ಪ್ಲಾಸ್ಮ (ಭೌತಶಾಸ್ತ್ರ)ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳಲ್ಲಿ ಅಯಾನೀಕೃತ ಅನಿಲವನ್ನು ಪ್ಲಾಸ್ಮ ಎಂದು ಕರೆಯಲಾಗುತ್ತದೆ. ತನ್ನ ಅಪೂರ್ವವಾದ ಗುಣಲಕ್ಷಣಗಳ ಕಾರಣದಿಂದ, ಪ್ಲಾಸ್ಮಗಳನ್ನು ಅನಿಲಗಳೆಂದಲ್ಲದೆ, ಬೇರೆಯದೇ ಆದ ವಿಶಿಷ್ಟವಾದ ಒಂದು ದ್ರವ್ಯ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಅಯಾನೀಕೃತ ಎಂದರೆ - ಪರಮಾಣು ಅಥವಾ ಅಣುವಿಗೆ ಸೀಮಿತವಾಗಿಲ್ಲದ ಸ್ವತಂತ್ರ ಎಲೆಕ್ಟ್ರಾನ್ಗಳ ಅಸ್ತಿತ್ವ. ಈ ಸ್ವತಂತ್ರ ಎಲೆಕ್ಟ್ರಾನ್‌ಗಳ ಕಾರಣದಿಂದ, ಪ್ಲಾಸ್ಮ ವಿದ್ಯುತ್ ವಾಹಕವಾಗಿದ್ದು, ವಿದ್ಯುತ್‌ಕಾಂತೀಯ ಕ್ಷೇತ್ರಗಳಿಗೆ ಪ್ರಬಲವಾಗಿ ಪ್ರತಿಕ್ರಿಯಿಸುತ್ತವೆ.

ತಂತುಗಳಂಥ ಜಟಿಲವಾದ ಪ್ಲಾಸ್ಮ ಪ್ರಕ್ರಿಯೆಗಳನ್ನು ತೋರುತ್ತಿರುವ ಒಂದು ಪ್ಲಾಸ್ಮ ದೀಪ. ಎಲೆಕ್ಟ್ರಾನ್‌ಗಳು ಅಯಾನುಗಳೊಂದಿಗೆ ಮರುಸೇರಿದಮೇಲೆ ಮೇಲಿನ ಕಕ್ಷೆಯಿಂದ ಕೆಳಗಿನ ಕಕ್ಷೆಗೆ ನೆಗೆಯುವ ಪರಿಣಾಮವಾಗಿ ಈ ಬಣ್ಣಗಳು ಉದ್ಭವವಾಗುತ್ತವೆ. ಈ ಪ್ರಕ್ರಿಯೆಗಳು ಒಂದು ಅನಿಲಕ್ಕೆ ವಿಶಿಷ್ಟವಾದ ರೋಹಿತದಲ್ಲಿ ಬೆಳಕನ್ನು ಹೊರಸೂಸುತ್ತವೆ.