ಹೊಗೆಯು (ಧೂಮ) ಒಂದು ವಸ್ತುವು ದಹನ ಅಥವಾ ಉಷ್ಣಪರಿವರ್ತನೆಗೆ ಒಳಗಾದಾಗ, ಆ ದ್ರವ್ಯರಾಶಿಯೊಳಗೆ ಬೆರಕೆಯಾದ ಅಥವಾ ಒಳಸೇರಿದ ಗಾಳಿಯ ಪರಿಮಾಣದ ಜೊತೆಗೆ ಹೊರಸೂಸಲ್ಪಟ್ಟ ವಾಯುಗಾಮಿ ಘನ ಮತ್ತು ದ್ರವ ಪೃಥಕ್ಕಣ ದ್ರವ್ಯ ಮತ್ತು ಅನಿಲಗಳ ಸಂಗ್ರಹ[]. ಇದು ಸಾಮಾನ್ಯವಾಗಿ (ಒಲೆಗಳು, ಮೋಂಬತ್ತಿಗಳು, ಎಣ್ಣೆ ದೀಪಗಳು, ಮತ್ತು ಅಗ್ನಿಸ್ಥಳಗಳು ಸೇರಿದಂತೆ) ಬೆಂಕಿಗಳ ಅಗತ್ಯವಿರದ ಉಪಉತ್ಪನ್ನವಾಗಿರುತ್ತದೆ, ಆದರೆ ಹೊಗೆಯನ್ನು ಕೀಟ ನಿಯಂತ್ರಣ (ಧೂಮನ), ಸಂವಹನ (ಹೊಗೆ ಸಂಕೇತಗಳು), ಸೇನೆಯಲ್ಲಿ ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಸಾಮರ್ಥ್ಯಗಳಿಗೆ, ಅಡುಗೆ, ಅಥವಾ ಧೂಮಪಾನದಲ್ಲಿ (ತಂಬಾಕು, ಗಾಂಜಾ) ಕೂಡ ಬಳಸಬಹುದು. ಇದನ್ನು ಧಾರ್ಮಿಕ ಕ್ರಿಯಾವಿಧಿಗಳಲ್ಲಿ ಆಧ್ಯಾತ್ಮಿಕ ಉದ್ದೇಶಗಳಿಗಾಗಿ ಸುವಾಸನೆಯನ್ನು ಉತ್ಪತ್ತಿಮಾಡಲು ಧೂಪದ್ರವ್ಯ, ಸಣ್ಣ ಕರ್ಪೂರದ ಸಸ್ಯ, ಅಥವಾ ರಾಳವನ್ನು ಸುಟ್ಟು ಬಳಸಲಾಗುತ್ತದೆ. ಕೆಲವೊಮ್ಮೆ ಹೊಗೆಯನ್ನು ರುಚಿಕಾರಕವಾಗಿ, ಮತ್ತು ವಿವಿಧ ಆಹಾರ ಪದಾರ್ಥಗಳಿಗೆ ಸಂರಕ್ಷಕವಾಗಿ ಬಳಸಲಾಗುತ್ತದೆ. ಹೊಗೆಯು ಅಂತರ್ದಹನ ಇಂಜಿನ್‍ನ ನಿಷ್ಕಾಸ ಅನಿಲದ, ವಿಶೇಷವಾಗಿ ಡೀಜ಼ಲ್ ನಿಷ್ಕಾಸದ ಘಟಕವೂ ಆಗಿದೆ.

ಬೆಂಕಿಯಿಂದ ಹೊಗೆ

ಉಲ್ಲೇಖಗಳು

ಬದಲಾಯಿಸಿ
  1. Smoke Production and Properties Archived 2017-07-12 ವೇಬ್ಯಾಕ್ ಮೆಷಿನ್ ನಲ್ಲಿ. - SFPE Handbook of Fire Protection Engineering



"https://kn.wikipedia.org/w/index.php?title=ಹೊಗೆ&oldid=1253369" ಇಂದ ಪಡೆಯಲ್ಪಟ್ಟಿದೆ