ಗಾಂಜಾ

ಗಾಂಜಾ (ಸಂಸ್ಕೃತದಲ್ಲಿ ಗಂಜಿಕಾ)ವು, ಗಾಂಜಾ ಸಸ್ಸ್ಯದಿಂದ ತಯಾರಿಸಲಾದ ಮನಃಪ್ರಚೋದಕ (psychoactive drug) ಹಾಗೂ ಔಷಧಿಯೂ ಆಗಿದೆ.

ಗಾಂಜ ಸೊಪ್ಪು (ಭಂಗಿ ಸೊಪ್ಪು)ಸಂಪಾದಿಸಿ

 
Cannabis Plant- ಭಂಗಿಸೊಪ್ಪಿನ ಗಿಡ

ಸಂ: ವಿಜಯ-ಭಂಗ್

ಹಿಂ; ಗಾಂಜ-ಭಂಗ್

ಮ: ಭಂಗ್

ಗು: ಭಂಗ್

ತೆ: ಗಾಂಜ ಚೆಟ್ಟು

ತ: ಗಾಂಜ ಚಡಿ

ವರ್ಣನೆಸಂಪಾದಿಸಿ

‘ಚರಸ್’ ಅನ್ನುವ ಮಾದಕ ವಸ್ತುವನ್ನು ಈ ಮೂಲಿಕೆಯ ಪತ್ರೆಗಳಿಂದ ಮಾಡುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತಲೆ ತಿರುಗಿ, ಜಾÐನ ತಪ್ಪಬಹುದು ಮತ್ತು ಮುಂದೆ ಗಾಢ ನಿದ್ರೆಯುಂಟಾಗಿ ಉಸಿರು ಕಟ್ಟಿ ಸಾಯಲುಬಹುದು. ಈ ಮೂಲಿಕೆ ಚಿಕಿತ್ಸೆಯಲ್ಲಿ ಅತ್ಯಂತ ಉಪಯುಕ್ತವಾದುದು. 1-2 ಅಡಿ ಎತ್ತರ ಪೊದೆಯಾಗಿ ಬೆಳೆಯುವುದು. ಕಾಂಡದ ತುದಿಯಲ್ಲಿ ಗೊಂಚಲಾಕರವಾಗಿ ಹೂಗಳು ಬಿಡುವುದು. ಈ ಸೊಪ್ಪನ್ನು ಬೆಳೆಯುವುದನ್ನು ಸರ್ಕಾರ ನಿಷೇಧಿಸಿದೆ. ಹೆಚ್ಚಿನ ಉಪಯೋಗದಿಂದ ಹೃದಯ, ಮನಸ್ಸು, ಮತ್ತು ನರಮಂಡಲದ ಮೇಲೆ ಅಹಿತ ಪರಿಣಾಮಗಳನ್ನುಂಟು ಮಾಡುವುದು ಮತ್ತು ಮನಃಶೋಭೆವುಂಟು ಆಗುವುದು. ಒವ್ಮೊಮ್ಮೆ ಸಮ್ಮೋಹನಾ ರಚಿಸಿ, ಬಹಳ ಹೊತ್ತು ಭಯಗ್ರಸ್ಥನಂತೆ ಮಾಡುವುದು. ಚಟವುಳ್ಳವರು ಇದನ್ನು ಬಹಳ ಉಪಯೋಗಿಸುತ್ತಾರೆ. ಸಿದ್ಧರ ಬೆಟ್ಟದ ಗವಿಗಳಲ್ಲಿ ವಿಶಾಲವಾದ ಮರಗಳು ಅಡಿಯಲ್ಲಿ ಮತ್ತು ಹಾಳು ಮಂಟಪಗಳಲ್ಲಿ ಗುಂಪು ಗುಂಪಾಗಿ ಸೇರಿ ಈ ಭಂಗಿ ಸೊಪ್ಪಿನ ಹೊಗೆಯನ್ನು ಬಹಳ ಹುರುಪು ಮತ್ತು ಹುಮಸ್ಸಿನಿಂದ ಸೇದುತ್ತಾರೆ ಸೇದುವುದಕ್ಕೆ ಬಳಸುವ ಸಾಧನ “ಮಣ್ಣಿನ ಚಿಲುಮೆ” ಯು ಕೊಳವೆಯಾಗಿಕಾರದ್ದು. ಒಂದು ತುದಿ ಕಿರುದಾಗಿದ್ದು, ಮತ್ತೊಂದು ತುದಿ ಅಗಲವಾಗಿರುತ್ತದೆ. ಭಂಗಿ ಸೊಪ್ಪುನ್ನು ಈ ಚಿಲುಮೆಯಲ್ಲಿ ತುಂಬಿ, ಬೆಂಕಿ ಹಚ್ಚಿಕೊಂಡು ಸರದಿಯಂತೆ ಒಬ್ಬೊಬ್ಬರಾಗಿ ಸೇದುತ್ತಾರೆ. ಇದೊಂದು ಕೆಟ್ಟ ಚಟ. ಹೆಚ್ಚಾಗಿ ಹರಟೆ ಹೊಡೆಯುವವರು ಹಾಗೂ ಹರಳು ಹುರಿದಂತೆ ಮಾತನಾಡುವವರು ಈ ಭಂಗಿ ಸೊಪ್ಪಿನ ಸೇವೆನೆಯಿಂಧ ಕೆಲವೇ ನಿಮಿಷದಿಂದ ಕೆಲವೇ ನಿಮಿಷಗಳಲ್ಲಿ ಮೌನವಾಗಿ ಬೀಡುತ್ತಾರೆ. ಕಾರಣ ಇಷ್ಟೆ, ನರಮಂಡಲದ ಮೇಲೆ ಮತ್ತಿನ ಪರಿಣಾಮವುಂಟಾಗಿ ಅಮಲೇರಿ ಕರ್ತವ್ಯವನ್ನು ಮರೆಯುವುದು, ಮುಂದೆ ಅಹಿತಕರ ಪರಿಣಾಮವುಂಟಾಗಿ ದೇಹದ ರಚನೆ, ಕರ್ತವ್ಯದ ಮೇಲೆ ಸಾಕಷ್ಟು ನಷ್ಟ ಉಂಟಾಗುವುದು.

ಸರಳ ಚಿಕಿತ್ಸೆಗಳುಸಂಪಾದಿಸಿ

ಮಲೇರಿಯಾ ಜ್ವರದಲ್ಲಿಸಂಪಾದಿಸಿ

ಒಂದು ಗ್ರಾಂ ತೂಕದಷ್ಟು ಭಂಗಿ ಸೊಪ್ಪುನ್ನು 2 ಗ್ರಾಂ ಬೆಲ್ಲೆದೊಡನೆ ಸೇರಿಸಿ ನಯವಾಗಿ ಅರೆದು ನಾಲ್ಕು ಗುಳಿಗೆಗಳಾಗಿ ಮಾಡಿಟ್ಟುಕೊಳ್ಳುವುದು. ಪ್ರತಿ ತಾಸಿಗೊಂದು ಸಾರಿ ಒಂದೊಂದು ಮಾತ್ರೆಯನ್ನು ಕೊಡುವುದು. ಮೊದಲನೆ ದಿವಸ ಜ್ವರ ನಿಲ್ಲದಿದ್ದರೆ ಈ ಚಿಕಿತ್ಸೆಯಿಂದ ಮರು ದಿವಸ ಜ್ವರ ಭಾದೆ ಕಡಿಮೆಯಾಗುವುದು.

ಕಿವಿನೋವುಸಂಪಾದಿಸಿ

ಗಾಂಜ ಗಿಡದ ಹಸಿರೆಲೆಗಳ ರಸವನ್ನು ಒಂದೊಂದು ತೊಟ್ಟು ನೋವಿರುವ ಕಿವಿಗೆ ಬಿಡುವುದು, ನೋವು ಪರಿಹಾರವಾಗಿ ಕ್ರಿಮಿಗಳು ನಾಶವಾಗುವುವು.

ಅರೆನಿದ್ರೆಯಲ್ಲಿ (ನಿದ್ರೆಯ ಕೊರತೆ)ಸಂಪಾದಿಸಿ

ಗಾಂಜ ಸೊಪ್ಪು ಮತ್ತು ಬಿಳಿ ಗಸಗಸೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಆಡಿನ ಹಾಲಿನಲ್ಲಿ ನುಣ್ಣಗೆ ಅರೆದು ಪಾದಗಳಿಗೆ ಲೇಪಿಸುವುದು, ನಿದ್ದೆ ಮಾಡಬೇಕೆಂದು ಸಂಕಲ್ಪ ಮಾಡಿ ಮಲಗುವುದು.

ಅಂಡಗಳ ಊತ ಮತ್ತು ನೋವುಸಂಪಾದಿಸಿ

ಗಾಂಜ ಎಲೆಗಳನ್ನು ತಣ್ಣೀರಿನಲ್ಲಿ ಚೆನ್ನಾಗಿ ಅರೆದು, ಸುಮಾರು ಬಿಸಿ ಮಾಡಿದ ಹರಳೆಲೆ ಮೇಲೆ ಹರಡಿ ಅಂಡಗಳ ಮೇಲೆ ಕಟ್ಟುವುದು, ಕೆಲವು ದಿವಸ ಚಿಕಿತ್ಸೆಯನ್ನು ಮುಂದುವರಿಸುವುದು.

ಸ್ವಪ್ನಸ್ಖಲನಸಂಪಾದಿಸಿ

10 ಗ್ರಾಂ ಗಾಂಜ ಸೊಪ್ಪಿನಲ್ಲಿ ಸುಮಾರು 20 ಗಾಂ ದಾಳಿಂಬೆಯ ಅರಳಿರುವ ಕೆಂಪು ಹೂವುಗಳನ್ನು ಶುದ್ಧವಾದ ತಣ್ಣೀರಿನಲ್ಲಿ ನುಣ್ಣಗೆ ಅರೆದು, ಹೆಸರಕಾಳು ಗಾತ್ರ ಗುಳಿಗೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸುವುದು. ಪ್ರತಿ ಮೂರು ತಾಸಿಗೊಮ್ಮೆ ಒಂದೊಂದು ಗುಳಿಗೆಯನ್ನು ನೀರಿನೊಂದಿಗೆ ಸೇವಿಸುವುದು 7 ದಿವಸ ಮಂಜುಗಡ್ಡೆಯನ್ನು ಬಾಯಿಲ್ಲಿಟ್ಟುಕೊಂಡು ಚೀಪುವುದು. ಮತ್ತು ಮಂಜುಗಡ್ಡೆಯನ್ನು ಹೊಕ್ಕಳ ಮೇಲೆರಿಸುವುದು.

ಮೂಲವ್ಯಾಧಿಯಲ್ಲಿಸಂಪಾದಿಸಿ

ಒಂದು ಗ್ರಾಂ ಗಾಂಜ ಸೊಪ್ಪನ್ನು ಒಂದು ಬಟ್ಟಲು ಹಾಲಿನಲ್ಲಿ ಹಾಕಿ ಕಾಯಿಸುವುದು, ಇದರಿಂದ ಬರುವ ಹೊಗೆಯನ್ನು ನಳಿಕೆ ಮೂಲಕ ಮೊಳೆಗಳಿಗೆ ಹಾಯಿಸುವುದು. ನಂತರ ಉಳಿದ ಭಾಗವನ್ನು ರೊಟ್ಟಿಯಂತೆ ಮಾಡಿ ಮೂಲದ ಮೊಳೆಗಳಿಗೆ ಕಟ್ಟುವುದು.

ತಲೆಯಲ್ಲಿ ನವೆ, ಹೊಟ್ಟುಸಂಪಾದಿಸಿ

ಗಾಂಜ ಸೊಪ್ಪನ್ನು ನೀರಿನಲ್ಲರೆದು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ. ಇದರಿಂದ ಹೇನುಗಳು ನಾಶವಾಗುವುವು.

ಭಂಗಿ ಸೊಪ್ಪಿನ ದೋಶಕ್ಕೆ (ಅಮಲು ಇಳಿಸಲು)ಸಂಪಾದಿಸಿ

ಮುಖದ ಮೇಲೆ ತಣ್ಣೀರಿ ಸಿಂಪಡಿಸುವುದು ಮತ್ತು ಇಪ್ಪತ್ತು ಗ್ರಾಂ ಹುಣಸೆ ಹಣ್ಣನ್ನು ನೀರಿನಲ್ಲಿ ಚೆನ್ನಾಗಿ ಕಿವಿಚಿ, ಬಟ್ಟೆಯಲ್ಲಿ ಸೋಸಿ, ಸ್ವಲ್ಪ ದ್ವಲ್ಪ ಕುಡಿಸುವುದು. ಇಪ್ಪತ್ತು ಗ್ರಾಂ ಶುಂಠಿಯನ್ನು ನೀರಿನಲ್ಲಿ ತೇದು ಗಂಧವನ್ನು ಸ್ವಲ್ಪ ಸ್ವಲ್ಪ ನಾಲಿಗೆಗೆ ಸವರುವುದು. ನಿಂಬೆ ಹಣ್ಣನ್ನು ನೀರಿನಲ್ಲಿ ಕಿವುಚಿ, ಬೀಜಗಳನ್ನು ಬೇರ್ಪಡಿಸಿ, ಸ್ಲಲ್ಪ ಸ್ವಲ್ಪ ಕುಡಿಸುವುದು. [೧] [೨]

ಅಡಿ ಟಿಪ್ಪಣಿಗಳುಸಂಪಾದಿಸಿ

ಉಲ್ಲೇಖಸಂಪಾದಿಸಿ

  1. ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು;ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ಪ್ರ;;ಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು
  2. ElSohly MA (2007). Marijuana and the Cannabinoids. Springer. p. 8.
"https://kn.wikipedia.org/w/index.php?title=ಗಾಂಜಾ&oldid=916085" ಇಂದ ಪಡೆಯಲ್ಪಟ್ಟಿದೆ