ತನ್ನ ಮೂಲಕ ವಿದ್ಯುತ್ ಪ್ರವಾಹವನ್ನು ಹರಿಯಲು ಬಿಡುವ ವಸ್ತುವನ್ನು ವಿದ್ಯುತ್ ವಾಹಕ (elecrical conductor) ಎನ್ನುತ್ತಾರೆ. ಉದಾಹರಣೆಗೆ, ತಂತಿಯು ತನ್ನ ಉದ್ದಕ್ಕೂ ವಿದ್ಯುತ್ತನ್ನು ಸಾಗಿಸುವ ಒಂದು ವಿದ್ಯುತ್ ವಾಹಕವಾಗಿದೆ. ಬೆಳ್ಳಿ ಮತ್ತು ತಾಮ್ರ ಹಾಗೂ ‍ಅಲುಮಿನಿಯಮ್‍ನಂತಹ ಲೋಹಗಳಲ್ಲಿ, ಎಲೆಕ್ಟ್ರಾನ್‍ಗಳು ಚಲಿಸುವ ವಿದ್ಯುದಾವೇಶಕ್ಕೊಳಗಾದ ಕಣಗಳಾಗಿರುತ್ತವೆ. ಇವುಗಳಲ್ಲಿ ಬೆಳ್ಳಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕತೆಯನ್ನು ಹೊಂದಿದೆ.

ಮೇಲಿನ ವಾಹಕಗಳು ವಿದ್ಯುಚ್ಛಕ್ತಿಯನ್ನು ಸಾಗಿಸುತ್ತವೆ.

ವಿದ್ಯುದ್ವಹನ ಎಂದರೆ ವಿದ್ಯುತ್‌ಕ್ಷೇತ್ರಕ್ಕೆ ಅನುಕ್ರಿಯೆಯಾಗಿ ಪದಾರ್ಥಗಳಲ್ಲಿ ಉಂಟಾಗುವ ಆವಿಷ್ಟಕಣಗಳ ಚಲನೆಯ ಅಥವಾ ವಿದ್ಯುತ್ ಹರಿವಿನ ವಿದ್ಯಮಾನ (ಎಲೆಕ್ಟ್ರಿಕಲ್ ಕಂಡಕ್ಷನ್).

ಹೊರಗಿನ ಕೊಂಡಿಗಳು ಬದಲಾಯಿಸಿ