ನಿಯಂತ್ರಿತ ಮಾರುಕಟ್ಟೆ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಭಾಷೆ ಸುಧಾರಿಸಬೇಕು, ವಿಕೀಕರಣ ಆಗಬೇಕು, ಕೊಂಡಿಗಳು ಮತ್ತು ಉಲ್ಲೇಖ ಬೇಕು. |
ವಿಶೇಷವಾಗಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ನಿಯಂತ್ರಿತ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ಮೂಲಕ ರೈತರಿಗೆ ಯೋಗ್ಯವಾದ ಮತ್ತು ಸೂಕ್ತವಾದ ಬೆಲೆಗಳನ್ನು ದೊರಕಿಸಿಕೊಡುವುದರ ಅವಶ್ಯಕತೆಯನ್ನು ೧೯೨೮ ರಚನೆಗೊಂಡ 'ರಾಯಲ್ ಕಮಿಷನ್ ಆನ್‌ಅಗ್ರಿಕಲ್ಚರ್ ಸಮಿತಿ, ತನ್ನ ವರದಿಯಲ್ಲಿ ಪ್ರಥಮವಾಗಿ ಸೂಚಿಸಿತ್ತು. ಅದರನ್ವಯ ಏಕೀಕರಣ ಪೂರ್ವದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಅವಶ್ಯಕತೆಗೆ ತಕ್ಕ೦ತೆ ಬೇರೆ ಬೇರೆ ಹಂತಗಳಲ್ಲಿ ನಿಯಂತ್ರಿತ ಮಾರುಕಟ್ಟೆಗಳನ್ನು ಆಯೋಜಿಸುವ ಪ್ರಯತ್ನಗಳು ನಡೆದವು. ಹಳೆಯ ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ೧೯೨೭ರಲ್ಲಿಯೇ ಆ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿಯ ಮಾರಾಟವನ್ನು ಮುಂಬಯಿ ಕಾಟನ್ ಮಾರ್ಕೆಟ್ ಖಾಯಿದೆ ೧೯೨೭ರ ನಿಯಂತ್ರಣಕ್ಕೆ ಒಳಪಡಿಸಲಾಯಿತು. ಅದರಂತೆ ಈ ಹಿಂದಿನ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ೧೯೩೦ರಲ್ಲಿ ನಿಯಂತ್ರಿತ ಮರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಮದ್ರಾಸ್-ಕರ್ನಾಟಕ ಪ್ರದೇಶದಲ್ಲಿ ಮದ್ರಾಸ್ ವಾಣಿಜ್ಯ ಬೆಳೆಗಳ ಕಾನೂನು ೧೯೩೩ ರನ್ವಯ ವಾಣಿಜ್ಯ ಬೆಳೆಗಳ ಮಾರಟವನ್ನು ನಿಯಂತ್ರಣಕ್ಕೆ ಒಳಪಡಿಸಲಾಯಿತು.
ಇನ್ನು ಚಿಕ್ಕ ರಾಜ್ಯ ಕೊಡಗಿನಲ್ಲೂ ಪ್ರಮುಖ ಬೆಳೆಯಾದ ಕಾಫಿ ಮಾರಾಟವನ್ನು ಕೇಂದ್ರ ಸರ್ಕಾರದ ಕಾಫಿ ಮಾರಾಟ ವಿಸ್ತರಣೆ ಕಾನೂನು ೧೯೪೨(coffee marketing expansion act 1942) ಮತ್ತು ಕಾಫೀ ಕಾಯಿದೆ ೧೯೪೨ರ (coffee act 1942) ಅನ್ವಯ ನಿಯಂತ್ರಣಕ್ಕೆ ಒಳಪಡಿಸಲಾಯಿತು. ಹಳೆಯ ಮೈಸೂರು ಸಂಸ್ಥಾನದಲ್ಲಿ ಈ ಉದ್ದೇಶಕ್ಕಾಗಿ ಮೈಸೂರು ವ್ಯವಸಾಯ ಉತ್ಪನ್ನಗಳ ಅಧಿನಿಯಮ ೧೯೩೯ರಲ್ಲಿ ಜಾರಿಗೆ ತರಲಾಯಿತು. ಮೈಸೂರು ಸಂಸ್ಥಾನದಲ್ಲಿ ಪ್ರಥಮ ನಿಯಂತ್ರಿತ ಮಾರುಕಟ್ಟೆಯನ್ನು ತಿಪಟೂರಿನಲ್ಲಿ, ಕೊಬ್ಬರಿ ಮತ್ತು ತೆಂಗು ಮಾರಾಟವನ್ನು ನಿಯಂತ್ರಣಕ್ಕೆ ಒಳಪಡಿಸುವ ಮೂಲಕ ಆರಂಭಿಸಲಾಯಿತು.
ರಾಜ್ಯ ಪುನಾರಚನೆಯ ನಂತರ (೧೯೫೬) ರಾಜ್ಯದ ವಿವಿಧ ಭಾಗಗಳಲ್ಲಿ ಈ ಮೊದಲು ಬೇರೆ ಬೇರೆ ಕಾನೂನಿನನ್ವಯ ಕರ್ಯನಿರ್ವಹಿಸುತ್ತಿದ್ದ ೫೪ ಮಾರುಕಟ್ಟೆಗಳು, ಆ ಮಾರುಕಟ್ಟೆ ಸಮಿತಿಗಳ ಸಿಬ್ಬಂದಿ ವರ್ಗದವರು ಮತ್ತು ಅವುಗಳಲ್ಲಿ ಕರ್ಯನಿರ್ವಹಿಸುತ್ತಿದ್ದ ಮಾರುಕಟ್ಟೆಯ ಕಾರ್ಯಕರ್ತರುಗಳನ್ನು(functionaries) ಹೊಸರಾಜ್ಯದ ನಿಂತ್ರಣಕ್ಕೆ ಒಳಪಡಿಸಲಾಯಿತು. ೧೯೬೬ರಲ್ಲಿ, ಇಡೀ ರಾಜ್ಯಕ್ಕೆ ಅನ್ವಯವಾಗುವ, ಹೆಚ್ಚು ವಿಸ್ತೃತವೂ, ಸಮಗ್ರವೂ ಆದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಂತ್ರಣ) ಅಧುನಿಯಮವನ್ನು ರೂಪಿಸಿ, ೧೯೬೮ರ ಮೇ ತಿಂಗಳಿನಲ್ಲಿ ಜಾರಿಗೆ ತರಲಾಯಿತು.
ರಾಜ್ಯದಲ್ಲಿ ಮುಂಬಯಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮದ ಮೇರೆಗೆ ೧೯೩೬ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮಾರುಕಟ್ಟೆಯನ್ನು, ಮೈಸೂರುಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮ ೧೯೩೯ರಡಿಯಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ೧೯೪೮ರಲ್ಲಿ ಮತ್ತೊಂದು ಮಾರುಕಟ್ಟೆಯನ್ನು ಸ್ಥಾಪಿಸಿದ್ದು, ಆನಂತರ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾರುಕಟ್ಟೆ ಸೇವೆಯ ವಿಸ್ತರಿಸಿದ್ದು, ೨೦೧೧ ಮಾರ್ಚ್ ಅಂತ್ಯ ವೇಳೆಗೆ ರಾಜ್ಯದಲ್ಲಿ ೧೫೨ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಹಾಗೂ ೩೫೨ ಉಪ ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಕೃಷಿ ಮಾರಾಟ ಇಲಾಖೆ ಮೂಲತಃ ಸಹಕಾರ ಇಲಾಖೆಯ ಭಾಗವಾಗಿದ್ದು, ೧೯೭೨ ರಿಂದ ಸ್ವತಂತ್ರ ಇಲಾಖೆಯಾಗಿದೆ.
ಕರ್ನಾಟಕದ ಕೃಷಿ ಉತ್ಪನ್ನ ಮಾರಾಟ(ನಿಯಂತ್ರಣ ಮತ್ತು ಅಭಿವೃದ್ಧಿ) ಶಾಸನ ೧೯೬೬ ಅನುಸಾರ ದಿನಾಂಕ ೧-೦೬-೧೯೭೨ರಂದು ಕರ್ನಾಟಕ ರಾಜ್ಯ ಮಂಡಳಿ ಸ್ಥಾಪನೆಗೊಂಡಿದ್ದು, ಇದು ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲು ಸಲಹೆಯನ್ನು ರಾಜ್ಯ ಸರ್ಕಾರ, ಕೃಷಿ ಮಾರಟ ಇಲಾಖೆ, ಮತ್ತು ಕೃಷಿ ಮಾರುಕಟ್ಟೆ ಸಚಿವರು ಇರುತ್ತಾರೆ. ರಾಜ್ಯದ ಮಾರುಕಟ್ಟೆ ಸಮಿತಿಗಳು ಪಡೆಯುವ ಮಾರುಕಟ್ಟೆ ಶುಲ್ಕ ಮತ್ತು ಲೈಸೆನ್ಸ್ ಶುಲ್ಕದ ಮೊತ್ತದಲ್ಲಿ ಒಟ್ಟು ಶೇ.೧೩ ರಷ್ಟು ಹಣವನ್ನು ವಂತಿಗೆ ಪ್ರತಿ ತಿಂಗಳು ಮಂಡಳಿಗೆ ಸಂದಾಯವಾಗುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರವು ಅನುಪಾತದಲ್ಲಿ ಶೇಕಡಾ ಒಂದರಷ್ಟು ಹಣವನ್ನು ಮಂಡಳಿಗೆ ನೀಡುತ್ತದೆ.
ವ್ಯವಸಾಯ ಉತ್ಪನ್ನಗಳ ಮಾರಾಟವನ್ನು ಮತ್ತು ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿ ವರ್ಗದವರು, ಮಾರುಕಟ್ಟೆಯ ಕಾರ್ಯಕರ್ತರಿಗೆ ಸೂಕ್ತ ತರಬೇತಿಯನ್ನು ನೀಡಲು ಸಹಾಯಕವಾಗುವಂತೆ ಹುಬ್ಬಳ್ಳಿ (೧೯೬೪), ಕರ್ನಾಟಕವವು ದೇಶದಲ್ಲಿಯೇ ಮೊದಲನೆಯದು ಎಂಬುದು ಗಮನಾರ್ಹ. ಅದರಂತೆ ಈ ಮಾರುಕಟ್ಟೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾರುಕಟ್ಟೆ ಕಾರ್ಯಕರ್ತರಾದ ಹಮಾಲರು, ತೂಕಮಾಡುವವರು, ಮತ್ತು ಗಾಡಿ ಹೊಡೆಯುವವರಿಗೆ ಸಾಮಾಜಿಕ ಗುಂಪು ವಿಮೆಯ ಸೌಲಭ್ಯವನ್ನು ಒದಗಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ರಾಷ್ಟ್ರದಲ್ಲಿಯೇ ಪ್ರಥಮವಾಗಿದೆ. ಅದೂ ಅಲ್ಲದೆ ನಿಯಂತ್ರಿತ ಮಾರುಕಟ್ಟೆ ಸಮೀತಿಗಳು ರೈತರ ಉತ್ಪನ್ನ ಅಡಮಾನದ ಆಧಾರದಲ್ಲಿ ಅಲ್ಫಾವಧಿಗೆ ರೂ. ೫೦,೦೦೦ರವರೆಗೆ ಸಾಲ ಮುಂಗಡ ನೀಡುವ ವ್ಯವಸ್ಥೆಯನ್ನು ಜಾರಿಯಲ್ಲಿ ತರಲಾಗಿದೆ.
ಬೆಂಬಲ ಬೆಲೆ ಯೋಜನೆ
ಬದಲಾಯಿಸಿಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳು ಕುಸಿದಾಗ ರೈತರು ನಷ್ಟ ಅನುಭವಿಸುವುದನ್ನು ತಪ್ಪಿಸುವುದಕ್ಕಾಗಿ ಬೆಂಬಲ ಬೆಲೆ ಯೋಜನೆ ಜಾರಿಗೊಂಡಿದ್ದು, ಕೇಂದ್ರ ಸರಕಾರದ ಪರವಾಗಿ ರಾಜ್ಯ ಸರ್ಕಾರವು ವಿವಿಧ ಸಂಸ್ಥೆಗಳ ಮೂಲಕ ರೈತರಿಂದ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುತ್ತರೆ. ಶೀಘ್ರವಾಗಿ ಹಾಳಾಗುವ ಟೊಮೆಟೋ, ಈರುಳ್ಳಿ, ಆಲೂಗಡ್ಡೆ, ಹಸಿಮೆಣಸಿನಕಾಯಿ ಮೊದಲಾದ ಉತ್ಪನ್ನಗಳಿಗೆ ಕೇಂದ್ರ ಸರ್ಕಾರವು ಫೋರ್ ಪ್ರೈಸ್ ಯೋಜನೆಯಡಿ ಬೆಂಬಲ ಬೆಲೆ ಘೋಷಿಸಿ ರೈತರಿಂದ ಉತ್ಪನ್ನಗಳನ್ನು ಖರೀದಿಸುತ್ತದೆ. ಕೆಲವು ಸಂದರ್ಭಗಳಲ್ಲಿ "ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ"ಯಡಿ (marketing intervention scheme) ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತದೆ. ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಆವರ್ತ ನಿಧಿ ಸ್ಥಾಪಿಸಿದ್ದು, ೨೦೧೦-೧೧ನೇ ಸಾಲಿನಲ್ಲಿ ೧೩೦.೫ ಕೋಟಿ ಹಣವನ್ನು ಈ ನಿಧಿಯಿಂದ ಬಿಡುಗಡೆ ಮಾಡಿದ್ದು, ೬.೩೯ ಲಕ್ಷ ಕ್ವಿಂಟಾಲ್ ನಷ್ಟು ವಿವಿಧ ಉತ್ಪನ್ನಗಳ ೯೬೮೩ ಫಲಾನುಭವಿ ರೈತರಿಂದ ಖರೀದಿಸಲಾಗಿತ್ತು.
ರೈತ ಸಂಜೀವಿನಿ ಯೋಜನೆ
ಬದಲಾಯಿಸಿರೈತರು ಅಥವಾ ರೈತ ಕುಟುಂಬದವರು ಕೃಷಿ ಕಾರ್ಯದಲ್ಲಿ ಅಥವಾ ಮಾರಟ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಸಾವು ಅಥವಾ ಶಾಶ್ವತ ಅಂಗವಿಕಲತೆ ಸಂಭವಿಸಿದಲ್ಲಿ ಅವರಿಗೆ ಈ ಯೋಜನೆಯಡಿ ಪರಿಹಾರ ನೀಡಲಾಗುವುದು. ಸಾವು ಸಂಭವಿಸಿದಲ್ಲಿ ರೂ. ೫೦,೦೦೦/- ಮತ್ತು ಶಾಶ್ವತ ಅಂಗವಿಕಲತೆಯಾದರೆ, ಅಂಗವಿಕಲತೆ ಪ್ರಮಾಣಕ್ಕನುಗುಣವಾಗಿ ರೂ.೧,೫೦೦/- ದಿಂದ ೧೫,೦೦೦/-ವರೆಗೆ ಪರಿಹಾರ ನೀಡಲಾಗುತ್ತದೆ. ಇದಕ್ಕಾಗಿ ರೈತರು ಯಾವುದೇ ಪ್ರೀಮಿಯಂ ಹಣವನ್ನು ನೀಡಬೇಕಾಗಿರುವುದಿಲ್ಲ. ಈ ಯೋಜನೆಯಡಿ ೨೦೦೯-೧೦ರಲ್ಲಿ ರೂ.೪.೬೬ ಕೋಟಿಯನ್ನು ೧೦೨೩ ರೈತರಿಗೆ ಹಾಗು ೨೦೧೦-೧೧ರಲ್ಲಿ ರೂ.೩.೮೩ ಕೋಟಿಯನ್ನು ೮೮೫ ರೈತರಿಗೆ ನೀಡಲಾಗಿರುತ್ತದೆ.
ಜನಶ್ರೀ ವಿಮಾ ಯೋಜನೆ
ಬದಲಾಯಿಸಿಮಾರುಕಟ್ಟೆ ಸಮಿತಿಗಳಲ್ಲಿ ಲೈಸನ್ಸ್ ಪಡೆದು ಕಾರ್ಯ ನಿರ್ವಹಿಸುತ್ತಿರುವ ಹಮಾಲರು, ತೂಕದವರು, ಮತ್ತು ಚಕ್ಕಡಿಯವರಿಗಾಗಿ ಈ ಯೋಜನೆಯನ್ನು ಜಾರಿಗೆ, ಭಾರತೀಯ ಜೀವ ವಿಮಾ ನಿಗಮದ ಮೂಲಕ ಅನುಷ್ಪಾನಗೊಳಿಸಲಾಗುತ್ತಿದೆ. ಈ ಯೋಜನೆಯ ಪ್ರಯೋಜನೆ ಪಡೆಯುವ ಫಲಾನುಭವಿಗಳು ಪ್ರತೀ ವರ್ಷ ರೂ. ೧೦೦/- ಪ್ರೀಮಿಯಂ ಹಣವನ್ನು ನೀಡಬೇಕಾಗಿದ್ದು, ಇನ್ನುಳಿದ ರೂ. ೧೦೦/-ನ್ನು ಭಾರತ ಸರ್ಕಾರವು ಭರಿಸುತ್ತದೆ. ಈ ಯೋಜನೆಯ ಅನುಸಾರ ಹೆಸರು ನೊಂದಾಯಿಸಿದ ವ್ಯಕ್ತಿ ಅಪಘಾತದಿಂದ ಮೃತನಾದರೆ ಅಥವಾ ಶಾಶ್ವತ ಅಂಗವಿಕಲತೆಗೊಳಗಾದರೆ ರೂ. ೭೫,೦೦೦/- ಗಳನ್ನೂ ಸ್ವಾಭಾವಿಕ ಮರಣ ಹೊಂದಿದರೆ. ರೂ. ೩೦,೦೦೦/- ಗಳನ್ನು ವಾರಸುದಾರರಿಗೆ ನೀಡಲಾಗುತ್ತದೆ. ೨೦೦೯-೧೦ನೇ ಸಾಲಿನಲ್ಲಿ ೧೧೧ ಜನರಿಗೆ ರೂ. ೩೪೦೨೮ ಲಕ್ಷ ಹಾಗೂ ೨೦೧೦-೧೧ರಲ್ಲಿ ೯೯ ಫಲಾನುಭವಿಗಳಿಗೆ ರೂ. ೩೦.೫೯ ಲಕ್ಷ ಪರಿಹಾರ ನೀಡಲಾಗುತ್ತದೆ.
ನಿಯಂತ್ರಿತ ಮಾರುಕಟ್ಟೆ ಕಾಯ್ದೆ ೧೯೬೮ ಜಾರಿಗೆ ಬಂದ ನಂತರ ರಾಜ್ಯದ ಹೆಚ್ಚೆಚ್ಚು ಪ್ರದೇಶಗಳನ್ನು ಮತ್ತು ಹೆಚ್ಚು ಹೆಚ್ಚು ವ್ಯವಸಾಯ ಉತ್ಪನ್ನಗಳನ್ನು ಮಾರಟ ನಿಯಂತ್ರಣಕ್ಕೆ ಒಳಪಡಿಸುವ ಪ್ರಯತ್ನಗಳು ಮುಂದುವರಿದಿವೆ. ೧೯೭೮-೭೯ರ ವೇಳೆಗೆ ರಾಜ್ಯದಲ್ಲಿದ್ದ ನಿಯಂತ್ರಣ ಮಾರುಕಟ್ಟೆ ಸಂಖ್ಯೆ ೧೧೫ಕ್ಕೆ ಹೆಚ್ಚುಗೊಂಡಿದ್ದು, ಉಪಮಾರುಕಟ್ಟೆಗಳ ಸಂಖ್ಯೆ ೨೧೦ಕ್ಕೆ ಹೆಚ್ಚಳಗೊಂಡಿತ್ತು. ಈ ನಿಟ್ಟಿನಲ್ಲಿ ಕರ್ನಾಟಕದ ಸ್ಥಾನ ರಾಷ್ಟ್ರದಲ್ಲಿ ಆರನೆಯದಾಗಿತ್ತು. ಅದೇ ೧೯೯೧-೯೨ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು ೧೧೬ ಮುಖ್ಯ ಮಾರುಕಟ್ಟೆಗಳು ಮತ್ತು ೩೦೩ ಉಪಮಾರುಕಟ್ಟೆಗಳ ಸಂಖ್ಯೆ ಈ ಮುಂದಿನಂತೆ ಇರುವುದು. ಆವರಣದಲ್ಲಿರುವ ಸಂಖ್ಯೆಯು ಉಪಮಾರುಕಟ್ಟೆಯನ್ನು ಸೂಚಿಸುತ್ತದೆ. ಬೆಳಗಾವಿ-೩೯(೧೧೮), ಬೆಂಗಳೂರು-೩೩(೩೨), ಗುಲ್ಬರ್ಗಾ-೨೬(೬೩), ಹಾಗೂ ಮೈಸೂರು-೧೮(೫೦). ಅದೇ ೨೦೦೨-೦೩ ವೇಳೆಗೆ ರಾಜ್ಯಾದ್ಯಂತ ಇದ್ದ ನಿಯಂತ್ರಣ ಮಾರುಕಟ್ಟೆಗಳ ಸಂಖ್ಯೆ ೧೪೫ ಮತ್ತು ಉಪಮಾರುಕಟ್ಟೆಗಳ ಸಂಖ್ಯೆ೩೫೦ ಈ ಪೈಕಿ ಅತ್ಯಂತ ಹೆಚ್ಚಿನ ಸಂಖ್ಯೆಯ ಮಾರುಕಟ್ಟೆಗಳು ಬೆಳಗಾವಿ ಜಿಲ್ಲೆಯಲ್ಲಿ (೧೦) ಮತ್ತು ಉಪಮಾರುಕಟ್ಟೆಯಲ್ಲಿಯೂ ಅದೇ ಜಿಲ್ಲೆ ಅತ್ಯಂತ ಹೆಚ್ಚಿನ ಸಂಖ್ಯೆಯನ್ನು ಹೊಂದಿತ್ತು (೩೬), ಅದರ ನಂತರ ಸ್ಥಾನದಲ್ಲಿ ತುಮಕೂರು ಜಿಲ್ಲೆ ೨೫ ಮಾರುಕಟ್ಟೆಗಳನ್ನು ಹೊಂದಿತ್ತು.
ರಾಜ್ಯದಲ್ಲಿ ಹಳೆಯ ಮುಂಬಯಿ ಕರ್ನಾಟಕ ಪ್ರದೇಶಗಳಲ್ಲಿ ನಿಯಂತ್ರಿತ ಮಾರುಕಟ್ಟೆ ಕಾನೂನನ್ನು ಬಹಳ ಹಿಂದೆಯೇ ಜಾರಿಯಲ್ಲಿ ತಂದಿದ್ದರಿಂದ ಮಾರುಕಟ್ಟೆಗಳ ಸಂಖ್ಯೆ ಮತ್ತು ಕಾರ್ಯ ವ್ಯಾಪ್ತಿಯ ಕ್ಷೇತ್ರ ಆ ಭಾಗದಲ್ಲಿ ಹೆಚ್ಚಾಗಿರುವುದನ್ನು ಕಾಣಬಹುದು. ೨೦೦೬-೧೦ರಲ್ಲಿ ಇದ್ದಂತೆ ಜಿಲ್ಲಾವಾರು ನಿಯಂತ್ರಿತ ಮಾರುಕಟ್ಟೆಗಳು ಮತ್ತು ಅವುಗಳನ್ನು ನಿರ್ವಹಿಸಿದ ಒಟ್ಟು ವ್ಯವಹಾರ ಈ ಮುಂದಿನ ಕೋಷ್ಟಕದಲ್ಲಿ ನೀಡಿದೆ.
ಪ್ರಮುಖ ಮಾರುಕಟ್ಟೆಗಳು
ಬದಲಾಯಿಸಿರಾಜ್ಯಾದಂತ ಕೆಲವು ಆಯ್ಕೆ ಪ್ರಮುಖ ವ್ಯವಸಾಯ ಹುಟ್ಟುವಳಿಗಳಿಗೆ ಕೆಲವು ಸ್ಥಳಗಳು ಪ್ರಮುಖ ಮಾರುಕಟ್ಟೆಗಳಿಗಾಗಿ ಕಾರ್ಯನಿರ್ವಹಿಸುತ್ತಿದೆ. ೨೦೧೧-೧೨ರಲ್ಲಿ ನಿಯಂತ್ರಿತ ಹುಟ್ಟುವಳಿಗಳು ಮಾರಾಟಕ್ಕೆ ಬಂದ (ಆವಕ) ಪ್ರಮಾಣದ ಆಧಾರದಲ್ಲಿ ಈ ಕೆಳಗಿನವುಗಳನ್ನು ಆಯಾ ವ್ಯವಸಾಯ ಹುಟ್ಟುವಳಿಗಳ ಪ್ರಮುಖ ನಿಯಂತ್ರಿತ ಮಾರುಕಟ್ಟೆಗಳೆಂದು ಗುರುತಿಸಲಾಗಿದೆ. ಅವುಗಳ ವಿವರಣೆ ಈ ಮುಂದಿನಂತಿದೆ.
ಪ್ರಮುಖ ಮಾರುಕಟ್ಟೆ ಸ್ಥಳಗಳು
ಬದಲಾಯಿಸಿ೧. ಹತ್ತಿ : ಬಿಜಾಪುರ, ರಾಣೆಬೆನ್ನೂರು, ಬೈಲಹೊಂಗಲ, ರಾಯಚೂರು, ಸಂತೆ ಸರಗೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಮತ್ತು ನರಗುಂದ.
೨. ಶೇಂಗಾ : ಚಳ್ಳಕೆರೆ, ಗದಗ, ಚಿತ್ರದುರ್ಗ, ರಾಯಚೂರು, ದಾವಣಗೆರೆ ಮತ್ತು ಹುಬ್ಬಳ್ಳಿ.
೪. ಒಣ ಮೆಣಸಿನಕಾಯಿ : ಬ್ಯಾಡಗಿ, ಹುಬ್ಬಳ್ಳಿ, ರಾಣೆಬೆನ್ನೂರು, ಮತ್ತು ಹಾವೇರಿ.
೫. ಅಡಿಕೆ : ಶಿವಮೊಗ್ಗ, ಸಾಗರ, ಸಿರ್ಸಿ, ಮಂಗಳೂರು, ಚ್ರಿತ್ರದುರ್ಗ.
೬. ತೆಂಗು : ಕಡೂರು, ತರಿಕೆರೆ, ಕೆ.ಆರ್.ಪೇಟೆ, ತಿಪಟೂರು(ಕೊಬ್ಬರಿ), ಅರಸೀಕೆರೆ, ಮಂಡ್ಯ, ಮತ್ತು ಚನ್ನರಾಯಪಟ್ಟಣ.
೭. ಹಣ್ಣು, ಹೂವು ಮತ್ತು ತರಕಾರಿ : ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಹುಬ್ಬಳ್ಳಿ.
೮. ಜೋಳ : ಗದಗ, ಹಾವೇರಿ, ಬೆಳಗಾವಿ, ಮತ್ತು ಧಾರವಾಡ.
೯. ಗೋದಿ: ಗದಗ, ಬಿಜಾಪುರ, ಬೆಳಗಾವಿ ಮತ್ತು ಧಾರವಾಡ.
೧೦. ರಾಗಿ : ಅರಸೀಕೆರೆ, ಹಾಸನ, ತುಮಕೂರು, ಮತ್ತು ಹರಪನಹಳ್ಳಿ.
೧೧. ತೊಗರಿಬೇಳೆ : ಗುಲ್ಬರ್ಗಾ, ಬೀದರ್, ಯಾದಗಿರಿ, ಸೇಡಮ್, ಚಿತ್ತಾಪುರ ಮತ್ತು ರಾಯಚೂರು.
೧೨. ವೀಳ್ಯದೆಲೆ : ಹೊನ್ನಾವರ, ಧಾರವಾಡ, ರಾಣೆಬೆನ್ನೂರು, ಸವಣೂರು, ತುಮಕೂರು ಮತ್ತು ಚನ್ನಪಟ್ಟಣ.
೧೩. ಈರುಳ್ಳಿ : ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಚಳ್ಳಕೆರೆ ಮತ್ತು ಮೈಸೂರು.
೧೪. ಆಲೂಗಡ್ಡೆ : ಮೈಸೂರು, ಮಾಲುರು, ಚಿಕ್ಕಬಳ್ಳಾಪುರ, ಬೆಂಗಳೂರು, ಹಾಸನ, ಬೆಳಗಾವಿ, ಮತ್ತು ಹುಬ್ಬಳ್ಳಿ.
೧೫. ಸಾಂಬಾರು ವಸ್ತುಗಳು : ಮಡಿಕೇರಿ, ಗೋನಿಕೋಪ್ಪಲು, ಮೂಡಿಗೆರೆ, ಮತ್ತು ಸಕಲೇಶಪುರ.
೧೬. ರೇಷ್ಮೆ : ರಾಮನಗರ, ಚನ್ನಪಟ್ಟಣ, ಕನಕಪುರ, ಶಿಡ್ಲಘಟ್ಟ, ವಿಜಯಪುರ ಮತ್ತು ಕೊಳ್ಳೇಗಾಲ.
೧೭. ಎಳನೀರು : ಮದ್ದೂರು
ಕರ್ನಾಟಕ ರಾಜ್ಯ ಉಗ್ರಾಣ ನಿಗಮ
ಬದಲಾಯಿಸಿಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಕೃಷಿ ಉತ್ಪನ್ನ (ಅಭಿವೃದ್ಧಿ ಮತ್ತು ಉಗ್ರಾಣ) ನಿಗಮಗಳ ಕಾಯ್ದೆ ೧೯೫೬ರ ಪ್ರಕಾರ ೧೯೫೭ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ತದನಂತರ ಉಗ್ರಾಣ ನಿಗಮಗಳ ಕಾಯ್ದೆ ೧೯೬೨ರ ವ್ಯಾಪ್ತಿಗೊಳಪಟ್ಟಿರುತ್ತದೆ. ಕೇಂದ್ರ ಉಗ್ರಾಣ ನಿಗಮ ಮತ್ತು ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ೫೦:೫೦ ಸಮಪಾಲು ಷೇರುದಾರರಾಗಿರುತ್ತಾರೆ. ಈ ನಿಗಮವು ರೈತರ ಬಳಿಯ ಹೆಚ್ಚಿನ ಪ್ರಮಾಣದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಹಾಗೂ ಮಿತವ್ಯಯದಲ್ಲಿ ಉನ್ನತ ಮಟ್ಟದ ಶೇಖರಣೆ ವ್ಯವಸ್ಥೆಯನ್ನು ನೀಡುತ್ತದೆ. ಸರ್ಕಾರದ ಅನುಮೋದನೆಯಂತೆ ಆರ್.ಐ.ಡಿ.ಎಪ್ -XIV, XX ಮತ್ತು RKVY ಯೋಜನೆಯಡಿಯಲ್ಲಿ ೮೨,೧೦೦ ಮೆ.ಟನ್ ಸಾಮರ್ಥ್ಯದ ಗೋದಾಮುಗಳನ್ನು ಒಟ್ಟು ರೂ. ೪,೦೨೬.೯೩ ಲಕ್ಷಗಳಲ್ಲಿ ಪೂರ್ಣಗೊಳಿಸಿ ಉಗ್ರಾಣ ಚಟುವಟಿಕೆಗಳಿಗಾಗಿ ೨೦೧೦-೦೦ನೇ ಸಾಲಿನಲ್ಲಿ ಅರ್ಪಿಸಲಾಗಿರುತ್ತದೆ. ರಾಜ್ಯದಲ್ಲಿ ಸಹಕಾರಿ ಇಲಾಖೆಯ ೧೧೯ ಗೋದಾಮುಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ ೨,೩೫,೭೭೫ ಮೆ.ಟನ್ನು ಇರುತ್ತದೆ. ಅಲ್ಲದೆ, ವಿವಿಧ ವರ್ಗಕ್ಕೆ ಸೇರಿದ ೮,೨೯೦ ಸಂಘಗಳಲ್ಲಿ ೪,೫೩೩ ಸಹಕಾರ ಸಂಘಗಳಲ್ಲಿ ಉಗ್ರಾಣಗಳಿದ್ದು, ಅವುಗಳಲ್ಲಿ ೩,೯೩೯ ಉಗ್ರಾಣಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಒಟ್ಟು ಸಾಮರ್ಥ್ಯ ೪೪,೨೦,೪೦೨ ಮೆ.ಟನ್ನುಗಳಾಗಿತ್ತು.
ಕರ್ನಾಟಕದ ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿ ಚುನಾವಣೆಗಳು 2017
ಬದಲಾಯಿಸಿ- 16 Jan, 2017
- ರಾಜ್ಯದ 122 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 52 ಮತ್ತು ಬಿಜೆಪಿ 38 ಎಪಿಎಂಸಿಗಳಲ್ಲಿ ಬಹುಮತ ಪಡೆದು ಅಧಿಕಾರ ಹಿಡಿದಿವೆ. 16 ಎಪಿಎಂಸಿಗಳು ಜೆಡಿಎಸ್ ಪಾಲಾಗಿದ್ದರೆ, 14 ಎಪಿಎಂಸಿ ಅತಂತ್ರವಾಗಿದ್ದು ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಇನ್ನೂ 30 ಎಪಿಎಂಸಿಗಳ ಅಧಿಕಾರ ಅವಧಿ ಅಂತ್ಯಗೊಳ್ಳದೆ ಇರುವುದರಿಂದ ಚುನಾವಣೆ ನಡೆದಿಲ್ಲ.
- [೧]
ಹೊರಗಿನ ಕೊಂಡಿಗಳು
ಬದಲಾಯಿಸಿ- ೧.'ನಿಯಂತ್ರಿತ ಮರುಕಟ್ಟೆ ಬಗ್ಗೆ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.
- ೨.ನಿಯಂತ್ರಿತ ಮರುಕಟ್ಟೆ(ಕರ್ನಾಟಕ) Archived 2015-12-17 ವೇಬ್ಯಾಕ್ ಮೆಷಿನ್ ನಲ್ಲಿ.
- ಪುಷ್ಪಕೃಷಿ ಮತ್ತು ಮಾರುಕಟ್ಟೆ
- ಕರ್ನಾಟಕ ರಾಜ್ಯ ಸರಕಾರಿ ಒಡೆತನದ ನಿಗಮ ಮಂಡಳಿಗಳು ಮತ್ತು ನೇಮಕ
ಉಲ್ಲೇಖ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ