ಕರ್ನಾಟಕದಲ್ಲಿ ಏಪ್ರಿಲ್ 17ರಂದು ಒಂದೇ ಹಂತದಲ್ಲಿ ಎಲ್ಲ 28 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಇಡೀ ದೇಶದ ಮತ ಎಣಿಕೆ ಮೇ 16ರಂದು ಒಂದೇ ದಿನ ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗ ಇದೀಗ ದಿಲ್ಲಿಯಲ್ಲಿ ನಡೆಯುತ್ತಿರುವ ಪತ್ರಿಕಾಗೋಷ್ಠಿಯಲ್ಲಿ ಈ ದಿನಾಂಕಗಳನ್ನು ಪ್ರಕಟಿಸಿದೆ.ದಿಲ್ಲಿಯ ವಿಜ್ಞಾನ ಭವನದಲ್ಲಿ ಬೆಳಗ್ಗೆ 10.30ಕ್ಕೆ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್, ಆಯುಕ್ತರಾದ ಎಚ್.ಎಸ್. ಬ್ರಹ್ಮ ಮತ್ತು ಎಸ್.ಎನ್.ಎ. ಝೈದಿ ಅವರು ಸುದ್ದಿಗೋಷ್ಟಿ ನಡೆಸಿ ಎಲ್ಲ ವಿವರಗಳನ್ನು ಪ್ರಕಟಿಸಿದ್ದಾರೆ.
ಪ್ರಮುಖ ಅಂಶಗಳು
ಮೇ 16ರಂದು ಒಂದೇ ದಿನ ಮತ ಎಣಿಕೆ.
ಮೇ 31ರೊಳಗೆ ಚುನಾವಣಾ ಪ್ರಕ್ರಿಯೆ ಸಂಪೂರ್ಣ, ಹೊಸ ಲೋಕಸಭೆ ರಚನೆ
ಮತದಾನದ ವೇಳೆ ಮತದಾರರಿಗೆ ನೋಟಾ (ನನ್ನ ಮತ ಯಾರಿಗೂ ಇಲ್ಲ) ಎಂಬ ಆಯ್ಕೆ ಲಭ್ಯ.
ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ
ದೇಶಾದ್ಯಂತ 9.30 ಲಕ್ಷ ಮತದಾನ ಕೇಂದ್ರಗಳು, ಕಳೆದ ಬಾರಿಗಿಂತ ಶೇ.12 ಹೆಚ್ಚು
ಒಟ್ಟು ಮತದಾರರು 81.4 ಕೋಟಿ. ಕಳೆದ ಮಹಾ ಚುನಾವಣೆಗೆ ಹೋಲಿಸಿದರೆ ಸುಮಾರು 10 ಕೋಟಿ ಏರಿಕೆ.
ತಮಿಳುನಾಡಿನಲ್ಲಿ ಏಪ್ರಿಲ್ 24ರಂದು ಒಂದೇ ದಿನ ಚುನಾವಣೆ
ಮಹಾರಾಷ್ಟ್ರದಲ್ಲಿ 3 ದಿನ (ಏಪ್ರಿಲ್ 10, 17 ಹಾಗೂ 24)
ಗುಜರಾತ್‌ನಲ್ಲಿ ಒಂದೇ ದಿನ, ಏಪ್ರಿಲ್ 30ರಂದು ಮತದಾನ
ಬಿಹಾರದಲ್ಲಿ 6 ದಿನ (ಏಪ್ರಿಲ್‌ನ 10, 17, 24, 30 ಹಾಗೂ ಮೇ ತಿಂಗಳಲ್ಲಿ 7 ಹಾಗೂ 12ರಂದು)
ದಿಲ್ಲಿ, ಹರ್ಯಾಣದಲ್ಲಿ ಏಪ್ರಿಲ್ 10ರಂದು ಒಂದು ದಿನ ಮತದಾನ
ರಾಜಸ್ಥಾನದಲ್ಲಿ ಏಪ್ರಿಲ್ 17 ಹಾಗೂ ಏ.24ರಂದು
ಜಾರ್ಖಂಡ್‌ನಲ್ಲಿ 3 ಹಂತ - ಏ.10, 17 ಹಾಗೂ 24
ಚುನಾವಣೋತ್ತರ ಸಮೀಕ್ಷೆ ಹಾಗೂ ಜನಮತ ಸಮೀಕ್ಷೆ ನಿಷೇಧಿಸಲು ಚುನಾವಣಾ ಆಯೋಗ ಶಿಫಾರಸು ಮಾಡಿದೆ. ಚುನಾವಣೋತ್ತರ ಸಮೀಕ್ಷೆ ಮಾತ್ರ ನಿಷೇಧಿಸಲಾಗಿದೆ. (ಸುದ್ದಿ-ಮಾದ್ಯಮಗಳಿಂದ)[೬]
Sun, 03/30/2014 - 15:07ನವದೆಹಲಿ (ಪಿಟಿಐ); ಏಪ್ರಿಲ್ 7ರಿಂದ ಆರಂಭವಾಗುವ 9 ಹಂತದ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
543 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ 81.4 ಕೋಟಿ ಜನರು ಮತ ಚಲಾಯಿಸಲಿದ್ದಾರೆ. ಭದ್ರತೆಗೆ ಕೇಂದ್ರ ಗೃಹ ಇಲಾಖೆಯು ಸೇನಾಪಡೆ ಯೋಧರು, ಅರೆ ಸೇನಾಪಡೆ ಯೋಧರು, ಸ್ಥಳೀಯ ಪೊಲೀಸರು, ಗೃಹರಕ್ಷಕದಳ ಸಿಬ್ಬಂದಿಗಳು ಸೇರಿದಂತೆ ಸುಮಾರು 2 ಲಕ್ಷ ಭದ್ರತಾ ಸಿಬ್ಬಂದಿಗಳನ್ನು ಒದಗಿಸಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಕೆಲಸಕ್ಕೆ ಸಾವಿರಾರು ವಾಹನಗಳು, 12 ಹೆಲಿಕಾಫ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಭಾರಿ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಬಿಗಿ ಭದ್ರತೆ ಕಲ್ಪಿಸಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.
ಚುನಾವಣಾ ವೆಚ್ಚದ ವಿವರ :ಚುನಾವಣಾಆಯೋಗ ದಿ ೧೩-೫-೨೦೧೪ರಲ್ಲಿ ಸುದ್ದಿ ಮಾದ್ಯಮಕ್ಕೆ ಬಿಡುಗಡೆ ಮಾಡಿದಂತೆ :-
ಇಸವಿ -------ಕೋಟಿ ರೂಗಳಲ್ಲಿ
2014----3426.00
2009------1483.00
2004------1113.88
1999------0947.68
1998------0666.22
1996-----0597.34
1991-92–0359.10
1989------0154.22
1984-85–0081.51
1980------0054.77
1977------0023.04
1971------0011.61
1967------0010.80
1962------0005.90
1952------0010.45 ಮೊದಲ ಚುನಾವಣೆಗೆ ಸಿದ್ಧತೆಗಾಗಿ ಹೆಚ್ಚು .
ರೂಪಾಯಿ ಅಪಮೌಲ್ಯವನ್ನು ಗಣನೆಗೆ ತೆಗೆದುಕೊಂಡಿಲ್ಲ.
ಜನಸಂಖ್ಯೆ ಏರಿಕೆ ಮತ್ತು ಮತದಾರರ ಸಂಖ್ಯೆ ಯ ಏರಿಕೆಗಳನ್ನು ಗಮನದಲ್ಲಿಟ್ಟತಕೊಳ್ಲಬೇಕು.
ರೂಪಾಯಿ ಅಪಮೌಲ್ಯ ಸುಮಾರು ೨೦೦ರಿಂದ ೩೫೦ ರಷ್ಟು ಮಟ್ಟಿಗೆ ಆಗಿದೆ ಉದಾಹರಣೆಗೆ- ಚಿನ್ನ *1952/೧೯೫೧ ರಲ್ಲಿ ಒಂದು ಗ್ರಾಮಿಗೆ ಕೇವಲ-ಸುಮಾರು ೯ ರೂ. ಇತ್ತು (೧೯೫೦-೯೯ರೂ.-೧ ತೊಲ =೧೧.೭ ಗ್ರಾಂ)ಈಗ ಅದು ೨೯೫೦ ರೂ. ೧(1)ಗ್ರಾಮಿಗೆ.ಸುಮಾರು ೩೩೦ರಷ್ಟು ಅಪಮೌಲ್ಯ. ಅಕ್ಕಿ ಸುಮಾರು ೧(1)ಕಜಿಗೆ ೩೦ ಪೈಸೆ ಇತ್ತು ಈಗ ೩೫ ರೂಪಾ ಇದೆ -೩೦೦ ರಷ್ಟು ಅಪಮೌಲ್ಯ.
ಜನಸಂಖ್ಯೆಯ ಪ್ರಮಾಣ 362,088,090 ಇತ್ತು ; ಶೇ.7೦ ಮತದಾರರು ಎಂದರೆ ಸುಮಾರು, ೨೬ (26)ಕೋಟಿ ಮತದಾರರು. ೨೦೧೪/2014-ರಲ್ಲಿ ಮತದಾರರು-81ಕೋಟಿ (2014–81,45,91,184ಜನ)ಸುಮಾರು ೩ (3)ರಷ್ಟು ಹೆಚ್ಚು .(ಆ ಲೆಕ್ಕದಲ್ಲಿ 1962-0005.90ẋ3ẋ1೦೦೦=5 ಸಾವಿರ ಕೋಟಿ ಆದಂತೆ ; ಈಗಲೇ ಕಡಿಮೆ ವೆಚ್ಚವಾಗಿದೆ.)(ಚ)
2019 ರಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನೆಡೆಯಲ್ಲಿದ್ದು ಅಕ್ಟೋಬರ್ 2018 ರಲ್ಲಿ ಪಕ್ಷಗಳ ಬಲ ಈ ರೀತಿ ಇದೆ. ಭಾರತೀಯ ಜನತಾ ಪಕ್ಷ 274 (271 ಚುನಾಯಿತ + 2 ನಾಮನಿರ್ದೇಶನ (ಬಿಜೆಪಿ 273) + 1 ಸ್ಪೀಕರ್ + ಮತ್ತು ಮೈತ್ರಿ ಕೂಟದ ಸದಸ್ಯರು 39 ಒಟ್ಟು 313 ಸದಸ್ಯರು ಎನ್ಡಿಎ ಮೈತ್ರಿಕೂಟದಲ್ಲಿದ್ದಾರೆ. ೨೦೧೮ ಅಕ್ಟೋಬರ್ ೧ ರಲ್ಲಿ 13 ಸ್ಥಾನಗಳು ಖಾಲಿ ಇದ್ದವು. (ಅವು - ಅನಂತ್ನಾಗ್, ಬಳ್ಳಾರಿ, ಶಿವಮೊಗ್ಗ, ಮಂಡ್ಯ, ಒಂಗೊಲೆ, ಕಡಪಾ, ನೆಲ್ಲೂರು, ತಿರುಪತಿ, ರಾಜಂಪೇಟೆ, ಕೊಟ್ಟಾಯಂ, ಕೇಂದ್ರಪಾರಾ, ತುರಾ ಮತ್ತು ಕತಿಹರ್ ಕ್ಷೇತ್ರಗಳು).[೧೩] ಇತರೆ ಪಕ್ಷಗಳು ಈ ರೀತಿ ಇವೆ: ಕಾಂಗ್ರೆಸ್- ಐಎನ್‍ಸಿ 48, ಎಐಎಡಿಎಂಕೆ 37, ಎಐಟಿಸಿ 34, ಬಿಜೆಡಿ 19, ಎಸ್ಎಸ್ 18, ಟಿಡಿಪಿ 16, ಟಿಆರ್ಎಸ್ 11, ಸಿಪಿಐ (ಎಮ್) 9, ಎಸ್‍ಪಿ 7, ಎನ್‍ಎಸ್‍ಪಿ 7, ಎಲ್ಜೆಎಸ್ಪಿ 6, ವೈಎಸ್ಆರ್ ಕಾಂಗ್ರೆಸ್ ಪಾರ್ಟಿ 4, ಆರ್ಜೆಡಿ 4, ಎಸ್ಎಡಿ 4, ಎಎಪಿ 4, ಎಐಯುಡಿಎಫ್ 3, ಇಂಡಿಯಾ 3.[೧೪]
ವಿದೇಶಿ ಬ್ರೋಕರ್ಗಳು ಮೋದಿ ಅವರ 2019 ರಲ್ಲಿ ಆಗಬಹುದಾದ ಮತದಾನ ಗಳಿಕೆಯ ಗಣತಿಯನ್ನು ಮಾಡಿದ್ದಾರೆ: ಅವರು ಹೇಳಿರುವುದು(ಆಗಸ್ಟ್ 28, 2018,ETMarkets.com) 2019 ರ ಚುನಾವಣೆಯಲ್ಲಿ ಬಿಜೆಪಿಗಯು 10-80 ಸ್ಥಾನಗಳನ್ನು ಕಳೆದುಕೊಳ್ಳುವವುದೆಂದು ಸಿಎಲ್ಎಸ್ಎ ಬ್ರೋಕರೇಜ್ ಅಂದಾಜು. ಅದು 2014 ರಲ್ಲಿ 282 ಸ್ಥಾನ ಗೆದ್ದಿದೆ. ಜುಲೈನಲ್ಲಿ 'ನೊಮುರಾ ಭಾರತ' ಎನ್‍ಡಿಎಯು 181-308 ಸೀಟುಗಳ ವ್ಯಾಪಕ ಶ್ರೇಣಿಯ ಬಿಜೆಪಿ / ಎನ್ಡಿಎಯ ಗೆಲುವು ಮುನ್ನೋಟದ ಒಟ್ಟು ಸೀಟುಗಳ ಅಂದಾಜನ್ನು ಹೊಂದಿದೆ, ಅದರಲ್ಲಿ ಬಹುಜನರ ಅಭಿಪ್ರಾಯವು 245, ಸ್ಥಾ- ಬಹುಮತಕ್ಕೆ ಬೇಕಾದ ಇನ್ನೂ 27 ಕ್ಕಿಂತ ಕಡಿಮೆ ಇದೆ. ಆದರೂ, ಮೇ ತಿಂಗಳಲ್ಲಿ ಯುಬಿಎಸ್ ಸ್ಟಾಕ್ ಮಾರುಕಟ್ಟೆಯ ಮಲ್ಟಿಪಲ್ಗಳು 2019 ರಲ್ಲಿ ಮೋದಿ ಗೆಲುವು ಸಾಧಿಸಬಹುದೆಂದು ಹೇಳಿದರು.[೧೫]
2014 ಸೆ.೧೩ರಂದು ಹತ್ತು ರಾಜ್ಯಗಳ ೩೩ ವಿಧಾನ ಸಭಾ ಸ್ಥಾನಗಳಿಗೆ ಮತ ಚಲಾವಣೆ ನಡೆದಿತ್ತು. ಈ ಪೈಕಿ ಮಂಗಳವಾರ ಒಂಬತ್ತು ರಾಜ್ಯಗಳ ೩೨ ಕ್ಷೇತ್ರಗಳ ಮತ ಎಣಿಕೆ ನಡೆಯಿತು. ಬಿಜೆಪಿ ೧೨, ಕಾಂಗ್ರೆಸ್ ೭, ಸಮಾಜವಾದಿ ಪಕ್ಷ ೮ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಟಿಡಿಪಿ, ತೃಣಮೂಲ ಕಾಂಗ್ರೆಸ್, ಎಐಯುಡಿಎಫ್ ಮತ್ತು ಸಿಪಿಎಂ ತಲಾ ಒಂದು ಕ್ಷೇತ್ರ ಗೆದ್ದಿವೆ. ಸಿಕ್ಕಿಂನಲ್ಲಿ ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. (ಛತ್ತೀಸಗಡದ ಅಂತಾಗಡದಲ್ಲಿ ಸೆ.೨೦ರಂದು ಎಣಿಕೆ ನಡೆದು ಬಿಜೆಪಿ ಗೆದ್ದಿದೆ.)ಬಿಜೆಪಿ. ೨೫/25 ಸ್ಥಾನಗಳಲ್ಲಿ ೧೫/15 ಸ್ಥಾನ ಕಳೆದುಕೊಂಡಿದೆ. ಒಂದು ಹೆಚ್ಚುವರಿ ಸ್ಥಾನವನ್ನು ಬಂಗಾಳಾದಲ್ಲಿ ಗಳಿಸಿದೆ.
ಎನ್ಡಿಎ ಮಿತ್ರಕೂಟಕ್ಕೆ ದೊರೆತ ಶೇ.38.5 ಮತಗಳು(೩೩೭/336+1?=337 ಸ್ಥಾನಗಳು), ಅಧಿಕಾರಕ್ಕೇರಿದ ಮೈತ್ರಿಕೂಟವೊಂದರ ಕನಿಷ್ಠ ಮತ ಗಳಿಕೆಯೇನಲ್ಲ. ಯುಪಿಎ-1ರ ಮಿತ್ರ ಪಕ್ಷಗಳ ಒಟ್ಟಾರೆ ಮತ ಗಳಿಕೆ ಪ್ರಮಾಣ ಶೇ.35.9.(ಒಟ್ಟು ೫೯ / 59.ಸ್ಥಾನಗಳು)ಕಾಂಗ್ರೆಸ್‌ಗೆ- ಶೇ.19.3 ಮತಗಳು(೪೪ ಸ್ಥಾನಗಳು) ದೊರೆತಿದ್ದು, ಇದು 2009ರಲ್ಲಿ ಬಿಜೆಪಿ ಗಳಿಸಿದ ಶೇ.18.5(116 ಸ್ಥಾನ). ಕ್ಕಿಂತ ಹೆಚ್ಚು ಆದರೆ ಸ್ಥಾನ ಕಡಿಮೆ (
ಉಪಚುನಾವಣೆ;ಶ್ರೀನಗರ: ೧೫-೪-೨೦೧೭:ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಶ್ರೀನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಶಾಲಿ ಆಗಿದ್ದಾರೆ. ಫಾರೂಕ್ ಅವರು ತಮ್ಮ ಪ್ರತಿಸ್ಪರ್ಧಿ ಪಿಡಿಪಿ ಅಭ್ಯರ್ಥಿ ನಜೀರ್ ಖಾನ್ ಅವರನ್ನು 10,700 ಮತಗಳ ಅಂತರದಿಂದ ಸೋಲಿಸಿದ್ದಾರೆ.ಭಾರಿ ಹಿಂಸಾಚಾರ, ಸಾವು ನೋವುಗಳ ಮಧ್ಯೆ ಏಪ್ರಿಲ್ 9ರಂದು ಉಪ ಚುನಾವಣೆ ನಡೆದಿತ್ತು. ಆಗ ಶೇಕಡ 7.13ರಷ್ಟು ಮತದಾನ ಆಗಿತ್ತು. ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಇಷ್ಟು ಕಡಿಮೆ ಮತದಾನ ಆಗಿರುವುದು ಚುನಾವಣಾ ಇತಿಹಾಸದಲ್ಲಿ ಇದೇ ಮೊದಲು.[೧೭]
ಆಲ್ ಇಂಡಿಯಾಮುಜಲೀಸ್ ಇತ್ತೇಹಾದುಲ್ ಮುಸ್ಲಿಮೀನ್ ಆಂಧ್ರ ೧; ಯುವಜನ ಶ್ರಮಿಕರೈತುಕಾಂಗ್ರೆಸ್ ಪಾರ್ಟಿಆಂಧ್ರ ೯ ;ತೆಲಂಗಾಣಾ ರಾಷ್ಟ್ರೀಯ ಸಮಿತಿ ೯; ಆಲ್ ಇಂಡಿಯಾ ಯುನೈಟೆಡ್ ಫ್ರಾಂಟ್. ಅಸ್ಸಾಂ ೩/;ರಾಷ್ಟ್ರೀಲೋಕ ಸಮತಾ ಪಾರ್ಟಿ-ಬಿಹಾರ ೩/; ಜಮ್ಮುಕಾಶ್ಮೀರ ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ ೩/;ಝಾರ್ಕಂಡ್ ಮುಕ್ತಿ ಮೋರ್ಚಾ. ೨/;ಆಲ್ ಇಂಡಿಯಾ ಎನ್.ಆರ್, ಕಾಂಗ್ರೆಸ್ ಪಾಂಡುಚೆರಿ ೧/;ಬಿಜು ಜನತಾ ದಳ ಒಡಿಶಾ ೨೦/; ನಾಗಾ ಪೀಪಲ್ ಫ್ರಂಟ್. ೧/;
(All India Majlis-E-Ittehadul Muslimeen-1(Andhra)/ Yuvajana Sramika Rythu Congress Party/ Telangana Rashtra Samithi/ All India United Democratic Front(Assam)3/ Rashtriya Lok Samta Party(Bihar)3/ Jammu & Kashmir Peoples Democratic Party(J&K)3/ Jharkhand Mukti Morcha 2/Jharkhand Mukti Morcha 2/ All India N.R. CongressPchry1/)
ಹೊಸದಿಲ್ಲಿ: 16ನೇ ಲೋಕಸಭೆಯಲ್ಲಿ ಬಿಜೆಪಿ ತನ್ನ ಸ್ವಂತ ಬಲದಲ್ಲೇ ಬಹುಮತ ಗೆದ್ದುಕೊಂಡಿದೆ ಎಂಬುದು ನಿಜವಾಗಿದ್ದರೂ, ಕೇವಲ ಶೇ.31 ಮತ ಗಳಿಕೆಯೊಂದಿಗೆ ಯಾವುದೇ ಪಕ್ಷವೂ ಇದುವರೆಗೆ ಸ್ವಂತ ಬಲದಲ್ಲಿ ಅಧಿಕಾರ ಸ್ಥಾಪಿಸಿದ ಉದಾಹರಣೆಗಳಿಲ್ಲ.
ಸರಳವಾಗಿ ಹೇಳುವುದಾದರೆ, 10ರಲ್ಲಿ 4ಕ್ಕಿಂತ ಕಡಿಮೆ ಮತಗಳು ಎನ್‌ಡಿಎ ಪರವಾಗಿ ಬಿದ್ದಿವೆ ಮತ್ತು ಮೂರಲ್ಲಿ ಒಬ್ಬರು ತಮ್ಮನ್ನು ಪ್ರತಿನಿಧಿಸಲು ಬಿಜೆಪಿಯನ್ನೇ ಆಯ್ದುಕೊಂಡಿಲ್ಲವೆಂದಾಗುತ್ತದೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳನ್ನು ಆಯ್ದುಕೊಂಡಿರುವವರ ಸಂಖ್ಯೆ ಇನ್ನೂ ಕಡಿಮೆ, ಅಂದರೆ ಐವರಲ್ಲಿ ಒಬ್ಬರಿಗಿಂತ ಕಡಿಮೆ ಮತ್ತು ಯುಪಿಎಗೆ ದೊರೆತಿರುವ ನಾಲ್ಕರಲ್ಲಿ ಒಂದರಷ್ಟು ಮತಗಳಿಗಿಂತಲೂ ಕಡಿಮೆ. (ಕಾಂಗ್ರೆಸ್‌ಗೆ ಶೇ.19.3 ಮತಗಳು ದೊರೆತಿದ್ದು, ಇದು 2009ರಲ್ಲಿ ಬಿಜೆಪಿ ಗಳಿಸಿದ ಶೇ.18.5ಕ್ಕಿಂತ ಕಡಿಮೆಯಲ್ಲ. ಆದರೆ ಸ್ಥಾನಗಳು ಕಡಿಮೆ!!). ಕಾಂಗ್ರೆಸ್‌ನ ದುರದೃಷ್ಟದಿಂದ ಅದಕ್ಕೆ ದೊರೆತ ಶೇ.19.3 ಮತಗಳು ಕೇವಲ 44 ಸ್ಥಾನಗಳನ್ನು ದೊರಕಿಸಿಕೊಟ್ಟಿದ್ದರೆ, ಕಳೆದ ಬಾರಿ ಬಿಜೆಪಿಗೆ ದೊರೆತಿದ್ದ ಶೇ.18.5 ಮತ ಗಳಿಕೆ ಪ್ರಮಾಣದಲ್ಲಿ 116 ಸ್ಥಾನಗಳು ದೊರಕಿದ್ದವು.
ಆದರೆ, ಎನ್‌ಡಿಎ ಮಿತ್ರಕೂಟಕ್ಕೆ ದೊರೆತ ಶೇ.38.5 ಮತಗಳು, ಅಧಿಕಾರಕ್ಕೇರಿದ ಮೈತ್ರಿಕೂಟವೊಂದರ ಕನಿಷ್ಠ ಮತ ಗಳಿಕೆಯೇನಲ್ಲ. ಯುಪಿಎ-1ರ ಮಿತ್ರ ಪಕ್ಷಗಳ ಒಟ್ಟಾರೆ ಮತ ಗಳಿಕೆ ಪ್ರಮಾಣ ಶೇ.35.9. ಅಂತೆಯೇ 1991ರಲ್ಲಿ ಪಿ.ವಿ.ನರಸಿಂಹರಾವ್ ಅವರು ಅಲ್ಪಮತದ ಸರಕಾರ ನಡೆಸಿದ್ದಾಗ ಕಾಂಗ್ರೆಸ್‌ಗೆ ದೊರೆತ ಮತಗಳಿಕೆ ಶೇ.38.2.