ಬಂದರು ಹಡಗುಗಳು, ದೋಣಿಗಳು, ಮತ್ತು ಸರಕು ದೋಣಿಗಳು ಬಿರುಗಾಳಿಯ ಹವೆಯಿಂದ ಆಶ್ರಯ ಪಡೆಯುವ ಸ್ಥಳವಾಗಿದೆ ಅಥವಾ ಭವಿಷ್ಯದ ಬಳಕೆಗಾಗಿ ಸಂಗ್ರಹಿಸಲಾಗುತ್ತದೆ. ಬಂದರುಗಳು ನೈಸರ್ಗಿಕ ಅಥವಾ ಕೃತಕವಾಗಿರಬಹುದು. ಕೃತಕ ಬಂದರು ಉದ್ದೇಶಪೂರ್ವಕವಾಗಿ ನಿರ್ಮಿಸಿದ ಅಲೆತಡೆಗಳನ್ನು ಕಡಲಗೋಡೆಗಳನ್ನು ಅಥವಾ ಜೆಟ್ಟಿಗಳನ್ನು ಹೊಂದಿರುತ್ತದೆ. ಅಥವಾ ಅವುಗಳನ್ನು ಹೂಳೆತ್ತುವ ಮೂಲಕ ನಿರ್ಮಿಸಲು ಸಾಧ್ಯ. ಮತ್ತಷ್ಟು ಆವರ್ತಕ ಹೂಳೆತ್ತುವಿಕೆ ಮೂಲಕ ಅವುಗಳ ನಿರ್ವಹಣೆ ಅಗತ್ಯವಿರುತ್ತದೆ. ಮುಂಚಿನ ವಿಧದ ಬಂದರಿಗೆ ಉದಾಹರಣೆ ಕ್ಯಾಲಿಫೋರ್ನಿಯದ ಲಾಂಗ್ ಬೀಚ್ ಬಂದರು ಮತ್ತು ನಂತರದ ವಿಧಕ್ಕೆ ಉದಾಹರಣೆ ಕ್ಯಾಲಿಫೋರ್ನಿಯದ ಸ್ಯಾನ್ ಡೀಗೊ ಬಂದರು. ಇದು ನೈಸರ್ಗಿಕ ಪರಿಸ್ಥಿತಿಗಳಿಗೆ ಅನುಗುಣವಾಗಿದ್ದು, ಆಧುನಿಕ ವಾಣಿಜ್ಯ ಹಡಗುಗಳು ಮತ್ತು ಯುದ್ಧನೌಕೆಗಳಿಗೆ ತೀರಾ ಆಳವಿಲ್ಲದ ಸ್ಥಳವಾಗಿರುತ್ತದೆ.

ಕಾಪ್ರಿ ಬಂದರು, ಅನಾಕಾಪ್ರಿಯಿಂದ ಕಾಣುವ ಇಟಲಿಯ ದೃಶ್ಯ

ಇದಕ್ಕೆ ವಿರುದ್ಧವಾಗಿ, ನೈಸರ್ಗಿಕ ಬಂದರು ಭೂಮಿಯಲ್ಲಿ ಎದ್ದುಕಾಣುವ ಭಾಗವಾಗಿ ಅನೇಕ ಕಡೆಗಳಿಂದ ಸುತ್ತುವರೆದಿದೆ. ಈ ರೀತಿಯ ಬಂದರಿಗೆ ಉದಾಹರಣೆ ಸ್ಯಾನ್‌ಫ್ರಾನ್ಸಿಸ್ಕೊ ಬೇ, ಕ್ಯಾಲಿಫೋರ್ನಿಯ.

 • ಹಡಗುಗಳಿಗೆ ಆಶ್ರಯ ನೀಡುವ ಬಂದರುಗಳು ಮತ್ತು ಪೋರ್ಟ್‌ಗಳ ಅರ್ಥದ ನಡುವೆ ಸಾಮಾನ್ಯವಾಗಿ ತಪ್ಪು ತಿಳಿವಳಿಕೆ ಉಂಟಾಗುತ್ತದೆ. ಪೋರ್ಟ್ ಹಡಗುಗಳಿಗೆ ಸರಕುಗಳನ್ನು ತುಂಬುವ ಮತ್ತು ಇಳಿಸುವ ಸೌಲಭ್ಯ, ಪೋರ್ಟ್‌ಗಳು ಸಾಮಾನ್ಯವಾಗಿ ಆಶ್ರಿತ ಬಂದರುಗಳ ಒಳಗೆ ನೆಲೆ ಹೊಂದಿರುತ್ತವೆ.(???)

ಪೋರ್ಟ್`-ಬಂದರುಸಂಪಾದಿಸಿ

*harbour:A sheltered port where ships can take on or discharge cargo
 • port:A place (seaport or airport) where people and merchandise can enter or leave a country
"source=(WordWeb
 • ಪೋರ್ಟ್`=ರೇವು ಪಟ್ಟಣ- ಹಡಗುನಿಲ್ದಾಣಗಳ ಜೊತೆಗೆ ವ್ಯಾಪಾರ ಕೇಂದ್ರ ನಗರಗಳಿಗೆ ಹೊಂದಿಕೊಂಇರುತ್ತದೆ;
 • ಬಂದರು=*ಹಾರ್ಬರ್`ಕೇವಲ ಹಡಗುಗಳ ನಿಲ್ದಾಣ (ಬದಲಿಸುವ ಮುಂಚೆ ಗಮನಿಸಿ)->.
 • ಇಲ್ಲಿ ಕೆಳಗಡೆ ಬಂದರು ಮತ್ತು ರೇವು ಪಟ್ಟಣ(ಪೋರ್ಟ್) ಗಳನ್ನು ಪ್ರತ್ಯೇಕಿಸದೆ ಒಟ್ಟಗೆ ಬರೆದಂತೆ ತೋರುತ್ತದೆ -ಅವನ್ನು ಪ್ರತ್ಯೇಕಿಸುವ ಅಗತ್ಯವಿದೆ.

ಕೃತಕ ಬಂದರುಗಳುಸಂಪಾದಿಸಿ

ಕೃತಕ ಬಂದರುಗಳನ್ನು ಸಾಮಾನ್ಯವಾಗಿ ಪೋರ್ಟ್‌ಗಳಾಗಿ ಬಳಕೆಗೆ ನಿರ್ಮಿಸಲಾಗುತ್ತದೆ. ಅತೀ ದೊಡ್ಡದಾದ ಕೃತಕವಾಗಿ ನಿರ್ಮಿಸಿದ ಬಂದರು ದುಬೈನ ಜೆಬೆಲ್ ಅಲಿ.[೧] ಇತರೆ ದೊಡ್ಡ ಮತ್ತು ದಟ್ಟಣೆಯ ಕೃತಕ ಬಂದರುಗಳು ನೆದರ್‌ಲ್ಯಾಂಡ್ಸ್‌ನ ರೋಟ್ಟರ್‌ಡ್ಯಾಂ; ಟೆಕ್ಸಾಸ್‌ನ ಹೌಸ್ಟನ್; ಕ್ಯಾಲಿಫೋರ್ನಿಯದ ಲಾಂಗ್‌ ಬೀಚ್‌; ಮತ್ತು ಕ್ಯಾಲಿಫೋರ್ನಿಯದ ಸ್ಯಾನ್ ಪೆಡ್ರೊನಲ್ಲಿ ನೆಲೆ ಹೊಂದಿವೆ.

ನೈಸರ್ಗಿಕ ಬಂದರುಗಳುಸಂಪಾದಿಸಿ

 
ವಿಜಿಂಜಮ್‌ನಲ್ಲಿ ನೈಸರ್ಗಿಕ ಬಂದರು, ಭಾರತ

ನೈಸರ್ಗಿಕ ಬಂದರು ಭೂರೂಪವಾಗಿದ್ದು, ನೀರಿನ ಸಂಗ್ರಹದ ಭಾಗವನ್ನು ರಕ್ಷಿಸಲಾಗಿದ್ದು, ಲಂಗರುದಾಣದ ಸೌಲಭ್ಯಕ್ಕೆ ಸಾಕಷ್ಟು ಆಳವಾಗಿದೆ. ಅಂತಹ ಅನೇಕ ಬಂದರುಗಳನ್ನು ಅಳಿವೆಗಳೆಂದು ಕರೆಯಲಾಗುತ್ತದೆ. ನೈಸರ್ಗಿಕ ಬಂದರುಗಳು ಅತೀ ದೊಡ್ಡ ಮಿಲಿಟರಿ ಕಾರ್ಯತಂತ್ರ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ದೀರ್ಘಕಾಲ ಗಳಿಸಿದ್ದು, ವಿಶ್ವದ ಅನೇಕ ಮಹಾ ನಗರಗಳು ಅವುಗಳ ಮೇಲೆ ನೆಲೆಹೊಂದಿವೆ. ರಕ್ಷಿತ ಬಂದರನ್ನು ಹೊಂದಿರುವುದರಿಂದ ಅಲೆತಡೆಗಳ ಅಗತ್ಯವನ್ನು ನಿವಾರಿಸುತ್ತದೆ ಅಥವಾ ತಗ್ಗಿಸುತ್ತದೆ. ಏಕೆಂದರೆ ಇದರ ಪರಿಣಾಮವಾಗಿ ಬಂದರಿನೊಳಕ್ಕೆ ನಿಶ್ಚಲವಾದ ಅಲೆಗಳು ಬರುತ್ತವೆ.

ಹಿಮ ಮುಕ್ತ ಬಂದರುಗಳುಸಂಪಾದಿಸಿ

ಉತ್ತರ ಮತ್ತು ದಕ್ಷಿಣ ಧ್ರುವಗಳ ಬಳಿ ಬಂದರುಗಳು ಹಿಮಮುಕ್ತವಾಗಿರುವುದು ಮುಖ್ಯ ಅನುಕೂಲವಾಗಿದ್ದು, ವಿಶೇಷವಾಗಿ ವರ್ಷವಿಡೀ ಹಿಮಮುಕ್ತವಾಗಿದ್ದರೆ ಒಳ್ಳೆಯದು. ಇವುಗಳ ಉದಾಹರಣೆಗಳಲ್ಲಿ ಮುರ್ಮಾನ್ಸ್ಕ್, ರಷ್ಯಾ; ಪೆಚಂಗಾ, ರಷ್ಯಾ, ಮುಂಚಿನ ಪೆಟ್ಸಾಮೊ, ಫಿನ್‌ಲ್ಯಾಂಡ್); ವ್ಲಾಡಿವೋಸ್ಟಾಕ್ , ರಷ್ಯಾ; ಸೇಂಟ್ ಪೀಟರ್ಸ್‌ಬರ್ಗ್, ರಷ್ಯಾ; ಹ್ಯಾಮರ್‌ಫೆಸ್ಟ್, ನಾರ್ವೆ; Vardø, ನಾರ್ವೆ; ಮತ್ತು ಪ್ರಿನ್ಸ್ ರುಪರ್ಟ್ ಬಂದರು, ಕೆನಡಾ. ವಿಶ್ವದ ಅತ್ಯಂತ ದಕ್ಷಿಣದ ಬಂದರು ಅಂಟಾರ್ಕ್‌ಟಿಕಾದ ವಿಂಟರ್ ಕ್ವಾರ್ಟರ್ಸ್ ಕೊಲ್ಲಿಯಲ್ಲಿ (77° 50′ ದಕ್ಷಿಣಕ್ಕೆ) ನೆಲೆಹೊಂದಿದ್ದು, ಹಿಮ ಮುಕ್ತ ಸಾಮರ್ಥ್ಯವನ್ನು ಹೊಂದಿದೆ. ಇದು ಬೇಸಿಗೆಕಾಲದ ಹಿಮಖಂಡಗಳ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ.[೨]

ಉಬ್ಬರವಿಳಿತದ ಬಂದರುಸಂಪಾದಿಸಿ

ಉಬ್ಬರವಿಳಿತದ ಅಥವಾ ಭರತದ ಬಂದರು ಕೆಲವು ಉಬ್ಬರವಿಳಿತದ ಮಟ್ಟಗಳಲ್ಲಿ ಪ್ರವೇಶಿಸಬಹುದು ಅಥವಾ ನಿರ್ಗಮಿಸಬಹುದು.[೩]

ಪ್ರಮುಖ ಬಂದರುಗಳುಸಂಪಾದಿಸಿ

 
ಇಂಗ್ಲೆಂಡ್‌ನ ಡೆವೊನ್‌ನಲ್ಲಿನ ಕ್ಲೊವೆಲಿ ಗ್ರಾಮದಲ್ಲಿ ಸಣ್ಣ ಬಂದರು.

ವಿಶ್ವದ ದಟ್ಟಣೆಯ ಬಂದರು ತೀವ್ರ ಸ್ಪರ್ಧೆಯಿಂದ ಕೂಡಿದ ಹೆಸರಾಗಿದ್ದರೂ, ೨೦೦೬ರಲ್ಲಿ ಸರಕು ಸಾಗಣೆಯ ಮೊತ್ತದ ಆಧಾರದ ಮೇಲೆ ವಿಶ್ವದ ಅತೀ ದಟ್ಟಣೆಯ ಬಂದರು ಶಾಂಘಾಯ್ ಬಂದರು ಆಗಿದೆ.[೪]

ಕೆಳಗಿನವು ಅತೀ ದೊಡ್ಡ ನೈಸರ್ಗಿಕ ಬಂದರುಗಳು:

 
ಪೋರ್ಟ್ ಜಾಕ್ಸನ್, ಸಿಡ್ನಿ

ಇತರ ಪ್ರಮುಖ ಬಂದರುಗಳು:

ಇವನ್ನೂ ಗಮನಿಸಿ‌ಸಂಪಾದಿಸಿ

 • ಬಾಯಿಡ್‌ರ ಸ್ವಯಂಚಾಲಿತ ಉಬ್ಬರವಿಳಿತ ಸಂಕೇತದ ಉಪಕರಣ
 • ಹಡಗುಕಟ್ಟೆ
 • ಹಡಗುಕಟ್ಟೆ ಪ್ರದೇಶ
 • ಹಿಮ ಅಲೆತಡೆ
 • ಮರಿನಾ, ಮರಿನಾಗಳ ಪಟ್ಟಿ
 • ಪೋರ್ಟ್
 • ಲಂಗರುದಾಣ
 • ಬಂದರುಕಟ್ಟೆ
 • ಸೀಪೋರ್ಟ್, ಸೀಪೋರ್ಟ್‌ಗಳ ಪಟ್ಟಿ
 • ಬಂದರುಕಟ್ಟೆ
 • ಒಳನಾಡಿನ ಬಂದರು

ಟಿಪ್ಪಣಿಗಳುಸಂಪಾದಿಸಿ

 1. Hattendorf, John B. (2007), The Oxford encyclopedia of maritime history, Oxford University Press, p. 590, ISBN 9780195130751
 2. U.S. ಪೋಲಾರ್ ಪ್ರೋಗ್ರಾಮ್ಸ್ ನ್ಯಾಷನಲ್ ಸೈನ್ಸ್ ಫೌಂಡೇಶನ್ FY2000.
 3. ಪೋರ್ಟ್ ಸಿಟೀಸ್ -ಟೈಡ್ ಹಾರ್ಬರ್
 4. AAPA ವರ್ಲ್ಡ್ ಪೋರ್ಟ್ ರಾಂಕಿಂಗ್ಸ್ 2006
"https://kn.wikipedia.org/w/index.php?title=ಬಂದರು&oldid=795770" ಇಂದ ಪಡೆಯಲ್ಪಟ್ಟಿದೆ