ವಿ. ವಿ. ಎಸ್. ಲಕ್ಷ್ಮಣ್
ವಂಗಿಪುರಪ್ಪು ವೆಂಕಟಸಾಯಿ ಲಕ್ಶ್ಮಣ್‍ರವರು ಬಹಳ ಜನಪ್ರಿಯವಾದ ಕ್ರಿಕೆಟಿಗ. ಕ್ರಿಕೆಟ್ ಅತ್ಯಂತ ಹೆಚ್ಛು ಜನಪ್ರಿಯತೆಯನ್ನು ಗಳಿಸಿರುವ ಆಟಗಳಲ್ಲೊಂದು. ಹೆಚ್ಚು ಕಡಿಮೆ ಎಲ್ಲಾ ರಾಷ್ಟ್ರಗಳಲ್ಲೂ ಇದು ತನ್ನ ಗುರುತನ್ನು ಉಳಿಸಿಕೊಂಡಿದೆ. ಭಾರತದಲ್ಲೂ ನಮಗೆ ಸಾಕಷ್ಟು ಜನ ಕ್ರಿಕೆಟ್ ಅಭಿಮಾನಿಗಳು ಹಾಗೂ ಅತ್ತ್ಯುತ್ತಮ ಆಟಗಾರರು ಕಾಣಸಿಗುತ್ತಾರೆ. ಇಂತಹ ಲೋಕದಲ್ಲಿ, ಸಾಕಷ್ಟು ಸ್ಪರ್ಧೆ ಇದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಸರನ್ನು ಛಾಪಿಸಿರುವ ಕೆಲವೇ ಭಾರತೀಯ ಆಟಗಾರರಲ್ಲಿ ವಿವಿಎಸ್ ಲಕ್ಷ್ಮಣ್ ಕೂಡ ಒಬ್ಬರು.
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ವಂಗಿಪುರಪು ವೆಂಕಟಾ ಸಾಯಿ ಲಕ್ಷ್ಮಣ್ | |||||||||||||||||||||||||||||||||||||||||||||||||||||||||||||||||
ಹುಟ್ಟು | ನವೆಂಬರ್ ೧, ೧೯೭೪ ತೆಲಂಗಾಣ ರಾಜ್ಯ | |||||||||||||||||||||||||||||||||||||||||||||||||||||||||||||||||
ಅಡ್ಡಹೆಸರು | VVS, Very Very Special | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ off spin | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ [[ಭಾರತ ಟೆಸ್ಟ್ ಕ್ರಿಕೆಟಿಗರ ಪಟ್ಟಿ|209]]) | 20 November 1996 v South Africa | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | 24 January 2012 v Australia | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ [[ಭಾರತ ಅಂ. ಏಕದಿನ ಕ್ರಿಕೆಟಿಗರ ಪಟ್ಟಿ|112]]) | 9 April 1998 v Zimbabwe | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | 3 December 2006 v South Africa | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | 19, 22 | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
1992 –2012 | Hyderabad | |||||||||||||||||||||||||||||||||||||||||||||||||||||||||||||||||
2007, 2009 | Lancashire | |||||||||||||||||||||||||||||||||||||||||||||||||||||||||||||||||
2008–2010 | Deccan Chargers | |||||||||||||||||||||||||||||||||||||||||||||||||||||||||||||||||
2011 | Kochi Tuskers Kerala | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: Cricinfo, 30 January 2012 |
ಜನನ ಹಾಗೂ ಬಾಲ್ಯ
ಬದಲಾಯಿಸಿಕ್ರಿಕೆಟ್ ಕ್ಶೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಿ.ವಿ.ಎಸ್. ಲಕ್ಶ್ಮಣ್ ಅವರ ಪೂರ್ಣ ಹೆಸರು ವಾಂಗಿಪುರಪು ವೆಂಕಟ ಸ್ವಾಮಿ ಲಕ್ಶ್ಮಣ್[೧]. ಇವರು ಡಾ.ಶಾಂತಾರಾಮ್ ಹಾಗೂ ಡಾ.ಸತ್ಯಭಾಮ ದಂಪತಿಯ ಮಗನಾಗಿ ೧ನೇ ನವೆಂಬರ್ ೧೯೭೪ರಲ್ಲಿ ಆಂಧ್ರಪ್ರದೇಶ(ಇಂದಿನ ತೆಲಂಗಾಣ)ದ ಹೈದರಾಬಾದಿನಲ್ಲಿ ಜನಿಸಿದರು. ಇವರು ಭಾರತದ ಎರಡನೇ ರಾಷ್ಟ್ರಪತಿಯಾದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗನೂ ಹೌದು. ಲಕ್ಷ್ಮಣ್ ಅವರು 'ಲಿಟಲ್ ಫ್ಲವರ್' ಪ್ರೌಢಶಾಲೆಯಲ್ಲಿ ಓದಿದರು. ೨೦೦೪ರ ಫೆಬ್ರುವರಿ ೧೬ರಂದು ಗುಂಟೂರಿನ ಜಿ. ಆರ್. ಶೈಲಜಾ ಅವರೊಂದಿಗೆ ಮದುವೆ ಮಾಡಿಕೊಂಡರು. ಲಕ್ಶ್ಮಣ್ ಅವರಿಗೆ ಈಗ ಇಬ್ಬರು ಮಕ್ಕಳು. ಇವರ ಮಗನ ಹೆಸರು ಸರ್ವಜಿತ್ ಹಾಗೂ ಮಗಳ ಹೆಸರು ಅಚಿಂತ್ಯ.
ಕ್ರಿಕೆಟಿಗನಾಗಿ ಲಕ್ಷ್ಮಣ್
ಬದಲಾಯಿಸಿವೈದ್ಯಕೀಯ ಮಹಾವಿದ್ಯಾಲಯಕ್ಕೆ ಸೇರಿಕೊಂಡರೂ ಕ್ರಿಕೆಟ್ಟನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡರು. ಇವರು ಒಬ್ಬ ಅತ್ತ್ಯುತ್ತಮ ಬಲಗೈ ಬ್ಯಾಟ್ಸ್ಮನ್‍ರಾಗಿದ್ದರು. ತಮ್ಮ ಪಂದ್ಯ ಗೆಲ್ಲಿಸುವ ಹಾಗೂ ಪಂದ್ಯ ಉಳಿಸುವ ಇನ್ನಿಂಗ್ಸ್ ಗಳಿಗೆ ಪ್ರಸಿದ್ದವಾಗಿದ್ದ ಇವರು ತಮ್ಮ ಅದ್ಭುತ ಪ್ರದರ್ಶನದಿಂದ ರಾಷ್ಟೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಅವರ ಕಾಲದ ಅತ್ಯಂತ ಬಲಶಾಲಿ ಕ್ರಿಕೆಟ್ ತಂಡವಾಗಿದ್ದ ಆಸ್ಟ್ರೇಲಿಯಾದ ವಿರುದ್ಧ ೨೮೧ ರನ್ ಬಾರಿಸುವ ಮೂಲಕ ಕ್ರಿಕೆಟ್ ತಂಡದಲ್ಲಿಯೇ ಸಂಚಲನ ಮೂಡಿಸಿದರು. ಲಕ್ಷ್ಮಣ್ ಅವರಿಗೆ ಭಾರತದ ನಾಲ್ಕನೇ ಅತ್ತ್ಯುಚ್ಛ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಇವರು ಭಾರತದ ತಂಡದಲ್ಲಿ ತಮ್ಮದೇ ಆದ ಶೈಲಿ, ತಾಂತ್ರಿಕತೆ ಹಾಗೂ ಆಕ್ರಮಣಶೀಲತೆಗೆ ಹೆಸರುವಾಸಿಯಾಗಿದ್ದರು. ಇವರು ವೇಗ ಹಾಗೂ ಗಿರಕಿ ಚೆಂಡುಗಳೆರೆಡರಲ್ಲಿಯೂ ಪರಿಣಿತಿಯನ್ನು ಪಡೆದಿದ್ದರು. ಈ ಕೌಶಲ್ಯದಿಂದ ಅವರು ಚೆಂಡನ್ನು ಮೈದಾನದ ಯಾವ ಮೂಲೆಗಾದರೂ ವಿಭಜಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಲಕ್ಶ್ಮಣ್ ಅವರಿಗೆ ಮೊಹಮ್ಮದ್ ಅಜ಼ರುದ್ದೀನ್ ಅವರು ಪ್ರೇರಣೆಯಾಗಿದ್ದರು. ಲಕ್ಶ್ಮಣ್ ಅವರ ಮಣಿಕಟ್ಟುಗಳನ್ನು ಬಳಸುವ ಶೈಲಿಯೇ ಅವರಿಗೆ ಚೆಂಡನ್ನು ಮೈದಾನದ ತುಂಬಾ ವಿಭಜಿಸಲು ಸಹಾಯಕವಾಗಿತ್ತು. ಆರಂಭಿಕ ವೃತ್ತಿ ಜೀವನದಲ್ಲಿ ಇವರ ಹೊಸ ಚೆಂಡುಗಳಿಗೆ ಆಡುತ್ತಿದ್ದ ರೀತಿ ಜೆಫ್ರಿ ಬಾಯ್ಕಾಟ್ ಅವರಿಂದ ಪ್ರಶಂಸೆಗೆ ಪಾತ್ರವಾಗಿತ್ತು. ತಂಡ ಆಯ್ಕೆಗಾರರು ದಾಂಡಿಗರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಬಂದರೂ ಕಣ್ಣು ಮುಚ್ಚಿಕೊಂಡು ಇವರನ್ನು ಆಟಕ್ಕೆ ಕಳುಹಿಸುತ್ತಿದ್ದರು. ಇದು ಲಕ್ಶ್ಮಣ್ ಅವರ ಆಟದ ಶೈಲಿಯ ಮೇಲೆ ಆಯ್ಕೆಗಾರರಿಗಿದ್ದ ನಂಬಿಕೆಯನ್ನು ತಿಳಿಸುತ್ತದೆ. ಇವರ ಕ್ಷಮತೆಯನ್ನು ಗಮನಿಸಿದ್ದ ಆಯ್ಕೆಗಾರರು ಇವರನ್ನು ಹೆಚ್ಚೂ ಕಡಿಮೆ ಎಲ್ಲಾ ಸ್ಥಾನಗಳಲ್ಲೂ ಆಡುವಂತೆ ಮಾಡಿದರು. ಕೆಲವೊಮ್ಮೆ ಇವರು ಮೊದಲಿಗನಾಗಿ ಆಡಿದ್ದೂ ಉಂಟು. ಇವರು ಪಂದ್ಯದ ಮಧ್ಯ ಭಾಗದಲ್ಲಿ ತಮ್ಮ ಸ್ಥಾನವನ್ನು ಗುರುತಿಸಿಕೊಂಡರು. ೩, ೫ ಹಾಗೂ ೬ ನೇ ಸ್ಥಾನದಲ್ಲಿ ಲಕ್ಶ್ಮಣ್ ಅವರು ತಮ್ಮ ಶ್ರೇಷ್ಠ ಇನ್ನಿಂಗ್ಸ್ ಗಳನ್ನು ಆಡಿದರು.
ಕ್ರಿಕೆಟ್ ಕ್ಷೇತ್ರದಲ್ಲಿ ಕೆಲ ಸಾಧನೆಗಳು
ಬದಲಾಯಿಸಿ೨೦೦೧ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇವರು ಮೂರನೇ ಸ್ಥಾನಕ್ಕೆ ಬಡ್ತಿ ಪಡೆದು ೨೮೧ ರನ್‍ಗಳನ್ನು ಬಾರಿಸುವ ಮೂಲಕ ಭಾರತವನ್ನು ಅತ್ಯಂತ ದೊಡ್ಡ ಅಂತರದಿಂದ ಜಯಭೇರಿ ಬಾರಿಸುವಂತೆ ಮಾಡಿದ್ದು, ಭಾರತದ ಕ್ರಿಕೆಟ್ ತಂಡವನ್ನು ವಿಶ್ವಮಟ್ಟದಲ್ಲಿ ಎತ್ತರದ ಸ್ಥಾನಕ್ಕೆ ಏರುವಂತೆ ಮಾಡಿತು. ಲಕ್ಶ್ಮಣ್‍ರವರು ತಮ್ಮ ಮೊದಲ ಅಂಡರ್-೧೯ನ ಆರಂಭವನ್ನು ೧೯೮೪ ರ ಫೆಬ್ರುವರಿಯಲ್ಲಿ ಆಸ್ಟ್ರೇಲಿಯಾದ ವಿರುದ್ಧ ಆಡುವ ಮೂಲಕ ಮಾಡಿದರು. ಈ ಪಂದ್ಯದಲ್ಲಿ ಇವರು ಆರನೇ ಸ್ಥಾನದಲ್ಲಿ ಬ್ರೆಟ್ಟ್ಲೀ ಹಾಗೂ ಜೇಸನ್‍ರವರ ಚೆಂಡುಗಳಿಗೆ ಆಡಿ ೮೮ ರನ್ ಗಳಿಸಿದರು. ಪಂದ್ಯದ ವಿಶೇಷತೆಯೆಂದರೆ ಬ್ರೆಟ್ಟ್ಲೀ ಹಾಗೂ ಜೇಸನ್ ಇಬ್ಬರೂ ತಮ್ಮ ಅಂಡರ್ ೧೯ ಪಂದ್ಯಗಳ ಆರಂಭವನ್ನು ಇದೇ ಪಂದ್ಯದ ಮೂಲಕ ಮಾಡಿದರು. ಸರಣಿಯ ಎರಡನೇ ಆಟದ ಮೊದಲ ಇನ್ನಿಂಗ್ಸ್ ನಲ್ಲಿ ೧೫೧ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ೭೧ ರನ್ ಗಳನ್ನು ಬಾರಿಸುವ ಮೂಲಕ ತಂಡವು ೨೨೬ ರನ್ ಗಳ ಅಂತರದಿಂದ ಜಯಭೇರಿ ಬಾರಿಸಲು ಮಹತ್ತರ ಕೊಡುಗೆಯನ್ನು ನೀಡಿದರು. ಮೂರನೇ ಪಂದ್ಯದಲ್ಲೂ ಕೂಡ ೩೬ ಹಾಗೂ ೮೪ ರನ್ ಗಳನ್ನು ಹೊಡೆಯುವ ಮೂಲಕ ಸರಣಿಯ ಗೆಲುವು ಸಾಧಿಸಲು ಸಹಕಾರಿಯಾದರು. ಅದೇ ವರ್ಷದ ಆಗಸ್ಟ್ ತಿಂಗಳಲ್ಲಿ ಭಾರತದ ಅಂಡರ್ ೧೯ ತಂಡ ಎರಡು ಏಕದಿನ ಪಂದ್ಯ ಹಾಗೂ ಮೂರು ಟೆಸ್ಟ್ ಪಂದ್ಯಗಳನ್ನು ಆಡಲು ಇಂಗ್ಲೆಂಡ್ ದೇಶಕ್ಕೆ ಪ್ರವಾಸ ಬೆಳೆಸಿತು. ಲಕ್ಷ್ಮಣ್ ಅವರು ಏಕದಿನ ಪಂದ್ಯಗಳಲ್ಲಿ ೨೦ ಹಾಗೂ ೫ ರನ್‍ಗಳನ್ನು ಬಾರಿಸುವ ಮೂಲಕ ನಿರಾಶೆಗೊಳಿಸಿದರಾದರೂ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ೧೧೯ ರನ್ ಬಾರಿಸಿದರು. ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಭಾರತವು ಒಂಭತ್ತು ಅಂಕಗಳ ಅಂತರದಿಂದ ಜಯಗಳಿಸಿದ್ದರಿಂದ ಇವರಿಗೆ ಆಡಲು ಅವಕಾಶವೇ ಸಿಗಲಿಲ್ಲ. ಇವರು ಎರಡನೇ ಪಂದ್ಯದಲ್ಲಿ ೨೮ ಹಾಗೂ ಮೂರನೇ ಪಂದ್ಯದಲ್ಲಿ ೪ ರನ್‍ಗಳನ್ನು ಗಳಿಸಿದರು.
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಲಕ್ಷ್ಮಣ್ ರ ಫಲಿತಾಂಶಗಳು | ||||||
---|---|---|---|---|---|---|
ಪಂದ್ಯಗಳು | ಜಯ | ಸೋಲು |
ಡ್ರಾ | ಟೈ | ಫಲಿತಾಂಶ ಇಲ್ಲ | |
ಟೆಸ್ಟ್ |
134 | 47 | 41 | 46 | 0 | – |
ODI[೨][೩] | 86 | 35 | 49 | - | - | 2 |
ಗೋಲ್ಡನ್ ಸರಣಿ
ಬದಲಾಯಿಸಿಲಕ್ಶ್ಮಣ್ ಅವರ ವೃತ್ತಿ ಜೀವನ ೨೦೦೧ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ನಾಟಕೀಯವಾಗಿ ಬದಲಾಯಿತು. ಮುಂಬೈನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಲಕ್ಷ್ಮಣ್ ೨೦ ಮತ್ತು ೧೨ ರನ್ ಹೊಡೆದಿದ್ದರು. ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಲಕ್ಷ್ಮಣ್ ಬಾರಿಸಿದ ರನ್‍ಗಳಿಂದ ಇಡೀ ಸರಣಿಯೇ ತಿರುವು ಪಡೆದುಕೊಂಡಿತು. ಮೊದಲ ಇನ್ನಿಂಗ್ಸ್ ನಲ್ಲಿ ೫೯ ರನ್ ಗಳಿಸಿದ ಇವರು, ಎರಡನೇ ಇನ್ನಿಂಗ್ಸ್ ನಲ್ಲಿ ೨೮೧ ರನ್ ಬಾರಿಸುವ ಮೂಲಕ ಹದಿನೇಳನೆ ಗೆಲುವಿನ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದರು. ಈ ಮೂಲಕ ಇವರು ಸುನೀಲ್ ಗವಾಸ್ಕರ್ ಅವರ ೨೩೬ ರನ್ ಗಳ ದಾಖಲೆಯನ್ನು ಮುರಿದಿದ್ದರು. ಇವರ ಈ ಅಪೂರ್ವ ದಾಖಲೆ ೨೦೦೪ರಲ್ಲಿ ವೀರೆಂದ್ರ ಸೆಹ್ವಾಗ್ ತ್ರಿಶತಕ ಬಾರಿಸುವವರೆಗೂ ಜೀವಂತವಾಗಿತ್ತು.
ಅಂಕಿಅಂಶ
ಬದಲಾಯಿಸಿಅಂತರರಾಷ್ಟ್ರೀಯ ಶತಕಗಳು
ಬದಲಾಯಿಸಿಟೆಸ್ಟ್
ಬದಲಾಯಿಸಿBatting[೪] | |||||
---|---|---|---|---|---|
Opposition | Matches | Runs | Average | High score | 100s / 50s |
Australia | 29 | 2434 | 49.67 | 281 | 6 / 12 |
Bangladesh | 3 | 117 | 39.00 | 69* | 0 / 1 |
England | 17 | 766 | 30.64 | 75 | 0 / 6 |
New Zealand | 10 | 818 | 58.42 | 124* | 2 / 6 |
Pakistan | 15 | 775 | 43.05 | 112* | 1 / 6 |
South Africa | 19 | 976 | 37.53 | 143* | 1 / 6 |
Sri Lanka | 13 | 900 | 47.36 | 104 | 2 / 8 |
West Indies | 22 | 1715 | 57.16 | 176* | 4 / 11 |
Zimbabwe | 6 | 280 | 40 | 140 | 1 / 0 |
Overall | 134 | 8781 | 45.97 | 281 | 17 / 56 |
ಪ೦ದ್ಯಪುರುಷ (ಟೆಸ್ಟ್)
ಬದಲಾಯಿಸಿSeason | Opponent | Ground | Record[೫] |
---|---|---|---|
2000/01 | Australia | Eden Gardens, Kolkata | 1st Innings: 59 2nd Innings: 281 |
2002 | West Indies | Queenspark, Port of Spain | 1st Innings: 69* 2nd Innings: 74 |
2008 | Australia | Feroz Shah Kotla, Delhi | 1st Innings: 200* 2nd Innings: 59* |
2010 | Sri Lanka | P. Saravanamuttu Stadium, Colombo | 1st Innings: 56 2nd Innings: 103* |
2010/11 | South African | Kingsmead Cricket Ground, Durban | 1st Innings: 38 2nd Innings: 96 |
2011/12 | West Indies | Eden Gardens, Kolkata | 1st Innings: 176* |
ಏಕದಿನ
ಬದಲಾಯಿಸಿBatting[೬] | Fielding | ||||||
---|---|---|---|---|---|---|---|
Opposition | Matches | Innings | Runs | Average | High score | 100s / 50s | Catches |
Australia | 21 | 19 | 739 | 46.18 | 106* | 4 / 2 | 9 |
Bangladesh | 2 | 2 | 5 | 5.00 | 4 | 0 / 0 | 3 |
England | 8 | 8 | 143 | 17.87 | 33 | 0 / 0 | 3 |
Kenya | 3 | 3 | 95 | 31.66 | 79 | 0 / 1 | 1 |
New Zealand | 10 | 10 | 182 | 18.2 | 60 | 0 / 1 | 3 |
Pakistan | 10 | 10 | 234 | 23.4 | 107 | 1 / 0 | 2 |
South Africa | 3 | 3 | 27 | 22 | 9 | 0 / 0 | 1 |
Sri Lanka | 6 | 6 | 185 | 37.00 | 87* | 0 / 1 | 1 |
UAE | 1 | 1 | 14 | 14.00 | 14 | 0 / 0 | 2 |
West Indies | 10 | 10 | 339 | 37.66 | 99 | 0 / 3 | 2 |
Zimbabwe | 12 | 11 | 375 | 37.5 | 131 | 1 / 2 | 12 |
Overall | 86 | 83 | 2338 | 30.76 | 131 | 6 / 10 | 39 |
ಉಲ್ಲೇಖಗಳು
ಬದಲಾಯಿಸಿ- ↑ http://www.espncricinfo.com/india/content/player/30750.html
- ↑ "List of ODI victories". Cricinfo. Retrieved 25 April 2012.
- ↑ "Batting records | One-Day Internationals | Cricinfo Statsguru | ESPN Cricinfo". Stats.espncricinfo.com. Retrieved 2013-05-07.
- ↑ "Statistics / Statsguru / VVS Laxman / Test matches". ESPNcricinfo. ESPN EMEA Ltd. Retrieved 1 November 2011.
- ↑ "Statsguru — VVS Laxman — Tests — Match/series awards list". ESPNcricinfi. ESPN EMEA Ltd. Archived from the original on 2014-06-13. Retrieved 1 November 2011.
- ↑ "Statistics / Statsguru / VVS Laxman / One-Day Internationals". ESPNcricinfo. ESPN EMEA Ltd. Retrieved 1 November 2011.