾಂಜಿಯನ್" ಸ್ಥಾನ ನಿರ್ದೇಶಕಗಳಿಂದ ರೂಪಾಂತರ ಮಾಡಲಾಗುತ್ತದೆ ,ಆದರೆ ದ್ರವಗಲನ್ನು "ಅವಕಾಶಿತ" ಅಥವಾ "ಯೂಲೇರಿಯನ್" ಸ್ಥಾನನಿರ್ದೇಶಕಗಳಿಂದ ಮಾಡಲಾಗುತ್ತದೆ. ಈ ಸಿದ್ದಾಂತಗಳಿಂದ ಮತ್ತು ನಿರ್ಧಿಷ್ಟ ಸಮಸ್ಯೆಗೆ ಕೆಲವು ಕಲ್ಪನೆಗಳಿಂದ , ಸಮಸ್ಥಿತಿ ಸಮೀಕರಣಗಳನ್ನು ಕಂಡುಹಿಡಿಯಬಹುದು. ಒಂದು ಅನಂತವನ್ನು ರೂಪಾಂತರಗೊಳಿಸಲು ಕೈನ್ ಮ್ಯಾಟಿಕ್ಸ್ ಮತ್ತು ಸಂಯೋಜಿತ ಸಂಬಂಧಗಳು ಅವಶ್ಯಕವಾಗಿವೆ.

ಎರಡನೆ ಮತ್ತು ನಾಲ್ಕನೆ ವರ್ಗದ ಟೆನ್ಸರ್ಗಳು ವಿದ್ಯುತ್ ಯಾಂತ್ರಿಕ ಶಾಸ್ತ್ರದಲ್ಲಿ ಹಲವಾರು ಪರಿಮಾಣಗಳನ್ನು ಪ್ರತಿನಿಧಿಸಲು ಬಹಳ ಪ್ರಮುಖವಾಗಿವೆ. ಪ್ರಾಯೋಗಿಕವಾಗಿ, ನಾಲ್ಕನೆ ವರ್ಗದ ಸಂಪೂರ್ಣ ಟೆನ್ಸಾರ್ ನ ಸಂಯೋಜಿತ ಮಾತೃಕೆಯನ್ನು ವಿರಳವಾಗಿ ಬಳಲಾಗುತ್ತಿದೆ.

ಬದಲಾಗಿ , ಸರಳರೂಪಗಳಾದ ಸಮಕಕ್ಷೆ, ಅಡ್ಡ ಸಮಕಕ್ಷೆ, ಮತ್ತು ಅಸಂಕೋಚನೆಗಳು ಅನೇಕ ಅವಲಂಬಿತ ಘಟಕಗಳನ್ನು ಕಡಿಮೆ ಮಾಡುತ್ತವೆ.

ಸಾಮಾನ್ಯವಾಗಿ ಬಳಸುವ ಎರಡನೇ ದರ್ಜೆಯ ಟೆನ್ಸರ್ ಗಳು, ಕೌಚಿ ಸ್ಟ್ರೆಸ್ ಟೆನ್ಸರ್, ಎರಡನೆ ಪಿಯೊಲಾ- ಕಿರ್ಚಾಫ್ ಸ್ಟ್ರೆಸ್ ಟೆನ್ಸರ್, ಡೀಫಾರ್ಮೇಷನ್ ಗ್ರೇಡಿಯಂಟ್ ಟೆನ್ಸರ್, ಮತ್ತು ಗ್ರೀನ್ ಸ್ಟ್ರೈನ್ ಟೆನ್ಸರ್‌ಗಳನ್ನು ಒಳಗೊಂಡಿವೆ. ಯಂತ್ರಶಾಸ್ತ್ರದ ಸಾಹಿತ್ಯದ ಒಬ್ಬ ಓದುಗಾರನಿಗೆ ಒಂದು ನಿರ್ಧಿಷ್ಟ ಕೆಲಸದಲ್ಲಿ ಬಳಸುವ ವಿವಿಧ ಟೆನ್ಸರ್‌ಗಳ ವ್ಯಾಖ್ಯೆಯನ್ನು ನಿಖರವಾಗಿ ದಾಖಲಿಸಲು ಸಲಹೆ ನೀಡುವುದು ಅಗತ್ಯ.

ಜೈವಿಕ ದ್ರವ ಯಂತ್ರಶಾಸ್ತ್ರ

ಬದಲಾಯಿಸಿ
 
ಕೆಂಪು ರಕ್ತ ಕಣ

ಅನೇಕ ಸಮಯಗಳಲ್ಲಿ, ರಕ್ತದ ಹರಿವನ್ನು ನೇವಿಯರ್-ಸ್ಟೊಕ್ಸ್ ಸಮೀಕರಣಗಳು ನಿಂದ ರೂಪಾಂತರಗೊಳಿಸಬಹುದು. ಕೆಲವು ಸಮಯದಲ್ಲಿ ಇಡೀ ರಕ್ತವನ್ನು ಸಂಕುಚಿಸಲಾಗದ ನ್ಯೂಟನ್ ದ್ರವ ಎಂದು ಭಾವಿಸಲಾಗುತ್ತದೆ. ಹೇಗೂ, ಈ ಕಲ್ಪನೆಯು ರಕ್ತವು ಸೂಕ್ಷ್ಮ ಅಪಧಮನಿಗಳಲ್ಲಿ ಸರಾಗವಾಗಿ ಹರಿದಾಗ ವಿಫಲವಾಗುತ್ತದೆ. ಈ ಹಂತದಲ್ಲಿ, ಕೆಂಪು ರಕ್ತ ಕಣಗಳ ಮೇಲಿನ ಪರಿಣಾಮ ಪ್ರಾಮುಖ್ಯವಾಗಿದ್ದು, ಸಂಪೂರ್ಣ ರಕ್ತವನ್ನು ಅನಂತವಾಗಿ ರೂಪುಗೊಳಿಸಲು ಸಾಧ್ಯವಾಗುವುದಿಲ್ಲ. ಕೆಂಪು ರಕ್ತಕಣಗಳ ವ್ಯಾಸಕ್ಕಿಂತ ರಕ್ತನಾಳಗಳ ವ್ಯಾಸ ಸ್ವಲ್ಪ ಹೆಚ್ಚಾದಾಗ ಫಾರೀಯಸ್-ಲಿಂಡ್ ಕ್ವಿಸ್ಟ್ ಪರಿಣಾಮ ಉಂಟಾಗುತ್ತದೆ ಮತ್ತು ಅಡ್ಡ ಗೋಡೆಯ ಒತ್ತಡಕಡಿಮೆಯಾಗುತ್ತದೆ.

ಹೇಗೂ, ರಕ್ತನಾಳಗಳ ಒತ್ತಡ ಇನ್ನೂ ಕಡಿಮೆಯಾದಾಗ, ಕೆಂಪುರಕ್ತಕಣಗಳು ನಾಳಗಳ ಮೂಲಕ ಹೊರಬಂದು, ಕೆಲವು ಸಮಯದಲ್ಲಿ ಏಕ ರಾಶಿಯಾಗಿ ಹರಿಯುತ್ತದೆ.

ಈ ಪ್ರಕರಣದಲ್ಲಿ, ಫಾರೀಯಸ್-ಲಿಂಡ್ ಕ್ವಿಸ್ಟ್ ಪರಿಣಾಮ ವಿರುದ್ದವಾಗಿ ಕಾರ್ಯ ನಿರ್ವಹಿಸಿ, ಅಡ್ಡಗೋಡೆಯ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ.

ಮೂಳೆಗಳು

ಬದಲಾಯಿಸಿ

ಮೂಳೆಗಳು ಅಸಮಕಕ್ಷೆಯನ್ನು ಹೊಂದಿದು , ಆದರೆ ಸುಮಾರಾಗಿ ಅಡ್ಡ ಸಮ ಕಕ್ಷೆಯನ್ನು ಹೊಂದಿವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಮೂಳೆಗಳು ಒಂದು ಕಕ್ಷೆಯ ಗುಂಟ ಪ್ರಭಲವಾಗಿದ್ದು ಉದ್ದ (ಸಾಮಾನ್ಯ ಅಥವಾ ದೊಡ್ಡ) ಕಕ್ಷೆಯಲ್ಲಿ ದುರ್ಬಲವಾಗಿರುತ್ತವೆ. ಮತ್ತು ಅವು ಯಾವುದೇ ಕಕ್ಷೆಯಲ್ಲಿ ತಿರುಗುತ್ತಿದ್ದರೂ ಒಂದೇ ಬಲವನ್ನು ಹೊಂದಿರುತ್ತವೆ.

ಮೂಳೆಗಳ ಒತ್ತಡ-ಆಯಾಸ ಸಂಬಂಧಗಳನ್ನು ಹುಕ್ನ ನಿಯಮದ ಮೂಲಕ ರೂಪಾಂತರಿಸಬಹುದು. ಇದರಲ್ಲಿ ಎಲಾಸ್ಟಿಕ್ ಮಾಡೂಲ್ಗಳು ಉದಾ :ಯಂಗ್ ಮಾಡುಲಸ್, ಪಾಯಿಸನ್ ಅನುಪಾತ ಅಥವಾ ಲೇಮ್ ಪ್ಯರಾಮೀಟರ್ಗಳು ಒಳಗೊಂಡಿರುತ್ತವೆ. ನಾಲ್ಕನೆ- ಹಂತದ ಟೆನ್ಸರ್ಆದ ಸಂಯೋಜಿತ ಮಾತೃಕೆಯು ಮೂಳೆಯ ಸಮಕಕ್ಷೆಯ ಗುಣವನ್ನು ಅವಲಂಬಿಸಿದೆ.

 

ಸ್ನಾಯು

ಬದಲಾಯಿಸಿ

ಸ್ನಾಯುಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ:

  • ಕಂಕಾಲಕ ಸ್ನಾಯುಗಳು (ಪಟ್ಟಿ ಸಹಿತ ಸ್ನಾಯುಗಳು): ಹೃದಯ ಸ್ನಾಯುಗಳಂತಲ್ಲದೆ, ಕಂಕಾಲಕ ಸ್ನಾಯುಗಳು ಉಚ್ಚ ಆವೃತ್ತಿಯ ಪ್ರಚೋದನೆಗಳ ಮೂಲಕ ಟೆಟನಿ ಎಂಬ ಸ್ಥಿರ ಸ್ಥಿತಿಯನ್ನು ತಲುಪುತ್ತದೆ. ಇದರಿಂದ ಸ್ನಾಯುಸೆಳೆತಗಳು ಉಂಟಾಗಿ ತರಂಗ ಸಂಕಲನ ಎಂಬ ವಿದ್ಯಾಮಾನಕ್ಕೆ ಕಾರಣವಾಗುತ್ತಿದೆ. ಒಂದು ನಿರ್ಣಾಯಕ ಉಚ್ಚ ಆವೃತ್ತಿಯಲ್ಲಿ ಟೆಟನಿ ಕಾಣಿಸಿಕೊಂಡು ಸಂಕುಚಿತ ಬಲಗಳು ನಿರ್ಧಿಷ್ಟ ಕಾಲದವರೆಗೆ ಸ್ಥಿರವಾಗಿ ಕಾಣಿಸಿಕೊಳ್ಳುತ್ತವೆ. ಇದು ಕಂಕಾಲ ಸ್ನಾಯು ವ್ಯಾಪಕವಾದ ವೈವಿದ್ಯ ಬಲಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಈ ರೀತಿಯ ಸ್ನಾಯುವನ್ನು ಐಚ್ಛಿಕವಾಗಿ ನಿಯಂತ್ರಿಸಬಹುದು. ಹಿಲ್ಸ್ ಮಾದರಿಸ್ನಾಯುಗಳ ಅಧ್ಯಯನಕ್ಕೆ ಬಳಸುವ ಅತ್ತ್ಯುತ್ತಮ ಜನಪ್ರಿಯ ಮಾದರಿಯಾಗಿದೆ.
  • ಹೃದಯದ ಸ್ನಾಯುಗಳು (ಪಟ್ಟಿ ಸಹಿತ): ಕಾರ್ಡಿಯೋ ಮಯೋಸೈಟ್‌ಗಳು ಅತ್ಯಂತ ವೈಶಿಷ್ಟ ಜೀವಕೋಶ ಮಾದರಿಗಳಾಗಿವೆ. ಈ ಅನೈಚ್ಛಿಕ ಸಂಕುಚಿತ ಕೋಶಗಳು ಹೃದಯದ ಒಳಗೋಡೆಯಲ್ಲಿದ್ದು, ಅನುರೂಪ ಹೃದಯಬಡಿತಗಳುಂಟಾಗುವಂತೆ ಕಾರ್ಯನಿರ್ವಹಿಸುತ್ತವೆ. ಇದು ಪ್ರಚೋದನೆಗಳ ಮಧ್ಯೆ ಉಂಟಾಗುವ ಒಂದು ವಿರಾಮ ಅವಧಿಗೆ ಕಾರಣವಾಗುತ್ತದೆ.
  • ಮೃದು ಸ್ನಾಯುಗಳು ( ಮೃದು- ಪಟ್ಟಿರಹಿತ): ಜಠರ, ಪರಿಚಲನಾವ್ಯೂಹ ಮತ್ತು ಜೀರ್ಣಾಂಗವ್ಯೂಹದ ಹಲವು ಭಾಗಗಳು ಪಟ್ಟಿರಹಿತ ಸ್ನಾಯುಗಳಿಂದಮಾಡಲ್ಪಟ್ಟಿವೆ. ಇದು ಅನೈಚ್ಛಿಕ ಸ್ನಾಯುವಾಗಿದ್ದು, ಕರುಳು ಸಂಬಂಧ ನರವ್ಯೂಹದಿಂದ ನಿಯಂತ್ರಿಸಲ್ಪಡುತ್ತದೆ.

ಮೃದು ಅಂಗಾಂಶಗಳು.

ಬದಲಾಯಿಸಿ

ಮೃದು ಅಂಗಾಂಶಗಳಾದ ಟೆಂಡಾನ್, ಲಿಗಮೆಂಟ್ ಮತ್ತು ಮೃದ್ವಸ್ಥಿಗಳು ಮಾತೃಕೆ ಪ್ರೋಟೀನ್ ಮತ್ತು ದ್ರವಗಳ ಸಂಯೋಜನೆಗಳಾಗಿವೆ. ಈ ಪ್ರತಿಯೊಂದು ಅಂಗಾಂಶಗಳಿಗೂ ಮುಖ್ಯ ದೃಡತೆಯನ್ನು ಕೊಡುವ ವಸ್ತುವೆಂದರೆ ಕೊಲ್ಲ್ಯಾಜನ್. ಇದರ ಪ್ರಮಾಣ ಮತ್ತು ವಿಧ ಅಂಗಾಂಶದ ಕಾರ್ಯಕ್ಕನುಗುಣವಾಗಿ ಭಿನ್ನವಾಗಿದ್ದರೂ ಇದು ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಎಲಾಸ್ಟಿನ್ ಚರ್ಮ, ಪರಿಚಲನಾ ವ್ಯವಸ್ಥೆ ಮತ್ತು ಸಂಯೋಜಕ ಅಂಗಾಂಶಗಳಲ್ಲಿ ಒತ್ತಡವನ್ನು ತಡೆಯುವ ಪ್ರಮುಖ ಘಟಕವಾಗಿದೆ. ಟೆಂಡಾನ್‌ಗಳ ಕಾರ್ಯವೆಂದರೆ ಮೂಳೆಯನ್ನು ಚರ್ಮದೊಂದಿಗೆ ಸಂಪರ್ಕಿಸುವುದು, ಇದರ ಮೂಲಕ ಹೊರೆಯನ್ನು ಕಡಿಮೆ ಮಾಡುವುದು.

ಟೆಂಡಾನ್‌ಗಳು ದೇಹದ ಚಲನವಲನಗಳಿಗೆ ಬೇಕಾದ ಬಲವನ್ನು ಕೊಡುತ್ತವೆಯಾದರೂ, ಸ್ನಾಯುಗಳಿಗೆ ಹಾನಿಯಾಗದಂತೆ ಕಾರ್ಯನಿರ್ವಹಿಸಬೇಕಾಗುತ್ತದೆ, ಲಿಗಮೆಂಟ್‌ಗಳು ಎರಡು ಮೂಳೆಗಳನ್ನು ಜೋಡಿಸುತ್ತವೆ, ಆದ್ದರಿಂದ ಅವು ಟೆಂಡನ್ಗಳಿಗಿಂತ ಗಡಸಾಗಿದ್ದು, ಸಾಪೇಕ್ಷವಾಗಿ ಹಿಗ್ಗುವಿಕೆ ಬಲದಲ್ಲಿ ಒಂದೇ ಆಗಿರುತ್ತವೆ.

ಇನ್ನೊಂದು ಕಡೆ ಮೃದ್ವಸ್ಥಿಯು, ಪ್ರಧಾನವಾಗಿ ಸಂಕುಚಿತ ಹೊರೆಯನ್ನು ಹೊಂದಿದ್ದು, ಎರಡು ಮೂಳೆಗಳ ನಡುವಿನ ಹೊರೆಯನ್ನು ಕೀಲುಗಳಲ್ಲಿ ದಿಂಬಿನಂತೆ ವರ್ತಿಸುವುದರ ಮೂಲಕ ಹಂಚುತ್ತದೆ. ಮೃದ್ವಸ್ಥಿಯ ಸಂಕುಚಿತಬಲವು ಕೊಲಾಜನ್ ನಂತೆ ಟೆಂಡಾನ್ ಮತ್ತು ಲಿಗಮೆಂಟ್ ನಿಂದ ಬಂದಿದೆ, ಆದರೆ ಕೊಲಾಜನ್ನ್ನು "ತೇವ ನೂಡಲ್" ಗೆ ಹೋಲಿಸಲಾಗುತ್ತದೆ. ಇದನ್ನು ಗ್ಲೈಕೋಸಾಮಿಂಗೊಗ್ಲೈಕನ್ಗಳ ಅಡ್ಡ-ಸಂಪರ್ಕಗಳಿಂದ ಬೆಂಬಲಿಸಲಾಗಿದ್ದು, ಇದು ನೀರನ್ನೂ ಸಹ ಆಕರ್ಷಿಸುತ್ತದೆ ಮತ್ತು ಸಂಕುಚಿತ ಅಂಗಾಂಶಗಳಿಗೆ ಆಧಾರನೀಡುತ್ತದೆ.

ಇತ್ತೀಚೆಗೆ, ಜೈವಿಕ ಯಂತ್ರಶಾಸ್ತ್ರದ ಬೆಳವಣಿಗೆಗಳು ಮೃದು ಅಂಗಾಂಶಗಳಾದ ಚರ್ಮ ಮತ್ತು ಒಳ ಅಂಗಗಳಲ್ಲಿಯೂ ಕಂಡುಬರುತ್ತಿವೆ. ಈ ಆಸಕ್ತಿಯು ವೈದ್ಯಕೀಯ ನಕಲುಗಳ ಅಭಿವೃದ್ಧಿಯಲ್ಲಿ ನೈಜತೆಯ ಅವಶ್ಯಕತೆಯನ್ನು ಕದಡುತ್ತದೆ.

ವಿಸ್ಕೊಎಲಾಸ್ಟಿಸಿಟಿ

ಬದಲಾಯಿಸಿ

ಸ್ನಿಗ್ಧ ಸ್ಥಿತಿಸ್ಥಾಪಕತೆಯು ಅನೇಕ ಮೃದು ಅಂಗಾಂಶಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿದ್ದು, ಇವುಗಳಲ್ಲಿ ಯಾಂತ್ರಿಕ ಪರೀಕ್ಷೆಯ ಸಮಯದಲ್ಲಿ ಅಂಗಾಂಶಗಳನ್ನು ತುಂಬುವ ಮತ್ತು ಹೊರಹಾಕುವ ಪ್ರಕ್ರಿಯೆಯಲ್ಲಿ ಶಕ್ತಿಯ ನಷ್ಟ ಅಥವಾ ಉದ್ರೇಕಗಳು ಕಂಡುಬರುತ್ತವೆ. ಕೆಲವು ಮೃದುಅಂಗಾಂಶಗಳನ್ನು ಪುನರಾರ್ವತಿತ ಚಕ್ರೀಯ ತುಂಬುವಿಕೆಯಿಂದ ಪೂರ್ವ ನಿಗದಿ ಗೊಳಿಸಬಹುದಾಗಿದ್ದು ಒತ್ತಡ-ಆಯಾಸ ವಕ್ರ ರೇಖೆಯು ತುಂಬುವಿಕೆಯ ಮತ್ತು ಹೊರಹಾಕುವೆಯ ಪರೀಕ್ಷೆಗಳಲ್ಲಿ ಒಂದರ ಮೇಲೊಂದು ಬಾರದಂತೆ ತಡೆಯಬಹುದಾಗಿದೆ. ವಿಸ್ಕೋ ಎಲಾಸ್ಟಿಸಿಟಿಯಲ್ಲಿ ಬಳಸುವ ಸಾಮಾನ್ಯ ಮಾದರಿಯೆಂದರೆ ಕ್ವಾಸಿಲೀನಿಯರ್ ವಿಸ್ಕೊಎಲಾಸ್ಟಿಸಿಟಿ ಥಿಯರಿ (ಕ್ಯುಎಲ್‌ವಿ).


ಇದರ ಜೊತೆಗೆ, ಮೃದು ಅಂಗಾಂಶಗಳು ಇತರೆ ಸ್ನಿಗ್ದ ಸ್ಥಿತಿ ಸ್ಥಾಪಕತೆಯ ಗುಣಗಳನ್ನು ಹೊಂದಿದ್ದು, ತೆವಳುವಿಕೆ, ಒತ್ತಡ ಸಡಿಲಿಕೆ ಮತ್ತು ಪೂರ್ವ ನಿಬಂದನೆಗಳನ್ನು ಒಳಗೊಂಡಿದೆ.

ರೇಖೀಯವಲ್ಲದ ಸಿದ್ದಾಂತಗಳು

ಬದಲಾಯಿಸಿ

ಹುಕ್ಕ್‌ನ ನಿಯಮ ಲೀನಿಯರ್ ಮಾದರಿಯದ್ದಾಗಿದ್ದು, ಜೈವಿಕ ಯಂತ್ರ ಶಾಸ್ತ್ರದಲ್ಲಿ ಬರುವ ಅನೇಕ ಸಮಸ್ಯೆಗಳು ನಾನ್‌ಲೀನಿಯರ್ ವರ್ತನೆಯನ್ನು ಮೃದುಅಂಗಾಶಗಳಲ್ಲಿ ಅಳವಡಿಸಲಾಗಿದೆ. ಉದಾಹರಣೆಗೆ, ಕೊಲ್ಯಾಜನ್ ಮತ್ತು ಎಲಾಸ್ಟೀನ್ ನಂತಹ ಪ್ರೋಟೀನ್ ಗಳು ಈ ರೀತಿಯ ವರ್ತನೆಯನ್ನು ತೋರಿಸುತ್ತವೆ ಕೆಲವು ಸಾಮಾನ್ಯ ವಸ್ತುಮಾದರಿಗಳು ನಿಯೋಹುಕ್ ವರ್ತನೆಯನ್ನು ತೋರಿಸುತ್ತವೆ ಇದನ್ನು ಕೆಲವುಸಾರಿ ಎಲಾಸ್ಟೀನ್ ಅನ್ನು ರೂಪಾಂತರಗೊಳಿಸಲು ಮತ್ತು ಪ್ರಸಿದ್ದವಾದ ಫಂಗ್-ಎಲಾಸ್ಟೀನ್ ಗುಣೋತ್ತರ ಮಾದರಿಯಲ್ಲಿ ಬಳಸುತ್ತಾರೆ. ಮೃದು ಅಂಗಾಂಶಗಳ ಜೈವಿಕ ಯಂತ್ರಶಾಸ್ತ್ರದಲ್ಲಿ ನಾನ್ ಲೀನಿಯರ್ ವಿದ್ಯಾಮಾನ ಕೆಲವು ವಸ್ತುಗಳ ಗುಣಗಳಿಗಷ್ಟೆ ಅನ್ವಯಿಸುವುದಲ್ಲದೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ (100% ಕ್ಕಿಂತ ಹೆಚ್ಚು) ಮೃದು ಅಂಗಾಂಶಗಳ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕವಾಗಿದೆ.

ಬಯೋಟ್ರೈಬಾಲಜಿ

ಬದಲಾಯಿಸಿ

ಟ್ರೈಬಾಲಜಿಯ ಪ್ರಮುಖ ಅಂಶಗಳೆಂದರೆ, ಘರ್ಷಣೆ, ಸವೆಕಳಿ ಮತ್ತು ಕನಿಷ್ಟ ಘರ್ಷಣೆ. ಚಲನೆಯ ಸಮಯದಲ್ಲಿ ಎರಡು ಮೇಲ್ಮೈಗಳು ಸಂಪರ್ಕಕ್ಕೆ ಬಂದಾಗ ಅಂದರೆ ಒಂದಕ್ಕೊಂದು ಉಜ್ಜಿದಾಗ, ಸವೆಕಳಿ ಮತ್ತು ಕನಿಷ್ಟ ಘರ್ಷಣೆಗೆ ಒಳಗಾದಾಗ ಅವುಗಳ ಪರಿಣಾಮಗಳು ವಸ್ತುವಿನ ಕಾರ್ಯಾಚರಣೆಯನ್ನು ವಿಶ್ಲೇಷಿಸಲು ಅತಿ ಪ್ರಾಮುಖ್ಯವಾಗಿದೆ. ಬಯೋಟ್ರೈಬಾಲಜಿ ಜೀವ ವ್ಯವಸ್ಥೆಯ ಘರ್ಷಣೆ, ಸವೆಕಳಿ ಮತ್ತು ಕನಿಷ್ಟ ಘರ್ಷಣೆ ವಿಶೇಷವಾಗಿ ಮಾನವನ ಕೀಲುಗಳಾದ ಸೊಂಟ ಮತ್ತು ಮೊಣಕಾಲುಗಳ ಅಧ್ಯಯನವಾಗಿದೆ. ಉದಾಹರಣೆಗೆ , ಮೊಣಕಾಲಿನ ಫೀಮೊರಲ್ ಮತ್ತು ಟಿಬಿಯಲ್ ಘಟಕಗಳು ದೈನಂದಿನ ಚಟುವಟಿಕೆಗಳಾದ ನಡಿಗೆ ಅಥವಾ ಮೆಟ್ಟಿಲು ಹತ್ತುವ ಸಮಯದಲ್ಲಿ ಒಂದಕ್ಕೊಂದು ಘರ್ಷಣೆಗೆ ಒಳಗಾಗುತ್ತವೆ. ಟಿಬಿಯಲ್ ಘಟಕಗಳ ಕಾರ್ಯವಿದಾನವನ್ನು ವಿಶ್ಲೇಷಿಸ ಬೇಕಾದಲ್ಲಿ, ಬಯೋಟ್ರೈಬಾಲಜಿಯ ತತ್ವಗಳನ್ನು ಸವೆಕಳಿ ನಕಲುಗಳ ಕಾರ್ಯವಿದಾನ ಮತ್ತು ಸೈನೋವಿಯಲ್ ದ್ರವದ ಪರಿಣಾಮಗಳನ್ನು ನಿರ್ದರಿಸಲು ಬಳಸಬೇಕಾಗುತ್ತದೆ. ಇದರ ಜೊತೆಗೆ, ಸಂಪರ್ಕ ಯಂತ್ರಶಾಸ್ತ್ರವು ಸಹ ಸವೆಕಳಿ ವಿಶ್ಲೇಷಣೆಗೆ ಅತಿ ಪ್ರಾಮುಖ್ಯವಾಗಿದೆ.

ಇದನ್ನೂ ನೋಡಿ

ಬದಲಾಯಿಸಿ

ಇವನ್ನೂ ಗಮನಿಸಿ

ಬದಲಾಯಿಸಿ
  • ಅಲೋಮೆಟ್ರಿ
  • ಪ್ರಾಣಿಗಳ ಚಲನೆ
  • ವಿಕಸನೀಯ ಶರೀರಶಾಸ್ತ್ರ
  • ಲೈಂಗಿಕ ಶಾಸ್ತ್ರ
  • ಕಂಪ್ಯೂಟರ್-ಸಾಧನದ ಎರ್ಗೊನಾಮಿಕ್ಸ್
  • ಸಿಮ್‌ಟ್ಕ್-ಒಪೆನಿಸಮ್
  • ಆಟಗಳ ಜೈವಿಕ ಯಂತ್ರಶಾಸ್ತ್ರ
  • ಮೃದು ದೇಹ ಚಲನಶಾಸ್ತ್ರ
  • ಟ್ರೈಬಾಲಜಿ
  • ಅನಂತ ಚಲನಶಾಸ್ತ್ರ
  • ದ್ರವ ಯಂತ್ರಶಾಸ್ತ್ರ
  • ಸಂಪರ್ಕ ಯಂತ್ರಶಾಸ್ತ್ರ
  • ಇಂಪ್ಲಾಂಟ್ (ಔಷಧ)

ಟಿಪ್ಪಣಿಗಳು

ಬದಲಾಯಿಸಿ
  1. ಆರ್. ಮೆಕ್‌ನೀಲ್ ಅಲೆಕ್ಸಾಂಡೆರಾ (2005) ಮೆಕಾನಿಕ್ಸ್ ಆಫ್ ಅನಿಮಲ್ ಮೂವ್‌ಮೆಂಟ್[permanent dead link] , ಕರೆಂಟ್ ಬಯಾಲಜಿ ಸಂಪುಟ 15, ಸಂಚಿಕೆ 16, 23 ಆಗಸ್ಟ್ 2005, ಪುಟಗಳು R616-R619
  2. ಹಾಲ್, ಸುಸಾನ್ ಜೆ. ಬೇಸಿಕ್ ಬಯೋಮೆಕಾನಿಕ್ಸ್. ಬೋಸ್ಟನ್: ಮೆಕ್‌ಗ್ರಾ-ಹಿಲ್ ಕಂಪನೀಸ್, ಇಂಕ್, 1999. ಪ್ರತಿ.
  3. ಮಸಲ್ಸ್ ಅಲೈವ್: ದೇರ್ ಫಂಕ್ಷನ್ಸ್ ರಿವೀಲ್ಡ್

ಉಲ್ಲೇಖಗಳು

ಬದಲಾಯಿಸಿ
  • ಗುರ್ಟಿನ್, ಎಮ್.(2003). ಅನ್ ಇಂಟ್ರೊಡಕ್ಷನ್ ಟು ಕಂಟಿನ್ಯುಯಮ್ ಮೆಕಾನಿಕ್ಸ್. ಸ್ಯಾನ್ ಡಿಯೆಗೊ, ಯುಎಸ್‌ಎ: ಎಲ್ಸೆವಿಯರ್.
  • ಟೊಟ್ಟೆನ್, ಜಿ., & ಲಿಯಾಂಗ್, ಎಚ್. (2004). ಮೆಕಾನಿಕಲ್ ಟ್ರೈಬಾಲಜಿ. ನ್ಯೂಯಾರ್ಕ್, ಯುಎಸ್‌ಎ: ಮಾರ್ಸೆಲ್ ಡೆಕ್ಕರ್.

ಹೆಚ್ಚಿನ ಓದಿಗಾಗಿ

ಬದಲಾಯಿಸಿ
  • ವೈ.ಸಿ. ಫಂಗ್, ಬಯೋಮೆಕಾನಿಕ್ಸ್ , ಐಎಸ್‌ಬಿಎನ್ 0387943846
  • ಜೇ ಡಿ. ಹಂಫ್ರೇ, ಕಾರ್ಡಿವಾಸ್ಕುಲರ್ ಸಾಲಿಡ್ ಮೆಕಾನಿಕ್ಸ್ , ಐಎಸ್‌ಬಿಎನ್ 0387951687
  • ಸ್ಟೀಫನ್ ಸಿ. ಕೊವಿನ್, ಬೋನ್ ಮೆಕಾನಿಕ್ಸ್ ಹ್ಯಾಂಡ್‌ಬುಕ್ , ಐಎಸ್‌ಬಿಎನ್ 0849391172
  • ಆಂಥೊನಿ ಸಿ. ಫಿಶರ್-ಕ್ರಿಪ್ಸ್, ಇಂಟ್ರೊಡಕ್ಷನ್ ಟು ಕಾಂಟ್ಯಾಕ್ಟ್ ಮೆಕಾನಿಕ್ಸ್ , ಐಎಸ್‌ಬಿಎನ್ 0387681876
  • ಜಗನ್ ಎನ್ ಮಜುಂದಾರ್, ಬಯೋಫ್ಲುಯಿಡ್ ಮೆಕಾನಿಕ್ಸ್ , ಐಎಸ್‌ಬಿಎನ್ 9810209274
  • ಡೊನಾಲ್ಡ್ ಆರ್. ಪೀಟರ್ಸನ್, ಜೋಸೆಫ್ ಡಿ. ಬ್ರಾಂಝಿನೊ, ಬಯೋಮೆಕಾನಿಕ್ಸ್: ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್ಸ್ , ಐಎಸ್‌ಬಿಎನ್ 0849385342

ಬಾಹ್ಯ ಕೊಂಡಿಗಳು

ಬದಲಾಯಿಸಿ