ವ್ಯವಹಾರ ಎಂದರೆ ವಸ್ತುಗಳನ್ನು ಕೊಳ್ಳುವ ಮಾರುವ ಪ್ರಕ್ರಿಯೆ ವ್ಯವಹಾರ. ಜಗತ್ತಿನ ಒಂದು ಮೂಲೆಯಲ್ಲಿ ತಯಾರಾದ ಪದಾರ್ಥ ಇನ್ನೊಂದು ಮೂಲೆಗೆ ಮಾರುಕಟ್ಟೆಯಲ್ಲಿ ಮಾರಾಟ ವಾಗಲು ಸಾಧ್ಯವಾಗಿರುವುದೆ ವ್ಯವಹಾರ . ಒಂದು ವ್ಯವಹಾರಕ್ಕೆ ಮಾರುಕ್ಕಟ್ಟೆ ಬೇಕಾಗುತ್ತದೆ ಹಾಗು ಗ್ರಾಹಕ ವ್ಯವಹಾರದ ಒಂದು ಆವಶ್ಯಕ ಭಾಗ.


ಮೂಲಭೂತ ಕರ್ಯಗಳು: ವ್ಯವಹಾರ ಒಡೆತನದ ಪ್ರಕಾರಗಳು ಆಡಳಿತ ವ್ಯಾಪ್ತಿ ಬದಲಾದಂತೆ ಬದಲಾಗುತ್ತವಾದರೆ ಹಲವು ಸಾಮಾನ್ಯ ಪ್ರಕಾರಗಳಿವೆ. ೧) ಏಕಮಾತ್ರ ಒಡೆತನ: ಏಕಮಾತ್ರ ಒಡೆತನ ಎಂದರೆ ಒಬ್ಬನೇ ವ್ಯಕ್ತಿಯಿಂದ ಹೊಂದಿಲ್ಪಟ್ಟ ವ್ಯವಹಾರ. ಮಾಲಿಕ ತಾನೇ ಸ್ವಂತವಾಗಿ ಮಾಡಬಹುದು ಅಥವಾ ಇತರರನ್ನು ನೇಮಿಸಿಕೊಳ್ಳಬಹುದು . ಅಪರಿಮಿತ ವ್ಯಕ್ತಿಗಳ ವೈಯಕ್ತಿಕ ಹೊಣೆಗಾರಿಕೆ ಹೊಂದಿರುತ್ತಾನೆ. ೨) ಪಾಲುದಾರಿಕೆ: ಎರಡು ಅಥವಾ ಹೆಚ್ಚು ವ್ಯಕ್ತಿಗಳು ಲಾಭಮಾಡುವ ಸಾಮಾನ್ಯ ಧ್ಯೇಯಕ್ಕಾಗಿ ಕೆಲಸ ಮಾಡುವ ಒಂದು ವ್ಯವಹಾರ. ಪ್ರತೀ ಪಾಲುದಾರರು ಅಪರಿಮಿತ ವ್ಯಕ್ತಿಗಳ ಹೊಣೆಗಾರಿಕೆ ಹೊಂದಿರುತ್ತಾನೆ. ಪಾಲುದಾರಿಕೆಯ ೩ ವಿಶಿಷ್ಟ ಭಾಗಗಳು...

       ಅ)ಸಾಮಾನ್ಯ ಪಾಲುದಾರಿಕೆ ಆ) ಪರಿಮಿತ ಪಾಲುದಾರಿಕೆ ಇ) ಹೊಣೆಗಾರಿಕೆಯ ಪಾಲುದಾರಿಕೆ.

೩) ನಿಗಮ :ವ್ಯವಹಾರ ನಿಗಮ, ತನ್ನ ಸದಸ್ಯರಿಗಿಂತ ಬೇರೆಯಾದ ಪ್ರತ್ಯೇಕ ಕಾನೂನುಬದ್ದ ವ್ಯಕ್ತಿತ್ವ ಹೊಂದಿದ ಒಂದು ಲಾಭದ ದೃಷ್ಟಿಯುಳ್ಳ ಪರಿಮಿತ ಹೊಣೆಗಾರಿಕೆಯ ವಸ್ತು. ಒಂದು ನಿಗಮ ಅನೇಕ ಷೇರುದಾರರಿಂದ ಸಾಮಿತ್ವ ಪಡೆದಿರುತ್ತದೆ . ೪) ಸಹಕಾರಿ ಉದ್ಯಮ ವೆಂದು ಅನೇಕ ಸಲ ಕರೆಯಲಾಗುವ ಸಹಕಾರ ಸಂಸ್ಥೆ ಲಾಭದ ದೃಷ್ಟಿಯುಳ್ಳ ಪರಿಮಿತ ಹೊಣೆಗಾರಿಕೆಯ ವಸ್ತು. ಸಹಕಾರ ಸಂಸ್ಥೆ ಮತ್ತು ಕಾರ್ಮಿಕ ಸಹಕಾರ ಸಂಸ್ಥೆ ಎಂದು ವರ್ಗೀಕರಿಸಲಾಗಿದೆ. ವರ್ಗೀಕರಣಗಳು: ಹಲವು ಪ್ರಕಾರದ ವ್ಯವಹಾರಗಳಿವೆ ಹಾಗಾಗಿ ವ್ಯವಹಾರಗಳನ್ನು ಹಲವು ರೀತಿಯಿಂದ ವರ್ಗೀಕರಿಸಲಾಗಿದೆ.

  • ಉತ್ಪಾದಕರು ಕಚ್ಚಾ ಸಾಮಗ್ರಿ ಅಥವ ಅಂಗ ಭಾಗಗಳಿಂದ ಉತ್ಪನ್ನಗಳನ್ನು ತಯಾರಿಸುತ್ತಾರೆ ಮತ್ತು ಆಮೇಲೆ ಲಾಭಕ್ಕೆ ಮಾರುತ್ತರೆ,ಕೊಳವೆಗಳಂತಹ ಕಂಪನಿಗಳನ್ನು ಉತ್ಪಾದಕರು ಎಂದು ಪರಿಗಣಿಸಲಾಗುತ್ತದೆ.
  • ಸೇವಾ ಉದ್ಯಮಗಳು ಸ್ಪರ್ಶಾತೀತ ಸರಕು ಅಥವಾ ಸೇವೆಗಳನ್ನು ನೀಡುತ್ತದೆ.ಮತ್ತು ವಿಶಿಷ್ಟವಾಗಿ ಸರ್ಕಾರ, ಇತರ ವ್ಯಾಪಾರಗಳು ಅಥವಾ ಗ್ರಾಹಕರಿಗೆ ಒದಗಿಸುಲಾದ ದುಡಿಮೆ ಅಥವಾ ಇತರ ಸೇವೆಗಳಿಗೆ ಶುಲ್ಕ ವಿಧಿಸಿ ಲಾಭವನ್ನು ಗಳಿಸುತ್ತದೆ.
  • ಚಿಲ್ಲರೆ ವ್ಯಾಪಾರಿಗಳು ಮತ್ತು ವಿತರಕರು ಉತ್ಪಾದಕರಿಂದ ತಯಾರಿಸಲಾದ ಸರಕು ಗಳನ್ನು ತರಿಸಿ ಉದ್ದೇಶಿಕ ಗ್ರಾಹಕನಿಗೆ ಕೊಟ್ಟು ಮಧ್ಯವರ್ತಿಗಳಾಗಿ ಕಾರ್ಯಮಾಡುತ್ತಾರೆ ಮತ್ತು ತಾವು ಒದಗಿಸುವ ಮಾರಾಟ ಮತ್ತು ವಿತರಣಾ ಸೇವೆಗಳಿಂದ ಲಾಭಗಳಿಸುತ್ತಾರೆ.
  • ಕೃಷಿ ಮತ್ತು ಗಣಿಗಾರಿಕೆ ವ್ಯಾಪಾರಗಳು ಗಿಡ ಅಥವಾ ಖನಿಜಗಲಂತಹ ಕಚ್ಚಾವಸ್ತುಗಳ ಉತ್ಪಾದೆನೆಗೆ ಸಂಭಂಧಿಸಿವೆ.
  • ಆರ್ಥಿಕ ವ್ಯಾಪಾರಗಳು , ಬಂಡವಾಳ ಹೂಡಿಕೆ ಮತ್ತು ನಿರ್ವಹಣೆ ಮುಲಕ ಲಾಭಗಳಿಸುವ ಬ್ಯಾಂಕು ಮತ್ತು ಇತರ ಕಂಪನಿಗಳನ್ನು ಒಳಗೊಂಡಿವೆ.
  • ಸಾರಿಗೆ ವ್ಯಾಪಾರಗಳು ಸರಕು ಮತ್ತು ಜನರನ್ನು ಒಂದು ನೆಲೆಯಿಂದ ಮತ್ತೊಂದು ನೆಲೆಗೆ ತಲುಪಿಸುತ್ತದೆ ಮತ್ತು ಸಾರಿಗೆ ವೆಚ್ಚಗಳಿಂದ ಲಾಭವನ್ನು ಗಳಿಸುತ್ತದೆ.

-

 ಬಹುತೇಕ ವಾಣಿಜ್ಯ ವ್ಯವಹಾರಗಳು  ಅತಿ ದೀರ್ಘ ಸಮಯಾವಧಿಯಿಂದ ಬೆಳೆದ ಒಂದು ಅತಿ ವಿವರಾಣತ್ಮಕ ಮತ್ತು ಚೆನ್ನಾಗಿ ಊರ್ಜಿತವಾದ ಸೂತ್ರಗಳ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತದೆ. ಸ್ಥಳೀಯ ಕಾನೂನು ವ್ಯಪ್ತಿಗಳು ಒಳಗೊಂಡ ವ್ಯಾಪಾರ ನಡೆಸುವುದಕ್ಕೆ ವಿಶೇಷ ಪರವಾನಗಿಗಳು ಮತ್ತು ತೆರಿಗೆಗಳನ್ನು ಕೇಳಬಹುದು. ಕೆಲವು ವ್ಯಾಪಾರಗಳೂ ಅಸ್ತಿತ್ವದಲ್ಲಿರುವ ವಿಶೇಷ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.
ವ್ಯಾಪಾರದ ಗಾತ್ರ ಮತ್ತು ವ್ಯಾಪ್ತಿ ಮತ್ತು ಅದರ ಅಪೇಕ್ಷಿತ ನಿರ್ವಹಣೆ ಮತ್ತು ಒಡೆತನ .ಸಾಮಾನ್ಯ ವಾಗಿ ಒಂದು ಚಿಕ್ಕ ಉದ್ಯಮ ಹೆಚ್ಚು ಹೊಂದಾಣಿಕೆ ಉಳ್ಳದ್ದಾಗಿರುತ್ತದೆ.

ಕ್ಷೇತ್ರ ಮತ್ತು ದೇಶ ಖಾಸಗಿ ಲಾಭಗಳಿಸುವ ಸರಕಾರಿ ಒಡೆತನದ ಸಂಸ್ಥೆಗಳಿಂದ ಭಿನ್ನವಾಗಿದೆ. ಕೆಲವು ದೇಶಗಳಲ್ಲಿ ನಿರ್ದಿಷ್ಟ ವ್ಯಾಒಆರಗಳು ಕಾನೂನುಬದ್ಧವಾಗಿ ನಿರ್ದಿಷ್ಟ ರೀತಿಗಳಲ್ಲಿ ಸಂಘಟೀತವಾಗಬೇಕಾಗಿ ನಿರ್ಭಂದಿತವಾಗಿರುತ್ತದೆ. ವ್ಯಾಪಾರಗಳು ಹಲವು ವೇಳೆ ಕಂಪನಿ ಲಾಭದಾಯಕವಾಗಿ ಉಳಿದಿರಲು ಪ್ರತಿಸ್ಪರ್ದಿಗಳಿಂದ ರಕ್ಷಣೆಯ ಅಗತ್ಯವಿರುವ ಮಹತ್ವವುಳ್ಳ 'ಬೌದ್ಧಿಕ ಸ್ವತ್ತು' ಹೊಂದಿರುತ್ತದೆ. ಹಕ್ಕು ಪತ್ರಗಳು ಅಥವಾ ವೃತ್ತಿ ರಹಸ್ಯಗಳ ಸಂರಕ್ಷಣೆ , ಇದಕ್ಕೆ ಅವಶ್ಯಕವಾಗಬಹುದು. ಬಹುತೇಕ ವ್ಯಾಪಾರಗಳು ವ್ಯಪಾರ ಚಿಹ್ನೆಯ ನೊಂದಾವಣಿಯಿಂದ ಪ್ರಯೋಜನ ಪಡೆಯಬಹುದಾದ ಹೆಸರುಗಳು ,ಪ್ರತೀಕ ಚಿಹ್ನೆಗಳು ಮತ್ತು ಅಂತಹದೇ ಆದ ವ್ಯಾಪಾರದ ಗುರುತಿನ ಬಳಕೆಯ ತಂತ್ರಗಳನ್ನು ಬಳಸುತ್ತದೆ. ವ್ಯಾಪಾರಗಳನ್ನು ಖರೀದುಸುವುದು ಮತ್ತು ಮಾರಬಹುದು ವ್ಯಾಪಾರದ ಮಾಲೀಕರು ಹಲವು ವೇಳೆ ವ್ಯಾಪಾರವನ್ನು ಹಸ್ತಾಂತರಿಸುವ ತಮ್ಮ ಯೋಜನೆಯನ್ನು ಒಂದು "ನಿರ್ಗಮನ ಯೋಜನೆ " ಎಂದು ಹೇಳುತ್ತಾರೆ. ಸಾಮಾನ್ಯವಾದ ನಿರ್ಗಮನ ಯೋಜನೆಗಳು , ಪ್ರಾಥಮಿಕ ಸಾರ್ವಜನಿಕ ಅರ್ಪಣೆಗಳು , ನಿರ್ವಹಣಾ ಸ್ವಾದೀನಗಳು ಮತ್ತು ಇತರ ವ್ಯಾಪಾರಗಳೊಂದಿಗೆ ಒಟ್ಟುಗೂಡುವಿಕೆಗಳನ್ನು ಒಳಗೊಂಡಿದೆ.

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ವ್ಯವಹಾರ&oldid=1203615" ಇಂದ ಪಡೆಯಲ್ಪಟ್ಟಿದೆ