ವಿದ್ಯುದ್ವಾರವು ( ಎಲೆಕ್ಟ್ರೋಡ್ ) ವಿದ್ಯುನ್ಮಂಡಲದ (ಸರ್ಕ್ಯೂಟ್) ಒಂದು ಅಖಂಡ ಭಾಗವನ್ನು (ಉದಾ. ಅರೆವಾಹಕ , ವಿದ್ಯುದ್ವಿಭಜನೀಯ , ನಿರ್ವಾತ ಅಥವಾ ಗಾಳಿ) ಸಂಪರ್ಕಿಸಲು ಬಳಸುವ ವಿದ್ಯುತ್ ವಾಹಕವಾಗಿದೆ . . [೧] [೨]

ಆರ್ಕ್ ವೆಲ್ಡಿಂಗ್ನಲ್ಲಿ ಬಳಸಲಾಗುವ ವಿದ್ಯುದ್ವಾರಗಳು
ವಿದ್ಯುದ್ವಾರದ ಸಂರಚನೆ

ವಿದ್ಯುದ್ರಾಸಾಯನಿಕ ಕೋಶಗಳಲ್ಲಿ ಧನಧ್ರುವ (ಆನೋಡ್) ಮತ್ತು ಋಣಧ್ರುವ(ಕ್ಯಾಥೋಡ್)ಸಂಪಾದಿಸಿ

ವಿದ್ಯುತ್ ರಾಸಾಯನಿಕ ಕೋಶದಲ್ಲಿನ ವಿದ್ಯುದ್ವಾರವನ್ನು ಆನೋಡ್ ಅಥವಾ ಕ್ಯಾಥೋಡ್ ಎಂದು ಕರೆಯಲಾಗುತ್ತದೆ (ಫ್ಯಾರಡೆಯ ಕೋರಿಕೆಯ ಮೇರೆಗೆ ವಿಲಿಯಂ ವ್ಹೀಲ್ ಸೃಷ್ಟಿಸಿದ ಪದಗಳು). [೧] ಎಲೆಕ್ಟ್ರಾನುಗಳು ಕೋಶವನ್ನು ಬಿಟ್ಟು ಉತ್ಕರ್ಷಣ ಪ್ರಕ್ರಿಯೆಯನ್ನು ಉಂಟು ಮಾಡುವ ವಿದ್ಯುದ್ವಾರವನ್ನು ಆನೋಡ್ (ಧನಧ್ರುವ) ಎನ್ನುವರು. ‍‍‍‍‍‍‌‌ಎಲೆಕ್ಟ್ರಾನುಗಳು ಕೋಶವನ್ನು ಸೇರಿ ಅಪಕರ್ಷಣ ಪ್ರಕ್ರಿಯೆಯನ್ನು ಉಂಟು ಮಾಡುವ ವಿದ್ಯುದ್ವಾರವನ್ನು ಕ್ಯಾಥೋಡ್ (ಋಣಧ್ರುವ) ಎನ್ನುವರು. ಪ್ರತಿ ವಿದ್ಯುದ್ವಾರವು ಕೋಶದ ಮೂಲಕ ವಿದ್ಯುತ್ ದಿಕ್ಕಿನ ಮೇಲೆ ಅವಲಂಬಿಸಿ ಆನೋಡ್ ಅಥವಾ ಕ್ಯಾಥೋಡ್ ಆಗಿ ಪರಿಣಮಿಸಬಹುದು. ಬೈಪೋಲಾರ್ ಎಲೆಕ್ಟ್ರೋಡ್ (ದ್ವಿಧ್ರುವ ವಿದ್ಯುದ್ವಾರ)ಎನ್ನುವುದು ಒಂದು ಎಲೆಕ್ಟ್ರೋಡ್ ಆಗಿದ್ದು ಅದು ಒಂದು ಕೋಶದ ಆನೋಡ್ ಮತ್ತು ಮತ್ತೊಂದು ಕೋಶದ ಕ್ಯಾಥೋಡ್ ಆಗಿ ಕಾರ್ಯನಿರ್ವಹಿಸುತ್ತದೆ.

ಉಪಯೋಗಗಳುಸಂಪಾದಿಸಿ

ವಿದ್ಯುದ್ವಾರಗಳನ್ನು ಅಸಂಖ್ಯಾತ ವಸ್ತುಗಳ ಮೂಲಕ ಪ್ರವಾಹವನ್ನು ಹಲವು ರೀತಿಯಲ್ಲಿ ಮಾರ್ಪಡಿಸಲು ಮತ್ತು ಹಲವಾರು ಉದ್ದೇಶಗಳಿಗಾಗಿ ವಾಹಕತೆಯನ್ನು ಅಳೆಯಲು ಬಳಸಲಾಗುತ್ತದೆ. ವಿದ್ಯುದ್ವಾರಗಳನ್ನು ಈ ಕೆಳಕಂಡ ರೀತಿಯಲ್ಲಿ ಉಪಯೋಗಿಸುತ್ತಾರೆ.

 • ಇಂಧನ ಕೋಶಗಳಿಗೆ ವಿದ್ಯುದ್ವಾರಗಳು
 • EEG (ಮೆದುಳಿನ ಚಟುವಟಿಕೆಯನ್ನು ರೆಕಾರ್ಡಿಂಗ್ಗಾಗಿ), ECG (ಹೃದಯ ಬಡಿತವನ್ನು ದಾಖಲಿಸಲು ), ECT (ವಿದ್ಯುತ್ ಮಿದುಳಿನ ಉತ್ತೇಜನ), ಡಿಫಿಬ್ರಿಲೇಟರ್ (ಹೃದಯದ ಉತ್ತೇಜನವನ್ನು ರೆಕಾರ್ಡಿಂಗ್ ಮತ್ತು ವಿತರಿಸುವಿಕೆ) ಮುಂತಾದ ವೈದ್ಯಕೀಯ ಉದ್ದೇಶಗಳಿಗಾಗಿ
 • ಬಯೋಮೆಡಿಕಲ್ ಸಂಶೋಧನೆಗಳಲ್ಲಿ ಎಲೆಕ್ಟ್ರೋಫಿಸಿಯಾಲಜಿ ತಂತ್ರಗಳಿಗೆ
 • ವಿದ್ಯುತ್ ಕುರ್ಚಿಯಿಂದ ಮರಣದಂಡನೆಗೆ
 • ಎಲೆಕ್ಟ್ರೋಪ್ಲೇಟಿಂಗ್ಗಾಗಿ
 • ಆರ್ಕ್ ವೆಲ್ಡಿಂಗ್ಗಾಗಿ
 • ಕ್ಯಾಥೊಡಿಕ್ ರಕ್ಷಣೆಗಾಗಿ
 • ಗ್ರೌಂಡಿಂಗ್ಗಾಗಿ
 • ವಿದ್ಯುದ್ರಾಸಾಯನಿಕ ವಿಧಾನಗಳನ್ನು ಬಳಸಿಕೊಂಡು ರಾಸಾಯನಿಕ ವಿಶ್ಲೇಷಣೆಗಾಗಿ
 • ವಿದ್ಯುದ್ವಿಭಜನೆಗಾಗಿ
 • ಮೆಂಬ್ರೇನ್ ವಿದ್ಯುದ್ವಾರ ಜೋಡಣೆ
 • ಟೇಸರ್ ಎಲೆಕ್ಟ್ರೋಶಾಕ್ ಶಸ್ತ್ರಾಸ್ತ್ರಕ್ಕಾಗಿ

ಉಲ್ಲೇಖಗಳುಸಂಪಾದಿಸಿ

 1. ೧.೦ ೧.೧ Weinberg, Steven (2003). The Discovery of Subatomic Particles Revised Edition. Cambridge University Press. pp. 81–. Bibcode:2003dspr.book.....W. ISBN 978-0-521-82351-7. Archived from the original on 13 May 2016. Retrieved 18 February 2015. Unknown parameter |dead-url= ignored (help) Cite error: Invalid <ref> tag; name "Weinberg2003" defined multiple times with different content
 2. Faraday, Michael (1834). "On Electrical Decomposition". Philosophical Transactions of the Royal Society. Archived from the original on 2010-01-17. Retrieved 2010-01-17. Unknown parameter |dead-url= ignored (help) In this article Faraday coins the words electrode, anode, cathode, anion, cation, electrolyte, and electrolyze.