ಲೋಕಸಭೆ
ಲೋಕಸಭೆ ಜನರ ಸದನ | |
---|---|
ಹದಿನೇಳನೇ ಲೋಕಸಭೆ | |
Type | |
Type | ಕೆಳಮನೆ of the ಭಾರತದ ಸಂಸತ್ |
Term limits | 5 ವರ್ಷಗಳು |
Leadership | |
ಸ್ಪೀಕರ್ | |
TBA | |
ಕಾರ್ಯದರ್ಶಿ | ಸ್ನೇಹಲತಾ ಶ್ರೀವಾಸ್ತವ since 1 ಡಿಸೆಂಬರ್ 2017[೧] |
ಆಡಳಿತ ಪಕ್ಷದ ನಾಯಕ | |
ವಿರೋಧ ಪಕ್ಷದ ನಾಯಕ | ಖಾಲಿ since 16 ಮೇ 2014 |
Structure | |
Seats | 545 (543 ಆಯ್ಕೆಯಾದವರು + 2 ನಾಮಕರಣಗೊಂಡವರು) |
Political groups | ಆಡಳಿತ ಪಕ್ಷ (340)
ಎನ್. ಡಿ. ಎ
ವಿರೋಧ ಪಕ್ಷ (205)
ಇತರರು (95) |
Elections | |
Last election | 11 April – 19 May 2019 |
Next election | May 2024 |
Meeting place | |
Lok Sabha, Sansad Bhavan, Sansad Marg, ನವ ದೆಹಲಿ, India - 110 001 | |
Website | |
loksabha | |
Constitution | |
ಭಾರತದ ಸಂವಿಧಾನ |
ಲೋಕಸಭೆ ಸಂಕ್ಷಿಪ್ತ ವಿವರ
ಬದಲಾಯಿಸಿ- ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ 552 ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ 530 ಸದಸ್ಯರು ಚುನಾಯಿತರಾಗುತ್ತಾರೆ. 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
- ಲೋಕಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು. ಐದು ವರ್ಷಗಳ ನಂತರ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಚುನಾವಣೆಗಳನ್ನು ಮುಂದೂಡಬಹುದು. ಹಾಗೆಯೇ ಅವಧಿ ಮುಗಿಯುವ ಮುನ್ನ ಸರ್ಕಾರ ಬಹುಮತ ಕಳೆದುಕೊಂಡಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯಬೇಕಾಗಬಹುದು. ಪ್ರಸ್ಥುತ ಕಾರ್ಯ ನಿರ್ವಹಿಸುತ್ತಿರುವ 16 ನೆಯ ಲೋಕಸಭೆ ಮೇ, 2014 ರಲ್ಲಿ ಸೇರಿತು.
- ಪ್ರತಿ ರಾಜ್ಯದಿಂದ ಇರುವ ಲೋಕಸಭಾ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈಗಿನ ಹಂಚಿಕೆ ಹೀಗಿದೆ (545 ಸದಸ್ಯರು: 543 ಚುನಾಯಿತ + 2 ನೇಮಿತ):
ಭಾರತದ ರಾಜ್ಯವಾರು ಲೋಕಸಭಾ ಕ್ಷೇತ್ರಗಳು
ಬದಲಾಯಿಸಿ- 2014 (Indian general election)ರ ಚುನಾವಣೆ ಫಲಿತಾಂಶ ಕೆಳಗೆ ಕೊಟ್ಟಿದೆ
- ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ . ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ.
- ರಾಜ್ಯಗಳು:
ಕ್ರಮ
ಸಂಖ್ಯೆ |
ರಾಜ್ಯಗಳು | ನಿಗದಿತ ಲೋಕಸಭಾಸ್ಥಾನಗಳು |
---|---|---|
1 | ಆಂಧ್ರ ಪ್ರದೇಶ | 25 |
2 | ತೆಲಂಗಾಣ | 17 |
3 | ಅರುಣಾಚಲ ಪ್ರದೇಶ | 2 |
4 | ಅಸ್ಸಾಮ್ | 14 |
5 | ಬಿಹಾರ | 40 |
6 | ಚತ್ತೀಸ್‌ಗಢ | 11 |
7 | ಗೋವ | 2 |
8 | ಗುಜರಾತ್ | 26 |
9 | ಹರ್ಯಾಣಾ | 10 |
10 | ಹಿಮಾಚಲ ಪ್ರದೇಶ | 4 |
11 | ಜಾರ್ಖಂಡ್ | 14 |
12 | ಕರ್ನಾಟಕ | 28 |
13 | ಕೇರಳ | 20 |
14 | ಮಧ್ಯ ಪ್ರದೇಶ | 29 |
15 | ಮಹಾರಾಷ್ಟ್ರ | 48 |
16 | ಮಣಿಪುರ | 2 |
17 | ಮೇಘಾಲಯ | 2 |
18 | ಮಿಜೋರಮ್ | 1 |
19 | ನಾಗಾಲ್ಯಾಂಡ್ | 1 |
20 | ಒರಿಸ್ಸಾ | 21 |
21 | ಪಂಜಾಬ್ | 13 |
22 | ರಾಜಸ್ಥಾನ | 25 |
23 | ಸಿಕ್ಕಿಮ್ | 1 |
24 | ತಮಿಳುನಾಡು | 39 |
25 | ತ್ರಿಪುರಾ | 2 |
26 | ಉತ್ತರ ಪ್ರದೇಶ | 80 |
27 | ಉತ್ತರಾಂಚಲ | 5 |
28 | ಪಶ್ಚಿಮ ಬಂಗಾಳ | 42 |
ಕೇಂದ್ರಾಡಳಿತ ಪ್ರದೇಶಗಳು | ||
1 | ಅಂಡಮಾನ್ ಮತ್ತು ನಿಕೋಬಾರ್ | 1 |
2 | ಚಂಡೀಗಢ | 1 |
3 | ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು | 2 |
4 | ದೆಹಲಿ | 7 |
5 | ಲಕ್ಷದ್ವೀಪ | 1 |
7 | ಪಾಂಡಿಚೆರಿ | 1 |
8 | ಜಮ್ಮು ಮತ್ತು ಕಾಶ್ಮೀರ | 4 |
9 | ಲಡಾಖ್ | 1 |
ಕೆಲಸ
ಬದಲಾಯಿಸಿಲೋಕಸಭೆಯ ಸದಸ್ಯರು ಒಬ್ಬರನ್ನು "ಸಭಾಧ್ಯಕ್ಷ(ಸ್ಪೀಕರ್) ಅಥವಾ ಸಭಾಪತಿ" ಆಗಿ ಚುನಾಯಿಸುತ್ತಾರೆ. ಲೋಕಸಭೆಯ ಕಾರ್ಯ ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸಭಾಧ್ಯಕ್ಷ(ಸ್ಪೀಕರ್) ರ ಮುಖ್ಯ ಕೆಲಸ. ಸಭಾಧ್ಯಕ್ಷ(ಸ್ಪೀಕರ್) ಅವರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಉಪಸಭಾಧ್ಯಕ್ಷ(ಡೆಪ್ಯುಟಿ ಸ್ಪೀಕರ್)ರು ನಿರ್ವಹಿಸುತ್ತಾರೆ. ಇವರಲ್ಲದೇ ಇವರಿಬ್ಬರ ಅನುಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳನ್ನು ನಿರ್ವಹಿಸಲು ೧೦ ಹಿರಿಯ ಸದಸ್ಯರನ್ನು ಸಭಾಧ್ಯಕ್ಷರು ನೇಮಕ ಮಾಡುತ್ತಾರೆ. ಮೀರಾ ಕುಮಾರ್ ರವರು ಲೋಕ ಸಭೆಯ ಮೊದಲ ಮಹಿಳಾ ಸಭಾದ್ಯಕ್ಷರು.
ಸಾಮಾನ್ಯ ದಿನಗಳಲ್ಲಿ ಲೋಕಸಭೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ಒಂದರವರೆಗೆ, ಮತ್ತೆ ಮಧ್ಯಾಹ್ನ ಎರಡರಿಂದ ಸಂಜೆ ಆರರ ವರೆಗೆ ಸೇರುತ್ತದೆ. ಮೊದಲ ಒಂದು ಘಂಟೆ ಪ್ರಶ್ನೋತ್ತರಗಳಿಗೆ ಮೀಸಲಾಗಿಡಲಾಗಿರುತ್ತದೆ.
ಭಾರತ ಸರ್ಕಾರದ ಶಾಸಕಾಂಗದ ಇನ್ನೊಂದು ಸಭೆ ರಾಜ್ಯಸಭೆ. ಯಾವುದೇ ಮಸೂದೆಗೆ ಲೋಕಸಭೆ ಒಪ್ಪಿಗೆ ಇತ್ತ ನಂತರ ಅದು ರಾಜ್ಯಸಭೆಗೆ ಹೋಗುತ್ತದೆ. ರಾಜ್ಯಸಭೆಯೂ ಒಪ್ಪಿದ ನಂತರ ಈ ಮಸೂದೆ ಕಾಯಿದೆಯಾಗುತ್ತದೆ. ಹಣಕಾಸಿಗೆ ಸಂಬಂಧಪಟ್ಟ ಮಸೂದೆಗಳ ವಿಷಯದಲ್ಲಿ ಮಾತ್ರ ರಾಜ್ಯಸಭೆಯ ಮಂಜೂರಾತಿ ಅಗತ್ಯವಿಲ್ಲ.
ಈವರೆಗಿನ ಲೋಕಸಭಾ ಚುನಾವಣಾ ವಿವರಗಳು
ಬದಲಾಯಿಸಿಲೋಕಸಭೆಯ ಸದಸ್ಯರನ್ನು ನಿರ್ದಿಷ್ಟ ಚುನಾವಣೆಯಲ್ಲಿ ಎಲ್ಲಾ ವಯಸ್ಕ ಮತದಾರರು ಚುನಾಯಿಸುತ್ತಾರೆ. ಲೋಕಸಭೆ ವಿಸರ್ಜನೆ ಆಗುವವರೆಗೆ (ಸಾಮಾನ್ಯವಾಗಿ ಐದು ವರ್ಷಗಳ ಅವಧಿ) ಈ ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇರುತ್ತಾರೆ. ನವದೆಹಲಿಯ ಸಂಸತ್ ಭವನದಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಗೊಂಡ ಸದಸ್ಯರು ಸಮಾಲೋಚನೆ ನಡೆಸಿ ಕಾನೂನುಗಳನ್ನು ರೂಪಿಸುತ್ತಾರೆ.[೨]
ಲೋಕಸಭಾ ಚುನಾವಣಾ ಇತಿಹಾಸ
ಬದಲಾಯಿಸಿ- ಬಣ್ಣಗಳ ಸೂಚಿ
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳ಼ಗಂ
ಭಾರತೀಯ ಜನಸಂಘ
ಭಾರತೀಯ ಜನತಾ ಪಕ್ಷ
ಭಾರತೀಯ ಕಮ್ಯುನಿಸ್ಟ್ ಪಕ್ಷ
ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)
ದ್ರಾವಿಡ ಮುನ್ನೇಟ್ರ ಕಳ಼ಗಂ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ)
ಜನತಾ ಪಕ್ಷ
ಜನತಾ ಪಕ್ಷ (ಜಾತ್ಯತೀತ)
(ಜಾತ್ಯಾತೀತ ಜನತಾದಳ ಅಲ್ಲ)
ಪ್ರಜಾ ಸೋಷಿಯಲಿಸ್ಟ್ ಪಕ್ಷ
ಸಮಾಜವಾದಿ ಪಕ್ಷ
ಸೋಷಿಯಲಿಸ್ಟ್ ಪಕ್ಷ
ಸ್ವತಂತ್ರ ಪಾರ್ಟಿ
ತೆಲುಗುದೇಶಂ ಪಕ್ಷ
ಮೊದಲ ಸ್ಥಾನ ಪಡೆದ ಪಕ್ಷ | ಎರಡನೇ ಸ್ಥಾನ ಪಡೆದ ಪಕ್ಷ | ಮೂರನೇ ಸ್ಥಾನ ಪಡೆದ ಪಕ್ಷ | |||||||||
---|---|---|---|---|---|---|---|---|---|---|---|
ವರ್ಷ | ಚುನಾವಣೆ ಲೋಕಸಭೆಯ ಸಂಖ್ಯೆ |
ಒಟ್ಟು ಕ್ಷೇತ್ರಗಳು | ಪಕ್ಷ | ಸ್ಥಾನಗಳು | ಶೇಕಡಾವಾರು ಮತಗಳು | ಪಕ್ಷ | ಸ್ಥಾನಗಳು | ಶೇಕಡಾವಾರು ಮತಗಳು | ಪಕ್ಷ | ಸ್ಥಾನಗಳು | ಶೇಕಡಾವಾರು ಮತಗಳು |
1951–52[೩][೪][೫] | ಮೊದಲನೇ ಲೋಕಸಭೆ | 489 | ಭಾ.ರಾ.ಕಾಂ | 364 | 45% | ಸಿ.ಪಿ.ಐ | 16 | 3.29% | ಸೋ.ಪಾ | 12 | 10.59% |
1957[೬] | ಎರಡನೇ ಲೋಕಸಭೆ | 494 | ಭಾ.ರಾ.ಕಾಂ | 371 | 47.78% | ಸಿ.ಪಿ.ಐ | 27 | 8.92% | ಪ್ರ.ಸೋ.ಪಾ | 19 | 10.41% |
1962 | ಮೂರನೇ ಲೋಕಸಭೆ | 494 | ಭಾ.ರಾ.ಕಾಂ | 361 | 44.72% | ಸಿ.ಪಿ.ಐ | 29 | 9.94% | ಸ್ವ.ಪಾ | 18 | 7.89% |
1967 | ನಾಲ್ಕನೇ ಲೋಕಸಭೆ | 520 | ಭಾ.ರಾ.ಕಾಂ | 283 | 40.78% | ಸ್ವ.ಪಾ | 44 | 8.67% | ಭಾ.ಜ.ಸಂ | 35 | 9.31% |
1971 | ಐದನೇ ಲೋಕಸಭೆ | 518 | ಭಾ.ರಾ.ಕಾಂ | 352 | 43.68% | ಸಿ.ಪಿ.ಎಂ | 25 | 5.12% | ಸಿ.ಪಿ.ಐ | 23 | 4.73% |
1977 | ಆರನೇ ಲೋಕಸಭೆ | 542 | ಜ.ಪಾ | 298 | 43.17% | ಭಾ.ರಾ.ಕಾಂ | 153 | 34.52% | ಸಿ.ಪಿ.ಎಂ | 22 | 4.29% |
1980 | ಏಳನೇ ಲೋಕಸಭೆ | 529 ( 542* ) | ಭಾ.ರಾ.ಕಾಂ (ಇಂ) | 351 | 42.69% | ಜ.ಪಾ (ಜಾ) | 41 | 9.39% | ಸಿ.ಪಿ.ಎಂ | 37 | 6.24% |
1984 | ಎಂಟನೇ ಲೋಕಸಭೆ | 514 | ಭಾ.ರಾ.ಕಾಂ | 404 | 49.10% | ತೆ.ದೇ.ಪಾ | 30 | 4.31% | ಸಿ.ಪಿ.ಎಂ | 22 | 5.87% |
1989 | ಒಂಭತ್ತನೇ ಲೋಕಸಭೆ | 529 | ಭಾ.ರಾ.ಕಾಂ | 195 | 39.53% | ಜ.ದ | 142 | 17.79% | ಬಿ.ಜೆ.ಪಿ | 85 | 11.36% |
1991 | ಹತ್ತನೇ ಲೋಕಸಭೆ | 521 | ಭಾ.ರಾ.ಕಾಂ | 244 | 35.66% | ಬಿ.ಜೆ.ಪಿ | 120 | 20.11% | ಜ.ದ | 59 | 11.84% |
1996 | ಹನ್ನೊಂದನೇ ಲೋಕಸಭೆ | 543 | ಬಿ.ಜೆ.ಪಿ | 161 | 20.29% | ಭಾ.ರಾ.ಕಾಂ | 140 | 28.80% | ಜ.ದ | 46 | 23.45% |
1998 | ಹನ್ನೆರಡನೇ ಲೋಕಸಭೆ | 545 | ಬಿ.ಜೆ.ಪಿ | 182 | 25.59% | ಭಾ.ರಾ.ಕಾಂ | 141 | 25.82% | ಸಿ.ಪಿ.ಎಂ | 32 | 5.16% |
1999 | ಹದಿಮೂರನೇ ಲೋಕಸಭೆ | 545 | ಬಿ.ಜೆ.ಪಿ | 182 | 23.75% | ಭಾ.ರಾ.ಕಾಂ | 114 | 28.30% | ಸಿ.ಪಿ.ಎಂ | 33 | 5.40% |
2004 | ಹದಿನಾಲ್ಕನೇ ಲೋಕಸಭೆ | 543 | ಭಾ.ರಾ.ಕಾಂ | 145 | 26.53% | ಬಿ.ಜೆ.ಪಿ | 138 | 22.16% | ಸಿ.ಪಿ.ಎಂ | 43 | 5.66% |
2009 | ಹದಿನೈದನೇ ಲೋಕಸಭೆ | 545 | ಭಾ.ರಾ.ಕಾಂ | 206 | 28.55% | ಬಿ.ಜೆ.ಪಿ | 116 | 18.80% | ಸ.ಪ | 23 | 3.23% |
2014 | ಹದಿನಾರನೇ ಲೋಕಸಭೆ | 545 | ಬಿ.ಜೆ.ಪಿ | 282 | 31.34% | ಭಾ.ರಾ.ಕಾಂ | 44 | 19.52% | ಎ.ಐ.ಎ.ಡಿ.ಎಂ.ಕೆ | 37 | 3.31% |
2019 | ಹದಿನೇಳನೇ ಲೋಕಸಭೆ | 543 | ಬಿ.ಜೆ.ಪಿ | 303 | 37.4%[೭] | ಭಾ.ರಾ.ಕಾಂ | 52 | 19.50%[೮] | ಡಿ.ಎಂ.ಕೆ | 24 | 4.24% |
* : 12 seats in Assam and 1 in Meghalaya did not vote.[೯]
ಭಾರತದ ೧೬ ನೆಯ ಲೋಕಸಭೆ ವಿವರ
ಬದಲಾಯಿಸಿ- ರಾಜ್ಯಗಳಲ್ಲಿ ಪಡೆದ ಸ್ಥಾನಗಳು;->೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ
- ಮೇ 16, 2014ರಂದು 16ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು
- 2014 ರ ಭಾರತದ ಸಾರ್ವತ್ರಿಕ ಚುನಾವಣೆ 2014 ರ ಏಪ್ರಿಲ್ ಮತ್ತು ಮೇ ಯಲ್ಲಿ ನಡೆದು ಮೇ 16, 2014ರಂದು ಎಣಿಕೆಯಾಗಿ ,ಭಾರತೀಯ ಜನತಾ ಪಕ್ಷವು ಬಹಮತ ಪಡೆದಿದ್ದು, ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಆ ಹುದ್ದೆಯನ್ನು ತ್ಯಜಿಸಿ ದೆಹಲಿಯಲ್ಲಿ ಮೇ 26, 2014,ರಂದು ಮೊದಲೇ ನಿರ್ಧರಿಸಿದಂತೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೪೫ ಜನ ಮಂತ್ರಿಗಳು ಅವರ ಜೊತೆ ಪ್ರಮಾಣ ವಚನ ಸ್ವೀಕರಿಸಿದರು.
- 2019 ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗಳ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಲೋಕಸಭೆಯ ಅವಧಿ 3 ಜೂನ್ 2019 ರಂದು ಕೊನೆಗೊಳ್ಳುತ್ತದೆ.[೧೦]
2014 -2019 (ಮಾರ್ಚಿ) ಅಂತಿಮ ಬಲಾಬಲ
ಬದಲಾಯಿಸಿಎನ್ಡಿಎ
|
|
|
|
ಈವರೆಗಿನ ಲೋಕಸಭೆಗಳು ಮತ್ತು ಲೋಕಸಭಾ ಚುನಾವಣೆಗಳ ಪಟ್ಟಿ
ಬದಲಾಯಿಸಿಲೋಕಸಭೆಯ ಸಂಖ್ಯೆ | ಚುನಾವಣೆಯ ವಿವರ |
---|---|
ಮೊದಲನೇ ಲೋಕಸಭೆ | 1951–52 Indian general election |
ಎರಡನೇ ಲೋಕಸಭೆ | 1957 Indian general election |
ಮೂರನೇ ಲೋಕಸಭೆ | 1962 Indian general election |
ನಾಲ್ಕನೇ ಲೋಕಸಭೆ | 1967 Indian general election |
ಐದನೇ ಲೋಕಸಭೆ | 1971 Indian general election |
ಆರನೇ ಲೋಕಸಭೆ | 1977 Indian general election |
ಏಳನೇ ಲೋಕಸಭೆ | 1980 Indian general election |
ಎಂಟನೇ ಲೋಕಸಭೆ | 1984 Indian general election |
ಒಂಭತ್ತನೇ ಲೋಕಸಭೆ | 1989 Indian general election |
ಹತ್ತನೇ ಲೋಕಸಭೆ | 1991 Indian general election |
ಹನ್ನೊಂದನೇ ಲೋಕಸಭೆ | 1996 Indian general election |
ಹನ್ನೆರಡನೇ ಲೋಕಸಭೆ | 1998 Indian general election |
ಹದಿಮೂರನೇ ಲೋಕಸಭೆ | 1999 Indian general election |
ಹದಿನಾಲ್ಕನೇ ಲೋಕಸಭೆ | 2004 Indian general election |
ಹದಿನೈದನೇ ಲೋಕಸಭೆ | 2009 Indian general election |
ಹದಿನಾರನೇ ಲೋಕಸಭೆ | 2014 Indian general election |
ಹದಿನೇಳನೇ ಲೋಕಸಭೆ | 2019 Indian general election |
ನೋಡಿ
ಬದಲಾಯಿಸಿ- ೧೫ನೆಯ ಲೋಕಸಭೆ
- ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪
- ರಾಜ್ಯಸಭೆ
- ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ
- ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಮತ್ತು
- ಭಾರತ
- ಭಾರತದ ಮುಖ್ಯಮಂತ್ರಿಗಳು
ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ
ಬದಲಾಯಿಸಿಚುನಾವಣೆ ೨೦೧೯ ಸಮೀಕ್ಷೆ
ಬದಲಾಯಿಸಿಪರಿವಿಡಿ
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿ- ಲೋಕಸಭೆ
- http://loksabha.nic.in
- ಲೋಕಸಭೆಯ ಅಧಿಕೃತ ತಾಣ
- ೧೯೫೨ ರಿಂದ-೧೯೯೬ ರ ವರೆಗಿನ ಚುನಾವಣೆ [೧]
ಉಲ್ಲೇಖಗಳು
ಬದಲಾಯಿಸಿ- Jump up ^ "Bioprofile of Meira Kumar". Fifteenth Lok Sabha Member's Bioprofile. Retrieved 19 August 2011.
- Jump up ^ "Bioprofile of Kariya Munda". Fifteenth Lok Sabha Member's Bioprofile. Retrieved 19 August 2011.
- Jump up ^ "Bioprofile of Pranab Mukherjee". Fifteenth Lok Sabha Member's Bioprofile. Retrieved 19 August 2011.
- Jump up ^ "Bioprofile of Sushma Swaraj". Fifteenth Lok Sabha Member's Bioprofile. Retrieved 19 August 2011.
- Jump up ^ "Lok Sabha". parliamentofindia.nic.in. Retrieved 19 August 2011.
- ^ Jump up to: a b Parliament of India: Lok Sabha
ಉಲ್ಲೇಖಗಳು
ಬದಲಾಯಿಸಿ- ↑ "Snehlata Shrivastava appointed Lok Sabha Secretary General". The Economic Times. 28 November 2017. Retrieved 21 June 2019.
- ↑ "Terms of the Houses". Election Commission of India. Retrieved 19 February 2020.
- ↑ "Lok Sabha Results 1951-52". Election Commission of India. Archived from the original on 17 ಅಕ್ಟೋಬರ್ 2016. Retrieved 23 November 2014.
- ↑ "Statistical Report on Lok Sabha Elections 1951-52" (PDF). Election Commission of India. Archived from the original (PDF) on 11 January 2012. Retrieved 23 November 2014.
- ↑ "Lok Sabha Elections Stats Summary 1951-52" (PDF). Election Commission of India. Archived from the original (PDF) on 5 March 2016. Retrieved 23 November 2014.
- ↑ "Statistical Report on Lok Sabha Elections 1957". Election Commission of India. Archived from the original on 2017-05-11. Retrieved 2021-08-31.
- ↑ "Here's how BJP earned the massive mandate: Explained in numbers". The Economic Times. 28 May 2019. Retrieved 28 May 2019.
- ↑ Ramani, Srinivasan (23 May 2019). "Analysis: Highest-ever national vote share for the BJP". The Hindu (in Indian English).
- ↑ "Seventh Lok Sabha elections (1980)". Indian Express. Indian Express. 14 March 2014. Retrieved 18 October 2014.
- ↑ Lok Sabha Elections: EC to Announce Schedule in 1st Week of March; THE QUINTUPDATED: 18.01.2019