ಡರ್ಬನ್
ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್ ಪ್ರಾಂತ್ಯದ ಎಥೆಕ್ವಿನಿ ಮಹಾನಗರವಲಯದ ಪೌರಸಂಸ್ಥೆಯ ಭಾಗವಾಗಿರುವ ಬೃಹತ್ ಮಹಾನಗರ ಡರ್ಬನ್ (ಜುಲು:eThekwini), ರಾಷ್ಟ್ರದಲ್ಲೇ ಮೂರನೇ ಬೃಹತ್ ಮಹಾನಗರವಾಗಿದೆ. ದಕ್ಷಿಣ ಆಫ್ರಿಕಾದಲ್ಲಿಯೇ ಅತ್ಯಂತ ಅವಿಶ್ರಾಂತ ಬಂದರೆಂದು ಡರ್ಬನ್ ನಗರವು ಹೆಸರುವಾಸಿಯಾಗಿರುವುದಲ್ಲದೇ ಮಹಾನಗರ'ದ ಬೆಚ್ಚನೆಯ ಉಪೋಷ್ಣವಲಯ ಹವಾಮಾನ ಮತ್ತು ಸವಿಸ್ತಾರ ಸಮುದ್ರ ತೀರಗಳಿಂದಾಗಿ ಪ್ರವಾಸೋದ್ಯಮದ ಪ್ರಮುಖ ಕೇಂದ್ರವೂ ಆಗಿದೆ. ಈ ಮಹಾನಗರವು 2007ರ ಸಾಲಿನ ಸಮುದಾಯ ಸಮೀಕ್ಷೆಯ ಪ್ರಕಾರ, ಬಹುತೇಕ 3.5 ದಶಲಕ್ಷದಷ್ಟು,[೨] ಜನಸಂಖ್ಯೆ ಹೊಂದಿದ್ದು, ಆಫ್ರಿಕಾ ಖಂಡದ ಪೂರ್ವ ಕರಾವಳಿಯಲ್ಲಿಯೇ ಡರ್ಬನ್ ಅತಿದೊಡ್ಡ ಮಹಾನಗರವಾಗಿದೆ. ವಿಸ್ತೀರ್ಣದಲ್ಲಿ ಟೆಂಪ್ಲೇಟು:Km2 to sq miರಷ್ಟಿರುವ ಇಲ್ಲಿನ ಭೂಪ್ರದೇಶವು ತುಲನಾತ್ಮಕವಾಗಿ ದಕ್ಷಿಣ ಆಫ್ರಿಕಾದ ಇತರ ಮಹಾನಗರಗಳಿಗಿಂತ ದೊಡ್ಡದಾಗಿರುವುದರಿಂದ, ಸ್ವಲ್ಪಮಟ್ಟಿಗೆ ಕಡಿಮೆಯೆನಿಸುವ ಟೆಂಪ್ಲೇಟು:PD km2 to sq miರಷ್ಟು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ.[೧]
Durban | |
---|---|
City | |
Country | ದಕ್ಷಿಣ ಆಫ್ರಿಕಾ |
Province | KwaZulu-Natal |
Metropolitan municipality | eThekwini |
Established | 1835 |
Government | |
• Mayor | Obed Mlaba (ANC) |
Area | |
• Total | ೨,೨೯೧.೮೯ km೨ (೮೮೪.೯೦ sq mi) |
Population (2007)[೨] | |
• Total | ೩೪,೬೮,೦೮೬ |
• Density | ೧,೫೧೩/km೨ (೩,೯೨೦/sq mi) |
Time zone | UTC+2 (South Africa Standard Time) |
Postal Code | 4001 |
Area code | 031 |
Website | www.durban.gov.za |
ಇತಿಹಾಸ
ಬದಲಾಯಿಸಿಡ್ರೇಕೆನ್ಸ್ಬರ್ಗ್ನಲ್ಲಿರುವ ಗುಹೆಗಳಲ್ಲಿ ಪತ್ತೆಯಾದ ಶಿಲಾ ಕೃತಿಗಳ ಇಂಗಾಲ ಕಾಲಗಣನೆಯು ಸೂಚಿಸುವ ಪ್ರಕಾರ ಡರ್ಬನ್ ಪ್ರದೇಶದ ಮೊದಲಿಗೆ ತಿಳಿದುಬಂದಿರುವ ನಿವಾಸಿಗಳು ಉತ್ತರದಿಂದ ಸರಿಸುಮಾರು 100,000 BCಯ ವೇಳೆಗೆ ಬಂದಿದ್ದು, ಕಳೆದ ಸಹಸ್ರಮಾನದ ಮಧ್ಯಭಾಗದ ಅವಧಿಯಲ್ಲಿ ಉತ್ತರದ ಬಂಟು ಜನಾಂಗದವರ ವಿಸ್ತರಣೆಯವರೆಗೆ ಆ ಜನಗಳು ಕ್ವಾಝುಲು-ನಟಾಲ್‌ನ ಪ್ರಧಾನ ಬಯಲುಪ್ರದೇಶಗಳಲ್ಲಿ ವಾಸಿಸುತ್ತಿದ್ದರು.
1497ರಲ್ಲಿ ಪೋರ್ಚುಗೀಸ್ ಶೋಧಕ ವಾಸ್ಕೋ ಡ ಗಾಮ, ಯೂರೋಪ್‌ನಿಂದ ಭಾರತದ ಕಡೆಗೆ ಸಾಗರ ಮಾರ್ಗವನ್ನು ಹುಡುಕಿಕೊಂಡು ಬರುತ್ತಿದ್ದಾಗ ಕ್ವಾಝುಲು-ನಟಾಲ್ ತೀರಕ್ಕೆ ಸಮಾಂತರದಲ್ಲಿ ಕ್ರಿಸ್‌ಮಸ್‌ನ ಅವಧಿಯಲ್ಲಿ ಬಂದು ಈ ಪ್ರದೇಶವನ್ನು ಕಂಡುಕೊಳ್ಳುವವರೆಗೆ ಪ್ರದೇಶದ ಬಗ್ಗೆ ಯಾವುದೇ ಲಿಖಿತ ಇತಿಹಾಸವಿಲ್ಲದ ಕಾರಣ ಇಲ್ಲಿನ ಪ್ರಾಚೀನ ನಿವಾಸಿಗಳ ಇತಿಹಾಸದ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. "ನಟಾಲ್" ಅಥವಾ ಪೋರ್ಚುಗೀಸ್ ಭಾಷೆಯಲ್ಲಿ ಕ್ರಿಸ್‌ಮಸ್ ಎಂದು ಆತ ಈ ಪ್ರದೇಶವನ್ನು ಕರೆದನು.[೩]
ಮೊದಲ ಶ್ವೇತವರ್ಣೀಯ ವಸಾಹತುದಾರರು
ಬದಲಾಯಿಸಿ1824ರಷ್ಟು ಹಿಂದಿನದ್ದಾಗಿರುವ ಆಧುನಿಕ ಡರ್ಬನ್ ಮಹಾನಗರಕ್ಕೆ ಬ್ರಿಟಿಷ್ ಸೇನಾಧಿಕಾರಿ/ಲೆಫ್ಟಿನೆಂಟ್ F. G. ಫೇರ್‌ವೆಲ್‌ರ ನೇತೃತ್ವದಡಿಯಲ್ಲಿ ಕೇಪ್ ವಸಾಹತು/ಕಾಲೊನಿ ನಗರದಿಂದ 25 ಜನರ ತಂಡವೊಂದು ಬಂದು ಇಂದಿನ ಫೇರ್‌ವೆಲ್ ಚೌಕದ ಬಳಿಯ ನಟಾಲ್ ಕೊಲ್ಲಿಯ ಉತ್ತರ ತೀರದಲ್ಲಿ ವಸಾಹತನ್ನು ಸ್ಥಾಪಿಸಿದ್ದರು. ಸಾಹಸಿಯಾದ ಹೆನ್ರಿ ಫ್ರಾನ್ಸಿಸ್ ಫಿನ್ನ್ (1803–1861) ಎಂಬುವವರು ಫೇರ್‌ವೆಲ್‌ರೊಡನೆ ಜೊತೆಗಾರರಾಗಿದ್ದರು. ಕದನದಲ್ಲಿ ಆದ ಇರಿತದ ಗಾಯವನ್ನು ಗುಣಪಡಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಜು/ಝುಲು ಅರಸರಾದ ಷಾಕಾರೊಂದಿಗೆ ಸ್ನೇಹ ಬೆಳೆಸುವಲ್ಲಿ ಫಿನ್ನ್ ಯಶಸ್ವಿಯಾಗಿದ್ದರು. ಫಿನ್ನ್‌ರಿಗೆ "ನೂರು ಮೈಲಿಗಳಷ್ಟು ಒಳಭಾಗವನ್ನು ಹೊಂದಿರುವ ಕರಾವಳಿಯ 30-ಮೈಲಿಗಳಷ್ಟು ವ್ಯಾಪ್ತಿಯ ಪಟ್ಟಿಯನ್ನು" ತನ್ನ ಕೃತಜ್ಞತೆಯ ಕುರುಹಾಗಿ ಷಾಕಾ ನೀಡಿದ್ದರು.[೪]
ಫಿನ್ನ್'ನ ಪ್ರಾಂತ್ಯದಲ್ಲಿ ಜೂನ್ 23, 1835ರಂದು ನಡೆದ 35 ಬಿಳಿಯ/ಶ್ವೇತ ನಿವಾಸಿಗಳ ಸಭೆಯೊಂದರಲ್ಲಿ, ಆ ಪ್ರದೇಶದಲ್ಲಿ ರಾಜಧಾನಿಯೊಂದನ್ನು ಸ್ಥಾಪಿಸಿ ಕೇಪ್ ವಸಾಹತು/ಕಾಲೊನಿಯ ಆಗಿನ ಪ್ರಾಂತಾಧಿಪತಿಯಾಗಿದ್ದ ಸರ್ ಬೆಂಜಮಿನ್ ಡಿ'ಅರ್ಬನ್‌ರ ಹೆಸರಾಗಿ ಅದಕ್ಕೆ "ಡಿ'ಅರ್ಬನ್" ಎಂದು ಹೆಸರಿಡಲು ನಿರ್ಧರಿಸಲಾಯಿತು.[೫]
ನಟಾಲಿಯಾ ಗಣರಾಜ್ಯ
ಬದಲಾಯಿಸಿ1838ರಲ್ಲಿ ನಟಾಲಿಯಾ ಗಣರಾಜ್ಯವನ್ನು ಸ್ಥಾಪಿಸಿದ ವೂರ್‌ಟ್ರೆಕ್ಕರ್‌ಗಳು ಪೀಟರ್‌ಮಾರಿಟ್ಜ್‌ಬರ್ಗ್‌ಅನ್ನು ಅದರ ರಾಜಧಾನಿಯನ್ನಾಗಿ ಮಾಡಿಕೊಂಡರು.
ವೂರ್‌ಟ್ರೆಕ್ಕರ್‌ಗಳು ಜು/ಝುಲು ಜನರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೆಂಬ ವರ್ತಮಾನವು ಕೇಪ್ ವಸಾಹತು/ಕಾಲೊನಿಗೆ ತಲುಪಿತು. ನಟಾಲ್ ಬಂದರು ನಗರದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಮರು-ಸ್ಥಾಪಿಸಲು ನಾಯಕ/ಕ್ಯಾಪ್ಟನ್ ಚಾರ್ಲ್‌ಟನ್ ಸ್ಮಿತ್‌ರ ನಾಯಕತ್ವದಡಿಯಲ್ಲಿ ಕೇಪ್ ವಸಾಹತು/ಕಾಲೊನಿಯ ಪ್ರಾಂತಾಧಿಪತಿಯು ಸೇನೆಯೊಂದನ್ನು ಕಳುಹಿಸಿದನು. 4 ಮೇ 1824ರಂದು ಸೇನೆಯು ಬಂದು ತಲುಪಿತಲ್ಲದೇ ನಂತರ ದ ಓಲ್ಡ್ ಫೋರ್ಟ್/ಹಳೆಯ ಕೋಟೆ ಎಂದು ಕರೆಯಲ್ಪಟ್ಟ ಕೋಟೆಯನ್ನು ಕಟ್ಟಿತು. ಬ್ರಿಟಿಷ್‌ಪಡೆಯು ಕಾಂಗೆಲ್ಲಾದಲ್ಲಿ 23/24 ಮೇ 1842ರ ರಾತ್ರಿ ವೂರ್‌ಟ್ರೆಕ್ಕರ್ ಪಡೆ/ನೆಲೆಯ ಮೇಲೆ ದಾಳಿ ಮಾಡಿತು. ಈ ದಾಳಿಯು ವಿಫಲವಾಗಿ ಬ್ರಿಟಿಷರು ತಮ್ಮ ನೆಲೆಗೆ ಹಿಮ್ಮೆಟ್ಟಬೇಕಾಯಿತಲ್ಲದೇ, ಆ ನೆಲೆಯು ಮುತ್ತಿಗೆಯಲ್ಲಿಡಲ್ಪಟ್ಟಿತು. ಡಿಕ್ ಕಿಂಗ್ ಎಂಬೋರ್ವ ಸ್ಥಳೀಯ ವರ್ತಕ ಮತ್ತು ಆತನ ಸೇವಕ, ಇಬ್ಬರೂ ಎನ್‌ಡೊಂಗೆನಿ ಮುತ್ತಿಗೆಯಿಂದ ತಪ್ಪಿಸಿಕೊಂಡರಲ್ಲದೇ ಹೆಚ್ಚುವರಿ ಸೇನಾಬಲವನ್ನು ಕ್ರೋಢೀಕರಿಸಿಕೊಳ್ಳಲು ಹೊರಟು 600 km ದೂರದಲ್ಲಿರುವ ಗ್ರಹಾಮ್ಸ್‌ಟೌನ್‌ಗೆ, ಹದಿನಾಲ್ಕು ದಿನಗಳಲ್ಲಿ ತಲುಪಿದರು. ಡರ್ಬನ್‌ಗೆ 20 ದಿನಗಳ ನಂತರ ಹೆಚ್ಚುವರಿ ಪಡೆಗಳು ತಲುಪಿದವು, ನಂತರ ವೂರ್‌ಟ್ರೆಕ್ಕರ್‌ಗಳು ಹಿಮ್ಮೆಟ್ಟಿದರಲ್ಲದೇ ಮುತ್ತಿಗೆಯನ್ನು ತೆರವುಗೊಳಿಸಲಾಯಿತು.[೬]
ಜು/ಝುಲು ಜನರೊಂದಿಗಿನ ತೀವ್ರತರವಾದ ಘರ್ಷಣೆಗಳು ಡರ್ಬನ್‌ನ ತೆರವಿಗೆ ಕಾರಣವಾದರೂ, ಅಂತಿಮವಾಗಿ ದಕ್ಷಿಣ ಆಫ್ರಿಕಾದ ಶ್ವೇತವರ್ಣೀಯರು ಸೇನಾಬಲಪ್ರಯೋಗ ಒತ್ತಡಕ್ಕೆ ಮಣಿದು 1844ರಲ್ಲಿ ಬ್ರಿಟಿಷ್ ಸ್ವಾಧೀನಪಡಿಕೆಯನ್ನು ಒಪ್ಪಿಕೊಂಡರು.
ಬ್ರಿಟಿಷ್ ವಸಾಹತು ಆಳ್ವಿಕೆ
ಬದಲಾಯಿಸಿಆ ಪ್ರದೇಶಕ್ಕೆ ಬ್ರಿಟಿಷ್ ಪ್ರಾಂತಾಧಿಪತಿಯನ್ನು ನೇಮಿಸಲಾಯಿತಲ್ಲದೇ ಯೂರೋಪ್ ಮತ್ತು ಕೇಪ್ ವಸಾಹತು/ಕಾಲೊನಿಯಿಂದ ಅನೇಕ ವಸಾಹತುದಾರರು ವಲಸೆ ಬಂದರು. 1860ರ ದಶಕದಲ್ಲಿ ಕಬ್ಬಿನ ಉದ್ಯಮವನ್ನು ಬ್ರಿಟಿಷರು ಸ್ಥಾಪಿಸಿದರು. ಜು/ಝುಲು ಕೆಲಸಗಾರರನ್ನು ತಮ್ಮ ತೋಟಗಳಲ್ಲಿ ಕೆಲಸ ಮಾಡುವಂತೆ ಆಕರ್ಷಿಸಲು ಅಲ್ಲಿನ ತೋಟಗಳ ಮಾಲೀಕರು ಬಹಳ ಕಷ್ಟಪಡಬೇಕಾಗಿದ್ದುದರಿಂದ ಬ್ರಿಟಿಷರು ಸಾವಿರಾರು ಗುತ್ತಿಗೆ ಕೆಲಸಗಾರರನ್ನು ಭಾರತದಿಂದ ಐದು-ವರ್ಷಗಳ ಗುತ್ತಿಗೆಯ ಮೇರೆಗೆ ಕರೆತಂದರು. ಡರ್ಬನ್ ನಗರವು ಭಾರತೀಯ ಕಾರ್ಮಿಕರ ಆಯಾತದ ಪರಿಣಾಮವಾಗಿ ದಕ್ಷಿಣ ಆಫ್ರಿಕಾದಲ್ಲಿನ ಬೃಹತ್ ಏಷ್ಯನ್ ಸಮುದಾಯ ಪ್ರದೇಶವಾಗಿ ಮಾರ್ಪಟ್ಟಿತು.
ಡರ್ಬನ್'ನ ಐತಿಹಾಸಿಕ ರಾಜಲಾಂಛನಗಳು
ಬದಲಾಯಿಸಿಡರ್ಬನ್ ನಗರವನ್ನು ಪೌರಸಂಸ್ಥೆಯನ್ನುಳ್ಳ ನಗರವೆಂದು 1854ರಲ್ಲಿ ಘೋಷಿಸಿದಾಗ, ಪೌರಸಮಿತಿಯು ಅಧಿಕೃತ ದಾಖಲೆಗಳಿಗೆ ರಾಜಮುದ್ರೆಯೊಂದನ್ನು ಕಂಡುಕೊಳ್ಳಬೇಕಿತ್ತು. ಅಲ್ಲಿನ ರಾಜಮುದ್ರೆಯನ್ನು 1855ರಲ್ಲಿ ನಿರ್ಮಿಸಲಾಯಿತಾದರೂ 1882ರಲ್ಲಿ ಬದಲಿಸಲಾಯಿತು. ಸರ್ ಬೆಂಜಮಿನ್ ಡಿ'ಅರ್ಬನ್ ಮತ್ತು ಸರ್ ಬೆಂಜಮಿನ್ ಪೈನ್‌ರವರುಗಳ ರಾಜಲಾಂಛನಗಳನ್ನು ಒಟ್ಟುಗೂಡಿಸಿದ ಶಿರಸ್ತ್ರಾಣ ಅಥವಾ ಕಮಾನುತ್ರಾಣವನ್ನು ನವೀನ ರಾಜಮುದ್ರೆಯು ಹೊಂದಿತ್ತು. 1906ರಲ್ಲಿ ರಾಜಲಾಂಛನ ಕಚೇರಿಯಲ್ಲಿ ಈ ರಾಜಲಾಂಛನವನ್ನು ನೊಂದಾಯಿಸಲು ಅರ್ಜಿಯನ್ನು ಸಲ್ಲಿಸಲಾಯಿತು, ಆದರೆ ಈ ವಿನ್ಯಾಸದ ಪ್ರಕಾರ ಡಿ'ಅರ್ಬನ್ ಹಾಗೂ ಪೈನ್‌ರು ಪತಿ ಪತ್ನಿಯರು ಎಂಬರ್ಥ ಬರುತ್ತದೆ! ಎಂಬ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಲಾಯಿತು. ಅದೇನೇ ಆದರೂ ಸುಮಾರು 1912ನೇ ಇಸವಿಯ ವೇಳೆಗೆ ಪೌರಸಮಿತಿಯ ದಾಖಲೆಗಳಲ್ಲಿ ಈ ರಾಜಲಾಂಛನವನ್ನು ಬಳಸಲು ಆರಂಭಿಸಲಾಯಿತು. ಶಿರಸ್ತ್ರಾಣ ಮತ್ತು ಕಮಾನುತ್ರಾಣಗಳನ್ನು ಅಳವಡಿಸಿದ ರಾಜಲಾಂಛನವನ್ನು ಅದರ ನಂತರದ ವರ್ಷದಲ್ಲಿ, ಪೌರಸಮಿತಿಯ ದಾಖಲೆಗಳಲ್ಲಿ ಅಳವಡಿಸಲಾಯಿತಲ್ಲದೇ 1936ರಲ್ಲಿ ನವೀನ ಮಹಾನಗರ ರಾಜಮುದ್ರೆಯನ್ನು ನಿರ್ಮಿಸಲಾಯಿತು.
ದಕ್ಷಿಣ ಆಫ್ರಿಕಾದ ರಾಜಲಾಂಛನಗಳ ಇಲಾಖೆಯಲ್ಲಿ ರಾಜಲಾಂಛನದ ವರ್ಣನೆ/ವಿವರಣೆಯನ್ನು ನೊಂದಾಯಿಸಲಾಯಿತಲ್ಲದೇ 09 ಫೆಬ್ರವರಿ 1979ರಂದು ಡರ್ಬನ್ ನಗರಕ್ಕೆ ಮಂಜೂರು ಮಾಡಲಾಯಿತು. 2000ನೇ ಇಸವಿಯಲ್ಲಿ ನಡೆದ ದಕ್ಷಿಣ ಆಫ್ರಿಕಾದ ಸ್ಥಳೀಯ ಸರಕಾರದ ಮರುಸಂಯೋಜನೆಯೊಂದಿಗೆ ರಾಜಲಾಂಛನದ ಬಳಕೆಯು ಸ್ಥಗಿತಗೊಂಡಿತು. ರಾಜಮುದ್ರೆಯು 1995ರಿಂದಲೇ ಬಳಕೆಯಲ್ಲಿರಲಿಲ್ಲ.[೭][೮]
ಇಂದಿನ ಡರ್ಬನ್
ಬದಲಾಯಿಸಿಜನಪ್ರಿಯ ಪ್ರವಾಸೀ ತಾಣವಾಗಿರುವ ಡರ್ಬನ್ ನಗರವು ಇಂದು ಆಫ್ರಿಕಾದಲ್ಲೇ, [ಸೂಕ್ತ ಉಲ್ಲೇಖನ ಬೇಕು] ಅತ್ಯಂತ ಅವಿಶ್ರಾಂತ ಧಾರಕ ಹಡಗುಗಳ ಬಂದರಾಗಿದೆ. 1970ರ ದಶಕದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿ ಅಭಿವೃದ್ಧಿಪಡಿಸಿದ್ದ ದ ಗೋಲ್ಡನ್ ಮೈಲ್ ಮತ್ತು ಸ್ಥೂಲವಾಗಿ ಡರ್ಬನ್ ನಗರಗಳು ವಿಪುಲ ಪ್ರವಾಸೀ ಆಕರ್ಷಣಾ ತಾಣಗಳನ್ನು ಹೊಂದಿವೆ, ಇವು ಪ್ರಮುಖವಾಗಿ ಜೋಹಾನ್ನೆಸ್‌ಬರ್ಗ್‌ನಿಂದ ಬರುವ ರಜಾಕಾಲದ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. 1990ರ ದಶಕದಲ್ಲಿಯೇ ಅಂತರರಾಷ್ಟ್ರೀಯ ಶ್ರೇಷ್ಠ ರಜಾತಾಣವೆಂಬ ತನ್ನ ಖ್ಯಾತಿಯನ್ನು ಕೇಪ್ ಟೌನ್‌ಗೆ ಬಿಟ್ಟುಕೊಟ್ಟರೂ, ದೇಶೀಯ ಪ್ರವಾಸಿಗರ ಮಟ್ಟಿಗೆ ತನ್ನ ಅಧಿಕ ಜನಪ್ರಿಯತೆಯನ್ನು ಇನ್ನೂ ಉಳಿಸಿಕೊಂಡಿದೆ. ಅನೇಕ ರಾಷ್ಟ್ರೀಯ ಉದ್ಯಾನಗಳು ಮತ್ತು ಜು/ಝುಲು ಜನರ ಪ್ರದೇಶಗಳು ಮತ್ತು ಡ್ರೇಕೆನ್ಸ್‌ಬರ್ಗ್‌ನಲ್ಲಿನ ಐತಿಹಾಸಿಕ ಪ್ರದೇಶಗಳಿಗೆ ಈ ಮಹಾನಗರವು ಪ್ರವೇಶದ್ವಾರವಾಗಿದೆ.
ಸರಕಾರ ಮತ್ತು ರಾಜಕೀಯ
ಬದಲಾಯಿಸಿಎಥೆಕ್ವಿನಿಯ ಮಹಾಪೌರರನ್ನು ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಒಬೆಡ್ ಮ್ಲಾಬಾರು 1996ನೇ ಇಸವಿಯಿಂದ ಮಹಾಪೌರರಾಗಿದ್ದು, 2006ನೇ ಇಸವಿಯಲ್ಲಿ ತಮ್ಮ ಮೂರನೇ ಅವಧಿಗೆ ಮರುಆಯ್ಕೆಯಾಗಿದ್ದರು.
ಗುಡಿಸಲು ವಾಸಿಗಳು ತಮ್ಮ ಎಲ್ಲೆಯನ್ನು ನಿರ್ಧರಿಸುವ ಹಕ್ಕುಗಳನ್ನು ನೀಡುವ ವಿಚಾರದಲ್ಲಿ ಪೌರಸಂಸ್ಥೆಯೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆಂದು ಫ್ರೀಡಮ್ ಆಫ್ ಎಕ್ಸ್‌ಪ್ರೆಷನ್ ಸಂಸ್ಥೆಯು ವರದಿ ಮಾಡಿತ್ತು.[೯]
ಭೂವಿವರಣೆ ಹಾಗೂ ಹವಾಮಾನ
ಬದಲಾಯಿಸಿDurban | ||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
Climate chart (explanation) | ||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||
|
ಬೆಚ್ಚಗಿನ ಆರ್ದ್ರ ಬೇಸಿಗೆಗಳು ಮತ್ತು ಸೌಮ್ಯ ಆರ್ದ್ರತೆಯಿಂದ ಹಿಮರಹಿತ ಒಣ ಚಳಿಗಾಲಗಳಿರುವ ಸೌಮ್ಯ ಉಪೋಷ್ಣವಲಯ ಹವಾಮಾನವನ್ನು ಡರ್ಬನ್ ನಗರವು ಹೊಂದಿರುತ್ತದೆ. ಆದಾಗ್ಯೂ, ಚಳಿಗಾಲದಲ್ಲಿ ವ್ಯಾಪಕ ಎತ್ತರಗಳಲ್ಲಿನ ವ್ಯತ್ಯಾಸಗಳಿಂದಾಗಿ ಪಶ್ಚಿಮದ ಕೆಲ ಉಪನಗರಗಳು ಸ್ವಲ್ಪ ಮಟ್ಟಿನ ಚಳಿಯನ್ನು ಎದುರಿಸಬೇಕಾಗಿರುತ್ತದೆ. 1,009 millimetres (39.7 in)ರಷ್ಟು ವಾರ್ಷಿಕ ಮಳೆಪ್ರಮಾಣವನ್ನು ಹೊಂದಿರುವ ಡರ್ಬನ್ ನಗರದ ವಾರ್ಷಿಕ ಸರಾಸರಿ ತಾಪಮಾನವು 21 °C (70 °F)ರಷ್ಟಿದ್ದರೆ, ಜನವರಿಯಿಂದ ಮಾರ್ಚ್‌ವರೆಗಿನ ಹಗಲಿನ ಗರಿಷ್ಠ ತಾಪಮಾನ 28 °C (82 °F)ರಷ್ಟಿದ್ದು ಕನಿಷ್ಠ 21 °C (70 °F)ರಷ್ಟಿದ್ದು, ಜೂನ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಗರಿಷ್ಠ 23 °C (73 °F) ಮತ್ತು ಕನಿಷ್ಟ 11 °C (52 °F)ಕ್ಕಿಳಿಯುತ್ತದೆ. ಡರ್ಬನ್ ನಗರದಲ್ಲಿ ಬೇಸಿಗೆಯಲ್ಲಿ ಸೂರ್ಯೋದಯವು 04h45 *(04h15)ಕ್ಕೆ ಮತ್ತು ಸೂರ್ಯಾಸ್ತವು 19h00 *(19h30)ಕ್ಕೆ ಉಂಟಾಗಿ & ಚಳಿಗಾಲದಲ್ಲಿ 06h30 *(06h10)ಕ್ಕೆ ಸೂರ್ಯೋದಯ ಮತ್ತು 17h20 *(17h00)ಕ್ಕೆ ಸೂರ್ಯಾಸ್ತವಾಗುತ್ತದೆ. (* = ನಸುಕು ಮತ್ತು ಮಸುಕು)
ಕೇಂದ್ರೀಯ ಉದ್ಯಮ/ವ್ಯವಹಾರ ಜಿಲ್ಲೆ ಮತ್ತು ಬಂದರುಪ್ರದೇಶದ ನಿಕಟ ಪ್ರದೇಶಗಳನ್ನು ಹೊರತುಪಡಿಸಿ ನಗರಪ್ರದೇಶ/ಮಹಾನಗರವಲಯದ ಪ್ರದೇಶವು ಭೌಗೋಳಿಕವಾಗಿ ಬೆಟ್ಟಗುಡ್ಡಗಳಿಂದ ಕೂಡಿದ್ದು, ತೀರ ಕಡಿಮೆ ಸಪಾಟಾದ ಪ್ರದೇಶಗಳನ್ನು ಹೊಂದಿದೆ. ಹಿಲ್‌ಕ್ರೆಸ್ಟ್ ಮತ್ತು ಕ್ಲೂಫ್‌ಗಳಾಚೆಯ ಪಶ್ಚಿಮ ಉಪನಗರಗಳು ಗಮನಾರ್ಹವಾಗಿ ಸಮುದ್ರಮಟ್ಟಕ್ಕಿಂತ ಎತ್ತರದಲ್ಲಿದ್ದು, ಬೋಥಾ'ಸ್ ಬೆಟ್ಟ ಸಮುದಾಯದ ಬಳಿ 850 metres (2,789 ft)ರಷ್ಟು ಎತ್ತರ ತಲುಪುತ್ತದೆ. ಅನೇಕ ಕಮರಿಗಳು ಮತ್ತು ಪ್ರಪಾತಗಳು ನಗರಪ್ರದೇಶ/ಮಹಾನಗರವಲಯದ ಪ್ರದೇಶಗಳೊಳಗೇ ಕಂಡುಬರುತ್ತವೆ. ಅಲ್ಲಿ ಕರಾವಳಿ ಪ್ರದೇಶದಲ್ಲಿ ಬಹುತೇಕ ಬಯಲೆನಿಸುವಂತಹಾ ಪ್ರದೇಶವೇ ಇಲ್ಲ.
Durbanದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Source: South African Weather Service (Note: These climate records are for the period 1961–1990.) [೧೦] |
ಜನಸಂಖ್ಯಾಶಾಸ್ತ್ರ
ಬದಲಾಯಿಸಿಆರ್ಥಿಕತೆ
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(September 2008) |
ಪ್ರಬಲವಾದ ನಿರ್ಮಾಣ, ಪ್ರವಾಸೋದ್ಯಮ, ಸಾರಿಗೆ, ಹಣಕಾಸು ಹಾಗೂ ಸರ್ಕಾರಿ ವಲಯದ ಉದ್ಯಮಗಳೊಂದಿಗೆ ಡರ್ಬನ್ ನಗರಪ್ರದೇಶ/ಮಹಾನಗರವಲಯದ ಪ್ರದೇಶವು (DMA) ಭಾರೀ ಹಾಗೂ ವೈವಿಧ್ಯಮಯ ಆರ್ಥಿಕತೆಯನ್ನು ಹೊಂದಿದೆ. ದಕ್ಷಿಣ ಆಫ್ರಿಕಾದಲ್ಲಿನ ರಫ್ತು ಆಧಾರಿತ ಉದ್ಯಮವನ್ನು ಹೊಂದಿರುವ ಇತರ ಅನೇಕ ವಾಣಿಜ್ಯ ಕೇಂದ್ರಗಳಿಗಿಂತ ನಗರದ ಕರಾವಳಿಯ ಸ್ಥಾನ/ನೆಲೆ ಹಾಗೂ ವಿಶಾಲವಾದ ಬಂದರು ಪ್ರದೇಶವು ತುಲನಾತ್ಮಕವಾಗಿ ಹೆಚ್ಚಿನ ಸೌಕರ್ಯವನ್ನು ನೀಡಿದೆ. ಆ ಪ್ರದೇಶದ ಸೌಮ್ಯ ಹವಾಮಾನ, ಬೆಚ್ಚಗಿನ ಸಮುದ್ರದ ಹರಿವು ಮತ್ತು ಸಾಂಸ್ಕೃತಿಕವಾಗಿ ವೈವಿಧ್ಯಮಯ ಜನರ ನೆಲೆಸುವಿಕೆಯೂ ಕೂಡಾ ಡರ್ಬನ್'ನ ಪ್ರವಾಸೋದ್ಯಮಕ್ಕೆ ಆಕರ್ಷಣೆಯನ್ನೊದಗಿಸಿದೆ.
ಇಷ್ಟೆಲ್ಲಾ ಆದರೂ, ಕಳೆದ 20 ವರ್ಷಗಳಲ್ಲಿ DMA'ನ ಔಪಚಾರಿಕ ಉದ್ಯಮ ವಲಯವು ನೀಡುತ್ತಿದ್ದ ಉದ್ಯೋಗಗಳ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಮಾತ್ರವೇ ಕಂಡಿದೆ. ಉದ್ಯೋಗ ನೀಡಿಕೆಯಲ್ಲಿ ಸರ್ಕಾರದ ನಂತರದ ಸ್ಥಾನವನ್ನು ಹೊಂದಿರುವ ತಯಾರಿಕಾ ವಲಯವು ಸಂಸ್ಥೆಗಳ ಮರುಸಂಯೋಜನೆಗಳ ನೆಪಒಡ್ಡಿ ಉದ್ಯೋಗಗಳನ್ನು ಕಡಿಮೆ ಮಾಡುತ್ತಲಿದ್ದು, ಹೆಚ್ಚು ಹೆಚ್ಚು ಬಂಡವಾಳ ಕೇಂದ್ರೀಕೃತವಾಗತೊಡಗಿದೆ. ಹೆಚ್ಚುತ್ತಿರುವ ಅಪರಾಧ ಪ್ರಮಾಣವು ಪ್ರವಾಸೋದ್ಯಮವೂ ಸೇರಿದಂತೆ ಇನ್ನಿತರ ವಲಯಗಳ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತಿದೆ. ಸಕ್ರಿಯವಾದ ಬೆಳವಣಿಗೆ ಹೊಂದುತ್ತಿರುವ ಸಣ್ಣ ಮತ್ತು ಅತಿಸಣ್ಣ ಉದ್ಯಮ ವಲಯದ ಹೊರತಾಗಿಯೂ DMA ಪ್ರದೇಶವು ಅತಿಹೆಚ್ಚಿನ ನಿರುದ್ಯೋಗ ದರವನ್ನು ಹೊಂದಿದ್ದು ಮಹಾನಗರದ ಕೆಲ ಪ್ರದೇಶಗಳಲ್ಲಿ ಅದು 30%ಗೂ ಮೀರಿದ ಪ್ರಮಾಣದಲ್ಲಿದೆ. ಹಿಂದಿನ ಪಟ್ಟಣ ಪ್ರದೇಶಗಳಲ್ಲಿ ಈಗಲೂ ಅನೇಕ ಆರ್ಥಿಕ ಬೆಳವಣಿಗೆಯ ಅವಕಾಶಗಳಿವೆ.
ಅಪರಾಧ ಪ್ರಮಾಣ ಹಾಗೂ ಕೊಳಚೆ ಪ್ರದೇಶಗಳಿಂದಾಗಿ ಕೇಂದ್ರೀಯ ಉದ್ಯಮ/ವ್ಯವಹಾರ ಜಿಲ್ಲೆಯು ಇಳಿಮುಖ ಆರ್ಥಿಕತೆಯನ್ನು ಕಾಣುತ್ತಿದೆ. ಮಿತಿಮೀರಿದ ವಿಕೇಂದ್ರೀಕರಣದಿಂದಾಗಿ ಅನೇಕ ಸಂಸ್ಥೆಗಳು ಬೇರೆಡೆ ಸ್ಥಳಾಂತರವಾಗುತ್ತಿದ್ದು ವಿಶೇಷವಾಗಿ ಮಹಾನಗರದ ಉತ್ತರಕ್ಕಿರುವ ಉಮ್ಹ್‌ಲಾಂಗಾ ಪ್ರದೇಶಕ್ಕೆ ಹೋಗುತ್ತಿವೆ. ಗೇಟ್‌ವೇ ಥಿಯೇಟರ್ ಆಫ್ ಶಾಪಿಂಗ್‌ನ ಬಳಿಯ ಈ ಪ್ರದೇಶವು ನವೀನ ಕೇಂದ್ರೀಯ ಉದ್ಯಮ/ವ್ಯವಹಾರ ಜಿಲ್ಲೆಯಾಗುತ್ತಲಿದೆ. ಪೇಟೆವಲಯದ ಆಗ್ನೇಯಕ್ಕೆ ನವೀನ ಯುಷಾಕಾ ಮೆರೀನ್ ವರ್ಲ್ಡ್ ಮತ್ತು ಇನ್ನೂ ಅನೇಕ ನವೀನ ವಾಸಯೋಗ್ಯ ಕಟ್ಟಡಗಳು ಮತ್ತು ವಿರಾಮಕ್ರೀಡಾ ಪ್ರದೇಶಗಳ ನಿರ್ಮಾಣವಾಗುವಂತಹಾ ಪಾಯಿಂಟ್ ಎಂಬ ನವೀನ ಪೇಟೆಕೇಂದ್ರವನ್ನು ನಿರ್ಮಿಸುವ ಯೋಜನೆಯೊಂದಿಗೆ ಇತ್ತೀಚೆಗೆ ಉದ್ಯಮಗಳನ್ನು ಮತ್ತೆ ಮಹಾನಗರದೆಡೆಗೆ ಸೆಳೆಯುವ ಯತ್ನಗಳು ಆರಂಭಗೊಂಡಿವೆ. ಮಹಾನಗರವು ಉದ್ಯಮ ಜಿಲ್ಲೆಯನ್ನು ಸರಿಪಡಿಸುವ/ಸ್ವಚ್ಛಗೊಳಿಸುವ ಪ್ರಯತ್ನಗಳು ಮತ್ತು ಪಾಯಿಂಟ್ ಮತ್ತು CBDಯ (ಮೋಸಸ್ ಮಬೀಧಾ ಕ್ರೀಡಾಂಗಣ) ಉತ್ತರಕ್ಕಿರುವ 2010ರ FIFA ವಿಶ್ವ ಕಪ್ ಕ್ರೀಡಾಂಗಣದ ನವೀನ ಅಭಿವೃದ್ಧಿ ಕಾರ್ಯಗಳು ಆರ್ಥಿಕತೆಗೆ ಉತ್ತಮ ತಿರುವನ್ನು ನೀಡಬಹುದು ಎಂದು ಆಶಿಸಲಾಗುತ್ತಿದೆ.
ಪ್ರಾಂತ್ಯಕ್ಕೆ ಡರ್ಬನ್'ನ ಆರ್ಥಿಕ ಕೊಡುಗೆ
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(November 2008) |
ಪ್ರಾಂತ್ಯದ ಉತ್ಪಾದನೆ, ಉದ್ಯೋಗ ಮತ್ತು ಆದಾಯದ ಅರ್ಧಕ್ಕೂ ಹೆಚ್ಚಿನ ಪ್ರಮಾಣಕ್ಕೆ ಕಾರಣೀಭೂತವಾಗುವ ಡರ್ಬನ್ ನಗರಪ್ರದೇಶ/ಮಹಾನಗರವಲಯ ಪ್ರದೇಶವು ಕ್ವಾಝುಲು-ನಟಾಲ್ ಪ್ರಾಂತ್ಯದ ಆರ್ಥಿಕ ಚಾಲಕ ಶಕ್ತಿಯಾಗಿದೆ. ರಾಷ್ಟ್ರದ ಪರಿಗಣನೆಯಲ್ಲಿ ಗಾಟೆಂಗ್‌ನ ನಂತರ ಡರ್ಬನ್ ನಗರವು ಎರಡನೇ ಅತಿ ಪ್ರಮುಖ ಆರ್ಥಿಕ ಸಂಕೀರ್ಣವಾಗಿದ್ದು, ರಾಷ್ಟ್ರೀಯ ಉತ್ಪತ್ತಿಯ 15%, ಕೌಟುಂಬಿಕ ಆದಾಯದ 14% ಮತ್ತು ರಾಷ್ಟ್ರೀಯ ಉದ್ಯೋಗದ 11%ರಷ್ಟಕ್ಕೆ ಮೂಲವಾಗಿದೆ. ಡರ್ಬನ್ ನಗರವನ್ನು ಉತ್ತರಕ್ಕೆ ರಿಚರ್ಡ್ಸ್ ಕೊಲ್ಲಿ ಮತ್ತು ಮಾಪುಟೋಗಳೆಡೆಗೆ ಪ್ರಾದೇಶಿಕ ಅಭಿವೃದ್ಧಿ ಪಥಗಳು ಸಂಪರ್ಕಿಸಿದರೆ, ಪಶ್ಚಿಮದಲ್ಲಿ ಪೀಟರ್‌ಮಾರಿಟ್ಜ್‌ಬರ್ಗ್ ಮತ್ತು ಜೋಹಾನ್ನೆಸ್‌ಬರ್ಗ್‌ಗಳೆಡೆಗೆ ಸಂಪರ್ಕಿಸುತ್ತದೆ.
ಅನೌಪಚಾರಿಕ ವಲಯ
ಬದಲಾಯಿಸಿಅನೌಪಚಾರಿಕ ವಸತಿ ಕ್ಷೇತ್ರಕ್ಕೆ ಮಹಾನಗರ'ವು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದೆ. ಮಹಾನಗರವು ಎರಡು ವೂನಾ ಪ್ರಶಸ್ತಿಗಳನ್ನು [೧೧][೧೨] ಪಡೆದಿದ್ದರೂ ಗುಡಿಸಲುವಾಸಿಗಳ ಬಗ್ಗೆ ಅದರ ನಡವಳಿಕೆಯನ್ನು ಸಂಯುಕ್ತ ರಾಷ್ಟ್ರ ಸಂಘದೊಡನೆ ಸಂಪರ್ಕ ಹೊಂದಿರುವ ಸೆಂಟರ್ ಆನ್ ಹೌಸಿಂಗ್ ರೈಟ್ಸ್ ಅಂಡ್ ಎವಿಕ್ಷನ್ಸ್ ಸಂಸ್ಥೆಯ ವರದಿಯೊಂದು ತೀವ್ರವಾಗಿ ಟೀಕೆ ಮಾಡಿದೆ.[೧೩] ಮಹಾನಗರ'ವು ಬೀದಿ ವ್ಯಾಪಾರಿಗಳನ್ನು[೧೪] ಹಾಗೂ ಬೀದಿ ಮಕ್ಕಳನ್ನು[೧೫] ನಡೆಸಿಕೊಳ್ಳುವ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿವೆ.
ಪ್ರವಾಸೋದ್ಯಮ
ಬದಲಾಯಿಸಿ- ದ ಗೋಲ್ಡನ್ ಮೈಲ್
- ಸನ್ಕೋಸ್ಟ್ ಕ್ಯಾಸಿನೋ ಮತ್ತು ಎಂಟರ್ಟೇನ್ಮೆಂಟ್ ವರ್ಲ್ಡ್
- ವಿಕ್ಟೋರಿಯಾ ಅಣೆಕಟ್ಟು (ದ ಎಸ್ಪನೇಡ್ ಎಂದೂ ಹೆಸರುವಾಸಿಯಾಗಿದೆ) ಪ್ರದೇಶವು ಅನೇಕ ಪ್ರವಾಸೀ ತಾಣಗಳಿಗೆ ನೆಲೆಯಾಗಿದೆ.
- ಅಂತರರಾಷ್ಟ್ರೀಯ ಒಪ್ಪಂದ ಕೇಂದ್ರ/ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ (ICC) - ಆಫ್ರಿಕಾದಲ್ಲಿ ಕಳೆದ 5 ವರ್ಷಗಳಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ಸಭಾಕೇಂದ್ರವಾಗಿದ್ದು, 2005ರ ಸಾಲಿನಲ್ಲಿ ವಿಶ್ವದಲ್ಲೇ 4ನೇ ಶ್ರೇಯಾಂಕ ಪಡೆದಿದೆ.
- ಯುಷಾಕಾ ಮೆರೀನ್ ವರ್ಲ್ಡ್, ವಿಶ್ವದ ಬೃಹತ್ ಜಲಚರೋದ್ಯಾನಗಳಲ್ಲಿ ಒಂದಾಗಿದೆ.
- ಕಿಂಗ್ಸ್‌ಮೀಡ್ ಸಹಾರಾ ಕ್ರೀಡಾಂಗಣವು ಕ್ರಿಕೆಟ್ನ ಒಂದು ಪ್ರಮುಖ ಟೆಸ್ಟ್ ಪಂದ್ಯಗಳು ಹಾಗೂ ಏಕ-ದಿನ ಕ್ರಿಕೆಟ್ಪಂದ್ಯಗಳ ತಾಣ.
- ಕಿಂಗ್ಸ್ ಪಾರ್ಕ್ ಕ್ರೀಡಾಂಗಣವು (ಪ್ರಸ್ತುತ ಪ್ರಾಯೋಜಕತಾ ಕಾರಣಗಳಿಂದಾಗಿ ABSA ಕ್ರೀಡಾಂಗಣ ಎಂದು ಕರೆಯಲ್ಪಡುತ್ತಿದೆ) ಅಂತರರಾಷ್ಟ್ರೀಯವಾಗಿ ಪ್ರಸಿದ್ಧವಾದ ಷಾರ್ಕ್ಸ್ ರಗ್ಬಿ ತಂಡದ ಆತಿಥೇಯ/ಮೂಲ ಕ್ರೀಡಾಂಗಣವಾಗಿದೆ.
- ಗೇಟ್‌ವೇ ಥಿಯೇಟರ್ ಆಫ್ ಶಾಪಿಂಗ್
- ಡರ್ಬನ್‌ನ ಪ್ರವಾಸೋದ್ಯಮ ಚಟುವಟಿಕೆಗಳು Archived 2010-07-26 ವೇಬ್ಯಾಕ್ ಮೆಷಿನ್ ನಲ್ಲಿ.
- ಗ್ರೇವಿಲ್ಲೆ ರೇಸ್‌ಕೋರ್ಸ್/ಕುದುರೆ ವೈಹಾಳಿಪಥ (ಡರ್ಬನ್ ಜುಲೈ ಹ್ಯಾಂಡಿಕ್ಯಾಪ್ನ ನೆಲೆ) ಮತ್ತು ಡರ್ಬನ್ ಕಂಟ್ರಿ ಕ್ಲಬ್ ಮತ್ತು ಗಾಲ್ಫ್ ಮೈದಾನಗಳು.
- ಉಂಗೆನಿ ನದಿ ಪಕ್ಷಿಗಳ ಉದ್ಯಾನ
- ಕ್ವಾಝುಲು-ನಟಾಲ್‌ನ ಡರ್ಬನ್ ವೆಸ್ಟ್‌ವಿಲ್ಲೆಯ ಭಾಗದಲ್ಲಿ ವಾಸ್ತವ್ಯ
ಸಂವಹನ ಹಾಗೂ ಮಾಧ್ಯಮ
ಬದಲಾಯಿಸಿಡರ್ಬನ್ನಲ್ಲಿ ಎರಡು ಪ್ರಮುಖ ಆಂಗ್ಲ-ಭಾಷಿಕ ದೈನಿಕಗಳನ್ನು ಪ್ರಕಟಿಸಲಾಗುತ್ತಿದ್ದು, ಅವೆರಡೂ ಇಂಡಿಪೆಂಡೆಂಟ್ ನ್ಯೂಸ್‌ಪೇಪರ್ಸ್ ಎಂಬ, ಐರಿಷ್ ಮಾಧ್ಯಮ ದೊರೆ ಟೋನಿ ಓ'ರಿಯಲಿಯವರ ಮಾಲೀಕತ್ವಕ್ಕೆ ಒಳಪಟ್ಟ ರಾಷ್ಟ್ರೀಯ ಸುದ್ದಿಪತ್ರಿಕೆ ಸಮೂಹದ ಭಾಗವಾಗಿವೆ. ಈ ಪತ್ರಿಕೆಗಳೆಂದರೆ ದ ಮರ್ಕ್ಯೂರಿಯ ಬೆಳಗಿನ ಆವೃತ್ತಿಗಳು ಮತ್ತು ಡೈಲಿ ನ್ಯೂಸ್‌ನ ಮಧ್ಯಾಹ್ನದ ಆವೃತ್ತಿಗಳು. ದಕ್ಷಿಣ ಆಫ್ರಿಕಾದಲ್ಲಿನ ಬಹುತೇಕ ಸುದ್ದಿ ಮಾಧ್ಯಮಗಳಂತೆಯೇ, ಇತ್ತೀಚಿನ ವರ್ಷಗಳಲ್ಲಿ ಅವು ಪ್ರಸಾರದಲ್ಲಿ ಇಳಿಕೆ ಕಾಣುತ್ತಿವೆ. ಪ್ರಮುಖ ಜು/ಝುಲು ಭಾಷಿಕ ಪತ್ರಿಕೆಗಳೆಂದರೆ "ಐಸೋಲೆಜ್ವೆ" (ಇಂಡಿಪೆಂಡೆಂಟ್ ನ್ಯೂಸ್‌ಪೇಪರ್ಸ್), "ಉಮಾಫ್ರಿಕಾ/ಉಮ್‌ಆಫ್ರಿಕಾ" ಮತ್ತು "ಇಲಂಗಾ"ಗಳಾಗಿದ್ದು, ಅವುಗಳಲ್ಲಿ ಕೊನೆಯದು ರಾಜಕೀಯವಾಗಿ IFP ಪಕ್ಷದ ಪರವೆಂಬ ಭಾವನೆಯಿದೆ. ಇಂಡಿಪೆಂಡೆಂಟ್ ನ್ಯೂಸ್‌ಪೇಪರ್ಸ್ ಸಮೂಹವು ಭಾರತೀಯ ಸಮುದಾಯವನ್ನು ಉದ್ದೇಶಿಸಿದ ಸುದ್ದಿಪತ್ರಿಕೆಯಾದ "ಪೋಸ್ಟ್"ಅನ್ನೂ ಪ್ರಕಟಿಸುತ್ತದೆ. "ಇಂಡಿಪೆಂಡೆಂಟ್ ಆನ್ ಸ್ಯಾಟರ್‌ಡೇ"ನಂತೆಯೇ ರಾಷ್ಟ್ರೀಯ ಭಾನುವಾರದ ವಿಶೇಷ ಪತ್ರಿಕೆಯಾದ, "ಸಂಡೇ ಟ್ರಿಬ್ಯೂನ್"ಅನ್ನು ಕೂಡಾ ಇಂಡಿಪೆಂಡೆಂಟ್ ನ್ಯೂಸ್‌ಪೇಪರ್ಸ್ ಬಳಗವು ಪ್ರಕಟಿಸುತ್ತದೆ.
ಕ್ಯಾಕ್ಸ್‌ಟನ್ ಗ್ರೂಪ್ ಸಮೂಹದಿಂದ ವಿವಿಧ ಉಚಿತ ಉಪನಗರ ಸಾಪ್ತಾಹಿಕ ಸುದ್ದಿಪತ್ರಿಕೆಗಳನ್ನು ಪ್ರಕಟಿಸಲಾಗುತ್ತದಲ್ಲದೇ, ಅಲ್ಲಿ ಅನೇಕ "ಸಮುದಾಯ" ಸುದ್ದಿಪತ್ರಿಕೆಗಳಿದ್ದು, ಅವುಗಳಲ್ಲಿ ಕೆಲವು ಅಲ್ಪಾಯುವಾಗಿದ್ದರೆ ಉಳಿದವು ಸ್ಥಾಯಿತ್ವವನ್ನು ಪಡೆದುಕೊಂಡು ಬಂದಿವೆ. ಡರ್ಬನ್‌ನ ನಾರ್ತ್ ಕೋಸ್ಟ್ ರಸ್ತೆಯಲ್ಲಿರುವ ದ ಟ್ಯಾಬ್ಲಾಯ್ಡ್ ಸುದ್ದಿಪತ್ರಿಕೆ ಸಮೂಹವು ಕೂಡಾ ಸಮುದಾಯ ಸುದ್ದಿಪತ್ರಿಕೆಗಳಲ್ಲಿ ವೈವಿಧ್ಯವನ್ನು ಮೂಡಿಸಿದೆ.ಅವು ಹತ್ತು ಸುದ್ದಿಪತ್ರಿಕೆಗಳನ್ನು ಪ್ರಕಟಿಸುತ್ತಿದ್ದು, ಅವುಗಳಲ್ಲಿ ಮೂರು ಇಸಿಜು/ಝುಲು ಭಾಷೆಯವಾಗಿವೆ. ಸಮುದಾಯ ಸುದ್ದಿಪತ್ರಿಕೆಗಳು ನಿರ್ದಿಷ್ಟ ಪ್ರದೇಶಗಳು ಅಥವಾ ವಲಯಗಳಲ್ಲಿ ಕೇಂದ್ರೀಕೃತವಾಗಿರುತ್ತವಲ್ಲದೇ ಭೂತಗನ್ನಡಿಯಿಂದ ಕಾಣುವಂತೆ ಸಮುದಾಯ ಸಮಸ್ಯೆಗಳನ್ನು ಬುಡಸಮೇತ ಹೊರಗೆಳೆದು ಪ್ರಕಟಿಸುತ್ತಿರುತ್ತವೆ. ಇಂತಹಾ ಪತ್ರಿಕೆಗಳು ಜಾಹಿರಾತಿನ ಹಣದ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದ್ದು, ಜನಾಂಗ ಅಥವಾ ಐಶ್ವರ್ಯದ ತಾರತಮ್ಯವಿಲ್ಲದೇ ಪ್ರತಿ ಕುಟುಂಬಕ್ಕೂ/ಮನೆಗೂ ತಲುಪಿಸಲಾಗುತ್ತದೆ. ಅನೇಕ ಪತ್ರಕರ್ತರು ಮೊದಲಿಗೆ ಇಂತಹಾ ಪತ್ರಿಕೆಗಳಲ್ಲಿ ಅನುಭವ ಪಡೆದು ನಂತರ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳೆಡೆಗೆ ಮುಖ ಮಾಡುತ್ತಾರೆ.
ಮಹಾನಗರದ ಒಂದು ಪ್ರಮುಖ ಉಪಕ್ರಮವೆಂದರೆ ಈಜೇಸ್‌ಗಾಗಾಸಿನಿ ಮೆಟ್ರೋ ಗೆಝೆಟ್ ([೧] Archived 2009-11-28 ವೇಬ್ಯಾಕ್ ಮೆಷಿನ್ ನಲ್ಲಿ.) ಆಗಿದೆ. ಇದು ಎಥೆಕ್ವಿನಿ ನಗರಪಾಲಿಕೆಯ ಅಧಿಕೃತ ಸುದ್ದಿಪತ್ರಿಕೆಯಾಗಿದ್ದು, ಇದರ ಮೂಲಕ ತೆರಿಗೆದಾರರು ಮತ್ತು ನಿವಾಸಿಗಳಿಗೆ ಎಥೆಕ್ವಿನಿ ನಗರಪಾಲಿಕೆಯ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಓದುಗರ ಅಭಿಪ್ರಾಯಗಳಿಗೆ ಇದೊಂದು ವಿಚಾರವೇದಿಕೆಯೂ ಆಗಿದೆ. ಶುಕ್ರವಾರ ಮುಂಜಾನೆ ಪ್ರಕಟವಾಗುವ ಪಾಕ್ಷಿಕವಾದ ಈ ಸುದ್ದಿಪತ್ರಿಕೆಯ 400 000 ಪ್ರತಿಗಳನ್ನು ಮುದ್ರಿಸಿ ಆಂಗ್ಲ ಮತ್ತು ಜು/ಝುಲು ಜನರುಗಳಿಗೆ ಹಂಚಲಾಗುತ್ತದೆ. ಈ ಪತ್ರಿಕೆಯು ನಗರಪಾಲಿಕೆ’ಯ ಸಂವಹನಾ ಇಲಾಖೆಯ ಆಂತರಿಕ ಉತ್ಪನ್ನವಾಗಿದೆ.
ಡರ್ಬನ್‌ನಿಂದ ಕಾರ್ಯಾಚರಿಸುವ ಪ್ರಮುಖ ಆಂಗ್ಲ ಭಾಷಿಕ ರೇಡಿಯೋ ಕೇಂದ್ರವಾದ, ಈಸ್ಟ್ ಕೋಸ್ಟ್ ರೇಡಿಯೋ ([೨]) SA ಮಾಧ್ಯಮ ದೈತ್ಯ ಕಗಿಸೋ ಮೀಡಿಯಾದ ಸ್ವಾಮ್ಯದಲ್ಲಿದೆ. ರಾಷ್ಟ್ರೀಯ ಪ್ರಸಾರ ಸಂಸ್ಥೆಯಾದ SABCಯು, ಡರ್ಬನ್‌ನಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು ಇಲ್ಲಿ ಎರಡು ಪ್ರಮುಖ ಕೇಂದ್ರಗಳಾದ, 5 ದಶಲಕ್ಷಕ್ಕೂ ಮೀರಿದ ಬೃಹತ್ ರಾಷ್ಟ್ರೀಯ ಕೇಳುಗವೃಂದವನ್ನು ಹೊಂದಿರುವ ಜು/ಝುಲು ಭಾಷಿಕ ಕೇಂದ್ರ "ಉಖೊಝಿ FM", ಮತ್ತು "ಭಾರತೀಯ" ಕೇಳುಗರನ್ನು ಉದ್ದೇಶಿಸಿದ ರೇಡಿಯೋ ಲೋಟಸ್‌ಗಳನ್ನು ನಡೆಸುತ್ತದೆ. ಇತರೆ SABC ರಾಷ್ಟ್ರೀಯ ಕೇಂದ್ರಗಳು ಇಲ್ಲಿ ಸಣ್ಣ ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು, ಅದೇ ರೀತಿ ಸುದ್ದಿ ಕೊಂಡಿಗಳು ಮತ್ತು ಕ್ರೀಡಾ ಪ್ರಸಾರಗಳಿಗೆ ಸಂಬಂಧಿಸಿದ TV ವಾಹಿನಿಗಳೂ ಇವೆ. ICASA ಎಂಬ ರಾಷ್ಟ್ರೀಯ ಪ್ರಸಾರ ಪರವಾನಗಿ ಸಂಸ್ಥೆಯಿಂದ ಪರವಾನಗಿ ಪಡೆದ ಅನೇಕ ಸಣ್ಣ ಸ್ವತಂತ್ರ ಕೇಂದ್ರಗಳೂ ಇಲ್ಲಿ ಕಾರ್ಯಾಚರಿಸುತ್ತವೆ.
ಕ್ರೀಡಾ ತಂಡಗಳು ಮತ್ತು ಕ್ರೀಡಾಂಗಣಗಳು
ಬದಲಾಯಿಸಿಎರಡು ಸಮೀಪ ಬಾಂಧವ್ಯ ಹೊಂದಿರುವ ರಗ್ಬಿ ಒಕ್ಕೂಟದ ತಂಡಗಳಾದ, ದೇಶೀಯ ಕರ್ರೀ ಕಪ್ ಸ್ಪರ್ಧೆಯಲ್ಲಿ ಭಾಗವಹಿಸುವ ನಟಾಲ್ ಷಾರ್ಕ್ಸ್ ತಂಡ ಮತ್ತು ಅಂತರರಾಷ್ಟ್ರೀಯ ಸೂಪರ್ 14 ಸ್ಪರ್ಧೆಯಲ್ಲಿ ಭಾಗವಹಿಸುವ ಷಾರ್ಕ್ಸ್ ತಂಡಗಳಿಗೆ ಡರ್ಬನ್ ನಗರವು ನೆಲೆಯಾಗಿದೆ. ಎರಡೂ ತಂಡಗಳು ಪ್ರಸ್ತುತ ಪ್ರಾಯೋಜಕ ಕಾರಣಗಳಿಗಾಗಿ ABSA ಕ್ರೀಡಾಂಗಣ ಎಂದು ಕರೆಯಲ್ಪಡುತ್ತಿರುವ 56,000 ಜನರ ಸಾಮರ್ಥ್ಯದ ಕಿಂಗ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಆಡುತ್ತವೆ.
ಪ್ರೀಮಿಯರ್ ಸಾಕರ್ ಲೀಗ್‌ನ ಮೂರು ಕ್ಲಬ್‌ಗಳಾದ — ಅಮೇಜು/ಝುಲು, ಥಂಡಾ ರಾಯಲ್ ಜು/ಝುಲು ಮತ್ತು ಗೋಲ್ಡನ್ ಆರೋಸ್‌ಗಳಿಗೆ ಕೂಡಾ ಮಹಾನಗರವು ನೆಲೆಯಾಗಿದೆ. ತಮ್ಮ ಬಹುತೇಕ ತವರಿನ ಪಂದ್ಯಗಳನ್ನು ತಮ್ಮದೇ ಸ್ವಾಮ್ಯದ ರಾಜಕುಮಾರಿ/ಪ್ರಿನ್ಸೆಸ್ ಮಗೋಗೋ ಕ್ರೀಡಾಂಗಣದಲ್ಲಿಯೇ ಆಡುವ ಅಮೇಜು/ಝುಲು ತಂಡವು ವಿಶೇಷವಾದ ಪ್ರಮುಖ ಪಂದ್ಯಗಳನ್ನು ABSA ಕ್ರೀಡಾಂಗಣದಲ್ಲಿ ಆಡುತ್ತಾರೆ. ಇದೇರೀತಿ, ಗೋಲ್ಡನ್ ಆರೋಸ್ ತಂಡ ಕೂಡಾ, ಉಮ್ಲಾಜಿಯ ಉಪನಗರದಲ್ಲಿನ ಸ್ವಂತದ ಕ್ರೀಡಾಂಗಣವಾದ ಚಕ್ರವರ್ತಿ ಜ್ವೆಲಿಥಿನಿ ಕ್ರೀಡಾಂಗಣವನ್ನು ಹೊಂದಿದ್ದರೂ, ತಮ್ಮ ಬಹುತೇಕ ಪ್ರಮುಖ ಪಂದ್ಯಗಳನ್ನು ABSA ಕ್ರೀಡಾಂಗಣದಲ್ಲಿಯೇ ಆಡುತ್ತಾರೆ. ಮ್ಯಾನ್ನಿಂಗ್ ರೇಂಜರ್ಸ್ ಎಂಬ ನಾಲ್ಕನೇ ತಂಡವೊಂದಕ್ಕೆ ಕೂಡಾ ಡರ್ಬನ್ ನಗರವು ನೆಲೆಯಾಗಿತ್ತು, ಆ ತಂಡದವರು ಲೀಗ್ ಚಾಂಪಿಯನ್‌ಷಿಪ್ ಸೇರಿದಂತೆ ಅನೇಕ ಗೌರವಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.
ಪ್ರಾಂತೀಯ ಕ್ರಿಕೆಟ್ ತಂಡವಾದ ಡಾಲ್ಫಿನ್ಸ್ ಗೂ ಡರ್ಬನ್ ನಗರವು ಆತಿಥೇಯನಾಗಿದೆ. ಡಾಲ್ಫಿನ್ಸ್ (ಇದನ್ನು ಔಪಚಾರಿಕವಾಗಿ ನಟಾಲ್ ಎಂದು ಕರೆಯಲಾಗುತ್ತದೆ) ತಂಡದಿಂದಲೇ ಷಾನ್ ಪಾಲ್ಲೋಕ್, ಲ್ಯಾನ್ಸ್ ಕ್ಲೂಸ್‌ನರ್ ಮತ್ತು ಬ್ಯಾರ್ರಿ ರಿಚರ್ಡ್ಸ್ ಇವರೆಲ್ಲರೂ ಬಂದವರು. ಡರ್ಬನ್ ನಗರದಲ್ಲಿ ಕಿಂಗ್ಸ್‌ಮೀಡ್ ಸಹಾರಾ ಕ್ರೀಡಾಂಗಣದಲ್ಲಿ ಕ್ರಿಕೆಟ್‌ಅನ್ನು ಆಡಲಾಗುತ್ತದೆ.
ಅನೇಕ ಆತಿಥೇಯ ಮಹಾನಗರಗಳಲ್ಲಿ ಒಂದಾಗಿ ನಗರವು ಕೂಡಾ ಬೃಹತ್ ಯಶಸ್ಸು ಕಂಡ 2003ರ ICC ಕ್ರಿಕೆಟ್ ವಿಶ್ವ ಕಪ್‌ನ ಆತಿಥ್ಯ ವಹಿಸಿಕೊಂಡಿತ್ತು. ನಂತರ ಇದು 2007ರಲ್ಲಿನ ICC ವಿಶ್ವ ಟ್ವೆಂಟಿ20 ಪಂದ್ಯಾವಳಿಯ ಉದ್ಘಾಟನಾ ಕ್ರೀಡಾಋತುವಿನ ಆತಿಥ್ಯವನ್ನು ಕೂಡಾ ವಹಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ 2009ರ IPLಅನ್ನು ಆಡಲಾಯಿತಲ್ಲದೇ ಸಹಜವಾಗಿ ಡರ್ಬನ್‌ಅನ್ನು ಆಟದ ಸ್ಥಳವಾಗಿ ಆಯ್ಕೆ ಮಾಡಲಾಯಿತು. ಸೆಪ್ಟೆಂಬರ್ 2010ರಲ್ಲಿ ನಡೆಸಲಾಗುವ 2010ರ ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಪಂದ್ಯಾವಳಿಯ ಆತಿಥ್ಯವನ್ನು ಕೂಡಾ ನಗರವೇ ವಹಿಸಲಿದೆ.
2010ರ FIFA ವಿಶ್ವ ಕಪ್‌ನ ಆತಿಥೇಯ ಮಹಾನಗರಗಳಲ್ಲಿ ಡರ್ಬನ್ ನಗರವು ಒಂದಾಗಿತ್ತಲ್ಲದೇ ರಸ್ತೆ ಮಾರ್ಗದಲ್ಲಿ ನಡೆಸಲಾಗುವ A1GP ಮೋಟಾರು ವಾಹನ ಸ್ಪರ್ಧೆಯ ಆತಿಥೇಯ ನಗರವೂ ಆಗಿದೆ. ಡರ್ಬನ್ ನಗರವು 2018ರ ಕಾಮನ್‌ವೆಲ್ತ್ ಕ್ರೀಡೆಗಳು ಮತ್ತು 2020ರ ಬೇಸಿಗೆ ಒಲಿಂಪಿಕ್ಸ್‌ಗಳನ್ನು ನಡೆಸಲು ಪ್ರಸ್ತಾಪವನ್ನು ಇಡಲಿದೆ ಎಂಬ ಬಗ್ಗೆ ವದಂತಿಗಳಿವೆ.[೧೬]
ಮಹಾನಗರವು ಪ್ರಮುಖ ಶುದ್ಧ ತಳಿಯ ಕುದುರೆಗಳ ಸ್ಪರ್ಧೆಯ ಸ್ಥಳವಾದ ಗ್ರೇವಿಲ್ಲೆ ರೇಸ್‌ಕೋರ್ಸ್/ಕುದುರೆ ವೈಹಾಳಿಪಥಕ್ಕೆ ನೆಲೆಯಾಗಿದೆಯಲ್ಲದೇ ರಾಷ್ಟ್ರದ ಪ್ರಧಾನ ಕ್ರೀಡಾಸಂಗತಿಯಾದ ಜುಲೈ ಹ್ಯಾಂಡಿಕ್ಯಾಪ್ ಮತ್ತು ದಕ್ಷಿಣ ಆಫ್ರಿಕಾದಲ್ಲಿನ ಪ್ರಧಾನ ಗಮನ ಸೆಳೆಯುವ ಕ್ರೀಡಾಸಂಗತಿಯಾದ ಗೋಲ್ಡ್ ಕಪ್ ಸೇರಿದಂತೆ ಇದು ವಾರ್ಷಿಕವಾಗಿ ಅನೇಕ ಪ್ರತಿಷ್ಠಿತ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತದೆ. ಮಹಾನಗರ ಕೇಂದ್ರಕ್ಕೆ ಸಮೀಪದಲ್ಲೇ ದಕ್ಷಿಣಕ್ಕೆ ಹಾಗೂ ಡರ್ಬನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಅಷ್ಟೇನೂ ದೂರವಿಲ್ಲದ ಕ್ಲೇರ್‌ವುಡ್‌ನಲ್ಲಿ ಮತ್ತೊಂದು ಸುಸಜ್ಜಿತ ರೇಸ್‌ಕೋರ್ಸ್/ಕುದುರೆ ವೈಹಾಳಿ ಪಥವಿದೆ.
ದ ಬೆರೆಯಾ ಸಮೀಪದ ವೆಸ್ಟ್‌ರಿಡ್ಜ್ ಪಾರ್ಕ್‌ನಲ್ಲಿ ಒಂದು ವೃತ್ತಿಪರ ಟೆನಿಸ್ ಅಂಕಣವಿದೆಯಲ್ಲದೇ ಒಲಿಂಪಿಕ್-ಮಾನಕದ ಈಜುಕೊಳವೊಂದನ್ನು ಕಿಂಗ್ಸ್ ಪಾರ್ಕ್ ಕ್ರೀಡಾ ಪ್ರಾಕಾರದಲ್ಲಿ ಕಾಣಬಹುದಾಗಿದೆ. ಈ ಕ್ರೀಡಾಸ್ಥಳಗಳಷ್ಟೇ ಅಲ್ಲದೇ, ಜಲ/ವಾಟರ್ ಪೋಲೋ, ಹಾಕಿ ಮತ್ತಿತರ ಕ್ರೀಡೆಗಳ ಸೌಲಭ್ಯಗಳನ್ನು ಹೊಂದಿದ್ದು ವಿಶೇಷವಾಗಿ Mr ಪ್ರೈಸ್ ಪ್ರೋ (ಹಿಂದೆ ಗನ್‌ಸ್ಟನ್ 500 ಎಂದು ಕರೆಸಿಕೊಳ್ಳುತ್ತಿದ್ದ) ಕಡಲಲೆ ಸವಾರಿ ಸ್ಪರ್ಧೆ ಮತ್ತು ಅದಕ್ಕೆ ಸಂಬಂಧಿಸಿದ ಓಷನ್ ಆಕ್ಷನ್ ಉತ್ಸವದಂತಹಾ ಅನೇಕ ಜಲ ಕ್ರೀಡಾ ಸಂಗತಿಗಳಿಗೆ ಆತಿಥ್ಯವನ್ನು ನೀಡಿರುವ ಪ್ರಮುಖ ತೀರಪ್ರದೇಶವನ್ನು ಡರ್ಬನ್ ನಗರವು ಹೊಂದಿದೆ. ಸ್ಥಳೀಯ ಸಮುದ್ರ ತೀರಗಳಲ್ಲಿ ಬೀಚ್/ತೀರದ ವಾಲಿಬಾಲ್ ಕ್ರೀಡೆಯನ್ನು ನಿಯತವಾಗಿ ಆಡಲಾಗುತ್ತದಲ್ಲದೇ ಶಕ್ತಿಶಾಲಿ ದೋಣಿಗಳ ಸ್ಪರ್ಧೆಯನ್ನು ಬಂದರಿನಲ್ಲಿ ನಡೆಸಲಾಗುತ್ತದೆ. ಡರ್ಬನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವೃತ್ತಿಪರ ಹಾಗೂ ಹವ್ಯಾಸಿ ಗಾಲ್ಫ್ ಆಟಗಾರರ ಉತ್ತಮ ಅಭಿಮಾನಿಗಳಾಗಿದ್ದು CBD ಬಳಿಯ ಡರ್ಬನ್ ಕಂಟ್ರಿ ಕ್ಲಬ್‌ನಲ್ಲಿರುವ ಗಾಲ್ಫ್ ಮೈದಾನವು ಇದಕ್ಕೆ ಹೆಚ್ಚು ಪ್ರಸಿದ್ಧವಾಗಿದೆ.
ಸಾರಿಗೆ
ಬದಲಾಯಿಸಿವಾಯುಮಾರ್ಗ/ವಿಮಾನಯಾನ
ಬದಲಾಯಿಸಿದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳೆರಡೂ ಸೇವೆಗಳನ್ನು ಚಕ್ರವರ್ತಿ ಷಾಕಾ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ನೀಡುತ್ತಿದ್ದು ದುಬೈ, ಸ್ವಾಜಿಲ್ಯಾಂಡ್, ಮೊಝಾಂಬಿಕ್, ಮತ್ತು ಮಾರಿಷಸ್‌ಗಳಿಗೆ ನಿಯತವಾಗಿ ನಿಗದಿಯಾಗಿರುವ ಸೇವೆಯನ್ನು ನೀಡುತ್ತದೆ. 2004ಕ್ಕಿಂತ ಪ್ರತಿಶತ 15ಕ್ಕೂ ಹೆಚ್ಚಾದ ನಾಲ್ಕು ದಶಲಕ್ಷ ಪ್ರಯಾಣಿಕರಿಗೆ 2005ರಲ್ಲಿ ಸೇವೆ ನೀಡಿದ್ದ ಡರ್ಬನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಎಲ್ಲಾ ಸೇವೆಗಳನ್ನು ಇತ್ತೀಚೆಗಷ್ಟೇ ತೆರೆಯಲಾದ ಈ ವಿಮಾನನಿಲ್ದಾಣವು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಚಕ್ರವರ್ತಿ ಷಾಕಾ ಅಂತರರಾಷ್ಟ್ರೀಯ ವಿಮಾನನಿಲ್ದಾಣವೆಂದು ಹೆಸರಾದ ನವೀನ ವಿಮಾನನಿಲ್ದಾಣವು, ಕೇಂದ್ರೀಯ ಉದ್ಯಮ/ವ್ಯವಹಾರ ಜಿಲ್ಲೆ/ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್‌ಗೆ ಸುಮಾರು ೩೬ kilometres (೨೨ mi)ರಷ್ಟು ಉತ್ತರಕ್ಕಿರುವ ಲಾ ಮರ್ಸಿಯಲ್ಲಿ ನಿರ್ಮಿತವಾಗಿದೆ. ಡರ್ಬನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಎಲ್ಲಾ ಕಾರ್ಯಾಚರಣೆಗಳನ್ನು ಚಕ್ರವರ್ತಿ ಷಾಕಾ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆಯಲ್ಲದೇ 1 ಮೇ 2010ರ ಹಾಗೆ ; ಸಿಂಗಪೂರ್, ಲಂಡನ್ ಮತ್ತು ಆಸ್ಟ್ರೇಲಿಯಾಗಳಿಗೆ ಹೊಸ ಯಾನಗಳನ್ನು ಯೋಜಿಸಲಾಗಿದೆ.
ಡರ್ಬನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ದಕ್ಷಿಣ ಆಫ್ರಿಕಾದ ರಕ್ಷಣಾ ಪಡೆಯು/ಡಿಫೆನ್ಸ್ ಫೋರ್ಸ್ 2010ರ FIFA ವಿಶ್ವ ಕಪ್ ವೇಳೆಯಲ್ಲಿ ಬಳಕೆ ಮಾಡಲಿದೆ.
ಕ್ವಾಝುಲು-ನಟಾಲ್ ಮತ್ತು ಡ್ರೇಕೆನ್ಸ್‌ಬರ್ಗ್‌ಗಳಿಗೆ ಪ್ರಯಾಣಿಸುವವರಿಗೆ ಈ ವಿಮಾನನಿಲ್ದಾಣವು ಪ್ರಮುಖ ಪ್ರವೇಶದ್ವಾರವಾಗಿದೆ.
ಸಮುದ್ರ
ಬದಲಾಯಿಸಿಬಂದರು ಮಹಾನಗರವಾಗಿ ಡರ್ಬನ್ ದೀರ್ಘಕಾಲೀನ ಇತಿಹಾಸವನ್ನು ಹೊಂದಿದೆ. ನಟಾಲ್ ಬಂದರು ಪಟ್ಟಣವೆಂದು ಹಿಂದೆ ಹೆಸರಾಗಿದ್ದ ಡರ್ಬನ್ ಬಂದರು ಪಟ್ಟಣವು, ಪೋರ್ಟ್ ಎಲಿಜಬೆತ್/ಎಲಿಜಬೆತ್ ಬಂದರು ಪಟ್ಟಣದಿಂದ ಮಾಪುಟೋವರೆಗಿನ ಕೆಲವೇ ನೈಸರ್ಗಿಕ ಬಂದರುಗಳಲ್ಲಿ ಒಂದಾಗಿದ್ದು, ಸಮುದ್ರವು ಉಗ್ರರೂಪ ತಾಳುವುದಕ್ಕೆ ಕಾರಣವಾಗುವಂತಹಾ ನಿರ್ದಿಷ್ಟ ಹವಾಮಾನ ಪರಿಸ್ಥಿತಿಯು ಉಂಟಾಗುವ ಆರಂಭಿಕ ಸ್ಥಳವೂ ಆಗಿದೆ. ಇವೆರಡೂ ಲಕ್ಷಣಗಳು 1840ರ ದಶಕದಲ್ಲಿ ಬಂದರು ಪಟ್ಟಣವನ್ನು ತೆರೆದಾಗ ಡರ್ಬನ್‌ಅನ್ನು ಹಡಗುಗಳ ದುರಸ್ತಿಗೆ ಸಂಬಂಧಿಸಿದ ಹಾಗೆ ಅವಿರತ ಬೇಡಿಕೆಯ ಬಂದರು ಪಟ್ಟಣವನ್ನಾಗಿ ಮಾಡಿದ್ದವು. ಈಗ ದಕ್ಷಿಣ ಆಫ್ರಿಕಾದಲ್ಲಿನ ಅವಿಶ್ರಾಂತ ಬಂದರು ಪಟ್ಟಣವಾಗಿರುವ ಡರ್ಬನ್ ಬಂದರು ಪಟ್ಟಣವು ದಕ್ಷಿಣ ಗೋಳಾರ್ಧದಲ್ಲಿನ ಮೂರನೇ ಅವಿಶ್ರಾಂತ ಧಾರಕ ಹಡಗುಗಳ ಬಂದರು ಪಟ್ಟಣ ಕೂಡಾ ಆಗಿದೆ.
ದಕ್ಷಿಣ ಆಫ್ರಿಕಾದ ಔದ್ಯಮಿಕ ಮತ್ತು ಗಣಿ ರಾಜಧಾನಿಯಾದ ಜೋಹಾನ್ನೆಸ್‌ಬರ್ಗ್‌ಗೆ ಯಾವುದೇ ಜಲಮಾರ್ಗಗಳಿಲ್ಲವಾದುದರಿಂದ ಆಧುನಿಕ ಡರ್ಬನ್ ಬಂದರು ಪಟ್ಟಣವು ಅಲ್ಲಿನ ಉದ್ದಿಮೆಗಳಿಂದಾಗಿ ಬೆಳವಣಿಗೆ ಕಂಡುಕೊಂಡಿದೆ. ಆದ್ದರಿಂದ ಜೋಹಾನ್ನೆಸ್‌ಬರ್ಗ್‌ನಿಂದ ದಕ್ಷಿಣ ಆಫ್ರಿಕಾದಿಂದ ಹೊರಗೆ ಸಾಗಿಸಬೇಕಾದ ಉತ್ಪನ್ನಗಳನ್ನು ಟ್ರಕ್‌ಗಳ ಅಥವಾ ರೈಲುಮಾರ್ಗದ ಮೂಲಕ ಡರ್ಬನ್‌ಗೆ ಸಾಗಿಸಬೇಕಾಗಿರುತ್ತದೆ. ಮಾಪುಟೋ ಬಂದರು ಪಟ್ಟಣವು ಅಂತರ್ಯುದ್ಧ ಮತ್ತು ದಕ್ಷಿಣ ಆಫ್ರಿಕಾದ ಉತ್ಪನ್ನಗಳ ಮೇಲೆ ಹೇರಿದ್ದ ಬಂದರು ನಿರ್ಬಂಧದಿಂದಾಗಿ 1990ರ ದಶಕದ ಆದಿಯವರೆಗೆ ಬಳಕೆಗೆ ಲಭ್ಯವಿರಲಿಲ್ಲ. ಈಗ ಡರ್ಬನ್ ಮತ್ತು ಮಾಪುಟೋಗಳ ನಡುವೆ ಸರಕು ಸಾಗಣೆ ಉದ್ದಿಮೆಗೆ ಸಂಬಂಧಿಸಿದ ಹಾಗೆ ತೀವ್ರ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಈಗ ಪ್ರಧಾನ ಭೂಮಿಗೆ ಸೇರ್ಪಡೆಯಾಗಿರುವ ಹಾಗೂ ಡರ್ಬನ್ ಬಂದರು ಪಟ್ಟಣದ ಭಾಗವಾಗಿರುವ ಸೇಲಿಸ್‌ಬರಿ ಐಲ್ಯಾಂಡ್/ದ್ವೀಪವು ಈ ಹಿಂದೆ 2002ರಲ್ಲಿ ದರ್ಜೆಯಲ್ಲಿ ಇಳಿಕೆ ಮಾಡುವವರೆಗೆ ಪೂರ್ಣ ಮಟ್ಟದ ನೌಕಾದಳದ ನೆಲೆಯಾಗಿತ್ತು. ಇದು ಈಗ ನೌಕಾ ನಿಲ್ದಾಣವನ್ನು ಹಾಗೂ ಇತರೆ ಸೇನಾ ಕಚೇರಿಗಳನ್ನು ಹೊಂದಿದೆ. ಸೇಲಿಸ್‌ಬರಿ ಐಲ್ಯಾಂಡ್/ದ್ವೀಪವನ್ನು ಬಂದರು ಪಟ್ಟಣ ಅಗತ್ಯತೆಗಳಿಗಾಗಿ ಬಳಸಿಕೊಳ್ಳಲು ತೀವ್ರ ಬೇಡಿಕೆ ಬರತೊಡಗಿರುವುದರಿಂದ ಈ ನೌಕಾದಳದ ನೆಲೆಯ ಭವಿಷ್ಯವು ಇನ್ನೂ ತೂಗುಯ್ಯಾಲೆಯಲ್ಲಿದೆ.
ರೈಲು ಸಾರಿಗೆ
ಬದಲಾಯಿಸಿದಕ್ಷಿಣ ಆಫ್ರಿಕಾದ ಒಳಗಿನ ಪ್ರದೇಶದಿಂದ ಬೃಹತ್ ಸರಕುಗಳ ಹಡಗು-ಸಾಗಣೆಯಲ್ಲಿ ತನಗಿರುವ ಪ್ರಾಮುಖ್ಯತೆಯಿಂದಾಗಿ ಡರ್ಬನ್ ನಗರವು ಉತ್ತಮ ರೈಲು ಸಾರಿಗೆಯನ್ನು ಹೊಂದಿದೆ. ಷೊಷೋಲೋಜಾ ಮೇಯ್ಲ್ ಎಂಬ ಸ್ಪೂರ್‌ನೆಟ್‌ನ ಪ್ರಯಾಣಿಕ ರೈಲು ಸೇವೆಯು ಡರ್ಬನ್‌ನಿಂದ ಎರಡು ದೂರ-ಪ್ರಯಾಣದ ಪ್ರಯಾಣಿಕ ರೈಲುಸೇವೆಗಳ ಕಾರ್ಯಾಚರಣೆಯನ್ನು ನಡೆಸುತ್ತಿದ್ದು : ಅದರಲ್ಲಿ ಒಂದು ಪೀಟರ್‌ಮಾರಿಟ್ಜ್‌ಬರ್ಗ್ ಮೂಲಕ ಜೋಹಾನ್ನೆಸ್‌ಬರ್ಗ್‌ಗೆ ದ್ವಿಮುಖ ಪ್ರಯಾಣದ ದೈನಂದಿನ ಸೇವೆಯಾದರೆ ಮತ್ತೊಂದು ಕಿಂಬರ್ಲಿ ಮತ್ತು ಬ್ಲೋಮ್‌ಫಾಂಟೇನ್‌ಗಳ ಮೂಲಕ ಕೇಪ್ ಟೌನ್‌ಗೆ ವಾರಕ್ಕೊಮ್ಮೆ ದ್ವಿಮುಖ ಪ್ರಯಾಣದ ಸೇವೆಯಾಗಿದೆ. ಈ ರೈಲುಗಳು ಡರ್ಬನ್ ರೈಲ್ವೆ ನಿಲ್ದಾಣದಲ್ಲಿ ಕೊನೆಗೊಳ್ಳುತ್ತವೆ.
ಡರ್ಬನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ದೈನಂದಿನ ಪ್ರಯಾಣದ ರೈಲುಸೇವೆಯನ್ನು ಮೆಟ್ರೋರೈಲು ಸಂಸ್ಥೆಯು ನೀಡುತ್ತದೆ. ಡರ್ಬನ್ ನಿಲ್ದಾಣದಿಂದ ದೂರದ ಉತ್ತರ ಕರಾವಳಿಯಲ್ಲಿನ ಸ್ಟೇಂಜರ್, ದಕ್ಷಿಣ ಕರಾವಳಿಯಲ್ಲಿನ ಕೆಲ್ಸೋ ಮತ್ತು ಒಳನಾಡಿನ ಕಾಟೋ ರಿಡ್ಜ್‌ನವರೆಗೆ ಮೆಟ್ರೋ ರೈಲು ಜಾಲವು ಹರಡಿದೆ.
ರಸ್ತೆಗಳು
ಬದಲಾಯಿಸಿಆಫ್ರಿಕಾ ಖಂಡದ ದಕ್ಷಿಣ ಭಾಗಕ್ಕೆ ಪ್ರವೇಶ ಮಾರ್ಗದ ಬಂದರು ಪಟ್ಟಣವಾಗಿರುವ ಮಹಾನಗರ'ದ ಪ್ರಾಮುಖ್ಯತೆಯು, ಅದರ ಸುತ್ತಮುತ್ತ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಾಗುವಂತೆ ಮಾಡಿದೆ. ಒಂದು ಅಂತಹಾ ಹೆದ್ದಾರಿಯು ಡರ್ಬನ್‌ನಿಂದ ಆರಂಭಗೊಂಡರೆ, ಮತ್ತೊಂದು ಅದರ ಮೂಲಕ ಹಾದುಹೋಗುತ್ತದೆ. ಡರ್ಬನ್‌ಅನ್ನು ಸಂಪರ್ಕಿಸುವ N3 ಪಶ್ಚಿಮ ಮುಕ್ತಹೆದ್ದಾರಿಯು ಗಾಟೆಂಗ್ ಎಂಬ ಆರ್ಥಿಕ ಒಳನಾಡಿನ ನಗರದೊಂದಿಗೆ ಮಹಾನಗರದ ಪಶ್ಚಿಮ ದಿಕ್ಕಿನಲ್ಲಿ ಹೊರಮುಖ ಮಾಡುತ್ತದೆ. ಡರ್ಬನ್ ನಗರವನ್ನು ದಕ್ಷಿಣದಲ್ಲಿ ಕೇಪ್ ಟೌನ್‌ನ ಪಶ್ಚಿಮ ಭಾಗಕ್ಕೆ ಮತ್ತು ಉತ್ತರದಲ್ಲಿ ಎಮ್‌ಪುಮಲಂಗಾಗಳೊಂದಿಗೆ N2 ಹೊರ ವರ್ತುಲ ಮಾರ್ಗವು ಸಂಪರ್ಕಿಸುತ್ತದೆ. ಬಂದರು ಪಟ್ಟಣಕ್ಕೆ ಸರಕುಗಳನ್ನು ವಿಟ್‌ವಾಟರ್ಸ್‌ರಾಂಡ್‌ನಿಂದ ಟ್ರಕ್‌ಗಳಲ್ಲಿ ದ್ವಿಮುಖ ಮಾರ್ಗಗಳ ಸಾಗಿಸಲಾಗುತ್ತದಾದುದರಿಂದ ಪಶ್ಚಿಮ ಮುಕ್ತಹೆದ್ದಾರಿಯು ಪ್ರಾಮುಖ್ಯತೆ ಪಡೆದಿದೆ.
ಕೇಂದ್ರೀಯ ಉದ್ಯಮ/ವ್ಯವಹಾರ ಜಿಲ್ಲೆಯಲ್ಲಿ ಆರಂಭಗೊಂಡು, ಪಶ್ಚಿಮಕ್ಕೆ ಟಾಲ್‌ಗೇಟ್ ಸೇತುವೆಯ ಕೆಳಗೆ ಹಾದು, ಷೆರ್‌ವುಡ್ ಮತ್ತು ಮೇವಿಲ್ಲೆ ಉಪನಗರಗಳ ಮೂಲಕ N3 ಪಶ್ಚಿಮ ಮುಕ್ತಹೆದ್ದಾರಿಯು ಹಾದು ಹೋಗುತ್ತದೆ. N2 ಹೊರ ವರ್ತುಲ ರಸ್ತೆಯಿಂದ ಪಶ್ಚಿಮ ಮುಕ್ತಹೆದ್ದಾರಿಯ ನಡುವೆ ವಾಹನದಟ್ಟಣೆಯನ್ನು ಸ್ಥಳಾಂತರಿಸುವ ಅವಕಾಶವನ್ನು ವೆಸ್ಟ್‌ವಿಲ್ಲೆಯ ಪೂರ್ವಕ್ಕಿರುವ EB ಕ್ಲೋಯೆಟೆ ಪರ್ಯಾಯ ಜೋಡಿ ರಸ್ತೆಯು (ಇದನ್ನು ಅನೌಪಚಾರಿಕವಾಗಿ ಸ್ಪಾಘೆಟ್ಟಿ ಜಂಕ್ಷನ್/ಸಂಧಿ ಎಂದು ಕರೆಯಲಾಗುತ್ತದೆ) ನೀಡುತ್ತದೆ.
ಮಹಾನಗರವನ್ನು ಉತ್ತರ ಕರಾವಳಿಯಿಂದ ದಕ್ಷಿಣ ಕರಾವಳಿಯವರೆಗೆ N2 ಹೊರ ವರ್ತುಲ ರಸ್ತೆಯು ವಿಭಜಿಸುತ್ತದೆ. (ಸ್ಕಾಟ್‌ಬರ್ಗ್ ಮತ್ತು ಸ್ಟೇಂಜರ್‌ನಂತಹಾ) ಡರ್ಬನ್‌ನ ಮೇಲೆ ಆಧಾರಿತವಾಗಿರುವ ಕರಾವಳಿ ಪಟ್ಟಣಗಳಿಗೆ ಮತ್ತು ಡರ್ಬನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮಹತ್ವದ ಸಂಪರ್ಕ ಏರ್ಪಡಿಸುತ್ತದೆ.
ಮಹಾನಗರದ ಉತ್ತರ, ಪಶ್ಚಿಮ ಮತ್ತು ದಕ್ಷಿಣದೆಡೆಗೆ ವ್ಯಾಪಿಸಿರುವ ಉಪನಗರಗಳಿಗೆ ಸಂಪರ್ಕವನ್ನು ನೀಡುವ ಮುಕ್ತ ಹೆದ್ದಾರಿ ಮತ್ತು ಉಭಯ ನಗರಪ್ರದೇಶ/ಮಹಾನಗರವಲಯದ ಪ್ರಧಾನಮಾರ್ಗಗಳ ವ್ಯವಸ್ಥೆಯನ್ನು ಕೂಡಾ ಡರ್ಬನ್ ನಗರವು ಹೊಂದಿದೆ. ಎರಡು ಭಾಗ/ವಲಯಗಳಾಗಿ ಅಸ್ತಿತ್ವದಲ್ಲಿರುವ M4 ಹೆದ್ದಾರಿಯ ಲಿಯೋ ಬಾಯ್ಡ್ ಹೆದ್ದಾರಿ ಎಂದು ಕರೆಯಲ್ಪಡುವ ಉತ್ತರ ಭಾಗವು, N2ನಿಂದ ತಾನು ಪ್ರತ್ಯೇಕಗೊಳ್ಳುವ ಬಾಲ್ಲಿಟೋನಲ್ಲಿ ಪರ್ಯಾಯ ಹೆದ್ದಾರಿಯಾಗಿ ಆರಂಭಗೊಳ್ಳುತ್ತದೆ. ಉಮ್ಹ್‌ಲಾಂಗಾ ಮತ್ತು ಲಾ ಲ್ಯೂಸಿಯಾ ಎಂಬ ಉತ್ತರದ ಉಪನಗರಗಳಲ್ಲಿ ಉಭಯ ವಾಹನರಸ್ತೆಯಾಗಿ ಮಾರ್ಪಟ್ಟು ಅವುಗಳ ಮೂಲಕ ಹಾದುಹೋಗುವ ಇದು CBDಯ ಉತ್ತರ ತುದಿಯಲ್ಲಿ ಕೊನೆಗೊಳ್ಳುತ್ತದೆ. ಅಲ್ಬರ್ಟಿನಾ ಸಿಸುಲು ಹೆದ್ದಾರಿ ಎಂದು ಕರೆಯಲ್ಪಡುವ M4 ಹೆದ್ದಾರಿಯ ದಕ್ಷಿಣ ಭಾಗವು, CBDಯ ದಕ್ಷಿಣ ತುದಿಯಲ್ಲಿ ಆರಂಭಗೊಂಡು ಡರ್ಬನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಸಂಪರ್ಕಿಸುತ್ತಾ ಮತ್ತೊಮ್ಮೆ N2 ಹೊರ ವರ್ತುಲ ರಸ್ತೆಯೊಂದಿಗೆ ಸಂಪರ್ಕ ಸಾಧಿಸಿಕೊಳ್ಳುತ್ತದೆ.
ದಕ್ಷಿಣ ಕೈಗಾರಿಕಾ ಬಂದರನ್ನು N3 ಹೆದ್ದಾರಿಯೊಂದಿಗೆ ಸಂಪರ್ಕಿಸುವ M7 ಹೆದ್ದಾರಿಯು N2 ಹೆದ್ದಾರಿಯ ಮೂಲಕ ಕ್ವೀನ್ಸ್‌ಬರ್ಗ್ ಮೂಲಕ ಪೈನ್‌ಟೌನ್‌ನನ್ನೂ ಸಂಪರ್ಕಿಸುತ್ತದೆ. ಉತ್ತರ ಉಪನಗರಗಳನ್ನು ವೆಸ್ಟ್‌ವಿಲ್ಲೆಯ ಮೂಲಕದ ಹಾದಿಯಲ್ಲಿ ಪೈನ್‌ಟೌನ್‌ನೊಂದಿಗೆ M19 ಹೆದ್ದಾರಿಯು ಸಂಪರ್ಕಿಸುತ್ತದೆ.
(ಮಾರಿಯನ್ನ್‌ಹಿಲ್ ಬಳಿ ಸುಂಕ ಕಟ್ಟಿಸಿಕೊಳ್ಳಲಾಗುವ) N3 ಪಶ್ಚಿಮ ಮುಕ್ತಹೆದ್ದಾರಿಗೆ M13 ಹೆದ್ದಾರಿಯು ಸುಂಕರಹಿತ ಪರ್ಯಾಯ ರಸ್ತೆಯಾಗಿದೆ. ಈ ರಸ್ತೆಯು ಗಿಲ್ಲಿಟ್ಸ್, ಕ್ಲೂಫ್ ಮತ್ತು ವೆಸ್ಟ್‌ವಿಲ್ಲೆಗಳ ಮೂಲಕ ಕೂಡಾ ವಾಹನ ದಟ್ಟಣೆಯನ್ನು ಕಳುಹಿಸುತ್ತದೆ. ವೆಸ್ಟ್‌ವಿಲ್ಲೆ ಪ್ರದೇಶದಲ್ಲಿ ಇದನ್ನು ಜಾನ್ ಸ್ಮಟ್ಸ್ ಹೆದ್ದಾರಿ ಎಂದು ಕರೆದರೆ, ಕ್ಲೂಫ್ ಪ್ರದೇಶದಲ್ಲಿ ಇದನ್ನು ಆರ್ಥರ್ ಹಾಪ್‌ವೆಲ್ ಹೆದ್ದಾರಿ ಎಂದು ಕರೆಯಲಾಗುತ್ತದೆ.
ಬಸ್‌ಗಳ ಸಂಚಾರ
ಬದಲಾಯಿಸಿಡರ್ಬನ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯನ್ನು 2003ರಲ್ಲಿ ಕೊಂಡ ಕಂಪೆನಿಯಾದ ರೆಮಾಂಟ್ ಆಲ್ಟನ್ ಡರ್ಬನ್ ನಗರಪ್ರದೇಶ/ಮಹಾನಗರವಲಯದಾದ್ಯಂತ ನಿಗದಿಪಡಿಸಿದ ಬಸ್ ಸಂಚಾರ ಸೇವೆಗಳನ್ನು ಒದಗಿಸುತ್ತಿತ್ತು. ಆದಾಗ್ಯೂ ರೆಮಾಂಟ್ ಆಲ್ಟನ್'ನ ಸೇವೆಗಳನ್ನು ಕಂಪೆನಿಯ ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿರುವುದು ಮತ್ತು ರಸ್ತೆಯಲ್ಲಿ ಸಂಚರಿಸಲಾರದ ಸ್ಥಿತಿಯಲ್ಲಿರುವ ವಾಹನಗಳು ಮತ್ತು ತನ್ನ ಸಿಬ್ಬಂದಿಗಳಿಂದಾದ ಉಗ್ರ ಔದ್ಯಮಿಕ ಪ್ರತಿಭಟನೆಗಳಿಂದಾಗಿ ಮಾರ್ಚ್ 2009ರಲ್ಲಿ ಸ್ಥಗಿತಗೊಳಿಸಲಾಯಿತು.[೧೭] ರೆಮಾಂಟ್ ಆಲ್ಟನ್ ಕಂಪೆನಿಯು ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿಗಳನ್ನು,[೧೮] ಕಳೆದುಕೊಂಡು, ಬೆಂಕಿ ದುರ್ಘಟನೆಯೊಂದರಲ್ಲಿ 56 ಬಸ್ಸುಗಳು ಸುಟ್ಟು ಹೋದ ನಷ್ಟದ ಜೊತೆಗೆ, ಅನೇಕವನ್ನು ರಸ್ತೆ ಸಂಚಾರಕ್ಕೆ ಯೋಗ್ಯವಲ್ಲವೆಂದು ಮುಟ್ಟುಗೋಲು ಹಾಕಿಕೊಳ್ಳಲಾಗಿರುವುದರಿಂದ ಹೆಚ್ಚೇನೂ ಚಟುವಟಿಕೆಯಲ್ಲಿಲ್ಲ. [ಸೂಕ್ತ ಉಲ್ಲೇಖನ ಬೇಕು] ಇದರಿಂದಾಗಿ ಡರ್ಬನ್ ನಗರವು ದುರ್ಬಲ ಔಪಚಾರಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವಂತೆ ಮಾಡಿದೆ. [ಸೂಕ್ತ ಉಲ್ಲೇಖನ ಬೇಕು]
ಡರ್ಬನ್ ಪೀಪಲ್ ಮೂವರ್ ಎಂಬುದು ಪ್ರವಾಸಿಗರನ್ನು ಉದ್ದೇಶಿಸಿದ ಕೇಂದ್ರೀಯ ಉದ್ಯಮ/ವ್ಯವಹಾರ ಜಿಲ್ಲೆಯೊಳಗೆ ತೀರಕ್ಕೆ ಅಭಿಮುಖವಾದ ಮೂರು ಮಾರ್ಗಗಳಲ್ಲಿ ಕಾರ್ಯಾಚರಿಸುವ ವಿವಿಧ ಆಕರ್ಷಕ ತಾಣಗಳನ್ನು ಸಂಪರ್ಕಿಸುವ ಪ್ರತಿ 15 ನಿಮಿಷಗಳಿಗೊಮ್ಮೆ ಲಭ್ಯವಿರುವ ಬಸ್ ಸೇವೆಯಾಗಿದೆ.[೧೯]
ಅನೇಕ ಕಂಪೆನಿಗಳು ಡರ್ಬನ್‌ನಿಂದ ದಕ್ಷಿಣ ಆಫ್ರಿಕಾದಲ್ಲಿನ ಇತರ ಮಹಾನಗರಗಳಿಗೆ ದೀರ್ಘ ಅಂತರದ ಬಸ್ ಸೇವೆಗಳನ್ನು ಒದಗಿಸುತ್ತವೆ. ಡರ್ಬನ್‌ನಲ್ಲಿ ಬಸ್‌ಗಳು ದೀರ್ಘ ಇತಿಹಾಸವನ್ನು ಹೊಂದಿವೆ. 1930`ರ ದಶಕದ ಆದಿಯಿಂದ ಅವುಗಳಲ್ಲಿ ಬಹುತೇಕವು ಭಾರತೀಯ ಮಾಲೀಕರಿಂದ ನಡೆಸಲ್ಪಡುತ್ತಿವೆ. ಸರ್ಕಾರದಿಂದ ಅನುದಾನವಿಲ್ಲದೇ ನಡೆಸಲ್ಪಡುವ ಖಾಸಗಿ ಮಾಲೀಕತ್ವದ ಬಸ್ಸುಗಳು ಸಮುದಾಯಕ್ಕೆ ನಿರ್ದಿಷ್ಟ ಅವಧಿಗಳಲ್ಲಿ ಸೇವೆಗಳನ್ನು ನೀಡುತ್ತವೆ. ಎಥೆಕ್ವಿನಿ ನಗರಪಾಲಿಕೆಯ ಎಲ್ಲಾ ಪ್ರದೇಶಗಳಲ್ಲಿಯೂ ಬಸ್‌ಗಳು ಕಾರ್ಯಾಚರಿಸುತ್ತದೆ. 2003ನೇ ಇಸವಿಯಿಂದ ಬಾಡಿಗೆ ಟ್ಯಾಕ್ಸಿ ಸೇವೆಗಳ ಮಾಲೀಕರಿಂದ ಹಿಂಸಾತ್ಮಕವಾಗಿ ಬಸ್‌ಗಳ ಮಾರ್ಗಗಳನ್ನು ಮತ್ತು ಬಸ್ ನಿಲ್ದಾಣಗಳನ್ನು ತೆರವುಗೊಳಿಸಲಾಗುತ್ತಿದೆ. ಇದರಿಂದಾಗಿ ಬಸ್ ಕಾರ್ಯಾಚರಣೆಗಳು ತೀರ ಹದಗೆಟ್ಟಿವೆ. ಬಸ್ ಮಾಲೀಕರುಗಳು ಈಗ ತಮ್ಮ ಬಸ್ ಪರವಾನಗಿಗಳನ್ನೇ ಬಳಸಿಕೊಂಡು ಟ್ಯಾಕ್ಸಿ ಸೇವೆಯನ್ನು ನೀಡುತ್ತಾ ತಮ್ಮ ಬದುಕಿಗೆ ದಾರಿ ಕಂಡುಕೊಂಡಿದ್ದಾರೆ.
ಟ್ಯಾಕ್ಸಿ ಸೇವೆ
ಬದಲಾಯಿಸಿಡರ್ಬನ್ ನಗರವು ಎರಡು ವಿಧಗಳ ಟ್ಯಾಕ್ಸಿಗಳನ್ನು ಹೊಂದಿದೆ: ಮೀಟರ್ ಹೊಂದಿರುವ ಟ್ಯಾಕ್ಸಿಗಳು ಮತ್ತು ಮಿನಿಬಸ್ ಟ್ಯಾಕ್ಸಿಗಳು. ಇತರೆ ಅನೇಕ ಮಹಾನಗರಗಳ ಹಾಗೆ ಮೀಟರ್ ಹೊಂದಿರುವ ಟ್ಯಾಕ್ಸಿಗಳನ್ನು ಕೋರಿಕೊಂಡ ದರಗಳಲ್ಲಿ ಮಹಾನಗರದ ಸುತ್ತಲೂ ಬೇಕೆಂದೆಡೆ ಕರೆದುಕೊಂಡು ಹೋಗುವಂತಿಲ್ಲದೇ, ಕರೆ ಮಾಡಿ ನಿರ್ದಿಷ್ಟ ಸ್ಥಳಕ್ಕೆ ಹೋಗಲು ಆದೇಶಿಸಬೇಕಾಗಿರುತ್ತದೆ. ಡರ್ಬನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಅನೇಕ ಕಂಪೆನಿಗಳು ಸೇವೆಗಳನ್ನು ನೀಡುತ್ತವೆ. ಈ ಟ್ಯಾಕ್ಸಿಗಳನ್ನು ವಿಮಾನನಿಲ್ದಾಣಗಳ ನಡುವಿನ ಪ್ರಯಾಣಕ್ಕೆ, ಬೇಕೆಂದೆಡೆಗೆ ಇದ್ದಲ್ಲಿಂದಲೇ ಕರೆದೊಯ್ಯುವ ಹಾಗೂ ಷಟಲ್ ಸೇವೆಗಳಿಗೆಲ್ಲಾ ಬಳಸಿಕೊಳ್ಳಬಹುದು.
ಮಿನಿಬಸ್ ಟ್ಯಾಕ್ಸಿಗಳು ಖಾಸಗಿ ಕಾರುಗಳ ವೆಚ್ಚವನ್ನು ಭರಿಸಲಾರದ ಬಹುತೇಕ ಜನರಿಗೆ ಅತ್ಯಗತ್ಯವಾದ ಸಾರಿಗೆಸೌಲಭ್ಯವಾಗಿವೆ.[೨೦] ಅತ್ಯಗತ್ಯವಾದರೂ, ಈ ಟ್ಯಾಕ್ಸಿಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳದಿರುವುದರಿಂದ ಬಹುತೇಕವಾಗಿ ಅವು ಸಂಚಾರಯೋಗ್ಯವಾಗಿರುವುದಿಲ್ಲ. ಈ ಟ್ಯಾಕ್ಸಿಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಹಳಷ್ಟು ಅನಿಯತ ನಿಲುಗಡೆಗಳನ್ನು ಮಾಡುತ್ತವಾದ್ದರಿಂದ, ಹಿಂದಿನ ವಾಹನಗಳ ಚಾಲಕರು ಸಮಯಕ್ಕೆ ಸರಿಯಾಗಿ ನಿಲ್ಲಿಸಲು ಸಾಧ್ಯವಾಗದೇ ಅಪಘಾತಗಳಾಗುವುದು ಸರ್ವೇಸಾಮಾನ್ಯವಾಗಿರುತ್ತದೆ.[೨೧][೨೨] ದಕ್ಷಿಣ ಆಫ್ರಿಕಾದ ಕಾರ್ಮಿಕ ವರ್ಗಕ್ಕೆ ಅತ್ಯಗತ್ಯವಾದ ಸಾರಿಗೆ ಬೇಡಿಕೆಯಿಂದಾಗಿ, ಮಿನಿಬಸ್ ಟ್ಯಾಕ್ಸಿಗಳಲ್ಲಿ ಅನೇಕವೇಳೆ ಕಾನೂನುಬದ್ಧ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ತುಂಬಲಾಗುವುದರಿಂದ ಮಿನಿಬಸ್‌ಗಳು ಅಪಘಾತಕ್ಕೀಡಾದಾಗ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿವೆ. ಸಾಧಾರಣವಾಗಿ ಮಿನಿಬಸ್‌ಗಳನ್ನು ತಂಡಗಳಾಗಿ ಸ್ವಾಮ್ಯವನ್ನು ಹೊಂದಿರುವುದರಿಂದ ಮತ್ತು ಹಾಗೆಯೇ ತಂಡವಾಗಿ ಕಾರ್ಯಾಚರಣೆಗಳನ್ನು ಮಾಡುವುದರಿಂದ, ಸೇವಾದಾರರ ನಡುವಿನ ವೈಷಮ್ಯಗಳು ಆಗ್ಗಾಗ್ಗೆ ಹೊರಹೊಮ್ಮಿ ಹೆಚ್ಚು ಹಣ ಗಳಿಸುವ ಟ್ಯಾಕ್ಸಿ ಮಾರ್ಗಗಳಲ್ಲಿ ಸ್ಪರ್ಧೆ ಉಂಟಾದಾಗ ಘರ್ಷಣೆ ಉಂಟಾಗುತ್ತದೆ.[೨೩]
ರಿಕ್ಷಾಗಳು
ಬದಲಾಯಿಸಿಡರ್ಬನ್ ನಗರವು ಮಹಾನಗರದುದ್ದಕ್ಕೂ ಚಲಿಸುವ ತನ್ನ ಪ್ರಾತಿನಿಧಿಕ ಜು/ಝುಲು ರಿಕ್ಷಾ ಎಳೆಯುವವರಿಗೆ[೨೪] ಕೂಡಾ ಪ್ರಸಿದ್ಧವಾಗಿದೆ. ಈ ವರ್ಣಮಯ ವ್ಯಕ್ತಿಗಳು ತಮ್ಮ ಬೃಹತ್, ತೂಗಾಡುವ ಟೊಪ್ಪಿಗೆಗಳು ಮತ್ತು ವಿಚಿತ್ರ ವೇಷಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಅವರು 1900ರ ದಶಕದ ಆದಿಯಿಂದಲೇ ಸಾರಿಗೆಯ ಪ್ರಮುಖ ವಿಧಾನವಾಗಿದ್ದರೂ ಅವರು ಪ್ರಮುಖವಾಗಿ ಪ್ರವಾಸಿಗರಿಗೆ ಸೇವೆ ನೀಡುತ್ತಾರೆ. [ಸೂಕ್ತ ಉಲ್ಲೇಖನ ಬೇಕು] ಇದನ್ನೂ ನೋಡಿ ರಿಕ್ಷಾ - ಪ್ರವಾಸೀ ಆಕರ್ಷಣೆಗಳು.
ಉಪನಗರಗಳು
ಬದಲಾಯಿಸಿಶೈಕ್ಷಣಿಕ ಸಂಸ್ಥೆಗಳು
ಬದಲಾಯಿಸಿಖಾಸಗಿ ಶಾಲೆಗಳು
ಬದಲಾಯಿಸಿಸಾರ್ವಜನಿಕ ಶಾಲೆ/ವಿದ್ಯಾಲಯಗಳು
ಬದಲಾಯಿಸಿವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳು
ಬದಲಾಯಿಸಿಅಂತರರಾಷ್ಟ್ರೀಯ ಸಂಬಂಧಗಳು
ಬದಲಾಯಿಸಿಅವಳಿ ಪಟ್ಟಣಗಳು — ಸಹೋದರಿ ಮಹಾನಗರಗಳು
ಬದಲಾಯಿಸಿಡರ್ಬನ್ ನಗರವು ಕೆಳಕಂಡ ನಗರಗಳೊಂದಿಗೆ ಅವಳಿ ಸಂಬಂಧವನ್ನು ಹೊಂದಿದೆ :[೨೭]
ಇವನ್ನೂ ನೋಡಿ
ಬದಲಾಯಿಸಿ- ಡರ್ಬನ್‌ನಲ್ಲಿನ ಕಲಾ ಅಲಂಕರಣ
- ಡರ್ಬನ್‌ನಲ್ಲಿ ನಡೆಸಲಾದ - ಜನಾಂಗೀಯ ತಾರತಮ್ಯದ ವಿರುದ್ಧದ ಜಾಗತಿಕ ಸಮ್ಮೇಳನ 2001
ಆಕರಗಳು
ಬದಲಾಯಿಸಿ- ↑ ೧.೦ ೧.೧ Municipal Demarcation Board, South Africa Archived 2009-04-26 ವೇಬ್ಯಾಕ್ ಮೆಷಿನ್ ನಲ್ಲಿ. Retrieved on 2008-03-23.
- ↑ ೨.೦ ೨.೧ Statistics South Africa, Community Survey, 2007, Basic Results Municipalities (pdf-file) Archived 2013-08-25 ವೇಬ್ಯಾಕ್ ಮೆಷಿನ್ ನಲ್ಲಿ. Retrieved on 2008-03-23.
- ↑ Eric A. Walker (1964) [1928]. "Chapter I - The discovery". A History of Southern Africa. London: Longmans.
- ↑ Eric A. Walker (1964) [1928]. "Chapter VII - The period of change 1823-36". A History of Southern Africa. London: Longmans.
- ↑ Adrian Koopman. "The Names and the Naming of Durban". Natalia, the Journal of the Natal Society. Archived from the original on 2007-11-03. Retrieved 2008-07-09.
- ↑ T.V. Bulpin (1977) [1966]. "Chapter XII - Twilight of the Republic". Natal and the Zulu Country. Cape Town: T.V. Bulpin Publications.
- ↑ Bruce Berry (8 May 2006). "Durban (South Africa)". Archived from the original on 2010-06-13. Retrieved 2010-07-08.
{{cite web}}
:|article=
ignored (help) - ↑ Ralf Hartemink. "Durban". Archived from the original on 2010-12-05. Retrieved 2010-07-08.
{{cite web}}
:|article=
ignored (help) - ↑ "ngopulse". ngopulse. Archived from the original on 2011-07-23. Retrieved 2010-07-02.
- ↑ ೧೦.೦ ೧೦.೧ "Climate Data for Durban". South African Weather Service. Retrieved 6 March 2010.
- ↑ "The Vuna Awards". Department of Provincial and Local Government, Republic of South Africa. Archived from the original on 2009-11-29. Retrieved 2010-07-31.
- ↑ "Why eThekwini Municipality won the Vuna Award for best run metropolitan". Ethekwini Municipality Communications Department. Archived from the original on 2009-08-22. Retrieved 2010-07-31.
- ↑ "Cohre". Cohre. Archived from the original on 2008-12-19. Retrieved 2010-07-02.
- ↑ "ಫ್ರಮ್ ಬೆಸ್ಟ್ ಪ್ರಾಕ್ಟೀಸ್ ಟು ಪರೀಯಾಹ್ : ದ ಕೇಸ್ ಆಫ್ ಡರ್ಬನ್, ಸೌತ್ ಆಫ್ರಿಕಾ ಪ್ಯಾಟ್ ಹಾರ್ನ್‌ರಿಂದ, ಸ್ಟ್ರೀಟ್ ನೆಟ್". Archived from the original on 2007-09-06. Retrieved 2010-07-31.
- ↑ ಮುಂಬರುವ ವಿಶ್ವ ಕಪ್‌ಗೆ ಒಕ್ಕಲೆಬ್ಬಿಸಿದವರ ದಕ್ಷಿಣ ಆಫ್ರಿಕನ್ನರ 'ಟಿನ್ ಕ್ಯಾನ್ ಪಟ್ಟಣ'ದಲ್ಲಿನ ಜೀವನ, ಡೇವಿಡ್ ಸ್ಮಿತ್, ದ ಗಾರ್ಡಿಯನ್ 1 ಏಪ್ರಿಲ್ 2010
- ↑ "Durban Welcomes Possible Olympic Bid". Gamesbids.com. Archived from the original on 2010-06-27. Retrieved 2010-07-02.
- ↑ eThekwini Municipality (2009-03-13). "Notice From Remant Alton — Suspension Of Bus Commuter Service". Archived from the original on 2011-07-26. Retrieved 2009-05-03.
- ↑ Independent Online. "Chief resigns in face of bus crisis". IOL. Archived from the original on 2009-04-30. Retrieved 2009-05-05.
- ↑ Durban People Mover. "Durban People Mover ... The future begins here". Archived from the original on 2009-04-21. Retrieved 2009-05-03.
- ↑ "Transport". CapeTown.org. Archived from the original on 2011-11-28. Retrieved 2010-07-31.
- ↑ "South Africa's minibus wars: uncontrollable law-defying minibuses oust buses and trains from transit". LookSmart. Archived from the original on 2007-12-06.
- ↑ "Transportation in Developing Countries: Greenhouse Gas Scenarios of south alabama". Pew Center. Archived from the original on 2007-06-21. Retrieved 2010-07-31.
- ↑ "Taxing Alternatives: Poverty Alleviation and the South African Taxi/Minibus Industry". Enterprise Africa! Research Publications. Archived from the original on 2006-08-25.
- ↑ Ethekwini Municipality Communications Department, edited by Fiona Wayman, Neville Grimmet and Angela Spencer. "Zulu Rickshaws". Durban.gov.za. Archived from the original on 2010-05-19. Retrieved 2010-07-02.
{{cite web}}
:|author=
has generic name (help)CS1 maint: multiple names: authors list (link) - ↑ "Isipingo Secondary School". Isipingosecondary.com. Archived from the original on 2010-03-30. Retrieved 2010-07-02.
- ↑ "Virginia Preparatory School". Virginiaprep.co.za. 1958-01-21. Retrieved 2010-07-02.
- ↑ "Sister Cities Home Page". Archived from the original on 2011-08-10. Retrieved 2010-07-31. ಎಥೆಕ್ವಿನಿ ಆನ್‌ಲೈನ್ : ಡರ್ಬನ್ ಮಹಾನಗರದ ಅಧಿಕೃತ ಜಾಲತಾಣ
- ↑ "Sister Cities of Guangzhou". Guangzhou Foreign Affairs Office. Retrieved 2010-02-10.
ಹೊರಗಿನ ಕೊಂಡಿಗಳು
ಬದಲಾಯಿಸಿ- ಅಧಿಕೃತ ಡರ್ಬನ್ ಮಹಾನಗರ ಜಾಲತಾಣ Archived 1996-03-29 ವೇಬ್ಯಾಕ್ ಮೆಷಿನ್ ನಲ್ಲಿ.
- ಪೌರಸಾಂಸ್ಥಿಕ ಗಡಿ ನಿರ್ಧಾರಣಾ ಮಂಡಳಿ Archived 2009-04-26 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ಟಾಟ್ಸ್ಸಾಲ್ ಜಾಲತಾಣ
- ಸ್ವತಂತ್ರ ಚುನಾವಣಾ ಆಯೋಗದ 2004ರ ಚುನಾವಣಾ ಫಲಿತಾಂಶಗಳು Archived 2006-05-16 ವೇಬ್ಯಾಕ್ ಮೆಷಿನ್ ನಲ್ಲಿ.