ಅತಿನೇರಳೆ ಕಿರಣ

ಅತಿನೇರಳೆ ಕಿರಣ ಅಥವಾ "ಅಲ್ಟ್ರಾವಾಯ್ಲೆಟ್" ಕಿರಣವು ಕಣ್ಣಿಗೆ ಕಾಣಿಸುವ ಬೆಳಕಿಗಿಂತಲೂ ಕಡಿಮೆ ಮತ್ತು ಎಕ್ಸ್-ರೇ ಕಿರಣಕ್ಕಿಂತ ಹೆಚ್ಚು ತರಂಗಾಂತರ(ವೇವ್ ಲೆಂತ್)ವುಳ್ಳ ವಿದ್ಯುತ್ಕಾಂತೀಯ ವಿಕಿರಣ.ಇದರ ತರಂಗಾಂತರವು ೧೦-೪೦೦ ನಾನೋಮೀಟರುಗಳು ಮತ್ತು ಇದರ ಶಕ್ತಿ ೩-೧೨೪ ಎಲೆಕ್ಟ್ರಾನ್ ವೋಲ್ಟ್ ಗಳು. ಇದನ್ನು "ಅತಿನೇರಳೆ"ಯೆಂದು ಏಕೆ ಕರೆಯುತ್ತಾರೆಂದರೆ, ಇದರ ವಿದ್ಯುತ್ಕಾಂತೀಯ ಕಂಪನಾಂಕವು (ಫ್ರೀಕ್ವೆನ್ಸಿ),ಬೆಳಕಿನ ವರ್ಣಪಂಕ್ತಿಯ ನೇರಳೆ ಬಣ್ಣದ ಕಿರಣಗಳ ಕಂಪನಾಂಕಕ್ಕಿಂತ ಹೆಚ್ಚಿರುತ್ತದೆ.

ಸೂರ್ಯನ ಕರೋನಾ ವು ಅತಿನೇರಳೆ ಕಿರಣಗಳ ಮುಖಾಂತರ ಗೋಚರಿಸುವ ರೀತಿ. ಚಿತ್ರವು ಎಕ್ಸ್ಟ್ರೀಂ ಅಲ್ಟ್ರಾವಾಯ್ಲೆಟ್ ಇಮೇಜಿಂಗ್ ಟೆಲಿಸ್ಕೋಪ್ ನಿಂದ ತೆಗೆದಿದ್ದು.