ಯೌವನವು ಒಬ್ಬರು ಪ್ರಾಯದವರಾಗಿದ್ದಾಗಿನ ಜೀವನದ ಸಮಯ, ಆದರೆ ಹಲವುವೇಳೆ ಇದರ ಅರ್ಥ ಬಾಲ್ಯ ಹಾಗು ಪಡೆತನದ ನಡುವಿನ ಸಮಯ (ಪ್ರೌಢಾವಸ್ಥೆ). ಮನುಷ್ಯ ಜೀವನದಲ್ಲಿ ದೈಹಿಕ ಬೆಳವಣಿಗೆ ಸ್ಥಗಿತಗೊಂಡ ಅನಂತರದ ಸಾಮಾಜಿಕ ಜೀವನದ ಜವಾಬ್ದಾರಿಗಳನ್ನು ರೂಢಿಸಿಕೊಳ್ಳುತ್ತಿರುವ ಹಲವಾರು ವರ್ಷಗಳ ಅವಧಿ (ಯೂತ್).  ಸಾಮಾನ್ಯವಾಗಿ, ಇಂದು, ಜಾಗತಿಕ ಜಗತ್ತಿನಲ್ಲಿ, 18-20 ವಯಸ್ಸನ್ನು ದಾಟಿದ ಮತ್ತು 25-35 (ಮತ್ತು ನಂತರವೂ) ಯುವಕರು ಮತ್ತು ಮಹಿಳೆಯರಂತೆ ಮಾತನಾಡುವುದು ವಾಡಿಕೆ.[][] ಯೌವನದ ಭಾಗವಾಗಿರುವ ನಿರ್ದಿಷ್ಟ ವಯಸ್ಸಿನ ಪರಿಮಿತಿಯ ವ್ಯಾಖ್ಯಾನಗಳು ಬದಲಾಗುತ್ತವೆ. ಒಬ್ಬ ವ್ಯಕ್ತಿಯ ವಾಸ್ತವಿಕ ಪ್ರೌಢಾವಸ್ಥೆ ಮತ್ತು ಅವರ ಕಾಲಾನುಕ್ರಮದ ವಯಸ್ಸಿನ ನಡುವೆ ಸಾಮ್ಯತೆಯಿಲ್ಲದಿರಬಹುದು, ಏಕೆಂದರೆ ಎಲ್ಲ ವಯಸ್ಸಿನಲ್ಲಿ ಪ್ರೌಢವಲ್ಲದ ವ್ಯಕ್ತಿಗಳು ಇರಬಹುದು.

ಒಬ್ಬ ಯುವತಿ

ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ವ್ಯಾಪಾರಗಳು ಪಕ್ವವಾಗಿ ವ್ಯಕ್ತಿಯದೇ ಆದ ವೈಶಿಷ್ಟ್ಯಗಳಾಗಿ ಹೊಮ್ಮಲು ಬೇಕಾಗುವ ಕಾಲಾವಧಿಗೆ ಯೌವನವೆನ್ನುವುದಿದೆ. ದೇಶ, ಕಾಲ, ಧರ್ಮಗಳಿಂದ ಹಾಗೂ ಮನೆತನದ ಮತ್ತು ಹೊರಗಿನ ಅಂದರೆ ಸಾರ್ವಜನಿಕ ಕ್ಷೇತ್ರಗಳ ಪ್ರಭಾವಗಳಿಂದ ಉದ್ಭವಿಸುವ ವೈಯಕ್ತಿಕ ಮುದ್ರೆಯನ್ನು ಗಣಿಸಿ ವ್ಯಕ್ತಿ ಯೌವನಪೂರ್ವ ಕಾಲದವನೆ, ಯುವಕನೆ, ಬೆಳೆದವನೆ ಎಂಬುದನ್ನು ಸ್ಥೂಲವಾಗಿಯೇ ನಿರ್ಧರಿಸಬೇಕಾಗುತ್ತದೆ. ಆದ್ದರಿಂದ ವ್ಯಕ್ತಿಯ ಇಂತಿಷ್ಟನೇ ವಯಸ್ಸಿನಿಂದ ಇಂತಿಷ್ಟನೇ ವಯಸ್ಸಿನ ತನಕವೇ ಯೌವನಕಾಲವೆಂದು ಹೇಳುವುದು ತಪ್ಪಾಗುತ್ತದೆ. ಯೌವನಕಾಲವೆಂದು ನಿರ್ಧರಿಸುವಾಗ ಗಣಿಸಬೇಕಾದ ಅನೇಕ ವಿಷಯಗಳಲ್ಲಿ ವ್ಯಕ್ತಿಯ ದೈಹಿಕ ಬೆಳವಣಿಗೆ ಮುಗಿದಿದೆ ಎನ್ನುವುದು ಒಂದು ಮಾತ್ರ. ಒಬ್ಬೊಬ್ಬ ವ್ಯಕ್ತಿ ಬೆಳೆಯುತ್ತಿರುವ ಪರಿಸರದಲ್ಲಿ ವ್ಯತ್ಯಾಸಗಳಿರುವುದರಿಂದ ಒಬ್ಬೊಬ್ಬ ವ್ಯಕ್ತಿಯ ಯೌವನಕಾಲವನ್ನೂ ಬೇರೆಬೇರೆಯಾಗಿಯೇ ನಿರ್ಧರಿಸಬೇಕಾಗುತ್ತದೆ. ಯಾವುದೊಂದು ಸಣ್ಣ ಸಮಾಜದಲ್ಲಿ ಕೂಡ ಇದು ನಿಜಸ್ಥಿತಿ ಆಗಿರುವುದರಿಂದ ಬೇರೆ ಬೇರೆ ದೇಶಗಳಲ್ಲಿ ಯೌವನವೆಂದು ಗಣಿಸುವ ಕಾಲ ಬೇರೆ ಬೇರೆ ಆಗಿರುವುದು ಸಾಧ್ಯ.

ಯೌವನವು ಜೀವನದ ಕ್ರಮ. ಯೌವನವು ಸೀಮಿತ. ಯೌವನದ ಕಾಲ ಏಳಿಗೆಯನ್ನು ಕಾಣುವ ಕಾಲ, ಮನುಷ್ಯನ ಜೀವನದಲ್ಲಿ ಅತೀ ಮುಖ್ಯವಾದ ಘಟ್ಟ ಯೌವನ ಏಕೆಂದರೆ ಈ ಸಮಯದಲ್ಲಿ ಮನುಷ್ಯನ ದೇಹ ಬೆಳವಣಿಗೆ, ಮಾನಸಿಕ ಬೆಳವಣಿಗೆ ಅತೀ ಹೆಚ್ಚಿನ ವೇಗದಲ್ಲಿ ನಡೆಯುತ್ತದೆ. ಈ ಕಾಲದಲ್ಲಿ ಮನುಷ್ಯ ಏಳಿಗೆ ಕಾಣುತ್ತಾನೆ, ಜವಾಬ್ದಾರಿ ಹೊಂದುತ್ತಾನೆ, ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಾನೆ, ಸಂಬಂಧದ ಬೆಲೆ ತಿಳಿಯುತ್ತಾನೆ, ಹೊಸ-ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾನೆ. ತಂದೆ-ತಾಯಿಗಳ ಪ್ರೀತಿಯ ಆವರಣದಿಂದ ಹೊರಗೆ ಬಂದು ನಿಜವಾದ ಪ್ರಪಂಚದ ಪರಿಚಯ ತಿಳಿದುಕೊಳ್ಳುತ್ತಾನೆ. ಯೌವನದಲ್ಲಿ ಕೂಡಿಟ್ಟ ಹಣ, ಆಸ್ತಿ, ಅಂತಸ್ತು, ಸಂಪಾದನೆಗಳೆಲ್ಲ ಮುಪ್ಪಿನ ಕಾಲದಲ್ಲಿ ಉಪಯೋಗಕ್ಕೆ ಬರುತ್ದೆ. ಈ ಯೌವನ ಕಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಂಡು ಬಂದಲ್ಲಿ ಮುಂದೆ ಮುಪ್ಪಿನ ಕಾಲವನ್ನು ಸುಲಭವಾಗಿ ನಡೆಸಬಹುದು. ಸಮತೋಲನವಾದ ಜೀವನ ಅತಿ ಮುಖ್ಯ. ಯೌವನವನ್ನು ಜೇನುಹುಳಕ್ಕೆ ಹೋಲಿಸಬಹುದು, ಏಕೆಂದರೆ ದುಂಬಿಯು ಹೇಗೆ ಸಕಾಲದಲ್ಲಿ ಜೇನನ್ನು ಶೇಖರಿಸಿ ಮುಂದೆ ತನಗೆ ಬೇಕಾದಲ್ಲಿ ಉಪಯೋಗಿಸುತ್ತದೋ ಹಾಗೆಯೇ ಯೌವನದಲ್ಲಿ ಚೆನ್ನಾಗಿ ದುಡಿದೂ, ಕ್ರಮಬದ್ಧತೆಯಿಂದ ನಡೆದು, ಆರೋಗ್ಯವನ್ನು ಕಾಪಾಡಿಕೊಂಡು ಬಂದಲ್ಲಿ ಮುಂದೆ ಜೀವನ ಸುಖಮಯವಾಗಿ ನಡೆಸಬಹುದು. ಯೌವನದ ಕಾಲ ಸಾಮನ್ಯವಾಗಿ ೧೫ ರಿಂದ ೨೫ ದವರೆಗೆ ಎಂದು ಹೇಳುತ್ತಾರೆ, ಆದರೆ ೩೫ ದರವರೆಗೂ ಯೌವನದ ಕಾಲ ಎಂದು ಪರಿಗಣಿಸಬಹುದು. ಯೌವನದ ಕಾಲದಲ್ಲಿ ಮತ ಚಲಾವಣೆಯ ಹಕ್ಕು ಸಿಗುತ್ತದೆ, ವಾಹನ ಚಾಲನೆ ಮಾಡಬಹುದು, ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆಯಬಹುದು. ಯೌವನ ಜೀವನದಲ್ಲಿ ಬರುವ ಅತೀ ಸುಂದರವಾದ, ಅದ್ಭುತವಾದ ಚಕಿತಗೋಳಿಸುವ ದಿನಗಳು. ಈ ಕಾಲವನ್ನು ಕೆಟ್ಟ ರೀತಿಗಳಿಗೆ ಉದಾಹರಣೆಗೆ: ಕುಡಿತ, ತಂಬಾಕು, ಹೆಣ್ಣುಗಳ ಸಹವಾಸ, ಕಳ್ಳತನ, ದರೋಡೆ, ಕೊಲೆ, ರೌಡಿಗಳ ಸಹವಾಸ, ಹೀಗೆ ಅನೇಕ ಕೆಟ್ಟ ಹಾಗು ತಪ್ಪು ದಾರಿಗಳಲ್ಲಿ ನಡೆದು ಅತಿ ಅಪರೂಪವಾಗಿ ದೊರೆಯುವ ಯೌವನವನ್ನು ಹಾಳುಮಾಡಿಕೊಂಡರೆ ಮುಂದೆ ಜೀವನದಲ್ಲಿ ಒಳ್ಳೆ ಮನುಷ್ಯನಾಗಿ ಬದುಕುವುದು ಅಸಾಧ್ಯ. ಹಾಗಾಗಿ ನಮ್ಮ ಜೀವನ ನಮ್ಮ ಯೌವನ ನಮ್ಮ ಹಿಡಿತದಲ್ಲಿಯೇ ಇದೆ. ಅದನ್ನು ಸಾಕಾರಗೊಳಿಸುವುದು ಅತಿ ಮುಖ್ಯ.

ಒಂದು ಸಂವತ್ಸರವನ್ನು ಹೇಗೆ ವಸಂತ, ಬೇಸಗೆ, ಮಾಗಿ ಮತ್ತು ಚಳಿಗಾಲವೆಂದು ನಾಲ್ಕು ಅವಧಿಗಳಾಗಿ ಗಣಿಸುವುದಿದೆಯೋ ಹಾಗೆಯೇ ಮನುಷ್ಯ ಜೀವನವನ್ನೂ ಪ್ರಾಚೀನ ಗ್ರೀಸಿನ ತತ್ತ್ವಜ್ಞಾನಿ ಹಾಗೂ ವಿಜ್ಞಾನಿ ಪೈಥಾಗೊರಸ್ ಗಣಿಸಿದ್ದಾನೆ. ಆ ಪ್ರಕಾರ ಜೀವನದ ವಸಂತಕಾಲ ಎನ್ನುವುದು ಸು. ಪೈಥಾಗರಸ್ ಯುವಕರನ್ನು "ಬೇಸಿಗೆ" ಎಂದು ಕರೆದರು ಮತ್ತು ಬಾಲ್ಯ ಮತ್ತು ಹದಿಹರೆಯದವರನ್ನು ಒಳಗೊಂಡ "ವಸಂತ" 20 ವರ್ಷಗಳವರೆಗೆ ಇರುತ್ತದೆ ಮತ್ತು "ಬೇಸಿಗೆ" 20 ರಿಂದ 40 ವರ್ಷಗಳವರೆಗೆ ಇರುತ್ತದೆ ಎಂದು ಹೇಳಿಕೊಂಡರು.[]

ಸೋಲನ್ ಎಂಬ ಇನ್ನೊಬ್ಬ ತತ್ತ್ವಜ್ಞಾನಿಯ ಪ್ರಕಾರ ಮನುಷ್ಯ ಜೀವನವನ್ನು 7 ವರ್ಷಗಳ ಅವಧಿಯ 10 ಘಟ್ಟಗಳಾಗಿ ಪರಿಗಣಿಸಬಹುದು.  ಬಾಲ್ಯ ಹಾಗೂ ಪ್ರಬುದ್ಧತೆಯ ಘಟ್ಟಗಳನ್ನು ಕಳೆದ ಅನಂತರ 14 ರಿಂದ 24ನೆಯ ವರ್ಷ ವಯಸ್ಸಿನ ಅವಧಿ ಈತನ ಪ್ರಕಾರ ವ್ಯಕ್ತಿಯ ಯೌವನಕಾಲ. ದೈಹಿಕ ಸಾಮರ್ಥ್ಯತೆಯ ಪರಮಾವಧಿಕಾಲ, ಸಂತಾನ ಪ್ರಾಪ್ತಿಯ ಅನುಕೂಲತಮ ಕಾಲ.[][]

ಜನಸಾಮಾನ್ಯರ ಗಣನೆಯಂತೆ ಯೌವನ ಎಂದರೆ ವ್ಯಕ್ತಿ ಲಂಗುಲಗಾಮುಗಳಿರದಂತಿರುವುದನ್ನು ಬಿಟ್ಟು ಸ್ವತಃ ಸಂಸಾರ ಹೂಡಿ ಸಾಮಾಜಿಕ ಹೊಣೆಗಾರಿಕೆಗಳನ್ನು ರೂಢಿಸಿಕೊಳ್ಳುತ್ತಿರುವ ಕಾಲವೆಂದು ಸರ್ವವೇದ್ಯವಾಗಿದೆ. ವಯಸ್ಕ ಎಂದು ಗಣಿಸಲ್ಪಡುವುದಕ್ಕೆ ಅಗತ್ಯವಾದ ಶಿಕ್ಷಣಕಾಲ ಇದು. ಈ ಕಾಲದಲ್ಲಿ ವ್ಯಕ್ತಿ ವಿದ್ಯಾಶಿಕ್ಷಣವನ್ನು ಮುಗಿಸಿ ಖಚಿತವಾದ ಉದ್ಯೋಗ ಒಂದನ್ನು ಗಳಿಸುತ್ತಾನೆ. ರಾಜಕೀಯ ಹಾಗೂ ಸಾಮಾಜಿಕ ಹಕ್ಕುಗಳನ್ನು ಸಂಪಾದಿಸಿ ಅವುಗಳ ಬಗ್ಗೆ ತನ್ನ ಹೊಣೆಯೇನು ಎಂಬುದನ್ನು ಅರಿಯುತ್ತಾನೆ. ಸಾಮಾನ್ಯವಾಗಿ ಆರ್ಥಿಕವಾಗಿ ತಂದೆತಾಯಂದಿರ ನೆರವು ಪಡೆಯುವುದನ್ನು ಬಿಟ್ಟು ಸ್ವತಂತ್ರನಾಗುತ್ತಾನೆ. ಮದುವೆಯಾಗಿ ಮಕ್ಕಳ ತಂದೆ ಎನಿಸಿಕೊಳ್ಳುತ್ತಾನೆ.

ಉಲ್ಲೇಖಗಳು

ಬದಲಾಯಿಸಿ
  1. "African Youth Charter" (PDF). AFRICAN UNION COMMISSION. (in ಇಂಗ್ಲಿಷ್).
  2. "Youth and the city in the global south by Hansen, Karen Tranberg, Anne Line Dalsgaard, Katherine V. Gough, Ulla Ambrosius Madsen, Karen Valentin and Norbert Wildermuth" (in ಇಂಗ್ಲಿಷ್). 2009.
  3. "Youth". The Great Soviet Encyclopedia.
  4. "Youth". Macmillan Dictionary. Macmillan Publishers Limited. Retrieved 2013-8-15.
  5. "Youth". Merriam-Webster. Retrieved November 6, 2012.

ಹೊರಗಿನ ಕೊಂಡಿಗಳು

ಬದಲಾಯಿಸಿ
  • "Youth", BBC Radio 4 discussion with Tim Whitmarsh, Thomas Healy and Deborah Thom (In Our Time, Apr. 23, 2003)


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಯೌವನ&oldid=1241254" ಇಂದ ಪಡೆಯಲ್ಪಟ್ಟಿದೆ