ಗ್ರೀಕ್ ಭಾಷೆ
ಗ್ರೀಕ್ (ελληνικά, IPA: [eliniˈka] or ελληνική γλώσσα, IPA: [eliniˈci ˈɣlosa]), ಇಂಡೋ-ಯೂರೋಪ್ ಭಾಷೆಗಳ ಒಂದು ಸ್ವತಂತ್ರ ಭಾಗವಾಗಿದ್ದು, ಇದು ಗ್ರೀಕರ ಭಾಷೆಯಾಗಿದೆ. ಇದು ದಕ್ಷಿಣ ಬಾಲ್ಕನ್ಸ್‌ನ ಮೂಲದಿಂದ ಹುಟ್ಟಿದ್ದು, ಸುಮಾರು 34 ಶತಮಾನಗಳ ಲಿಖಿತ ದಾಖಲೆಯನ್ನು ಹೊಂದಿರುವ ಈ ಭಾಷೆಯು ಇತರ ಯಾವುದೇ ಇಂಡೋ-ಯೂರೋಪ್ ಭಾಷೆಗಳಿಗಿಂತಲೂ ಧೀರ್ಘಕಾಲದ ದಾಖಲೆಯ ಚರಿತ್ರೆಯನ್ನು ಹೊಂದಿದೆ.[೯]
Greek Ελληνικά Ellīniká | ||
---|---|---|
ಉಚ್ಛಾರಣೆ: | IPA: [eliniˈka] | |
ಬಳಕೆಯಲ್ಲಿರುವ ಪ್ರದೇಶಗಳು: |
Greece, Cyprus, Greek diaspora | |
ಒಟ್ಟು ಮಾತನಾಡುವವರು: |
c. 13 million[೧] | |
ಶ್ರೇಯಾಂಕ: | 68[೨] | |
ಭಾಷಾ ಕುಟುಂಬ: | Indo-European Hellenic Greek | |
ಬರವಣಿಗೆ: | Greek alphabet | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಗ್ರೀಸ್[೩] Cyprus[೪] ಯುರೋಪ್[೫] Recognised minority language in: | |
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | el
| |
ISO 639-2: | gre (B) ಟೆಂಪ್ಲೇಟು:Infobox ಭಾಷೆ/terminological
| |
ISO/FDIS 639-3: | variously: grc – Ancient Greek ell – Modern Greek pnt – Pontic Greek gmy – Mycenaean Greek gkm – Medieval Greek cpg – Cappadocian Greek tsd – Tsakonian Greek | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಇದರ ಬರವಣಿಗೆಯ ವಿಧಾನವು ಪ್ರಮುಖವಾಗಿ ಗ್ರೀಕ್ ಅಕ್ಷರಮಾಲೆಯಿಂದ ಉಗಮಗೊಂಡಿದೆ.(ಇದಕ್ಕೆ ಮೊದಲು ಇತರ ಪದ್ದತಿಗಳಾದ ಲೀನಿಯರ್ ಬಿ ಮತ್ತು ಸಿಪ್ರಿಯೋಟ್ ಕಾಗುಣಿತ , ಪದ್ದತಿಗಳನ್ನು ಬಳಸಲಾಗುತ್ತಿತ್ತು). ಈ ಅಕ್ಷರಮಾಲೆಯು ಫೀನೀಸಿಯನ್ ಲಿಪಿಯಿಂದ ಉಗಮಗೊಡಿದ್ದು, ನಂತರ ಇದು ಲ್ಯಾಟಿನ್, ಸಿರಿಲಿಕ್, ಕೋಪ್ಟಿಕ್, ಮತ್ತು ಇತರ ಬರಹ ಪದ್ದತಿಗಳ ಮೂಲವಾಯಿತು.
ಗ್ರೀಕ್ ಭಾಷೆಯು ಹೆಚ್ಚು ದುರ್ಬಲವಾಗಿ ವ್ಯಾಖ್ಯಾನಿಸಲಾದ "ಪಾಶ್ಚಿಮಾತ್ಯ" ಪ್ರಪಂಚವಾದ ಯೂರೋಪ್, ಮತ್ತು ಕ್ರೈಸ್ತ ಚರಿತ್ರೆಯಲ್ಲಿ ಪ್ರಮುಖವಾದ ಸ್ಥಾನ ಮಾನವನ್ನು ಹೊಂದಿದೆ.ಪುರಾತನ ಗ್ರೀಕ್ ಸಾಹಿತ್ಯದ ಸಾಮಾನ್ಯ ನಿಯಮಗಳು ಸ್ಮಾರಕ ದೃಷ್ಟಿಕೋನ ಮತ್ತು ಮಹಾಕಾವ್ಯಗಳಾದ ಈಲಿಯಡ್ ಮತ್ತು ಒಡಿಸ್ಸಿ ಯಂತಹ ಪಾಶ್ಚಿಮಾತ್ಯ ನಿಯಮಗಳ ಮೇಲಿನ ಪ್ರಭಾವ ಕಾರಣವಾದ ಅಂಶಗಳನ್ನು ಒಳಗೊಂಡಿದೆ.
ಪ್ಲೇಟೋನ ಸಂಭಾಷಣೆಗಳು ಮತ್ತು ಅರಿಸ್ಟಾಟಲ್‌ನ ಬರಹಗಳಂತಹ ಪಾಶ್ಚಿಮಾತ್ಯ ತತ್ವಜ್ಞಾನದ ಮೂಲಭೂತ ಗ್ರಂಥಗಳನ್ನು ಗ್ರೀಕ್ ಭಾಷೆಯಲ್ಲಿಯೇ ರಚಿಸಲಾಗಿದೆ. ಕೈಸ್ತರ ಧರ್ಮಗ್ರಂಥವಾದ ಬೈಬಲ್‌ನ ಹೊಸಒಡಂಬಡಿಕೆಯು ಕೊಯಿನ್ ಗ್ರೀಕ್ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಹಲವಾರು ಕ್ರೈಸ್ತ ಪಂಗಡಗಳು (ವಿಶೇಷವಾಗಿ ಪೂರ್ವ ಸಂಪ್ರದಾಯಸ್ಥರು ಮತ್ತು ಕ್ಯಾಥೊಲಿಕ್ ಚರ್ಚ್‌ನ ಗ್ರೀಕ್ ಪದ್ದತಿಗಳ ಅನುಯಾಯಿಗಳು) ತಮ್ಮ ಕ್ರೈಸ್ತ ಪೂಜಾ ವಿಧಿ ವಿಧಾನಗಳನ್ನು ಈ ಭಾಷೆಯಲ್ಲಿ ಆಚರಣೆ ಮಾಡುವುದನ್ನು ಮುಂದುವರೆಸಿದರು.
ಲ್ಯಾಟೀನ್ ಗ್ರಂಥಗಳು ಮತ್ತು ರೋಮ್ ಪ್ರಪಂಚದ ಸಂಪ್ರದಾಯಗಳ (ಗ್ರೀಕ್ ಸಮಾಜದ ಪ್ರಭಾವಕ್ಕೆ ಒಳಗಾಗಿದ್ದ) ಜೊತೆಗೆ, ಗ್ರೀಕ್ ಗ್ರಂಥಗಳ ಅಧ್ಯಯನ ಮತ್ತು ಪ್ರಾಚೀನಕಾಲದ ಸಮಾಜವು ಉತ್ಕೃಷ್ಟತೆಗಳ ಅಂಕೆಯನ್ನು ಸ್ಥಾಪಿಸುತ್ತವೆ.
ಗ್ರೀಕ್ ಭಾಷೆಯು ಮೆಡಿಟರೇನಿಯನ್ ಭಾಗಗಳಲ್ಲಿ ವ್ಯಾಪಕವಾಗಿ ಮಾತನಾಡುತ್ತಿದ್ದ ಒಂದು ಭಿನ್ನ ಜನಾಂಗಗಳ ಸಂಕರ ಭಾಷೆ ಯಾಗಿತ್ತು. ಅಷ್ಟೇ ಅಲ್ಲದೆ ಶ್ರೇಷ್ಠ ಪ್ರಾಚೀನ ಕಾಲದ ಹಿಂದೆಯೂ ಇದು ಬಳಕೆಯಲ್ಲಿತ್ತು. ಕಾಲಾಂತರದಲ್ಲಿ ಬೈಝಾಂಟಿನ್ ಸಾಮ್ರಾಜ್ಯದ ಅಧಿಕೃತ ಆಡುಭಾಷೆಯಾಯಿತು. ಈ ಭಾಷೆಯ ಆಧುನಿಕ ರೂಪವು ಇಂದು ಗ್ರೀಸ್ ಮತ್ತು ಸಿಪ್ರಸ್ ದೇಶಗಳ ಅಧಿಕೃತ ಭಾಷೆಯಾಗಿದೆ. ಮತ್ತು ಯೂರೋಪ್ ಒಕ್ಕೂಟದ 23 ಅಧಿಕೃತ ಭಾಷೆಗಳಲ್ಲಿ ಇದೂ ಒಂದಾಗಿದೆ. ಇಂದು [೧] ಗ್ರೀಸ್, ಸಿಪ್ರಸ್ ಮತ್ತು ಪ್ರಪಂಚದ ಹಲವಾರು ಭಾಗಗಳಹಂಚಿಹೋದ ಜನಾಂಗಗಳಲ್ಲಿ ಸುಮಾರು 13 ಮಿಲಿಯನ್ ಜನರು ಗ್ರೀಕ್ ಭಾಷೆಯನ್ನು ಮಾತನಾಡುವವರಾಗಿದ್ದಾರೆ. ಆಂಗ್ಲ ಭಾಷೆಯಂತಹ ಅನೇಕ ಆಧುನಿಕ ಭಾಷೆಗಳು , ಗ್ರೀಕ್ ಭಾಷೆಯಿಂದ ಅನೇಕ ಪದಗಳನ್ನು ಸ್ವೀಕರಿಸಿವೆ.
ಆಂಗ್ಲ ಭಾಷೆಯ ನಿಘಂಟಿನಲ್ಲಿರುವ,ವಿಶೇಷವಾಗಿ ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದ 50,000 ಕ್ಕೂ ಹೆಚ್ಚು ಪದಗಳು ಗ್ರೀಕ್ ಭಾಷೆಯ ಮೂಲದಿಂದ ಬಂದಿವೆ.[ಸೂಕ್ತ ಉಲ್ಲೇಖನ ಬೇಕು] ಲ್ಯಾಟೀನ್ ಭಾಷೆಯೊಂದಿಗೆ ,ಗ್ರೀಕ್ ಭಾಷೆಯನ್ನೂ ಸಹ ಇಂದಿನ ಆಧುನಿಕ ಭಾಷೆಗಳಲ್ಲಿ ನೂತನ ಪದಗಳನ್ನು ರಚಿಸಲು ಬಳಸುತ್ತಿದ್ದಾರೆ.
ಇತಿಹಾಸ
ಬದಲಾಯಿಸಿಸುಮಾರು ಗತ ಕ್ರಿ.ಪೂ. 3ನೇ ಮಿಲೇನಿಯಂ ಇಂದಲೂ ಬಾಲ್ಕನ್ ಪರ್ಯಾಯದ್ವೀಪದಲ್ಲಿ ಗ್ರೀಕ್ ಭಾಷೆ ಬಳಕೆಯಲ್ಲಿತ್ತು. ಇದಕ್ಕೆ ದೊರೆತ ಆರಂಭಿಕ ಲಿಖಿತ ದಾಖಲೆಗಳೆಂದರೆ, "ರೂಮ್ ಆಫ್ ಚಾರಿಯಟ್ ಟ್ಯಾಬ್ಲೆಟ್" ಗಳಲ್ಲಿನ ಜೇಡಿಮಣ್ಣಿನ ಹಲಗೆಗೆಳ ಮೇಲಿನ ಲೀನಿಯರ್ ಬಿ, ಕ್ರಿಟೆನಲ್ಲಿನ ಕೊನೊಸ್ಸೋಸ್ ಪ್ರಾಂತದ ಒಂದು ಎಲ್‌ಎಮ್III A-ಗ್ರಂಥ(c.1400 ಬಿಸಿ).
ಇವು ಗ್ರೀಕ್ ಭಾಷೆಯನ್ನು ಪ್ರಂಪಚದ ಅತ್ಯಂತ ಹಳೆಯ ದಾಖಲಿತ ಪ್ರಚಲಿತ ಭಾಷೆಗಳಲ್ಲಿ ಒಂದನ್ನಾಗಿ ಮಾಡಿವೆ. ಇಂಡೋ-ಯುರೋಪಿಯನ್ ಭಾಷೆಗಳಲ್ಲಿ,ಇಂದು ಅಳಿದು ಹೋಗಿರುವ ಅನಾಟೀಲಿಯನ್ ಭಾಷೆ.ಗಳಿಗೆ ಮಾತ್ರ ಇದರ ಪುರಾತನ ಧೃಡೀಕರಣವು ತಾಳೆ ಹೊಂದುತ್ತದೆ.
ನಂತರದ ಗ್ರೀಕ್ ಅಕ್ಷರಮಾಲೆಯು (ಲೀನಿಯರ್ ಬಿ ಸಂಬಂಧಿಸದೇ ಇರುವುದು) ಕೆಲವು ಸಣ್ಣ ಪುಟ್ಟ ಮಾರ್ಪಾಡುಗಳನ್ನು ಹೊಂದಿರುವ ಫೀನಿಸಿಯನ್ ಅಕ್ಷರಮಾಲೆಯಿಂದ (ಅಬ್ಜಾದ್) ಹುಟ್ಟಿದ್ದು , ಇದು ಈಗಲೂ ಬಳಕೆಯಲ್ಲಿದೆ. ಸಾಂಪ್ರದಾಯಿಕವಾಗಿ ಗ್ರೀಕ್ ಭಾಷೆಯನ್ನು ಈ ಕೆಳಕಂಡ ಅವಧಿಗಳಾಗಿ ವಿಂಗಡಿಸಬಹುದು:
- ಪ್ರೊಟೋ-ಗ್ರೀಕ್ : ಇದು ಯಾವುದೇ ದಾಖಲೆ ಇಲ್ಲದ ಎಲ್ಲಾ ವಿಧಗಳ ಗ್ರೀಕ್ ಭಾಷೆಗಳ ಕೊನೆಯ ಪೂರ್ವಜ ಎಂದು ಭಾವಿಸಲಾಗಿದೆ.
ಪ್ರೊಟೋ-ಗ್ರೀಕ್ ಭಾಷೆ ಮಾತನಾಡುವವರು ಪ್ರಾಯಶಃ 2ಮಿಲೇನಿಯಂ ಬಿಸಿಯ ಪೂರ್ವದಲ್ಲಿ ಗ್ರೀಕ್ ಪರ್ಯಾಯ ದ್ವೀಪಕ್ಕೆ ಆಗಮಿಸಿರಬಹುದು. ಅಂದಿನಿಂದ ಗ್ರೀಸ್ ದೇಶದಲ್ಲಿ ಎಡೆಬಿಡದೆ ಈ ಭಾಷೆಯನ್ನು ಮಾತನಾಡುತ್ತಲೇ ಬಂದಿದ್ದಾರೆ.
- ಮೈಸಿನೇಯನ್ ಗ್ರೀಕ್ : ಇದು ಮೈಸಿನೇಯನ್ ನಾಗರೀಕತೆಯ ಭಾಷೆಯಾಗಿದೆ. ಹಲಗೆಗಳ ಮೇಲೆ ಕೆತ್ತಲ್ಪಟ್ಟಿರುವ ಲೀನಿಯರ್‌ಬಿ ಲಿಪಿಯಲ್ಲಿ ದಾಖಲಿಸಲ್ಪಟ್ಟಿರುವಂತೆ ಇದು 15ನೇ ಅಥವಾ 14ನೇ ಶತಮಾನದ ನಂತರದಲ್ಲಿ ಬಂದಿದೆ.
- ಪುರಾತನ ಗ್ರೀಕ್ ಭಾಷೆ: ಇದು ತನ್ನ ಹಲವಾರು ಆಡು ಭಾಷೆ ಗಳಲ್ಲಿ ವಾಡಿಕೆಯಿಲ್ಲದ ಪುರಾತನ ಭಾಷಯಾಗಿತ್ತು. ಮತ್ತು ಪುರಾತನ ಗ್ರೀಕ್ ನಾಗರೀಕತೆಯ ಶ್ರೇಷ್ಥ ಅವಧಿಗಳ ಒಂದು ಪ್ರಮುಖ ಭಾಷೆಯಾಗಿತ್ತು.
ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಇದು ಹೆಚ್ಚಾಗಿ ಗುರುತಿಸಲ್ಪಟ್ಟಿದೆ. ಪುರಾತನ ಗ್ರೀಕ್ ಭಾಷೆಯು ಮಧ್ಯಕಾಲೀನ ಯುಗ ಗಳಲ್ಲಿ ಪಶ್ಚಿಮ ಯೂರೋಪ್ ನಲ್ಲಿ ಒಂದು ನಿರುಪಯುಕ್ತ ಭಾಷೆಯಾಗಿ ಅವನತಿಯ ಹಾದಿ ಹಿಡಿದಿತ್ತು. ಆದರೆ ಬೈಝಾಂಟಿನ್ ಕಾಲದಲ್ಲಿ ಅಧಿಕೃತವಾಗಿ ಬಳಕೆಗೆ ಬಂದಿತು. ಕಾನ್ ಸ್ಟಾಂಟಿನೊಪಲ್ ನ ಅವನತಿ ಮತ್ತುಗ್ರೀಕ್‌ರ ಇಟಲಿಯ ಪ್ರದೇಶಗಳ ವಲಸೆಯೊಂದಿಗೆ, ಯೂರೋಪ್ ನ ಇತರ ಭಾಗಗಳಲ್ಲೂ ಪುನರ್ ಪ್ರವೇಶ ಪಡೆಯಿತು.
- ಕೊಯಿನ್ ಗ್ರೀಕ್ : ಪುರಾತನ ಹಲವಾರು ಗ್ರೀಕ್ ಆಡು ಭಾಷೆಗಳು ಸಂಸ್ಕರಿಸಲ್ಪಟ್ಟ ಅಥೆನ್ಸ್‌ನ ಆಡು ಭಾಷೆಯೂಂದಿಗೆ ಸಮ್ಮಿಲನ ಹೊಂದಿ, ಪ್ರಪ್ರಥಮ ಸಾಮಾನ್ಯ ಗ್ರೀಕ್ ಆಡು ಭಾಷೆಯಾಗಿ ಹೊರಹೊಮ್ಮಿತು. ಇದು ನಂತರ ಪೂರ್ವಮೆಡಿಟರೇನಿಯನ್ ಮತ್ತು ಸಮೀಪದ ಪೂರ್ವ ಭಾಗಗಳಲ್ಲಿ ಭಿನ್ನ ಜನಾಂಗಗಳ ಮಾಧ್ಯಮಿಕ ಭಾಷೆಯಾಗಿ ಬೆಳೆಯಿತು. ಆರಂಭದಲ್ಲಿ ಕೊಯಿನ್ ಗ್ರೀಕ್ ಅನ್ನು ಅಲೆಕ್ಸಾಂಡರ್ ಮಹಾಶಯನು ಗೆದ್ದ ಪ್ರಾಂತಗಳಲ್ಲಿ ಮತ್ತು ಆತನ ಸೈನ್ಯದಲ್ಲಿ ಮಾತ್ರ ಕಾಣಬಹುದಾಗಿತ್ತು. ಆದರೆ ಹೆಲೆನಿಸ್ಟಿಕ್ ವಸಹಾತುಕರಣದ ನಂತರ ಈ ಭಾಷೆಯು ಈಜಿಪ್ಟ್ ನಿಂದ ಭಾರತದ ಗಡಿ ಭಾಗಗಳ ವರೆಗೂ ಹಬ್ಬಿತು.
ಗ್ರೀಕರು ರೋಮನ್ನರನ್ನು ಸೋಲಿಸಿದ ನಂತರ, ರೋಮ್ ಪಟ್ಟಣದಲ್ಲಿ ಲ್ಯಾಟೀನ್ ಮತ್ತು ಗ್ರಿಕ್ ಭಾಷೆಗಳ ಒಂದು ಅನಧಿಕೃತ ದ್ವಿಭಾಷಾ ನೀತಿಯು ಸ್ಥಾಪನೆಗೊಂಡಿತು. ನಂತರ ರೋಮ್ ಸಾಮ್ರಾಜ್ಯದಲ್ಲಿ ಕೊಯಿನ್ ಗ್ರೀಕ್ ಪ್ರಥಮ ಅಥವಾ ದ್ವಿತೀಯ ಭಾಷೆಯಾಯಿತು. ಅಪೋಸ್ತಲರು ,ಗ್ರೀಸ್ ದೇಶದಲ್ಲಿ ತಮ್ಮ ಮತಬೋಧನೆಯನ್ನು ಗ್ರೀಕ್ ಭಾಷೆಯಲ್ಲಿಯೇ ಮಾಡಿದ್ದರಿಂದ, ಕ್ರೈಸ್ತ ಮತ ದ ಉಗಮವನ್ನು ಕೊಯಿನ್ ಗ್ರೀಕ್ ನ ಮೂಲಕ ಪತ್ತೆ ಹಚ್ಚಲು ಸಾಧ್ಯವಿದೆ. ಈ ಭಾಷೆಯನ್ನು ಅಲೆಕ್ಸಾಂಡರ್‌ನ ಆಡುಭಾಷೆ , ಪೂರ್ವ-ಶಾಸ್ತ್ರೀಯ ಗ್ರೀಕ್ ಭಾಷೆ ಅಥವಾ ಬೈಬಲ್‌ನ ಹೊಸ ಒಡಂಬಡಿಕೆಯನ್ನು ಮೂಲತಃ ಈ ಭಾಷೆಯಲ್ಲಿಯೇ ಬರೆದಿದ್ದರಿಂದ ಹೊಸ ಒಡಂಬಡಿಕೆಯ ಗ್ರೀಕ್ ಭಾಷೆ ಎಂದೂ ಕರೆಯುವರು.
- ಮಧ್ಯಕಾಲಿಕ ಗ್ರೀಕ್ , ಇದನ್ನು ಬೈಝಾಂಟೀನ್ ಗ್ರೀಕ್ ಎಂದೂ ಕರೆಯುವರು: 15ನೇ ಶತಮಾನದಲ್ಲಿ ಬೈಝಾಂಟೀನ್ ಸಾಮ್ರಾಜ್ಯದ ಅವನತಿಯವರೆಗೂ, ಬೈಝಾಂಟೀನ್ ಗ್ರೀಸ್‌ನ ಕಾಲದಲ್ಲಿ ಕೊಯಿನ್ ಗ್ರೀಕ್ ಭಾಷೆಯೆ ಮುಂದುವರೆಯಿತು.
ಮಾಧ್ಯಮಿಕ ಗ್ರೀಕ್ ಎಂಬುದು ವಿಭಿನ್ನ ಭಾಷೆಗಳ ಇಡೀ ಅಖಂಡತೆಗೆ ಬಳಸುವ ಹಾಗೂ ಹಲವಾರು ವಿಧಗಳಲ್ಲಿ ಆಧುನಿಕ ಗ್ರೀಕ್ನ್ನು ಸಮೀಪಿಸುತ್ತಿರುವ ಕೊಯಿನ್ ಭಾಷೆಯ ಪ್ರಾಂತೀಯ ಭಾಷೆಗಳಿಂದ ಹಿಡಿದು ಅತ್ಯುನ್ನತ ಕಲಿಕಾಮಟ್ಟದಲ್ಲಿರುವ ಶಾಸ್ತ್ರೀಯ ಸಂಸ್ಕರಿಸಲ್ಪಟ್ಟ ಭಾಷೆಗಳವರೆಗೂ ಅನ್ವಯಿಸುವ ಒಂದು ಆವರ್ತ ಪದವಾಗಿದೆ. ಲಿಖಿತಗ್ರೀಕ್ ಭಾಷೆಯ ಬಹುಭಾಗವನ್ನು ಬೈಝಾಂಟೀನ್ ಸಾಮ್ರಾಜ್ಯದ ಅಧಿಕೃತ ಭಾಷೆಯನ್ನಾಗಿ ಬಳಸಲಾಗುತ್ತಿತ್ತು.ಇದು ಲಿಖಿತ ಕೊಯಿನ್ ಭಾಷೆಯ ಸಂಪ್ರದಾಯದ ಆಧಾರದ ಮೇಲೆ ಒಂದು ಚುನಾಯಿತ ಮಾಧ್ಯಮಿಕ-ಹಂತದ ಭಾಷೆಯಾಗಿತ್ತು.
- ಆಧುನಿಕ ಗ್ರೀಕ್ : ಇದು ಮಧ್ಯಕಾಲೀನ ಗ್ರೀಕ್ ನಿಂದ ಕವಲೊಡೆದ ಭಾಷೆ, ಆಧುನಿಕ ಗ್ರೀಕ್ ಭಾಷೆಯ ಬಳಕೆಯನ್ನು ಬೈಝಾಂಟೀನ್ ಅವಧಿ ಹಾಗೂ 11ನೇ ಶತಮಾನದ ಆರಂಭದಲ್ಲಿ ಕಾಣಬಹುದು.
ಇದು ಆಧುನಿಕ ಗ್ರೀಕರು ಬಳಸುವ ಭಾಷೆಯಾಗಿದ್ದು , ಗುಣಮಟ್ಟದ ಆಧುನಿಕ ಗ್ರೀಕ್ ಭಾಷೆಯನ್ನು ಹೊರತುಪಡಿಸಿ ಇದರಹಲವಾರು ಆಡುಭಾಷೆಯ ರೂಪಗಳು ಬಳಕೆಯಲ್ಲಿವೆ
History of the Greek language (see also: Greek alphabet) |
Proto-Greek (c. 3000–1600 BC)
|
Mycenaean (c. 1600–1100 BC)
|
Ancient Greek (c. 800–330 BC) Dialects: Aeolic, Arcadocypriot, Attic-Ionic, Doric, Locrian, Pamphylian, Homeric Greek, Macedonian
|
Koine Greek (c. 330 BC–330)
|
Medieval Greek (330–1453)
|
Modern Greek (from 1453) Dialects: Calabrian, Cappadocian, Cheimarriotika, Cretan, Cypriot, Demotic, Griko, Katharevousa, Pontic, Tsakonian, Maniot, Yevanic
|
ದ್ವಿಭಾಷಾ ನೀತಿಯ ಸಂಪ್ರದಾಯ, ಪ್ರಾದೇಶಿಕ ಭಾಷೆ ಮತ್ತು ವಾಡಿಕೆಯಿಲ್ಲದ ಗ್ರೀಕ್‌ನ ಬರಹ ರೂಪಗಳ ಏಕಕಾಲಿಕ ಅಸ್ತಿತ್ವ, ಎರಡು ವಿರುದ್ಧ ಗುಣಧರ್ಮಗಳ ಪೈಪೋಟಿ ಪಂಗಡಗಳ ನಡುವೆಯೂ ಆಧುನಿಕ ಯುಗದಲ್ಲಿ ಪುನರ್ನಿಮಾಣಗೊಂಡಿತು. ಈ ಎರಡು ವಿಧಗಳು ಯಾವುವೆಂದರೆ ಆಧುನಿಕ ಗ್ರೀಕ್‌ನ ಪ್ರಾದೇಶಿಕ ಭಾಷೆಯಾದ ಡಿಮೊಟಿಕಿ ಮತ್ತು 19 ನೇ ಶತಮಾನದ ಆರಂಭದಲ್ಲಿ ಅಸ್ತಿತ್ವಕ್ಕೆ ಬಂದ ಮತ್ತು ಸಾಹಿತ್ಯ, ಆಡಳಿತ, ಕಾನೂನುಮತ್ತು ವೈಜ್ಞಾನಿಕ ಉದ್ದೇಶಗಳಿಗೆ ಆಧುನಿಕ ಗ್ರೀಕ್‌ನಲ್ಲಿ ರೂಪುಗೊಂಡ ಕಥರೆವೌಸಾ.
1976 ರಲ್ಲಿ (ನಿಯಮ 306/1976)ರಂತೆ ಡಿಮೊಟಿಕಿ ಯನ್ನು ಗ್ರೀಸ್‌ನ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿದಾಗ ದ್ವಿಭಾಷಾ ಸಮಸ್ಯೆ ಬಗೆಹರಿಯಿತು. ಎಲ್ಲಾ ಅಧಿಕೃತ ಉದ್ದೇಶಗಳಿಗೆಮತ್ತು ಶಿಕ್ಷಣದಲ್ಲಿ , ಕಥರೆವೌಸಾ ಗುಣಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಗ್ರೀಕ್ ಭಾಷೆಯ ರೂಪದಲ್ಲಿ ಇದು ಇಂದಿಗೂ ಬಳಕೆಯಲ್ಲಿದೆ.
ಚಾರಿತ್ರಿಕ ಐಕ್ಯತೆ ಮತ್ತು ಗ್ರಿಕ್ ಭಾಷೆಯ ವಿವಿಧ ಹಂತಗಳ ಮಧ್ಯೆ ಗುರುತಿಸುವಿಕೆಯನ್ನು ಮುಂದುವರೆಸುವುದಕ್ಕೆ ಕೆಲವು ಸಾರಿ ಒತ್ತು ನೀಡಲಾಗುತ್ತಿದೆ. ಇತರ ಭಾಷೆಗಳಿಗೆ ಹೋಲಿಸಿದಲ್ಲಿ ಗ್ರೀಕ್ ಭಾಷೆಯು ಶಬ್ದ ಸ್ವರೂಪದಲ್ಲಿ ಮತ್ತು ಪ್ರಾಕೃತವಾಗಿ ಅನೇಕ ಬದಲಾವಣೆಗಳಿಗೆ ಒಳಗಾಗಿದ್ದರೂ, ತನ್ನ ಚರಿತೆಯ ಪಾಚೀನ ಕಾಲದಿಂದಲೂ ಅದರ ಸಾಂಸ್ಕೃತಿಕ, ಸಾಹಿತ್ಯ ಮತ್ತು ಅಕ್ಷರ ವಿನ್ಯಾಸದ ಸಂಪ್ರದಾಯವು ಒಂದು ಹೊಸದಾದ ಉದಯೋನ್ಮುಕ ಭಾಷೆಯನ್ನು ಸುಲಭವಾಗಿ ಮಾತನಾಡಲು ಸಾಧ್ಯವಾಗುವ ಮಟ್ಟಿಗೆ ವಿಚ್ಛಿನ್ನಗೊಳಿಸಿದೆ. ಇಂದಿಗೂ ಗ್ರೀಕ್ ಭಾಷೆ ಮಾತನಾಡುವ ಜನರು ಪುರಾತನ ಗ್ರಿಕ್ ಸಾಹಿತ್ಯಗಳ ಭಾಷೆ ಒಂದು ಪರಕೀಯ ಭಾಷೆ ಎಂಬುದಕ್ಕಿಂತಲೂ ತಮ್ಮ ಸ್ವಂತ ಭಾಷೆಯ ಒಂದು ಭಾಗ ಎಂದು ಭಾವಿಸುತ್ತಾರೆ.[೧೦] ಇತರ ಭಾಷೆಗಳಿಗೆ ಹೋಲಿಸಿದಲ್ಲಿ, ಚಾರಿತ್ರಿಕ ಬದಲಾವಣೆಗಳಲ್ಲಿ ಸಾಪೇಕ್ಷವಾಗಿ ಕೊಂಚ ವ್ಯತ್ಯಾಸಗಳನ್ನು ಕೆಲವು ಸಾರಿ ಈ ಭಾಷೆಯಲ್ಲಿ ಕಾಣಬಹುದು. ಒಂದು ಅಂದಾಜಿನ ಪ್ರಕಾರ," ಹೋಮೆರಿಕ್ ಗ್ರೀಕ್ ಭಾಷೆಯು ಆಧುನಿಕ ಆಂಗ್ಲ ಭಾಷೆಗಿಂತಲೂ ಹನ್ನೆರಡನೇ ಶತಮಾನದ ಮಾಧ್ಯಮಿಕ ಆಂಗ್ಲ ಭಾಷೆ ಮತ್ತು ಡೆಮೊಟಿಕ್‌ಗೆ ಹೆಚ್ಚು ಹೋಲುತ್ತದೆ".[೧೧] ಬೈಬಲ್‌ನ ಕೊಯೆನಿಕ್ ಗ್ರೀಕ್‌ನ ನಂತರದ ಪುರಾತನ ಗ್ರೀಕ್ ಗ್ರಂಥಗಳು ಈಗಿನ ವಿದ್ಯಾವಂತರು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಇವೆ. ಲ್ಯಾಟಿನ್ ಭಾಷೆಯಲ್ಲಿ ಆದಂತೆ ಗ್ರೀಕ್ ಭಾಷೆಯು ರಾಷ್ಟ್ರೀಯ ಉಪಭಾಷೆಗಳ ಒಂದು ಗುಂಪಾಗಿ ಒಡೆಯದೇ ಒಂದಾಗಿ ಉಳಿದಿದೆ. ಈ ಅಂಶವು ಚಾರಿತ್ರಿಕ ಏಕೀಭವನದ ಗ್ರಹಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ.
ಗ್ರೀಕ್ ಶಬ್ಧಗಳನ್ನು ಹೆಚ್ಚಾಗಿ ಇಂಗ್ಲಿಷ್ ಅನ್ನು ಒಳಗೊಂಡು ಇತರೆ ವಿಷಯಗಳಲ್ಲಿಯೂ ಬಳಸಲಾಗುತ್ತದೆ : ಗಣಿತಶಾಸ್ತ್ರ , ಖಗೋಳವಿಜ್ಞಾನ , ಪ್ರಜಾಪ್ರಭುತ್ವ , ತತ್ವಶಾಸ್ತ್ರ , ಪ್ರದರ್ಶನಕಲೆ , ಅಂಗಸಾಧನೆ, ರಂಗಭೂಮಿ, ಭಾಷಣ ಕಲೆ ಇತ್ಯಾದಿ. ಹೆಚ್ಚಾಗಿ, ಗ್ರೀಕ್ ಶಬ್ಧಗಳು ಮತ್ತು ಶಬ್ಧ ಭಾಗಗಳು ನಾಣ್ಯಯುಗಗಳ ಆಧಾರದಿಂದ ಮುಂದುವರೆದಿವೆ: ಮಾನವಶಾಸ್ತ್ರ , ಛಾಯಾಚಿತ್ರ , ಒಂದೇ ಅಣುಸೂತ್ರವಿರುವ ಆದರೆ ಪರಮಾಣುಗಳ ಜೋಡಣೆ ಭಿನ್ನವಾಗಿರುವ ರಾಸಾಯನಿಕ ಸಂಯುಕ್ತ , ಜೈವಿಕಯಂತ್ರಶಾಸ್ತ್ರ , ಚಲನಚಿತ್ರ, ಭೌತಶಾಸ್ತ್ರ ಇತ್ಯಾದಿ. 12% ರಷ್ಟು ಆಂಗ್ಲ ಶಬ್ದಕೋಶವು ಗ್ರೀಕ್ ಮೂಲ ವನ್ನು ಹೊಂದಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ ಅನೇಕ ಗ್ರೀಕ್ ಪದಳು ಆಂಗ್ಲ ಮೂಲವನ್ನು ಹೊಂದಿದೆ.[೧೨]
ಭೌಗೋಳಿಕ ಪ್ರಸರಣ ಹಂಚಿಕೆ
ಬದಲಾಯಿಸಿ[೧] ಪ್ರಮುಖವಾಗಿ ಗ್ರೀಸ್ ಮತ್ತು ಸಿಪ್ರಸ್‌ನಲ್ಲಿ ಗ್ರೀಕ್ ಭಾಷೆಯನ್ನು ಮಾತನಾಡುವ ಸುಮಾರು 13.1 ಮಿಲಿಯನ್ ಜನರಿದ್ದು, ಪ್ರಪಂಚಾದ್ಯಂತ ಗ್ರೀಕ್‌ನ ಹರಿದು ಹಂಚಿಹೋದ ಜನಾಂಗ ದ ದೊಡ್ಡ ಭಾಗ ಈ ಭಾಷೆಯನ್ನು ಮಾತನಾಡುತ್ತಾರೆ. ಸಾಂಪ್ರದಾಯಿಕ ಗ್ರೀಕ್ ಮಾತನಾಡುವ ದೇಶಗಳೆಂದರೆ ಅಲ್ಬೇನಿಯಾ, ರಿಪಬ್ಲಿಕ್ ಆಫ್ ಮೆಸಿಡೋನಿಯಾ, ಬಲ್ಗೇರಿಯಾ ಮತ್ತು ಟರ್ಕಿ, ಅಲ್ಲದೆ ಕಪ್ಪು ಸಮುದ್ರ ಪ್ರದೇಶದ ಸುತ್ತಲಿರುವ ಹಲವಾರು ದೇಶಗಳಾದ ಉಕ್ರೇನ್, ರಷಿಯಾ, ರೊಮೇನಿಯಾ, ಜಾರ್ಜಿಯಾ, ಅರ್ಮೇನಿಯಾ ಹಾಗೂ ಅಝೆರ್ಬೈಜನ್, ಮತ್ತು ಮೆಡಿಟರೇನಿಯನ್ ಸಮುದ್ರದ ಸುತ್ತಮುತ್ತ, ದಕ್ಷಿಣ ಇಟಲಿ, ಇಸ್ರೇಲ್, ಈಜಿಪ್ಟ್, ಲೆಬನಾನ್ ಹಾಗೂ ಮೆಡಿಟರೇನಿಯನ್ ಸಮುದ್ರದ ಪೂರ್ವಭಾಗವೂ ಸೇರಿದಂತೆ ಪುರಾತನ ಕರಾವಳಿ ನಗರಗಳು. ಪಶ್ಚಿಮ ಯೂರೋಪ್‌ನಲ್ಲಿ ಗ್ರೀಕ್‌ನಿಂದ ವಲಸೆ ಬಂದವರು ಈ ಭಾಷೆಯನ್ನು ಮಾತನಾಡುತ್ತಾರೆ, ವಿಶೇಷವಾಗಿ ಯುನೈಟೆಡ್ ಕಿಂಗ್‌ಡಮ್ ಮತ್ತು ಜರ್ಮನಿ, ಕೆನಡಾದಲ್ಲಿ ಮತ್ತು ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಅಲ್ಲದೆ ಅರ್ಜೆಂಟೈನಾ, ಬ್ರೆಝಿಲ್ ಮತ್ತು ಇತರೆ ದೇಶಗಳಲ್ಲಿಯೂ ಮಾತನಾಡುತ್ತಾರೆ.[ಸೂಕ್ತ ಉಲ್ಲೇಖನ ಬೇಕು]
ಅಧಿಕೃತ ಸ್ಥಿತಿ
ಬದಲಾಯಿಸಿಗ್ರೀಕ್ ಭಾಷೆಯು ಗ್ರೀಸ್‌ನ ಅಧಿಕೃತ ಭಾಷೆಯಾಗಿದ್ದು, ಹೆಚ್ಚು ಕಡಿಮೆ ಅಲ್ಲಿನ ಎಲ್ಲಾ ಜನರು ಈ ಭಾಷೆಯನ್ನು ಮಾತನಾಡುವವರಾಗಿದ್ದಾರೆ.[೧೩] 1974ರ ಟರ್ಕ್ ದಾಳಿ ಯಿಂದ ಸಿಪ್ರಸ್ ಗಣರಾಜ್ಯದಲ್ಲಿ ಟರ್ಕ್ ಭಾಷೆ ಅಧಿಕೃತವಾಗಿ ಮಿತ ಬಳಕೆಯಲ್ಲಿದ್ದಾಗಿಯೂ, ಇದು ಟರ್ಕಿಶ್ ಭಾಷೆಯೊಂದಿಗೆ ಸಿಪ್ರಸ್‌ನ ಅಧಿಕೃತ ಭಾಷೆಯಾಗಿದೆ. ಯೂರೋಪ್ ಒಕ್ಕೂಟದಲ್ಲಿ ಗ್ರೀಸ್ ಮತ್ತು ಸಿಪ್ರಸ್ ತನ್ನ ಸದಸ್ಯತ್ವವನ್ನು ಹೊಂದಿರುವುದರಿಂದ , 23 ಅಧಿಕೃತ ಭಾಷೆಗಳ ಸಂಸ್ಥೆಯಲ್ಲಿ ಗ್ರೀಕ್ ಭಾಷೆಯೂ ಕೂಡ ಒಂದಾಗಿದೆ.[೫] ಅಷ್ಟೇ ಅಲ್ಲದೇ , ಇಟಿಲಿ ಮತ್ತು ಆಲ್ಬೇನಿಯಾದ ಕೆಲವು ಭಾಗಗಳು},[೬] ಮತ್ತು ಅರಮೇನಿಯಾ ಮತ್ತು ಉರ್ಕೇನ್ಗಳಲ್ಲಿ ಗ್ರೀಕ್ ಭಾಷೆಯನ್ನು ಅಧಿಕೃತವಾಗಿ ಒಂದು ಅಲ್ಪಸಂಖ್ಯಾತ ಭಾಷೆಯನ್ನಾಗಿ ಗುರುತಿಸಲಾಗಿದೆ.[೭]
ಭಾಷೆಯ ಇತಿಹಾಸದುದ್ದಕ್ಕೂ ಇರುವ ಗುಣಲಕ್ಷಣಗಳು
ಬದಲಾಯಿಸಿಭಾಷೆಯ ಧ್ವನಿಶಾಸ್ತ್ರ, ಆಕೃತಿಮಶಾಸ್ತ್ರ , ವಾಕ್ಯರಚನೆ, ಮತ್ತು ಶಬ್ದಕೋಶವು ಪ್ರಾಚೀನಕಾಲದ ಭಾಷೆಯಿಂದ ಆಧುನಿಕ ಅವಧಿವರೆಗಿನ ಇಡೀ ಭಾಷೆಯ ಧೃಡೀಕರಣದ ಬಗ್ಗೆ ಸಂರಕ್ಷಣಾತ್ಮಕ ಮತ್ತು ನವೀನತೆಯ ಒಲವನ್ನು ತೋರಿಸುತ್ತವೆ. ಇಂತಹ ಎಲ್ಲಾ ಕಾಲಮಾನಗಳ ಸಾಂಪ್ರದಾಯಿಕ ವಿಭಜನೆ, ಸಾಪೇಕ್ಷವಾಗಿ ನಿರಂಕುಶ ಮತ್ತು ವಿಶೇಷವಾಗಿ ಇಂತಹ ಎಲ್ಲಾ ಅವಧಿಗಳಿಂದಲೂ , ಪ್ರಾಚೀನ ಗ್ರೀಕ್ ಭಾಷೆಯು ದೊಡ್ಡ ಪ್ರಮಾಣದಲ್ಲಿ ಎರವಲು ಪಡೆದು ಅತ್ಯುನ್ನತ ಘನತೆಯನ್ನು ಸಾಧಿಸಿದೆ.
ಚರಿತ್ರೆಯುದ್ದಕ್ಕೂ ಗ್ರೀಕ್‌ನ ಪಠ್ಯಕ್ರಮ ರಚನೆಯು ಅಲ್ಪ ಪ್ರಮಾಣದ ಭಿನ್ನತೆಯನ್ನು ಹೊಂದಿದೆ: ಗ್ರೀಕ್ ಭಾಷೆಯು ಸಮ್ಮಿಶ್ರಿತ ಪಠ್ಯಕ್ರಮವನ್ನು ಹೊಂದಿದ್ದು, ಸಂಕೀರ್ಣವಾದ ಪಠ್ಯಕ್ರಮ, ಆದರೆ ನಿಯಂತ್ರಿತ ಮುಕ್ತಾಯಗಳಿಗೆ ಅವಕಾಶ ಕಲ್ಪಿಸುತ್ತದೆ. ಇದು ಮೌಖಿಕ ಸ್ವರಗಳ ಹಾಗೂ ವಿಭಿನ್ನ ವ್ಯಂಜನಗಳ ಒಂದು ಸ್ಥಿರ ಗುಂಪನ್ನು ಒಳಗೊಂಡಿದೆ. ಹೆಲೆನಿಸ್ಟಿಕ್ ಮತ್ತು ರೊಮ್ ಅವಧಿಗಳಲ್ಲಿ ( ವಿವರಗಳಿಗಾಗಿ ಕೊಯಿನ್ ಉಚ್ಚಾರಣಾ ಶಾಸ್ತ್ರ ವನ್ನು ನೋಡಿರಿ) ಧ್ವನಿ ಶಾಸ್ತ್ರದಲ್ಲಿ ಕಂಡು ಬಂದ ಪ್ರಮುಖ ಬದಲಾವಣೆಗಳೆಂದರೆ
- ಉಚ್ಚ ಸ್ವರ ಉಚ್ಚಾರಣೆ ಗೆ ಬದಲಾಗಿ ಒತ್ತು ಉಚ್ಚಾರಣೆಯು ಬಳಕೆಗೆ ಬಂದದ್ದು.
- ಸ್ವರಗಳು ಮತ್ತು ಸಂಯುಕ್ತ ಸ್ವರ ಪದ್ದತಿಯ ಸರಳೀಕರಣ: ಇದು ಸ್ವರ ಅಳತೆಗಳ ಭಿನ್ನತೆಯ ನಷ್ಟ, ಸಂಯುಕ್ತ ಸ್ವರಗಳ ಒಗ್ಗೂಡುವಿಕೆಮತ್ತು /i/ ({ ({3}ಅಯೋಟಾಸಿಸಮ್) ನ ಕಡೆಗೆ ಸ್ವರಗಳ ಸರಪಳಿ ರೂಪಾಂತರ ದ ಹಲವು ಹಂತಗಳನ್ನು ಒಳಗೊಂಡಿದೆ.
- ನಿಶಬ್ದ ಮಹಾಪ್ರಾಣ ಸ್ಥಗಿತ ವ್ಯಂಜನ /pʰ/ ಗಳ ಬೆಳವಣಿಗೆ ಮತ್ತು /tʰ/ ನಿಶಬ್ದ ಫ್ರಿಕೇಟಿವ್‌ಗಳು ಕ್ರಮವಾಗಿ /f/ ಮತ್ತು /θ/, ಮತ್ತು /kʰ/ ರಿಂದ /x/ ವರೆಗಿನ ಇದೇ ರೀತಿಯ ಬೆಳವಣಿಗೆಗಳು ನಂತರದಲ್ಲಿ ಉಂಟಾಗಿರಬಹುದು( ಈ ಶಾಬ್ದಿಕ ಬದಲಾವಣೆಗಳು ಅಕ್ಷರವಿನ್ಯಾಸದಲ್ಲಿ ಕಂಡುಬಂದಿಲ್ಲ : ಪ್ರಾಚೀನ ಮತ್ತು ನಂತರದ ಶಬ್ದಗಳನ್ನು φ, θ, ಮತ್ತು χ ಗಳಿಂದ ಸೂಚಿಸಲಾಗುತ್ತದೆ.
)
- ಪ್ರಾಯಶಃ ಶಾಬ್ಧಿಕ ಸ್ಥಗಿತ ವ್ಯಂಜನಗಳ ಬೆಳವಣಿಗೆ /b/ ಅವುಗಳ ಶಾಬ್ದಿಕ ಫ್ರಿಕೇಟ್ ಪ್ರತಿರೂಪಗಳಿಗೆ /β/ ಕಾರಣವಾಗಿರಬಹುದು.
ಈ ಎಲ್ಲಾ ಹಂತಗಳಲ್ಲಿ , ಗ್ರೀಕ್ ಭಾಷೆಯ ಆಕೃತಿಮ ಶಾಸ್ತ್ರವು ವ್ಯಾಪಕವಾದ ಮೂಲ ಆದಿಪ್ರತ್ಯಯಗಳ ವ್ಯವಸ್ಥೆಯನ್ನು ಹೊಂದಿದೆ. ಅಷ್ಟೇ ಅಲ್ಲದೆ ಸೀಮಿತ ಆದರೆ ಸಂಯುಕ್ತ ಹಾಗೂ ಶ್ರೀಮಂತ ವಿಭಕ್ತಿ ಪ್ರತ್ಯಯಗಳ ವ್ಯವಸ್ಥೆಯನ್ನೂ ಸಹ ತೋರಿಸುತ್ತದೆ. ಆದರೆ ಆಕೃತಿಮ ವಿಧಾನಗಳು ಬಹಳ ಕಾಲದವರೆಗೆ ಸ್ಥಿರವಾಗಿದ್ದು, ವಿಶೇಷವಾಗಿ ನಾಮಧೇಯ ಮತ್ತು ಕ್ರಿಯಾ ಪದಗಳ ವ್ಯವಸ್ಥೆಗಳಲ್ಲಿ ಆಕೃತಿಮ ಬದಲಾವಣೆಗಳು ಕಂಡುಬರುತ್ತವೆ. ನಾಮಧೇಯ ಆಕೃತಿಮ ಶಾಸ್ತ್ರದಲ್ಲಾದ ಪ್ರಮುಖ ಬದಲಾವಣೆಗಳು ವಿಭಕ್ತಿಗಳ ನಷ್ಟಕ್ಕೆ ಕಾರಣವಾದವು( ಷಷ್ಠಿ ವಿಭಕ್ತಿ ಇದರ ಕಾರ್ಯ ನಿರ್ವಹಿಸುತ್ತದೆ); ಕ್ರಿಯಾಪದದಲ್ಲಿ, ವಾಗುಪಚಯದ ರೂಪಗಳಲ್ಲಿ ಹೊಸ ಉದಯದೊಂದಿಗೆ ಆದ ಪ್ರಮುಖ ಬದಲಾವಣೆಯೆಂದರೆ ಭಾವಪದಗಳ ನಷ್ಟ.
ಸರ್ವನಾಮಗಳು ಪುರುಷ ( ಪ್ರಥಮ,ದ್ವಿತೀಯ,ತೃತೀಯ) ವಚನ (ಪ್ರಾಚೀನ ಭಾಷೆಗಳಲ್ಲಿ ಏಕವಚನ, ದ್ವಿವಚನಮತ್ತು ಬಹುವಚನ; ನಂತರದಲ್ಲಿ ಏಕವಚನಮತ್ತು ಬಹುವಚನಗಳು ಮಾತ್ರ ಬಳಕೆಗೆ ಬಂದವು)ಮತ್ತು ಲಿಂಗ ( ಪುಲ್ಲಿಂಗ,ಸ್ತ್ರೀಲಿಂಗಮತ್ತು ನಪುಂಸಕಲಿಂಗ)ಮತ್ತು ವಿಭಕ್ತಿಗಳ ಅವನತಿ (ಮೊದಲ ಆರು ವಿಭಕ್ತಿಗಳು ಈಗ ನಾಲ್ಕಕ್ಕೆ ಇಳಿದಿವೆ).[೧೪] ನಾಮಪದ, ಉಪಪದ ಮತ್ತು ನಾಮವಿಶೇಷಣಗಳಲ್ಲಿ ಈ ಎಲ್ಲಾ ಭಿನ್ನತೆಗಳನ್ನು ಕಾಣಬಹುದು. ಗುಣವಾಚಕ ಮತ್ತು ಭವಿಷ್ಯಸೂಚಕಗಳೆರಡೂ ನಾಮಪದದೊಂದಿಗೆ ಹೊಂದಿಕೊಳ್ಳುತ್ತವೆ.
ಗ್ರೀಕ್ ಭಾಷೆಯ ಕ್ರಿಯಾಪದಗಳ ವಿಭಕ್ತಿ ಪ್ರತ್ಯಯಗಳ ಗುಂಪುಗಳು ತನ್ನ ಭಾಷಾ ಚರಿತ್ರೆಯುದ್ದಕ್ಕೂ ಬದಲಾಗದೆ ಹಾಗೆಯೇ ಉಳಿದಿವೆ. ಇವುಗಳ ಪ್ರತಿಯೊಂದು ಗುಂಪಿನಲ್ಲಿಯೂ ಮತ್ತು ಅವುಗಳ ಆಕೃತಿಮ ಶಾಸ್ತ್ರದಲ್ಲಿ ಗಣನೀಯವಾದ ಬದಲಾವಣೆಗಳು ಕಂಡು ಬಂದರೂ ತನ್ನ ಆಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ. ಈ ಕೆಳಗಿನವುಗಳಿಗೆ ಗ್ರೀಕ್ ಕ್ರಿಯಾಪದಗಳು ಸಂಯೋಜಿತ ವಿಭಕ್ತಿ ರೂಪಗಳನ್ನು ಹೊಂದಿವೆ:
- ಪುರುಷ — ಪ್ರಥಮ, ದ್ವಿತೀಯ, ತೃತೀಯ;
- ಆಧುನಿಕ ಗ್ರೀಕ್: ಇದು ಕೂಡಾ ದ್ವಿತೀಯ ಪುರುಷ
- ವಚನ — ಏಕವಚನ, ಬಹುವಚನ;
- ಪುರಾತನ ಗ್ರೀಕ್: ಉಭಯ (ವಿರಳ)
- ಕಾಲ — ಪುರಾತನ ಗ್ರೀಕ್: ವರ್ತಮಾನ, ಭೂತ, ಭವಿಷ್ಯ;
- ಆಧುನಿಕ ಗ್ರೀಕ್: ಭೂತ ಮತ್ತು ಭೂತವಲ್ಲದ (ಸುತ್ತಿಬಳಸಿ ಭವಿಷ್ಯವನ್ನು ಹೇಳುವ ರೀತಿ)
- ರೂಪ — ಪುರಾತನ ಗ್ರೀಕ್: ಅಪೂರ್ಣ, ಪರಿಪೂರ್ಣ (ಸಾಂಪ್ರದಾಯಿಕವಾಗಿ ಅವೊರಿಸ್ಟ್ ಎನ್ನಲಾಗುವುದು), ಪೂರ್ಣ (ಕೆಲವುಬಾರಿಪರಿಪೂರ್ಣ ಎನ್ನಲಾಗುವುದು; ನೋಟ್ ಅಬೌಟ್ ಟರ್ಮಿನಾಲಜಿಯನ್ನೂ ನೋಡಿ);
- ಆಧುನಿಕ ಗ್ರೀಕ್: ಪರಿಪೂರ್ಣ ಮತ್ತು ಅಪೂರ್ಣ
- ಧಾತುರೂಪ — ಪುರಾತನ ಗ್ರೀಕ್: ನಿಶ್ಚಯಾರ್ಥಕ, ಸಂಭಾವನಾರ್ಥಕ, ಆಜ್ಞಾರ್ಥ, ಹಾಗೂ ಇಚ್ಛಾರ್ಥಕ ;
- ಆಧುನಿಕ ಗ್ರೀಕ್: ನಿಶ್ಚಯಾರ್ಥಕ, ಸಂಭವನಾರ್ಥಕ,[೧೫] ಹಾಗೂ ಆಜ್ಞಾರ್ಥ (ಇದರೆ ಮಾದರಿಗಳನ್ನು ಸುತ್ತಿಬಳಸಿ ರಚಿಸಲಾಗುತ್ತದೆ)
- ಶಬ್ಧ — ಪುರಾತನ ಗ್ರೀಕ್: ಸಕ್ರಿಯ, ಮಧ್ಯ, ಮತ್ತು ಜಡ;
- ಆಧುನಿಕ ಗ್ರೀಕ್: ಸಕ್ರಿಯ ಮತ್ತು ಮಧ್ಯ-ಜಡ
ಗ್ರೀಕ್ ಭಾಷೆಯ ಪದವಿನ್ಯಾಸದ ಹಲವಾರು ಅಂಶಗಳು ಸ್ಥಿರವಾಗಿ ಉಳಿದಿವೆ: ಕ್ರಿಯಾಪದಗಳು ಅವುಗಳ ಕರ್ತೃ ಪದಗಳಿಗೆ ಮಾತ್ರ ಹೊಂದಾಣಿಕೆಯಾಗುತ್ತವೆ, ಪ್ರಚಲಿತ ವಿಭಕ್ತಿ ಪ್ರತ್ಯಯಗಳ ಬಳಕೆ ದೊಡ್ಡ ಪ್ರಮಾಣದಲ್ಲಿ ಬದಲಾಗದೆ ಹಾಗೇ ಉಳಿದಿವೆ( ಕರ್ತೃಮತ್ತು ವಿಶೇಷಣಗಳಿಗೆ ಪ್ರಥಮಾ ವಿಭಕ್ತಿಯಾಗಿಯೂ, ಕರ್ಮಪದ, ಬಹುಪಾಲು ಕ್ರಿಯಾಪದ ಹಾಗೂ ಉಪಸರ್ಗಗಳಿಗೆ ದ್ವಿತಿಯಾ ವಿಭಕ್ತಿಯಾಗಿಯೂ ಮತ್ತು ಸ್ವತಂತ್ರ ಪದಗಳಿಗೆ ತೃತೀಯಾ ವಿಭಕ್ತಿಯಾಗಿಯೂ ಇವೆ), ಉಪಪದಗಳು ಪೂರ್ವ ನಾಮಪದಗಳಾಗಿ, ಸಾಪೇಕ್ಷ ಉಪವಾಕ್ಯಗಳು ಅವು ರೂಪಾಂತರಗೊಂಡ ನಾಮಪದಗಳಾಗಿ ಮತ್ತು ಸರ್ವನಾಮಗಳು ಆರಂಭಿಕ ಉಪವಾಕ್ಯಗಳಾಗಿ ಬಳಕೆಯಾಗುತ್ತವೆ. ಆದರೆ ಆಕೃತಿಮ ಶಾಸ್ತ್ರದ ಬದಲಾವಣೆಗಳು ಪದವಿನ್ಯಾಸದಲ್ಲಿ ಪರ್ತಿರೂಪಗಳನ್ನೂ ಹೊಂದಿವೆ. ಅಷ್ಟೇ ಅಲ್ಲದೆ ಪ್ರಾಚೀನ ವಾಕ್ಯರಚನೆ ಮತ್ತು ಆಧುನಿಕ ಭಾಷೆಯರೂಪದ ನಡುವೆ ಗಣನೀಯವಾದ ವ್ಯತ್ಯಾಸಗಳು ಕಂಡು ಬರುತ್ತವೆ. ಪ್ರಾಚೀನ ಗ್ರೀಕ್ ಭಾಷೆಯು ಕೃದಂತ ರಚನೆಗಳ ಉಪಯೋಗವನ್ನು ಹೆಚ್ಚಾಗಿ ಮಾಡುತ್ತಿತ್ತು, ಇದು ಭಾವ ಪದಗಳ ರಚನೆಯನ್ನೂ ಒಳಗೊಂಡಿತ್ತು. ಆದರೆ ಆಧುನಿಕ ವಿಧಾನಗಳು ಭಾವ ಪದಗಳನ್ನು ಸಂಪೂರ್ಣವಾಗಿ ಬಿಟ್ಟಿವೆ( ಹೊಸ ವಾಗುಪಚಯದ ರಚನೆಗಳಿಗೆ ಬದಲಾಗಿ) ಮತ್ತು ಇವುಗಳನ್ನು ಹೆಚ್ಚು ನಿರ್ಭಂದಿತವಾಗಿ ಬಳಸಲಾಗುತ್ತಿತ್ತು. ವಿಭಕ್ತಿ ಪ್ರತ್ಯಯ ಬಳಕೆಯ ನಷ್ಟವನ್ನು ಪರೋಕ್ಷ ಉಪಸರ್ಗ ಕರ್ಮಪದಗಳು ತುಂಬಿವೆ (ಮತ್ತು ತೃತೀಯ ವಿಭಕ್ತಿಯ ನೇರವಾದ ಬಳಕೆ ಕೂಡ ಇದನ್ನು ಗುರುತಿಸುತ್ತದೆ) ಪುರಾತನ ಗ್ರೀಕ್ ಭಾಷೆಯಲ್ಲಿ ಕ್ರಿಯಾಪದವು ಅಂತಿಮವಾಗಿತ್ತು, ಆದರೆ ಆಧುನಿಕ ಭಾಷೆಯಲ್ಲಿ ಪದಗಳ ಅನುಕ್ರಮವು VSO ಅಥವಾ SVO ಆಗಿರುತ್ತದೆ.
ಗ್ರೀಕ್ ಭಾಷೆಯು ತನ್ನ ವ್ಯಾಪಕವಾದ ಶಬ್ದಕೋಶದಿಂದಾಗಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಪುರಾತನ ಗ್ರೀಕ್ ಶಬ್ದಕೋಶದ ಬಹುಪಾಲು ವಂಶಪಾರಂಪರೆಯಿಂದ ಬಂದಿದೆ. ಆದರೆ ಇದು ಪ್ರೋಟೊ-ಗ್ರೀಕರ ಆಗಮನಕ್ಕಿಂತ ಮೊದಲು ಇದ್ದ ಜನರ ಭಾಷೆಗಳಿಂದ ಪಡೆದ ಎರವಲುಗಳನ್ನು ಒಳಗೊಂಡಿಲ್ಲ. ಇಂಡೋ-ಯೂರೋಪಿಯನ್ ಮೂಲವಲ್ಲದ ಪದಗಳನ್ನು ಮೈಸೀಲಿಯನ್ ಅವಧಿಯ ಪ್ರಾರಂಭದಲ್ಲಿ ಕಾಣಬಹುದು; ಇವು ಗ್ರೀಕ್ ಸ್ಥಳವಾಚಕಗಳ ಬಹುದೊಡ್ಡ ಪ್ರಮಾಣದ ಸಂಖ್ಯೆಯನ್ನು ಹೊಂದಿವೆ. ಆಧುನಿಕ ಗ್ರೀಕ್ ಶಬ್ದಕೋಶದ ಬಹುಪಾಲು ಪುರಾತನ ಗ್ರೀಕ್ ಭಾಷೆಯಿಂದ ನೇರವಾಗಿ ವಂಶಪಾರಂಪರೆಯಿಂದ ಬಂದಿದೆ.ಆದರೂ ಕೆಲವು ಸನ್ನಿವೇಶಗಳಲ್ಲಿ ಕೆಲವು ಪದಗಳು ಭಿನ್ನ ಅರ್ಥವನ್ನು ಕೊಡುತ್ತವೆ. ಪರಕೀಯ ಮೂಲದ ಪದಗಳು ಪ್ರಮುಖವಾಗಿ ಲ್ಯಾಟಿನ್, ವೆನೆಟಿಯನ್ ಮತ್ತು ಟರ್ಕಿ ಭಾಷೆಗಳಿಂದ ಪ್ರವೇಶ ಮಾಡಿವೆ. ಪ್ರಾಚೀನಕಾಲಗಳ ಗ್ರೀಕ್ ಭಾಷೆಯಲ್ಲಿ, ಎರವಲು ಪದಗಳು ಅರ್ಜಿತ ಗ್ರೀಕ್ ಪದಗಳಾಗಿ ಪರಭಾಷೆಯ ಮೂಲರೂಪವನ್ನು ಮಾತ್ರ ಉಳಿಸಿದವು. ವಿಶೇಷವಾಗಿ ಫ್ರೆಂಚ್ ಮತ್ತು ಆಂಗ್ಲ ಭಾಷೆಯಂತಹ ಆಧುನಿಕ ಎರವಲುಗಳಿಂದ (20ನೇ ಶತಮಾನದ ನಂತರ) ಬಂದ ಪದಗಳಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲಿಲ್ಲ.
ವರ್ಗೀಕರಣ
ಬದಲಾಯಿಸಿಗ್ರೀಕ್ ಇಂಡೋ-ಯೂರೋಪ್ ಭಾಷೆಗಳ ಒಂದು ಸ್ವತಂತ್ರ ಭಾಗವಾಗಿದೆ. ಇದಕ್ಕೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿರಬಹುದಾದ ಪುರಾತನ ಭಾಷೆಗಳಾದ, ಪುರಾತನ ಮೊಸೆಡೊನಿಯನ್ (ಕೆಲವು ಭಾಷಾಶಾಸ್ತ್ರದ ಪಂಡಿತರು ಇದನ್ನು ಗ್ರೀಕ್‌ನ ಪ್ರಾಂತಭಾಷೆ ಎಂದು ಸೂಚಿಸಿದರು) ಮತ್ತು ಪ್ರಿಜಿಯನ್‌ಗಳನ್ನು, ಹೋಲಿಕೆಗೆ ಅಗತ್ಯವಾದ ವಿವರಣೆಗಳನ್ನು ಒದಗಿಸುವಂತೆ ದಾಖಲಿಸಲಾಗಿಲ್ಲ. ಕೆಲವು ಇಂಡೊ-ಯುರೋಪಿಯನ್ನರು ಗ್ರೀಕ್, ತದ್ರೂಪ ಇಂಡೊ-ಯುರೋಪಿನ ಭಾಷೆಗಳಲ್ಲಿ ಆರ್ಮೆನಿಯಾದ (ಗ್ರಾಯ್ಕೊ-ಆರ್ಮೆನಿಯಾವನ್ನು ಸಹ ನೋಡಿ) ಮತ್ತು ಇಂಡೊ-ಇರಾನಿಯ ಭಾಷೆಗಳಿಗೆ (ಗ್ರಾಯ್ಕೊ-ಆರ್ಯಾನ್‌ನ್ನು ಸಹ ನೋಡಿ) ಬಹಳ ಹತ್ತಿರದ ಸಂಬಂಧವನ್ನು ಹೊಂದಿದೆ ಎಂದು ಹೇಳಿಕೊತ್ತಿದ್ದರು.[೧೬][೧೭][೧೮]
ಬರವಣಿಗೆಯ ಪದ್ಧತಿ
ಬದಲಾಯಿಸಿಲೀನಿಯರ್ ಬಿ ಅನ್ನುವುದು ಮೈಸಿನೇಯನ್ ಗ್ರೀಕ್ ಅನ್ನು ಬರೆಯಲು ಉಪಯೋಗಿಸಿದ ಮೊದಲ ಲಿಪಿ ಆಗಿತ್ತು. ಇದು ಮೊದಲೇ ಅಂದರೆ ಕ್ರಿಸ್ತ ಪೂರ್ವ 15ನೆಯ ಶತಮಾನದಲ್ಲಿ ಪ್ರಮಾಣೀಕರಿಸಿದ, ಆರಂಭದಲ್ಲೇ ಪ್ರಸಿದ್ದವಾದ ಗ್ರೀಕ್‌ನ ರಚನೆಯಾಗಿದೆ (ಇದರ ಪೂರ್ವಗಾಮಿ, ಲೀನಿಯರ್ ಎನ, ಗೂಡಾರ್ಥವನ್ನು ಈ ದಿನದ ವರೆಗೂ ತಿಳಿದಿರಲಿಲ್ಲ). ಮೂಲತಃ ಇದು ಕಾಗುಣಿತವಾಗಿದ್ದು, ಅಂತಿಮವಾಗಿ ಅದರ ಗೂಡಾರ್ಥವನ್ನು 1950ರ ದಶಕದಲ್ಲಿ ಮೈಚಲ್ ವೆಂಟ್ರೀಸ್ ಮತ್ತು ಜಾಹ್ನ್ ಚಾಂದ್‌ವಿಕ್ ರವರಿಂದ ಬಿಡಿಸಿ ಹೇಳಲಾಗಿತ್ತು. ಗ್ರೀಕ್ ಬಾಷೆಗಳನ್ನು ಬರೆಯಲು ಉಪಯೋಗಿಸಿದ ಇದೇ ತರಹದ ಮತ್ತೊಂದು ಪದ್ದತಿ ಎಂದರೆ ಸಿಪ್ರಿಯೋಟ್ ಕಾಗುಣಿತ ಆಗಿದ್ದು (ಹಾಗು ಮಧ್ಯದ ಸಿಪ್ರೊ-ಮಿನೊಯನ್ ಕಾಗುಣಿತದ ಮುಖಾಂತರ ಲೀನಿಯರ್ ಎನ ಗುಂಪಿನದ್ದಾಗಿದೆ), ಇದು ಲೀನಿಯರ್ ಬಿಗೆ ಬಹಳ ಹತ್ತಿರದ ಸಂಬಂಧ ಹೊಂದಿದೆ ಆದರೆ ಶಬ್ದಗಳ ಅನುಕ್ರಮವನ್ನು ಪ್ರತಿಬಿಂಬಿಸಲು ಒಂದು ರೀತಿಯ ವಿಭಿನ್ನ ಪಠ್ಯಕ್ರಮ ಸಂಪ್ರದಾಯಗಳನ್ನು ಉಪಯೋಗಿಸುತ್ತದೆ. ಕ್ರಿಸ್ತ ಪೂರ್ವ 11ನೆಯ ಶತಮಾನದಿಂದ ಶಾಸ್ತ್ರೀಯ ಅವಧಿಯ ಕೊನೆಯಲ್ಲಿನ ಇದರ ಕ್ರಮೇಣ ಪರಿತ್ಯಾಗದ ವರೆಗೂ, ಸಿಪ್ರಿಯೋಟ್ ಕಾಗುಣಿತವನ್ನು ಗ್ರೀಕ್ ಅಕ್ಷರಮಾಲೆ ಗುಣಮಟ್ಟದ ಅನುಮೋದನೆಯಲ್ಲಿ ಸಿಪ್ರುಸ್‌ನಲ್ಲಿ ಪ್ರಮಾಣೀಕರಿಸಲಾಗಿದೆ.
ಸುಮಾರು ಕ್ರಿಸ್ತ ಪೂರ್ವ 9ನೆಯ ಶತಮಾನದಲ್ಲಿ ಗ್ರೀಕ್‌ನ್ನು ಗ್ರೀಕ್ ಅಕ್ಷರ ಮಾಲೆಯಲ್ಲಿ ಬರೆಯಲಾಗಿತ್ತು. ಇದನ್ನು ಸ್ವರಾಕ್ಷರಗಳನ್ನು ಪ್ರತಿಬಿಂಬಿಸಲು ನಿರ್ದಿಷ್ಟ ಅಕ್ಷರಗಳನ್ನು ಸೇರಿಸಿಕೊಳ್ಳುವ ನಾವೀನ್ಯತೆಯೊಂದಿಗೆ, ಫೋನೆಮಿಕ್ (ಧ್ವನಿಯ) ಫೀನೀಸಿಯನ್ ಅಕ್ಷರಗಳನ್ನು ಪರಿವರ್ತಿಸುವುದರ ಮೂಲಕ ರಚಿಸಲಾಗುತ್ತದೆ. ಶಾಸ್ತ್ರೀಯ ಗ್ರೀಕ್‌ನಲ್ಲಿ, ಶಾಸ್ತ್ರೀಯ ಲ್ಯಾಟಿನ್‌ನಲ್ಲಿನ ರೀತಿಯಲ್ಲಿ, ಕೇವಲ ಅಪ್ಪರ್-ಕೇಸ್ (ದೊಡ್ಡ) ಅಕ್ಷರಗಳು ಇರುತ್ತವೆ. ಗ್ರೀಕ್‌ನ ಸಣ್ಣ ಅಕ್ಷರಗಳನ್ನು ನಂತರದಲ್ಲಿ ಇಂಕ್ (ಮಸಿ) ಮತ್ತು ಗರಿಯನ್ನು ಉಪಯೋಗಿಸಿ, ಅತ್ಯಂತ ವೇಗವಾಗಿ, ಅತೀ ಅನುಕೂಲವಾದ ಕೂಡು ಬರಹದ ಶೈಲಿಯಲ್ಲಿ ಬರೆಯಲು ಮಧ್ಯಯುಗದ ಲಿಪಿಕಾರರಿಂದ ಅಭಿವೃದ್ಧಿಪಡೆಸಲಾಯಿತು. ಪ್ರಸ್ತುತ ಉಪಯೋಗದಲ್ಲಿರುವ ಅಕ್ಷರಗಳ ಭಿನ್ನತೆಯು ಪ್ರಮುಖವಾಗಿ ಐಯೋನಿಕ್ ಕೊನೆಯ ಭಿನ್ನತೆಯಾಗಿದ್ದು, ಕ್ರಿಸ್ತ ಪೂರ್ವ 403 ರಲ್ಲಿ ಶಾಸ್ತ್ರೀಯ ಮೇಲ್ತರವನ್ನು ಬರೆಯಲು ಪರಿಚಯಿಸಲಾಗಿದೆ.
ಆಧುನಿಕ ಗ್ರೀಕ್ ಅಕ್ಷರಮಾಲೆಯು 24 ಅಕ್ಷರಗಳನ್ನು ಒಳಗೊಂಡಿದ್ದು, ಪ್ರತಿಯೊಂದು ದೊಡ್ಡ (ದೊಡ್ಡ ಅಕ್ಷರದ ಬಗೆ) ಮತ್ತು ಸಣ್ಣ (ಚಿಕ್ಕ ಅಕ್ಷರದ ಬಗೆ) ಅಕ್ಷರಗಳ ರಚನೆಯನ್ನು ಹೊಂದಿವೆ. ಅಕ್ಷರ ಸಿಗ್ಮವು ಹೆಚ್ಚುವರಿ ಚಿಕ್ಕ ಅಕ್ಷರ ಬಗೆಯ ರಚನೆಯನ್ನು (ς) ಹೊಂದಿದ್ದು ಅಂತಿಮ ಸ್ಥಿತಿಯಲ್ಲಿ ಉಪಯೋಗಿಸಲಾಗುತ್ತದೆ:
ದೊಡ್ಡ ಅಕ್ಷರದ ಬಗೆ | ||||||||||||||||||||||||||||||||
Α | Β | Γ | Δ | Ε | Ζ | Η | Θ | Ι | Κ | Λ | Μ | Ν | Ξ | Ο | Π | Ρ | Σ | Τ | Υ | Φ | Χ | Ψ | Ω | |||||||||
ಚಿಕ್ಕ ಅಕ್ಷರದ ಬಗೆ | ||||||||||||||||||||||||||||||||
α | β | γ | δ | ε | ζ | η | θ | ι | κ | λ | μ | ν | ξ | ο | π | ρ | σ / ς | τ | υ | φ | χ | ψ | ω |
ಅಕ್ಷರಗಳ ಜೊತೆಗೆ, ಗ್ರೀಕ್ ಅಕ್ಷರಮಾಲೆಯು ಅನೇಕ ಸಂಖ್ಯೆಯ ಬೇರ್ಪಡಿಸುವ ಸಂಕೇತಗಳ ವಿಶೇಷತೆಯನ್ನು ಹೊಂದಿದೆ: ಮೂರು ವಿಭಿನ್ನ ಒತ್ತಿಹೇಳುವ ಚಿಹ್ನೆಗಳು (ತೀಕ್ಷ್ಣ, ಪ್ರಮುಖ ಮತ್ತು ಸರ್ಕಮ್‌ಪ್ಲೆಕ್ಸ್), ಮೂಲತಃ ಒತ್ತಡದ ಸ್ವರಾಕ್ಷರದ ಮೇಲೆ ಉಚ್ಚಾರಣೆಯಲ್ಲಿ ಪ್ರಾಧಾನ್ಯೆತೆಯನ್ನು ಸೂಚಿಸುವ ವಿವಿಧ ಆಕಾರಗಳನ್ನು ನಿರ್ದೇಶಿಸುತ್ತವೆ; ಬ್ರೀತಿಂಗ್ ಮಾರ್ಕ್ಸ್ ಎಂದು ಕರೆಯುವವನ್ನು (ಒರಟಾಗಿ ಮತ್ತು ನಯವಾಗಿ ಶ್ವಾಸವಾಡುವ), ಮೂಲತಃ ಪದ-ಪ್ರಾರಂಭದ /h/ ಉಪಸ್ಥಿತಿ ಮತ್ತು ಅನುಪಸ್ಥಿತಿಯನ್ನು ಸಂಕೇತಿಸಲು ಉಪಯೋಗಿಸಲಾಗುತ್ತದೆ; ಮತ್ತು ಡಯಸೆರೀಸನ್ನು, ಸ್ವರಾಕ್ಷರಗಳ ಸಂಪೂರ್ಣ ಪಠ್ಯ ಮೌಲ್ಯವನ್ನು ಸೂಚಿಸಲು ಉಪಯೋಗಿಸಲಾಗುತ್ತದೆ, ಅಲ್ಲದಿದ್ದರೆ ಅದನ್ನು ಸಂಯುಕ್ತ ಸ್ವರದ ಭಾಗವಾಗಿ ಓದಲಾಗುತ್ತದೆ. ಈ ಮಾರ್ಕ್‌ಗಳನ್ನು ಹೆಲಿನಿಸ್ಟಿಕ್ ಅವಧಿಯ ಕಾಲದ ಸಮಯದಲ್ಲಿ ಪರಿಚಯಿಸಲಾಗಿದೆ. ಹಸ್ತಲಿಪಿಯಲ್ಲಿನ ಪ್ರಾಧಾನ್ಯತೆಯ ವಾಸ್ತವಿಕ ಉಪಯೋಗತೆಯು ತೀಕ್ಷ್ಣತೆಯ ಒಂದೇತರಹದ ಉಪಯೋಗತೆಯ ಅನುಮೋದನೆಯಲ್ಲಿ ತ್ವರಿತಗತಿಯ ಅವನತಿಯನ್ನು 20ನೆಯ ಶತಮಾನದ ಕೊನೆಯಲ್ಲಿ ಕಂಡಿತು, ಮತ್ತು ಇದನ್ನು ಕೇವಲ ಮುದ್ರಣಕಲೆಯಲ್ಲಿ ಉಳಿಸಿಕೊಳ್ಳಲಾಯಿತು.
1982ರ ಬರವಣಿಗೆಯ ಮರು ರಚನೆಯಲ್ಲಿ, ಬಹುತೇಕ ಅವುಗಳ ಉಪಯೋಗತೆಯನ್ನು, ಗ್ರೀಸ್‌ನಲ್ಲಿನ ಅಧಿಕೃತ ಉಪಯೋಗತೆಯಿಂದ ರದ್ದುಗೊಳಿಸಲಾಯಿತು[ಸೂಕ್ತ ಉಲ್ಲೇಖನ ಬೇಕು]. ಅಂದಿನಿಂದ, ಆಧುನಿಕ ಗ್ರೀಕ್‌ನ್ನು ಬಹುಶಃ ಸರಳೀಕರಿಸಿದ ಮೊನೊಟೊನಿಕ್ ಶುದ್ಧ ಅಕ್ಷರ ಸಂಯೋಜನೆಯಲ್ಲಿ (ಅಥವಾ ಮೊನೊಟೊನಿಕ್ ಪದ್ಧತಿಯಲ್ಲಿ) ಬರೆಯಲಾಗಿದೆ, ಇದು ಕೇವಲ ತೀಕ್ಷ್ಣ ಘಾತ ಮತ್ತು ಉಚ್ಚಾರಣೆಯನ್ನು ಹೊಂದಿರುತ್ತದೆ. ಈಗ ಪೊಲಿಟೋನಿಕ್ ಶುದ್ಧ ಅಕ್ಷರ ಸಂಯೋಜನೆ (ಅಥವಾ ಪೊಲಿಟೋನಿಕ್ ಪದ್ಧತಿ) ಎಂದು ಕರೆಯುವ, ಸಾಂಪ್ರಧಾಯಿಕ ಪದ್ಧತಿಯನ್ನು, ಈಗಲೂ ಅಂತರರಾಷ್ಟ್ರೀಯವಾಗಿ ಪುರಾತನ ಗ್ರೀಕ್‌ನ್ನು ಬರೆಯಲು ಉಪಯೋಗಿಸಲಾಗುತ್ತಿದೆ.
ಪ್ರಾಸಂಗಿಕವಾಗಿ ಗ್ರೀಕ್‌ನ್ನು ಭೂತಕಾಲದಲ್ಲಿ ಲ್ಯಾಟಿನ್ ಅಕ್ಷರಗಳಲ್ಲಿ ಬರೆಯಲಾಗಿತ್ತು, ಮುಖ್ಯವಾಗಿ ವೆನೆಟಿಯಾನ್ ನಿಯಮದ ಅಡಿಯ ಪ್ರದೇಶಗಳಲ್ಲಿ ಅಥವಾ ಗ್ರೀಕ್ ಕ್ಯಾಥಲಿಕ್ಸ್‌ಗಳಿಂದ (ಮತ್ತು ಫ್ರಾಗೊಲೆವಂಟಿನಿಕಾ ಅಥವಾ ಫ್ರಾಗೊಚಿಯೊಟಿಕಾ ಎಂದು ಕರೆಯುವ)[ಸೂಕ್ತ ಉಲ್ಲೇಖನ ಬೇಕು], ಮತ್ತು ಬಹಳ ಇತ್ತೀಚೆಗೆ ಹೆಚ್ಚಾಗಿ ಆನ್‌ಲೈನ್ ಸಂಭಾಷಣೆಗಳಲ್ಲಿ (ಗ್ರೀಕ್‌ಲಿಷ್ ಎಂದು ಕರೆದ) ಲ್ಯಾಟಿನ್ ಅಕ್ಷರಗಳಲ್ಲಿಬರೆಯಲಾಗಿತ್ತು.[೧೯]
ಇವನ್ನೂ ನೋಡಿ
ಬದಲಾಯಿಸಿ- ಅಮೇರಿಕನ್ ಫೌಂಡೇಶನ್ ಫಾರ್ ಗ್ರೀಕ್ ಲಾಂಗ್ವೇಜ್ ಅಂಡ್ ಕಲ್ಚರ್
- ಆಧುನಿಕ ಗ್ರೀಕ್ ವೈವಿದ್ಯತೆಗಳು
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ "Greek language". SIL International. 2009. Archived from the original on 2011-07-09. Retrieved 2010-10-25.
- ↑ "Languages by number of speakers". SIL International. 2009. Archived from the original on 2011-08-22. Retrieved 2010-10-25.
- ↑ "Enthologue report for language code: ell".
- ↑ "The Constitution of Cyprus, App. D., Part 1, Art. 3". Archived from the original on 2012-07-29. Retrieved 2010-10-25. states that The official languages of the Republic are Greek and Turkish. However, the official status of Turkish is only nominal in the Greek-dominated Republic of Cyprus; in practice, outside Turkish-dominated Northern Cyprus, Turkish is little used; see A. Arvaniti (2006): Erasure as a a means of maintaining diglossia in Cyprus, San Diego Linguistics Papers 2: 25-38. Page 27.
- ↑ ೫.೦ ೫.೧ "The EU at a glance - Languages in the EU". Europa. European Union. Archived from the original on 21 ಜೂನ್ 2013. Retrieved 30 July 2010.
- ↑ ೬.೦ ೬.೧ ೬.೨ "Greek". Office of the High Commissioner for Human Rights. Archived from the original on 2008-11-18. Retrieved 2008-12-08.
- ↑ ೭.೦ ೭.೧ ೭.೨ ೭.೩ "List of declarations made with respect to treaty No. 148". Council of Europe. Archived from the original on 2012-05-22. Retrieved 2008-12-08.
- ↑ "An interview with Aziz Tamoyan, National Union of Yezidi". groong.usc.edu. Archived from the original on 2009-06-25. Retrieved 2008-12-08.
- ↑ "Greek language". Encyclopædia Britannica. Encyclopædia Britannica Online. Retrieved 2008-11-04.
- ↑ ಬ್ರೌನಿಂಗ್, ರಾಬರ್ಟ್. ಮಿಡೀವಲ್ ಅಂಡ್ ಮಾಡರ್ನ್ ಗ್ರೀಕ್ . ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 1996. ಐಎಸ್‌ಬಿಎನ್ 0688168949
- ↑ ಮಾರ್ಗರೆಟ್ ಅಲೆಕ್ಸಿಯು (1982): ಡಿಗ್ಲೊಸ್ಸಿಯಾ ಇನ್ ಗ್ರೀಸ್. ಇನ್: ವಿಲಿಯಮ್ ಹಾಸ್ (1982): ಸ್ಟ್ಯಾಂಡರ್ಡ್ ಲಾಂಗ್ವೇಜಸ್: ಸ್ಪೋಕನ್ ಅಂಡ್ ರಿಟನ್ . ಮ್ಯಾಂಚೆಸ್ಟರ್ ಯೂನಿವರ್ಸಿಟಿ ಪ್ರೆಸ್ ಎನ್‌ಡಿ. ಐಎಸ್‌ಬಿಎನ್ 0389202916, 9780389202912
- ↑ "Greek language". Columbia Encyclopedia. Bartleby.com. Archived from the original on 2005-10-13. Retrieved 2008-12-08.
- ↑ "Greece". The World Factbook. Central Intelligence Agency. Archived from the original on 25 ಆಗಸ್ಟ್ 2016. Retrieved 23 January 2010.
- ↑ ಗ್ರೀಕರ ಎಲ್ಲಾ ಹಂತಗಳಲ್ಲಿಯೂ ಕಂಡುಬರುವ ನಾಲ್ಕು ನಿದರ್ಶನಗಳೆಂದರೆ ನಾಮಿನೇಟೀವ್, ಜೆನೆಟಿವ್, ಅಕ್ಯುಸೇಟೀವ್ ಮತ್ತು ವೊಕೇಟೀವ್. ಪುರಾತನ ಗ್ರೀಕ್‌ನ ವಿಭಕ್ತಿಗಳು ಹೆಲೆನ್ಸ್ಟಿಕ್ ಅವಧಿಯ ಕೊನೆಯಲ್ಲಿ ಮರೆಯಾದವು, ಮತ್ತು ಮೈಸಿನೇಯನ್ ಗ್ರೀಕ್‌ನ ನಿಮಿತ್ತವಾದ ಕೇಸ್ ಆರ್ಚಿಕ್ ಅವಧಿಯಲ್ಲಿ ಮರೆಯಾಯಿತು.
- ↑ ಆಧುನಿಕ ಭಾಷೆಗಳಲ್ಲಿ 'ಸಂಭಾವನಾರ್ಥಕವಾಗಿ' ಗುರುತಿಸಬಹುದಾದ ಯಾವುದೇ ನಿರ್ಧಿಷ್ಟ ಶಬ್ದ ಸ್ವರೂಪದ ರಚನೆಯಿಲ್ಲ, ಆದರೆ ಈ ಶಬ್ದವು ಕೆಲವುಸಲ ವಿವರಣೆಯಲ್ಲಿ ಸಂಧಿಸುತ್ತದೆ, ಅದಾಗ್ಯೂ ಬಹುತೇಕ ಆಧುನಿಕ ಸಂಪೂರ್ಣ ವ್ಯಾಕರಣವು (ಹಾಲ್ಟನ್ et al. 1997) ಇದನ್ನು ಉಪಯೋಗಿಸುವುದಿಲ್ಲ, ನಿರ್ಧಿಷ್ಟವಾದ ಸಾಂಪ್ರಧಾಯಿಕವಾಗಿ 'ಸಂಭಾವನಾರ್ಥಕವಾದ' ರಚನೆಗಳು 'ಅವಲಂಬಿಗಳು' ಎಂದು ಕರೆಯಲಾಗುತ್ತದೆ, ಮತ್ತು ಈ ಕಾರಣಕ್ಕಾಗಿ ಬಹುತೇಕ ಗ್ರೀಕ್ ಭಾಷಾಶಾಸ್ತ್ರದ ಪ್ರತಿಪಾದಕರು ಸಾಂಪ್ರದಾಯಿಕ ಶಬ್ದಾವಳಿಯನ್ನು ತ್ಯಜಿಸುತ್ತಾರೆ (ಅನ್ನ ರೊಸ್ಸೊವ್ ಮತ್ತು ಟಸೊಸ್ ತ್ಸಂಗಲಿದಿಸ್ 2009, ಮೆಲೆಟೆಸ್ ಗಿಯ ಟಿನ್ ಎಲ್ಲಿನಿಕಿ ಗ್ಲೊಸ್ಸದಲ್ಲಿ, ಥೆಸ್ಸಲೊನಿಕಿ, ಅನಸ್ಥಸಿಯ ಜಿಯನ್ನಕಿಡೊವ್ 2009 "ಟೆಂಪರಲ್ ಸೆಮಂಟಿಕ್ಸ್ ಮತ್ತು ಪೊಲಾರಿಟಿ: ಸಂಭಾವನಾರ್ಥಕದ ಅವಲಂಬನೆಯನ್ನು ಮರುಸಂದರ್ಶಿಸಲಾಗಿದೆ", ಲಿಂಗ್ವಿಯಾ); ವಿವರಣೆಗಾಗಿ ಆಧುನಿಕ ಗ್ರೀಕ್ ವ್ಯಾಕ್ರಣವನ್ನು ನೋಡಿ.
- ↑ ರೆನ್‌ಫ್ರು, ಎ.ಸಿ., 1987, ಆರ್ಕಿಯಾಲಜಿ ಅಂಡ್ ಲಾಂಗ್ವೇಜ್: ದಿ ಪಝಲ್ ಆಫ್ ಇಂಡೊ-ಯುರೋಪಿಯನ್ ಆರಿಜಿನ್ಸ್ , ಲಂಡನ್: ಪಿಮ್ಲಿಕೊ. ಐಎಸ್‌ಬಿಎನ್ 0-7126-6612-5; ಟಿ. ವಿ. ಗ್ಯಾಂಕ್ರೆಲಿಡ್ಝ್ ಹಾಗೂ ವಿ. ವಿ. ಇವಾನೊವ್, ದಿ ಅರ್ಲಿ ಹಿಸ್ಟರಿ ಆಫ್ ಇಂಡೋ-ಯೂರೋಪಿಯನ್ ಲಾಂಗ್ವೇಜಸ್ , ಸೈಂಟಿಫಿಕ್ ಅಮೇರಿಕನ್, ಮಾರ್ಚ್ 1990; Renfrew, Colin (2003). "Time Depth, Convergence Theory, and Innovation in Proto-Indo-European". Languages in Prehistoric Europe. ISBN 3-8253-1449-9.
- ↑ ರಸ್ಸೆಲ್ ಡಿ. ಗ್ರೇ ಅಂಡ್ ಕ್ವೆಂಟಿನ್ ಡಿ. ಅಟ್ಕಿನ್ಸನ್, ಲಾಂಗ್ವೇಜ್-ಟ್ರೀ ಡೈವರ್ಜೆನ್ಸ್ ಟೈಮ್ಸ್ ಸಪೋರ್ಟ್ ದಿ ಅನಟೋಲಿಯನ್ ಥಿಯರಿ ಆಫ್ ಇಂಡೋ-ಯೂರೋಪಿಯನ್ ಆರಿಜಿನ್, ನೇಚರ್ 426 (27 ನವೆಂಬರ್ 2003) 435-439
- ↑ ಜೇಮ್ಸ್ ಪಿ. ಮಲ್ಲೊರಿ, "ಕುರೊ-ಅರೇಕ್ಸಸ್ ಕಲ್ಚರ್", ಎನ್‌ಸೈಕ್ಲೋಪೀಡಿಯಾ ಆಫ್ ಇಂಡೋ-ಯೂರೋಪಿಯನ್ ಕಲ್ಚರ್ , ಫಿಟ್‌ಝ್ರೊಯ್ ಡಿಯರ್ಬಾರ್ನ್, 1997.
- ↑ ಜನ್ನಿಸ್ ಅಂಡ್ರೌಟ್ಸೊಪೌಲಸ್, "'ಗ್ರೀಕ್ಲಿಶ್': ಟ್ರಾನ್ಸ್‌ಲಿಟರೇಶನ್ ಪ್ರಾಕ್ಟೀಸ್ ಅಂಡ್ ಡಿಸ್ಕೋರ್ಸ್ ಇನ್ ಎ ಸೆಟಿಂಗ್ ಆಫ್ ಕಂಪ್ಯೂಟರ್-ಮೀಡಿಯೇಟೆಡ್ ಡಿಗ್ರಾಫಿಯಾ" ಇನ್ ಸ್ಟ್ಯಾಂಡರ್ಡ್ ಲಾಂಗ್ವೇಜಸ್ ಅಂಡ್ ಸ್ಟ್ಯಾಂಡರ್ಡ್ಸ್: ಗ್ರೀಕ್, ಪಾಸ್ಟ್ ಮತ್ತು ಪ್ರೆಸೆಂಟ್ ಆನ್ಲೈನ್ ಪ್ರಿಪ್ರಿಂಟ್
ಮೂಲಗಳು
ಬದಲಾಯಿಸಿ- ಡಬ್ಲು. ಸಿಡ್ನೀ ಅಲೆನ್, ವಾಕ್ಸ್ ಗ್ರೇಸಿಯಾ - ಎ ಗೈಡ್ ಟು ದಿ ಪ್ರನನ್ಸಿಯೇಶನ್ ಆಫ್ ಕ್ಲಾಸಿಕಲ್ ಗ್ರೀಕ್ . ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 1968-74. ಐಎಸ್‌ಬಿಎನ್ 0-7660-2167-X.
- ರಾಬರ್ಟ್ ಬ್ರೌನಿಂಗ್, ಮೀಡಿವಲ್ ಅಂಡ್ ಮಾಡರ್ನ್ ಗ್ರೀಕ್ , ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 2ನೆಯ ಆವೃತ್ತಿ 1983, ಐಎಸ್‌ಬಿಎನ್ 0-521-29978-0. ಪುರಾತನ ಭಾಷೆಯಿಂದ ಆಧುನಿಕ ಗ್ರೀಕ್ ಬೆಳೆದು ಬಂದ ಐತಿಹಾಸಿಕ ಲೆಕ್ಕಾಚಾರಗಳನ್ನು ಸಂಕ್ಷಿಪ್ತ ಹಾಗೂ ಅತ್ಯುತ್ತಮವಾದ ಪುಸ್ತಕ.
- ಕ್ರಾಸ್ಬಿ ಮತ್ತು ಸ್ಚೇಫರ್, ಅನ್ ಇಂಟ್ರೊಡಕ್ಷನ್ ಟು ಗ್ರೀಕ್ , ಅಲಿನ್ ಅಂಡ್ ಬೇಕನ್, ಇಂಕ್. 1928. ಪುರಾತನ ಗ್ರೀಕ್‌ನ ಒಂದು ವ್ಯಾಕರಣ ಶಾಲೆ.
- ಡಿಯೊನಿಸಿಯಸ್ ಆಫ್ ಥ್ರೇಸ್, "ಆರ್ಟ್ ಆಫ್ ಗ್ರಾಮರ್", "Τέχνη γραμματική", ಸಿ.100 ಬಿಸಿ
- ಡೇವಿಡ್ ಹಾಲ್ಟನ್, ಪೀಟರ್ ಮ್ಯಾಕ್ರಿಡ್ಜ್, ಮತ್ತು ಐರಿನ್ ಫಿಲಿಪ್ಪಕಿ-ವಾರ್‌ಬರ್ಟನ್, ಗ್ರೀಕ್: ಎ ಕಾಂಪ್ರೆಹೆನ್ಸಿವ್ ಗ್ರಾಮರ್ ಆಫ್ ದಿ ಮಾಡರ್ನ್ ಲಾಂಗ್ವೇಜ್ , ರೂಟ್ಲೆಡ್ಜ್, 1997, ಐಎಸ್‌ಬಿಎನ್ 0-415-10002-X. ಎ ರೆಫರೆನ್ಸ್ ಗ್ರಾಮರ್ ಆಫ್ ಮಾಡರ್ನ್ ಗ್ರೀಕ್.
- ಜಾಫ್ರಿ ಹೊರ್ರಕ್ಸ್, ಗ್ರೀಕ್: ಎ ಹಿಸ್ಟರಿ ಆಫ್ ದಿ ಲಾಂಗ್ವೇಜ್ ಅಂಡ್ ಇಟ್ಸ್ ಸ್ಪೀಕರ್ಸ್ (ಲಾಂಗ್ಮನ್ ಲಿಂಗ್ವಿಸ್ಟಿಕ್ಸ್ ಲೈಬ್ರರಿ). ಎಡಿಸನ್-ವೆಸ್ಲೆಯ್, 1998. ಐಎಸ್‌ಬಿಎನ್ 0-520-21800-0. ಮೈಸಿನಿಯನ್‌ನಿಂದ ಆಧುನಿಕ ಸಮಯದವರೆಗೆ.
- ಬ್ರಿಯಾನ್ ನ್ಯೂಟೌನ್, ದಿ ಜನರೇಟೀವ್ ಇಂಟರ್‌ಪ್ರಿಟೇಶನ್ ಆಫ್ ಡಯಲೆಕ್ಟ್: ಎ ಸ್ಟಡಿ ಆಫ್ ಮಾಡರ್ನ್ ಗ್ರೀಕ್ ಫೋನಾಲಜಿ , ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 1972, ಐಎಸ್‌ಬಿಎನ್ 0-521-08497-0.
- ಆಂಡ್ರ್ಯೂ ಸಿಹ್ಲರ್, "ಎ ನ್ಯೂ ಕಂಪೇರಿಟಿವ್ ಗ್ರಾಮರ್ ಆಫ್ ಗ್ರೀಕ್ ಅಂಡ್ ಲ್ಯಾಟಿನ್", ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, 1996. ಇಂಡೋ-ಯೂರೋಪಿಯನ್ ಮೂಲಗಳಿಂದ ಪುರಾತನ ಗ್ರೀಕ್‌ನ ಒಂದು ಐತಿಹಾಸಿಕ ವ್ಯಾಕರಣ. ಕೆಲವು ವಿಕೇಂದ್ರೀಯತೆಗಳಿಂದ ಮತ್ತು ಗ್ರಂಥಗಳ ವಿವರಣಾ ಪಟ್ಟಿಗಳಿಲ್ಲದ ಆದರೆ ಗ್ರೀಕರ ಬೆಳವಣಿಗೆಯ ಮೊದಲ ಹಂತಗಳ ಬಗೆಗಿನ ಉಪಯುಕ್ತ ಕೈಪಿಡಿ.
- ಹರ್ಬರ್ಟ್ ವೆಯಿರ್ ಸ್ಮಿತ್, ಗ್ರೀಕ್ ಗ್ರಾಮರ್ , ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 1956 (ಪರಿಷ್ಕೃತ ಆವೃತ್ತಿ), ಐಎಸ್‌ಬಿಎನ್ 0-674-36250-0. ಮಾದರಿ ಗ್ರೀಕ್‌ನ ಉತ್ತಮ ಗುಣಮಟ್ಟದ ವ್ಯಾಕರಣ. ಪ್ರಾಥಮಿಕವಾಗಿ ಮೇಲ್ತರದ ಪ್ರಾಂತ ಭಾಷೆಯ ಮೇಲೆ ಕೇಂದ್ರೀಕರಿಸಿದೆ, ಇದು ಇತರೆ ಪ್ರಾಂತ ಭಾಷೆಗಳ ಹಾಗೂ ಮಹಾಭಾಷೆಗಳ ಮೇಲೆ ಹೆಚ್ಚುಕಡಿಮೆ ಒಂದೇ ರೀತಿಯಾಗಿದೆ Kunstsprache .
ಬಾಹ್ಯ ಕೊಂಡಿಗಳು
ಬದಲಾಯಿಸಿಸಾಮಾನ್ಯ ಹಿನ್ನೆಲೆ
ಬದಲಾಯಿಸಿ- ವಿಕಿಟ್ರಾವೆಲ್ನಲ್ಲಿ ಗ್ರೀಕ್ ಫ್ರೇಸ್ಬುಕ್
- ಗ್ರೀಕ್ ಭಾಷೆ Archived 2005-10-13 ವೇಬ್ಯಾಕ್ ಮೆಷಿನ್ ನಲ್ಲಿ., ಕೊಲಂಬಿಯಾ ಎಲೆಕ್ಟ್ರಾನಿಕ್ ಎನ್‌ಸೈಕ್ಲೋಪೀಡಿಯಾ.
- ದಿ ಗ್ರೀಕ್ ಲಾಂಗ್ವೇಜ್ ಅಂಡ್ ಲಿಂಗ್ವಿಸ್ಟಿಕ್ಸ್ ಗೇಟ್ವೇ, ಗ್ರೀಕ್ ಭಾಷೆಯ ಇತಿಹಾಸದ ಬಗ್ಗೆ ಉಪಯುಕ್ತ ಮಾಹಿತಿ, ಗ್ರೀಕ್ ಅಧ್ಯಯನಕ್ಕೆ ಆಧುನಿಕ ಭಾಷಾಧ್ಯಯನಗಳ ಅನ್ವಯ, ಹಾಗೂ ಗ್ರೀಕ್ ಕಲಿಯುವುದಕ್ಕಾಗಿ ನಿರ್ದೇಶನಗಳು.
- ದಿ ಗ್ರೀಕ್ ಲಾಂಗ್ವೇಜ್ ಪೋರ್ಟಲ್, ಗ್ರೀಕ್ ಭಾಷೆ ಮತ್ತು ಭಾಷಾಂತರ ಅಧ್ಯಯನಕ್ಕಾಗಿ ಇರುವ ಒಂದು ಪೋರ್ಟಲ್.
- ದಿ ಪರ್ಸಿಯಸ್ ಪ್ರಾಜೆಕ್ಟ್, ಇದು ಡಿಕ್ಷನರಿಗಳು, ಇತಿಹಾಸಗಳನ್ನು ಒಳಗೊಂಡಂತೆ ಭಾಷೆಗಳ ಅಧ್ಯಯನಕ್ಕೆ ಉಪಯುಕ್ತ ಪುಟಗಳನ್ನು ಹೊಂದಿದೆ.
- ಏನ್ಷಿಯೆಂಟ್ ಗ್ರೀಕ್ ಟ್ಯುಟೋರಿಯಲ್ಸ್, ಬರ್ಕ್ಲೇಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಬರ್ಕ್ಲೇ ಭಾಷಾ ಅಧ್ಯಯನ ಕೇಂದ್ರ
ಭಾಷಾ ಕಲಿಕೆ
ಬದಲಾಯಿಸಿ- ಹೆಲೆನಿಸ್ಟಿಕ್ ಗ್ರೀಕ್ ಅಧ್ಯಾಯಗಳು Greek-Language.com , ಇದು ಹೆಲೆನಿಸ್ಟಿಕ್ ಗ್ರೀಕ್‌ನ ಆನ್ಲೈನ್ ವ್ಯಾಕರಣ ಅಧ್ಯಯನವನ್ನು ಒದಗಿಸುತ್ತದೆ.
- ಗ್ರೀಕ್ ಡಿಕ್ಷನರಿ, ಟ್ಯುಟೋರಿಯಲ್ ಅಂಡ್ ಹ್ಯಾಂಗ್ಮನ್ ಪ್ರೋಗ್ರಾಂ ವಿತ್ ಟೆಕ್ಸ್ಟ್ ಎಡಿಟರ್, ಇದು ಒಂದು ಷೇರ್ವೇರ್ ತಂತ್ರಾಂಶವಾಗಿದ್ದು ಗೀಕ್ ಹೊಸ ಒಡಂಬಡಿಕೆಯನ್ನು ಕಲಿಯುವುದು ಇದರ ಉದ್ದೇಶವಾಗಿದೆ.
- ಗ್ರೀಕ್ ಸ್ಪೆಲ್ ಚೆಕರ್ Archived 2008-09-13 ವೇಬ್ಯಾಕ್ ಮೆಷಿನ್ ನಲ್ಲಿ.
- (Greek) komvos.edu.gr, ಗ್ರೀಕ್ ಭಾಷೆಯನ್ನು ಕಲಿತ ಜನರ ಸಹಾಯಕ್ಕಾಗಿ ಇರುವ ವೆಬ್ಸೈಟ್.
- ನ್ಯೂ ಟೆಸ್ಟೇಮೆಂಟ್ ಗ್ರೀಕ್ Archived 2009-02-06 ವೇಬ್ಯಾಕ್ ಮೆಷಿನ್ ನಲ್ಲಿ. ಗ್ರೀಕ್ ಹೊಸ ಒಡಂಬಡಿಕೆಗಳನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಮೂರು ಪದವಿ ಕೋರ್ಸುಗಳನ್ನು ವಿನ್ಯಾಸಗೊಳಿಸಲಾಗಿದೆ.
- ಫೈರ್ಫಾಕ್ಸ್ನಲ್ಲಿ ಗ್ರೀಕ್ ಅಕ್ಷರಗಳನ್ನು ಬೆರಳಚ್ಚಿಸವುದಕ್ಕಾಗಿ ಒಂದು ಕೀಬೋರ್ಡ್[ಶಾಶ್ವತವಾಗಿ ಮಡಿದ ಕೊಂಡಿ]
- ಗ್ರೀಸ್‌ನ ಶಾಲೆಗಳಲ್ಲಿ ಕಲಿಸಲಾಗುವ ಗ್ರೀಕ್ ಭಾಷೆಯ ಪುಸ್ತಕಗಳು (ಗ್ರೀಕ್ ಪುಟ)
- ಗ್ರೀಕ್ ಸ್ವದೇಶ್ ಲಿಸ್ಟ್ ಆಫ್ ಬೇಸಿಕ್ ವೊಕ್ಯಾಬುಲರಿ ವರ್ಡ್ಸ್ (ವಿಕ್ಷನರೀಸ್ನಿಂದ ಸ್ವದೇಶ್ ಲಿಸ್ಟ್ ಅಪೆಂಡಿಕ್ಸ್)
Dictionaries
ಬದಲಾಯಿಸಿ- ಗ್ರೀಕ್-ಇಂಗ್ಲೀಷ್/ಇಂಗ್ಲೀಷ್-ಗ್ರೀಕ್ ಡಿಕ್ಷನರಿ, (Greek)
- ಟ್ರಾನ್ಸ್ಲೇಟಂ - ದಿ ಗ್ರೀಕ್ ಟ್ರಾನ್ಸ್ಲೇಶನ್ ವೋರ್ಟಲ್ (ಡಿಕ್ಷನರಿಗಳು ಮತ್ತು ಟರ್ಮಿನಾಲಜಿ ಫೋರಂ)
- ಗ್ರೀಕ್ ಲಿಕ್ಸಿಕಲ್ ಏಯಿಡ್ಸ್, ಎರಡು ಆನ್ಲೈನ್ ಲೆಕ್ಸಿಕನ್ಗಳ ವಿವರಣೆಗಳು (ಸೂಕ್ತ ಕೊಂಡಿಗಳು) ಮತ್ತು ಪ್ರಿಂಟ್ನಲ್ಲಿ ಗ್ರೀಕ್ ಲೆಕ್ಸಿಕನ್ಸ್.
- ಆನ್ಲೈನ್ ಗ್ರೀಕ್-ಇಂಗ್ಲಿಷ್ ಮತ್ತು ಇಂಗ್ಲಿಷ್-ಗ್ರೀಕ್ ಡಿಕ್ಷನರಿ Archived 2009-10-04 ವೇಬ್ಯಾಕ್ ಮೆಷಿನ್ ನಲ್ಲಿ. (ಆಧುನಿಕ ಗ್ರೀಕ್)
- ಆನ್ಲೈನ್ ಗ್ರೀಕ್ <-> ಇಂಗ್ಲಿಷ್ ಡಿಕ್ಷನರಿ Archived 2009-10-03 ವೇಬ್ಯಾಕ್ ಮೆಷಿನ್ ನಲ್ಲಿ. ಲಿಂಗ ಮತ್ತು ಶಬ್ಧಗಳ ವಿಧಗಳ ಜೊತೆಗೆ
- ದಿ ಗ್ರೀಕ್ ಲಾಂಗ್ವೇಜ್ ಪೋರ್ಟಲ್, ಎಲ್ಲಾ ಬಗೆಯ ಗ್ರೀಕ್‌ನ ಡಿಕ್ಷನರಿಗಳು (ಪುರಾತನ, ಗ್ರೀಕ್ ಪಂಡಿತನ, ಮಧ್ಯಯುಗದ, ಆಧುನಿಕ).
- ವುಡ್ಹೌಸ್ ಇಂಗ್ಲಿಷ್-ಗ್ರೀಕ್ ಡಿಕ್ಷನರಿ, ಎಸ್.ಸಿ.ವುಡ್ಹೌಸ್ನ 1910 ಡಿಕ್ಷನರಿಯ ಸ್ಕ್ಯಾನ್ ಮಾಡಿದ ಪ್ರತಿಗಳು.
- ಇಂಗ್ಲಿಷ್ ಟು ಗ್ರೀಕ್ ಡಿಕ್ಷನರಿ Archived 2010-09-20 ವೇಬ್ಯಾಕ್ ಮೆಷಿನ್ ನಲ್ಲಿ., ಇಂಗ್ಲಿಷ್ ಟು ಗ್ರೀಕ್ ಡಿಕ್ಷನರಿ.
- ಗ್ರೀಕ್-ಇಂಗ್ಲಿಷ್ <> ಇಂಗ್ಲಿಷ್-ಗ್ರೀಕ್ ಮತ್ತು ಗ್ರೀಕ್-ಟರ್ಕಿಶ್ <> ಟರ್ಕಿಶ್-ಗ್ರೀಕ್ ಡಿಕ್ಷನರಿ, ಗ್ರೀಕ್-ಇಂಗ್ಲಿಷ್ <> ಇಂಗ್ಲಿಷ್-ಗ್ರೀಕ್ ಮತ್ತು ಗ್ರೀಕ್-ಟರ್ಕಿಶ್ <> ಟರ್ಕಿಶ್-ಗ್ರೀಕ್ ಡಿಕ್ಷನರಿ.
ಸಾಹಿತ್ಯ
ಬದಲಾಯಿಸಿ- ಬುಕ್ಸ್ ಇನ್ ಗ್ರೀಕ್ Archived 2006-08-22 ವೇಬ್ಯಾಕ್ ಮೆಷಿನ್ ನಲ್ಲಿ., ಹುಡುಕಬಹುದಾದಂತಹ ಗ್ರಂಥಗಳ ವಿವರಣಾ ಪಟ್ಟಿ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕ.
- (Greek) ಸೆಂಟರ್ ಫರ್ ನ್ಯೋ-ಹೆಲ್ಲೆನಿಕ್ ಸ್ಟಡೀಸ್, ಆಧುನಿಕ ಗ್ರೀಕ್ ಸಾಹಿತ್ಯ ಮತ್ತು ಸಂಪ್ರದಾಯಗಳನ್ನು ಪ್ರೋತ್ಸಾಹಿಸಲು ರಚಿಸಿದ ಒಂದು ಲಾಭದಾಯಕವಲ್ಲದ ಸಂಸ್ಥೆ.
- ರಿಸರ್ಚ್ ಲ್ಯಾಬ್ ಆಫ್ ಮೊಡ್ರನ್ ಗ್ರೀಕ್ ಫಿಲಾಸಫಿ Archived 2007-02-19 ವೇಬ್ಯಾಕ್ ಮೆಷಿನ್ ನಲ್ಲಿ., ಆಧುನಿಕ ಗ್ರೀಕ್ ಪಠ್ಯಗಳ/ಪುಸ್ತಕಗಳ ಅತ್ಯಂದ ದೊಡ್ಡದಾದ ಇ-ಗ್ರಂಥಾಲಯ.
- ದಿ ತ್ರೆಸರ್ ಆಫ್ ಗ್ರೀಕ್ ಲ್ಯಾಂಗ್ವೇಜ್ Archived 2006-05-15 ವೇಬ್ಯಾಕ್ ಮೆಷಿನ್ ನಲ್ಲಿ., ಗ್ರೀಕ್ ಭಾಷೆಗಳ ಎಲ್ಲಾ ರಾಜ್ಯಗಳಿಂದ ಸಂಗ್ರಹಿಸಿದ ಇ-ಪುಸ್ತಕಗಳ ದೊಡ್ಡ ಪ್ರಮಾಣದ ಸಂಗ್ರಹ.