ಭೌತಿಕ ವಿಜ್ಞಾನಗಳಲ್ಲಿ, ಕಣವು ಚಿಕ್ಕ ಸ್ಥಳೀಕರಿಸಲ್ಪಟ್ಟ ವಸ್ತು ಮತ್ತು ಇದಕ್ಕೆ ಘನ ಅಳತೆ ಅಥವಾ ದ್ರವ್ಯರಾಶಿಯಂತಹ ಹಲವು ಭೌತಿಕ ಗುಣಲಕ್ಷಣಗಳನ್ನು ಹೊಂದಿಸಬಹುದು. ಈ ಶಬ್ದದ ಅರ್ಥವು ಸಾಕಷ್ಟು ಸಾರ್ವತ್ರಿಕವಾಗಿದೆ, ಮತ್ತು ಇದನ್ನು ವಿವಿಧ ವೈಜ್ಞಾನಿಕ ಕ್ಷೇತ್ರಗಳ ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ವಸ್ತುಗಳನ್ನು ಕಣಗಳಾಗಿ ಪರಿಗಣಿಸುವುದು ಸಂದರ್ಭದ ಗಾತ್ರದ ಮೇಲೆ ಅವಲಂಬಿಸಿದೆ; ವಸ್ತುವಿನ ಸ್ವಂತ ಗಾತ್ರವು ಚಿಕ್ಕದು ಅಥವಾ ನಗಣ್ಯವಾಗಿದ್ದರೆ, ಅಥವಾ ರೇಖಾಗಣಿತೀಯ ಗುಣಲಕ್ಷಣಗಳು ಮತ್ತು ರಚನೆ ಅಪ್ರಸ್ತುತವಾಗಿದ್ದರೆ, ಅದನ್ನು ಕಣವೆಂದು ಪರಿಗಣಿಸಬಹುದು. ಪ್ರತಿಯೊಂದು ಘನ,ದ್ರವ ಹಾಗು ಅನಿಲದ ವಸ್ತುವಿನಲ್ಲೂ ಕಣಗಳಿರುತ್ತವೆ.

ಕಣಗಳನ್ನು ಹಲವುವೇಳೆ ಚುಕ್ಕೆಗಳಿಂದ ಚಿತ್ರಿಸಲಾಗುತ್ತದೆ. ಈ ರೇಖಾಕೃತಿಯು ಅನಿಲದಲ್ಲಿ ಪರಮಾಣುಗಳ, ಸಂದಣಿಗಳಲ್ಲಿ ಜನರ ಅಥವಾ ರಾತ್ರಿ ಆಕಾಶದಲ್ಲಿ ನಕ್ಷತ್ರಗಳ ಚಲನೆಯನ್ನು ಪ್ರತಿನಿಧಿಸಬಹುದು.


"https://kn.wikipedia.org/w/index.php?title=ಕಣ&oldid=718033" ಇಂದ ಪಡೆಯಲ್ಪಟ್ಟಿದೆ