ಬಾಲ್ಯವು ಹುಟ್ಟಿನಿಂದ ಹಿಡಿದು ಹದಿಹರೆಯದವರೆಗಿನ ವಯೋವಧಿ. ಪಿಯಾಜಿಯೆ ಅವರ ಅರಿವು ಸಂಬಂಧಿ ಬೆಳವಣಿಗೆಯ ಸಿದ್ಧಾಂತದ ಪ್ರಕಾರ, ಬಾಲ್ಯವು ಎರಡು ಹಂತಗಳನ್ನು ಹೊಂದಿರುತ್ತದೆ: ಪೂರ್ವಕಾರ್ಯಕಾರಿ ಹಂತ ಮತ್ತು ವಾಸ್ತವಿಕ ಕಾರ್ಯಕಾರಿ ಹಂತ. ಬೆಳವಣಿಗೆ ಮನಃಶಾಸ್ತ್ರದಲ್ಲಿ, ಬಾಲ್ಯವನ್ನು ದಟ್ಟಡಿತನ (ನಡೆಯಲು ಕಲಿಯುವ ಹಂತ), ಮುಂಚಿನ ಬಾಲ್ಯ (ಆಟದ ವಯಸ್ಸು), ಮಧ್ಯ ಬಾಲ್ಯ (ಶಾಲೆಯ ವಯಸ್ಸು) ಮತ್ತು ಹದಿಹರೆಯದ (ಪ್ರೌಢಾವಸ್ಥೆಯಿಂದ ಪ್ರೌಢಾವಸ್ಥೆ ನಂತರದ ಹಂತ) ಬೆಳವಣಿಗೆಯ ಹಂತಗಳಲ್ಲಿ ವಿಭಜಿಸಲಾಗುತ್ತದೆ. ಬಾಲ್ಯದ ವಿವಿಧ ಅಂಶಗಳು ಒಬ್ಬ ವ್ಯಕ್ತಿಯ ಮನೋಭಾವ ರಚನೆ ಮೇಲೆ ಪ್ರಭಾವ ಬೀರಬಹುದು. ಬಾಲ್ಯದ ಪರಿಕಲ್ಪನೆಯು ೧೭ನೇ ಮತ್ತು ೧೮ನೇ ಶತಮಾನಗಳ ಅವಧಿಯಲ್ಲಿ ಉದಯಿಸಿತು, ವಿಶೇಷವಾಗಿ ತತ್ವಶಾಸ್ತ್ರಜ್ಞ ಜಾನ್ ಲಾಕ್‍ರ ಶೈಕ್ಷಣಿಕ ಸಿದ್ಧಾಂತಗಳು ಮತ್ತು ಮಕ್ಕಳಿಗಾಗಿ ಹಾಗೂ ಮಕ್ಕಳ ಬಗ್ಗೆಯಿರುವ ಪುಸ್ತಕಗಳ ಬೆಳವಣಿಗೆಯ ಮೂಲಕ.[] ಈ ಘಟ್ಟಕ್ಕಿಂತ ಮುಂಚೆ, ಮಕ್ಕಳನ್ನು ಹಲವುವೇಳೆ ವಯಸ್ಕರ ಅಪೂರ್ಣ ಸ್ವರೂಪಗಳೆಂದು ನೋಡಲಾಗುತ್ತಿತ್ತು.

ಕಾರಂಜಿಯಲ್ಲಿ ಆಟವಾಡುತ್ತಿರುವ ಮಕ್ಕಳು

ಮರಣ, ವಿಪರೀತ ಅಪೌಷ್ಟಿಕತೆ, ವಿಪರೀತ ಹಿಂಸೆ, ಸಂಘರ್ಷದಿಂದ ಉಂಟಾಗುವ ಸ್ಥಳಾಂತರ, ಮಕ್ಕಳು ಶಾಲೆಯಿಂದ ಹೊರಗಿರುವುದು, ಬಾಲ ಕಾರ್ಮಿಕತೆ, ಮಕ್ಕಳಿಗೆ ಮಕ್ಕಳಿರುವುದು ಮತ್ತು ಬಾಲ್ಯ ವಿವಾಹಗಳು ಬಾಲ್ಯವನ್ನು ಅಂತ್ಯಗೊಳಿಸುವ ಎಂಟು ಜೀವನ ಘಟನೆಗಳೆಂಡು ವಿವರಿಸಲಾಗಿದೆ.

ಜೀವನಶೈಲಿಗಳು ಬದಲಾದಂತೆ ಮತ್ತು ವಯಸ್ಕರ ನಿರೀಕ್ಷೆಗಳು ಮಾರ್ಪಾಡುಗೊಂಡಂತೆ ಬಾಲ್ಯದ ಪರಿಕಲ್ಪನೆಯು ವಿಕಸನಗೊಂಡಂತೆ ಮತ್ತು ಬದಲಾದಂತೆ ಕಾಣುತ್ತದೆ. ಮಕ್ಕಳಿಗೆ ಯಾವುದೇ ಚಿಂತೆಗಳಿರಬಾರದು ಮತ್ತು ಅವರು ಕೆಲಸ ಮಾಡುವ ಅಗತ್ಯವಿರಬಾರದು ಎಂದು ಕೆಲವರು ನಂಬುತ್ತಾರೆ; ಜೀವನವು ಸಂತೋಷದಾಯಕ ಮತ್ತು ಕಷ್ಟರಹಿತವಾಗಿರಬೇಕು. ಸಾಮಾನ್ಯವಾಗಿ ಬಾಲ್ಯವು ಸಂತೋಷ, ಆಶ್ಚರ್ಯ, ತಲ್ಲಣ ಮತ್ತು ಚೇತರಿಸಿಕೊಳ್ಳುವಿಕೆಯ ಮಿಶ್ರಣವಾಗಿರುತ್ತದೆ. ಅದು ಸಾಮಾನ್ಯವಾಗಿ ಹೆತ್ತವರನ್ನು ಹೊರತುಪಡಿಸಿ, ಆಡುವ, ಕಲಿಯುವ, ಜನರೊಂದಿಗೆ ಬೆರೆಯುವ, ಅನ್ವೇಷಿಸುವ, ಮತ್ತು ಸಾಕಷ್ಟು ವಯಸ್ಕರ ಮಧ್ಯಸ್ಥಿಕೆ ಇಲ್ಲದ ಪ್ರಪಂಚದಲ್ಲಿ ಚಿಂತಿಸುವ ಕಾಲವಾಗಿರುತ್ತದೆ. ಅದು ವಯಸ್ಕ ಜವಾಬ್ದಾರಿಗಳನ್ನು ನಿಭಾಯಿಸುವ ಅಗತ್ಯವಿಲ್ಲದೇ ಜವಾಬ್ದಾರಿಗಳ ಬಗ್ಗೆ ಕಲಿಯುವ ಕಾಲವಾಗಿರುತ್ತದೆ.

ಮಕ್ಕಳ ಆರೋಗ್ಯದಲ್ಲಿ ಮಕ್ಕಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮಗಳು ಸೇರಿವೆ. ಮಕ್ಕಳ ಆರೋಗ್ಯವನ್ನು ಕಾಪಾಡುವುದು ಎಂದರೆ ಅವರಿಗೆ ಆರೋಗ್ಯಕರ ಆಹಾರಗಳನ್ನು ನೀಡುವುದು, ಅವರಿಗೆ ಸಾಕಷ್ಟು ನಿದ್ದೆ ಮತ್ತು ವ್ಯಾಯಾಮ ಸಿಗುತ್ತದೆಂದು ಖಚಿತಪಡಿಸಿಕೊಳ್ಳುವುದು, ಮತ್ತು ಅವರ ಸುರಕ್ಷತೆಯನ್ನು ಕಾಪಾಡುವುದು. ವಿಶ್ವದ ಕೆಲವು ಭಾಗಗಳಲ್ಲಿ ಹಲವುವೇಳೆ ಮಕ್ಕಳು ಅಪೌಷ್ಟಿಕತೆಯಿಂದ ಬಾಧಿತವಾಗಿರುತ್ತಾರೆ. ಇದು ಹಲವುವೇಳೆ ಅತಿಸಾರ, ನ್ಯುಮೋನಿಯಾ ಮತ್ತು ಮಲೇರಿಯಾದಂತಹ ಇತರ ಸ್ಥಿತಿಗಳಿಗೆ ಸಂಬಂಧಿಸಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Eddy, Matthew Daniel (2010). "'The Alphabets of Nature: Children, Books and Natural History, 1750-1800'". Nuncius. 25: 1–22.
"https://kn.wikipedia.org/w/index.php?title=ಬಾಲ್ಯ&oldid=858218" ಇಂದ ಪಡೆಯಲ್ಪಟ್ಟಿದೆ