ವಿಜಯವಾಡ

ಇದು ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಒಂದು ಐತಿಹಾಸಿಕ ಪಟ್ಟಣ

ವಿಜಯವಾಡ ಆಂಧ್ರಪ್ರದೇಶ ರಾಜ್ಯದಲ್ಲಿ ಜನಸಂಖ್ಯೆ ಅನುಸಾರ ಎರಡನೇ ದೊಡ್ಡ ನಗರ. ಇದು ಎನ್‌ಟಿಆರ್ ಜಿಲ್ಲೆ ಯಲ್ಲಿ, ಕೃಷ್ಣಾ ನದಿ ದಡದಲ್ಲಿ, ಪಶ್ಚಿಮ ಗಡಿಯಾಗಿ [ಇಂದ್ರಕೀಲಾದ್ರಿ ಬೆಟ್ಟ]], ಉತ್ತರಗಡಿಯಾಗಿ ಬುಡಮೇರು ನದಿ ಹೊಂದಿದೆ. ಇದು ಆಂಧ್ರಪ್ರದೇಶ ರಾಜ್ಯಕ್ಕೆ ಆರ್ಥಿಕ, ರಾಜಕೀಯ, ಸಾರಿಗೆ, ಸಾಂಸ್ಕೃತಿಕ ಕೇಂದ್ರವಾಗಿದೆ. ಮದರಾಸು-ಹೌರಾ, ಮದ್ರಾಸು-ನವದೆಹಲಿ ರೈಲು ಮಾರ್ಗಕ್ಕೆ ವಿಜಯವಾಡ ಸಂಗಮವಾಗಿದೆ. ವಿಜಯವಾಡಕ್ಕೆ ಈಗಿನ ಹೆಸರು, ಇಲ್ಲಿನ ದೇವತೆ ಕನಕದುರ್ಗ ಅಮ್ಮನ ಇನ್ನೊಂದು ಹೆಸರು ವಿಜಯ (ವಿಜಯವಾಟಿ) ದಿಂದ ಬಂದಿದೆ ಎನ್ನುತ್ತಾರೆ. ಬೇಸಿಗೆಯಲ್ಲಿ ವಿಪರೀತ ಕಾವೇರುವುದರಿಂದ ಕಟ್ಲಮಂಚಿ ರಾಮಲಿಂಗಾರೆಡ್ಡಿ ಯವರು ಇದು ಬೆಜವಾಡ ಅಲ್ಲ ಬೇಜುವಾಡ (ಬೇಗೆಯನಾಡು) ಎಂದಿದ್ದಾರಂತೆ.

ವಿಜಯವಾಡ
ವಿಜಯವಾಡ ನಗರದ ಪಕ್ಷಿನೋಟ
ವಿಜಯವಾಡ ನಗರದ ಪಕ್ಷಿನೋಟ
ಪಕ್ಷಿ ನೋಟ

ವಿಜಯವಾಡ
ರಾಜ್ಯ ಆಂಧ್ರ ಪ್ರದೇಶ
ನಿರ್ದೇಶಾಂಕಗಳು 16.516° N 80.616° E
ವಿಸ್ತಾರ
 - ಎತ್ತರ
119.8 km²
 - 11.88 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.

ಸ್ಥಳಪುರಾಣ

ಬದಲಾಯಿಸಿ

ಮಹಾಭಾರತದಲ್ಲಿ ಪಾಂಡವರು ವನವಾಸದಲ್ಲಿ ದಾರುಕಾ ಕಾಡಿಗೆ ಬಂದಾಗ ವೇದವ್ಯಾಸರ ಸಲಹೆಯ ಮೇರೆಗೆ ಶಿವನನ್ನು ಕುರಿತು ತಪಸ್ಸು ಮಾಡಿ, ಪಾಶುಪತಾಸ್ತ್ರವನ್ನು ಗಳಿಸಲು ಅರ್ಜುನನನ್ನು ಕೇಳಿಕೊಳ್ಳುತ್ತಾರೆ. ಇಂದ್ರಕೀಲಾದ್ರಿಯಲ್ಲಿ ಅವನು ಘೋರ ತಪಸ್ಸು ಮಾಡುವಾಗ ಶಿವನು ಅವನನ್ನು ಪರೀಕ್ಷಿಸಲು ಮಾಯಾಮೃಗವನ್ನು ಸೃಷ್ಟಿಸಿ ತಾನೊಮ್ಮೆ ಅರ್ಜುನನೊಮ್ಮೆ ಅದಕ್ಕೆ ಬಾಣ ಹೂಡುವಂತೆ ಮಾಡುತ್ತಾನೆ. ಆ ಬೇಟೆ ನನ್ನದು ತನ್ನದು ಎಂದು ಜಗಳ ಶುರುವಾಗಿ ದೊಡ್ಡದಾಗುತ್ತದೆ. ಕೊನೆಗೆ ಶಿವನು ತನಗೆ ಸಮಾನನಾಗಿ ಸೆಣಸಿದ ಅರ್ಜುನನ ಶೌರ್ಯವನ್ನು ಮೆಚ್ಚಿ ಪಾಶುಪತಾಸ್ತ್ರವನ್ನು ದಯಪಾಲಿಸುತ್ತಾನೆ. []

ಈಗಲೂ ವಿಜಯವಾಡದಲ್ಲಿ ಇಂದ್ರಕೀಲಾದ್ರಿ ಇದೆ. ೧೧ನೇ ಶತಮಾನದ ಮತ್ತು ೧೨ನೇ ಶತಮಾನದ ಒಂದೊಂದು ಶಾಸನದಲ್ಲಿ ಈ ಸ್ಥಳಪುರಾಣದ ಉಲ್ಲೇಖವಿದೆ. ಕವಿತ್ರಯರು ತಮ್ಮ ಆಂಧ್ರಮಹಾಭಾರತ ಪ್ರಸ್ತಾವನೆಯಲ್ಲಿ ಈ ಸಂಗತಿಯನ್ನು ಹೇಳಿಲ್ಲವಾದರೂ ಇತರ ಪುರಾಣಾಧಾರಗಳಲ್ಲೂ ಮೂಲ ದೊರೆತಿಲ್ಲ. ಹೀಗೆ ಯಾವುದೇ ಗ್ರಾಂಥಿಕ ಆಧಾರವಿಲ್ಲದೆ ಕೇವಲ ಎರಡು ಶಿಲಾಶಾಸನಗಳು ಹೇಳಿದ ಕತೆಯು ಇಂದು ಜನಜನಿತವಾಗಿದೆ.[]

ಹೆಸರು ಕುರಿತ ಕತೆಗಳು

ಬದಲಾಯಿಸಿ

ವಿಜಯವಾಡ ಅನ್ನುವ ಹೆಸರಿಗೆ ಹೀಗೆ ಹಿಂದಿನಿಂದಲೂ ಬೆಜವಾಡ ಅನ್ನುವ ಹೆಸರು ಇದೆ. ಇಲ್ಲಿ ದೊರೆತ ಶಾಸನಗಳಲ್ಲಿ ಪ್ರಾಚೀನವಾದ ಯುದ್ಧಮಲ್ಲುನ ಶಾಸನ, ಕೊಂಡವೀಡುವಿನ ಶಾಸನಗಳು ಈ ಹೆಸರನ್ನು ಬೆಜವಾಡ ಎಂದೇ ಹೇಳಿವೆ.[] ಈ ಎರಡೂ ಹೆಸರುಗಳ ಕುರಿತಂತೆ ಅನೇಕ ಕತೆಗಳೂ, ತರ್ಕಗಳೂ ನಡೆದಿವೆ.

ಅರ್ಜುನನು ವಿಜಯವಾಡದಲ್ಲಿನ ಇಂದ್ರಕೀಲಾದ್ರಿ ಮೇಲೆ ಶಿವನನ್ನು ಕುರಿತು ತಪಸ್ಸು ಮಾಡಿ, ಬೇಡನ ರೂಪದಲ್ಲಿದ್ದ ಶಿವನೊಂದಿಗೆ ಸೆಣಸಿದ ಕತೆಯಿದೆ. ಅದರಲ್ಲಿ ವಿಜಯ ಹೊಂದಿದ ಅರ್ಜುನನಿಂದಲೇ ವಿಜಯವಾಡ ಬಂದಿದೆ ಎನ್ನುವವರಿದ್ದಾರೆ. [] ಅರ್ಜುನನ ಪಾಶುಪತಾಸ್ತ್ರ ಸಂಪಾದನೆ ಇಲ್ಲೇ ನಡೆಯಿತು ಎನ್ನುವ ಒಂದು ಶಾಸನದಲ್ಲಿ ಈ ಪ್ರಾಂತ್ಯವನ್ನು ವೆಚ್ಚವಾಡ ಎನ್ನಲಾಗಿದೆ. ಜಲಮಾರ್ಗ ಮತ್ತು ನೆಲಮಾರ್ಗ ಎರಡರಲ್ಲೂ ಸಂಗಮಿಸುವ ವಿಜಯವಾಡ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಕೇಂದ್ರವಾಗಿದೆ. ಈ ಕಾರಣ ವೆಚ್ಚಗಳು ಅಧಿಕವಾಗಿರುವ ಈ ಪ್ರದೇಶವು ವೆಚ್ಚವಾಡ ಆಗಿದೆಯೆಂದು ಜಾನ್ಸನ್‌ ಚೋರಗುಡಿ ಅಭಿಪ್ರಾಯಿಸಿದ್ದಾರೆ. []

ಬೆಜವಾಡ ಅನ್ನುವ ಹೆಸರು ಬ್ಲೇಝ್‌ ವಾಡ ದಿಂದ ಬಂದಿದೆಯೆಂದು, ವಿಪರೀತ ಬಿಸಿಲಬೇಗೆಯ ಕಾರಣ ಬ್ರಿಟಿಷರು ಬ್ಲೇಝ್‌ ವಾಡ ಎಂದು ಕರೆದುದಾಗಿಯೂ ಕೆಲವರು ಹೇಳುತ್ತಾರೆ. ಆದರೆ ಇದು ಕಟ್ಟುಕತೆ ಅಷ್ಟೇ. ಬ್ರಿಟಿಷರು ಬರುವ ನೂರಾರು ವರ್ಷಗಳ ಮುನ್ನವೇ ಶಾಸನಗಳಲ್ಲಿ ಈ ಹೆಸರು ಉಲ್ಲೇಖವಾಗಿದೆ. ಶಿಕ್ಷಣತಜ್ಞ ರಾಜಕಾರಣಿ ಕಟ್ಲಮಂಚಿ ರಾಮಲಿಂಗಾರೆಡ್ಡಿ ಅವರು ಒಮ್ಮೆ ಹೇಳಿದ ಬ್ಲೇಝ್‌ ವಾಡ ಪ್ರಯೋಗವು ಜನರ ಬಾಯಲ್ಲಿ ಇಂತಹ ಕತೆಗಳನ್ನು ಕಟ್ಟಿಸಿದೆ ಎನ್ನಬಹುದು.

ಇತಿಹಾಸ

ಬದಲಾಯಿಸಿ

ಶಾಲಿವಾಹನ ಶಕ ೩-೭ನೇ ಶತಮಾನ

ಬದಲಾಯಿಸಿ

thumb|ಮೊಗಲ್ ರಾಜಪುರಂ ಗುಹೆಗಳು |alt=|left|250x250px

ವಿಜಯವಾಡ ವಿಷ್ಣುಕುಂಡಿನದ ರಾಜಧಾನಿಯಾಗಿತ್ತು. ಶಾಲಿವಾಹನ ಶಕ 565ರಲ್ಲಿ ವಿಷ್ಣುಕುಂಡಿನ ವಂಶದ ರಾಜ ಮಾಧವವರ್ಮ ವಿಜಯವಾಡವನ್ನು ಕೇಂದ್ರವಾಗಿರಿಸಿ ಪರಿಪಾಲಿಸಿದ. ಆತನ ಮಗ ನಗರದಲ್ಲಿ ರಥ ನಡೆಸುತ್ತಿರುವಾಗ ದಾರಿಬದಿಯಲ್ಲಿ ಹುಳಿಚಿಗುರು ಮಾರುತ್ತಿದ್ದ ಅಜ್ಜಿಯ ಪುಟ್ಟಹುಡುಗನ ಮೇಲೆ ರಥ ಏರಿಸಿದ್ದರಿಂದ ಆ ಬಾಲಕ ಸತ್ತುಹೋಗುತ್ತಾನೆ. ಮಹಾರಾಜನು ಮಗನ ಮೇಲಿನ ಮಮತೆಯನ್ನು ಬದಿಗಿರಿಸಿ ಅದೇ ರಥದ ಚಕ್ರಕ್ಕೆ ಮಗನನ್ನು ಬಲಿಗೊಡಬೇಕೆಂದು ಅಪ್ಪಣೆ ಮಾಡುತ್ತಾನೆ. ಮಲ್ಲೀಶ್ವರಾಲಯದಲ್ಲಿ ಹೊರಬಿದ್ದ ವಿಷ್ಣುವರ್ಧನನ ಶಾಸನದಲ್ಲಿ ಮತ್ತು ಕಲ್ಯಮಬೋಯ ಶಾಸನದಲ್ಲಿ ವಿಜಯನಗರ ಜಮೀನುದಾರರ ವಂಶಚರಿತ್ರೆ ಹಾಗೂ ಇನ್ನೂ ಕೆಲವು ಬರಹಗಳು ಈ ಕತೆಯನ್ನು ಹೇಳುತ್ತವೆ.[][]

ಅಕ್ಕಣ್ಣ, ಮಾದಣ್ಣ ಗುಹೆಗಳು, ಮೊಗಲ್‌ ರಾಜಪುರಂ ಗುಹೆಗಳು ಕ್ರಿಸ್ತಶಕ ೩, ೪ ನೇ ಶತಮಾನದವು. ಇವು ಬೌದ್ಧ ಆರಾಮಗಳು, ಮುಂದೆ ಶೈವರಿಗೆ ಆವಾಸಗಳಾದವು, ಹಾಗೆ ಶೈವ ಪ್ರತಿಮೆಗಳು ಅಲ್ಲಿ ಸ್ಥಾಪನೆಯಾದವು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇನ್ನು ಕೆಲವರು ಈ ವಾದವನ್ನು ಅಲ್ಲಗಳೆಯುತ್ತಾ, ಇವು ಹಿಂದೂ ಧಾರ್ಮಿಕ ತಾಣಗಳೇ ಎಂದು ವಾದಿಸುತ್ತಾರೆ. ವಿಜಯವಾಡವನ್ನು ಆಳಿದ ಶಾಲಂಕಾಯನರಾಗಲಿ, ಕೃಷ್ಣೆಗೆ ದಕ್ಷಿಣದಲ್ಲಿ ಆಳಿದ ಪಲ್ಲವರಾಗಲಿ ನಿರ್ಮಿಸಿರಬಹುದು ಎನ್ನುವ ವಾದವೂ ಇದೆ.[] ಶಾಲಿವಾಹನಶಕೆ ೭೩೯ರಲ್ಲಿ ಚೀನಾ ಯಾತ್ರಿಕ ಹ್ಯುಯೆನ್ ತ್ಸಾಂಗ್‌ ಬೆಜವಾಡವನ್ನು ಸಂದರ್ಶಿಸಿದ. ಈ ನಗರವು ತೇನಕಚಕ ರಾಜ್ಯದ ಒಂದು ಭಾಗ ಎಂದು ಅವನು ಬರೆದಿದ್ದಾನೆ. ಈ ತೇನಕಚಕ ಎಂದರೆ ಧಾನ್ಯಕಟಕದ ರೂಪಾಂತರ. ಹ್ಯುಯೆನ್‌ ತ್ಸಾಂಗ್‌ ಬೆಜವಾಡ, ಸೀತಾನಗರ, ಉಂಡವಲ್ಲಿ ಬೆಟ್ಟದ ಮೇಲಿನ ಗುಹೆಯಲ್ಲಿ ಅಂದರೆ ಬೌದ್ಧ ಬಿಕ್ಷುಗಳು ಇದ್ದಾರೆಂದೂ, ಸಾಯಂಕಾಲವಾದರೆ ಅಲ್ಲಿ ಬೆಳಗಿಸುವ ದೀಪಗಳ ಬೆಳಕಲ್ಲಿ ಬೆಜವಾಡ ಪ್ರಾಂತ್ಯವೆಲ್ಲ ಕಣ್ಣಿಗೆ ಹಬ್ಬವಾಗಿರುತ್ತದೆಂದೂ ಬರೆದಿದ್ದಾನೆ. ಇಂದ್ರಕೀಲಾದ್ರಿ ಬೆಟ್ಟದ ಮೇಲೆ ಬೌದ್ಧ ಬಿಕ್ಷಿಗಳು ನೆಲೆಸಲು ಬೆಟ್ಟವನ್ನು ಸಪಾಟಾಗಿಸಿ ಹಲವು ಚಾವಡಿಗಳನ್ನೂ ಸೂರುಗಳನ್ನೂ ಮಾಡಲಾಗಿದೆ ಎಂದೂ ಬರೆದಿದ್ದಾನೆ.[] ಇಲ್ಲಿ ಬೌದ್ಧ ತಾಂತ್ರಿಕರಿಂದ ಮಾಯಾಮಂತ್ರಗಳನ್ನು ಆತ ಕಲಿತುಕೊಂಡಿದ್ದಾನೆ.[] ನದೀತೀರದಲ್ಲಿ ಸಕಲ ರೋಗಗಳನ್ನೂ ನಿವಾರಿಸುವ ವನೌಷಧ ಬೆಟ್ಟ ಇದೆಯೆಂದೂ, ಅದನ್ನು ವೈದ್ಯರು ಬಳಸುತ್ತಾರೆಂದೂ, ಬೆಟ್ಟಸಾಲಿನಲ್ಲಿ ಸಂಚರಿಸುವ ಸಾಧುಗಳಿಗೆ ಚಿನ್ನ ತಯಾರಿಸುವ ರಸವಿದ್ಯೆ ತಿಳಿದಿದೆಯೆಂದೂ ಬರೆದಿದ್ದಾನೆ.[೧೦]

ಶಾಲಿವಾಹನಶಕೆ ೮-೧೦ ಶತಮಾನಗಳು

ಬದಲಾಯಿಸಿ

ವೆಂಗಿ ಚಾಲುಕ್ಯರ ಕಾಲದಲ್ಲಿ ವಿಜಯವಾಡವು ರಾಜಕೀಯವಾಗಿ ಪ್ರಾಮುಖ್ಯತೆ ಪಡೆದಿತ್ತು. ಇದೇ ವೇಳೆಯಲ್ಲಿ ವಿಜಯವಾಡದ ಮೇಲೆ ರಾಷ್ಟ್ರಕೂಟರು ಹಲವು ಸಲ ದಂಡೆತ್ತಿಬಂದರು. ನಗರವು ಯುದ್ಧಗಳಲ್ಲಿ ಬಹುವಾಗಿ ನಲುಗಿತ್ತು. ಹಲವು ಸಲ ಕೈಬದಲಾವಣೆಗೆ ಸಿಲುಕಿತ್ತು. ಶಾಲಿವಾಹನ ಶಕೆ ೯೨೭ರಲ್ಲಿ ವೆಂಗಿಯ ಚಾಲುಕ್ಯರಾಜ ಎರಡನೇ ಯುದ್ಧಮಲ್ಲನು ರಾಷ್ಟ್ರಕೂಟರೊಂದಿಗೆ ಒಪ್ಪಂದ ಮಾಡಿಕೊಂಡು ಅವರ ನೆರವಿನಿಂದ ವಿಜಯವಾಡವನ್ನು ಮತ್ತೆ ವಶಪಡಿಸಿಕೊಳ್ಳುತ್ತಾನೆ. ಆ ನಂತೆ ಚೋಳರಿಗೂ ಚಾಲುಕ್ಯರಿಗೂ ನಡುವೆ ಯುದ್ಧ ಸಂಭವಿಸಿ ವಿಜಯವಾಡವು ರಣರಂಗವಾಗುತ್ತದೆ. ಎಪ್ಪತ್ತು ವರ್ಷಗಳ ಕಾಲ ನಿರಂತರವಾಗಿ ನಡೆದ ಹೋರಾಟಗಳ ಕಾರಣ ವಿಜಯವಾಡವು ಅರಾಜಕವಾಗಿತ್ತು. ಪ್ರಜೆಗಳಿಗೆ ಭದ್ರತೆಯಿಲ್ಲದೆ ಜೀವನ ದುರ್ಭರವಾಗಿತ್ತು. ಶಾಲಿವಾಹನ ಶಕೆ ೯೯೯ರಲ್ಲಿ ಚೋಳಚಕ್ರವರ್ತಿ ರಾಜರಾಜಚೋಳನು ಚಾಲುಕ್ಯರೊಂದಿಗಿನ ಯುದ್ಧದಲ್ಲಿ ಜಯಿಸಿ, ವಿಜಯವಾಡವನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಾನೆ. ರಾಜರಾಜಚೋಳನು ತನ್ನ ಸಾಮಂತನಾಗಿ ಶಕ್ತಿವರ್ಮ-೧ ನನ್ನು ನೇಮಿಸಿಕೊಂಡ ತರುವಾಯ ಅಲ್ಲಿ ಶಾಂತಿಸ್ಥಾಪನೆಯಾಗುತ್ತದೆ. ಈ ಸೋಲಿನ ನಂತರ ವೆಂಗಿ ಚಾಲುಕ್ಯರು ತಮ್ಮ ರಾಜಧಾನಿಯನ್ನು ರಾಜಮಹೇಂದ್ರವರಂ ಗೆ ಬದಲಿಸುತ್ತಾರೆ.[]

ಶಾಲಿವಾಹನಶಕೆ ೧೧-೧೮ ಶತಮಾನಗಳು

ಬದಲಾಯಿಸಿ

೧೧ನೇ ಶತಮಾನದ ತರುವಾಯ ವಿಜಯವಾಡದ ರಾಜಕೀಯ ಸ್ಥಾನಮಾನ ಅಳಿಯಿತು. ಆದರೆ ವಾಣಿಜ್ಯ ಕೇಂದ್ರವಾಗಿ ಮಾತ್ರ ಅಭಿವೃದ್ಧಿ ಹೊಂದಿತು. ಪುರಾತತ್ವ ತಜ್ಞ ಸ್ಟೀವನ್‌ ಪ್ರಕಾರ ವಿಜಯವಾಡ ಪ್ರಾಂತದಲ್ಲಿ ಕ್ರಿಸ್ತಪೂರ್ವ ೧೧ನೇ ಶತಮಾನದ್ದೇ ೪೭ ಶಾಸನಗಳು ಸಿಕ್ಕಿವೆ. ಇವಲ್ಲದೆ ಸುತ್ತಮುತ್ತಲ ಪ್ರಾಂತ್ಯಗಳಲ್ಲಿ ನಡೆದ ಉತ್ಖನನದ ಪ್ರಕಾರ ಸಾವಿರ ವರ್ಷಗಳ ಹಿಂದೆಯೇ ಇಲ್ಲೊಂದು ಸುವ್ಯವಸ್ಥಿತ ನಗರವಿತ್ತು ಎಂದು ಚರಿತ್ರಕಾರರು ಅಭಿಪ್ರಾಯಪಡುತ್ತಾರೆ. ಮೊದಲಿನಿಂದಲೂ ಕೃಷ್ಣಾ ನದಿ ಮೂಲಕ ಸಮುದ್ರಮಾರ್ಗದಲ್ಲಿ ಸಾಗುವ ಜಲಮಾರ್ಗಕ್ಕೂ, ಕಳಿಂಗ (ಒಡಿಶಾ), ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ದಕ್ಷಿಣ ಪ್ರಾಂತ್ಯಗಳಿಂದ ಬರುವ ನೆಲಮಾರ್ಗಗಳಿಗೂ ಕೂಡುಸ್ಥಳವಾಗಿತ್ತು. ಈ ಕಾರಣದಿಂದ ಬೆಜವಾಡವು ಮುಖ್ಯವಾದ ವ್ಯಾಪಾರ ವಹಿವಾಟು ಕೇಂದ್ರವಾಗಿತ್ತು.[] ಆಂದ್ರಪ್ರದೇಶದಲ್ಲಿ ಪ್ರಮುಖವಾದ ನಗರಗಳು, ರೇವುಪಟ್ಟಣಗಳನ್ನು ಸಂಪರ್ಕಿಸುವ ಹೆದ್ದಾರಿಗಳನ್ನು ಒಂದುಗೂಡಿಸುವ ಮುಖ್ಯ ವಾಣಿಜ್ಯಕೇಂದ್ರಗಳಲ್ಲಿ ವಿಜಯವಾಡವೂ ಒಂದು. [೧೧]

ವ್ಯಾಪಾರೋದ್ಯಮದಲ್ಲಿ ವಿಜಯವಾಡಕ್ಕೆ ಎಷ್ಟು ಪ್ರಖ್ಯಾತಿ ಇದ್ದರೂ ೧೧ನೇ ಶತಮಾನದಿಂದಲೂ ಯಾವುದೇ ಸಾಮ್ರಾಜ್ಯಕ್ಕೆ ರಾಜಧಾನಿಯಾಗಿರಲಿಲ್ಲ. ಕಾಕತೀಯರು, ರೆಡ್ಡರಾಜರು, ಗಜಪತಿ ಮುಂತಾದ ಬಲಶಾಲಿ ರಾಜ್ಯಗಳು, ಸಾಮ್ರಾಜ್ಯಗಳು ವಿಜಯವಾಡವನ್ನು ಒಂದು ವ್ಯಾಪಾರಕೇಂದ್ರವಾಗಿ ಮಾತ್ರವೇ ಲೆಕ್ಕಿಸಿದರು. [] ಈ ನಗರವು ಹಲವು ಸಾಮಂತರ ಪರಿಪಾಲನೆಯಲ್ಲಿತ್ತು. ೧೫ನೇ ಶತಮಾನದಲ್ಲಿ ಆಂಧ್ರಕ್ಷತ್ರಿಯರು ಎನಿಸಿಕೊಂಡ ವಶಿಷ್ಟಗೋತ್ರದವರಾದ ಪೂಸಪಾಟಿ ರಾಜವಂಶದವರು ವಿಜಯವಾಡ ನಗರವನ್ನು ಪಾಲಿಸಿದರು. ಕಡಪಾ ಜಿಲ್ಲೆ, ಪುಲಿವೆಂಡ್ಲ ತಾಲೂಕಿನ ಪುಲಿವೆಂಡ್ಲ ಗ್ರಾಮದ ರಂಗನಾಥಸ್ವಾಮಿ ಗುಡಿಯ ಬಾಗಿಲ ಬಳಿಯಿರುವ ಕಲ್ಕೊರೆತದ ಶಾಸನದಲ್ಲಿ ಕೃಷ್ಣದೇವರಾಯನ ಆಳ್ವಿಕೆಯ ಕಾಲ ಕ್ರಿಸ್ತಶಕ 1509ರಲ್ಲಿ ಅಂದರೆ ಶಕವರ್ಷ 1431, ಶುಕ್ಲ ಕಾರ್ತಿಕ ಶುದ್ಧ ೧೨ ಅಂದರೆ ಕ್ರಿಸ್ತಶಕ ೧೫೦೯ ಅಕ್ಟೋಬರ್‌ ೨೪ ಬುಧವಾರ, ದೇವರಾದ ರಂಗರಾಜುಸ್ವಾಮಿಗೆ ಸೂರ್ಯವಂಶ ವಶಿಷ್ಠಗೋತ್ರದ ಬೆಜವಾಡ ಮಾಧವ ವರ್ಮನ ಮರಿಮಗ, ವಲ್ಲಭರಾಯನ ಮೊಮ್ಮಗ, ತಮ್ಮರಾಜುವಿನ ಮಗನಾದ ಬಸವರಾಜನ ತಮ್ಮ ನರಸಯ್ಯದೇವ ಮಹಾರಾಜನು ಕುಂದಲಕುಂಡು ಗ್ರಾಮವನ್ನು ದಾನ ಕೊಟ್ಟ ವಿವರವಿದೆ. ದಾನಕೊಟ್ಟ ಗ್ರಾಮವು ಉದಯಗಿರಿ ರಾಜ್ಯದ ಗಂಧಿಕೋಟ ಸೀಮೆಯಲ್ಲಿನ ಮುಲ್ಕಿನಾಡು ಉಪವಿಭಾಗಕ್ಕೆ ಸೇರಿದ ಪುಲಿವಿಂಡಲಸ್ಥಲದಲ್ಲಿತ್ತು ಎನ್ನಲಾಗಿದೆ.[೧೨]

ಗಜಪತಿಗಳ ಮೇಲೆ ಕರಾವಳಿ ಪ್ರಾಂತ್ಯದ ಮೂಲಕ ದಂಡಯಾತ್ರೆಗೆ ತೆರಳಿದಾಗ ಕೃಷ್ಣದೇವರಾಯನು ವಿಜಯವಾಡದಲ್ಲಿ ತಂಗಿದ್ದ. ಸಮೀಪದಲ್ಲಿನ ಶ್ರೀಕಾಕುಳ ಪುಣ್ಯಕ್ಷೇತ್ರಕ್ಕೆ ಹೋಗಿ ಶ್ರೀಕಾಕುಳ ಆಂಧ್ರಮಹಾವಿಷ್ಣುವನ್ನು ಸಂದರ್ಶಿಸಿ‌, ಆಂಧ್ರವಿಷ್ಣುವಿನ ಅಣತಿಯ ಮೇರೆಗೆ ಆಮುಕ್ತಮಾಲ್ಯದ ಕಾವ್ಯವನ್ನು ಶುರುಮಾಡಿದೆನೆಂದು ಬರೆದುಕೊಂಡಿದ್ದಾನೆ.[೧೩]

ಶಾಲಿವಾಹನಶಕೆ 1800 - 2000

ಬದಲಾಯಿಸಿ

ವಿಜಯವಾಡವು ೧೬ನೇ ಶತಮಾನದ ತರುವಾಯ ಪೂರ್ಣವಾಗಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ಎರಡು ಶತಮಾನದವರೆಗೆ ತನ್ನ ಗತವೈಭವವನ್ನು ಕಳೆದುಕೊಂಡು ಕೆಲವೇ ಕೆಲವು ಪ್ರಾಂತ್ಯಗಳಿಗೆ ಮಿತಿಗೊಳಿಸಿಕೊಂಡಿತು. ಈಸ್ಟ್‌ ಇಂಡಿಯಾ ಕಂಪೆನಿ ತೆಕ್ಕೆಯಲ್ಲಿದ್ದಾಗ ೧೮೩೨ರಲ್ಲಿ ಸಂಭವಿಸಿದ ಘೋರ ಬರಗಾಲದ ನಂತರ ಆರ್ಥರ್‌ ಕಾಟನ್‌ ೧೮೩೯ರಲ್ಲಿ ಕೃಷ್ಣಾ ನದಿಗೆ ಅಣೆಕಟ್ಟು ನಿರ್ಮಿಸಿ ನೀರಾವರಿ ಬೇಸಾಯಕ್ಕೆ ಒತ್ತುಕೊಡುವ ಹಮ್ಮುಗೆ ಹಾಕಿಕೊಂಡನು. ಈ ಹಮ್ಮುಗೆಯು ಲಂಡನ್ನಿನಲ್ಲಿದ್ದ ಕಂಪೆನಿ ಕೋರ್ಟ್‌ ಆಫ್‌ ಡೈರೆಕ್ಟರ್ಸ್‌ ಅನುಮೋದನೆಗೊಳಗಾಗಿ ಸ್ಥಳಪರೀಕ್ಷೆ ನಡೆಸಲು ಆದೇಶ ಪಡೆಯಿತು. ಕಾಟನ್‌ ಅಂದು ಗಣಿಕೊಂಡ ಪ್ರದೇಶದ ಮುಕ್ತ್ಯಾಲಇಬ್ರಾಹಿಂಪಟ್ನಂವನ್ನೂ ಪರಿಶೀಲಿಸಿ ಅವನ್ನು ಬಿಟ್ಟು, ವಿಜಯವಾಡವನ್ನೇ ಬ್ಯಾರೇಜಿಗೆ ಸೂಕ್ತ ತಾಣ ಎಂದು ಆರಿಸಿಕೊಂಡನು. ೧೯ನೇ ಶತಮಾನದಲ್ಲಿ ನಡೆದ ಈ ವಿದ್ಯಮಾನವು ವಿಜಯವಾಡಕ್ಕೆ ಮತ್ತೊಮ್ಮೆ ಪ್ರಾಮುಖ್ಯತೆ ತಂದುಕೊಟ್ಟಿತು.[೧೪]

೧೯೪೦ರವರೆಗೂ ವಿಜಯವಾಡದ ಒನ್‌ ಟೌನ್‌ ಪ್ರದೇಶವೆಲ್ಲ ಜನವಸತಿಯಿಲ್ಲದೆ ಮರಗಿಡ ತೊರೆ ಬೆಟ್ಟಗುಡ್ಡಗಳಿಂದ ತುಂಬಿತ್ತು. ೧೯೪೯ರ ತರುವಾಯ ಒನ್‌ ಟೌನ್‌ ಜನಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಯಿತು. 1947ರ ನಂತರ ತೆಲಂಗಾಣದಲ್ಲಿ ನಡೆಯುತ್ತಿದ್ದ ಸಶಸ್ತ್ರ ಹೋರಾಟ ಹಾಗೂ ರಜಾಕಾರರ ದೌರ್ಜನ್ಯದ ಹಿನ್ನೆಲೆಯಲ್ಲಿ ತೆಲಂಗಾಣ ಪ್ರದೇಶದಿಂದ ಹಲವಾರು ಮಂದಿ ವಲಸೆ ಬಂದು ವಿಜಯವಾಡದಲ್ಲಿ ನೆಲೆಸಿದರು. ಆ ಹಂತದಲ್ಲಿ ಕಮ್ಯುನಿಸ್ಟ್ ನಾಯಕರ ಪ್ರಭಾವದಿಂದ ಬೆಟ್ಟಗಳನ್ನು ಸವರಿ, ಕಾಡುಗಳನ್ನು ಕಡಿದು ಮನೆಗಳನ್ನು ಕಟ್ಟಿಕೊಳ್ಳಲಾಯಿತು.[೧೫]

೧೯೫೩ರಲ್ಲಿ ಮದ್ರಾಸಿನಿಂದ ಆಂಧ್ರಪ್ರದೇಶ ವನ್ನು ಬೇರ್ಪಡಿಸಿದಾಗ ತಾತ್ಕಾಲಿಕವಾಗಿ ವಿಜಯವಾಡವನ್ನು ರಾಜಧಾನಿಯಾಗಿ ಮಾಡಬೇಕೆಂಬ ಪ್ರತಿಪಾದನೆ ಮೂಡಿಬಂತು. ಇಲ್ಲಿ ರಾಜಕೀಯ ಪ್ರಾಬಲ್ಯ ಹೊಂದಿರುವ ಕಮ್ಯುನಿಷ್ಟರು ವಿಜಯವಾಡವಾಗಲೀ, ಗುಂಟೂರು ಆಗಲೀ ರಾಜಧಾನಿ ಮಾಡಬೇಕೆಂದು ಒತ್ತಾಯ ಮಾಡಿದರಾದರೂ ಒಂದೇ ಒಂದು ಓಟಿನಿಂದ ಆ ಒತ್ತಾಯ ಬಿದ್ದುಹೋಯಿತು. [೧೬] ಆಂಧ್ರ ರಾಜ್ಯಕ್ಕೆ ತಾತ್ಕಾಲಿಕ ರಾಜಧಾನಿಯಾಗಿ ಕರ್ನೂಲು ಮೂರುವರ್ಷ, ಆಮೇಲೆ ೧೯೫೬ರಿಂದ ಓಕ್ಕೂಟವಾದ ಆಂಧ್ರಪ್ರದೇಶದ ರಾಜಧಾನಿಯಾಗಿ ಹೈದರಾಬಾದ್ ನೆಲೆಗೊಂಡಿದೆ.‌ ೧೯, ೨೦ನೇ ಶತಮಾನಗಳಲ್ಲಿ ನೂರುವರ್ಷಕಾಲ ಕೃಷ್ಣಾ ಜಿಲ್ಲೆ ಕೇಂದ್ರವಾಗಿ ಮಚಿಲಿಪಟ್ನಂ ಮುಖ್ಯರೇವು ಪಟ್ಟಣವಾಗಿತ್ತೇ ಹೊರತು ವಿಜಯವಾಡವಲ್ಲ. ಹೀಗೆ ಎಂದೂ ರಾಜಧಾನಿ ಅಥವಾ ಜಿಲ್ಲಾಕೇಂದ್ರವಾಗಿರದ ವಿಜಯವಾಡವು ವ್ಯಾಪಾರ, ಸಂಸ್ಕೃತಿ, ರಾಜಕೀಯ ಮತ್ತು ಮಾಧ್ಯಮ ಕೇಂದ್ರವಾಗಿ ಬೆಳೆಯಿತು.

೨೧ನೇ ಶತಮಾನ

ಬದಲಾಯಿಸಿ

೨೦೦೦ದ ಹೊತ್ತಿಗೆ ಕರಾವಳಿಯು ಹಲವು ರಂಗಗಳಿಗೆ ಮುಖ್ಯ ತಾಣವಾಗಿತ್ತು. ೨೦೧೪ರಲ್ಲಿ ತೆಲಂಗಾಣವು ಪ್ರತ್ಯೇಕವಾಗಿದ್ದರಿಂದ ಕರಾವಳಿ-ರಾಯಲಸೀಮೆಯ ಆಂಧ್ರಪ್ರದೇಶ ಕಡೆಯಲ್ಪಟ್ಟು ಗುಂಟೂರಿಗೆ ಸಮೀಪದ ಅಮರಾವತಿ ರಾಜಧಾನಿಯಾಗಿದೆ.

ಭೂಪ್ರದೇಶ

ಬದಲಾಯಿಸಿ
ವಿಜಯವಾಡ ನಗರದ ನೋಟ
ಚಿತ್ರ:ವಿಜಯವಾಡ ಪಟ್ಟಣ IMG20200111145102-01.jpg
ವಿಜಯವಾಡ ಪಟ್ಟಣಂ

ಭೌಗೋಳಿಕವಾಗಿ ವಿಜಯವಾಡ ನಗರವು ಕೃಷ್ಣಾನದಿ ತಟದಲ್ಲಿ, ಚಿಕ್ಕ ಚಿಕ್ಕ ಬೆಟ್ಟಗಳ ನಡುವೆ ಹರಡಿಕೊಂಡಿದೆ. ಈ ಬೆಟ್ಟಗಳು ಪೂರ್ವಘಟ್ಟಗಳ ಒಂದು ಭಾಗ. ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಲಾದ ಪ್ರಕಾಶಂ ಬ್ಯಾರೇಜಿನಿಂದ ಏಲೂರು ಕಾಲುವೆ, ಬಂದರು ಕಾಲುವೆ, ರೈವಿಸ್‌ ಕಾಲುವೆಗಳು ನಗರದ ನಡುವೆ ಹರಿಯುತ್ತವೆ. ನಗರದ ಮತ್ತೊಂದು ಕಡೆ ಹೊಳೆ ಇದೆ. ಪ್ರಕಾಶಂ ಬ್ಯಾರೇಜಿನಿಂದ ಉಂಟಾದ ನೀರಾಸರೆಯ ದಕ್ಷಿಣದಲ್ಲಿ ಬಕಿಂಗ್‌ ಹ್ಯಾಂ ಕಾಲುವೆ ಶುರುವಾಗುತ್ತದೆ. ನಗರದಲ್ಲಿಯೂ ಸುತ್ತಮುತ್ತಲಲ್ಲಿಯೂ ನೆಲವು ತುಂಬಾ ಸಾರವತ್ತಾಗಿದೆ.

ನಗರದಲ್ಲಿ ಬಿಸಿಲಬೇಗೆ ಬಲು ಹೆಚ್ಚು. ಬೇಸಿಗೆಯಲ್ಲಿ ಶಾಖವು ೨೨° - ೪೯.೭° ಸೆಂಟಿಗ್ರೇಡ್‌ ನಡುವೆ ಇರುತ್ತದೆ. ಚಳಿಗಾಲದಲ್ಲಿ ಈದು ೧೫°- ೩೦° ನಡುವೆ ಇರುತ್ತದೆ. ಈ ಪ್ರದೇಶದಲ್ಲಿ ಮಳೆಯು ನೈಋತ್ಯ, ಈಶಾನ್ಯ ಮಾರುತಗಳಿಂದ ಒದಗುತ್ತದೆ.

ಕೊಂಡಪಲ್ಲಿ ಕಾಡು

ಬದಲಾಯಿಸಿ

ವಿಜಯವಾಡ ನಗರದ ಪಡುವಣ ದಿಕ್ಕಿನಲ್ಲಿ ೧೧ ಕಿಲೊಮೀಟರು ದೂರದಲ್ಲಿ ಕೊಂಡಪಲ್ಲಿ ಕಾಪುಗಾಡು ೧೨೧.೫ ಚದರ ಕಿಲೊಮೀಟರು (ಸುಮಾರು ೩೦,೦೦೦ ಎಕರೆ) ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಈ ಅರಣ್ಯವು ವಿಜಯವಾಡ ನಗರಕ್ಕೆ ಜೀವಶ್ವಾಸ ಇದ್ದಂತೆ. ಈ ಕಾಡಿನಲ್ಲಿ ಚಿರತೆ, ಕಾಡುನಾಯಿ, ನರಿ, ಕಾಡುಹಂದಿ, ತೋಳ ಮುಂತಾದವು ಇವೆ.[೧೭]

ಜನಗಣತಿ ಅಂಕಿಅಂಶ

ಬದಲಾಯಿಸಿ
Historical population
YearPop.±%
1871೮,೨೦೬—    
1881೯,೩೬೬+14.1%
1891೨೦,೨೨೪+115.9%
1901೨೪,೨೨೪+19.8%
1911೩೨,೮೬೭+35.7%
1921೪೪,೧೫೯+34.4%
1931೬೦,೪೨೭+36.8%
1941೮೬,೧೮೪+42.6%
1951೧,೬೧,೧೯೮+87.0%
1961೨,೩೪,೩೬೦+45.4%
1971೩,೪೪,೬೦೭+47.0%
1981೫,೪೩,೦೦೮+57.6%
1991೮,೪೫,೭೫೬+55.8%
2001೧೦,೩೯,೫೧೮+22.9%
2011೧೪,೯೧,೨೦೨+43.5%
೧೮೭೧ರಿಂದ ವಿಜಯವಾಡ ನಗರ ಪರಿಧಿಯ ಜನಸಂಖ್ಯೆ ವಿವರಗಳು ಈ ರೀತಿ ಇವೆ. Sources: Rao, Kondapalli Ranga; 1. Rao, M. S. A. (1984). Cities and Slums: A study of a Squatters' Settlement in the City of Vijayawada. Concept Publishing Company. p. 12.{{cite book}}: CS1 maint: numeric names: authors list (link) 2. Provisional Population Totals, Census of India 2011 City Name:VIJAYAWADA

ಜನಸಂಖ್ಯೆಯ ಲೆಕ್ಕದಲ್ಲಿ ವಿಜಯವಾಡವು ಆಂಧ್ರಪ್ರದೇಶದ ಎರಡನೇ ದೊಡ್ಡ ನಗರ. ಪ್ರತಿ ಕಿಲೊಮೀಟರು ವಿಸ್ತೀರ್ಣದಲ್ಲಿ ೩೧,೨೦೦ ಜನಸಾಂದ್ರತೆ ಅಂದರೆ ಜಗತ್ತಿನ ಅತಿ ಹೆಚ್ಚು ಜನಸಾಂದ್ರತೆಯ ನಗರಗಳಲ್ಲಿ ಮೂರನೆಯದು.[೧೮] ೨೦೧೧ರ ಜನಗಣತಿಯ ಪ್ರಕಾರ ವಿಜಯವಾಡದ ಜನಸಂಖ್ಯೆ ೧,೦೨೧,೮೦೬. ಇದರಲ್ಲಿ ಗಂಡಸರು ೫೨೪,೯೧೮, ಹೆಂಗಸರು ೫೨೩,೩೨೨ ಅಂದರೆ ೧೦೦೦ ಪುರುಷರಿಗೆ ೯೪೦ ಸ್ತ್ರೀಯರು.[೧೯][೨೦] ಸಾಕ್ಷರತೆ ೮೨.೫೯% (ಗಂಡಸರು ೮೬.೨೫%, ಹೆಂಗಸರು ೭೮.೯೪%) ಅಂದರೆ ೭೮೯,೦೩೮ ಸಾಕ್ಷರರು, ಅಂದರೆ ದೇಶದ ಒಟ್ಟಾರೆ ೭೩% ಕ್ಕಿಂತ ಹೆಚ್ಚು.[೧೯][೨೧]

ಧರ್ಮ, ಭಾಷೆ

ಬದಲಾಯಿಸಿ
ವಿಜಯವಾಡದಲ್ಲಿ ಧರ್ಮ (2011)
ಹಿಂದೂ
  
85.16%
ಮುಸ್ಲಿಂ
  
9.12%
ಕ್ರೈಸ್ತ
  
3.64%
ಇತರೆ
  
1.59%

ನಗರದಲ್ಲಿ ಬಳಸುವ ಮುಖ್ಯ ಭಾಷೆ ತೆಲುಗು.[೨೨]

2011 ಜನಗಣತಿ ಪ್ರಕಾರ ನಗರ ಮತ್ತು ಹೊರವಲಯ ಸೇರಿ ಒಟ್ಟು ಜನಸಂಖ್ಯೆ ೧೧,೪೩,೨೩೨ ಇದ್ದರೂ, ತೆಲುಗು ಮಾತನಾಡುವವರು ೧೦,೨೨,೩೭೬, ಉರ್ದು ಮಾತನಾಡುವವರು ೯೦,೮೭೬. ಅಲ್ಪಸ್ವಲ್ಪ ಹಿಂದೀ, ತಮಿಳು, ಕನ್ನಡ, ಒಡಿಯಾ, ಗುಜರಾತಿ, ಮರಾಠಿ ಮಾತನಾಡುವವರೂ ಇದ್ದಾರೆ.[೨೩].

ಅದೇ ಜನಗಣತಿ ಪ್ರಕಾರ ಹಿಂದೂಗಳು ೯,೭೩,೬೧೨ (85.16%), ಮುಸ್ಲಿಂ ೧,೦೪,೨೦೬ (9.12%), ಕ್ರೈಸ್ತರು೪೧,೫೫೭ (3.64%), ಜೈನರು ೫,೭೨೨ (0.50%), ಮತ ವಿವರ ಇಲ್ಲದವರು ೧೮,೧೩೫ (1.59%).[೨೪]

ಹಣಕಾಸು

ಬದಲಾಯಿಸಿ

ವಿಜಯವಾಡವು ಮುಖ್ಯ ಭೂಮಿಕೆಯಲ್ಲಿದ್ದು ಹಲವು ತರದ ವ್ಯಾಪಾರ ವಹಿವಾಟಿಗೆ ಕೇಂದ್ರಸ್ಥಾನವಾಗಿದೆ. ನೀರಾವರಿ ಕಾರಣದಿಂದ ಬೇಸಾಯಕ್ಕೆ ಒಗ್ಗಿಕೊಂಡ ಕರಾವಳಿ ಜಿಲ್ಲೆಗಳ ಫಸಲುಗಳಿಗೆ ವಿಜಯವಾಡವು ಮಾರುಕಟ್ಟೆಯಾಗಿದೆ.

ಕಬ್ಬು, ಭತ್ತ, ಮಾವು ಮುಂತಾದ ಫಸಲಿಗೆ ಇದು ಬಲುದೊಡ್ಡ ವಾಣಿಜ್ಯಕೇಂದ್ರ. ವರ್ತಕರು, ಸಾರಿಗೆ, ವಿದ್ಯೆ, ವೈದ್ಯ ಮುಂತಾದ ಸೌಕರ್ಯಗಳು ನಗರ ವ್ಯಾಪಾರಕ್ಕೆ ಅತ್ಯಗತ್ಯ. ಅಲ್ಲದೆ ಮೋಟಾರುವಾಹನ ಬಿಡಿಭಾಗಗಳು (ಆಟೋನಗರ್)‌, ಕಬ್ಬಿಣಸಾಮಗ್ರಿ, ಮನೆಕಟ್ಟೋಣ ಸಾಮಗ್ರಿ, ಬಟ್ಟೆತಯಾರಿ ಹಾಗೂ ಹಲವಾರು ಸಣ್ಣಪುಟ್ಟ ಉದ್ಯಮಗಳು ಇಲ್ಲಿವೆ. ಹೆಚ್ಚಿನ ವ್ಯಾಪಾರ ವಹಿವಾಟು ನಡೆಯೋದು ಹಳೆಯ ನಗರಭಾಗದ (ಒನ್‌ ಟೌನ್)‌ ಕಾಳೇಶ್ವರರಾವ್‌ ಮಾರ್ಕೆಟ್ನಲ್ಲಿ. ಗವರ್ನರ್‌ ಪೇಟ, ಬೆಸೆಂಟ್‌ ರೋಡ್‌ ನಲ್ಲಿ ಜವಳಿ, ಎಲೆಕ್ಟ್ರಾನಿಕ್‌ ಸಾಧನಗಳು, ಇತರ ಗೃಹೋಪಯೋಗಿ ವಸ್ತುಗಳು ಬಿಕರಿಯಾಗುತ್ತವೆ. ಲಬ್ಬಿಪೇಟ, ಎಂಜಿ ರಸ್ತೆಯಲ್ಲಿ ಹಲವು ದೊಡ್ಡ ದೊಡ್ಡ ಶಾಪಿಂಗ್‌ ಕಾಂಪ್ಲೆಕ್ಸುಗಳಿವೆ.

ತೆಲುಗು ಸಿನಿಮಾ ತಯಾರಿಕೆಯು ಮೊದಲೆಲ್ಲ ಮದ್ರಾಸಿನಲ್ಲಿ, ಆಮೇಲೆ ಹೈದರಾಬಾದ್ನಲ್ಲಿ ಕೇಂದ್ರೀಕೃತವಾಗಿದ್ದರೂ ಮುಂಚಿನಿಂದ ಅವುಗಳ ವಿತರಣೆ ವಿಜಯವಾಡದಿಂದಲೇ ಆಗುತ್ತಿತ್ತು. ಎರಡು ದಶಕಗಳ ಕಾಲ ಬಿಡುವೇ ಇಲ್ಲದಂತೆ ತೆಲುಗು ಸಿನಿಮಾ ವಿತರಣೆ ಜರುಗಿತು. ನವಯುಗ ಪಿಕ್ಚರ್ಸ್‌, ಪೂರ್ಣಾ ಪಿಕ್ಚರ್ಸ್‌, ಅನ್ನಪೂರ್ಣಾ ಫಿಲಮ್ಸ್‌, ಲಕ್ಷ್ಮೀ ಫಿಲಮ್ಸ್‌, ಲಕ್ಷ್ಮೀ ಚಿತ್ರ, ರಾಜಶ್ರೀ ವಿಜಯಾ ಮುಂತಾದ ವಿತರಣ ಸಂಸ್ಥೆಗಳು ಇಲ್ಲಿ ನೆಲೆಗೊಂಡಿವೆ.

ವಿಜಯವಾಡ ನಗರ ತೆಲುಗು ಮುದ್ರಣ, ಪ್ರಕಾಶನಕ್ಕೂ ಮುಖ್ಯ ವೇದಿಕೆ. ಆಂಧ್ರ ಕರಾವಳಿ ಪ್ರದೇಶಕ್ಕೆ (ಮುಖ್ಯವಾಗಿ ನಾಲ್ಕು ಜಿಲ್ಲೆಗಳಿಗೆ) ದೊಡ್ಡ ಮಟ್ಟದ ವ್ಯಾಪಾರ ವಹಿವಾಟು ವಿಜಯವಾಡದಿಂದಲೇ ನಡೆಯುತ್ತದೆ. ಬಟ್ಟೆ, ಕಬ್ಬಿಣ ಸಾಮಗ್ರಿ, ದಿನಸಿ, ಔಷಧಿ, ರಸಗೊಬ್ಬರ, ಮುಂತಾದವು ಇಲ್ಲಿಂದಲೇ ಪೂರೈಕೆಯಾಗುತ್ತವೆ.

ಪರಿಪಾಲನೆ

ಬದಲಾಯಿಸಿ
 
ವಿಜಯವಾಡ ನಗರಪಾಲಿಕೆಯು ೫೦ ವರ್ಷ ಪೂರೈಸಿದ ಸಂದರ್ಭದಲ್ಲಿ ಕೆಸಿಪಿ ಯವರ ಸ್ಮಾರಕ, ತುಮ್ಮಲಪಲ್ಲಿ ಕಲಾಕ್ಷೇತ್ರದ ಬಳಿ ಬಸ್‌ ನಿಲ್ದಾಣ ಮತ್ತು ರೈಲುನಿಲ್ದಾಣಗಳ ನಡುವೆ

ಸ್ಥಳೀಯಸಂಸ್ಥೆ

ಬದಲಾಯಿಸಿ

ವಿಜಯವಾಡ ನಗರದ ಪೌರರ ಪರಿಪಾಲನೆ ವಿಜಯವಾಡ ನಗರ ಪಾಲಕ ಸಂಸ್ಥೆಯದು. ಇಂಡಿಯಾದಲ್ಲೇ ಐಎಸ್‌ಒ ೯೦೦೧ ಪ್ರಮಾಣಿತ ಸ್ಥಳೀಯ ಸಂಸ್ಥೆಗಳಲ್ಲಿ ಇದೇ ಮೊದಲನೆಯದು.[೨೫] ೧೮೮೮ ಏಪ್ರಿಲ್‌ ೧ರಂದು ಪುರಸಭೆ ರಚಿತವಾಗಿ, ೧೯೬೦ರಲ್ಲಿ ಸೆಲೆಕ್ಷನ್‌ ಗ್ರೇಡ್‌ ಮುನಿಸಿಪಾಲಿಟಿ ದರ್ಜೆಗೇರಿತು. ೧೯೮೧ರಲ್ಲಿ ಅದು ನಗರಪಾಲಿಕೆಯಾಯಿತು. ೨೦೧೨ರ ವೇಳೆಗೆ ನಗರಪಾಲಿಕೆಯು ೬೧.೮ ಚದರ ಕಿಲೊಮೀಟರು ವ್ಯಾಪ್ತಿಗೆ ವಿಸ್ತರಿಸಿದೆ.[೨೬] ೨೦೧೭ರಲ್ಲಿ ಆಂಧ್ರಪ್ರದೇಶ ಸರ್ಕಾರವು ವಿಜಯವಾಡ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಸೇರಿಸಿ ಗ್ರೇಟರ್‌ ವಿಜಯವಾಡ (ಮೆಟ್ರೊ) ಎಂದು ಘೋಷಿಸಿತು.[೨೭] ೨೦೧೭ರಲ್ಲಿ ಅದರ ಪರಿಧಿ ೧೬೦ ಚದರ ಕಿಲೊಮೀಟರುಗಳಿಗೆ ವಿಸ್ತರಿಸಿತು.[೨೮]

ಮೆಟ್ರೊ ನಗರದಲ್ಲಿ ವಿಜಯವಾಡ ನಗರಪಾಲಿಕೆಗೆ ಸೇರಿದ ಅಂಬಾಪುರಂ, ಬುದ್ದವರಂ, ಗೋನೇಟಿಕೂರು, ಎನಿಕೇಪಾಡು, ಗಂಗೂರು, ಗನ್ನವರಂ, ಗೊಲ್ಲಪೂಡಿ ಗ್ರಾಮಗಳು, ಮೆಟ್ರೊಪಾಲಿಟನ್‌ ಪ್ರದೇಶದಲ್ಲಿ ಗೂಡಪಲ್ಲಿ, ಜಕ್ಕಂಪೂಡಿ, |ಕಾನೂರು, ಕಿಸರಪಲ್ಲಿ, ನಿಡಮಾನೂರು, ನುನ್ನ, ಪಾತಪಾಡು, ಪೆನಮಲೂರು, ಫಿರ್ಯಾದೀನೈನವರಂ, ಪೋರಂಕಿ, ಪ್ರಸಾದಂಪಾಟು, ರಾಮವರಪ್ಪಾಡು, ತಾಡಿಗಡಪ, ಯನಮಲಕುದುರು ಇವೆ.[೨೯]

ವಿಜಯವಾಡ ನಗರ ಎನ್‌ಟಿಆರ್ ಜಿಲ್ಲೆ ಪರಿಪಾಲನಾ ಕೇಂದ್ರ. ವಿಜಯವಾಡ ನಗರ ಪರಿಪಾಲನಾ ಬಾಧ್ಯತೆಯು ನಗರಪಾಲಿಕೆಯದೇ ಆಗಿರುತ್ತದೆ.[೩೦]. ನಗರದಲ್ಲಿನ ೫೯ ಭಾಗಗಳಿಂದ ಒಬ್ಬೊಬ್ಬ ನಗರಸಭಾ ಸದಸ್ಯ ಆಯ್ಕೆಯಾಗುತ್ತಾರೆ. ಸರ್ಕಾರವು ಒಬ್ಬ ಮುನಿಸಿಪಲ್‌ ಕಮಿಷನರ್‌ ಅನ್ನು ನೇಮಿಸುತ್ತದೆ. ವಿಜಯವಾಡ ನಗರದಲ್ಲಿ ಒಬ್ಬ ಸಬ್‌ ಕಲೆಕ್ಟರ್ ಇರುತ್ತಾರೆ. ನಗರಪಾಲಿಕೆಯ ಕಾರ್ಯನಿರ್ವಹಣೆಯನ್ನು ಮುನ್ಸಿಪಲ್‌ ಕಮಿಷನರ್‌ ಅವರದು. ಈ ಆಯುಕ್ತರ ಕೈಕೆಳಗೆ ರೆವಿನ್ಯೂ, ಇಂಜಿನಿಯರಿಂಗ್‌, ಕುಡಿಯುವ ನೀರು ಪೂರೈಕೆ, ಆಟೋಟ ಮುಂತಾದ ೧೩ ವಿಭಾಗಗಳ ಅಧಿಕಾರಿಗಳು ಕೆಲಸ ಮಾಡುತ್ತಾರೆ.[೩೧] ವಿಜಿಟಿಎಂ ವುಡಾ ವಿಜಯವಾಡದ ಮೂಲಕ ನಗರದಲ್ಲಿ ಉದ್ಯಾನಗಳು, ರಸ್ತೆಗಳು, ಮೇಲುಸೇತುವೆಗಳು ನಿರ್ಮಾಣವಾಗುತ್ತವೆ.

ಕೆಟ್ಟನೀರಿನ ಶುದ್ಧೀಕರಣ

ಬದಲಾಯಿಸಿ

ನಗರದಲ್ಲಿ ನಾಲ್ಕು (ಎಸ್‌ಟಿಪಿ) ಸೀವೇಜ್‌ ಟ್ರೀಟ್ಮೆಂಟ್‌ ಪ್ಲಾಂಟ್‌ ಗಳು ಇವೆ. ಇವಲ್ಲದೆ ಹೊರವಲಯದಲ್ಲೂ ಹಲವು ಎಸ್‌ಟಿಪಿಗಳನ್ನು ಸ್ಥಾಪಿಸುತ್ತಿದ್ದಾರೆ. ನಗರದಲ್ಲಿ ನಿರ್ಮಿಸಿದ ಸಂಪುಗಳಿಗೆ ಹಲವೆಡೆಗಳಿಂದ ಕೆಟ್ಟನೀರು ಬಂದು ಸೇರುತ್ತದೆ. ಸಂಪುಗಳಿಂದ ಎಸ್‌ಟಿಪಿಗಳಿಗೆ ಈ ನೀರು ಹರಿದುಬರುತ್ತದೆ. ಅಲ್ಲಿ ಈ ನೀರನ್ನು ಶುದ್ಧೀಕರಿಸುತ್ತಾರೆ. ನಗರದಲ್ಲಿ ಮೂರು ನೀರಾವರಿ ಕಾಲುವೆಗಳಿವೆ. ಹಲವು ಪ್ರದೇಶಗಳ ಮಳೆನೀರು ಈ ಕಾಲುವೆಗಳಿಗೆ ಸೇರುತ್ತದೆ. ಡ್ರೇನೇಜ್‌ ನೀರು ಕಾಲುವೆಯಲ್ಲಿ ಸೇರುವ ವಿಧಾನವನ್ನು ನಿಲ್ಲಿಸಿ, ಕೆಟ್ಟನೀರನ್ನು ಪ್ರಾಜೆಕ್ಟಿಗೆ ಮರಳಿಸುತ್ತಾರೆ. ನಗರದಲ್ಲಿನ ಎಲ್ಲ ಕೆಟ್ಟನೀರನ್ನು ಕಲೆಹಾಕಿ ಕಡೆದು ಶುದ್ಧೀಕರಿಸುತ್ತಾರೆ. ಕೆಟ್ಟನೀರೆಲ್ಲವೂ ಪೂರ್ತಿಯಾಗಿ ಶುದ್ಧಗೊಂಡು ಜಲಾಶಯಕ್ಕೆ ಸೇರುತ್ತದೆ. ಈ ಕಡೆ ಮತ್ತೊಮ್ಮೆ ಒಳ್ಳೆನೀರನ್ನು ಹಲವು ಹಂತಗಳಲ್ಲಿ ಶುದ್ಧೀಕರಿಸಿ ಅದರಿಂದ ಬೇರ್ಪಟ್ಟ ಗಡಸುನೀರನ್ನು ಮತ್ತೊಂದು ಜಲಾಶಯಕ್ಕೆ ಕಳಿಸುತ್ತಾರೆ. ಅಲ್ಲಿ ಶುದ್ದಗೊಳಿಸಿದ ನೀರನ್ನು ಉದ್ಯಾನಗಳಿಗೆ, ಹೊಲಗಳಿಗೆ, ಕೈಗಾರಿಕೆಗಳಿಗೆ ಪೂರೈಸುತ್ತಾರೆ.[೩೨]

ರಾಜಕೀಯ

ಬದಲಾಯಿಸಿ

ವಿಜಯವಾಡವು ೧೯೪೦ರಿಂದ ಕೆಲಕಾಲ ಕಮ್ಯುನಿಷ್ಟರ ಭದ್ರಕೋಟೆಯಾಗಿತ್ತು. [೩೩]

ಸಾರಿಗೆ

ಬದಲಾಯಿಸಿ
ಪಂಡಿತ್‌ ನೆಹರೂ ಬಸ್‌ ನಿಲ್ದಾಣ

ವಿಜಯವಾಡ ಜಂಕ್ಶನ್‌ ರೈಲುನಿಲ್ದಾಣ, ದಕ್ಷಿಣ ಇಂಡಿಯಾದ ಅತಿದೊಡ್ಡ ರೇಲ್ವೇ ಜಂಕ್ಷನ್.

 
ಆಂಧ್ರಪ್ರದೇಶ್‌ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಅಮರಾವತಿ ಬಸ್ಸು

ರಸ್ತೆಗಳು

ಬದಲಾಯಿಸಿ

ನಗರದಲ್ಲಿ 1,264.24 km (785.56 mi) ರಸ್ತೆಗಳು ಇವೆ.[೩೪] ಇವಿಷ್ಟೇ ಅಲ್ಲದೆ ನೂರಾರು ಖಾಸಗಿ ಬಸ್ಸುಗಳು ಹೈದರಾಬಾದಿಗೆ, ಇತರ ಮುಖ್ಯ ನಗರಗಳಿಗೆ ಹೋಗಿಬರುತ್ತವೆ. ನಗರ ಪ್ರಯಾಣದಲ್ಲಿ ಬಂದರು, ಏಲೂರು ಮತ್ತು ರೈವೇಸ್‌ ಕಾಲುವೆಗಳ ಮೇಲೆ ಕಟ್ಟಲಾದು ಹದಿನಾರು ಸೇತುವೆಗಳಿವೆ.[೩೫] ನಗರದಲ್ಲಿ ಟ್ರಾಫಿಕ್‌ ಸಮಸ್ಯೆಯನ್ನು ತಗ್ಗಿಸಲು ವುಡಾ ನಿರ್ಮಿಸಿದ ಒಳವರ್ತುಲ ರಸ್ತಯು ನೈನವರಂ ಗೇಟ್‌ (ವೈವಿರಾವ್‌ ಎಸ್ಟೇಟ್ಸ್)‌ ನಿಂದ ಪೈಪ್‌ ರೋಡ್‌ ಸೆಂಟರ್‌ ವರೆಗಿನ ಮೊದಲರ್ಧವು ಹೈದರಾಬಾದ್‌ ಕೊಲ್ಕತ್ತ ರಾಷ್ಟ್ರೀಯ ಹೆದ್ದಾರಿಯನ್ನು ಸೇರುತ್ತದೆ. ಎರಡನೇ ಹಂತದಲ್ಲಿ, ಪಾಯಕಾಪುರದಿಂದ ರಾಮವರಪ್ಪಾಡು ರಿಂಗ್‌ ರಸ್ತೆಯು ಪೂರ್ತಿಯಾಗಿ ಹೈದರಾಬಾದ್‌ ನಿಂದ ಕೊಲ್ಕತ್ತಾಗೆ ತೆರಳುವ ವಾಹನಗಳು ಗೊಲ್ಲಪೂಟಿ, ನೈನವರಂ ಫ್ಲೈಓವರ್‌ ಮೇಲೆ ಇನ್ನರ್‌ ರಿಂಗ್‌ ರಸ್ತೆಯನ್ನು ಸೇರಿ ನಗರವನ್ನು ಮುಟ್ಟದೆಯೇ ರಾಮವರಪ್ಪಾಡು ರಿಂಗ್‌ ರಸ್ತೆಯನ್ನು ಸೇರಿಕೊಳ್ಳುತ್ತವೆ. ಕೊಲ್ಕತ್ತಾದಿಂದ ಹೈದರಾಬಾದಿಗೆ ತೆರಳುವ ವಾಹನಗಳು ರಾಮವರಪ್ಪಾಡು ರಿಂಗ್‌ ಮೂಲಕ ನೇರವಾಗಿ ಗೊಲ್ಲಪೂಡಿ ಸೇರಿಕೊಳ್ಳುತ್ತವೆ. ನಗರಕ್ಕೆ ಬಂದರು ರಸ್ತೆ, ಏಲೂರು ರಸ್ತೆ ಮುಖ್ಯರಸ್ತೆಗಳು.[೩೬]

ರಾಷ್ಟ್ರೀಯ ಹೆದ್ದಾರಿ ೧೬, ರಾಷ್ಟ್ರೀಯ ಹೆದ್ದಾರಿ ೬೫, ನಗರವನ್ನು ಇತರ ರಾಜ್ಯಗಳೊಂದಿಗೆ ಜೋಡಿಸುತ್ತವೆ.[೩೭][೩೮] ರಾಷ್ಟ್ರೀಯ ಹೆದ್ದಾರಿ ೩೦, ಚತ್ತೀಸ್‌ಗಡದಲ್ಲಿನ ಜಗದಲ್‌ಪುರವನ್ನು ನಗರ ಸಮೀಪದಲ್ಲಿನ ಇಬ್ರಾಹಿಂಪಟ್ನಂ ವರೆಗೆ ಜೋಡಿಸುತ್ತದೆ.[೩೮] ನಗರದಲ್ಲಿ ಟ್ರಾಫಿಕ್‌ ಸಮಸ್ಯೆಯನ್ನು ತಗ್ಗಿಸುವ ಸಲುವಾಗಿ ಇನ್ನರ್‌ ರಿಂಗ್‌ ರಸ್ತೆಯು ರಾಷ್ಟ್ರೀಯ ಹೆದ್ದಾರಿ ೧೬ ಮತ್ತು ೬೫ಅನ್ನು ಸಂಪರ್ಕಿಸುತ್ತದೆ. ಹೈದರಾಬಾದ್‌ ನಿಂದ ಕೊಲ್ಕತ್ತಾಗೆ ತೆರಳುವ ವಾಹನಗಳು ಗೊಲ್ಲಪೂಡಿ, ನೈನವರಂ ಮೇಲುಸೇತುವೆ ಮೂಲಕ ಒಳವರ್ತುಲ ರಸ್ತೆಗಿಳಿದು ನಗರದೊಳಕ್ಕೆ ಬಾರದೆಯೇ ರಾಮವರಪಾಡು ವರ್ತುಲರಸ್ತೆಗೆ ಸೇರಿಕೊಳ್ಳುತ್ತವೆ. ಅದೇ ರೀತಿ ಕೊಲ್ಕತ್ತಾದಿಂದ ಹೈದರಾಬಾದಿಗೆ ಹೋಗುವ ವಾಹನಗಳು ರಾಮವರಪ್ಪಾಡು ವಿನಿಂದ ನೇರವಾಗಿ ಗೊಲ್ಲಪೂಡಿಗೆ ಸೇರಿಕೊಳ್ಳುತ್ತವೆ.[೩೯]

ಬೈಪಾಸ್‌ ರಸ್ತೆಯ ಪ್ರಸ್ತಾವನೆ

ಬದಲಾಯಿಸಿ
 
ಬೆಂಜ್‌ ಸರ್ಕಲ್

ಹಿಂದೆಲ್ಲಾ ತಾಡೆಪಲ್ಲಿ ದಾರಿಯಲ್ಲಿ ಕೃಷ್ಣಾನದಿ ಕರಕಟ್ಟ ಮಾರ್ಗವಾಗಿ ಬೈಪಾಸ್‌ ನಿರ್ಮಿಸಬೇಕೆಂಬ ಪ್ರಸ್ತಾವನೆ ಇತ್ತು. ಇದಕ್ಕೆ ಬದಲಾಗಿ ಇನ್ನೊಂದು ಪ್ರಸ್ತಾವನೆಯಲ್ಲಿ ಮಂಗಳಗಿರಿ, ಎನ್‌ಆರ್‌ಐ ಕಲಾಶಾಲೆಯಿಂದ ಶುರುವಾಗಿ ಪೆದವಡ್ಲಪೂಡಿ, ನೂತಕ್ಕಿ ಗ್ರಾಮದ ಮೇಲೆ ಕೃಷ್ಣಾನದಿ ದಾಟಿ ವಿಜಯವಾಡ, ಮಚಲಿಪಟ್ನಂ ರಾ.ಹೆ.೯ ದಾಟಿ ನಿಡಮಾನೂರು ಬಳಿ ರಾ.ಹೆ.೫ರಲ್ಲಿ ಸೇರುತ್ತದೆ. ‌

ಬಸ್ ಸಾರಿಗೆ

ಬದಲಾಯಿಸಿ

ಮೊದಲಿಗೆ ಸಿಟಿ ಬಸ್ಸುಗಳು, ಆಟೋಗಳು ನಗರದೊಳಗಿನ ಜನಸಾರಿಗೆ ಸೇವೆಗಳು. [೪೦] ಇವಲ್ಲದೆ ಮೋಟಾರು ಬೈಕುಗಳು, ರಿಕ್ಷಾಗಳು, ಸೈಕಲ್ಲುಗಳು ಕೂಡಾ ಸಾರಿಗೆ ವ್ಯವಸ್ಥೆಯಲ್ಲಿ ಪಾಲುದಾರರು.[೪೦]: 37, 44  ಪಂಡಿತ್‌ ನೆಹರೂ ಬಸ್‌ ಸ್ಟೇಷನ್‌, ವಿಜಯವಾಡ ಜಂಕ್ಷನ್‌ ರೇಲ್ವೇ ಸ್ಟೇಶನ್‌ ಗಳು ಸಾರಿಗೆಗೆ ಸಂಬಂಧಿಸಿದ ಮೌಲಿಕ ಬಳಕೆಗಳು.[೪೧] ಆಂ‍ಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ”ವಿಜಯವಾಡ ಸಿಟಿ ಡಿವಿಷನ್‌” ಪ್ರತಿದಿನ ೪೦೦ ಬಸ್ಸುಗಳನ್ನು ನಡೆಸುತ್ತಾ, ೩,೦೦,೦೦೦ ಮಂದಿಯನ್ನು ಹೊತ್ತೊಯ್ಯುತ್ತವೆ.[೪೨] ವಿಜಯವಾಡ ಬಿ.ಆರ್.‌ ಟಿ. ಎಸ್‌ ಮಾರ್ಗವು ವೇಗವಾದ ಸಿಟಿಬಸ್ಸುಗಳಿಗೆಂದೇ ಮಾಡಲಾಗಿದೆ.[೪೩] ಪಂಡಿತ್‌ ನೆಹರೂ ಬಸ್‌ ಸ್ಟೇಷನ್‌ನಲ್ಲಿ ಆಂ‍ಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಧಾನ ಕಾರ್ಯಾಲಯ ಇದೆ.[೪೪] ಪಂಡಿತ್‌ ನೆಹರೂ ಬಸ್‌ ಸ್ಟೇಷನ್ನು ದೇಶದಲ್ಲಿನ ನಾಲ್ಕನೇ ಅತಿ ದೊಡ್ಡ ಬಸ್‌ ನಿಲ್ದಾಣ ಎನಿಸಿದೆ.[೪೫]

ವಿಜಯವಾಡದಲ್ಲಿ ೬,೭೮,೦೦೪ ಸಾರಿಗೆಯೇತರ ಹಾಗೂ ೯೪,೯೩೭ ಸಾರಿಗೆ ವಾಹನಗಳು ಇವೆ. [೪೬] ಲಾರಿಯಂತಹ ಭಾರೀ ವಾಹನಗಳು ಸರಕು ಸಾಗಾಣಿಕೆಗೆ ಬಳಸಲಾಗುತ್ತದೆ. ದೇಶದ ಶೇ. ೧೮ರಷ್ಟು ಲಾರಿಗಳು ವಿಜಯವಾಡದಲ್ಲೇ ಇವೆ.[೪೭] ಹತ್ತಿರದ ಪ್ರದೇಶಗಳಿಗೆ ತೆರಳಲು ೨೭,೨೯೬ ಆಟೋಗಳು ಪ್ರತಿದಿನ ರಸ್ತೆಗಿಳಿಯುತ್ತವೆ.[೪೬]

 
ವಿಜಯವಾಡ ಜಂಕ್ಷನ್‌ ರೈಲುನಿಲ್ದಾಣ

ಉಪನಗರ ಸಾರಿಗೆಯ ರೈಲುಗಳು ವಿಜಯವಾಡದಿಂದ ಗುಂಟೂರು, ತೆನಾಲಿವರೆಗೆ ಸೇವೆ ಮುಟ್ಟಿಸುತ್ತಿವೆ.[೪೮][೪೯] ಹೊಸದಾಗಿ ಉಂಗುರರೈಲು ಹಮ್ಮುಗೆಯ ಪ್ರಸ್ತಾಪ ನಡೆದಿದೆ, ಇದು ರಾಜಧಾನಿ ಅಮರಾವತಿವರೆಗೆ ಇರುತ್ತದೆ.[೫೦][೫೧] ವಿಜಯವಾಡ ಮೆಟ್ರೋ ಪ್ರಾಜೆಕ್ಟು ಎರಡು ಮಾರ್ಗಗಳಲ್ಲಿ ನಿರ್ಮಾಣವಾಗುತ್ತಿದೆ. [೫೨] ವಿಜಯವಾಡ ರೇಲ್ವೇ ನಿಲ್ದಾಣವು A1 ಎಂದು ಗುರುತಿಸಲ್ಪಟ್ಟಿದೆ.[೫೩] ದೇಶದ ರೈಲುಮಾರ್ಗಗಳಲ್ಲಿ ಅತ್ಯಂತ ನಿಬಿಡವಾದ ಜಂಕ್ಷನ್‌ ವಿಜಯವಾಡ ಜಂಕ್ಷನ್.‌[೫೪] ವಿಜಯವಾಡ ರೇಲ್ವೇ ಡಿವಿಷನ್ ಪ್ರಧಾನ ಕಾರ್ಯಾಲಯ ಕೂಡಾ ಇಲ್ಲೇ ಇದೆ.[೫೫]

ಚಿತ್ರ:AirCosta1.jpg
ವಿಜಯವಾಡ ವಿಮಾನನಿಲ್ದಾಣ

ವಿಜಯವಾಡಕ್ಕೆ ೧೯ ಕಿ.ಮೀ. ದೂರದಲ್ಲಿ ಇರುವ ಗನ್ನವರಂ ದೇಶೀ ವಿಮಾನನಿಲ್ದಾಣದಿಂದ ಹೈದರಾಬಾದ್‌, ಬೆಂಗಳೂರು, ಚೆನ್ನೈ, ಮುಂಬೈ, ಜೈಪುರ್‌, ವಿಶಾಖಪಟ್ಟಣ, ತಿರುಪತಿ, ದೆಹಲಿ ನಗರಗಳಿಗೆ ವಿಮಾನಸೌಕರ್ಯ ಇದೆ.[೫೬]೨೦೧೭ ಮೇ ೩ರಂದು, ಈ ವಿಮಾನನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಅಂತರಾಷ್ಟ್ರೀಯ ವಿಮಾನನಿಲ್ದಾಣವಾಗಿ ಮಾಡಿದ್ದಾರೆ.[೫೬] ೨೦೧೬-೧೭ ಆರ್ಥಿಕ ವರುಷದಲ್ಲಿ ೬,೨೨,೩೫೪ ಮಂದಿ ದೇಶೀ ಯಾತ್ರಿಕರು ಪಯಣಿಸಿದ್ದಾರೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ. ೫೬.೧ರಷ್ಟು ಹೆಚ್ಚಳ ಕಂಡಿದೆ.[೫೭] ಅದೇ ಆರ್ಥಿಕ ವರ್ಷದಲ್ಲಿ ೧೦,೩೩೩ ವಿಮಾನಗಳು ಹಾರಿ ಶೇ. ೫೪.೮ ಹೆಚ್ಚಳ ಕಂಡಿವೆ.[೫೮]

ಶಿಕ್ಷಣ

ಬದಲಾಯಿಸಿ

ವಿಶ್ವವಿದ್ಯಾಲಯಗಳು

ಬದಲಾಯಿಸಿ
 
ಎನ್.ಟಿ. ಆರ್‌. ಆರೋಗ್ಯವೈದ್ಯಶಾಸ್ತ್ರ ವಿಶ್ವವಿದ್ಯಾಲಯ

ಇಲ್ಲಿರುವ ಒಂದೇ ಒಂದು ವಿಶ್ವವಿದ್ಯಾಲಯ ಎನ್‌.ಟಿ.ಆರ್.‌ ಯೂನಿವರ್ಸಿಟಿ ಆಫ್‌ ಹೆಲ್ತ್‌ ಸೈನ್ಸಸ್‌, ದೇಶದ ಮೊತ್ತಮೊದಲ ಆರೋಗ್ಯ ವಿವಿ. ಇಂಟರ್ಮೀಡಿಯಟ್‌ ಸ್ಥಾಯಿಯಲ್ಲಿ ವಿಜಯವಾಡವು ರಾಜ್ಯದಲ್ಲಿ ದೊಡ್ಡ ಶೈಕ್ಷಣಿಕ ಕೇಂದ್ರವೆನಿಸಿದೆ. ಎಲ್ಲೆಂದರಲ್ಲಿ ಸ್ಥಾಪಿತವಾದ ಖಾಸಗಿ ತಂಗುಕಾಲೇಜುಗಳು, ಖಾಸಗಿ ವಿದ್ಯಾಸಂಸ್ಥೆಗಳು, ಸರ್ಕಾರಿ ವಿದ್ಯಾಸಂಸ್ಥೆಗಳು ಕೂಡಾ ಇದಕ್ಕೆ ತಮ್ಮ ಪಾಲು ನೀಡಿವೆ.

ಪಾಠಶಾಲೆಗಳು

ಬದಲಾಯಿಸಿ

ವೀರಮಾಚಿನೇನಿ ಪೆದ್ದಯ್ಯ ದಾನಮಾಡಿದ ನೆಲದಲ್ಲಿ ಸಿದ್ಧಾರ್ಥ ಅಕಾಡೆಮಿ ೧೯೭೭ಯವರಿಂದ ಸ್ಥಾಪಿತವಾದ ಸಿದ್ಧಾರ್ಥ ಪಬ್ಲಿಕ್‌ ಪಾಠಶಾಲೆಯು ವಿಜಯವಾಡ ಮುಗಲ್‌ ರಾಜಪುರದಲ್ಲಿ ಇದೆ.

ಸಾಮಾನ್ಯ ಸರ್ಕಾರಿ ಆಸ್ಪತ್ರೆಯನ್ನು ಸೂಪರ್‌ ಸ್ಪೆಶಾಲಿಟಿ ಅತ್ಯಾಧುನಿಕ ಆಸ್ಪತ್ರೆಯಾಗಿ ಮಾರ್ಪಡಿಸುವ ಕೆಲಸ ನಡೆದಿದೆ.[೫೯] ಖಾಸಗಿ ರಂಗದಲ್ಲಿ ಅತ್ಯಾಧುನಿಕ ಆಸ್ಪತ್ರೆಗಳಿವೆ.

ಸುದ್ದಿ, ವಿನೋದ

ಬದಲಾಯಿಸಿ
 
ಬೆಂಜ್‌ ಸರ್ಕಲ್‌ ಹತ್ತಿರ ಟ್ರೆಂಡ್‌ ಸೆಟ್‌ ಮಾಲ್

ರೇಡಿಯೋ

ಬದಲಾಯಿಸಿ

೧೯೪೮ ಡಿಸೆಂಬರ್‌ ೧ರಂದು ಶುರುವಾದ ಆಕಾಶವಾಣಿ ವಿಜಯವಾಡ ಕೇಂದ್ರವು ಬಾನುಲಿ ಕೇಳುಗರಿಗೆ ತೆಲುಗು ಪ್ರಸಾರವನ್ನು ತಲಪಿಸುತ್ತಿದೆ. ಅದರಲ್ಲಿ ದುಡಿದ ಹಲವು ಸಾಹಿತಿಗಳು, ಕಲಾಕಾರರಿಗೆ ವಿಜಯವಾಡ ನಿವಾಸವಾಗಿದೆ.[೬೦] ಇದರ ಭವನಕ್ಕೆ ರಾಷ್ಟ್ರಧ್ವಜವನ್ನು ರೂಪಿಸಿದ ಪಿಂಗಳಿ ವೆಂಕಯ್ಯ ಅವರ ಹೆಸರಿಡಲಾಗಿದೆ.[೬೧][೬೧]

ವಿಜಯವಾಡ ಬಾನುಲಿ ಕೇಂದ್ರ,[೬೨] ವಿವಿಧಭಾರತಿ (ರೇನ್‌ ಬೋ ಕೃಷ್ಣವೇಣಿ ಎಫ್‌ ಎಂ ೧೦೨.೨ ಮೆಗಾಹರ್ಟ್ಝ್).[೬೩]

ಇವಲ್ಲದೆ ಖಾಸಗಿ ರಂಗದಲ್ಲಿ, ರೇಡಿಯೋ ಮಿರ್ಚಿ ಎಫ್‌ ಎಂ ೯೮.೩, ರೆಡ್‌ ಎಫ್‌ ಎಂ ೯೩.೫ ಪ್ರಸಾರ ಕೇಂದ್ರಗಳೂ ಇವೆ.

ಟೆಲಿವಿಷನ್

ಬದಲಾಯಿಸಿ

ದೂರದರ್ಶನ ಸಪ್ತಗಿರಿಗೆ ಕೇಂದ್ರಸ್ಥಾನ ವಿಜಯವಾಡ.

ಸಿನಿಮಾ

ಬದಲಾಯಿಸಿ

ವಿಜಯವಾಡ ನಗರ ಸಂಸ್ಕೃತಿಯಲ್ಲಿ ಸಿನಿಮಾಗಳಿಗೆ ಪ್ರತ್ಯೇಕವಾದ ಸ್ಥಾನವಿದೆ. ೧೯೨೧ರಲ್ಲಿಯೇ ನಗರದಲ್ಲಿ ಮಾರುತಿಹಾಲ್ ನಲ್ಲಿ ಸಿನಿಮಾಗಳ ಪ್ರದರ್ಶನ ಪ್ರಾರಂಭವಾಯಿತು. ತೆಲುಗಿನಲ್ಲಿ ಟಾಕಿ ಸಿನಿಮಾಗಳು ಬರುವ ಮುನ್ನವೇ ವಿಜಯವಾಡದಲ್ಲಿ ದುರ್ಗಾ ಕಳಾಮಂದಿರ (೧೯೨೩), ರಾಮಾ ಟಾಕೀಸು (೧೯೨೯) ಮೊದಲಾದ ಚಿತ್ರಮಂದಿರಗಳು ಪ್ರಾರಂಭವಾಗಿದ್ದವು. ತೆಲುಗು ಸಿನಿಮಾರಂಗ ಪ್ರಾರಂಭವಾದಾಗ ನಿರ್ಮಾಣಕೇಂದ್ರಗಳು ಇಲ್ಲದಿದ್ದರೂ ಹಂಚಿಕೆ ಕೇಂದ್ರವಾಗಿ ವಿಜಯವಾಡ ವಿಜೃಂಭಿಸಿದೆ. ಅದಲ್ಲದೆ ಸಿನಿಮಾರಂಗವನ್ನು ಕುರಿತಾದ ಚರ್ಚಾಗೋಷ್ಠಿಗಳು, ಸಮಾವೇಶಗಳು, ಅಭಿಮಾನ ಸಂಘಗಳು, ಸಿನಿಮಾ ಪತ್ರಿಕೆಗಳು ಮೊದಲಾದವೆಲ್ಲದಕ್ಕೂ ತಾಣ ಕಲ್ಪಿಸಿದೆ. ವಿಜಯವಾಡ ಮತ್ತು ಸುತ್ತಮುತ್ತಲಲ್ಲಿ ಬಾಂಧವ್ಯ ಇಟ್ಟುಕೊಂಡ ನಂದಮೂರಿ ತಾರಕ ರಾಮಾರಾವ್‌, ಅಕ್ಕಿನೇನಿ ನಾಗೇಶ್ವರರಾವ್‌, ಸಾವಿತ್ರಿ ಮುಂತಾದ ನಟನಟಿಯರು ಒಳ್ಳೆ ಹೆಸರು ಸಂಪಾದಿಸಿದ್ದಾರೆ. ವಿಜಯವಾಡ ಫಿಲಂ ಸೊಸೈಟಿಯು ಉತ್ತಮ ಚಿತ್ರಗಳ ಮೂಲಕ ಪ್ರೇಕ್ಷಕರಲ್ಲಿ ಉತ್ತಮ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಬಹುಕಾಲ ಕೆಲಸ ಮಾಡಿದೆ. ಹೀಗೆ ಸಿನಿಮಾ ರಂಗವು ನಗರದ ಜನಜೀವನ ರೂಪಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ.[೬೪][೬೫]

ಸುದ್ದಿಮನೆ

ಬದಲಾಯಿಸಿ

ವಿಶಾಲಾಂಧ್ರ ದಿನಪತ್ರಿಕ ಎಂಬುದು ವಿಜಯವಾಡದಿಂದ ಪ್ರಾರಂಭವಾದ ಮೊತ್ತಮೊದಲ ಸುದ್ದಿಪತ್ರಿಕೆ.[೬೬] ೨೦೧೩-೧೪ರಲ್ಲಿ ಹೊರಬಿದ್ದ ವಾರ್ಷಿಕ ಪ್ರೆಸ್‌ ವರದಿಯ ಪ್ರಕಾರ ವಿಜಯವಾಡದಿಂದ ಪ್ರಕಟವಾಗುವ ದೊಡ್ಡ, ಮಧ್ಯಮ ವಾರ್ತಾಪತ್ರಿಕೆಗಳಲ್ಲಿ ಆಂಧ್ರಜ್ಯೋತಿ, ಈನಾಡು, ಸಾಕ್ಷಿ, ಸೂರ್ಯ, ವಾರ್ತ, ಪ್ರಜಾಶಕ್ತಿ, ಉದಯಭಾರತಂ ಇವೆ. ಅವುಗಳ ಸ್ಥಾನವನ್ನು ಟಿವಿ ಮಾಧ್ಯಮಗಳು ಆಕ್ರಮಿಸುವವರೆಗೂ ವಿಜಯವಾಡ ನಗರದಲ್ಲಿ ಹಲವಾರು ಪತ್ರಿಕೆಗಳ ಸಾಯಂಕಾಲದ ಸಂಚಿಕೆಗಳೂ, ಕೆಲವು ಸಂಜೆ ಪತ್ರಿಕೆಗಳೂ ತಾಜಾ ಸುದ್ದಿಗಳನ್ನು ನೀಡುತ್ತಿದ್ದವು.[೬೭]

ಆಂಧ್ರಪ್ರದೇಶದಲ್ಲಿ ಪ್ರಕಟವಾಗುವ ಎಷ್ಟೋ ಪ್ರಕಟನೆಗಳಿಗೆ ವಿಜಯವಾಡವೇ ಕೇಂದ್ರ. ಒಂದು ಅಂದಾಜಿನ ಪ್ರಕಾರ ಶೇ. ೯೦ರಷ್ಟು ಪುಸ್ತಕಗಳು ಇಲ್ಲಿಂದಲೇ ಪ್ರಕಟವಾಗುತ್ತವೆ. ಪ್ರತಿವರ್ಷವೂ ಇಲ್ಲಿ ವಿಜಯವಾಡ ಪುಸ್ತಕೋತ್ಸವ ನಡೆಯುತ್ತದೆ. ಕೊಲ್ಕತ್ತಾ ಬಿಟ್ಟರೆ ದೇಶದಲ್ಲಿನ ಅತಿದೊಡ್ಡ ಪುಸ್ತಕಮೇಳದಲ್ಲಿ ಇದು ಎರಡನೆಯದು. ಪ್ರಕಾಶನ ಸಂಸ್ಥೆಗಳಲ್ಲಿ ವಿಶಾಲಾಂಧ್ರ ಪಬ್ಲಿಷಿಂಗ್‌ ಹೌಸ್‌, ಪ್ರಜಾಶಕ್ತಿ, ನವೋದಯ, ಜಯಂತಿ, ಅರುಣ ಮುಂತಾದವು ಇವೆ.

ವಿಜಯವಾಡದಲ್ಲಿ ಪುಸ್ತಕ ಪ್ರಕಾಶನಗಳು, ಪುಸ್ತಕದಂಗಡಿಗಳು, ಪುಸ್ತಕಾಲಯಗಳು ಸಾಹಿತ್ಯ ವಾತಾವರಣವನ್ನು ಕಲ್ಪಿಸಿವೆ. ೧೯೦೩ರಲ್ಲಿ ಇ. ಸುಬ್ಬುಕೃಷ್ಣಯ್ಯ ಆಸ್ತಿಕ ಪುಸ್ತಕ ಭಾಂಡಾಗಾರಂ ಎಂಬ ಪುಸ್ತಕಾಲಯವನ್ನು ಸ್ಥಾಪಿಸಿದರು. ೧೯೧೬ರಲ್ಲಿ ಅದನ್ನು ಬಕಿಂಗ್‌ ಹ್ಯಾಂಪೇಟೆಯಲ್ಲಿನ ಶಾಶ್ವತ ಭವನಕ್ಕೆ ವರ್ಗಾಯಿಸಿ ಹೆಸರನ್ನು ರಾಮ್‌ ಮೋಹನ್‌ ಧರ್ಮ ಪುಸ್ತಕ ಭಂಡಾರ ಎಂದು ಬದಲಾಯಿಸಿದರು. ಇದೇ ಇಂದು ಶ್ರೀರಾಂಮೋಹನ್‌ ಗ್ರಂಥಾಲಯಂ ಎಂದು ಜನಪ್ರಿಯವಾಗಿದೆ. ಉಪ್ಪುಸತ್ಯಾಗ್ರಹದಲ್ಲಿ ಪಾಲ್ಗೊಂಡು ಪೆಟ್ಟು ತಿಂದು, ಜೈಲಿನಲ್ಲಿ ಸತ್ತ ವೆಲಿದಂಡ್ಲ ಹನುಮಂತರಾವ್‌ ಹೆಸರಿನಲ್ಲಿ ಪುಸ್ತಕಮನೆಯೊಂದು ೧೯೩೪ ಡಿಸೆಂಬರ್‌ ೨ರಂದು ಪ್ರಾರಂಭವಾಯಿತು. ಹಿಂದಿನಿಂದಲೂ ಈ ಪುಸ್ತಕದ ಮನೆಗಳು ನಗರದ ಸಾಂಸ್ಕೃತಿಕ ಕೇಂದ್ರಗಳಾಗಿ ಬೆಳೆದಿವೆ. ಹಲವು ರಾಜಕೀಯವೇತ್ತರು, ವಿದ್ಯಾವೇತ್ತರು ಹನುಂತರಾಯ ಗ್ರಂಥಾಲಯಕ್ಕೆ ಅಧ್ಯಕ್ಷರಾಗಿ ಏಳಿಗೆಯತ್ತ ಕೊಂಡೊಯ್ದಿದ್ದಾರೆ.[೬೮]

ರಾಜಕೀಯ

ಬದಲಾಯಿಸಿ

ವಿಜಯವಾಡ ಆಂಧ್ರಪ್ರದೇಶ ರಾಜಕೀಯ ಕೇಂದ್ರವಾಗಿ ಹೆಸರು ಮಾಡಿದೆ.

ಮಾಹಿತಿ ತಂತ್ರಜ್ಞಾನ

ಬದಲಾಯಿಸಿ

ವಿಜಯವಾಡದಲ್ಲಿ ಸರಿಸುಮಾರು ೨೦ ಐಟಿ ಸಂಸ್ಥೆಗಳಿವೆ. ೨೦೦೬-೦೭ ಆರ್ಥಿಕ ಸಂವತ್ಸರದಲ್ಲಿ ಇವು ೪೨ ಕೋಟಿ ರೂಪಾಯಿಗಳ ಆದಾಯ ಗಳಿಸಿವೆ. ಎಪಿಐಐಸಿ ಸಂಸ್ಥೆಯು ಗನ್ನವರಂ ಜಿಲ್ಲೆಯಲ್ಲಿ ಐಟಿಪಾರ್ಕು, ಎಸ್‌ ಇ ಜಡ್‌ (ವಿಶೇಷ ಆರ್ಥಿಕ ವಲಯ) ಕಟ್ಟಿದೆ. ಇವುಗಳ ಕಟ್ಟೋಣಕ್ಕೆಂದೇ ಎಲ್‌ ಅಂಡ್‌ ಟಿ ಕಂಪೆನಿ ಗುತ್ತಿಗೆ ಪಡೆಯಿತು. ಇದರ ಅಂದಾಜುವೆಚ್ಚ ೩೦೦ ಕೋಟಿ ರೂಪಾಯಿಗಳು. ಈ ಐಟಿ ಪಾರ್ಕುಗಳು ಸರಿಸುಮಾರು ೧೦,೦೦೦ ಮಂದಿಗೆ ಉದ್ಯೋಗ ಕಲ್ಪಿಸಿದೆ. ಇನ್ನೊಂದು ಐಟಿ ಪಾರ್ಕು ಮಂಗಳಗಿರಿಯಲ್ಲಿ ಪ್ರಾರಂಭವಾಗುತ್ತಿದೆ.

ಸಂಸ್ಕೃತಿ

ಬದಲಾಯಿಸಿ
 
ಪಿವಿಪಿ ಸ್ಕ್ವೇರ್‌, ವಿಜಯವಾಡ

ಮ್ಯೂಸಿಯಂಗಳು, ಪ್ರವಾಸ ತಾಣಗಳು

ಬದಲಾಯಿಸಿ
  • ಮಂಗಳಗಿರಿ ನರಸಿಂಹಸ್ವಾಮಿ ಗುಡಿ
  • ಗುಣದಲ ಮೇರಿಮಾತೆ ಚರ್ಚು
  • ರಾಜೀವ್‌ ಗಾಂಧಿ ಪಾರ್ಕು
  • ರಾಘವಯ್ಯ ಪಾರ್ಕು
  • ಬೆಸೆಂಟ್‌ ರಸ್ತೆ
  • ಮಹಾತ್ಮಗಾಂಧಿ ರಸ್ತೆ (ಬಂದರು ರಸ್ತೆ) (ಒಡವೆ ಅಂಗಡಿಗಳು)
  • ಸತ್ಯನಾರಾಯಣಸ್ವಾಮಿ ಗುಡಿ
  • ಭವಾನಿ ದ್ವೀಪ, ಕೃಷ್ಣಾನದಿ ಪಾತ್ರದಲ್ಲಿ ವಿಜಯವಾಡ ಮತ್ತು ಗುಂಟೂರು ಜಿಲ್ಲೆಗಳ ನಡುವೆ ನೈಸರ್ಗಿಕವಾಗಿ ಮೂಡಿದೆ.

ಮತನಂಬಿಕೆಗಳು, ಪ್ರಾರ್ಥನಾಸ್ಥಳಗಳು

ಬದಲಾಯಿಸಿ

ವಿಜಯವಾಡ ನಗರದಲ್ಲಿ ಹಿಂದಿನ ಕಾಲದಿಂದಲೂ ಬೌದ್ಧ, ಜೈನ ಆನಂತರ ಶೈವ ಸಂಪ್ರದಾಯಗಳು ಇವೆ. ವಿಜಯನಗರ ಸಾಮ್ರಾಜ್ಯ ಪರಿಪಾಲನೆಯ ನಂತರ ೧೬ನೇ ಶತಮಾನದವರೆಗೆ ವೈಷ್ಣವ ಸಂಪ್ರದಾಯವೂ ಇತ್ತು. ರಾಮ, ರಾಘವ, ಕೃಷ್ಣ ಗುಡಿಗಳು ಕೂಡಾ ಶಾಸನಗಳಲ್ಲಿ ಕಾಣಸಿಗುತ್ತವೆ. ಏನಾಯಿತೋ ಏನೋ ಅವೆಲ್ಲವೂ ಕಾಲಗರ್ಭದಲ್ಲಿ ಮರೆಯಾಗಿವೆ. ವೈಶ್ಯರು ವೈಷ್ಣವವನ್ನು ಹೊತ್ತು ಅದರ ಅಭಿವೃದ್ಧಿಗೆ ಶ್ರಮಪಟ್ಟುದರಿಂದ ೧೯ನೇ ಶತಮಾನದ ನಂತರ ಮತ್ತೆ ವಿಜಯವಾಡದಲ್ಲಿ ಮತ್ತೊಮ್ಮೆ ವೈಷ್ಣವ ಗುಡಿಗಳು ತಲೆದೋರುತ್ತವೆ.[೬೯] ವಿಜಯವಾಡ ಜನಸಮುದಾಯದಲ್ಲಿ ಮುಸಲ್ಮಾನರೂ ಹೆಚ್ಚಿನ ಸಂಖ್ಯೆಲ್ಲಿದ್ದಾರೆ. ೨೦೦೦ರಲ್ಲಿ ಅವರ ಸಂಖ್ಯೆ ಶೇ. ೧೫ ಇತ್ತೆಂದು ಒಂದು ಅಂದಾಜು. ೧೯ನೇ ಶತಮಾನದಲ್ಲಿ ಒನ್‌ ಟೌನ್‌ ಸಾಂಸ್ಕೃತಿಕ ಆಧಿಪತ್ಯ ಮುಸ್ಲಿಮರದೇ ಆಗಿತ್ತೆಂದು ತಿಳಿಯುತ್ತದೆ. ಶಿಯಾ ಮುಸ್ಲಿಮರಿಗೆ ಸಂಬಂಧಿಸಿದ ಪಂಜಾಗಳು, ಸೂಫಿಗಳಿಗೆ ಸಂಬಂಧಿಸಿದ ದರ್ಗಾಗಳು ವಿಜಯವಾಡದ ಹಲವು ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಅಂದು ವಿಜಯವಾಡದ ಹೆಚ್ಚಿನ ಸ್ಥಿರಾಸ್ತಿಗಳು ಮುಸಲ್ಮಾನರ ಕೈಯಲ್ಲೇ ಇದ್ದವು. ಚಿನ್ನ ಬೆಳ್ಳಿಗಳ ಅಂಗಡಿಗಳೂ ಇವರದೇ ಆಗಿದ್ದವು. ಕಾಲಕ್ರಮೇಣ ಆಸ್ತಿಗಳು ಪರಭಾರೆಯಾಗಿ ಇಂದು ಅವರು ಹಳೇ ಕಬ್ಬಿಣ, ಟೈರುಗಳ ಮರುಮಾರಾಟ, ಬಟ್ಟೆಹೊಲಿಗೆ ಮುಂತಾದವುಗಳಲ್ಲಿ ತೃಪ್ತಿ ಪಟ್ಟುಕೊಂಡಿದ್ದಾರೆ. ಇಂದೂ ಅವರು ದೊಡ್ಡ ಸಂಖ್ಯೆಯಲ್ಲಿದ್ದರೂ ಹೆಚ್ಚನ ಆಸ್ತಿಪಾಸ್ತಿಗಳು ಅವರ ಕೈಯಲ್ಲಿಲ್ಲ ಎಂದು ಲಂಕ ವೆಂಕಟರಮಣ ಹೇಳುತ್ತಾರೆ. ಇವರು ಬಹುವಾಗಿ ನೆಲೆಗೊಂಡಿರುವ ವಿಜಯವಾಡ ಪಡುವಣ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪ್ರಾತಿನಿಧ್ಯ ಹೊಂದಿದ್ದಾರೆ.[೭೦][೭೧] ಸಿಖ್ಖರೂ ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆಟೋನಗರ್‌ ಸಮೀಪದ ಒಂದು ಕಾಲನಿಗೆ ಗುರುನಾನಕ್‌ ಕಾಲನಿ ಎಂದು ಹೆಸರಿಡಲಾಗಿದೆ. ಟೂ ಟೌನ್‌ ನಲ್ಲಿರುವ ಖಲ್ಸಾಗೆ ಮುನ್ನೂರು ವರ್ಷ ತುಂಬಿದ ಸಂದರ್ಭದಲ್ಲಿ ವಿಜಯವಾಡದಲ್ಲಿ ವೈಭವವಾದ ಉತ್ಸವಗಳು ನಡೆದವು.[೭೨]

ಕನಕದುರ್ಗ ಅಮ್ಮನವರ ಗುಡಿ

ಬದಲಾಯಿಸಿ
 
ವಿಜಯವಾಡ – ಕನಕದುರ್ಗ ಅಮ್ಮನವರ ಗುಡಿ

ಕನಕದುರ್ಗ ಆಲಯ, ದುರ್ಗಾಮಲ್ಲೇಶ್ವರ ಸ್ವಾಮಿ ಗುಡಿಗಳು ಕೃಷ್ಣಾನದಿ ದಂಡೆಯಲ್ಲಿ ಇರುವ ಇಂದ್ರಕೀಲಾದ್ರಿ ಪರ್ವತದ ಮೇಲೆ ಇವೆ. ಇಲ್ಲಿ ದುರ್ಗಾದೇವಿ ಸ್ವಯಂಭುವಾಗಿ ಹುಟ್ಟಿದಳೆಂದು ಸ್ಥಳಪುರಾಣ ಹೇಳುತ್ತದೆ. ಆದಿಶಂಕರಾಚಾರ್ಯರು ತಮ್ಮ ಪರ್ಯಟನ ಸಮಯದಲ್ಲಿ ಈ ಅಮ್ಮನವರನ್ನು ದರ್ಶಿಸಿ ಇಲ್ಲಿ ಶ್ರೀಚಕ್ರವನ್ನು ಪ್ರತಿಷ್ಠಾಪಿಸಿದರೆಂದು ಪ್ರತೀತಿ. ಪ್ರತಿವರ್ಷವೂ ಲಕ್ಷಾಂತರ ಮಂದಿ ಇಲ್ಲಿ ಸೇರಿ ದರ್ಶನ ಪಡೆಯುತ್ತಾರೆ. ರಾಕ್ಷಸರ ಬಾಧೆಯನ್ನು ತಾಳಲಾರದೆ ಇಂದ್ರಕೀಲ ಎನ್ನುವ ಋಷಿಯು ದುರ್ಗಾದೇವಿಯನ್ನು ಕುರಿತು ತಪಸ್ಸು ಮಾಡಿ ಅಮ್ಮನವರನ್ನು ಪ್ರಾರ್ಥಿಸಿದಾಗ ಆ ತಾಯಿ ಕೋರಿಕೆ ನೆರವೇರಿಸಿದಳೆಂದು ಪ್ರತೀತಿ. ಅದೇ ರೀತಿ ಅರ್ಜುನನು ಶಿವನನ್ನು ಕುರಿತು ತಪಸ್ಸು ಮಾಡಿದ್ದೂ ಇಲ್ಲಿಯೇ ಎಂದು ಸಹಾ ಪ್ರತೀತಿಯಿದೆ.

ಮರಕತ ರಾಜರಾಜೇಶ್ವರೀ ಗುಡಿ - ಪಟಮಟ

ಬದಲಾಯಿಸಿ

ಇದು ಇಂದಿನ ಕಾಲದಲ್ಲಿ ಅಪರೂಪವಾದ ಶಿಲ್ಪಕಲೆಯಿಂದ ಕೂಡಿದ ದೊಡ್ಡ ಗುಡಿ. ಅಮ್ಮನವರ ವಿಗ್ರಹವು ಅಪರೂಪವಾದ ಮರಕತ (ಪಚ್ಚೆ) ಶಿಲೆಯಲ್ಲಿ ಕೆತ್ತಲಾಗಿದೆ. ಅಷ್ಟಲ್ಲದೆ ಗುಡಿಯ ಗೋಡೆಗಳೆಲ್ಲ ಕಲ್ಲಿನಲ್ಲಿ ಕೆತ್ತಲಾಗಿದ್ದು ಶ್ರೀಚಕ್ರದಲ್ಲಿನ ವಿವಿಧ ಚಕ್ರಗಳು, ಅದರಲ್ಲಿ ದೇವತೆಗಳನ್ನು ಅದ್ಭುತಕರವಾಗಿ ಮೂಡಿಸಲಾಗಿದೆ. ಗರ್ಭಗುಡಿಯ ಶಿಖರವು ಸುಮೇರು ಶ್ರೀಚಕ್ರದ ರೂಪದಲ್ಲಿದೆ. ಅಮ್ಮನವರ ಮುಂದೆ ಆಮೆಯ ಮೇಲೆ ಕೆಂಪುಮಾಣಿಕ್ಯದಲ್ಲಿ ಮಾಡಿದ ಶ್ರೀಚಕ್ರವಿದೆ. ೨೦೦೨ರಲ್ಲಿ ಗಣಪತಿ ಸಚ್ಚಿದಾನಂದಸ್ವಾಮಿಯವರು ಈ ಗುಡಿಯ ಕುಂಭಾಭಿಷೇಕದೊಂದೆ ಪ್ರತಿಷ್ಠಾಪಿಸಿದರು.

ಇತರ ಗುಡಿಗಳು

ಬದಲಾಯಿಸಿ
  • ಆಂಜನೇಯ ಗುಡಿ - ಮಾಚವರಂ
  • ಪಟಮಟ ಕ್ಷಿಪ್ರಗಣಪತಿ ಗುಡಿ
  • ತ್ರಿಶಕ್ತಿಪೀಠ
  • ರಾಮಲಿಂಗೇಶ್ವರ ಗುಡಿ - ಯನಮಲಕುದುರು, ಇದು ಕೃಷ್ಣಾవది ಒಡ್ಡಿನ ಬಳಿಯಿರುವ ಬೆಟ್ಟದ ಮೇಲಿದೆ. ಬೆಂಜಿ ಸರ್ಕಲ್‌ ನಿಂದ ಮೂರು ಕಿಲೊಮೀಟರು ದೂರದಲ್ಲಿದೆ.

ಹತ್ತಿರದ ಗುಡಿಗಳು

ಬದಲಾಯಿಸಿ
  • ಪರನುಗಂಚಿಪ್ರೋಲು ತಿರುಪತಮ್ಮ
  • ವೇದಾದ್ರಿ ನಾರಸಿಂಹ ಕ್ಷೇತ್ತ
  • ಮೊಪಿದೇವಿ
  • ಶ್ರೀಕಾಕುಳಂ (ಘಂಟಸಾಲ) – ಆಂಧ್ರ ಮಹಾವಿಷ್ಣು ಕ್ಷೇತ್ರ
  • ಕೊಲ್ಲೇಟಿಕೋಟ – ದೊಡ್ಡಮನೆಗಳಮ್ಮ
  • ನೆಮಲಿ (ಗಂಪಲಗುಡೆಂ) – ವೇಣುಗೋಪಾಲಸ್ವಾಮಿ
  • ಪೆದಕಳ್ಳೇಪಲ್ಲಿ – ನಾಗೇಶ್ವರಾಲಯಂ
  • ಆಗಿರಿಪಲ್ಲಿ – ನರಸಿಂಹಾವತಾರ ವ್ಯಾಘ್ರನರಸಿಂಹ

ಹೆಸರಾಂತ ವ್ಯಕ್ತಿಗಳು

ಬದಲಾಯಿಸಿ

ಇವನ್ನೂ ನೋಡಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ಲಂಕ ವೆಂಕಟರಮಣ 2014, p. 11.
  2. ೨.೦ ೨.೧ ಲಂಕ ವೆಂಕಟರಮಣ 2014, p. 12.
  3. ಜಾನ್ಸನ್ ಚೋರಗುಡಿ 2000, p. 1.
  4. ೪.೦ ೪.೧ ಜಾನ್ಸನ್ ಚೋರಗುಡಿ 2000, p. 2.
  5. ಲಂಕ ವೆಂಕಟರಮಣ 2014, p. 15.
  6. ಲಂಕ ವೆಂಕಟರಮಣ 2014, p. 16.
  7. ೭.೦ ೭.೧ ೭.೨ ಜಾನ್ಸನ್ ಚೋರಗುಡಿ 2000, p. 3.
  8. ಲಂಕ ವೆಂಕಟರಮಣ 2014, p. 5.
  9. ಲಂಕ ವೆಂಕಟರಮಣ 2014, p. 8.
  10. ಲಂಕ ವೆಂಕಟರಮಣ 2014, p. 9.
  11. ಕಂಭಪು ವೆಂಕಟೇಶ್ವರ ಪ್ರಸಾದ್ 1999, p. 4.
  12. No. 45. (A.R. No. 491 of 1906.)
  13. ಜಾನ್ಸನ್ ಚೋರಗುಡಿ 2000, p. 4.
  14. ಜಾನ್ಸನ್ ಚೋರಗುಡಿ 2000, pp. 5, 6.
  15. ಲಂಕ ವೆಂಕಟರಮಣ 2014, pp. 75, 76.
  16. ಪಿ ರಘುನಾಥರಾವ್‌ 2010, p. 234.
  17. "Presence of leopards, wild dogs detected in Krishna forests". The Hindu. 2006. Archived from the original on 2007-11-27. Retrieved 2008-05-25.
  18. reddy, u sudhakar (2016-08-19). "Vijayawada is third densely packed city; 31,200 people in every square km". Deccan Chronicle. Archived from the original on 2019-05-29. Retrieved 2019-05-29.
  19. ೧೯.೦ ೧೯.೧ ಉಲ್ಲೇಖ ದೋಷ: Invalid <ref> tag; no text was provided for refs named population
  20. "Sex Ratio". The Registrar General & Census Commissioner, India. Archived from the original on 22 సెప్టెంబరు 2014. Retrieved 2 September 2014. {{cite web}}: Check date values in: |archive-date= (help)
  21. "Chapter–3 (Literates and Literacy rate)" (PDF). Registrar General and Census Commissioner of India. Archived (PDF) from the original on 13 నవంబరు 2013. Retrieved 2 September 2014. {{cite web}}: Check date values in: |archive-date= (help)
  22. "The Hindu : Andhra Pradesh / Vijayawada News : Championing the cause of Telugu language". The Hindu. Retrieved 14 June 2017.
  23. "C-16 Population By Mother Tongue – Town Level". Census of India. Registrar General and Census Commissioner of India. Archived from the original on 14 నవంబరు 2018. Retrieved 13 May 2019. {{cite web}}: Check date values in: |archive-date= (help) Select "Andhra Pradesh" from the download menu. Data for "Vijayawada (M+OG)" is at row 11723 of the excel file.
  24. "C-1 Population By Religious Community". Census of India. Registrar General and Census Commissioner of India. Archived from the original on 13 సెప్టెంబరు 2015. Retrieved 13 May 2019. {{cite web}}: Check date values in: |archive-date= (help) Select "Andhra Pradesh" from the download menu. Data for "Vijayawada (M+OG)" is at row 2395 of the excel file.
  25. Bhatnagar, Subhash (2009-03-01). Unlocking E-Government Potential: Concepts, Cases and Practical Insights. SAGE Publications India. p. 195. ISBN 9788132102489. Retrieved 9 May 2017.
  26. "Vijayawada Municipal Corporation". Ourvmc.org. Archived from the original on 2 ఫిబ్రవరి 2012. Retrieved 30 January 2012. {{cite web}}: Check date values in: |archive-date= (help)
  27. "Welcome to Government Order Issue Register". goir.ap.gov.in. Archived from the original on 7 మే 2017. Retrieved 27 March 2017. {{cite web}}: Check date values in: |archive-date= (help)
  28. "Govt Declares Vijayawada A Metropolitan City". Primepost.in. 25 March 2017. Archived from the original on 4 మే 2017. Retrieved 30 May 2017. {{cite news}}: Check date values in: |archive-date= (help)
  29. Reporter, Staff. "Vijayawada, 19 other contiguous areas notified as Metropolitan Area". The Hindu. Retrieved 27 March 2017.
  30. "VMC". Archived from the original on 2008-12-20. Retrieved 2007-05-07.
  31. ಟಿ. ವೆಂಕಟೇಶ್ವರರಾವ್ 2008, pp. 98, 99.
  32. జూలై 16, 2010 ఆంధ్రజ్యోతి ವಿಜಯವಾಡ అనుబంధం
  33. "ವಿಜಯವಾಡಯಲ್ಲಿని ఈ కమ్యూనిస్టుల విగ్రహాలు ఏం చెబుతున్నాయి?". బీబీసీ తెలుగు.
  34. "Details of Roads in each ULB of Andhra Pradesh". Municipal Administration and Urban Development Department. Archived from the original on 1 ఆగస్టు 2016. Retrieved 27 June 2016. {{cite web}}: Check date values in: |archive-date= (help)
  35. "Roads and Drains" (PDF). Vijayawada Municipal Corporation. p. 4. Archived from the original (PDF) on 14 ఆగస్టు 2012. Retrieved 9 May 2017. {{cite web}}: Check date values in: |archive-date= (help)
  36. "Pedestrians crossing roads at the mercy of motorists". The Hindu. Retrieved 12 May 2017.
  37. "Road safety vehicles to focus on infrastructure too". The Hindu. 4 April 2017. Retrieved 12 May 2017.
  38. ೩೮.೦ ೩೮.೧ "List of National Highways passing through A.P. State". Roads and Buildings Department. Government of Andhra Pradesh. Archived from the original on 28 మార్చి 2016. Retrieved 11 February 2016. {{cite web}}: Check date values in: |archive-date= (help)
  39. "IRR flyover to be completed by Jan. end". The Hindu. 11 December 2015. Archived from the original on 21 డిసెంబరు 2016. Retrieved 22 June 2016. {{cite news}}: Check date values in: |archive-date= (help)
  40. ೪೦.೦ ೪೦.೧ "Traffic and Transportation" (PDF). Vijayawada Municipal Corporation. p. 43. Archived from the original (PDF) on 20 డిసెంబరు 2016. Retrieved 18 April 2017. {{cite web}}: Check date values in: |archive-date= (help)
  41. Correspondent, Special. "Rush at PNBS, railway station peaks". The Hindu. Retrieved 8 May 2017.
  42. "Vijayawada City Bus System" (PDF). Vijayawada Municipal Corporatiom. p. 1. Archived from the original (PDF) on 15 సెప్టెంబరు 2017. Retrieved 12 May 2017. {{cite web}}: Check date values in: |archive-date= (help)
  43. "Vijayawada BRT System" (PDF). Vijayawada Municipal Corporation. Archived from the original (PDF) on 14 సెప్టెంబరు 2017. Retrieved 4 May 2017. {{cite web}}: Check date values in: |archive-date= (help)
  44. "Vijayawada bus station to be RTC headquarters". The Hans India (in ಇಂಗ್ಲಿಷ್). 20 August 2015. Archived from the original on 17 మే 2017. Retrieved 8 May 2017. {{cite news}}: Check date values in: |archive-date= (help)
  45. Correspondent, Special. "Festival rush chokes city bus and railway stations". The Hindu (in ಇಂಗ್ಲಿಷ್). Retrieved 12 May 2017.
  46. ೪೬.೦ ೪೬.೧ "Traffic Wing – VijayawadaPolice". vijayawadapolice.ap.gov.in. Archived from the original on 2017-07-08. Retrieved 8 May 2017.
  47. "All you need to know about Andhra Pradesh's new capital - Vijayawada". dna. 5 September 2014. Archived from the original on 2017-08-01. Retrieved 30 May 2017.
  48. Reporter, Staff. "'A quick and cheaper mode of transport'". The Hindu. Retrieved 27 May 2017.
  49. Correspondent, Special. "Vijayawada-Guntur-Tenali MEMU diverted". The Hindu. Retrieved 8 May 2017.
  50. Reporter, Staff. "Circular rail line for Amaravati approved". The Hindu. Archived from the original on 2019-07-13. Retrieved 8 May 2017.
  51. "Circular trains to connect capital towns with Amaravati - Times of India". The Times of India. Archived from the original on 17 మే 2017. Retrieved 8 May 2017. {{cite news}}: Check date values in: |archive-date= (help)
  52. "Metro rail to connect airport, Amaravati". The Hans India (in ಇಂಗ್ಲಿಷ್). Archived from the original on 14 సెప్టెంబరు 2017. Retrieved 27 May 2017. {{cite news}}: Check date values in: |archive-date= (help)
  53. "Statement showing Category-wise No.of stations" (PDF). Indian Railways. p. 2. Archived (PDF) from the original on 28 జనవరి 2016. Retrieved 12 May 2017. {{cite web}}: Check date values in: |archive-date= (help)
  54. "Trains are back at Vijayawada station - Times of India". The Times of India. Archived from the original on 7 నవంబరు 2017. Retrieved 8 May 2017. {{cite news}}: Check date values in: |archive-date= (help)
  55. "South Central Railway". South Central Railway. Archived from the original on 6 ఫిబ్రవరి 2011. Retrieved 8 May 2017. {{cite news}}: Check date values in: |archive-date= (help)
  56. ೫೬.೦ ೫೬.೧ "International status to boost air traffic from Vijayawada airport". The New Indian Express. 5 May 2017. Archived from the original on 8 మే 2017. Retrieved 8 May 2017. {{cite news}}: Check date values in: |archive-date= (help)
  57. "Domestic Passengers" (PDF). Airports Authority of India. p. 2. Archived from the original (PDF) on 28 ఏప్రిల్ 2017. Retrieved 24 May 2017. {{cite web}}: Check date values in: |archive-date= (help)
  58. "Domestic Aircraft Movements" (PDF). Airports Authority of India. p. 2. Archived from the original (PDF) on 28 ఏప్రిల్ 2017. Retrieved 24 May 2017. {{cite web}}: Check date values in: |archive-date= (help)
  59. "ವಿಜಯವಾಡಯಲ್ಲಿ సూపర్‌స్పెషాలిటీ హాస్పిటల్". సాక్షి. 2014-07-14. Archived from the original on 2019-08-15. Retrieved 2019-08-15.
  60. "AIR Vijayawada". allindiaradio.gov.in. Archived from the original on 3 జూన్ 2017. Retrieved 5 June 2017. {{cite web}}: Check date values in: |archive-date= (help)
  61. ೬೧.೦ ೬೧.೧ "AIR Vijayawada poised for digitisation by Dec end". The Hans India. Archived from the original on 14 సెప్టెంబరు 2017. Retrieved 13 June 2017. {{cite news}}: Check date values in: |archive-date= (help)
  62. "Prasara Bharati Annual Report 2010-11" (PDF). Prasara Bharati. p. 65. Archived (PDF) from the original on 2015-07-22. Retrieved 13 June 2017.
  63. Correspondent, Special. "Vividh Bharati on FM for Vijayawada listeners". The Hindu. Archived from the original on 30 ఆగస్టు 2014. Retrieved 13 June 2017. {{cite news}}: Check date values in: |archive-date= (help)
  64. ಜಾನ್ಸನ್ ಚೋರಗುಡಿ 2000, p. 16.
  65. ಜಾನ್ಸನ್ ಚೋರಗುಡಿ 2000, p. 17.
  66. Correspondent, Special. "'Visalandhra maintaining quality of information'". The Hindu. Archived from the original on 29 సెప్టెంబరు 2013. Retrieved 5 June 2017. {{cite news}}: Check date values in: |archive-date= (help)
  67. ಜಾನ್ಸನ್ ಚೋರಗುಡಿ 2000, p. 15.
  68. ಜಾನ್ಸನ್ ಚೋರಗುಡಿ 2000, p. 14.
  69. ಲಂಕ ವೆಂಕಟರಮಣ 2014, p. 29.
  70. ಜಾನ್ಸನ್ ಚೋರಗುಡಿ 2000, p. 31.
  71. ಲಂಕ ವೆಂಕಟರಮಣ 2014, p. 66.
  72. ಜಾನ್ಸನ್ ಚೋರಗುಡಿ 2000, p. 32.

ಆಧಾರ ಗ್ರಂಥಗಳು

ಬದಲಾಯಿಸಿ
  • ಜಾನ್ಸನ್ ಚೋರಗುಡಿ (2000), ಮನ ವಿಜಯವಾಡ, ವಿಜಯವಾಡ: ಕೃಷ್ಣವೇಣಿ ಪ್ರಕಾಶನ, retrieved 25 April 2019[ಶಾಶ್ವತವಾಗಿ ಮಡಿದ ಕೊಂಡಿ]
  • ಪಿ ರಘುನಾಥರಾವ್‌ (2010), ಆಧುನಿಕ ಆಂಧ್ರಪ್ರದೇಶ ಚರಿತ್ರ (6 ed.), ನವದೆಹಲಿ: ಸ್ಟರ್ಲಿಂಗ್‌ ಪಬ್ಲಿಶರ್ಸ್‌ ಪ್ರೈವೇಟ್‌ ಲಿಮಿಟೆಡ್

ಚಿತ್ರಗಳು

ಬದಲಾಯಿಸಿ

ಹೊರಗಿನ ಕೊಂಡಿಗಳು

ಬದಲಾಯಿಸಿ

  ವಿಕಿಟ್ರಾವೆಲ್ ನಲ್ಲಿ ವಿಜಯವಾಡ ಪ್ರವಾಸ ಕೈಪಿಡಿ (ಆಂಗ್ಲ)

ಟೆಂಪ್ಲೇಟು:ಆಂಧ್ರಪ್ರದೇಶ ಜಿಲ್ಲೆಗಳ ಮುಖ್ಯಪಟ್ಟಣಗಳು

ಟೆಂಪ್ಲೇಟು:ಎನ್‌ಟಿಆರ್ ಜಿಲ್ಲೆ ಮಂಡಲ ಕೇಂದ್ರಗಳು

"https://kn.wikipedia.org/w/index.php?title=ವಿಜಯವಾಡ&oldid=1178470" ಇಂದ ಪಡೆಯಲ್ಪಟ್ಟಿದೆ