ರಾಬರ್ಟ್ ಮಿಲಿಕನ್ (22-3-1868 - 19-12-1953) ಅಮೆರಿಕಾದ ಪ್ರಸಿದ್ಧ ಭೌತವಿಜ್ಞಾನಿ.

ರಾಬರ್ಟ್ ಮಿಲಿಕನ್
ಜನನRobert Andrews Millikan
(೧೮೬೮-೦೩-೨೨)೨೨ ಮಾರ್ಚ್ ೧೮೬೮
Morrison, Illinois, U.S.
ಮರಣDecember 19, 1953(1953-12-19) (aged 85)
San Marino, California, U.S.
ರಾಷ್ಟ್ರೀಯತೆUnited States
ಕಾರ್ಯಕ್ಷೇತ್ರPhysics
ಸಂಸ್ಥೆಗಳು
ಅಭ್ಯಸಿಸಿದ ವಿದ್ಯಾಪೀಠ
ಮಹಾಪ್ರಬಂಧOn the polarization of light emitted from the surfaces of incandescent solids and liquids. (1895)
ಡಾಕ್ಟರೇಟ್ ಸಲಹೆಗಾರರು
Other academic advisorsMihajlo Pupin
Albert A. Michelson
Walther Nernst
ಡಾಕ್ಟರೇಟ್ ವಿದ್ಯಾರ್ಥಿಗಳು
ಪ್ರಸಿದ್ಧಿಗೆ ಕಾರಣ
ಗಮನಾರ್ಹ ಪ್ರಶಸ್ತಿಗಳು
ಸಂಗಾತಿGreta ಟೆಂಪ್ಲೇಟು:Née Blanchard
ಮಕ್ಕಳು
ಹಸ್ತಾಕ್ಷರ
Military career
ಶಾಖೆUnited States Army[]
ಸೇವಾವಧಿ1917–1918
ಶ್ರೇಣಿ(ದರ್ಜೆ)Lieutenant Colonel
ಘಟಕAviation Section, U.S. Signal Corps

ಜನನ, ವಿದ್ಯಾಭ್ಯಾಸ

ಬದಲಾಯಿಸಿ

ಇವರು ಕ್ರಿ.ಶ. ೧೮೬೮ರಲ್ಲಿ ಇಲಿನಾಯ್‍ನಲ್ಲಿ ಜನಿಸಿದರು. ಸ್ನಾತಕಪೂರ್ವ ಶಿಕ್ಷಣದ ದಿನಗಳಲ್ಲಿ ಮಿಲ್ಲಿಕನ್ನರಿಗೆ ಭೌತವಿಜ್ಞಾನದಲ್ಲಿದ್ದ ಆಸಕ್ತಿ ತೀರ ಮೇಲುಪದರದ್ದು. 1891ರಲ್ಲಿ ಪದವಿ ಪಡೆದ ತರುವಾಯ ಈ ಪರಿಸ್ಥಿತಿ ಬದಲಾಗಿ ಇವರು ಹಲವು ವರ್ಷ ಭೌತವಿಜ್ಞಾನವನ್ನು ಒಂದು ಶಾಲೆಯಲ್ಲಿ ಬೋಧಿಸಿದರು. ಮುಂದೆ ಜರ್ಮನಿಯಲ್ಲಿ ಪೋಸ್ಟ್ ಡಾಕ್ಟೋರೇಟ್ ಶಿಕ್ಷಣ ಪಡೆದು ಚಿಕಾಗೊ ವಿಶ್ವವಿದ್ಯಾಲಯ ಸೇರಿದರು (1910).

ವೃತ್ತಿಜೀವನ, ಸಾಧನೆಗಳು

ಬದಲಾಯಿಸಿ

ಅವರಿಗೆ ಭೌತವಿಜ್ಞಾನ ಪ್ರಪಂಚದಲ್ಲಿ ಖ್ಯಾತಿ ತಂದುಕೊಟ್ಟ ಪ್ರಯೋಗವನ್ನು 1906ರಲ್ಲಿ ಪ್ರಾರಂಭಿಸಿದರು. ಒಂಟಿ ಎಲೆಕ್ಟ್ರಾನಿನ ವಿದ್ಯುದಾವೇಶದ ಗಾತ್ರ (ಪರಿಮಾಣ) ಏನು? ಎತ್ತರದಲ್ಲಿ ಇರಿಸಿದ ಆವಿಷ್ಟ ಫಲಕದ ಆಕರ್ಷಣೆಗೆ ವಿರುದ್ಧವಾಗಿ ವಿದ್ಯುದಾವಿಷ್ಟ ನೀರಿನ ಪುಟ್ಟ ಹನಿಗಳು ಗುರುತ್ವದ ಪ್ರಭಾವದಲ್ಲಿ ವಾಯುವಿನ ಮೂಲಕ ಸಾಗುವ ಪಥವನ್ನು ಅಭ್ಯಸಿಸಿದರು. ಬಾಷ್ಪೀಭವನದ ಪರಿಣಾಮ ನಿವಾರಿಸಲು 1911ರ ವೇಳೆಗೆ ಎಣ್ಣೆ ಹುಂಡುಗಳನ್ನು (ನೀರಹನಿಗಳ ಬದಲಾಗಿ) ಬಳಸತೊಡಗಿದರು.

ಹುಂಡುಗಳನ್ನು (ಬ್ಲಾಬ್ಸ್) ಕೋಷ್ಠದ ಒಳಗೆ ಎಕ್ಸ್‌-ಕಿರಣಗಳಿಗೆ ಒಡ್ಡುವುದರ ಮೂಲಕ ಮಿಲ್ಲಿಕನ್ ಆಗ ಈಗ ಒಂದು ಹುಂಡಿಗೆ ಒಂದು ಅಯಾನ್ ತಾಗುವಂತೆ ಮಾಡುತ್ತಿದ್ದರು. ಹೀಗೆ ಹುಂಡಿಗೆ ಅಯಾನ್ ಸೇರ್ಪಡೆ ಆದಾಗ ಮೇಲುಗಡೆ ಇದ್ದ ಆವಿಷ್ಟ ಫಲಕದ ಪರಿಣಾಮ ಅದರ ಮೇಲೆ ಹಠಾತ್ತಾಗಿ ಪ್ರಬಲವಾಗುತ್ತಿತ್ತು ಮತ್ತು ಈ ಕಾರಣದಿಂದ ಹುಂಡು ನಿಧಾನವಾಗಿ ಕೆಳಬೀಳುತ್ತಿತ್ತು ಅಥವಾ ಒಮ್ಮೊಮ್ಮೆ ಕ್ರಮೇಣ ಮೇಲಕ್ಕೂ ಏರುತ್ತಿತ್ತು. ಚಲನೆಯಲ್ಲಿಯ ಕನಿಷ್ಠ ಬದಲಾವಣೆಯ ಕಾರಣ ಒಂಟಿ ಎಲೆಕ್ಟ್ರಾನಿಕ್ ಆವೇಶದ ಸೇರ್ಪಡೆ ಎಂಬುದಾಗಿ ಮಿಲ್ಲಿಕನ್ ಭಾವಿಸಿದರು. ಮೇಲ್ಮೊಗ ವಿದ್ಯುತ್ಕಾಂತೀಯ ಆಕರ್ಷಣೆಯ ಹಾಗೂ ಕೆಳಮೊಗ ಗುರುತ್ವಾಕರ್ಷಣೆಯ ಪರಿಣಾಮಗಳನ್ನು ಇಂಥ ಒಂದು ಸೇರ್ಪಡೆ ಮಾಡುವುದರ ಮೊದಲೂ ತರುವಾಯವೂ ಸಂತುಲಿಸುವುದರ ಮೂಲಕ ಮಿಲ್ಲಿಕನ್ ಒಂಟಿ ಎಲೆಕ್ಟ್ರಾನಿನ ಆವೇಶವನ್ನು ಗಣಿಸಲು ಸಮರ್ಥರಾದರು. ವಿದ್ಯುದಾವೇಶ ಶಕ್ತರಾರು. ವಿದ್ಯುತ್ತು ಕಣಸ್ವಭಾವದ್ದಾಗಿದೆಯೆಂದು ತೋರಿಸಿಕೊಟ್ಟ ಅಂತಿಮ ಸಾಧನೆ ಇದು. ಒಂದು ಶತಮಾನದ ಮೊದಲ ಫ್ಯಾರಡೇಯ ಕೃತಿ ಈ ದಿಶೆಯತ್ತ ಗುರಿ ಹಿಡಿದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬೇಕು.

ಎಲೆಕ್ಟ್ರಾನ್‍ನ ವಿದ್ಯುತ್ ಆವೇಶವನ್ನು, ಪ್ಲಾಂಕ್‍ನ ನಿಯತಾಂಕವನ್ನು ನಿಖರವಾಗಿ ಕಂಡುಹಿಡಿದುದಕ್ಕಾಗಿ ಇವರಿಗೆ ೧೯೨೩ರಲ್ಲಿ ಭೌತವಿಜ್ಞಾನನೋಬಲ್ ಪ್ರಶಸ್ತಿಲಭಿಸಿತು.[] ದ್ಯುತಿವೈದ್ಯುತ ಪರಿಣಾಮ ಕುರಿತಂತೆ ಐನ್‌ಸ್ಟೈನ್ ಸೈದ್ಧಾಂತಿಕವಾಗಿ ನಿಗಮಿಸಿದ್ದ ಸಮೀಕರಣಗಳನ್ನು ತಾಳೆ ನೋಡಲು ಮಿಲ್ಲಿಕನ್ ರೂಢಿಸಿದ ಸೂಕ್ಷ್ಮ ಪ್ರಾಯೋಗಿಕ ವಿಧಾನವನ್ನೂ ಈ ಪಾರಿತೋಷಿಕದ ಪ್ರವಚನ ಸಂಧರ್ಭದಲ್ಲಿ ಉಲ್ಲೇಖಿಸಲಾಗಿತ್ತು.

ಇವರ ಸಂಶೋಧನೆಗಳ ಮೂಲಕ ಪ್ಲಾಂಕ್‍ನ ನಿಯತಾಂಕದ ನಿಖರವಾದ ಬೆಲೆ ತಿಳಿಯಿತು.[][]

ಇವರು ೧೯೨೧ ರಲ್ಲಿ ಕ್ಯಾಲ್‍ಟೆಕ್ (ಕ್ಯಾಲಿಫೋರ್ನಿಯ ಇನ್‌ಸ್ಪಿಟ್ಯೂಟ್ ಆಫ್ ಟೆಕ್ನಾಲಜಿ) ಎಂಬ ಸಂಸ್ಥೆಗೆ ನಿರ್ದೇಶಕರಾದರು. ಮುಂದೆ ನಿವೃತ್ತಿಯ ತನಕವೂ ಅಲ್ಲಿಯೇ ಇದ್ದರು. ಅಲ್ಲಿ ಇವರು ಬಾಹ್ಯಾಕಾಶದಿಂದ ಬರುತ್ತಿದ್ದ ವಿಕಿರಣದ (ವಿಶ್ವಕಿರಣಗಳು) ಬಗ್ಗೆ ಕುತೂಹಲಗೊಂಡು ಆಳವಾದ ಅಧ್ಯಯನ ನಡೆಸಿದರು. ಇದನ್ನು ತತ್ಪೂರ್ವ ವಿ. ಎಫ್ ಹೆಸ್ ಎಂಬಾತ ಆವಿಷ್ಕರಿಸಿದ್ದ. ಈ ವಿಕಿರಣವನ್ನು ಮಿಲ್ಲಿಕನ್ ವಿಶ್ವಕಿರಣಗಳು ಎಂದು ಹೆಸರಿಸಿದರು (1925). ಮುಂದೆ ಇವರು ಉನ್ನತ ವಾಯುಮಂಡಲದಲ್ಲಿ ವಿಕಿರಣದ ತೀವ್ರತೆಯನ್ನು ವಿಮಾನಗಳ ಹಾಗೂ ಬಲೂನುಗಳ ಮೂಲಕವೂ ಸರೋವರಗಳ ತಳದಲ್ಲಿಯ ತೀವ್ರತೆಯನ್ನು ಯುಕ್ತ ಮುಳುಗು ಉಪಕರಣಗಳ ಮೂಲಕವೂ ಅಳೆದು ಈ ಕ್ಷೇತ್ರಕ್ಕೆ (ಬಾಹ್ಯಾಕಾಶ ವಿಕಿರಣಮಾಪನೆ) ಭದ್ರಬುನಾದಿ ಹಾಕಿದರು. ವಿಶ್ವಕಿರಣಗಳು ವಿಶ್ವದ ಸೀಮಾ ಪ್ರದೇಶಗಳಲ್ಲಿ ಜನಿಸುತ್ತವೆ. ಅವು ದ್ರವ್ಯದ ಸೃಷ್ಟಿಕಾರ್ಯದ ವೇಳೆ ಉಗಮಿಸುವ ಜನನಾಕ್ರಂದನಗಳು ಎಂದು ಅವರು ನಂಬಿದ್ದರು. ಇದು ತಪ್ಪೆಂದು ಇಂದು ತಿಳಿದಿದೆ. ವಿಶ್ವಕಿರಣಗಳು ನೋವಾ ಮತ್ತು ಮಹಾನೋವಾ ಸ್ಫೋಟನೆಯ ಕಾರಣವಾಗಿ ಉದ್ಭವಿಸುವ ಉನ್ನತ ಶಕ್ತಿ ಪ್ರೋಟಾನ್ ಕಣಗಳು.

ಇವರಿಗೆ ಗಣಿತ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಭೂಕಂಪಗಳ ಕುರಿತು ಇವರು ಸಂಶೋಧನೆಯನ್ನು ಕೈಗೊಂಡರು.

ವಿಜ್ಞಾನ ಮತ್ತು ಧರ್ಮ ಇವು ಪರಸ್ಪರ ಪೂರಕ: ಒಂದೊಂದನ್ನೂ ಸರಿಯಾಗಿ ಅರ್ಥಮಾಡಿಕೊಂಡಾಗ ಅವುಗಳ ನಡುವೆ ನಿಜವಾಗಿಯೂ ಯಾವುದೇ ವಿರೋಧ ಕಂಡುಬರುವುದಿಲ್ಲ ಎಂಬುದು ಮಿಲ್ಲಿಕನ್ನರ ಸಿದ್ಧಾಂತ. ಇದು ಸೈನ್ಸ್ ಅಂಡ್ ಲೈಫ್ (1924) ಹಾಗೂ ದಿ ಎವಲ್ಯೂಷನ್ ಆಫ್ ಸೈನ್ಸ್ ಅಂಡ್ ರಿಲಿಜನ್ (1927) ಎಂಬ ಅವರ ಕೃತಿಗಳಲ್ಲಿ ಪ್ರತಿಪಾದಿತವಾಗಿದೆ. ಅವರ ಇತರ ಕೃತಿಗಳು: ಎಲೆಕ್ಟ್ರಿಸಿಟಿ ಸೌಂಡ್ ಅಂಡ್ ಲೈಟ್ (1908), ಟೈಮ್ ಮ್ಯಾಟರ್ ಅಂಡ್ ವ್ಯಾಲ್ಯೂಸ್ (1932), ಕಾಸ್ಮಿಕ್ ರೇಸ್ (1939) ಮತ್ತು ಎಲೆಕ್ಟ್ರಾನ್ಸ್ ಅಂಡ್ ಪ್ರೋಟಾನ್ಸ್, ನ್ಯೂಟ್ರಾನ್ಸ್, ಮೊಸೊಟ್ರಾನ್ಸ್ ಅಂಡ್ ಕಾಸ್ಮಿಕ್ ರೇಸ್ (1947). ಇವರ ಆತ್ಮಕಥನವನ್ನು (1950) ಗ್ಲೆನ್ ಟಿ. ಸೀಬೋರ್ಗ್ ‘ಆಧುನಿಕ (20ನೆಯ ಶತಮಾನದ) ವಿಜ್ಞಾನದ ಒಂದು ಇತಿಹಾಸ’ ಎಂದು ಕರೆದಿದ್ದಾರೆ.

ಇವರು ೧೯೫೩ರಲ್ಲಿ ಕ್ಯಾಲಿಫೋರ್ನಿಯದಲ್ಲಿ ವಿಧಿವಶರಾದರು.

ಉಲ್ಲೇಖಗಳು

ಬದಲಾಯಿಸಿ
  1. Physics Tree profile Robert A Millikan
  2. "Comstock Prize in Physics". National Academy of Sciences. Retrieved February 13, 2011.
  3. "Millikan, son, aide get medals of merit". New York Times. March 22, 1949. Retrieved October 27, 2014.
  4. Bates, Charles C.; Fuller, John F. (July 1, 1986). "Chapter 2: The Rebirth of Military Meteorology". America's Weather Warriors, 1814–1985. Texas A&M University Press. pp. 17–20. ISBN 978-0890962404. {{cite book}}: Unknown parameter |lastauthoramp= ignored (help)
  5. https://www.nobelprize.org/nobel_prizes/physics/laureates/1923/
  6. "ಆರ್ಕೈವ್ ನಕಲು". Archived from the original on 2013-05-29. Retrieved 2013-08-05.
  7. Millikan, R. (1916). "A Direct Photoelectric Determination of Planck's "h"". Physical Review. 7 (3): 355–388. Bibcode:1916PhRv....7..355M. doi:10.1103/PhysRev.7.355.

ಬಾಹ್ಯ ಸಂಪರ್ಕಗಳು

ಬದಲಾಯಿಸಿ