ವೀಳ್ಯದೆಲೆ
ವೀಳ್ಯದೆಲೆ | |
---|---|
ವೀಳ್ಯದೆಲೆ | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | P. betle
|
Binomial name | |
ಪೈಪರ್ ಬೀಟಲ್ |
ವೀಳ್ಯದೆಲೆ(ತುಳು:ಬಚ್ಚಿರೆ) ಪಾಚಿ ಹಸುರಿನ, ತೆಳುವಿನ, ತಣ್ಣಗಿನ,ರಸಭರಿತವಾದ ಒಂದು ಎಲೆ. ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲ್ಪಡುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ. ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ. ಇದು ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ. ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.
ಏಳು ಬಗೆಯ ವೀಳ್ಯದೆಲೆಗಳನ್ನು ಆಯುರ್ವೇದದಲ್ಲಿ ಬಣ್ಣಿಸಲಾಗಿದೆ. ವೀಳ್ಯದೆಲೆಯಿಂದಾದ ಹೆಂಡವನ್ನು ಆಯುರ್ವೇದದಲ್ಲಿ ಕೆಲ ರೋಗಗಳಿಗೆ ಮದ್ದನ್ನಾಗಿ ಉಪಯೋಗಿಸಲು ಹೇಳಿದೆ. ವೀಳ್ಯದೆಲೆಯನ್ನು ಬೆಳೆಸುವುದು ಅಷ್ಟೇನೂ ಶ್ರಮದಾಯಕವಲ್ಲ. ವೀಳ್ಯದ ಬಳ್ಳಿ ಹಬ್ಬಲು ಆಸರೆ ನೀಡಿದರೆ ಸಾಕು. ಮೇಲ ಮೇಲಕ್ಕೆ ಹಬ್ಬುತ್ತದೆ. ಹಲವರಿಗೆ ಇದನ್ನು ಬೆಳೆಸುವುದೇ ಒಂದು ಕಸುಬು ಮತ್ತು ಜೀವನಾಧಾರ.
ಕರಾವಳಿ ಕರ್ನಾಟಕದಲ್ಲಿ ತುಳುವರ ಎಲ್ಲಾ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇಬೇಕು. ನಿತ್ಯದ ದೇವರ ಸಮರ್ಪಣೆಗೂ ಹಣ್ಣು ಕಾಯಿಗಳ ಜತೆಗೆ ಎಲೆ ಅಡಿಕೆ ಇರಲೇಬೇಕು,`ಫಲತಾಂಬೂಲ' ಕೊಡುವಾಗ ತೆಂಗಿನ ಕಾಯಿಯ ಜತೆಗೆ ವೀಳ್ಯದೆಲೆ ಮತ್ತು ಅಡಿಕೆ ಇಡಲೇ ಬೇಕು."ನಮನ"