ಚಾರ್ಲ್ಸ್ ಬ್ಯಾಬೇಜ್

ಗಣಿತಜ್ಞ

ಚಾರ್ಲ್ಸ್ ಬ್ಯಾಬೇಜ್, ಎಫ್ಆರ್‌ಎಸ್ (26 ಡಿಸೆಂಬರ್ 1791 - 18 ಅಕ್ಟೋಬರ್ 1871)[] ಒಬ್ಬ ಇಂಗ್ಲಿಷ್ ಗಣಿತಜ್ಞ, ತತ್ವಜ್ಞಾನಿ, ಸಂಶೋಧಕ ಮತ್ತು ಯಾಂತ್ರಿಕ ಇಂಜಿನಿಯರ್, "ಕಂಪ್ಯೂಟರ್ ಪಿತಾಮಹ" ಎಂದು ಪರಿಗಣಿಸಲ್ಪಟ್ಟಿರುವವ.[][][][] ಬ್ಯಾಬೇಜ್ ಮೊದಲ ಯಾಂತ್ರಿಕ ಕಂಪ್ಯೂಟರ್ ಕಂಡುಹಿಡಿದ ಕೀರ್ತಿವಂತ. ಇದು ಅಂತಿಮವಾಗಿ ಹೆಚ್ಚು ಸಂಕೀರ್ಣವಾದ ವಿನ್ಯಾಸಗಳಿಗೆ ಕಾರಣವಾಯಿತು.[] ಇವನ ಅಪೂರ್ಣವಾಗಿದ್ದ ಯಂತ್ರವಿನ್ಯಾಸಗಳ ಭಾಗಗಳನ್ನು ಲಂಡನ್ ಸೈನ್ಸ್ ಮ್ಯೂಸಿಯಮ್‍ನಲ್ಲಿ ಪ್ರದರ್ಶನಕ್ಕಿಡಲಾಗಿದೆ. 1991 ರಲ್ಲಿ, ಪರಿಪೂರ್ಣವಾಗಿ ಕಾರ್ಯ ನಡೆಸುವ ವ್ಯತ್ಯಾಸ ಎಂಜಿನ್ನನ್ನು ಬ್ಯಾಬೇಜ್‍ನ ಮೂಲ ಯೋಜನೆಗಳಿಂದ ನಿರ್ಮಿಸಲಾಯಿತು. 19 ನೇ ಶತಮಾನದಲ್ಲಿ ಸಾಧಿಸಬಲ್ಲ ಸಹಿಷ್ಣುತೆಗಳ ರೀತ್ಯ ನಿರ್ಮಿಸಲಾಗಿದ್ದ ಮುಗಿಸಿದ ಎಂಜಿನ್‍ನ ಯಶಸ್ಸು ಬ್ಯಾಬೇಜ್‍ನ ಯಂತ್ರವು ಕಾರ್ಯ ಮಾಡುತ್ತಿತ್ತು ಎಂದು ಸೂಚಿಸಿತು. ಒಂಬತ್ತು ವರ್ಷಗಳ ನಂತರ, ಬ್ಯಾಬೇಜ್ ವ್ಯತ್ಯಾಸ ಎಂಜಿನ್‍ಗೆ ವಿನ್ಯಾಸಗೊಳಿಸಿದ್ದ ಮುದ್ರಕವನ್ನು ಸೈನ್ಸ್ ಮ್ಯೂಸಿಯಂ ಪೂರ್ಣಗೊಳಿಸಿತು. 19 ನೇ ಶತಮಾನಕ್ಕೆ ಇದು ಒಂದು ನಿಬ್ಬೆರಗಾಗಿಸುವಂತಹ ಸಂಕೀರ್ಣ ಸಾಧನವಾಗಿತ್ತು.

ಚಾರ್ಲ್ಸ್ ಬ್ಯಾಬೇಜ್
ಚಾರ್ಲ್ಸ್ ಬ್ಯಾಬೇಜ್ 1860
ಜನನ(೧೭೯೧-೧೨-೨೬)೨೬ ಡಿಸೆಂಬರ್ ೧೭೯೧
ಲಂಡನ್, ಇಂಗ್ಲೆಂಡ್
ಮರಣ18 October 1871(1871-10-18) (aged 79)
ಮೆರೀಲ್‍ಬೋನ್,ಲಂಡನ್, ಇಂಗ್ಲೆಂಡ್
ರಾಷ್ಟ್ರೀಯತೆಆಂಗ್ಲ
ಕಾರ್ಯಕ್ಷೇತ್ರಗಣಿತ, ವಿಶ್ಲೇಷಣಾತ್ಮಕ ತತ್ತ್ವಶಾಸ್ತ್ರ, ಕಂಪ್ಯೂಟರ್
ಸಂಸ್ಥೆಗಳುಟ್ರಿನಿಟಿ ಕಾಲೇಜು, ಕೆಂಬ್ರಿಡ್ಜ್
ಅಭ್ಯಸಿಸಿದ ವಿದ್ಯಾಪೀಠಪೀಟರ್‌ಹೌಸ್, ಕೇಂಬ್ರಿಜ್
ಪ್ರಸಿದ್ಧಿಗೆ ಕಾರಣಗಣಿತ, ಕಂಪ್ಯೂಟರ್
ಹಸ್ತಾಕ್ಷರ

ಬ್ಯಾಬೇಜ್‍ನ ಜನ್ಮಸ್ಥಳ ವಿವಾದಾತ್ಮಕವಾಗಿದೆ. ಆದರೆ ಅವನು 44 ಕ್ರಾಸ್ಬಿ ರೋ, ವಾಲ್‍ವರ್ತ್ ರಸ್ತೆ, ಲಂಡನ್, ಇಂಗ್ಲೆಂಡ್‍ನಲ್ಲಿ ಜನಿಸಿದನು ಎಂಬ ಅತಿ ಹೆಚ್ಚಿನ ಸಾಧ್ಯತೆಯಿದೆ. ಲಾರ್ಕೊಮ್ ಸ್ಟ್ರೀಟ್ ಮತ್ತು ವಾಲ್‍ವರ್ತ್ ರೋಡ್ ಸೇರುವಲ್ಲಿ ಇರುವ ನೀಲಿ ಅಲಂಕಾರ ಫಲಕವು ಈ ಘಟನೆಯ ಸ್ಮಾರಕವಾಗಿದೆ.[]

ಅವರ ಹುಟ್ಟಿದ ದಿನಾಂಕ 26 ಡಿಸೆಂಬರ್ 1792 ಎಂದು ಟೈಮ್ಸ್ ತನ್ನ ನಿಧನವಾರ್ತೆಯಲ್ಲಿ ನೀಡಿತು. ಆದರೆ, ನಿಧನವಾರ್ತೆ ಕಾಣಿಸಿಕೊಂಡ ನಂತರ, ಒಬ್ಬ ಸೋದರಳಿಯನು ಚಾರ್ಲ್ಸ್ ಬ್ಯಾಬೇಜ್ 1791 ರಲ್ಲಿ, ಅಂದರೆ ಒಂದು ವರ್ಷ ಮೊದಲು ಜನಿಸಿದರು ಎಂದು ಬರೆದನು. ಬ್ಯಾಬೇಜ್‍ಗೆ 6 ಜನವರಿ 1792 ರಂದು ಹೆಸರಿಡಲಾಯಿತು ಎಂದು ಸೇಂಟ್ ಮೇರೀಸ್ ನೆವಿಂಗ್ಟನ್, ಲಂಡನ್‍‍ನ ಪ್ಯಾರಿಷ್ ರೆಜಿಸ್ಟರು ತೋರಿಸುತ್ತದೆ. ಇದು 1791 ಅವನ ಜನನ ವರ್ಷವೆಂದು ಬೆಂಬಲಿಸುತ್ತದೆ.[][][೧೦]

ಬ್ಯಾಬೇಜ್‍ನ ತಂದೆ, ಬೆಂಜಮಿನ್ ಬ್ಯಾಬೇಜ್, ಟೇಯ್ನ್‌ಮೌತ್‍ನಲ್ಲಿನ ಬಿಟನ್ ಎಸ್ಟೇಟಿನ ಮಾಲೀಕರಾಗಿದ್ದ ಪ್ರೇಡ್ಸ್‌ನ ಬ್ಯಾಂಕಿಂಗ್ ಪಾಲುದಾರನಾಗಿದ್ದನು. ಇದರಿಂದಾಗಿ ಬಾಬೇಜನಿಗೆ ಮುಂದೆ ಸಾಕಷ್ಟು ಪಿತ್ರಾರ್ಜಿತ ಹಣ ದೊರೆಯಿತು. ಅವರ ತಾಯಿಯ ಹೆಸರು ಬೆಟ್ಸಿ ಪ್ಲಮ್‍ಲೀ ಟೀಪ್. 1808 ರಲ್ಲಿ, ಬ್ಯಾಬೇಜ್ ಕುಟುಂಬ ಪೂರ್ವ ಟೇಯ್ನ್‌ಮೌತ್‍ನಲ್ಲಿನ ಹಳೆಯ ರೌಡೆನ್ಸ್ ಮನೆಗೆ ಸ್ಥಳಾಂತರವಾಯಿತು ಮತ್ತು ಬೆಂಜಮಿನ್ ಬ್ಯಾಬೇಜ್ ಸಮೀಪದ ಸೇಂಟ್ ಮೈಕೆಲ್ಸ್ ಚರ್ಚ್‌ನಲ್ಲಿ ಮೇಲ್ವಿಚಾರಕರಾದರು.

ಶಿಕ್ಷಣ

ಬದಲಾಯಿಸಿ
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
 
ದ ಇಲಸ್ಟ್ರೇಟಡ್ ಲಂಡನ್ ನ್ಯೂಸ್ (4 ನವೆಂಬರ್ 1871).[೧೧]

ಚಾರ್ಲ್ಸ್ ತನ್ನ ಪ್ರಾಥಮಿಕ ಶಿಕ್ಷಣದ ಅವಧಿಯಲ್ಲಿ ಅನೇಕ ಶಾಲೆಗಳು ಮತ್ತು ಶಿಕ್ಷಕರಿಂದ ಬೋಧನೆ ಪಡೆಯಲು ಅವನ ತಂದೆಯ ಹಣವು ಅನುವು ಮಾಡಿಕೊಟ್ಟಿತು. ಎಂಟು ವರ್ಷ ವಯಸ್ಸಿನ ಸುಮಾರು ಜೀವಕ್ಕೆ ಅಪಾಯ ತಂದ ಜ್ವರದಿಂದ ಚೇತರಿಸಿಕೊಳ್ಳಲು ಅವನನ್ನು ಎಕ್ಸೆಟರ್ ಬಳಿಯ ಆಲ್‍ಫಿಂಕ್ಟನ್‍ನಲ್ಲಿನ ಗ್ರಾಮೀಣ ಶಾಲೆಗೆ ಕಳುಹಿಸಲಾಯಿತು. ಅವನ ಮೆದುಳಿಗೆ ತುಂಬಾ ಶ್ರಮಕೊಡಬಾರದು ಎಂದು ಅವರ ಹೆತ್ತವರು ಆದೇಶಿಸಿದರು. ಈ ದೊಡ್ಡ ಸೋಮಾರಿತನ ಸ್ವಲ್ಪಮಟ್ಟಿಗಿನ ತಮ್ಮ ಬಾಲಿಶ ತರ್ಕಗಳಿಗೆ ಕಾರಣವಾಗಿರಬಹುದು ಎಂದು ಬ್ಯಾಬೇಜ್‍ಗೆ ಅನಿಸಿತು. ಸ್ವಲ್ಪ ಸಮಯದವರೆಗೆ ಅವರು ಟಾಟನ್ಸ್‌, ದಕ್ಷಿಣ ಡೆವಾನ್‍ನಲ್ಲಿನ ಕಿಂಗ್ ಎಡ್ವರ್ಡ್ VI ನೇ ಗ್ರಾಮರ್ ಶಾಲೆಗೆ ಹೋದರು. ಆದರೆ ಅವನ ಆರೋಗ್ಯ ಬಲವಂತವಾಗಿ ಅವನನ್ನು ಸ್ವಲ್ಪ ಸಮಯದವರೆಗೆ ಖಾಸಗಿ ಶಿಕ್ಷಕರತ್ತ ಮರಳುವಂತೆ ಮಾಡಿತು.[೧೨] ನಂತರ ಆತ ಬೇಕರ್ ಸ್ಟ್ರೀಟ್, ಎನ್‍ಫೀಲ್ಡ್, ಮಿಡ್ಲ್‌ಸೆಕ್ಸ್‌ನಲ್ಲಿನ 30-ವಿದ್ಯಾರ್ಥಿಗಳ ಹೊಲ್ಮ್‌ವುಡ್ ಅಕಾಡೆಮಿಯನ್ನು ಸೇರಿದನು. ಪಾದ್ರಿ ಸ್ಟೀಫನ್ ಫ್ರೀಮನ್ ಕೈಕೆಳಗೆ ಕಲಿತನು. ಅಕಾಡೆಮಿಯು ಸಾಕಷ್ಟು ಪುಸ್ತಕಗಳಿರುವ ಗ್ರಂಥಾಲಯವನ್ನು ಹೊಂದಿತ್ತು. ಇದು ಗಣಿತಶಾಸ್ತ್ರದ ಬಗ್ಗೆ ಬ್ಯಾಬೇಜ್‍ನ ಪ್ರೀತಿಯನ್ನು ಪ್ರಚೋದಿಸಿತು. ಅವರು ಅಕಾಡೆಮಿಯನ್ನು ಬಿಟ್ಟ ನಂತರ ಇನ್ನೂ ಇಬ್ಬರು ಖಾಸಗಿ ಶಿಕ್ಷಕರೊಂದಿಗೆ ಕಲಿತರು. ಮೊದಲನೆಯವನಾದ, ಕೇಂಬ್ರಿಡ್ಜ್ ಬಳಿಯ ಒಬ್ಬ ಪಾದ್ರಿಯ ಬಗ್ಗೆ ಬ್ಯಾಬೇಜ್ ಹೀಗೆ ಹೇಳಿದನು, "ನಾನು ಅದರಿಂದ ಪಡೆಯಬಹುದಾಗಿದ್ದ ಎಲ್ಲ ಅನುಕೂಲಗಳನ್ನು ಪಡೆಯಲಿಲ್ಲ ಎಂದು ಅಂಜುತ್ತೇನೆ". ಎರಡನೆಯವನಾದ ಒಬ್ಬ ಆಕ್ಸ್‌ಫರ್ಡ್ ಬೋಧಕನಿಂದ ಬ್ಯಾಬೇಜ್ ಸಾಕಷ್ಟು ಶಾಸ್ತ್ರಗಳನ್ನು ಕಲಿತಿದ್ದರಿಂದ ಕೇಂಬ್ರಿಡ್ಜ್ ಅವನನ್ನು ಒಪ್ಪಿಕೊಂಡಿತು.

ಬ್ಯಾಬೇಜ್ ಅಕ್ಟೋಬರ್ 1810 ರಲ್ಲಿ ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್‌ಗೆ ಬಂದರು.[೧೩] ಅವರು, ಲೇಬ್ನಿಜ್, ಜೋಸೆಫ್ ಲೂಯಿಸ್ ಲಗ್ರಾಂಜ್, ಥಾಮಸ್ ಸಿಂಪ್ಸನ್ ಮತ್ತು ಲೆಕ್ರಾಯ್‍ರನ್ನು ವ್ಯಾಪಕವಾಗಿ ಓದಿದ್ದರು. ಹಾಗಾಗಿ ಕೇಂಬ್ರಿಡ್ಜ್‌ನಲ್ಲಿ ಲಭ್ಯವಿದ್ದ ಗಣಿತ ಬೋಧನೆಯಿಂದ ಅವರು ಗಂಭೀರವಾಗಿ ನಿರಾಶರಾದರು. ಪ್ರತಿಕ್ರಿಯೆಯಾಗಿ, ಅವರು, ಜಾನ್ ಹರ್ಶೆಲ್, ಜಾರ್ಜ್ ಪೀಕಾಕ್, ಮತ್ತು ಇತರ ಹಲವಾರು ಸ್ನೇಹಿತರು 1812 ರಲ್ಲಿ ಅನಲಿಟಿಕಲ್ ಸೊಸೈಟಿಯನ್ನು ರಚಿಸಿದರು. ಬ್ಯಾಬೇಜ್, ಹರ್ಶೆಲ್ ಮತ್ತು ಪೀಕಾಕ್ ಭವಿಷ್ಯದ ನ್ಯಾಯಾಧೀಶ ಮತ್ತು ವಿಜ್ಞಾನದ ಪೋಷಕನಾದ ಎಡ್ವರ್ಡ್ ರಾಯನ್‍ನ ನಿಕಟ ಸ್ನೇಹಿತರೂ ಆಗಿದ್ದರು. ಬ್ಯಾಬೇಜ್ ಮತ್ತು ರಾಯನ್ ಇಬ್ಬರು ಸಹೋದರಿಯರನ್ನು ಮದುವೆಯಾದರು.[೧೪] ವಿದ್ಯಾರ್ಥಿಯಾಗಿದ್ದಾಗ, ಬ್ಯಾಬೇಜ್ ಅಲೌಕಿಕ ವಿದ್ಯಮಾನಗಳನ್ನು ತನಿಖೆ ಮಾಡುವ ಘೋಸ್ಟ್ ಕ್ಲಬ್, ತನ್ನ ಸದಸ್ಯರನ್ನು, ಅವರು ಹುಚ್ಚಾಸ್ಪತ್ರೆ ಸೇರಿದ್ದರೆ, ಅದರಿಂದ ಬಿಡುಗಡೆ ಮಾಡಿಸಲು ಸಮರ್ಪಿತವಾಗಿದ್ದ ಎಕ್ಸ್‌ಟ್ರ್ಯಾಕ್ಟರ್ಸ್ ಕ್ಲಬ್‍ನಂತಹ ಇತರ ಸಂಘಗಳ ಸದಸ್ಯನೂ ಆಗಿದ್ದನು.[೧೫][೧೬]

ಹರ್ಷೆಲ್ ಒಂದು ಕಾಲಕ್ಕೆ ಕೇಂಬ್ರಿಜಿನಲ್ಲಿ ಗಣಿತವಿಜ್ಞಾನ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ್ದ. ಐರೋಪ್ಯ ರಾಷ್ಟ್ರಗಳಲ್ಲಿ ನಡೆದಿದ್ದ ಗಣಿತ ವಿಜ್ಞಾನ ಪ್ರವರ್ಧನೆಗಳ ಬಗ್ಗೆ ಇಂಗ್ಲೆಂಡಿನಲ್ಲೂ ಜಾಗೃತಿ ಮೂಡಿಸಲು ಮತ್ತು ಐಸಾಕ್ ನ್ಯೂಟನನ ಮರಣಾನಂತರ ಇಂಗ್ಲೆಂಡಿನಲ್ಲಿ ತಲೆದೋರಿದ್ದ ಉತ್ಸಾಹಭಂಗ ಪರಿಸ್ಥಿತಿಯನ್ನು ತೊಡೆದುಹಾಕಲು ಅನಲಿಟಿಕಲ್ ಸೊಸೈಟಿಯ ಸ್ಥಾಪನೆ ಆಗಿತ್ತು. ಇವನಿಗೆ 1816ರದಲ್ಲಿ ರಾಯಲ್ ಸೊಸೈಟಿಯ ಫೆಲೋ ಗೌರವ ಸಂದಾಯವಾಯಿತು. ಈತ ಸ್ಥಾಪಿಸಿದ ಸಂಘದಿಂದಾಗಿ ಮೋಬಿಯಸ್, ಲೊಬಾಚೆವಿಸ್ಕಿ, ಕ್ಯಾಂಟರ್ ಮೊದಲಾದ ಗಣಿತವಿದರು ಪೋಷಿಸಿ ಪಾಲಿಸಿಕೊಂಡು ಬಂದ ಗಣಿತ ಪ್ರಗತಿಗಳನ್ನು ಕುರಿತು ಪರಸ್ಪರ ಚರ್ಚಿಸಲು ಸಾಧ್ಯವಾಯಿತು.

1812ರಲ್ಲಿ ಬ್ಯಾಬೇಜ್ ಪೀಟರ್‌ಹೌಸ್, ಕೇಂಬ್ರಿಡ್ಜ್‌ಗೆ ವರ್ಗ ಮಾಡಿಸಿಕೊಂಡನು.[೧೩] ಅವನು ಪೀಟರ್‌ಹೌಸ್‍ನ ಅಗ್ರ ಗಣಿತಜ್ಞನಾಗಿದ್ದನು, ಆದರೆ ಹಾನರ್ಸ್‌ನೊಂದಿಗೆ ಪದವಿ ಪಡೆಯಲಿಲ್ಲ. ಇದಕ್ಕೆ ಬದಲಾಗಿ, 1814 ರಲ್ಲಿ ಪರೀಕ್ಷೆ ಇಲ್ಲದೆ ಗೌರವ ಪದವಿಯನ್ನು ಪಡೆದನು.

ಮದುವೆ, ಕುಟುಂಬ, ಸಾವು

ಬದಲಾಯಿಸಿ
 
ಕೆನ್ಸಾಲ್ ಗ್ರೀನ್ ಸಿಮೆಟರಿಯಲ್ಲಿ ಚಾರ್ಲ್ಸ್ ಬ್ಯಾಬೇಜ್‍ನ ಸಮಾಧಿ

25 ಜುಲೈ 1814 ರಂದು, ಟೇಯ್ನ್‌ಮೌತ್, ಡೆವನ್‍ನಲ್ಲಿನ ಸೇಂಟ್ ಮೈಕೆಲ್ಸ್ ಚರ್ಚ್‌ನಲ್ಲಿ ಜಾರ್ಜಿಯಾನಾ ವಿಟ್ಮೋರ್‌ಳನ್ನು ಬ್ಯಾಬೇಜ್ ಮದುವೆಯಾದನು. ಈ ದಂಪತಿ ಡಡ್‍ಮಾಸ್ಟನ್ ಹಾಲ್‍ನಲ್ಲಿ,[೧೭] ಶ್ರಾಪ್‍ಶಾಯರ್‌ನಲ್ಲಿ (ಇಲ್ಲಿ ಬ್ಯಾಬೇಜ್ ಕೇಂದ್ರ ತಾಪನ ವ್ಯವಸ್ಥೆಯನ್ನು ನಿರ್ಮಿಸಿದನು) ವಾಸಿಸಿದರು. ನಂತರ 5 ಡೆವಾನ್‍ಷಾಯರ್ ಸ್ಟ್ರೀಟ್, ಪೋರ್ಟ್‌ಲಂಡ್ ಪ್ಲೇಸ್, ಲಂಡನ್‍ಗೆ ಸ್ಥಳ ಬದಲಾಯಿಸಿದರು.

ಚಾರ್ಲ್ಸ್ ಮತ್ತು ಜಾರ್ಜಿಯಾನಾ‍ಗೆ ಎಂಟು ಮಕ್ಕಳು ಜನಿಸಿದರು.[೧೮] ಆದರೆ ಕೇವಲ ಮೂವರು - ಬೆಂಜಮಿನ್ ಹರ್ಷೆಲ್, ಜಾರ್ಜಿಯಾನಾ ವಿಟ್ಮೋರ್ ಮತ್ತು ಹೆನ್ರಿ ಪ್ರಿವೋಸ್ಟ್ ಪ್ರೌಢವಯಸ್ಸಿನವರೆಗೆ ಬದುಕುಳಿದರು. ಜಾರ್ಜಿಯಾನಾ ಸೆಪ್ಟೆಂಬರ್ 1, 1827 ರಂದು ವಾರ್ಸೆಸ್ಟರ್‌ನಲ್ಲಿ ನಿಧನಳಾದಳು. ಚಾರ್ಲ್ಸ್‌ನ ತಂದೆ, ಪತ್ನಿ, ಮತ್ತು ಕನಿಷ್ಠ ಪಕ್ಷ ಒಬ್ಬ ಮಗ ಎಲ್ಲರೂ 1827 ರಲ್ಲಿ ನಿಧನರಾದರು. ಈ ಸಾವುಗಳ ಕಾರಣ ಬ್ಯಾಬೇಜ್‍ನ ಮಾನಸಿಕ ಸಮಾಧಾನ ತಪ್ಪಿತು ಮತ್ತು ಅವನ ಯಂತ್ರಗಳ ನಿರ್ಮಾಣ ವಿಳಂಬವಾಯಿತು.

ಅವನ ಅತಿ ಕಿರಿಯ ಮಗ, ಹೆನ್ರಿ ಪ್ರಿವೋಸ್ಟ್ ಬ್ಯಾಬೇಜ್ (1824-1918), ತನ್ನ ತಂದೆಯ ವಿನ್ಯಾಸಗಳನ್ನು ಆಧರಿಸಿ ಆರು ಕಾರ್ಯಕಾರಿ ವ್ಯತ್ಯಾಸ ಎಂಜಿನ್‌ಗಳನ್ನು ಸೃಷ್ಟಿಸಿದನು.[೧೯] ಇದರಲ್ಲಿ ಒಂದನ್ನು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಲಾಯಿತು. ನಂತರ ಅಲ್ಲಿ ಇದನ್ನು ಹಾರ್ವರ್ಡ್ ಮಾರ್ಕ್ ವನ್‍ನ ಪ್ರವರ್ತಕರಾದ ಹೋವರ್ಡ್ ಎಚ್ ಐಕೆನ್ ಪತ್ತೆ ಮಾಡಿದರು. ಹಿಂದೆ ಡಡ್‍ಮಾಸ್ಟನ್ ಹಾಲ್‍ನಲ್ಲಿ ಪ್ರದರ್ಶನಕ್ಕಿದ್ದ ಹೆನ್ರಿ ಪ್ರಿವೋಸ್ಟ್‌ನ 1910ರ ಅನಲಿಟಿಕಲ್ ಎಂಜಿನ್ ಮಿಲ್‍ನ್ನು ಈಗ ಸೈನ್ಸ್ ಮ್ಯೂಸಿಯಮ್‍ನಲ್ಲಿ ಪ್ರದರ್ಶನಕ್ಕಿಡಲಾಗಿದೆ.[೨೦]

ಚಾರ್ಲ್ಸ್ ಬ್ಯಾಬೇಜ್ ಅಕ್ಟೋಬರ್ 18, 1871 ರಂದು 79ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು. ಮತ್ತು ಇವರನ್ನು ಲಂಡನ್‍ನ ಕೆನ್ಸಾಲ್ ಗ್ರೀನ್ ಸೆಮೆಟರಿಯಲ್ಲಿ ಸಮಾಧಿ ಮಾಡಲಾಯಿತು. ಹಾರ್ಸ್ಲೆ ಪ್ರಕಾರ, ಬ್ಯಾಬೇಜ್ ಸಿಸ್ಟೈಟಿಸ್‍ನಿಂದ ಉಂಟಾದ ಮೂತ್ರಪಿಂಡಗಳ ಅಸಾಮರ್ಥ್ಯದಿಂದ ನಿಧನರಾದರು.[೨೧] 1983 ರಲ್ಲಿ ಚಾರ್ಲ್ಸ್ ಬ್ಯಾಬೇಜ್‌ನ ಶವಪರೀಕ್ಷೆ ವರದಿ ಪತ್ತೆಯಾಯಿತು. ನಂತರ ಇದನ್ನು ಇವನ ಮರಿ ಮೊಮ್ಮಗನು ಪ್ರಕಟಿಸಿದನು.[೨೨][೨೩] ಮೂಲದ ಒಂದು ಪ್ರತಿಯೂ ಲಭ್ಯವಿದೆ.[೨೪] ಬ್ಯಾಬೇಜ್‍ನ ಅರ್ಧ ಮೆದುಳನ್ನು ಲಂಡನ್‍ನ ರಾಯಲ್ ಕಾಲೇಜ್ ಆಫ಼್ ಸರ್ಜನ್ಸ್‌ನ ಹಂಟರಿಯನ್ ಮ್ಯೂಸಿಯಮ್‍ನಲ್ಲಿ ಸಂರಕ್ಷಿಸಲಾಗಿದೆ.[೨೫] ಬ್ಯಾಬೇಜ್‍ನ ಉಳಿದರ್ಧ ಮೆದುಳನ್ನು ಸೈನ್ಸ್ ಮ್ಯೂಸಿಯಂ, ಲಂಡನ್‍ನಲ್ಲಿ ಪ್ರದರ್ಶನಕ್ಕಿಡಲಾಗಿದೆ.[೨೬]

ಕಂಪ್ಯೂಟರ್‌ಗಳ ವಿನ್ಯಾಸ

ಬದಲಾಯಿಸಿ
 
ಬ್ಯಾಬೇಜ್‍ನ ವ್ಯತ್ಯಾಸ ಎಂಜಿನ್‍ನ ಭಾಗ. ಇದನ್ನು ಅವನ ಸಾವಿನ ನಂತರ ಅವನ ಮಗ ಅವನ ಪ್ರಯೋಗಾಲಯದಲ್ಲಿ ಕಂಡುಬಂದ ಭಾಗಗಳನ್ನು ಬಳಸಿಕೊಂಡು ಜೋಡಿಸಿದನು
1812 ರಲ್ಲಿ ಅವರು ಅನಲಿಟಿಕಲ್ ಸೊಸೈಟಿಯಲ್ಲಿನ ತಮ್ಮ ಕೋಣೆಯಲ್ಲಿ ಲಘುಗಣಕಗಳ ಒಂದು ಕೋಷ್ಟಕವನ್ನು ನೋಡುತ್ತ ಕುಳಿತಿದ್ದರು. ಅದು ತಪ್ಪುಗಳಿಂದ ತುಂಬಿತ್ತು ಎಂದು ಅವರಿಗೆ ತಿಳಿದಿತ್ತು. ಆಗ ಅವರಿಗೆ ಯಂತ್ರಗಳಿಂದ ಕೋಷ್ಟಕದ ಎಲ್ಲ ಉತ್ಪನ್ನಗಳನ್ನು ಗಣನೆ ಮಾಡುವ ವಿಚಾರ ಬಂದಿತು. ಫ್ರೆಂಚ್ ಸರ್ಕಾರವು ಹೊಸ ವಿಧಾನದಿಂದ ಹಲವಾರು ಕೋಷ್ಟಕಗಳನ್ನು ನಿರ್ಮಿಸಿತ್ತು. ಅವರ ಮೂವರು ಅಥವಾ ನಾಲ್ಕು ಗಣಿತಜ್ಞರು ಕೋಷ್ಟಕಗಳನ್ನು ಹೇಗೆ ಗಣನೆ ಮಾಡಬೇಕೆಂದು ನಿರ್ಧರಿಸಿದರು, ಇನ್ನೂ ಅರ್ಧ ಡಜನ್ ಜನರು ಕಾರ್ಯಗಳನ್ನು ಸರಳ ಹಂತಗಳಾಗಿ ವಿಭಜಿಸಿದರು. ಸಂಕಲನ ಮತ್ತು ವ್ಯವಕಲನಕ್ಕೆ ಸೀಮಿತವಾಗಿದ್ದ ಆ ಕೆಲಸವನ್ನು, ಕೇವಲ ಈ ಎರಡು ಅಂಕಗಣಿತೀಯ ಪ್ರಕ್ರಿಯೆಗಳು ತಿಳಿದಿದ್ದ ಎಂಭತ್ತು ಕಂಪ್ಯೂಟರ್‌ಗಳು ಮಾಡಿದವು. ಇಲ್ಲಿ ಮೊದಲ ಬಾರಿಗೆ, ರಾಶಿ ತಯಾರಿಕೆಯನ್ನು ಅಂಕಗಣಿತಕ್ಕೆ ಅನ್ವಯಿಸಲಾಯಿತು. ಅಕುಶಲ ಕಂಪ್ಯೂಟರ್‌ಗಳ ಕೆಲಸವನ್ನು ಯಂತ್ರಗಳು ಸಂಪೂರ್ಣವಾಗಿ ಮಾಡಬಹುದು ಮತ್ತು ಇದು ಹೆಚ್ಚು ಕ್ಷಿಪ್ರ ಹಾಗೂ ವಿಶ್ವಾಸಾರ್ಹವಾಗಿರುವುದು ಎಂಬ ವಿಚಾರಕ್ಕೆ ಬ್ಯಾಬೇಜ್ ವಶವಾದರು

—ಬಿ. ವಿ. ಬೌಡನ್, ಫ಼ಾಸ್ಟರ್ ದ್ಯಾನ್ ಥಾಟ್, ಪಿಟ್ಮನ್

ಗಣಕಯಂತ್ರಗಳ ಬಗ್ಗೆ ಪ್ಯಾಸ್ಕಲ್, ಲೈಬ್‍ನಿಟ್ಸ್ ಮೊದಲಾದವರು ಮೊದಲೇ ಕೆಲಸಮಾಡಿದ್ದರೂ ಇನ್ನೂ ಕಠಿಣತರ ಯಂತ್ರಗಳ ಬಗ್ಗೆ ಬಾಬೇಜನ ಆಲೋಚನೆ ಹರಿದಿತ್ತು. ಸರ್ಕಾರದಿಂದ ಹಣ ಒದಗಿಬಂತು. ಈತ ತನ್ನ ಕೆಲಸ ಮುಂದುವರಿಸಿದ. ಆದರೆ ಇವನ ಯೋಜನೆ ಇನ್ನೇನು ಮುಗಿಯುತ್ತದೆ ಎನ್ನುವ ಹೊತ್ತಿಗೆ ಮತ್ತೊಂದು ಕಠಿಣತಮ ಯೋಜನೆಯೊಂದನ್ನು ಮುಂದಿಟ್ಟ. ಹೀಗಾಗಿ ಹಿಂದಿನದೆಲ್ಲವನ್ನೂ ಕೈಬಿಡಬೇಕಾಗಿ ಬಂತು. ರಂಧ್ರಿತ ಕಾರ್ಡುಗಳ ಸಹಾಯದಿಂದ ಕೆಲಸ ಮಾಡಬಲ್ಲ ಗಣಕವೊಂದರ ರೂಪಣೆಯನ್ನು ಈತ ಮುಂದಿಟ್ಟದ್ದೂ ಉಂಟು. ಹೆಚ್ಚಿನ ಗಣಿತೀಯ ಪರಿಕರ್ಮಗಳಿಗೆ ಅಗತ್ಯವಾದ ಆಂಶಿಕಉತ್ತರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ರಂಧ್ರಿತ ಪತ್ರಗಳಲ್ಲಿ ಸಾಧ್ಯ ಇತ್ತು. ಇಂಥ ಪತ್ರಗಳಿಂದ ಮುಂದೆ ಫಲಿತಾಂಶ ಮುದ್ರಣಕ್ಕೂ ಅವಕಾಶ ಇರುವುದಿತ್ತು. ಆಧುನಿಕ ಗಣಕಕ್ಕೆ ಸಂಬಂಧಿಸಿದ ಹೆಚ್ಚಿನ ಮೂಲಭೂತ ತತ್ತ್ವಗಳ ಬಗ್ಗೆಯೂ ಬಾಬೇಜ್ ಚಿಂತಿಸಿದ್ದ. ಈತನ ಬಳಿ ಇದ್ದದ್ದು ಯಾಂತ್ರಿಕ ಸಲಕರಣೆಗಳು ಮಾತ್ರ. ಸಹಾಯ ನಿಂತುಹೋದಾಗ ಸ್ವಂತ ಹಣದಿಂದಲೇ ಆ ಯಂತ್ರಗಳ ಬಗ್ಗೆ ಅಧ್ಯಯನ ಮತ್ತು ಪ್ರಯೋಗ ಮುಂದುವರಿಸಿದ. ತಾತ್ತ್ವಿಕ ಚಿಂತನೆ ಪ್ರಯೋಗಗಳು ಮುಂದುವರಿದಂತೆಲ್ಲ ಯಂತ್ರದ ಜಟಿಲತೆಯೂ ಹೆಚ್ಚಾಗತೊಡಗಿತು. ಮುಂದೆ ಈತ ಕುದುರೆ ಜೂಜಿನ ಪಂದ್ಯಗಳಲ್ಲಿ ಭಾಗವಹಿಸುವ ಮೋಜನ್ನು ಬೆಳೆಸಿಕೊಂಡ ಕಾರಣ ತನ್ನ ಎಲ್ಲ ಹಣವನ್ನೂ ಕಳೆದುಕೊಳ್ಳಬೇಕಾಯಿತು. ಒಂದು ಶತಮಾನದ ಬಳಿಕ ಅಮೆರಿಕದ ಗಣಿತವಿದ ನಾರ್ಬರ್ಟ್ ವೀನರ್ (1894-1964) ಗಣಕದ ಹಿನ್ನಲೆಯ ಗಣಿತೀಯ ತತ್ತ್ವಗಳ ಬಗ್ಗೆ ಅಧ್ಯಯನ ನಡೆಸಿದ್ದರೂ ಅಮೆರಿಕದ ಎಂಜಿನಿಯರ್ ವನ್ನೇವರ್ ಬುಷ್ (1890) ಎಲೆಕ್ಟ್ರಾನಿಕ್ ವಿಧಾನಗಳಿಂದ ಉತ್ತಮ ಹಾಗೂ ನಾಜೂಕಿನ ಗಣಕಗಳನ್ನು ನಿರ್ಮಿಸಿದ್ದರೂ ಬಾಬೇಜನನ್ನೇ ಆಧುನಿಕ ಗಣಕ ಯಂತ್ರಗಳ ಪಿತಾಮಹ ಎಂದು ಕರೆಯುವುದಿದೆ.

ಬ್ಯಾಬೇಜ್‍ನ ಯಂತ್ರಗಳು ಮೊದಲ ಯಾಂತ್ರಿಕ ಕಂಪ್ಯೂಟರ್‌ಗಳಲ್ಲಿ ಸೇರಿದ್ದವು. ಆದರೆ ಅವು ವಾಸ್ತವವಾಗಿ ಪೂರ್ಣಗೊಂಡಿರಲಿಲ್ಲ. ಇದಕ್ಕೆ ಕಾರಣ ಬಹುಮಟ್ಟಿಗೆ ಹಣದ ಸಮಸ್ಯೆಗಳು ಮತ್ತು ವ್ಯಕ್ತಿತ್ವದ ಸಮಸ್ಯೆಗಳು. ಕೆಲವು ಉಗಿ-ಚಾಲಿತ ಯಂತ್ರಗಳ ನಿರ್ಮಾಣವನ್ನು ಅವರು ನಿರ್ದೇಶಿಸಿದರು. ಇವು ಸ್ವಲ್ಪ ಯಶಸ್ಸನ್ನು ಸಾಧಿಸಿದವು. ಗಣನೆಗಳನ್ನು ಯಾಂತ್ರೀಕರಿಸಬಹುದು ಎಂಬುದನ್ನು ಇದು ಸೂಚಿಸಿತ್ತು. ಬ್ಯಾಬೇಜ್‍ನ ಯಂತ್ರಗಳು ಯಾಂತ್ರಿಕವಾಗಿದ್ದವು ಹಾಗೂ ನಿರ್ವಹಿಸಲು ಅನುಕೂಲಕರವಾಗಿಲ್ಲದಿದ್ದರೂ, ಅವುಗಳ ಮೂಲಭೂತ ರಚನೆ ಆಧುನಿಕ ಕಂಪ್ಯೂಟರ್‌ಗೆ ಬಹಳ ಸಮಾನವಾಗಿತ್ತು. ದತ್ತ ಮತ್ತು ಕ್ರಮವಿಧಿಯ ಸ್ಮೃತಿಕೋಶವನ್ನು ಪ್ರತ್ಯೇಕಿಸಲಾಗಿತ್ತು, ಕಾರ್ಯವು ಸೂಚನಾ ಆಧಾರಿತವಾಗಿತ್ತು, ನಿಯಂತ್ರಣ ಘಟಕವು ಷರತ್ತುಬದ್ಧ ಜಿಗಿತಗಳನ್ನು ಮಾಡುತ್ತಿತ್ತು ಮತ್ತು ಯಂತ್ರವು ಪ್ರತ್ಯೇಕ I/O ಘಟಕವನ್ನು ಹೊಂದಿತ್ತು. ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಅವನು ತನ್ನ ಪರಿಯೋಜನೆಗೆ ಸರ್ಕಾರದಿಂದ ಹಣ ಪಡೆದನು, ಸುಮಾರು £17,000.00 ನಷ್ಟು. ಆದರೆ ಅಂತಿಮವಾಗಿ ಬ್ಯಾಬೇಜ್ ಸರ್ಕಾರದ ಖಜಾನೆಯ ವಿಶ್ವಾಸ ಕಳೆದುಕೊಂಡ.[೨೭]

ವ್ಯತ್ಯಾಸ ಎಂಜಿನ್

ಬದಲಾಯಿಸಿ
 
ಬ್ಯಾಬೇಜ್‍ನ ವಿನ್ಯಾಸದಿಂದ ನಿರ್ಮಿಸಿಲ್ಪಟ್ಟ ಸೈನ್ಸ್ ಮ್ಯೂಸಿಯಮ್‍ನ ವ್ಯತ್ಯಾಸ ಎಂಜಿನ್ #2

ಬ್ಯಾಬೇಜ್‍ನ ಕಾಲದಲ್ಲಿ, ಸಂಖ್ಯಾತ್ಮಕ ಕೋಷ್ಟಕಗಳನ್ನು ಮಾನವರು ಗಣಿಸುತ್ತಿದ್ದರು. ಹೇಗೆ "ನಿರ್ವಹಿಸುವವನನ್ನು" ನಿರ್ವಾಹಕ ಎಂದು ಕರೆಯುತ್ತಿದ್ದರೊ, ಹಾಗೆಯೇ ಅವರಿಗೆ 'ಕಂಪ್ಯೂಟರ್' ಎಂದು ಕರೆಯುತ್ತಿದ್ದರು, ಅಂದರೆ "ಗಣನೆ ಮಾಡುವವ" ಎಂದು. ಕೇಂಬ್ರಿಜ್‍ನಲ್ಲಿ, ಬ್ಯಾಬೇಜ್ ಈ ಮಾನವ-ಚಾಲಿತ ಪ್ರಕ್ರಿಯೆಯ ಹೆಚ್ಚಿನ ದೋಷ ದರವನ್ನು ಕಂಡರು ಮತ್ತು ಯಾಂತ್ರಿಕವಾಗಿ ಕೋಷ್ಟಕಗಳನ್ನು ಗಣನೆ ಮಾಡಲು ಪ್ರಯತ್ನಿಸುವ ತಮ್ಮ ಬದುಕಿನ ಕೆಲಸವನ್ನು ಆರಂಭಿಸಿದರು. ಅವರು 1822 ರಲ್ಲಿ ವ್ಯತ್ಯಾಸ ಎಂಜಿನ್‍ನ ನಿರ್ಮಾಣವನ್ನು ಆರಂಭಿಸಿದರು. ಇದು ಬಹುಪದೀಯ ಉತ್ಪನ್ನಗಳ ಮೌಲ್ಯಗಳನ್ನು ಗಣನೆ ಮಾಡುತ್ತಿತ್ತು. ಆ ಕಾಲದ ಹೋಲುವ ಪ್ರಯತ್ನಗಳಿಂದ ಭಿನ್ನವಾಗಿ, ಬ್ಯಾಬೇಜ್‍ನ ವ್ಯತ್ಯಾಸ ಎಂಜಿನ್‍ನ್ನು ಸ್ವಯಂಚಾಲಿತವಾಗಿ ಮೌಲ್ಯಗಳ ಸರಣಿಯನ್ನು ಗಣನೆ ಮಾಡಲು ರಚಿಸಲಾಗಿತ್ತು. ಪರಿಮಿತ ಶೇಷಗಳ ವಿಧಾನವನ್ನು ಬಳಸಿ, ಗುಣಾಕಾರ ಮತ್ತು ಭಾಗಾಕಾರದ ಅಗತ್ಯವನ್ನು ತಪ್ಪಿಸಲು ಸಾಧ್ಯವಾಗಿತ್ತು.

1820 ರ ದಶಕದ ಆರಂಭದಲ್ಲಿ, ಬ್ಯಾಬೇಜ್ ತನ್ನ ಮೊದಲ ವ್ಯತ್ಯಾಸ ಎಂಜಿನ್‍ನ ಮೂಲರೂಪದ ಮೇಲೆ ಕೆಲಸಮಾಡಿದ. ಈ ಮೂಲರೂಪದ ಕೆಲವು ಭಾಗಗಳು ಇನ್ನೂ ಆಕ್ಸ್‌ಫರ್ಡ್‌ನಲ್ಲಿನ ವಿಜ್ಞಾನದ ಇತಿಹಾಸದ ವಸ್ತುಸಂಗ್ರಹಾಲಯದಲ್ಲಿ ಉಳಿದುಕೊಂಡಿವೆ.[೨೮] ಈ ಮೂಲರೂಪವು "ಮೊದಲ ವ್ಯತ್ಯಾಸ ಎಂಜಿನ್" ಆಗಿ ವಿಕಾಸಗೊಂಡಿತು. ಅದು ಅಪೂರ್ಣವಾಗಿ ಉಳಿಯಿತು ಮತ್ತು ಪೂರ್ಣಗೊಂಡ ಭಾಗವು ಲಂಡನ್‍ನಲ್ಲಿನ ವಿಜ್ಞಾನ ಮ್ಯೂಸಿಯಮ್‍ನಲ್ಲಿ ಸ್ಥಿತವಾಗಿದೆ. ಈ ಮೊದಲ ವ್ಯತ್ಯಾಸ ಎಂಜಿನ್ ಸುಮಾರು 25,000 ಭಾಗಗಳಿಂದ ಕೂಡಿತ್ತು, ಹದಿನೈದು ಟನ್ (13,600 ಕೆಜಿ) ತೂಕವಿತ್ತು, ಮತ್ತು ಅದರ ಎತ್ತರ 8 ಅಡಿ (2.4 ಮೀ) ಇತ್ತು. ಬ್ಯಾಬೇಜ್ ಈ ಪರಿಯೋಜನೆಗೆ ಸಾಕಷ್ಟು ಹಣ ಪಡೆದಿದ್ದರೂ, ಅದು ಎಂದೂ ಪೂರ್ಣಗೊಳ್ಳಲಿಲ್ಲ. ನಂತರ ಅವರು "ವ್ಯತ್ಯಾಸ ಎಂಜಿನ್ ನಂ 2" ಎಂಬ ಒಂದು ಸುಧಾರಿತ ಆವೃತ್ತಿಯನ್ನು ವಿನ್ಯಾಸಗೊಳಿಸಿದರು. ಇದನ್ನು 1989-91 ರವರೆಗೆ ನಿರ್ಮಿಸಲಾಗಲಿಲ್ಲ. ಇದನ್ನು ಬ್ಯಾಬೇಜ್‍ನ ಯೋಜನೆಗಳು ಮತ್ತು 19 ನೇ ಶತಮಾನದ ಉತ್ಪಾದನಾ ತಾಳಿಕೆಗಳನ್ನು ಬಳಸಿ ನಿರ್ಮಿಸಲಾಯಿತು. ಇದು ತನ್ನ ಮೊದಲ ಗಣನೆಯನ್ನು ಲಂಡನ್ ಸೈನ್ಸ್ ಮ್ಯೂಸಿಯ‍ಮ್‍ನಲ್ಲಿ ಮಾಡಿ, 31 ಅಂಕಿಗಳ ಫಲಿತಾಂಶಗಳನ್ನು ನೀಡಿತು, ಅಂದರೆ ಸರಾಸರಿ ಆಧುನಿಕ ಪಾಕೆಟ್ ಕ್ಯಾಲ್ಕುಲೇಟರ್‌ಗಿಂತ ಬಹಳ ಹೆಚ್ಚು.

ಪೂರ್ಣಗೊಂಡ ಮಾದರಿಗಳು

ಬದಲಾಯಿಸಿ

ವ್ಯತ್ಯಾಸ ಎಂಜಿನ್ ನಂ ೨ಕ್ಕೆ ಬ್ಯಾಬೇಜ್‍ನ ಯೋಜನೆಗಳ ಪ್ರಕಾರ, ಲಂಡನ್ ಸೈನ್ಸ್ ಮ್ಯೂಸಿಯಂ ಎರಡು ವ್ಯತ್ಯಾಸ ಎಂಜಿನ್‌ಗಳನ್ನು ನಿರ್ಮಿಸಿದೆ. ಒಂದು ಮ್ಯೂಸಿಯಮ್‍ನ ಮಾಲೀಕತ್ವದಲ್ಲಿದೆ; ತಂತ್ರಜ್ಞಾನ ಕೋಟ್ಯಧೀಶ ನೇಥನ್ ಮಿರ್‌ವೋಲ್ಡ್ ಒಡೆತನದಲ್ಲಿರುವ ಇನ್ನೊಂದನ್ನು ಮೇ 10, 2008 ರಂದು ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾದಲ್ಲಿನ[೨೯] ಕಂಪ್ಯೂಟರ್ ಹಿಸ್ಟರಿ ಮ್ಯೂಸಿಯಮ್‍ನಲ್ಲಿ[೩೦] ಪ್ರದರ್ಶನಕ್ಕಿಡಲಾಯಿತು. ನಿರ್ಮಿಸಲಾಗಿರುವ ಎರಡು ಮಾದರಿಗಳು ಪ್ರತಿಕೃತಿಗಳಲ್ಲ; ಲಂಡನ್ ಸೈನ್ಸ್ ಮ್ಯೂಸಿಯಂ ಮೊದಲ ವ್ಯತ್ಯಾಸ ಎಂಜಿನ್ ನಂ 2 ವನ್ನು ಜೋಡಿಸುವವರೆಗೆ, ಅದರ ಯಾವುದೇ ಮಾದರಿ ಅಸ್ತಿತ್ವದಲ್ಲಿರಲಿಲ್ಲ.

ವಿಶ್ಲೇಷಣಾತ್ಮಕ ಎಂಜಿನ್

ಬದಲಾಯಿಸಿ

ವ್ಯತ್ಯಾಸ ಎಂಜಿನ್‍‍ನ್ನು ನಿರ್ಮಿಸುವ ಪ್ರಯತ್ನ ಚೂರುಚೂರಾದ ಸ್ವಲ್ಪ ಕಾಲದ ನಂತರ, ಬ್ಯಾಬೇಜ್ ವಿಶ್ಲೇಷಣಾತ್ಮಕ ಎಂಜಿನ್ ಎಂಬ ಒಂದು ಭಿನ್ನವಾದ, ಹೆಚ್ಚು ಸಂಕೀರ್ಣ ಯಂತ್ರದ ವಿನ್ಯಾಸವನ್ನು ಆರಂಭಿಸಿದರು. ಎಂಜಿನ್ ಒಂದೇ ಭೌತಿಕ ಯಂತ್ರವಲ್ಲ, ಬದಲಾಗಿ ವಿನ್ಯಾಸಗಳ ಒಂದು ಶ್ರೇಣಿಯಾಗಿತ್ತು. ಇವುಗಳನ್ನು 1871 ರಲ್ಲಿ ತನ್ನ ಮರಣದವರೆಗೆ ಅವನು ರಿಪೇರಿ ಮಾಡುತ್ತಿದ್ದನು. ಈ ಎರಡು ಎಂಜಿನ್‍ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ವಿಶ್ಲೇಷಣಾತ್ಮಕ ಎಂಜಿನ್‍ನ್ನು ಪಂಚ್ಡ್ ಕಾರ್ಡ್ ಬಳಸಿ ಯೋಜಿಸಬಹುದಾಗಿತ್ತು. ಈ ಕಾರ್ಡ್‌ಗಳ ಮೇಲೆ ಪ್ರೋಗ್ರಾಮ್‍ಗಳನ್ನು ಹಾಕಬಹುದು ಎಂದು ಅವರು ಅರಿತುಕೊಂಡರು. ಇದರಿಂದ ಆರಂಭದಲ್ಲಿ ಮಾತ್ರ ವ್ಯಕ್ತಿಯು ಪ್ರೋಗ್ರಾಮ್‍ನ್ನು ರಚಿಸಬೇಕಾಗಿತ್ತು. ತದನಂತರ ಯಂತ್ರದಲ್ಲಿ ಕಾರ್ಡ್‌ಗಳನ್ನು ಹಾಕಿ ನಡೆಯಲು ಬಿಡಬೇಕಾಗಿತ್ತು. ಒಂದು ಯಾಂತ್ರಿಕ ಕ್ಯಾಲ್ಕುಲೇಟರನ್ನು ನಿಯಂತ್ರಿಸಲು ವಿಶ್ಲೇಷಣಾತ್ಮಕ ಎಂಜಿನ್ ಜಾಕ್ವಾರ್ಡ್‌ನ ಪಂಚ್ಡ್ ಕಾರ್ಡ್‌ಗಳ ಲೂಪ್‍ಗಳನ್ನು ಬಳಸಬಹುದಾಗಿತ್ತು. ಇದು ಹಿಂದಿನ ಗಣನೆಗಳ ಫಲಿತಾಂಶಗಳನ್ನು ಆಧರಿಸಿ ಫಲಿತಾಂಶಗಳನ್ನು ಸೂತ್ರೀಕರಿಸಬಲ್ಲದ್ದಾಗಿತ್ತು. ಈ ಯಂತ್ರವು, ಅನುಕ್ರಮಿತ ನಿಯಂತ್ರಣ, ಕವಲೊಡೆಯುವುದು ಮತ್ತು ಲೂಪಿಂಗ್ ಸೇರಿದಂತೆ ಮುಂದೆ ಆಧುನಿಕ ಕಂಪ್ಯೂಟರ್‌ಗಳಲ್ಲಿ ಬಳಸಲಾಗುವ ಹಲವಾರು ವೈಶಿಷ್ಟ್ಯಗಳನ್ನು ಬಳಸಿಕೊಳ್ಳವುದನ್ನು ಉದ್ದೇಶಿಸಿತ್ತು. ಇದು ಟ್ಯೂರಿಂಗ್-ಸಂಪೂರ್ಣ ಆಗಿರುವ ಮೊದಲ ಯಾಂತ್ರಿಕ ಸಾಧನವಾಗಬಹುದಾಗಿತ್ತು.

ಒಬ್ಬ ಪ್ರಭಾವಶಾಲಿ ಗಣಿತಜ್ಞೆ ಮತ್ತು ಬ್ಯಾಬೇಜ್‍ನ ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ಕೆಲವೇ ಜನರಲ್ಲಿ ಒಬ್ಬಳಾದ ಅದಾ ಲವ್ಲೇಸ್ ವಿಶ್ಲೇಷಣಾತ್ಮಕ ಎಂಜಿನ್‍ಗೆ ಒಂದು ಪ್ರೋಗ್ರಾಂ ರಚಿಸಿದಳು. ವಿಶ್ಲೇಷಣಾತ್ಮಕ ಎಂಜಿನ್ ಎಂದಾದರೂ ವಾಸ್ತವವಾಗಿ ನಿರ್ಮಿಸಲ್ಪಟ್ಟಿದ್ದರೆ, ಅವಳ ಪ್ರೋಗ್ರಾಂ ಬರ್ನೌಲಿ ಸಂಖ್ಯೆಗಳ ಸರಣಿಯನ್ನು ಗಣನೆ ಮಾಡುವುದು ಸಾಧ್ಯವಾಗಬಹುದಾಗಿತ್ತು. ಈ ಕೆಲಸವನ್ನು ಆಧರಿಸಿ, ಲವ್ಲೇಸ್‌ಳನ್ನು ಈಗ ವ್ಯಾಪಕವಾಗಿ ಮೊದಲ ಗಣಕ ಪ್ರೋಗ್ರಾಮರ್ ಎಂದು ಗುರುತಿಸಲಾಗಿದೆ.[೩೧] 1979 ರಲ್ಲಿ, ಒಂದು ಸಮಕಾಲೀನ ಪ್ರೋಗ್ರಾಮಿಂಗ್ ಭಾಷೆಯಾದ ಅದಾವನ್ನು ಅವಳ ಗೌರವಾರ್ಥ ಹೆಸರಿಸಲಾಯಿತು.

ಆಧುನಿಕ ರೂಪಾಂತರಗಳು

ಬದಲಾಯಿಸಿ

ಅಬ್ಯಾಕಸ್ ಮತ್ತು ಯಾಂತ್ರಿಕ ಕ್ಯಾಲ್ಕುಲೇಟರ್ ಬದಲು ಮೈಕ್ರೊಚಿಪ್‍ಗಳನ್ನು ಬಳಸುವ ವಿದ್ಯುನ್ಮಾನ ಕ್ಯಾಲ್ಕುಲೇಟರ್‌ಗಳು ಬಂದಿವೆ. ಆದರೆ ಎಂಇಎಮ್‍ಗಳು ಮತ್ತು ನ್ಯಾನೊತಂತ್ರಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಯಾಂತ್ರಿಕ ಗಣನೆಯಲ್ಲಿ ಇತ್ತೀಚಿನ ಉನ್ನತ ತಂತ್ರಜ್ಞಾನದ ಪ್ರಯೋಗಗಳಿಗೆ ಕಾರಣವಾಗಿವೆ. ಸೂಚಿಸಿದ ಪ್ರಯೋಜನಗಳಲ್ಲಿ ಅಧಿಕ ವಿಕಿರಣ ಅಥವಾ ಹೆಚ್ಚಿನ ಉಷ್ಣಾಂಶದ ಪರಿಸರದಲ್ಲಿ ಕಾರ್ಯ ಮಾಡುವುದು ಸೇರಿವೆ.[೩೨] ಯಾಂತ್ರಿಕ ಗಣನೆಯ ಈ ಆಧುನಿಕ ಆವೃತ್ತಿಗಳನ್ನು ದಿ ಎಕನಾಮಿಸ್ಟ್ ನಿಯತಕಾಲಿಕದಲ್ಲಿನ ಅದರ ವಿಶೇಷ "ಸಹಸ್ರಮಾನದ ಕೊನೆ" ಕಪ್ಪು ಹೊದಿಕೆ ಸಂಚಿಕೆಯ "ಬ್ಯಾಬೇಜ್‍ನ ಕೊನೆಯ ನಗು" ಎಂಬ ಲೇಖನದಲ್ಲಿ ಎತ್ತಿ ತೋರಿಸಲಾಯಿತು.[೩೩]

ಇತರ ಸಾಧನೆಗಳು

ಬದಲಾಯಿಸಿ

ಉತ್ಪನ್ನಗಳನ್ನು ಕುರಿತ ಕಲನವಿಜ್ಞಾನದ ಬಗ್ಗೆ ಬಾಬೇಜ್ ಅಧ್ಯಯನ ನಡೆಸಿದ್ದ. ಗಣಿತ ಕೋಷ್ಟಕಗಳಲ್ಲಿದ್ದ ನ್ಯೂನತೆ ಮತ್ತು ಸ್ಖಾಲಿತ್ಯಗಳನ್ನು ಈತ ವಿವೇಚನೆ ನಡೆಸಿದ ಕಾರಣ ಮುಂದೆ ಗಣಕಯಂತ್ರವೊಂದರ ಉಪಜ್ಞೆಗೆ ಎಡೆಯಾಯಿತು. ಆದರೆ ಆ ಯಂತ್ರ ಮಾತ್ರ ಪೂರ್ಣವಾಗಲೇ ಇಲ್ಲ. ಈತ ಆಗಿನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ವಿಜ್ಞಾನದ ಅಧ್ಯಯನಕ್ಕಾಗಿ ಇದ್ದ ಅನನುಕೂಲ ಪರಿಸ್ಥಿತಿ ಕುರಿತು ಒಂದು ಪುಸ್ತಕ ಬರೆದ (1830). ಇದು ವಾದವಿವಾದಗಳಿಗೆ ಎಡೆಮಾಡಿಕೊಟ್ಟಿತು. ಅಂಚೆಪತ್ರವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ರವಾನಿಸುವುದರಲ್ಲಿ ತಗಲುವ ಖರ್ಚು, ದೇಹದುಡಿಮೆ ಇತ್ಯಾದಿಗಳ ಬಗ್ಗೆ ತಿಳಿಸುವ ಆಪರೇಷನ್ಸ್ ರಿಸರ್ಚ್ (ಪರಿಕರ್ಮಗಳ ಸಂಶೋಧನೆ) ಎಂಬ ಗಣಿತಪ್ರಕಾರ ಕುರಿತ ಅಧ್ಯಯನ ನಡೆಸಿದ. ಮುಂದೆ ಇದರಿಂದ ಬ್ರಿಟಿಷ್ ಸರ್ಕಾರಕ್ಕೆ ದೇಶಾದ್ಯಂತ ಆಧುನಿಕ ಅಂಚೆ ವ್ಯವಸ್ಥೆ ಏರ್ಪಡಿಸುವುದು ಸಾಧ್ಯವಾಯಿತು.

ಜೀವನಾಂಕನ ಕೋಷ್ಟಕ (ಆಕ್ಚ್ಯುಯರಿ ಟೇಬಲ್) ಮತ್ತು ವೇಗಮಾಪಕಗಳ ಬಗ್ಗೆಯೂ ಬಾಬೇಜ್ ಕೆಲಸಮಾಡಿದ.

1824 ರಲ್ಲಿ, ಬ್ಯಾಬೇಜ್ "ಗಣಿತೀಯ ಮತ್ತು ಖಗೋಳಶಾಸ್ತ್ರೀಯ ಕೋಷ್ಟಕಗಳು ಗಣಿಸುವ ಎಂಜಿನ್‍ನ ತನ್ನ ಆವಿಷ್ಕಾರಕ್ಕಾಗಿ" ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯ ಚಿನ್ನದ ಪದಕ ಗೆದ್ದರು. ಅವರು ಈ ಸಂಘದ ಸ್ಥಾಪಕ ಸದಸ್ಯರಾಗಿದ್ದರು ಮತ್ತು 1871 ರಲ್ಲಿ ತಮ್ಮ ಸಾವಿನ ಸಮಯದಲ್ಲಿ ಬದುಕಿದ್ದ ಅತ್ಯಂತ ಹಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದರು.

1828ರಿಂದ 1839 ರವರೆಗೆ ಬ್ಯಾಬೇಜ್ ಕೇಂಬ್ರಿಜ್‍ನಲ್ಲಿ ಗಣಿತಶಾಸ್ತ್ರದ ಲ್ಯುಕೇಸಿಯನ್ ಪ್ರೊಫೆಸರ್ ಆಗಿದ್ದರು. ಅವರು ಹಲವಾರು ವೈಜ್ಞಾನಿಕ ನಿಯತಕಾಲಿಕಗಳಿಗೆ ಬಹುಮಟ್ಟಿಗಿನ ಕೊಡುಗೆ ಸಲ್ಲಿಸಿದರು. ಅವರು 1820 ರಲ್ಲಿ ಆಸ್ಟ್ರೋನಾಮಿಕಲ್ ಸೊಸೈಟಿ ಮತ್ತು 1834 ರಲ್ಲಿ ಸ್ಟಾಟಿಸ್ಟಿಕಲ್ ಸೊಸೈಟಿಯನ್ನು ಸ್ಥಾಪಿಸುವಲ್ಲಿ ಸಾಧನಭೂತರಾಗಿದ್ದರು. ಆದರೆ, ಅವರು ಯಾಂತ್ರಿಕ ಗಣನಾ ಯಂತ್ರಗಳನ್ನು ವಿನ್ಯಾಸಗೊಳಿಸುವ ಕನಸು ಕಂಡಿದ್ದರು.

ಕೇಂಬ್ರಿಡ್ಜ್‌‌ನಲ್ಲಿ, ಅನಲಿಟಿಕಲ್ ಸೊಸೈಟಿಯ ಕೋಣೆಯಲ್ಲಿ ನಾನು ಕುಳಿತಿದ್ದೆ. ನನ್ನ ತಲೆ ಮೇಜಿನ ಮೇಲೆ ಮುಂದಕ್ಕೆ ಬಾಗಿತ್ತು. ಒಂದು ರೀತಿಯ ಸ್ವಪ್ನಶೀಲ ಮನಸ್ಥಿತಿಯಲ್ಲಿದ್ದೆ. ನನ್ನ ಮುಂದೆ ತೆರೆದ ಲಘುಗಣಕಗಳ ಒಂದು ಕೋಷ್ಟಕವಿತ್ತು. ಇನ್ನೊಬ್ಬ ಸದಸ್ಯ, ಕೋಣೆಗೆ ಬಂದು, ಅರ್ಧ ನಿದ್ದೆಯಲ್ಲಿದ್ದ ನನ್ನನ್ನು ನೋಡಿ, "ಸರಿ, ಬ್ಯಾಬೇಜ್, ನೀವು ಏನು ಕನಸು ಕಾಣುತ್ತಿದ್ದೀರಿ?" ಅದಕ್ಕೆ ನಾನು "ಈ ಎಲ್ಲ ಕೋಷ್ಟಕಗಳನ್ನು" (ಲಘುಗಣಕಗಳನ್ನು ಸೂಚಿಸುತ್ತಾ) "ಯಂತ್ರಗಳ ಮೂಲಕ ಗಣನೆ ಮಾಡಬಹುದು ಎಂದು ನಾನು ಯೋಚಿಸುತ್ತಿದ್ದೇನೆ" ಎಂದು ಉತ್ತರಿಸಿದೆ.

ಬ್ಯಾಬೇಜ್ 1832 ರಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್‌ನ ವಿದೇಶಿ ಗೌರವ ಸದಸ್ಯರಾಗಿ ಆಯ್ಕೆಯಾದರು.[೩೪] 1837 ರಲ್ಲಿ, ಬ್ರಿಡ್ಜ್‌ವಾಟರ್ ಟ್ರೀಟಿಸಸ್‍ಗೆ ಪ್ರತಿಕ್ರಿಯಿಸಿತ್ತಾ (ಅವುಗಳು ಎಂಟು ಇದ್ದವು), ಅವರು ತಮ್ಮ ಒಂಬತ್ತನೇ ಬ್ರಿಡ್ಜ್‌ವಾಟರ್ ಟ್ರೀಟಿಸ್ ಅನ್ನು ಪ್ರಕಟಿಸಿದರು, ಅದರ ಹೆಸರು On the Power, Wisdom and Goodness of God, as manifested in the Creation. ದೈವಿಕ ಶಾಸಕನಾಗಿ ಸೃಷ್ಟಿಸಲು ದೇವರಿಗೆ ಸರ್ವಶಕ್ತತೆ ಮತ್ತು ದೂರದೃಷ್ಟಿ ಇದೆ ಎಂಬ ಪ್ರಬಂಧವನ್ನು ಮಂಡಿಸಿದರು. ಕಾನೂನುಗಳನ್ನು (ಅಥವಾ ಕಾರ್ಯಕ್ರಮಗಳನ್ನು) ರಚಿಸುವುದು, ನಂತರ ಪ್ರತಿ ಬಾರಿಯು ಹೊಸ ಪ್ರಭೇದದ ಅಗತ್ಯವಿದ್ದಾಗ ತಾತ್ಕಾಲಿಕ ಪವಾಡಗಳೊಂದಿಗೆ ನಿರಂತರವಾಗಿ ಮಧ್ಯಪ್ರವೇಶಿಸುವ ಬದಲಾಗಿ, ಇವುಗಳಿಂದ ಸೂಕ್ತ ಸಮಯದಲ್ಲಿ ಪ್ರಭೇದಗಳನ್ನು ಉತ್ಪಾದಿಸುವುದು ದೇವರು. ಪುಸ್ತಕವು ನೈಸರ್ಗಿಕ ದೇವತಾಶಾಸ್ತ್ರದ ಕೃತಿಯಾಗಿದೆ ಮತ್ತು ಈ ವಿಷಯದ ಬಗ್ಗೆ ಜಾನ್ ಹರ್ಷಲ್ ಅವರೊಂದಿಗೆ ಹೊಂದಿದ್ದ ಪತ್ರವ್ಯವಹಾರದ ಉದ್ಧೃತಭಾಗಗಳನ್ನು ಒಳಗೊಂಡಿದೆ.

ಗೂಢಲಿಪಿಶಾಸ್ತ್ರದಲ್ಲಿ ಬ್ಯಾಬೇಜ್ ಗಮನಾರ್ಹ ಫಲಿತಾಂಶಗಳನ್ನು ಸಾಧಿಸಿದರು. ಅವರು ವಿಜೆನೆರ್‌ನ ಆಟೋಕೀ ಗುಪ್ತಲಿಪಿಸೂತ್ರ ಮತ್ತು ಇಂದು ವಿಜೆನೆರ್ ಗುಪ್ತಲಿಪಿಸೂತ್ರ ಎಂದು ಕರೆಯಲ್ಪಡುವ ಹೆಚ್ಚು ದುರ್ಬಲ ಗುಪ್ತಲಿಪಿಸೂತ್ರವನ್ನು ಮುರಿದರು. ಆಟೋಕೀ ಗುಪ್ತಲಿಪಿಸೂತ್ರವನ್ನು ಸಾಮಾನ್ಯವಾಗಿ "ಭೇದಿಸಲಾಗದ ಗುಪ್ತಲಿಪಿಸೂತ್ರ" ಎಂದು ಕರೆಯಲಾಗುತ್ತಿತ್ತು, ಆದರೂ ಜನಪ್ರಿಯ ಗೊಂದಲದಿಂದಾಗಿ, ದುರ್ಬಲವಾದ ಬಹುಅಕ್ಷರ ಗುಪ್ತಲಿಪಿಸೂತ್ರವನ್ನು "ಭೇದಿಸಲಾಗದ್ದು" ಎಂದು ಹಲವರು ಭಾವಿಸಿದ್ದಾರೆ. ಬ್ಯಾಬೇಜ್‌ನ ಆವಿಷ್ಕಾರವನ್ನು ಇಂಗ್ಲಿಷ್ ಮಿಲಿಟರಿ ಕಾರ್ಯಾಚರಣೆಗಳಿಗೆ ನೆರವಾಗಲು ಬಳಸಲಾಯಿತು ಮತ್ತು ಹಲವಾರು ವರ್ಷಗಳ ನಂತರದವರೆಗೆ ಇದನ್ನು ಪ್ರಕಟಿಸಲಾಗಲಿಲ್ಲ; ಇದರ ಪರಿಣಾಮವಾಗಿ, ಅಭಿವೃದ್ಧಿಯ ಮನ್ನಣೆಯನ್ನು ಪ್ರಶ್ಯನ್ ಪದಾತಿ ದಳದ ಅಧಿಕಾರಿ ಫ್ರೆಡ್ರಿಕ್ ಕಾಸಿಸ್ಕಿಗೆ ನೀಡಲಾಯಿತು, ಅವನು ಬ್ಯಾಬೇಜ್‌ ಮಾಡಿದ ಕೆಲವು ವರ್ಷಗಳ ನಂತರ ಅದೇ ಆವಿಷ್ಕಾರವನ್ನು ಮಾಡಿದನು.[೩೫]

1838 ರಲ್ಲಿ, ಬ್ಯಾಬೇಜ್ ಪೈಲಟ್‍ನ್ನು (ಇದನ್ನು ಗೋವಾರಕ ಎಂದೂ ಕರೆಯಲಾಗುತ್ತದೆ. ಇದು ರೈಲು ಎಂಜಿನ್ನುಗಳ ಮುಂಭಾಗಕ್ಕೆ ಲಗತ್ತಿಸಲಾದ, ಅಡಚಣೆಗಳನ್ನು ರೈಲು ಕಂಬಿಗಳಿಂದ ತೆಗೆದುಹಾಕುವ ಲೋಹದ ಚೌಕಟ್ಟು) ಆವಿಷ್ಕರಿಸಿದರು. ಇವರು ಶಕ್ತಿಮಾಪಕ ಗಾಡಿಯನ್ನೂ ನಿರ್ಮಿಸಿದರು. ಸುಮಾರು 1838 ರಲ್ಲಿ ಇಸಾಂಬರ್ಡ್ ಕಿಂಗ್ಡಂ ಬ್ರುನೆಲ್‍ನ ಗ್ರೇಟ್ ವೆಸ್ಟರ್ನ್ ರೈಲ್ವೆ ಮೇಲೆ ಹಲವಾರು ಅಧ್ಯಯನಗಳನ್ನು ಮಾಡಿದರು.[೩೬] ಬ್ಯಾಬೇಜ್‍ನ ಹಿರಿಯ ಮಗ, ಬೆಂಜಮಿನ್ ಹರ್ಷೆಲ್ ಬ್ಯಾಬೇಜ್, 1850 ರ ದಶಕದಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗುವ ಮೊದಲು ರೇಲ್ವೆಯಲ್ಲಿ ಬ್ರುನೆಲ್‍ಗಾಗಿ ಇಂಜಿನಿಯರ್ ಆಗಿ ಕೆಲಸಮಾಡುತ್ತಿದ್ದರು.[೩೭]

ಬ್ಯಾಬೇಜ್ ನೇತ್ರದರ್ಶಕವನ್ನೂ ಕಂಡುಹಿಡಿದನು. ಇದನ್ನು ಪರೀಕ್ಷಿಸಲು ವೈದ್ಯರಿಗೆ ನೀಡಿದರೂ ಅದು ಮರೆತುಹೋಯಿತು. ಹರ್ಮನ್ ವಾನ್ ಹೆಲ್ಮ್‌ಹೋಲ್ಟ್ಜ್ ಸ್ವತಂತ್ರವಾಗಿ ಕಂಡುಹಿಡಿದ ನಂತರವಷ್ಟೇ ಈ ಸಾಧನ ಬಳಕೆಗೆ ಬಂದಿತು.[೩೮]

ಬ್ಯಾಬೇಜ್ ಎರಡು ಬಾರಿ ಸಂಸತ್ತಿಗೆ ಫಿನ್ಸ್‌ಬರಿಯ ಬರೋಗಾಗಿ ಅಭ್ಯರ್ಥಿಯಾಗಿ ನಿಂತರು. 1832 ರಲ್ಲಿ ಅವರು ಐದು ಅಭ್ಯರ್ಥಿಗಳಲ್ಲಿ ಮೂರನೇ ಸ್ಥಾನ ಪಡೆದರು, ಆದರೆ 1834 ರಲ್ಲಿ ಅವರು ನಾಲ್ವರಲ್ಲಿ ಕೊನೆಯ ಸ್ಥಾನ ಪಡೆದರು.[೩೯][೪೦][೪೧]

ಆನ್ ದಿ ಎಕಾನಮಿ ಆಫ್ ಮೆಷಿನ್ ಅಂಡ್ ಮ್ಯಾನುಫ್ಯಾಕ್ಚರ್ ನಲ್ಲಿ, ಬ್ಯಾಬೇಜ್ ಈಗ ಬ್ಯಾಬೇಜ್ ತತ್ವ ಎಂದು ಕರೆಯಲ್ಪಡುವುದನ್ನು ವಿವರಿಸಿದ್ದಾರೆ. ಇದು ಶ್ರಮ ವಿಭಜನೆಯ ಕೆಲವು ಪ್ರಯೋಜನಗಳನ್ನು ವಿವರಿಸುತ್ತದೆ. ಬಹಳ ಕುಶಲ-ಮತ್ತು ಸಾಮಾನ್ಯವಾಗಿ ಬಹಳ ಸಂಬಳ ಪಡೆಯುವ-ಕೆಲಸಗಾರರು ತಮ್ಮ ಕೌಶಲ್ಯದ ಮಟ್ಟದ "ಕೆಳಗಿರುವ" ಕಾರ್ಯಗಳನ್ನು ಮಾಡುವುದರಲ್ಲಿ ತಮ್ಮ ಕೆಲಸದ ಸ್ವಲ್ಪ ಭಾಗವನ್ನು ಕಳೆಯುತ್ತಾರೆ ಎಂದು ಬ್ಯಾಬೇಜ್ ಗಮನಿಸಿದರು. ಕಾರ್ಮಿಕ ಪ್ರಕ್ರಿಯೆಯನ್ನು ಹಲವಾರು ಕಾರ್ಮಿಕರ ನಡುವೆ ವಿಂಗಡಿಸಬಹುದಾದರೆ, ಉನ್ನತ ಕೌಶಲ್ಯ ಮತ್ತು ಉನ್ನತ ವೆಚ್ಚದ ಕೆಲಸಗಾರರಿಗೆ ಉನ್ನತ ಕೌಶಲ್ಯದ ಕಾರ್ಯಗಳನ್ನು ಮಾತ್ರ ನಿಯೋಜಿಸಲು ಸಾಧ್ಯವಿದೆ, ಮತ್ತು ಇತರ ಕೆಲಸ ಕಾರ್ಯಗಳನ್ನು ಕಡಿಮೆ-ಕುಶಲ ಮತ್ತು ಕಡಿಮೆ ಸಂಬಳದ ಕೆಲಸಗಾರರಿಗೆ ಬಿಡಬಹುದು, ಇದರಿಂದಾಗಿ ಕಾರ್ಮಿಕ ವೆಚ್ಚವನ್ನು ಕಡಿತಗೊಳಿಸಬಹುದು. ಈ ತತ್ತ್ವವನ್ನು ಕಾರ್ಲ್ ಮಾರ್ಕ್ಸ್ ಟೀಕಿಸಿದರು. ಇದು ಕಾರ್ಮಿಕರ ಪ್ರತ್ಯೇಕತೆಯನ್ನು ಉಂಟುಮಾಡುತ್ತದೆ ಮತ್ತು ಪರಕೀಯತೆಗೆ ಕೊಡುಗೆ ನೀಡುತ್ತದೆ ಎಂದು ಅವರು ವಾದಿಸಿದರು. ಫ್ರೆಡೆರಿಕ್ ವಿನ್‍ಸ್ಲೋ ಟೇಲರ್ ಅವರ ವೈಜ್ಞಾನಿಕ ನಿರ್ವಹಣೆಯಲ್ಲಿ ಬ್ಯಾಬೇಜ್ ತತ್ತ್ವವು ಅಂತರ್ಗತ ಎಣಿಕೆಯಾಗಿದೆ.

ಅಭಿಪ್ರಾಯಗಳು

ಬದಲಾಯಿಸಿ
 
ಚಾರ್ಲ್ಸ್ ಬ್ಯಾಬೇಜ್‍ನ ಮೆದುಳನ್ನು ದ ಸೈನ್ಸ್ ಮ್ಯೂಸಿಯಮ್‍ನಲ್ಲಿ ಪ್ರದರ್ಶನಕ್ಕಿಡಲಾಗಿದೆ

ಬ್ಯಾಬೇಜ್ ಒಮ್ಮೆ ಕಾರ್ಖಾನೆಯ ಎಲ್ಲಾ ಮುರಿದ ಗಾಜಿನ ಫಲಕಗಳನ್ನು ಎಣಿಸಿದರು, 1857 ರಲ್ಲಿ "ತಟ್ಟೆ ಗಾಜಿನ ಕಿಟಕಿಗಳ ಒಡೆಯುವಿಕೆಯ ಕಾರಣಗಳ ತುಲನಾತ್ಮಕ ಆವರ್ತನದ ಕೋಷ್ಟಕ" ವನ್ನು ಪ್ರಕಟಿಸಿದರು: 464 ಮುರಿದ ಫಲಕಗಳಲ್ಲಿ, 14 "ಕುಡುಕ ಪುರುಷರು, ಮಹಿಳೆಯರು ಅಥವಾ ಹುಡುಗರಿಂದ ಉಂಟಾಗಿದ್ದವು."[೪೨][೪೩][೪೪]

ಜನಸಾಮಾನ್ಯರ ("ಜನಜಂಗುಳಿ") ಬಗ್ಗೆ ಬ್ಯಾಬೇಜ್‍ನ ಅರುಚಿಯಲ್ಲಿ 1864 ರಲ್ಲಿ ಬರೆದ "ಅಬ್ಸರ್ವೇಶನ್ಸ್ ಆಫ್ ಸ್ಟ್ರೀಟ್ ನ್ಯೂಯಿಸೆನ್ಸ್", ಜೊತೆಗೆ 80 ದಿನಗಳ ಅವಧಿಯಲ್ಲಿ 165 "ಉಪದ್ರವಗಳ" ತಾಳೆ ನೋಡುವುದು ಸೇರಿದ್ದವು. ಅವರು ವಿಶೇಷವಾಗಿ ಬೀದಿ ಸಂಗೀತವನ್ನು ಮತ್ತು ನಿರ್ದಿಷ್ಟವಾಗಿ ಆರ್ಗನ್ ಗ್ರೈಂಡರ್‌ಗಳ ಸಂಗೀತವನ್ನು ದ್ವೇಷಿಸುತ್ತಿದ್ದರು. ಇದರ ವಿರುದ್ಧ ಅವರು ವಿವಿಧ ಸ್ಥಳಗಳಲ್ಲಿ ವಾಗ್ದಾಳಿ ನಡೆಸಿದ್ದರು. ಕೆಳಗಿನ ಉಕ್ತಿಯು ವಿಶಿಷ್ಟವಾಗಿದೆ:

ಸಾವಿರಾರು ವ್ಯಕ್ತಿಗಳ ಮೇಲೆ ಉಂಟಾದ ದುಃಖವನ್ನು, ಮತ್ತು ಅವರ ಸಮಯದ ನಷ್ಟದಿಂದ ಬಹುಸಂಖ್ಯೆಯ ಬೌದ್ಧಿಕ ಕೆಲಸಗಾರರ ಮೇಲೆ ಹೇರಲ್ಪಟ್ಟ ಸಂಪೂರ್ಣ ಆರ್ಥಿಕ ದಂಡವನ್ನು ಅಂದಾಜು ಮಾಡುವುದು ಕಷ್ಟ. ಇವುಗಳನ್ನು ಆರ್ಗನ್-ಗ್ರೈಂಡರ್‌ಗಳು ಮತ್ತು ಇತರ ರೀತಿಯ ಉಪದ್ರವಗಳು ನಾಶಪಡಿಸುತ್ತವೆ.[೪೫]

1860 ರ ದಶಕದಲ್ಲಿ, ಬ್ಯಾಬೇಜ್ ಹೂಪ್-ರೋಲಿಂಗ್ ವಿರೋಧಿ ಅಭಿಯಾನವನ್ನು ಸಹ ಕೈಗೆತ್ತಿಕೊಂಡರು. ಕುದುರೆಗಳ ಕಾಲುಗಳ ಕೆಳಗೆ ತಮ್ಮ ಕಬ್ಬಿಣದ ಬಳೆಗಳನ್ನು ತಳ್ಳಲು ಹೂಪ್-ರೋಲಿಂಗ್ ಹುಡುಗರು ಕಾರಣವೆಂದು ಅವರು ದೂಷಿಸಿದರು. ಇದರ ಪರಿಣಾಮವೆಂದರೆ ಸವಾರನು ಕೆಳಗೆ ಬೀಳುತ್ತಾನೆ ಮತ್ತು ಹಲವುವೇಳೆ ಕುದುರೆಯ ಕಾಲು ಮುರಿಯುತ್ತದೆ.[೪೬] ಈ ವಿಷಯದಲ್ಲಿ ಬ್ಯಾಬೇಜ್ ಸ್ವಲ್ಪ ಕುಖ್ಯಾತಿಯನ್ನು ಗಳಿಸಿದರು. 1864 ರಲ್ಲಿ ಕಾಮನ್ಸ್‌ನಲ್ಲಿ ನಡೆದ ಚರ್ಚೆಯಲ್ಲಿ ಜನಪ್ರಿಯ ಆಟವಾದ ಟಿಪ್-ಕ್ಯಾಟ್ ಮತ್ತು ಬಳೆಗಳನ್ನು ಉರುಳಿಸುವುದರ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದ್ದಕ್ಕಾಗಿ ಅವರನ್ನು ಖಂಡಿಸಲಾಯಿತು.[೪೭]

ಭಾರತೀಯ ಚಿಂತನೆಯಿಂದ ಆಯಿತೆಂದು ಹೇಳಲ್ಪಟ್ಟ ಪ್ರಭಾವ

ಬದಲಾಯಿಸಿ

ಬ್ಯಾಬೇಜ್‌ನ ಆವಿಷ್ಕಾರಗಳು (ಸ್ವಲ್ಪ ಮಟ್ಟಿಗೆ ಹರ್ಷಲ್, ಡಿ ಮೋರ್ಗನ್ ಮತ್ತು ಜಾರ್ಜ್ ಬೂಲ್) ಭಾರತೀಯ ಚಿಂತನೆಯಿಂದ, ವಿಶೇಷವಾಗಿ ಭಾರತೀಯ ತರ್ಕದಿಂದ ಪ್ರಭಾವಿತವಾಗಿವೆ ಎಂದು ಕೆಲವರು ನೋಡಿದ್ದಾರೆ.[೪೮] ಹರ್ಷಲ್ ಜೊತೆಗೆ ಬ್ಯಾಬೇಜ್‍ರನ್ನು, ತನ್ನ ಚಿಕ್ಕಪ್ಪ ಜಾರ್ಜ್ ಎವರೆಸ್ಟ್ 1820 ರ ದಶಕದಲ್ಲಿ ಭಾರತೀಯ ಚಿಂತನೆಗೆ ಪರಿಚಯಿಸಿದರು ಎಂದು ಮೇರಿ ಎವರೆಸ್ಟ್ ಬೂಲ್ ಹೇಳಿಕೊಂಡಿದ್ದಾಳೆ:

ಸುಮಾರು 1825 ರಲ್ಲಿ, [ಎವರೆಸ್ಟ್] ಎರಡು ಅಥವಾ ಮೂರು ವರ್ಷಗಳ ಕಾಲ ಇಂಗ್ಲೆಂಡಿಗೆ ಬಂದರು ಮತ್ತು ಹರ್ಷಲ್ ಹಾಗೂ ಬ್ಯಾಬೇಜ್‍ರೊಂದಿಗೆ ವೇಗವಾದ ಮತ್ತು ಆಜೀವ ಸ್ನೇಹವನ್ನು ಬೆಳೆಸಿಕೊಂಡರು. ಅವರು ಆಗ ಸಾಕಷ್ಟು ಚಿಕ್ಕವರಾಗಿದ್ದರು. ಬ್ಯಾಬೇಜ್‍ನ ಒಂಬತ್ತನೇ ಬ್ರಿಡ್ಜ್‌ವಾಟರ್ ಟ್ರೀಟಿಸನ್ನು ಓದಲು ಮತ್ತು ಅದನ್ನು ಇಂಗ್ಲೆಂಡ್‌ನಲ್ಲಿರುವ ಅವರ ಸಮಕಾಲೀನರ ಕೃತಿಗಳೊಂದಿಗೆ ಹೋಲಿಸಬೇಕೆಂದು ನಾನು ಯಾವುದೇ ಪೂರ್ವಗ್ರಹವಿಲ್ಲದ ಗಣಿತಶಾಸ್ತ್ರಜ್ಞನನ್ನು ಕೇಳಿಕೊಳ್ಳುತ್ತೇನೆ; ಮತ್ತು ನಂತರ ಪವಾಡದ ಸ್ವಭಾವದ ವಿಲಕ್ಷಣ ಪರಿಕಲ್ಪನೆಯು ಎಲ್ಲಿಂದ ಬಂತು ಎಂದು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಇದು ವಕ್ರರೇಖೆಗಳ ಮೇಲಿನ ವಿಚಿತ್ರ ಬಿಂದುಗಳ ಬ್ಯಾಬೇಜ್‍ನ ವಿಚಾರಗಳಿಗೆ ಆಧಾರವಾಗಿದೆ (ಅಧ್ಯಾಯ, viii) - ಯುರೋಪಿಯನ್ ದೇವತಾಶಾಸ್ತ್ರ ಅಥವಾ ಹಿಂದೂ ತಾತ್ತ್ವಿಕ ಸಿದ್ಧಾಂತದಿಂದ? ಬ್ಯಾಬೇಜ್‍ರ ಪುಸ್ತಕವನ್ನು ಆ ದಿನದ ಇಂಗ್ಲಿಷ್ ಪಾದ್ರಿಗಳು ಓಹ್! ಹೇಗೆ ದ್ವೇಷಿಸುತ್ತಿದ್ದರು![೪೯]

ಮೇರಿ ಬೂಲ್ ಇದನ್ನೂ ಹೇಳುತ್ತಾಳೆ:

1830-1865 ರ ಗಣಿತದ ವಾತಾವರಣದ ಮೇಲೆ ಬ್ಯಾಬೇಜ್, ಡಿ ಮೋರ್ಗನ್ ಮತ್ತು ಜಾರ್ಜ್ ಬೂಲ್‍ರಂತಹ ಮೂವರು ವ್ಯಕ್ತಿಗಳ ತೀವ್ರವಾದ ಹಿಂದೂಕರಣದ ಪರಿಣಾಮ ಏನಾಗಿರಬೇಕು ಎಂದು ಯೋಚಿಸಿ. ಭೌತಶಾಸ್ತ್ರದಲ್ಲಿ ಈಗ ಯಾವುದರಿಂದ ತನಿಖೆಗಳನ್ನು ನಡೆಸಲಾಗುತ್ತದೊ ಅಂತಹ ಸದಿಶ ವಿಶ್ಲೇಷಣೆ ಮತ್ತು ಗಣಿತಶಾಸ್ತ್ರವನ್ನು ಸೃಷ್ಟಿಸುವಲ್ಲಿ ಅದು ಎಷ್ಟು ಪಾಲು ಹೊಂದಿತ್ತು?[೪೯]

ಸ್ಮರಣೆ

ಬದಲಾಯಿಸಿ

ಈ ಪಟ್ಟಿಯಲ್ಲಿ ತೋರಿಸಿರುವಂತೆ ಬ್ಯಾಬೇಜ್‍ನನ್ನು ಹಲವಾರು ಉಲ್ಲೇಖಗಳಿಂದ ಸ್ಮರಿಸಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚಂದ್ರನ ಮೇಲಿನ ಬ್ಯಾಬೇಜ್ ಎಂಬ ಕುಳಿ ಮತ್ತು ಮಿನ್ನೇಸೋಟ ವಿಶ್ವವಿದ್ಯಾನಿಲಯದಲ್ಲಿನ ಮಾಹಿತಿ ತಂತ್ರಜ್ಞಾನ ಅಭಿಲೇಖಾಗಾರ ಮತ್ತು ಸಂಶೋಧನಾ ಕೇಂದ್ರವಾದ ಚಾರ್ಲ್ಸ್ ಬ್ಯಾಬೇಜ್ ಇನ್ಸ್ಟಿಟ್ಯೂಟ್‍ಗೆ ಅವನ ಹೆಸರನ್ನು ಇಡಲಾಯಿತು. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿನ ದೊಡ್ಡ ಬ್ಯಾಬೇಜ್ ಉಪನ್ಯಾಸ ರಂಗಮಂದಿರವನ್ನು ಪದವಿಪೂರ್ವ ವಿಜ್ಞಾನ ಉಪನ್ಯಾಸಗಳಿಗೆ ಬಳಸಲಾಗುತ್ತದೆ. ಇದು ವಿಶ್ವವಿದ್ಯಾನಿಲಯದಲ್ಲಿ ಅವರ ಸಮಯವನ್ನು ಸ್ಮರಿಸುತ್ತದೆ.

  • ಬ್ರಿಟಿಷ್ ರೈಲ್ 1990 ರ ದಶಕದಲ್ಲಿ ಪ್ರಸಿದ್ಧ ಮತ್ತು ಮಹತ್ವದ ವಿಜ್ಞಾನಿಗಳ ಹೆಸರನ್ನು ಇಂಜಿನ್ನುಗಳಿಗೆ ಇಡುವ ಕಾರ್ಯಕ್ರಮದ ಭಾಗವಾಗಿ ಒಂದು ಇಂಜಿನ್‌ಗೆ ಬ್ಯಾಬೇಜ್ ಹೆಸರಿಟ್ಟಿತು.
  • ಪ್ಲೈಮೌತ್ ವಿಶ್ವವಿದ್ಯಾನಿಲಯವು ಚಾರ್ಲ್ಸ್ ಬ್ಯಾಬೇಜ್‍ರನ್ನು ಬ್ಯಾಬೇಜ್ ಕಟ್ಟಡದೊಂದಿಗೆ ಸ್ಮರಿಸುತ್ತದೆ. ವಿಶ್ವವಿದ್ಯಾಲಯದ ಗಣಕ ಶಾಲೆಯು ಇಲ್ಲಿ ನೆಲೆಗೊಂಡಿದೆ.
  • ಕೇಂಬ್ರಿಡ್ಜ್‌ಶೈರ್ ಕೌಂಟಿ ಕೌನ್ಸಿಲ್‌ನ ಐಟಿ ಸೇವೆಯು ಕೇಂಬ್ರಿಡ್ಜ್‌ನ ಕ್ಯಾಸಲ್ ಪಾರ್ಕ್ ಕಚೇರಿ ಸಂಕೀರ್ಣದಲ್ಲಿರುವ ಬ್ಯಾಬೇಜ್ ಹೌಸ್‌ನಲ್ಲಿ ನೆಲೆಗೊಂಡಿದೆ.
  • ಅಲ್ಲದೆ, ಮಾಂಕ್ಸ್ ವಾಕ್ ಶಾಲೆಯಲ್ಲಿ, ವಿಜ್ಞಾನ ಜಗತ್ತಿನಲ್ಲಿ ಅವರ ಕೆಲಸದ ಸ್ಮರಣಾರ್ಥವಾಗಿ "ಬ್ಯಾಬೇಜ್" ಎಂಬ ಭವನವಿದೆ.
  • ಚೆಸ್ಸಿಂಗ್‌ಟನ್‌ನಲ್ಲಿನ, ರಾಯಲ್ ಬರೋ ಆಫ್ ಕಿಂಗ್‌ಸ್ಟನ್ ಅಪಾನ್ ಥೇಮ್ಸ್‌ನಲ್ಲಿ, ಹೊಸ ವಸತಿ ಅಭಿವೃದ್ಧಿಯಲ್ಲಿನ ರಸ್ತೆಯನ್ನು ಚಾರ್ಲ್ಸ್ ಬ್ಯಾಬೇಜ್ ಕ್ಲೋಸ್ ಎಂದು ಹೆಸರಿಸಲಾಗಿದೆ.
  • ಜಿಇಸಿ 4000 ಸರಣಿಯ ಮಿನಿಕಂಪ್ಯೂಟರ್‌ಗಳ ಬ್ಯಾಬೇಜ್ ಪ್ರೋಗ್ರಾಮಿಂಗ್ ಭಾಷೆಗೆ ಇವರ ಹೆಸರಿಡಲಾಗಿದೆ.
  • ಚಾರ್ಲ್ಸ್ ಬ್ಯಾಬೇಜ್ 2008 ರ ಸ್ಟ್ರಾಟಜಿ ವಿಡಿಯೋ ಗೇಮ್ ಸಿವಿಲೈಸೇಶನ್ ರೆವಲ್ಯೂಷನ್‌ನಲ್ಲಿ ಮಹಾನ್ ಚಿಂತಕನಾಗಿ ಕಾಣಿಸಿಕೊಳ್ಳುತ್ತಾರೆ.[೫೦]
  • ಬ್ಯಾಬೇಜ್ ಆಗಾಗ್ಗೆ ಸ್ಟೀಮ್‍ಪಂಕ್ ಕೃತಿಗಳಲ್ಲಿ ಕಾಣಿಸಿಕೊಳ್ಳುತ್ತಾನೆ (ಇದರ ಎಣಿಕೆಯು ದಣಿಸುವ ಪ್ರಯತ್ನವಾಗಿದೆ). ಅಲ್ಲಿ ಇವನು ಡಿಫರೆನ್ಸ್ ಎಂಜಿನನ್ನು ನಿರ್ಮಿಸುತ್ತಾನೆ, ವಿಕ್ಟೋರಿಯನ್ ಯುಗದಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಉತ್ತೇಜಿಸುತ್ತಾನೆ.
  • ಟೊಟ್ನೆಸ್ ಮ್ಯೂಸಿಯಂನಲ್ಲಿ ಬ್ಯಾಬೇಜ್ ರೂಮ್ ಇದೆ, ಅಲ್ಲಿ ಬ್ಯಾಬೇಜ್ ತಮ್ಮ ಯೌವನವನ್ನು ಕಳೆದರು.
  • ಲಂಡನ್‌ನ 1 ಡಾರ್ಸೆಟ್ ಸ್ಟ್ರೀಟ್‌ನಲ್ಲಿ ಅವರು ಕಳೆದ 40 ವರ್ಷಗಳ ನೆನಪಿಗಾಗಿ ಹಸಿರು ಫಲಕವಿದೆ.

ಪ್ರಕಟಣೆಗಳು

ಬದಲಾಯಿಸಿ
  • Babbage, Charles (1826). A Comparative View of the Various Institutions for the Assurance of Lives. London: J. Mawman.
  • Babbage, Charles (1830). Reflections on the Decline of Science in England, and on Some of Its Causes. London: B. Fellowes.
  • Babbage, Charles (1835). On the Economy of Machinery and Manufactures (4 ed.). London: Charles Knight.
  • Babbage, Charles (1837). The Ninth Bridgewater Treatise, a Fragment. London: John Murray. (reissued by Cambridge University Press 2009, ISBN 978-1-108-00000-0)
  • Babbage, Charles (1841). Table of the Logarithms of the Natural Numbers from 1 to 108000. London: William Clowes and Sons. (the LOCOMAT site contains a reconstruction of this table)
  • Babbage, Charles (1851). The Exposition of 1851. London: John Murray.
  • Babbage, Charles (1864). Passages from the Life of a Philosopher. London: Longman.
  • Babbage, Charles. Science and Reform. Selected Works of Charles Babbage; edited by Anthony Hyman; Cambridge University Press

ಉಲ್ಲೇಖಗಳು

ಬದಲಾಯಿಸಿ
  1. GRO Register of Deaths: December 1871 1a 383 MARYLEBONE: Charles Babbage, aged 79
  2. Copeland, B. Jack (18 December 2000). "The Modern History of Computing". The Modern History of Computing (Stanford Encyclopedia of Philosophy). Stanford Encyclopedia of Philosophy. Metaphysics Research Lab, Stanford University. Retrieved 1 March 2017.
  3. Halacy, Daniel Stephen (1970). Charles Babbage, Father of the Computer. Crowell-Collier Press. ISBN 978-0-02-741370-0.
  4. "Charles Babbage Institute: Who Was Charles Babbage?". cbi.umn.edu.
  5. Swade, Doron (2002). The Difference Engine: Charles Babbage and the Quest to Build the First Computer. Penguin. ISBN 9780142001448.
  6. Swade, Doron (2000). The Difference Engine: Charles Babbage and the Quest to Build the First Computer. Penguin. p. 84-87. ISBN 01420.01449. {{cite book}}: Check |isbn= value: invalid character (help)
  7. Plaque #1140 on Open Plaques.
  8. Hyman, Anthony (1982). Charles Babbage, Pioneer of the Computer. Princeton University Press. p. 5.
  9. Moseley, Maboth (1964). Irascible Genius, The Life of Charles Babbage. Chicago: Henry Regnery Company. p. 29.
  10. "The Late Mr. Charles Babbage, F.R.S" . The Times. UK.
  11. Hook, Diana H. (2002). Origins of cyberspace: a library on the history of computing, networking, and telecommunications. Norman Publishing. pp. 161, 165. ISBN 0930405854. {{cite book}}: Unknown parameter |coauthors= ignored (|author= suggested) (help)
  12. Moseley, Maboth (1964). Irascible Genius, The Life of Charles Babbage. Chicago: Henry Regnery Company. p. 39.
  13. ೧೩.೦ ೧೩.೧ Venn, J.; Venn, J. A., eds. (1922–1958). "Babbage, Charles". Alumni Cantabrigienses (10 vols) (online ed.). Cambridge University Press. {{cite encyclopedia}}: Cite has empty unknown parameters: |1= and |HIDE_PARAMETER= (help); External link in |title= (help)CS1 maint: date and year (link)
  14. Wilkes (2002) p.355
  15. Hofstadter, Douglas R. (1979, 2000). Gödel, Escher, Bach: an Eternal Golden Braid. Penguin Books. p. 726. {{cite book}}: Check date values in: |date= (help)
  16. "Charles Babbage'S Computer Engines". Archived from the original on 19 ಜುಲೈ 2011. Retrieved 13 May 2010.
  17. "Attraction information for Dudmaston Hall". VisitBritain. Retrieved 29 January 2009.
  18. Valerie Bavidge-Richardson. "Babbage Family Tree 2005". Archived from the original on 13 ಅಕ್ಟೋಬರ್ 2007. Retrieved 22 October 2007.
  19. "Henry Prevost Babbage – The Babbage Engine". Computer History Museum. Retrieved 29 January 2009.
  20. "Henry Babbage's Analytical Engine Mill, 1910". Science Museum. 16 January 2007. Archived from the original on 3 ಜನವರಿ 2016. Retrieved 29 January 2009.
  21. Horsley, Victor (1909). "Description of the Brain of Mr. Charles Babbage, F.R.S". Philosophical Transactions of the Royal Society of London. Series B, Containing Papers of a Biological Character. 200: 117–32. doi:10.1098/rstb.1909.0003. Retrieved 7 December 2007. Subscription required.
  22. Babbage, Neville (1991). "Autopsy Report on the Body of Charles Babbage ( "the father of the computer ")". Medical Journal of Australia. 154 (11): 758–9. PMID 2046574. {{cite journal}}: Unknown parameter |month= ignored (help)
  23. Williams, Michael R. (1998). "The "Last Word " on Charles Babbage". IEEE Annals of the History of Computing. 20: 10–4. doi:10.1109/85.728225.(subscription required)
  24. "Postmortem report by John Gregory Smith, F.R.C.S. (anatomist)". Science and society.co.UK. Retrieved 29 January 2009.
  25. "Babbage's brain". www.DanYEY.co.uk. Retrieved 29 January 2009.
  26. "Visit the museum, Galleries, Computing, Overview". Science Museam. Archived from the original on 27 ಜುಲೈ 2013. Retrieved 25 October 2010.
  27. Gleick, J. (2011) The Information: A History, a Theory, a Flood, London, Fourth Estate, p 104
  28. Roegel, Denis (April–June 2009), "Prototype Fragments from Babbage's First Difference Engine", IEEE Annals of the History of Computing, 31 (2): 70–5
  29. Shiels, Maggie (10 May 2008). "Victorian 'supercomputer' is reborn". BBC News. Retrieved 11 May 2008.
  30. "Overview – The Babbage Engine". Computer History Museum. Retrieved 29 January 2009.
  31. Fuegi J, Francis J (October–December 2003). "Lovelace & Babbage and the creation of the 1843 'notes'". Annals of the History of Computing. 25 (4): 16–26. doi:10.1109/MAHC.2003.1253887. See pages 19, 25
  32. "Electronics Times: Micro-machines are fit for space". Findarticles.com. 11 October 1999. Retrieved 29 January 2009.
  33. Babbage's Last Laugh(subscription required)
  34. "Book of Members, 1780–2010: Chapter B" (PDF). American Academy of Arts and Sciences. Retrieved 28 April 2011.
  35. Kahn, David L. (1996). The Codebreakers: The Story of Secret Writing. New York: Scribner. ISBN 978-0-684-83130-5.
  36. Babbage, Charles – "Passages from the Life of a Philosopher", page 317-318. Longman. 1864.
  37. "Babbage, Benjamin Herschel". Bright Sparcs Biographical entry. Retrieved 15 May 2008.
  38. "Medical Discoveries, Ophthalmoscope". Discoveriesinmedicine.com. Retrieved 29 January 2009.
  39. Crowther, J. G. (1968). Scientific Types. London: Barrie & Rockliff. p. 266. ISBN 0248997297.
  40. Hyman Anthony (1982). Charles Babbage, Pioneer of the Computer. Princeton, New Jersey: Princeton University Press. pp. 82–7. ISBN 0691083037.
  41. Moseley (1964). Irascible Genius, The Life of Charles Babbage. Chicago: Henery Regnery. pp. 120–1.- Note some confusion as to the dates.
  42. Babbage, Charles (1857). "Table of the Relative Frequency of Occurrence of the Causes of Breaking of Plate Glass Windows". Mechanics Magazine. 66: 82.
  43. Babbage, Charles (1989). Martin Campbell-Kelly (ed.). The Works of Charles Babbage. Vol. V. London: William Pickering. p. 137. ISBN 1851960058.
  44. "The insurance cyclopeadia: being a ... – Google Books". Google Books. Retrieved 22 February 2011.
  45. Campbell-Kelly, Martin; Babbage, Charles (1994). "Ch 26". Passages from the Life of a Philosopher. Pickering & Chatto Publishers. p. 342. ISBN 1-85196-040-6.{{cite book}}: CS1 maint: multiple names: authors list (link)
  46. Passages from the life of a philosopher By Charles Babbage; p360
  47. Hansard's parliamentary debates. THIRD SERIES COMMENCING WITH THE ACCESSION OF WILLIAM IV. 27° & 28° VICTORIA, 1864. VOL. CLXXVI. COMPRISING THE PERIOD FROM THE TWENTY-FIRST DAY OF JUNE 1864, TO THE TWENTY-NINTH DAY OF JULY 1864. Parliament, Thomas Curson Hansard "Street Music (Metropolis) Bill "; V4, p471 [೧]
  48. Jonardon Ganeri (2001), Indian logic: a reader, Routledge, p. vii, ISBN 0700713069
  49. ೪೯.೦ ೪೯.೧ Boole, Mary Everest "Indian Thought and Western Science in the Nineteenth Century", Boole, Mary Everest "Collected Works" eds E M Cobham and E S Dummer London, Daniel 1931 pp.947–967
  50. 03:04 pm (20 July 2008). "Civilization Revolution: Great People: "CivFanatics" Retrieved on 3 September 2009". Civfanatics.com. Archived from the original on 17 ಮಾರ್ಚ್ 2011. Retrieved 22 February 2011.{{cite web}}: CS1 maint: numeric names: authors list (link)

ಹೊರಗಿನ ಕೊಂಡಿಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: