ಹೊಸ ಒಡಂಬಡಿಕೆಯು (New Testament) ಬೈಬಲ್ ನ ದ್ವಿತೀಯ ಭಾಗವಾಗಿದೆ. ಇದು ಕ್ರಿಸ್ತನ ಜನನ, ಬೋಧನೆ, ಶ್ರಮ, ಮರಣ, ದಿವ್ಯಾರೋಹಣ ಮತ್ತು ನಂತರದ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಹೊಸ ಒಡಂಬಡಿಕೆಯ ಮೊದಲಿನ ೪ ಪುಸ್ತಕಗಳನ್ನು 'ಸುವಾರ್ತೆಗಳು' ಅಥವಾ 'ಸುಸಂದೇಶಗಳು' ಎಂದು ಕರೆಯಲಾಗುತ್ತವೆ. ಇದಲ್ಲದೆ ಹೊಸ ಒಡಂಬಡಿಕೆಯು ಪ್ರೇಷಿತರ ಕಾರ್ಯಕಲಾಪಗಳು, ಪೌಲನ ೧೩ ಪತ್ರಿಕೆಗಳು ಮತ್ತು ಇತರ ೮ ಪತ್ರಿಕೆಗಳೂ ಹಾಗು ದಿವ್ಯದರ್ಶನಗಳ ಪ್ರಕಟಣೆಯೂ ಒಳಗೊಂಡಂತೆ ಒಟ್ಟು ೨೭ ಪುಸ್ತಕಗಳಿರುತ್ತವೆ.


ಹಳೆ ಒಡಂಬಡಿಕೆಯಲ್ಲಿ ಒಟ್ಟು ೨೭ ಪುಸ್ತಕಗಳಿವೆ. ಅವುಗಳು:

ಹೊಸ ಒಡಂಬಡಿಕೆಯಲ್ಲಿನ ಪುಸ್ತಗಳುಸಂಪಾದಿಸಿ

 1. ಮತ್ತಾಯನು ಬರೆದ ಸುಸಂದೇಶಗಳು
 2. ಮಾರ್ಕನು ಬರೆದ ಸುಸಂದೇಶಗಳು
 3. ಲೂಕನು ಬರೆದ ಸುಸಂದೇಶಗಳು
 4. ಯೊವಾನ್ನನು ಬರೆದ ಸುಸಂದೇಶಗಳು
 5. ಪ್ರೇಷಿತರ ಕಾರ್ಯಕಲಾಪಗಳು
 6. ಪೌಲನು ರೋಮನರಿಗೆ ಬರೆದ ಪತ್ರ
 7. ಪೌಲನು ಕೊರಿಂಥಿಯರಿಗೆ ಬರೆದ ಮೊದಲ ಪತ್ರ
 8. ಪೌಲನು ಕೊರಿಂಥಿಯರಿಗೆ ಬರೆದ ಎರಡನೆಯ ಪತ್ರ
 9. ಪೌಲನು ಗಲಾತ್ಯರಿಗೆ ಬರೆದ ಪತ್ರ
 10. ಪೌಲನು ಎಫೆಸಿಯರಿಗೆ ಬರೆದ ಪತ್ರ
 11. ಪೌಲನು ಫಿಲಿಪಿಯರಿಗೆ ಬರೆದ ಪತ್ರ
 12. ಪೌಲನು ಕೊಲೊಸ್ಸೆಯರಿಗೆ ಬರೆದ ಪತ್ರ
 13. ಪೌಲನು ಥೆಸೆಲೋನಿಯರಿಗೆ ಮೊದಲ ಬರೆದ ಪತ್ರ
 14. ಪೌಲನು ಥೆಸೆಲೋನಿಯರಿಗೆ ಎರಡನೆಯ ಬರೆದ ಪತ್ರ
 15. ಪೌಲನು ತಿಮೊಥೇಯನಿಗ ಬರೆದ ಮೊದಲ ಪತ್ರ
 16. ಪೌಲನು ತಿಮೊಥೇಯನಿಗೆ ಬರೆದ ಎರಡನೆಯ ಪತ್ರ
 17. ಪೌಲನು ತೀತನಿಗೆ ಬರೆದ ಪತ್ರ
 18. ಪೌಲನು ಫಿಲೆಮೋನನಿಗೆ ಬರೆದ ಪತ್ರ
 19. ಹಿಬ್ರಿಯರಿಗೆ ಬರೆದ ಪತ್ರ
 20. ಯಕೋಬನು ಬರೆದ ಪತ್ರ
 21. ಪೇತ್ರನು ಬರೆದ ಮೊದಲ ಪತ್ರ
 22. ಪೇತ್ರನು ಬರೆದ ಎರಡನೆಯ ಪತ್ರ
 23. ಯೊವಾನ್ನನು ಬರೆದ ಮೊದಲ ಪತ್ರ
 24. ಯೊವಾನ್ನನು ಬರೆದ ಎರಡನೆಯ ಪತ್ರ
 25. ಯೊವಾನ್ನನು ಬರೆದ ಮೂರನೆಯ ಪತ್ರ
 26. ಯೂದನು ಬರೆದ ಪತ್ರ
 27. ಯೊವಾನ್ನನು ಕಂಡ ದಿವ್ಯ ದರ್ಶನಗಳ ಪ್ರಕಟಣೆ